ರಾಜ್ಯದಲ್ಲಿ ಅಕ್ಕಿ ಬೆಲೆಯಲ್ಲಿ ಇಳಿಕೆ; ಕಾರಣವೇನು?
ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಸಿಹಿಸುದ್ದಿ ಸಿಕ್ಕಿದ್ದು, ರಾಜ್ಯದಲ್ಲಿ ಹೊಸ ಸೋನಾ ಮಸೂರಿ ಅಕ್ಕಿಯ ದರ ಪ್ರತಿ ಕೆ.ಜಿಗೆ 10 ರೂ. ರಿಂದ 20 ರೂ. ವರೆಗೆ ದಿಢೀರ್ ಇಳಿಕೆಯಾಗಿದೆ. ಇನ್ನು ಸಗಟು (ಹೋಲ್ಸೇಲ್) ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ಸುಮಾರು 8,500 ರೂ. ಇದ್ದ ಅಕ್ಕಿ ಬೆಲೆ ಇದೀಗ 6,500 ರೂ. ಕ್ಕೆ ತಲುಪಿದ್ದು, ಪ್ರತಿ ಕ್ವಿಂಟಲ್ಗೆ ಬರೋಬ್ಬರಿ 2,000 ರೂ. ಕಡಿಮೆಯಾಗಿದೆ.