ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ಲಾರಿಗೆ ಕಾರು ಡಿಕ್ಕಿಯಾಗಿ ಇಬ್ಬರ ಸಾವು, ನಾಲ್ವರಿಗೆ ಗಾಯ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ; ಇಬ್ಬರ ಸಾವು

Mandya Car Accident: ಮಂಡ್ಯದ ಗುತ್ತಲು ಬಡಾವಣೆಯ ಕುಟುಂಬವೊಂದು ಕಾರಿನಲ್ಲಿ ನಂಜನಗೂಡಿನ ದೇವಸ್ಥಾನಕ್ಕೆ ತೆರಳುತ್ತಿತ್ತು. ಈ ವೇಳೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿ ಗೇಟ್ ಬಳಿಯ ಫ್ಲೈಓವರ್ ಮೇಲೆ ಅಪಘಾತ ನಡೆದು ಇಬ್ಬರು ಮೃತಪಟ್ಟಿದ್ದಾರೆ.

ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೇವೆ, ಪ್ರತಿಭಟನೆ ಕೈಬಿಡಿ: ಆಶಾ ಕಾರ್ಯಕರ್ತೆಯರಿಗೆ ವಿಡಿಯೊ ಮೂಲಕ ಜಪಾನ್‌ನಿಂದಲೇ ಸಿಎಂ ಡಿಕೆಶಿ ಮನವಿ

ನಿಮ್ಮ ಸಮಸ್ಯೆಗೆ ಖಂಡಿತವಾಗಿಯೂ ಪರಿಹಾರ ನೀಡುತ್ತೇವೆ: ಸಿಎಂ

CM DK Shivakumar: ಅಧಿವೇಶನ ಸಂದರ್ಭದಲ್ಲಿ ನಾನು ನಿಮ್ಮ ಬೇಡಿಕೆ ಬಗ್ಗೆ ಆರ್ಥಿಕ ಇಲಾಖೆ ಜತೆ ಚರ್ಚಿಸುವೆ. ನೀವು ಪ್ರತಿಭಟನೆ ಹಿಂಪಡೆಯಿರಿ. ನಿಮ್ಮ ಬೇಡಿಕೆಗಳಿಗೆ ನಾವು ಸ್ಪಂದಿಸುತ್ತೇವೆ. ನೀವು ಶ್ರಮ ಪಡುತ್ತಿದ್ದು, ನಿಮಗೆ ನ್ಯಾಯ ಒದಗಿಸಲಾಗುವುದು ಎಂದು ಆಶಾ ಕಾರ್ಯಕರ್ತೆಯರಿಗೆ, ಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.

Gold Price Today on 24 November 2026: ಭಾರಿ ಇಳಿಕೆಯ ಬಳಿಕ ಸತತ 2ನೇ ದಿನವೂ ಚಿನ್ನದ ದರದಲ್ಲಿ ಏರಿಕೆ

ಸತತ 2ನೇ ದಿನವೂ ಚಿನ್ನದ ದರದಲ್ಲಿ ಏರಿಕೆ

Gold Rate Today: ಸತತ 2ನೇ ದಿನವೂ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಮಂಗಳವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 115 ರೂಪಾಯಿ ಏರಿಕೆಯಾಗಿ 11,715 ರೂಪಾಯಿ ಆಗಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 124 ರೂಪಾಯಿ ಅಧಿಕವಾಗಿ 12,780 ರೂಪಾಯಿಗೆ ತಲುಪಿದೆ.

ಬೆಂಗಳೂರಿನ 86 ವಿಶೇಷಚೇತನರಿಗೆ ಆಸರೆಯಾದ ‘ಲರ್ನಿಂಗ್ ಫಾರ್ ಲೈಫ್’: ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ

ಬೆಂಗಳೂರಿನ 86 ವಿಶೇಷಚೇತನರಿಗೆ ಆಸರೆಯಾದ ‘ಲರ್ನಿಂಗ್ ಫಾರ್ ಲೈಫ್’

2026ನೇ ಹಣಕಾಸು ವರ್ಷದಲ್ಲಿ ಆಹಾರ ಮತ್ತು ಪಾನೀಯ ಸೇವಾ ವಿಭಾಗದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಗುರಿ ಹಾಕಿಕೊಂಡಿದೆ. ಇದರ ಭಾಗವಾಗಿ ಬೆಂಗಳೂರಿನ ಕೇಂದ್ರದಲ್ಲಿ ತರಬೇತಿ ಪೂರ್ಣಗೊಳಿಸಿದ 86 ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭವು ಡಿಯಾಜಿಯೋ ಇಂಡಿಯಾದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (ಸಿಎಚ್‌ಆರ್‌ಒ) ಚಿನ್ಮಯ್ ಶರ್ಮಾ ಮತ್ತು ಎಸ್‌ಸಿಪಿಡಬ್ಲ್ಯುಡಿ ಸಿಇಒ ರವೀಂದ್ರ ಸಿಂಗ್ ಅವರ ಸಮ್ಮುಖದಲ್ಲಿ ನಡೆಯಿತು.

Haveri News: ಸ್ಪರ್ಶ್ ಆಸ್ಪತ್ರೆ ವೈದ್ಯರಿಂದ ಪ್ರತಿ ತಿಂಗಳ 3ನೇ ಗುರುವಾರ ವಿಶೇಷ ಒಪಿಡಿ ಸೇವೆ

ಹಾವೇರಿಯಲ್ಲೇ ಇನ್ಮುಂದೆ ನ್ಯೂರೋಸರ್ಜರಿ ತಜ್ಞರ ಸಮಾಲೋಚನೆ

ನಿರಂತರ ತಲೆನೋವು, ಬೆನ್ನುಹುರಿ ಸಮಸ್ಯೆ, ನರಗಳ ಒತ್ತಡ, ದೇಹದ ಅಂಗಾಂಗಗಳಲ್ಲಿ ಮರಗಟ್ಟುವಿಕೆ, ದೈಹಿಕ ದೌರ್ಬಲ್ಯ, ನಡೆಯಲು ತೊಂದರೆ ಹಾಗೂ ಮೆದುಳಿನ ಗಡ್ಡೆ ಸೇರಿದಂತೆ ವಿವಿಧ ನರಸಂಬಂಧಿ ಸಮಸ್ಯೆಗಳಿಗೆ ತಜ್ಞರಿಂದ ತಪಾಸಣೆ ಮತ್ತು ಸೂಕ್ತ ವೈದ್ಯಕೀಯ ಸಲಹೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಶ್ರೀ ಕುಮಾರಸ್ವಾಮಿ ಜಾತ್ರಾ ಮಹೋತ್ಸವ-2026 ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದ ಶಾಸಕಿ ಅನ್ನಪೂರ್ಣ ಈ ತುಕಾರಾಮ್

ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದ ಶಾಸಕಿ ಅನ್ನಪೂರ್ಣ ಈ ತುಕಾರಾಮ್

ಸಂಡೂರು ಕ್ಷೇತ್ರದ ಶ್ರೀ ಕುಮಾರ ಸ್ವಾಮಿ ಜಾತ್ರಾ ಮಹೋತ್ಸ ಪ್ರಯುಕ್ತ ವಿಶ್ವವಾಣಿ ಪತ್ರಿಕೆ ಹೊರತಂದಿರುವ ಶ್ರೀ ಕುಮಾರ ಸ್ವಾಮಿ ಜಾತ್ರಾ ಮಹೋತ್ಸ--2026 ವಿಶೇಷ ಸಂಚಿಕೆಯನ್ನು ಸಂಡೂರು ಕ್ಷೇತ್ರದ ಶಾಸಕರಾದ ಅನ್ನಪೂರ್ಣ ಈ ತುಕಾರಾಮ್ ಬಿಡುಗಡೆಗೊಳಿಸಿ ಮಾತನಾಡಿ, ಕ್ಷೇತ್ರಾಧಿಪತಿ ಶ್ರೀ ಕುಮಾರ ಸ್ವಾಮಿ ಜಾತ್ರಾ ಮಹೋತ್ಸಕ್ಕೆ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಸಾಕಷ್ಟು ಭಕ್ತರು ಆಗಮಿಸಲಿದ್ದಾರೆ.

ಕಲಬುರಗಿಯ 48 ಜಿ.ಪಂ., 175 ತಾ.ಪಂ. ಕ್ಷೇತ್ರಗಳ ಸಂಪೂರ್ಣ ಪಟ್ಟಿ ಪ್ರಕಟ: ಜಿ.ಪಂ.-ತಾ.ಪಂ. ಕ್ಷೇತ್ರಗಳ ಮೀಸಲಾತಿ ಫೈನಲ್

ಜಿ.ಪಂ.-ತಾ.ಪಂ. ಕ್ಷೇತ್ರಗಳ ಮೀಸಲಾತಿ ಫೈನಲ್

ಜಿಲ್ಲಾ ಪಂಚಾಯಿತಿ(Zilla Panchayat) ಹಾಗೂ ತಾಲ್ಲೂಕು ಪಂಚಾಯಿತಿ(Taluk Panchayat) ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಂತಿಮ ಮೀಸಲಾತಿ ಅಧಿಸೂಚನೆ ಪ್ರಕಟಿಸಿದ್ದು, ಕಲಬುರಗಿ ಜಿಲ್ಲೆಯ 48 ಜಿಲ್ಲಾ ಪಂಚಾಯಿತಿ ಹಾಗೂ 175 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪ್ರವರ್ಗವಾರು ಮೀಸಲಾತಿ ಅಂತಿಮಗೊಂಡಿದೆ.

Digital marks cards: ಇನ್ನುಮುಂದೆ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ!

ಇನ್ನುಮುಂದೆ SSLC, ಪಿಯುಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ!

ಫಲಿತಾಂಶ ಪ್ರಕಟವಾದ ಬಳಿಕ ಅಂಕಪಟ್ಟಿಗಾಗಿ ಕಾಯುವುದು, ಅದನ್ನು ಕಳೆದುಕೊಳ್ಳದಂತೆ ಜೋಪಾನ ಮಾಡುವುದು ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿತ್ತು. ಆದರೆ ಮುಂಬರುವ ಶೈಕ್ಷಣಿಕ ವರ್ಷದಿಂದ ಈ ಪ್ರಕ್ರಿಯೆ ಬದಲಾಗಲಿದೆ. ಡಿಜಿಟಲ್ ರೂಪದಲ್ಲಿ ದೊರೆಯುವ ಅಂಕಪಟ್ಟಿಗೆ ಅಧಿಕೃತ ಮಾನ್ಯತೆ ಇರಲಿದೆ.

KPCC: ಕೆಪಿಸಿಸಿ ಖಜಾಂಚಿಯಾಗಿ ಜಿ.ಎಚ್.ನಾಗರಾಜ್ ಅಧಿಕಾರ ಸ್ವೀಕಾರ: ಸಮಾರಂಭದಲ್ಲಿ ಎನ್.ಎಚ್.ಶಿವಶಂಕರರೆಡ್ಡಿ ಭಾಗಿ

ಕೆಪಿಸಿಸಿ ಖಜಾಂಚಿಯಾಗಿ ಜಿ.ಎಚ್.ನಾಗರಾಜ್ ಅಧಿಕಾರ ಸ್ವೀಕಾರ

ಪಕ್ಷದ ವರಿಷ್ಠರು ತಮ್ಮ ಮೇಲೆ ವಿಶ್ವಾಸವಿಟ್ಟು ಮಹತ್ವದ ಜವಾಬ್ದಾರಿ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು. ಖಜಾಂಚಿಯಾಗಿ ಪಕ್ಷದ ಆರ್ಥಿಕ ನಿರ್ವಹಣೆಯಲ್ಲಿ ಪಾರದರ್ಶಕತೆ ಹಾಗೂ ಜವಾಬ್ದಾರಿಯುತ ಕಾರ್ಯನಿರ್ವಹಣೆಗೆ ಆದ್ಯತೆ ನೀಡುವುದಾಗಿ ಹೇಳಿದರು.

ಫೋರ್ಟಿಸ್ ಆಸ್ಪತ್ರೆಯಿಂದ ವಿಶೇಷ ಅತ್ಯಾಧುನಿಕ ಐಎಲ್‌ಡಿ ಮತ್ತು ಲಂಗ್ ಫೇಲ್ಯೂರ್ ಕ್ಲಿನಿಕ್ ಉದ್ಘಾಟನೆ

ವಿಶೇಷ ಅತ್ಯಾಧುನಿಕ ಐಎಲ್‌ಡಿ ಮತ್ತು ಲಂಗ್ ಫೇಲ್ಯೂರ್ ಕ್ಲಿನಿಕ್ ಉದ್ಘಾಟನೆ

ಉಲ್ಬಣಗೊಳ್ಳುವ ಶ್ವಾಸಕೋಶ(Lungs)ದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಮೌಲ್ಯಮಾಪನ ಮತ್ತು ನಿರ್ವಹಣೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯು ವಿಶೇಷ ಇಂಟರ್‌ ಸ್ಟೀಷಿಯಲ್ ಲಂಗ್ ಡಿಸೀಸ್ (ಐಎಲ್‌ಡಿ) ಮತ್ತು ಲಂಗ್ ಫೇಲ್ಯೂರ್ ಕ್ಲಿನಿಕ್ ಅನ್ನು ಹೊಸದಾಗಿ ಉದ್ಘಾಟಿಸಿದೆ.

ಹಾವೇರಿಯ ಚಿಕ್ಕ ಕಬ್ಬಾರದಲ್ಲಿ ಅಗ್ನಿ ಅವಘಡ: 112 ಭತ್ತದ ಹುಲ್ಲಿನ ಪೆಂಡಿಗಳು ಭಸ್ಮ

ಚಿಕ್ಕ ಕಬ್ಬಾರದಲ್ಲಿ ಅಗ್ನಿ ಅವಘಡ: 112 ಭತ್ತದ ಹುಲ್ಲಿನ ಪೆಂಡಿಗಳು ಭಸ್ಮ

Haveri News: ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಚಿಕ್ಕಕಬ್ಬಾರ ಗ್ರಾಮದ ಮುಖ್ಯ ರಸ್ತೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಭತ್ತದ ಹುಲ್ಲಿನ ಪೆಂಡಿಗಳಿಗೆ ಬೆಂಕಿ ಹೊತ್ತಿಕೊಂಡು, ಸುಮಾರು 112 ಪೆಂಡಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಜರುಗಿದೆ.

Hubballi News: ಮಕ್ಕಳಿಗೆ ಮೊದಲು ಉತ್ತಮ ಸಂಸ್ಕಾರ ಕಲಿಸಬೇಕು: ಬಸವರಾಜ ಹೊರಟ್ಟಿ

ಮಕ್ಕಳಿಗೆ ಮೊದಲು ಉತ್ತಮ ಸಂಸ್ಕಾರ ಕಲಿಸಬೇಕು: ಬಸವರಾಜ ಹೊರಟ್ಟಿ

ಹುಬ್ಬಳ್ಳಿ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ರೇಣುಕಾ ಏಜೆನ್ಸಿ ಹಾಗೂ ನ್ಯೂರೇಯ್ಸ್ ಪ್ರಕಾಶನ ಸಂಸ್ಥೆ ಸಹಯೋಗದಲ್ಲಿ ಶಿಕ್ಷಕರ ಸಮಾವೇಶ, ನಗೆ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ವಿಧಾನ ಪರಿಷತ್‌ ಮಾಜಿ ಸಭಾಪತಿ ಮತ್ತು ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಅವರು ಮಾತನಾಡಿದ್ದಾರೆ.

Blood Donation Camp: ನ.25ಕ್ಕೆ ಜಿಲ್ಲಾಡಳಿತ ಭವನದಲ್ಲಿ ಹಾಗೂ ಜಿಲ್ಲೆಯ 11 ಕಡೆ ರಕ್ತದಾನ ಶಿಬಿರ

ನ.25ಕ್ಕೆ ಜಿಲ್ಲಾಡಳಿತ ಭವನದಲ್ಲಿ ಹಾಗೂ ಜಿಲ್ಲೆಯ 11 ಕಡೆ ರಕ್ತದಾನ ಶಿಬಿರ

ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ ಭವನ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ 11 ವಿವಿಧ ಸ್ಥಳಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸ ಲಾಗುತ್ತಿದ್ದು, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಮನವಿ ಮಾಡಿದರು.

ಆನೆಗಳ ಸ್ಥಳಾಂತರದಲ್ಲಿ ನಮ್ಮ ಪಾತ್ರವಿಲ್ಲ, ಅರಣ್ಯ ಸಚಿವರ ಆದೇಶ ಪಾಲಿಸುತ್ತಿದ್ದೇವೆ ಅಷ್ಟೇ: ಸಚಿವ ಶಿವಲಿಂಗೇಗೌಡ

ಆನೆ ಸ್ಥಳಾಂತರದಲ್ಲಿ ನಮ್ಮ ಪಾತ್ರವಿಲ್ಲ ಎಂದ ಸಚಿವ ಶಿವಲಿಂಗೇಗೌಡ

Elephant relocation: ನಮ್ಮಲ್ಲಿ ಅರಣ್ಯವಿಲ್ಲ. ಆನೆ ಬಂದು ಬಿಟ್ಟಿದೆ. ರೈತರ ಜಮೀನಲ್ಲಿ ಆನೆ ಮೇಯೋಕೆ ಬಿಡೋಕೆ ಆಗುತ್ತಾ?. ಭದ್ರಾ ಅಭಯಾರಣ್ಯ ಇದೆ. ಅಲ್ಲಿ ಆನೆ ಬಿಡುವ ನಿರ್ಧಾರ ಆಗಿದೆ. ಆನೆಯನ್ನು ಚಿಕ್ಕಮಗಳೂರು ಮಾರ್ಗವಾಗಿಯೇ ತೆಗೆದುಕೊಂಡು ಹೋಗಬೇಕು ಎಂದು ಸಚಿವ ಶಿವಲಿಂಗೇಗೌಡ ತಿಳಿಸಿದ್ದಾರೆ.

MLA Belur Gopalkrishna: ವಿಧಾನಸಭೆ ಮುಖ್ಯ ಸಚೇತಕರಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ನೇಮಕ

ವಿಧಾನಸಭೆ ಮುಖ್ಯ ಸಚೇತಕರಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ನೇಮಕ

Government Chief Whip: ಬೇಳೂರು ಗೋಪಾಲಕೃಷ್ಣ ಅವರು ಸಾಗರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದೀಗ ಅವರಿಗೆ ಸರ್ಕಾರದ ಪರವಾಗಿ ಮಹತ್ವದ ಜವಾಬ್ದಾರಿ ನೀಡಲಾಗಿದೆ.

ರಾಜ್ಯ ಸರ್ಕಾರದ ಪರಿಷ್ಕೃತ ಬರ ಪರಿಹಾರದ ಮನವಿಗೆ ತಕ್ಷಣ ಅನುಮೋದನೆ ನೀಡಿ: ಕೇಂದ್ರಕ್ಕೆ ಡಿಸಿಎಂ ಡಾ.ಜಿ. ಪರಮೇಶ್ವರ್‌ ಪತ್ರ

ಪರಿಷ್ಕೃತ ಬರ ಪರಿಹಾರದ ಮನವಿಗೆ ತಕ್ಷಣ ಅನುಮೋದನೆ ನೀಡಿ: ಡಿಸಿಎಂ

Drought Relief: ಕರ್ನಾಟಕ ಸರ್ಕಾರ ಸಲ್ಲಿಸಿರುವ ಪರಿಷ್ಕೃತ ಬರ ಪರಿಹಾರದ ಮನವಿಗೆ ತಕ್ಷಣ ಅನುಮೋದನೆ ನೀಡಿ, ಅಗತ್ಯ ಆರ್ಥಿಕ ನೆರವನ್ನು ವಿಳಂಬ ಮಾಡದೆ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಮತ್ತೊಮ್ಮೆ ಒತ್ತಾಯಿಸುತ್ತೇನೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

Bharatanatyam: ಕುಮಾರಿ ನಿರಂಜನಿ ಸಿ. ಅವರ ಭರತನಾಟ್ಯ ರಂಗಪ್ರವೇಶ

ಕುಮಾರಿ ನಿರಂಜನಿ ಸಿ. ಅವರ ಭರತನಾಟ್ಯ ರಂಗಪ್ರವೇಶ

ನೃತ್ಯಕ್ಕೆ ಪೂರಕವಾಗಿ ನಟುವಾಂಗದಲ್ಲಿ ಗುರು ವಿದುಷಿ ಫಣಿಮಾಲಾ ಅವರ ಸಮರ್ಥ ನಿರ್ದೇಶನವಿತ್ತು. ಹಿನ್ನೆಲೆ ಗಾಯನದಲ್ಲಿ ವಿದ್ವಾನ್ ಬಾಲಸುಬ್ರಮಣ್ಯ ಶರ್ಮ, ಮೃದಂಗದಲ್ಲಿ ಜಿ.ಎಸ್.ನಾಗರಾಜ್, ವಯಲಿನ್ ವಾದನದಲ್ಲಿ ಬಿ. ಎಸ್. ಮಧುಸೂದನ್ ಮತ್ತು ಕೊಳಲು ವಾದನದಲ್ಲಿ ವಿದ್ವಾನ್ ತೇಜಸ್ವಿ ರಘುನಾಥ್ ಅವರ ಅಮೋಘ ಸಹಕಾರವು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.

Madhugiri News: ಮಧುಗಿರಿಯಲ್ಲಿ ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್‌ಗೆ ಸನ್ಮಾನ

ಮಧುಗಿರಿಯಲ್ಲಿ ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್‌ಗೆ ಸನ್ಮಾನ

Madhugiri News: ಮಧುಗಿರಿ ಪಟ್ಟಣದ ಕುಂಚಿಟಿಗರ ಸಮುದಾಯದ ಸಭಾಂಗಣದಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ಅವರು, ತುಮುಲ್ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್‌ರನ್ನು ಸನ್ಮಾನಿಸಿದರು.

ಮಾಸ್ಟರ್ಸ್ ಯೂನಿಯನ್ ಯೂನಿವರ್ಸಿಟಿಯ ವಾರ್ಷಿಕ ಉತ್ಸವ ‘ರೋಡ್ ಟು ಮಿಲ್ಕಿ ವೇ’ ಬೆಂಗಳೂರಿನಲ್ಲಿ: ತಂತ್ರಜ್ಞಾನ, ವ್ಯವಹಾರ ಮತ್ತು ಸಂಗೀತದ ಸಂಗಮ

ಮಾಸ್ಟರ್ಸ್ ಯೂನಿಯನ್ ಯೂನಿವರ್ಸಿಟಿಯ ವಾರ್ಷಿಕ ಉತ್ಸವ ‘ರೋಡ್ ಟು ಮಿಲ್ಕಿ ವೇ’

‘ರೋಡ್ ಟು ಮಿಲ್ಕಿ ವೇ’ ಎಂಬುದು ವಿಶ್ವವಿದ್ಯಾಲಯದ ವಾರ್ಷಿಕ ಸಾಂಸ್ಕೃತಿಕ ಉತ್ಸವ ‘ಮಿಲ್ಕಿ ವೇ 2027’ಕ್ಕೆ ಮುನ್ನುಡಿಯಾಗಿ ನಡೆಯುವ ರೋಡ್‌ಶೋ ಆಗಿದೆ. ವಿವಿಧ ಕಾಲೇಜುಗಳು, ನಗರಗಳು ಮತ್ತು ಕ್ಷೇತ್ರಗಳ ವಿದ್ಯಾರ್ಥಿಗಳನ್ನು ತಂತ್ರಜ್ಞಾನ, ಉದ್ಯಮಶೀಲತೆ, ಸೃಜನಶೀಲತೆ, ಸಂಗೀತ ಮತ್ತು ಸಂಸ್ಕೃತಿ ಯನ್ನು ಒಳಗೊಂಡ ಹಂಚಿಕೆಯ ಅನುಭವಗಳ ಮೂಲಕ ಒಟ್ಟುಗೂಡಿಸುವುದು ಈ ಉಪಕ್ರಮದ ಉದ್ದೇಶ.

ಕಬ್ಬಿನ ದರದ ಕಗ್ಗಂಟು: ಹಾವೇರಿ ಡಿಸಿ ಕಚೇರಿಗೆ ನುಗ್ಗಿದ ರೈತರು, ಟನ್‌ಗೆ 3,600 ರೂ. ನೀಡಲು ಪಟ್ಟು

ಹಾವೇರಿ ಡಿಸಿ ಕಚೇರಿಗೆ ನುಗ್ಗಿದ ರೈತರು, ಟನ್‌ ಕಬ್ಬಿಗೆ 3,600 ನೀಡಲು ಪಟ್ಟು

Haveri Sugarcane Farmers Protest: ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರ ಸಮ್ಮುಖದಲ್ಲಿ ರೈತ ಮುಖಂಡರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳ ಸಭೆ ನಡೆಯಿತು. ಸಂಧಾನ ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ರೈತರು ನುಗ್ಗಿ ಆಕ್ರೋಶ ಹೊರಹಾಕಿದರು.

ಬೆಂಗಳೂರಿನ ವಿಪ್ರೋ ಜಿಇ ಹೆಲ್ತ್‌ಕೇರ್ ನೂತನ ಎಂಡಿ, ದಕ್ಷಿಣ ಏಷ್ಯಾ ಸಿಇಒ ಆಗಿ ವಿ.ಎಸ್. ರಾಘವೇಂದ್ರ ರಾವ್ ನೇಮಕ; ಯಾರಿವರು?

ವಿಪ್ರೋ ಜಿಇ ಹೆಲ್ತ್‌ಕೇರ್ ನೂತನ ಎಂಡಿ ಆಗಿ ವಿ.ಎಸ್. ರಾಘವೇಂದ್ರ ರಾವ್ ನೇಮಕ

2002ರಲ್ಲಿ ವಿಪ್ರೋ ಜಿಇ ಹೆಲ್ತ್‌ಕೇರ್ ಸೇರಿದ ರಾಘವೇಂದ್ರ ರಾವ್, ಕಳೆದ ಎರಡು ದಶಕಗಳಿಂದ ಸಂಸ್ಥೆಯಲ್ಲಿ ಹಲವು ಪ್ರಮುಖ ನಾಯಕತ್ವ ಹುದ್ದೆಗಳನ್ನು ನಿಭಾಯಿಸಿದ್ದು, ಆರೋಗ್ಯ ಕ್ಷೇತ್ರ ಮತ್ತು ಗ್ರಾಹಕರ ಅಗತ್ಯಗಳ ಬಗ್ಗೆ ಆಳವಾದ ಅನುಭವ ಹೊಂದಿದ್ದಾರೆ. ಸಂಸ್ಥೆಯೊಳಗಿನ ನಾಯಕತ್ವದ ಶಕ್ತಿ ಮತ್ತು ನಿರಂತರತೆಯನ್ನು ಈ ನೇಮಕಾತಿ ಪ್ರತಿಬಿಂಬಿಸುತ್ತದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ASHA Workers Protest: ಆಶಾ ಸಹೋದರಿಯರ ಹೋರಾಟಕ್ಕೆ ಸಿಎಂ ಸ್ಪಂದಿಸಲಿ: ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಒತ್ತಾಯ

ಆಶಾ ಸಹೋದರಿಯರ ಹೋರಾಟಕ್ಕೆ ಸಿಎಂ ಸ್ಪಂದಿಸಲಿ: ಅನಿತಾ ಕುಮಾರಸ್ವಾಮಿ

MLA Anitha Kumaraswamy: ಆಶಾ ಕಾರ್ಯಕರ್ತೆಯರ ಹೋರಾಟ, ಅವರ ನೋವಿನ ಕುರಿತು ನಿರ್ಲಕ್ಷ್ಯಧೋರಣೆ ತಾಳುವುದು ಸರಿಯಲ್ಲ. ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೆ ಹೋರಾಟ ನಡೆಸುತ್ತಿರುವ ಆಶಾ ಸಹೋದರಿಯರ ಹೋರಾಟಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸಬೇಕು ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

MLA Nayana Motamma: ಕಾಡಾನೆಗಳ ಸ್ಥಳಾಂತರಕ್ಕೆ ವಿರೋಧ; ಶಾಸಕಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಯನಾ ಮೋಟಮ್ಮ!

ಶಾಸಕಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಯನಾ ಮೋಟಮ್ಮ

ಹಾಸನದ ಬೇಲೂರು ಭಾಗದಿಂದ ಮೂಡಿಗೆರೆ ಮಾರ್ಗವಾಗಿ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಅಟ್ಟುತ್ತಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕಾಡಂಚಿನ ಜನರು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ನಿರ್ಧಾರ ವಿರೋಧಿಸಿ ಶಾಸಕಿ ನಯನಾ ಮೋಟಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.

Asha workers protest: ನಮ್ಮ ಮುಖ್ಯಮಂತ್ರಿಗಳದ್ದು ಹೂವಿನಂತ ಹೃದಯ, ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುತ್ತಾರೆ: ಎಚ್‌ಡಿಕೆ

ನಮ್ಮ ಸಿಎಂದು ಹೂವಿನಂತ ಹೃದಯ, ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುತ್ತಾರೆ

ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದ ನುಡಿದಂತೆ ನಡೆದಿದ್ದೇವೆ ಅಂತ ಜಪ ಮಾಡುತ್ತಿದ್ದಾರೆ. ಇವರು ಪ್ರಣಾಳಿಕೆಯಲ್ಲಿ 15 ಸಾವಿರ ಘೋಷಣೆ ಮಾಡಿದ್ದರು. ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಗೌರವ ಧನ ಹೆಚ್ಚಳ ಮಾಡಿ ಎಂದು ಆಶಾ ಕಾರ್ಯಕರ್ತೆಯರು ಆಗ್ರಹಿಸುತ್ತಿದ್ದಾರೆ. ಕೊಟ್ಟ ಮಾತಿನಂತೆ ಇವರು ನಡದುಕೊಳ್ಳಲಿ ಎಂದು ರಾಜ್ಯ ಸರ್ಕಾರವನ್ನು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

Loading...