ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Petrol Price hike: ಗಲ್ಫ್‌ ಯುದ್ಧದ ನಡುವೆ ರಾಜ್ಯ ಬಜೆಟ್‌ನಲ್ಲೂ ಪೆಟ್ರೋಲ್‌ ಬೆಲೆ ಏರಿಕೆ ಚಿಂತನೆ!

ಗಲ್ಫ್‌ ಸಮರ ನಡುವೆ ರಾಜ್ಯ ಬಜೆಟ್‌ನಲ್ಲೂ ಪೆಟ್ರೋಲ್‌ ಬೆಲೆ ಏರಿಕೆ ಚಿಂತನೆ!

ಹಣಕಾಸು ಇಲಾಖೆ ಅಧಿಕಾರಿಗಳ ಜತೆಗೆ ಕಳೆದ ಕೆಲ ದಿನಗಳಿಂದ ಪ್ರತ್ಯೇಕ ಚರ್ಚೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಈ ಪ್ರಸ್ತಾಪವೊಂದು ಈಗಾಗಲೇ ಸಲ್ಲಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ 1 ರೂ. ಹೆಚ್ಚುವರಿ ಮಾರಾಟ ತೆರಿಗೆ ವಿಧಿಸುವುದರಿಂದ ತಕ್ಕಮಟ್ಟಿಗೆ ಸಂಪನ್ಮೂಲ ಕ್ರೋಡೀಕರಣಕ್ಕೆ ವೇಗ ನೀಡಬಹುದೆಂದು ಚರ್ಚಿಸಲಾಗುತ್ತಿದೆ.

Fire Accident: ಬೆಂಗಳೂರಿನ ಮನೆಯೊಳಗೆ ಅಗ್ನಿ ದುರಂತ, ಮಹಿಳೆ ದುರ್ಮರಣ, ಮೂವರ ರಕ್ಷಣೆ

ಬೆಂಗಳೂರಿನ ಮನೆಯೊಳಗೆ ಅಗ್ನಿ ದುರಂತ, ಮಹಿಳೆ ದುರ್ಮರಣ, ಮೂವರ ರಕ್ಷಣೆ

ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಮೂವರನ್ನು ರಕ್ಷಿಸಿದ್ದಾರೆ. ಸುಟ್ಟಗಾಯಗಳಿಂದ ಮಹಿಳೆ ಮೃತಪಟ್ಟಿದ್ದಾರೆ. ಉಳಿದ ಗಾಯಗೊಂಡವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಮಲ್ಲೇಶ್ವರಂ ಎಸಿಪಿ ವೇಣುಗೋಪಾಲ್ ಹಾಗೂ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ತನಿಖೆ ಮುಂದುವರಿದಿದೆ.

ದುಬೈನಿಂದ ಎರಡನೇ ವಿಮಾನ ಬೆಂಗಳೂರಿಗೆ; ಎಂಎಲ್‌ಸಿ ಭೋಜೇಗೌಡ, ಪಿವಿ ಸಿಂಧು ಸೇರಿ 490 ಪ್ರಯಾಣಿಕರು ಸುರಕ್ಷಿತವಾಗಿ ವಾಪಸ್

ದುಬೈನಿಂದ ಎರಡನೇ ವಿಮಾನ ಬೆಂಗಳೂರಿಗೆ; 490 ಪ್ರಯಾಣಿಕರು ವಾಪಸ್

ಮೊದಲ ವಿಮಾನದಲ್ಲಿ 213 ಪ್ರಯಾಣಿಕರು ಆಗಮಿಸಿದ್ದರು. ಇದೀಗ ಎರಡನೇ ವಿಮಾನದಲ್ಲಿ ದಾಖಲೆ ಸಂಖ್ಯೆಯ 490 ಜನರು ಮರಳಿದ್ದು, ವಿಮಾನ ನಿಲ್ದಾಣದಲ್ಲಿ ಭಾವನಾತ್ಮಕ ಕ್ಷಣಗಳು ಕಂಡುಬಂದವು. ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರನ್ನು ಅಧಿಕಾರಿಗಳು ಬರಮಾಡಿಕೊಂಡಿದ್ದು, ಅಗತ್ಯ ವೈದ್ಯಕೀಯ ತಪಾಸಣೆ ನಡೆಸಲಾಯಿತು.

ಟ್ರಾಫಿಕ್ ಕಿರಿಕಿರಿ ನಡುವೆ ಮನ ತಣಿಸುವ ಸೌಂದರ್ಯದ ಗಣಿ: ಹೂ ರಾಶಿಗೆ ಮನಸೋತ ಬೆಂಗಳೂರಿಗರು

ಸಿಲಿಕಾನ್ ಸಿಟಿಯಲ್ಲಿ ಕಣ್ಮನ ಸೆಳೆವ ದೃಶ್ಯ: ರಸ್ತೆ ಮಧ್ಯೆ ಅರಳಿದ ಹೂ

Viral News: ಬೆಂಗಳೂರಿನ ಸೌಂದರ್ಯ ಬಗ್ಗೆ ಯುವತಿಯೊಬ್ಬರು ಪೋಸ್ಟ್ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ನಗರದಾದ್ಯಂತ ಮೋಡ ವಾತಾವರಣ, ಲಘುವಾದ ಸೂರ್ಯನ ಬಿಸಿಲು ಮತ್ತು ರಸ್ತೆಯ ಪಕ್ಕದಲ್ಲಿ ಅರಳಿ ನಿಂತಿರುವ ಗುಲಾಬಿ ಬಣ್ಣದ ಹೂವುಗಳು ನಿಜವಾಗಿಯೂ ಸ್ವರ್ಗ ಎಂದು ಅವರು ಬರೆದುಕೊಂಡಿದ್ದಾರೆ.‌

Murder Case: ಇಬ್ಬರು ಗಂಡಂದಿರನ್ನು ಬಿಟ್ಟು ಮೂರನೆಯ ಪ್ರಿಯಕರನಿಂದ ಹತ್ಯೆಯಾದ ಮಹಿಳೆ

ಇಬ್ಬರು ಗಂಡಂದಿರನ್ನು ಬಿಟ್ಟು ಪ್ರಿಯಕರನಿಂದ ಹತ್ಯೆಯಾದ ಮಹಿಳೆ

ತಂದೆ-ತಾಯಿಗೆ ಒಬ್ಬಳೇ ಹೆಣ್ಣು ಮಗಳಾದ ತೇಜಸ್ವಿನಿ 20ನೇ ವಯಸ್ಸಿನಲ್ಲೇ ಓಡಿ ಹೋಗಿ ಲವ್ ಮ್ಯಾರೇಜ್ ಆಗಿದ್ದಳು. ಒಂದು ಮಗು ಆದ ಬಳಿಕ ಕುಟುಂಬ ಕಲಹ ಉಂಟಾಗಿ ಆತನನ್ನು ದೂರ ಮಾಡಿ ಮತ್ತೊಬ್ಬನ ಜೊತೆ ಓಡಿ ಹೋಗಿ ಮದ್ವೆಯಾಗಿದ್ದಳು. ಆತನಿಂದಲೂ ಒಂದು ಮಗುವಾದ ಬಳಿಕ ಆತನಿಂದಲೂ ದೂರವಾಗಿ ಮಕ್ಕಳೊಂದಿಗೆ ಪ್ರತ್ಯೇಕ ವಾಸವಾಗಿದ್ದಳು. ಇದೇ ಸಂದರ್ಭದಲ್ಲಿ ಸಂದೀಪ್ ಎನ್ನುವ ಯುವಕನೊಂದಿಗೆ ಲಿವಿಂಗ್ ರಿಲೇಶನ್ ಶಿಪ್​​ನಲ್ಲಿದ್ದಳು.

Shidlaghatta News: ಶಿಡ್ಲಘಟ್ಟದಲ್ಲಿ ಪೂಜಮ್ಮ ದೇವಿಯ ಹಸಿಕರಗ ಮಹೋತ್ಸವ ಅದ್ದೂರಿ

ತಮಟೆ ತಾಳಕ್ಕೆ ಹೆಜ್ಜೆ ಹಾಕಿದ ಹಸಿಕರಗ – ಭಕ್ತರ ಸಂಭ್ರಮ

ಮೆರವಣಿಗೆಯ ವೇಳೆ ತಮಟೆ ತಾಳಕ್ಕೆ ಕರಗದ ಪೂಜಾರಿ ಶಿವರಾಜ್ ಅವರು ಹೆಜ್ಜೆ ಹಾಕಿ ಸಾಂಪ್ರದಾ ಯಿಕ ನೃತ್ಯ ಪ್ರದರ್ಶಿಸಿದರು. ಡೊಳ್ಳು, ತಾಳ, ನಾದಸ್ವರಗಳ ಘೋಷದಲ್ಲಿ ಅವರ ಚುರುಕು ನೃತ್ಯ ಭಕ್ತರ ಮನ ಗೆದ್ದಿತು. ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯನ್ನು ಸಾರ್ವಜನಿಕರು ಹೂವಿನ ಸುರಿಮಳೆಯ ಮೂಲಕ ಭಕ್ತಿಯಿಂದ ಸ್ವಾಗತಿಸಿದರು

Chikkaballapur News: ಹೋಳಿ ಯುಗಾದಿ ರಂಜಾನ್ ಹಬ್ಬಗಳು ಭಾವೈಕ್ಯತೆಯಿಂದ ಆಚರಿಸಿ: ಡಿವೈಎಸ್‌ಪಿ ಮುರಳೀಧರ್

ಹೋಳಿ ಯುಗಾದಿ ರಂಜಾನ್ ಹಬ್ಬಗಳು ಭಾವೈಕ್ಯತೆಯಿಂದ ಆಚರಿಸಿ

ಸಾಮಾಜಿಕ ತಾಣಗಳಲ್ಲಿ ಒಂದು ಮೆಸೇಜ್‌ನ್ನು ಪ್ರಚಾರ ಮಾಡುವ ಮುನ್ನ 10 ಬಾರಿ ಯೋಚಿಸ ಬೇಕು. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವವರ ಪಟ್ಟಿಯನ್ನು ತಯಾರಿಸಲಾಗುವುದು. ಯಾವಾಗಲದರೂ ಏನಾದರೂ ಘಟನೆಗಳ ನಡೆದರೆ ಪಟ್ಟಿಯಲ್ಲಿರುವವರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು

ರಾಜ್ಯ ಬಜೆಟ್‌ನಲ್ಲಿ ಹೆಚ್.ಎನ್ ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಅನುದಾನ ಮಿಸಲಿಡಿ ಇಲ್ಲವೆ ಹೋರಾಟ ಎದುರಿಸಿ:  ಸಂದೀಪ್ ಬಿ ರೆಡ್ಡಿ ಎಚ್ಚರಿಕೆ

ಹೆಚ್.ಎನ್ ವ್ಯಾಲಿ ಶುದ್ಧೀಕರಣಕ್ಕೆ ಅನುದಾನ, ಇಲ್ಲವೇ ಹೋರಾಟ

ಜಿಲ್ಲೆಯ ಶ್ರಮಜೀವಿ ರೈತರ ಮುಗ್ಧತೆ ಬಳಸಿಕೊಂಡು ಅಧಿಕಾರಕ್ಕೆ ಬಂದ ಈಗಿನ ಸರಕಾರವೇ ಮುಂದೆ ನಿಂತು ಅಂತರ್ಜಲ ವೃದ್ದಿಯ ಹೆಸರಿನಲ್ಲಿ ನನ್ನ ಜನಕ್ಕೆ ವಿಷ ಕುಡಿಸುತ್ತಿದ್ದಾರೆ. ಆ ಮೂಲಕ ಜಿಲ್ಲೆಯು ಡಯಾಲಿಸಿಸ್ ರೋಗಿಗಳ ರಾಜಧಾನಿಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಆತಂಕ ಪಡುವ ಸಂಗತಿಯಾಗಿದೆ.

ಇರಾನ್‌-ಇಸ್ರೇಲ್‌ ಸಂಘರ್ಷ: ಆತಂಕದ ಮಧ್ಯೆ ಅಬುಧಾಬಿಯಿಂದ ಬೆಂಗಳೂರಿಗೆ ಬಂದಿಳಿದ ವಿಮಾನ; 230 ಕನ್ನಡಿಗರು ವಾಪಸ್‌

ಅಬುಧಾಬಿಯಿಂದ ಬೆಂಗಳೂರಿಗೆ ಬಂತು ಮೊದಲ ವಿಮಾನ

Middle East Crisis: ಯುದ್ಧಭೂಮಿಯಿಂದ ಕನ್ನಡಿಗರನ್ನು ಒಳಗೊಂಡ ಮೊದಲ ಬ್ಯಾಚ್‌ನ ವಿಮಾನ ಸೋಮವಾರ ರಾತ್ರಿ (ಮಾರ್ಚ್‌ 2) ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಸದ್ಯ ತಾಯ್ನಾಡಿಗೆ ಬಂದಿದ್ದು ಸಂತಸ ತಂದಿದೆ ಎಂದು ಪ್ರಯಾಣಿಕರು ಪ್ರತಿಕ್ರಿಯಿಸಿದ್ದಾರೆ.

Chikkaballapur News: ಒಳಮೀಸಲಾತಿಯಂತೆ ನೇಮಕಾತಿ ನಡೆಯದಿದ್ದರೆ ವಿಧಾನ ಸೌಧ ಮುತ್ತಿಗೆ ಖಚಿತ : ಮಾದಾರ ಮಹಾಸಭಾದ ಜಿಲ್ಲಾಧ್ಯಕ್ಷ ಪಟ್ರೇನಹಳ್ಳಿ ಕೃಷ್ಣ  ಎಚ್ಚರಿಕೆ.

ಒಳಮೀಸಲಾತಿಯಂತೆ ನೇಮಕಾತಿ ನಡೆಯದಿದ್ದರೆ ವಿಧಾನ ಸೌಧ ಮುತ್ತಿಗೆ ಖಚಿತ

ಪ್ರಸ್ತುತ ನೇಮಕಾತಿ ನಡೆಯುವ 56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಶೇ.21ರಂತಾಗಲಿ, ಅಥವಾ ಶೇ 18 ರಂತಾಗಲಿ ಹೇಗಾದರೂ ಆಗಲಿ ಒಳಮೀಸಲಾತಿಯಂತೆಯೇ ನಡೆಯಬೇಕು. ಆ ಮೂಲಕ 35 ವರ್ಷ ಗಳ ಹೋರಾಟಕ್ಕೆ ನ್ಯಾಯ ನೀಡಬೇಕು. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ದಿಟ್ಟ ಕ್ರಮ ತೆಗೆದುಕೊಳ್ಳಬೇಕು. ಒತ್ತಡಕ್ಕೆ ಮಣಿದಲ್ಲಿ ಮುಂದಿನ ದಿನಗಳಲ್ಲಿ ಮಾದಿಗ ಸಮುದಾಯದ ಪ್ರತಿರೋದ ಎದುರಿಸಬೇಕಾಗುತ್ತದೆ.

Chikkaballapur News: ಸಾಮಾಜಿಕ ಪರಿಣಾಮಗಳನ್ನು ಅಧ್ಯಯನ ಮಾಡುವ ಜವಾಬ್ದಾರಿ ಸಮಾಜ ಶಾಸ್ತ್ರಜ್ಞರ ಮೇಲಿದೆ: ಪ್ರಾಂಶುಪಾಲೆ ಡಾ.ಮಂಜುಳ ಅಭಿಮತ

ಸಾಮಾಜಿಕ ಪರಿಣಾಮಗಳ ಅಧ್ಯಯನ ಸಮಾಜಶಾಸ್ತ್ರಜ್ಞರ ಜವಾಬ್ದಾರಿ

ತಂತ್ರಜ್ಞಾನ ಮಾನವನ ಜೀವನವನ್ನು ಸುಲಭಗೊಳಿಸಿದರೂ, ಅದರ ಸಾಮಾಜಿಕ ಪರಿಣಾಮಗಳನ್ನು ಅಧ್ಯಯನ ಮಾಡುವ ಜವಾಬ್ದಾರಿ ಸಮಾಜ ಶಾಸ್ತ್ರಜ್ಞರ ಮೇಲಿದೆ. ಕೃತಕ ಬುದ್ಧಿಮತ್ತೆಯ ಬಳಕೆ ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಕ್ಷೇತ್ರಗಳಲ್ಲಿ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ, ಸಾಮಾಜಿಕ ಅಸಮಾ ನತೆ, ಉದ್ಯೋಗ ನಷ್ಟ, ಡೇಟಾ ಗೌಪ್ಯತೆ ಮತ್ತು ನೈತಿಕ ಮೌಲ್ಯಗಳಂತಹ ಪ್ರಶ್ನೆಗಳು ಉದ್ಭವಿಸುತ್ತಿವೆ

Chikkaballapur News: “ವಿಶ್ವದ ಸಮಸ್ಯೆಗಳಿಗೆ ಭಾರತೀಯ ಸಂಸ್ಕೃತಿ ಆಚಾರ–ವಿಚಾರಗಳೇ ಏಕೈಕ ಪರಿಹಾರ” :  ಸಂತೋಷ್ ಕುಮಾರ್ ಕಾರ್ಲೇಟಿ

“ವಿಶ್ವದ ಸಮಸ್ಯೆಗಳಿಗೆ ಭಾರತೀಯ ಸಂಸ್ಕೃತಿ ಆಚಾರ–ವಿಚಾರಗಳೇ ಏಕೈಕ ಪರಿಹಾರ”

ಹಿಂದೂ ಧರ್ಮಕ್ಕೆ ನಿರ್ದಿಷ್ಟ ಜನನ ಅಥವಾ ಅಂತ್ಯದ ದಿನಾಂಕವಿಲ್ಲದೆ, ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗಗಳ ಮೂಲಕ ಕಾಲಮಾನವನ್ನು ಖಗೋಳಶಾಸ್ತ್ರದ ಆಧಾರದ ಮೇಲೆ ವಿವರಿಸಲಾಗಿದೆ. ಲೋಹಶಾಸ್ತ್ರ, ಶಿಲ್ಪಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ವಸ್ತ್ರ ತಯಾರಿಕಾ ಕಲೆಗಳಲ್ಲಿ ಭಾರತೀಯರ ಸಾಧನೆಗಳನ್ನು ಅವರು ಸ್ಮರಿಸಿದರು.

ಗ್ರೇಟರ್ ಬೆಂಗಳೂರು ವ್ಯಾಪ್ತಿಯ ರಸ್ತೆ ಬದಿ, ವಿಭಜಕಗಳ ಗಿಡಗಳ ಸೂಕ್ತ ನಿರ್ವಹಣೆಗೆ ಆದೇಶ

ಬೆಂಗಳೂರಿನ ರಸ್ತೆ ಬದಿ, ವಿಭಜಕಗಳ ಗಿಡಗಳ ಸೂಕ್ತ ನಿರ್ವಹಣೆಗೆ ಆದೇಶ

DK Shivakumar: ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಎಲ್ಲ ರಸ್ತೆಬದಿ ಹಾಗೂ ರಸ್ತೆ ವಿಭಜಕಗಳಲ್ಲಿನ ಗಿಡಗಳನ್ನು ಸರಿಯಾಗಿ ಪೋಷಣೆ ಮಾಡಬೇಕು, ಒಣಗಿ ಬಿದ್ದಿರುವ ಕಸವನ್ನು ತೆರವುಗೊಳಿಸಬೇಕು. ಈ ಪ್ರಕ್ರಿಯೆಯನ್ನು ನಿರಂತರ ಪರಿಶೀಲಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ಬದಿ ಹಾಗೂ ರಸ್ತೆ ವಿಭಜಕಗಳಲ್ಲಿ ನೆಡಲಾಗಿದ್ದ ಗಿಡಗಳನ್ನು ಸೂಕ್ತ ನಿರ್ವಹಣೆಗೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

Bengaluru News: ಪ್ರಿಯಕರನ ಕೈಕಾಲು ಕಟ್ಟಿ ಭೀಕರವಾಗಿ ಹತೈಗೈದ ಕಿರುತೆರೆ ನಟಿ

ಪ್ರಿಯಕರನನ್ನು ಭೀಕರವಾಗಿ ಹತೈಗೈದ ಕಿರುತೆರೆ ನಟಿ

Crime News: ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದೆ. ಬಾಗಲಗುಂಟೆಯ ವಿಜಯಲಕ್ಷ್ಮೀ ಬಡಾವಣೆಯ ಮನೆಯೊಂದರಲ್ಲಿ ಪ್ರಿಯಕರನನ್ನು ಕಿರುತೆರೆ ನಟಿ ಊರ್ವಶಿ ಕೊಲೆ ಮಾಡಿದ್ದಾಳೆ. ಕೆಲವು ದಿನಗಲ ಹಿಂದೆ ಮೃತದೇಹ ಪತ್ತೆಯಾಗಿತ್ತು. ಇದೀಗ ಕೊಲೆಯ ರಹಸ್ಯ ಬಯಲಾಗಿದ್ದು, ಮೃತನನ್ನು ಮೋಹನ ಕೃಷ್ಣ ಎಂದು ಗುರುತಿಸಲಾಗಿದೆ.

ಹಿಂದುಳಿದ, ದಲಿತ ಸಮುದಾಯಗಳ 24 ಮಠಗಳಿಗೆ ಯಲಹಂಕ ಕ್ಷೇತ್ರದಲ್ಲಿ ಭೂಮಿ

ಶಾಸಕ ಎಸ್.ಆರ್. ವಿಶ್ವನಾಥ್‌ಗೆ ಶ್ರೀಗಳ ಕೃಪಾಶೀರ್ವಾದ

SR Vishwanath: ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಗ್ರಾಮದಲ್ಲಿ 24 ಹಿಂದುಳಿದ ಹಾಗೂ ದಲಿತ ಸಮುದಾಯಗಳ ಮಠಗಳಿಗೆ ಭೂಮಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಭೂಮಿ ಪಡೆದ 24 ಮಠಾಧೀಶರು ಸೋಮವಾರ ಬೆಳಗ್ಗೆ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಮನೆಗೆ ಆಗಮಿಸಿ ಆಶೀರ್ವದಿಸಿದ್ದಾರೆ.

ಇರಾನ್‌-ಇಸ್ರೇಲ್‌ ಸಂಘರ್ಷ; ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ

ಕನ್ನಡಿಗರ ರಕ್ಷಣೆಗಾಗಿ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ

Middle East Crisis: ಇರಾನ್‌ ಮೇಲೆ ಇಸ್ರೇಲ್‌-ಅಮೆರಿಕ ಜಂಟಿಯಾಗಿ ದಾಳಿ ನಡೆಸಿದ ಬಳಿಕ ಮಧ್ಯಪ್ರಾಚ್ಯ ಸಂಘರ್ಷಭರಿತವಾಗಿದೆ. ಇದರಿಂದ ಸೌದಿ ಅರೇಬಿಯಾ, ಯುಎಇ ಸೇರಿದಂತೆ ಹಲವು ದೇಶಗಳಲ್ಲಿ ಕನ್ನಡಿಗರು ಸೇರಿ ಭಾರತೀಯರು ಸಿಲುಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆ ತರುವಂತೆ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

Iran- Israel War: ಅಬುಧಾಬಿಯಲ್ಲಿ ಸಿಲುಕಿದ ಕನ್ನಡಿಗರು; ನೆರವಿಗೆ ಮನವಿ ಮಾಡಿದ ಕುಟುಂಬ

ತಾಯ್ನಾಡಿಗೆ ಕರೆ ತರುವಂತೆ ಅಬುಧಾಬಿಯಲ್ಲಿನ ಕನ್ನಡಿಗರ ಮನವಿ

ಅಮೆರಿಕ ಮತ್ತು ಇಸ್ರೇಲ್‌ ಜಂಟಿ ಕಾರ್ಯಾಚರಣೆ ನಡೆಸಿ ಇರಾನ್‌ನ ಸರ್ವೋಚ್ಚ ನಾಯಕನಾಗಿದ್ದ ಆಯತೊಲ್ಲ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿದ ಬಳಿಕ ಮಧ್ಯಪ್ರಾಚ್ಯ ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಅಬುಧಾಬಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಹಾವೇರಿಯ ಕುಟುಂಬವೊಂದು ತಮ್ಮನ್ನು ತಾಯ್ನಾಡಿಗೆ ಕರೆ ತರುವಂತೆ ಮನವಿ ಮಾಡಿದೆ.

ಮದ್ದೂರು ತಾಲೂಕಿನ 4 ಗ್ರಾಮ ಪಂಚಾಯತ್‌ ನಗರಸಭೆ ಸೇರ್ಪಡೆಗೆ ವಿರೋಧ; ಸ್ಥಳೀಯರಿಂದ ಆಕ್ರೋಶ, ಸಿಎಂಗೆ ಕೇಂದ್ರ ಸಚಿವರ ಪತ್ರ

ಮದ್ದೂರು ತಾಲೂಕಿನ 4 ಗ್ರಾ.ಪಂ. ಮದ್ದೂರು ನಗರಸಭೆ ಸೇರ್ಪಡೆಗೆ ವಿರೋಧ

Mandya News: ಮದ್ದೂರು ತಾಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಮುಂತಾದ ಗ್ರಾಮ ಪಂಚಾಯತ್‌ಗಳನ್ನು ಮದ್ದೂರು ನಗರಸಭೆಗೆ ಸೇರ್ಪಡೆ ಮಾಡಿರುವುದನ್ನು ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿ ಕೆಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಈ‌ ವಿಚಾರದಲ್ಲಿ ಮಧ್ಯ ಪ್ರವೇಶಿಸಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದುಬೈನಲ್ಲಿ ಸಂಕಷ್ಟದಲ್ಲಿರುವ ಪ್ರವಾಸಿಗರಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ನೆರವು, ತುರ್ತು ಸಹಕಾರಕ್ಕಾಗಿ ಸರ್ಕಾರಕ್ಕೆ ಮನವಿ

ದುಬೈ ಪ್ರವಾಸಿಗರ ನೆರವಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ

ಯುಎಇನಲ್ಲಿರುವ ಸದ್ಯದ ಪರಿಸ್ಥಿತಿ, ಅಲ್ಲಿ ಸಿಲುಕಿರುವ ಪ್ರವಾಸಿ ಕನ್ನಡಿಗರ ಮಾಹಿತಿ ಸಂಗ್ರಹಕ್ಕೆ ಅನಿವಾಸಿ ಕನ್ನಡಿಗರ ಪೋಷಕರಾದ ರೊನಾಲ್ಡ್ ಕೊಲಸೋ ಅವರ ನೇತೃತ್ವದ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡವು ಕರ್ನಾಟಕ ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಯಾವುದೇ ರೀತಿಯ ಅಪಪ್ರಚಾರಗಳನ್ನು ನಂಬಬೇಡಿ, ಸುಳ್ಳು ಮಾಹಿತಿಗಳನ್ನು ಹರಡಬೇಡಿ ಎಂದು ಮನವಿ ಮಾಡಿದರು.

prahlad Joshi: ರಾಯಭಾರಿಗಳ ಜತೆ ಮಾತುಕತೆ, ಎಲ್ಲ ಭಾರತೀಯರನ್ನೂ ಸುರಕ್ಷಿತವಾಗಿ ಕರೆತರುತ್ತೇವೆ: ಸಚಿವ ಪ್ರಹ್ಲಾದ ಜೋಶಿ

ಎಲ್ಲ ಭಾರತೀಯರನ್ನೂ ಸುರಕ್ಷಿತವಾಗಿ ಕರೆತರುತ್ತೇವೆ: ಸಚಿವ ಪ್ರಹ್ಲಾದ ಜೋಶಿ

ಜಗತ್ತಿನ ಎಲ್ಲೇ ಆಗಲಿ ಕನ್ನಡಿಗರು ಸೇರಿದಂತೆ ಭಾರತೀಯರು ಸಂಕಷ್ಟಕ್ಕೆ ಸಿಲುಕಿದಾಗ ಕೇಂದ್ರ ಸರ್ಕಾರ ಸುರಕ್ಷಿತವಾಗಿ ಕರೆ ತಂದಿದೆ. ಹಿಂದೆ ಉಕ್ರೇನ್‌ನಲ್ಲಿ ಸಿಲುಕಿದ್ದವರನ್ನು ಮರಳಿ ಕರೆ ತಂದಿದ್ದೇವೆ. ಭಾರತೀಯರು ಎಲ್ಲೇ ಇದ್ದರೂ ಅವರ ಸುರಕ್ಷತೆಗೆ ಕೇಂದ್ರ ಸರ್ಕಾರ ಪ್ರಥಮ ಆದ್ಯತೆ ನೀಡುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

Assault Case: ಪಿಯುಸಿ ಪರೀಕ್ಷೆ ಬರೆಯಲು ಹೋಗದಂತೆ ವಿದ್ಯಾರ್ಥಿನಿ ಮೇಲೆ ಸೋದರಮಾವನ ಹಲ್ಲೆ

ಪಿಯುಸಿ ಪರೀಕ್ಷೆ ಬರೆಯಲು ಹೋಗದಂತೆ ವಿದ್ಯಾರ್ಥಿನಿ ಮೇಲೆ ಸೋದರಮಾವನ ಹಲ್ಲೆ

ಪೂರ್ಣಿಮಾ ಹಲ್ಲೆಗೆ ಒಳಗಾದ ವಿದ್ಯಾರ್ಥಿನಿ. ಆಕೆ ಪರೀಕ್ಷೆ (2nd PUC Exam) ಮುಗಿಸಿ ಮನೆಗೆ ಬಂದಾಗ ವಿದ್ಯಾರ್ಥಿನಿಯ ಸೋದರ ಮಾವ ಸೋಮಣ್ಣ ಎಂಬಾತ ಏಕಾಏಕಿ ಮನೆಗೆ ನುಗ್ಗಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಹಳೇ ದ್ವೇಷದ ಹಿನ್ನಲೆಯಲ್ಲಿ, ನೀನು ಓದಬಾರದು ಅಂತ ಹಲ್ಲೆ ಮಾಡಿದ್ದಾನೆ.

Physical Abuse: ಡ್ರಗ್ಸ್‌ ನೀಡಿ ಅತ್ಯಾಚಾರ ಪ್ರಕರಣದಲ್ಲಿ ಕಾರ್ಪೊರೇಟರ್‌ ಮಗ ಅಂದರ್‌

ಡ್ರಗ್ಸ್‌ ನೀಡಿ ಅತ್ಯಾಚಾರ ಪ್ರಕರಣದಲ್ಲಿ ಕಾರ್ಪೊರೇಟರ್‌ ಮಗ ಅಂದರ್‌

ಡ್ರಗ್ಸ್ ದಂಧೆ ಜತೆ ಸೆಕ್ಸ್ ದಂಧೆಗೂ ಬಯಲಾಗಿದ್ದ ಕೇಸ್​ನಲ್ಲಿ ಮತ್ತೆ ಮೂವರು ಬಂಧನವಾಗಿದ್ದಾರೆ. ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ನಿಖಿಲ್, ಡಿಕ್ಸನ್ ಹೆಡೆಮುರಿ ಕಟ್ಟಿದ್ದ ಅಮೃತಹಳ್ಳಿ ಪೊಲೀಸರು ಇದೀಗ ಅನಿರುದ್ಧ, ಶ್ರವಣ್, ಮೋಹಿತ್ ಎಂಬ ಮೂವರನ್ನು ಕಸ್ಟಡಿಗೆ ಪಡೆದಿದ್ದಾರೆ. ಈ ಮೂವರು ಕೂಡ ನಿಖಿಲ್ ಕೃತ್ಯಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಸಾಥ್ ನೀಡುತ್ತಿದ್ದರು ಎನ್ನುವುದು ತನಿಖೆ ವೇಳೆ ಬಯಲಾಗಿದೆ.

Lunar Eclipse: ನಾಳೆ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ

ನಾಳೆ ಚಂದ್ರಗ್ರಹಣ: ಪ್ರಮುಖ ದೇವಾಲಯಗಳ ದರ್ಶನ ಸಮಯ ಬದಲಾವಣೆ

ರಕ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಪುಣ್ಯಕ್ಷೇತ್ರಗಳ (temple) ಪೂಜೆ ಮತ್ತು ದರ್ಶನದ ಸಮಯದಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಬಹುತೇಕ ದೇವಾಲಯಗಳಲ್ಲಿ ಗ್ರಹಣ ಕಾಲದಲ್ಲಿ ದರ್ಶನ ಸ್ಥಗಿತಗೊಳಿಸಿ, ಶುದ್ಧೀಕರಣದ ನಂತರವಷ್ಟೇ ಭಕ್ತರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

Heart Attack: ಪೊಲೀಸ್‌ ಮ್ಯಾರಥಾನ್‌ ವೇಳೆ ಕುಸಿದು ಬಿದ್ದು ಎಸ್‌ಐ ಸಾವು

ಪೊಲೀಸ್‌ ಮ್ಯಾರಥಾನ್‌ ವೇಳೆ ಕುಸಿದು ಬಿದ್ದು ಎಸ್‌ಐ ಸಾವು

ನಿನ್ನೆ ಪೊಲೀಸ್ ಇಲಾಖೆ ಮ್ಯಾರಥಾನ್ ಆಯೋಜಿಸಿತ್ತು. ‘ಜಿಲ್ಲಾ ಪೊಲೀಸ್ ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಘೋಷ ವಾಕ್ಯದೊಂದಿಗೆ ಮ್ಯಾರಥಾನ್ ಆಯೋಜಿಸಲಾಗಿತ್ತು. ಡ್ರಗ್ಸ್ ಮುಕ್ತ ಕರ್ನಾಟಕ ಧ್ಯೇಯದೊಂದಿಗೆ ಓಟ ಆರಂಭಗೊಂಡಿತ್ತು. ಉಡುಪಿ ನಗರದ ತಾಲೂಕು ಪಂಚಾಯತ್ ಮುಂಭಾಗದ ರಸ್ತೆಯಲ್ಲಿ ಎಸ್‌ಐ ಕುಸಿದುಬಿದ್ದಿದ್ದಾರೆ.

Loading...