ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

TET Exam: ಕನ್ನಡದಲ್ಲೂ ಟಿಇಟಿ ಪರೀಕ್ಷೆ ನಡೆಸಿ; ಮಹಾರಾಷ್ಟ್ರ ಸರ್ಕಾರಕ್ಕೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಪತ್ರ

ಕನ್ನಡದಲ್ಲೂ ಟಿಇಟಿ ನಡೆಸಿ; ಮಹಾರಾಷ್ಟ್ರ ಸರ್ಕಾರಕ್ಕೆ ಸಿಎಸ್‌ ಪತ್ರ

ಮಹಾರಾಷ್ಟ್ರದ ಕನ್ನಡ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಕನ್ನಡದಲ್ಲೇ ಟಿಇಟಿ ಬರೆಯಲು ಅವಕಾಶ ನೀಡಬೇಕು. ಎಲ್ಲಾ ಶಿಕ್ಷಕರ ನೇಮಕಾತಿ ಅಧಿಸೂಚನೆಗಳಲ್ಲಿ ಈ ಆಯ್ಕೆಯನ್ನು ಒದಗಿಸಬೇಕು. ಕನ್ನಡ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮನವಿ ಮಾಡಿದ್ದಾರೆ.

ಏ.11ರಂದು ಸಿದ್ದಸಿರಿ ಸಹಕಾರಿ ಬ್ಯಾಂಕ್ ನಾದ ಹಾಗೂ ತಾಂಬಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭ: ಜಗದೀಶ ಕ್ಷತ್ರಿ

ಏ.11ರಂದು ತಾಂಬಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭ

ರಾಜ್ಯಾದ್ಯಂತ 212 ಶಾಖೆಗಳಿವೆ. 20 ವರ್ಷದಲ್ಲಿ ಸಿದ್ದಸಿರಿ ಸಂಸ್ಥೆಯು ಹಲವಾರು ಅಂಗಸಂಸ್ಥೆಗಳನ್ನು ಹುಟ್ಟು ಹಾಕಿದೆ. ಸಿದ್ದಸಿರಿ ಕೋಲ್ಡ್ ಸ್ಟೋರೇಜ್ , ಸಿದ್ದಸಿರಿ ಪವರ್ ಏತನಾಲ್ ಘಟಕ ಚಿಂಚೋಳಿ, ಸಿದ್ದಸಿರಿ ಇಂಧನ ಕೇಂದ್ರ 3 ಕಡೆ, ಸಿದ್ದಸಿರಿ ಕೃಷಿ ಕೇಂದ್ರಗಳು ಒಟ್ಟು 5, ಸಿದ್ದಸಿರಿ ಸಂಸ್ಥೆಯ ಹಾಗೂ ಶ್ರೀಸಿದ್ದೇಶ್ವರ ಸಂಸ್ಥೆಯ ನಿರ್ದೇಶಕರು ಕೂಡಿಕೊಂಡು ಶ್ರೀಸಿದ್ದೇಶ್ವರ ಚಾರಿಟೇಬಲ್ ವತಿಯಿಂದ ವಿಜಯ ಪೂರದಲ್ಲಿ ಪರಮ ಪೂಜ್ಯ ಶ್ರೀಸಿದ್ದೇಶ್ವರ ಸ್ವಾಮಿಜಿಯವರ ಹೆಸರಿನಲ್ಲಿ 108 ಹಾಸಿಗೆಯ ಆಧುನಿಕ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ.

Mobile canteen: ಮೊಬೈಲ್ ಕ್ಯಾಂಟೀನ್ ನಡೆಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಮೊಬೈಲ್ ಕ್ಯಾಂಟೀನ್ ನಡೆಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಅರ್ಜಿದಾರರು ಯಾವ ಜಿಲ್ಲೆಯ ನಿವಾಸಿಯಾಗಿರುತ್ತಾರೋ ಅದೇ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಬೇಕು. ಆಧಾರ್ ಕಾರ್ಡ ಪ್ರತಿಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರುವ ಬಗ್ಗೆ ತಹಶೀಲ್ದಾರ್‌ರಿಂದ ಪಡೆದುಕೊಂಡಿರುವ ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರದ ಪ್ರತಿ. ತಹಶೀಲ್ದಾರ್‌ರಿಂದ ಪಡೆದುಕೊಂಡಿರುವ ಚಾಲ್ತಿಯಲ್ಲಿರುವ ಆದಾಯದ ಪ್ರಮಾಣ ಪತ್ರದ ಪ್ರತಿ. ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾಗಿರುವ ಅಂಕಪಟ್ಟಿಯ ಜೆರಾಕ್ಸ್ ಪ್ರತಿ ಲಗತ್ತಿಸಬೇಕು.

Yettinahole drinking water project: ಜಿಲ್ಲಾಧಿಕಾರಿಗಳಿಂದ ಎತ್ತಿನಹೊಳೆ ಯೋಜನೆಯ ಭೂಸ್ವಾಧೀನದ ಪ್ರಗತಿ ಪರಿಶೀಲನೆ

ಜಿಲ್ಲಾಧಿಕಾರಿಗಳಿಂದ ಎತ್ತಿನಹೊಳೆ ಯೋಜನೆಯ ಭೂಸ್ವಾಧೀನದ ಪ್ರಗತಿ ಪರಿಶೀಲನೆ

ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಪೂರೈಕೆಗಾಗಿ ಸರ್ಕಾರ ಕೈಗೊಂಡಿರುವ ಎತ್ತಿನಹೊಳೆ ಮಹತ್ವಾ ಕಾಂಕ್ಷಿ ಯೋಜನೆಯ ಕಾಮಗಾರಿಗಳು ಜಿಲ್ಲೆಯಲ್ಲಿ ಭರದಿಂದ ಸಾಗುತ್ತಿವೆ. ಗೌರಿ ಬಿದನೂರು ಗುರುತ್ವ ಫೀಡರ್ ಪೈಪ್ ಲೈನ್ ಕಾಮಗಾರಿಯ ಎತ್ತಿನಹೊಳೆ ಮುಖ್ಯ ಗುರುತ್ವ ಕಾಲುವೆಯ ಸರಪಳಿ 257.57 ಕಿ.ಮೀ ನಲ್ಲಿ ಕವಲೊಡೆದು ಸು. 81.6 ಕಿ.ಮೀ ಉದ್ದದ ಪೈಪ್ ಲೈನ್ ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿವೆ

E-account movement: ಜಿಲ್ಲೆಯ ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಖಾತೆ ಆಂದೋಲನಕ್ಕೆ ಜಿಲ್ಲಾಧಿಕಾರಿ ಜಿ.ಪ್ರಭು ಚಾಲನೆ

ಜಿಲ್ಲೆಯ ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಖಾತೆ ಆಂದೋಲನ

ಜಿಲ್ಲೆಯ ನಗರಾಡಳಿತ ಪ್ರದೇಶದ ವ್ಯಾಪ್ತಿಯಲ್ಲಿ 70 ರಿಂದ 80 ಸಾವಿರ ಮನೆ/ನಿವೇಶನ ಗಳಿಗೆ ಇ-ಆಸ್ತಿಗಳನ್ನು ವಿತರಿಸುವುದು ಬಾಕಿ ಇದೆ. ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳು ಹಾಗೂ ಕೆಲವು ಬಡಾವಣೆಗಳ ನಿವೇಶನಗಳಿಗೆ ಬಿ-ಖಾತೆ ಮಾಡಿಕೊಳ್ಳಲು ಹಾಗೂ ಈಗಾಗಲೇ ಬಿ-ಖಾತೆ ಹೊಂದಿರು ವವರು ಎ-ಖಾತೆಯ ಇ-ಸ್ವತ್ತುಗಳನ್ನು ಹೊಂದಲು ಸರ್ಕಾರ ಅವಕಾಶ ಮಾಡಿ ಕೊಟ್ಟಿದೆ

MLA M.T.Krishnappa: ಪ್ರಜಾಪ್ರಭುತ್ವ ಎತ್ತಿ ಹಿಡಿಯುವ ಕೆಲಸ ಪತ್ರಕರ್ತರದ್ದು: ಎಂ.ಟಿ.ಕೃಷ್ಣಪ್ಪ

ಪ್ರಜಾಪ್ರಭುತ್ವ ಎತ್ತಿಹಿಡಿಯುವ ಕೆಲಸ ಪತ್ರಕರ್ತರದ್ದು: ಎಂ.ಟಿ.ಕೃಷ್ಣಪ್ಪ

ಸಮಾಜದ ಆಗು ಹೋಗುಗಳ ಬಗ್ಗೆ ನಿಖರ ಮಾಹಿತಿ ನೀಡುವ ಜೊತೆಗೆ ಯಾವುದೇ ವಿಚಾರದ ಸತ್ಯಾ ಸತ್ಯತೆ ಬಿತ್ತರಿಸುವ ಕೆಲಸ ಮಾಧ್ಯಮದವರು ಮಾಡುತ್ತಾರೆ. ತಾಲ್ಲೂಕಿನಲ್ಲಿ ನಡೆಯುವ ಸಣ್ಣ ವಿಚಾರ ದಿಂದ ದೊಡ್ಡ ವಿಚಾರಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ಮಾಧ್ಯಮ ಕ್ಷೇತ್ರಕ್ಕೆ ತನ್ನದೇ ಕಚೇರಿ ಅವಶ್ಯವಿದೆ. ಭ್ರಷ್ಟಾಚಾರ ವಿರೋಧಿಗಳಾಗಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪತ್ರಕರ್ತರು ಪಣ ತೊಡಬೇಕು

ಬಿಜೆಪಿ, ಆರ್‌ಎಸ್‌ಎಸ್‌ ಕುರಿತು ಪ್ರಚೋದನಕಾರಿ ಭಾಷಣ; ಖರ್ಗೆ ಬಂಧನಕ್ಕೆ ಆಗ್ರಹಿಸಿ ಡಿಜಿ-ಐಜಿಪಿಗೆ ದೂರು

ಮಲ್ಲಿಕಾರ್ಜುನ ಖರ್ಗೆ ಬಂಧನಕ್ಕೆ ಆಗ್ರಹಿಸಿ ಡಿಜಿ-ಐಜಿಪಿಗೆ ಬಿಜೆಪಿ ದೂರು

ನಮಾಜ್ ಮಾಡುವಾಗ ವಿಷಸರ್ಪ ಬಂದರೆ ನೀವು ನಮಾಜನ್ನು ನಿಲ್ಲಿಸಿ ಅದನ್ನು ಕೊಲ್ಲಿ; ನಮಾಜ್ ಮಾಡುವಾಗ ಬಿಜೆಪಿ, ಆರೆಸ್ಸೆಸ್‍ನವರು ಬಂದರೆ ನಮಾಜನ್ನು ನಿಲ್ಲಿಸಿ ಅವರನ್ನು ಕೊಲ್ಲಿ; ಇದು ಕುರಾನ್‍ನಲ್ಲಿ ಉಲ್ಲೇಖ ಆಗಿದೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡಿರುವ ಅವರನ್ನು ಬಂಧಿಸಬೇಕು ಎಂದು ರಾಜ್ಯ ಬಿಜೆಪಿ ಆಗ್ರಹಿಸಿದೆ.

Karnataka Sanskrit University: ಸಂಸ್ಕೃತದ ಪ್ರಾಚೀನ ಜ್ಞಾನಪರಂಪರೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸಬೇಕು: ರಾಜ್ಯಪಾಲ ಗೆಹೋಟ್ ಕರೆ

ಕರ್ನಾಟಕ ಸಂಸ್ಕೃತ ವಿವಿ: 12 ಮತ್ತು 13ನೆಯ ದೀಕ್ಷಾಂತ ಘಟಿಕೋತ್ಸವ

ಸಂಸ್ಕೃತ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಇದು ಭಾರತದ ಆತ್ಮವಿದ್ದಂತೆ. ಹಲವು ಭಾಷೆಗಳಿಗೆ ಸಂಸ್ಕೃತ ಜನನಿಯಾಗಿದ್ದು, ತಾಯಿ ಬೇರು ರಕ್ಷಿಸಬೇಕಾಗಿದೆ. ಪರಿಸರ ಸಮಸ್ಯೆ, ನೈತಿಕ ಮೌಲ್ಯಗಳ ಕುಸಿತ ಸೇರಿದಂತೆ ಜಗತ್ತು ಹಲವು ಸಮಸ್ಯೆಗಳ ಸುಳಿಯಲ್ಲಿದೆ. ಇದಕ್ಕೆ ಸಂಸ್ಕೃತದಲ್ಲಿರುವ ಜ್ಞಾನದ ಮೂಲಕ ಪರಿಹಾರ ದೊರೆಯಲಿದೆ. ವಿಕಸಿತ ಭಾರತದ ಗುರಿ ಸಾಧನೆಗೆ ಯುವ ಸಮೂಹ ಕಾರ್ಯ ನಿರ್ವಹಿಸುವ ಜೊತೆಗೆ ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಕೈ ಜೋಡಿಸಬೇಕು

ಆರೋಗ್ಯದ ತೊಂದರೆಗಳು ಮೊದಲೇ ಪ್ರಾರಂಭವಾಗಿ ದೀರ್ಘಕಾಲ ಗೋಪ್ಯ: ಅಪೋಲೋ ಹಾಸ್ಪಿಟಲ್ಸ್ ನ ಹೆಲ್ತ್ ಆಫ್ ನೇಷನ್ 2026 ವರದಿ

ಆರೋಗ್ಯದ ತೊಂದರೆಗಳು ದೀರ್ಘಕಾಲ ಗೋಪ್ಯವಾಗಿರುತ್ತದೆ

ಭಾರತದ ಆರೋಗ್ಯಕ್ಷೇತ್ರವು ವಿಕಾಸಗೊಳ್ಳುತ್ತಿದ್ದು ಅದರಲ್ಲಿ ಮೂವರು ಯುವ ವಯಸ್ಕರಲ್ಲಿ ಇಬ್ಬರಿಗೆ ಈಗಾಗಲೇ ಎನ್.ಸಿ.ಡಿ.ಗಳ ರಿಸ್ಕ್ ಇದೆ. ದುಡಿಯುವ ಜನಸಂಖ್ಯೆಯಲ್ಲಿ ಸುಮಾರು ಅರ್ಧರಷ್ಟು ಮಂದಿ ಮಧುಮೇಹಪೂರ್ವ ಸ್ಥಿತಿ ಅಥವಾ ಮಧುಮೇಹ ಹೊಂದಿದ್ದಾರೆ ಮತ್ತು 10 ಮಂದಿಯಲ್ಲಿ 8 ಮಂದಿ ಅತಿಯಾದ ತೂಕ ಹೊಂದಿರುವುದು ಜೀವನಶೈಲಿ-ಪ್ರೇರಿತ ಸುಧಾರಣೆಗೆ ಸ್ಪಷ್ಟ ಅವಕಾಶಗಳನ್ನು ಪ್ರಸ್ತುತಪಡಿಸಿದೆ.

Karnataka bypolls: ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ; ಏಪ್ರಿಲ್‌ 9ಕ್ಕೆ ಸರ್ಕಾರಿ ನೌಕರರಿಗೆ ರಜೆ ಘೋಷಣೆ

ಏಪ್ರಿಲ್‌ 9ಕ್ಕೆ ಉಪಚುನಾವಣೆ; ಸರ್ಕಾರಿ ನೌಕರರಿಗೆ ರಜೆ ಘೋಷಣೆ

ಏಪ್ರಿಲ್‌ 9ರ ಗುರುವಾರದಂದು ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ಈ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳಿಗೆ ನೌಕರರಿಗೆ ಒಂದು ದಿನದ ವೇತನ ಸಹಿತ ರಜೆ ಮಂಜೂರು ಮಾಡಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸುಸ್ಥಿರ ನಗರ ಜೀವನವನ್ನು ಮರು ವ್ಯಾಖ್ಯಾನಿಸುತ್ತಿದೆ ಬೆಂಗಳೂರಿನ ನೀರಿನ ಬಿಕ್ಕಟ್ಟು

ಸುಸ್ಥಿರ ನಗರ ಜೀವನವನ್ನು ಮರು ವ್ಯಾಖ್ಯಾನಿಸುತ್ತಿದೆ ನೀರಿನ ಬಿಕ್ಕಟ್ಟು

ಬೆಂಗಳೂರಿನ ಸಾಂಪ್ರದಾಯಿಕ ಜಲಮೂಲಗಳು. ಐತಿಹಾಸಿಕ ದಾಖಲೆಗಳ ಪ್ರಕಾರ ನಗರದಲ್ಲಿ 260 ಕೆರೆಗಳಿದ್ದವು, ಇಂದು 80ಕ್ಕಿಂತ ಕಡಿಮೆ ಉಳಿದಿದ್ದರೂ ಅವು ಗಳಲ್ಲಿ ಬಹಳಷ್ಟು ಮಾಲಿನ್ಯಗೊಂಡಿವೆ ಅಥವಾ ಒತ್ತುವರಿಗೆ ಒಳಗಾಗಿವೆ. ಇದರಿಂದ ಸಹಜವಾಗಿ ಅಂತರ್ಜಲ ಮರುಪೂರಣದ ಮೇಲೆ ಪರಿಣಾ ಮ ಬೀರಿದೆ.

Dharwad News: ಬೇಕಂತಲೇ ಯುವತಿಯರ ಮೈ ಕೈ ಮುಟ್ಟಿ ಅನುಚಿತ ವರ್ತನೆ; ಧಾರವಾಡದಲ್ಲಿ‌ ಮುಸ್ಲಿಂ ಜಿಮ್ ಟ್ರೈನರ್‌ ಅರೆಸ್ಟ್

ಯುವತಿಯರಿಗೆ ಬ್ಯಾಡ್‌ ಟಚ್‌ ಮಾಡುತ್ತಿದ್ದ ಮುಸ್ಲಿಂ ಜಿಮ್ ಟ್ರೈನರ್‌ ಅರೆಸ್ಟ್

Dharwad gym trainer Arrest: ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿ ಸಾಬಿರ್, ಜಿಮ್‌ನಲ್ಲಿ ಮಹಿಳೆಯರ ಶೌಚಾಲಯಕ್ಕೆ ಹೋಗಿ ಬರುವುದು, ಟ್ರೈನಿಂಗ್ ವೇಳೆ ಬೇಕಂತಲೇ ಮೈ ಕೈ ಮುಟ್ಟಿ ಅನುಚಿತ ವರ್ತನೆ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

ಕಾಂಗ್ರೆಸ್ ವಿರುದ್ಧ ಬಸವರಾಜ ಬೊಮ್ಮಾಯಿ ವಾಗ್ದಾಳಿ: ಜನಸಂಘದ ಇತಿಹಾಸ ಬಿಚ್ಚಿಟ್ಟ ಮಾಜಿ ಸಿಎಂ Video

ಕಾಂಗ್ರೆಸ್ ವಿರುದ್ಧ ಬಸವರಾಜ ಬೊಮ್ಮಾಯಿ ವಾಗ್ದಾಳಿ

Basavaraj Bommai slams Congress: ಬಿಜೆಪಿ ಮತ್ತು ಜನಸಂಘದ ಇತಿಹಾಸದ ಬಗ್ಗೆ ಮಾತನಾಡುತ್ತಾ, ಕಾಂಗ್ರೆಸ್ (Congress) ಪಕ್ಷದ ವಿರುದ್ಧ ಬಸವರಾಜ ಬೊಮ್ಮಾಯಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷವು ಬ್ರಿಟಿಷರಿಂದ ಸ್ಥಾಪಿಸಲ್ಪಟ್ಟಿತು. ಭಾರತೀಯರನ್ನು ಗುಲಾಮಗಿರಿಯಲ್ಲಿಡಲು ಮತ್ತು ಬ್ರಿಟಿಷರ ಹಿತಾಸಕ್ತಿ ಕಾಪಾಡಲು ಈ ವ್ಯವಸ್ಥೆ ಮಾಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಗ್ಯಾಸ್ ಸಮಸ್ಯೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ: ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ: ಡಾ.ಆನಂದ್ ಕುಮಾರ್

ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ

ಎಲ್.ಪಿ.ಜಿ ಮತ್ತು ಸಿ.ಎನ್.ಜಿ ಪೂರೈಕೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದ್ದು, ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣದಿಂದ ಸಂಕಷ್ಟ ತಲೆದೋರಿದೆ. ಹೋಟೆಲ್ ಗಳು, ಆಥಿತ್ಯ ವಲಯ, ತರಕಾರಿ, ಕುಕ್ಕುಟೋದ್ಯಮ, ಮತ್ಸೋದ್ಯಮ, ಪ್ರವಾಸೋದ್ಯಮ ಹೀಗೆ ಪ್ರತಿ ಯೊಂದು ವಲಯ ತತ್ತರಿಸುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಬಾಧಿತರಾಗಿರುವವರು ಆಟೋ ಚಾಲಕರು. ಇವರ ನೆರವಿಗೆ ಕೇಂದ್ರ ಸರ್ಕಾರ ಕೂಡಲೇ ಧಾವಿಸಬೇಕು

ದೃಷ್ಟಿಕೋನ 3.0: ಭವಿಷ್ಯದ ಕೌಶಲ್ಯ ಮತ್ತು ತಂತ್ರಜ್ಞಾನ ಕುರಿತು ಮಹತ್ವದ ಚರ್ಚೆ

ದೃಷ್ಟಿಕೋನ 3.0: ಭವಿಷ್ಯದ ಕೌಶಲ್ಯ, ತಂತ್ರಜ್ಞಾನ ಕುರಿತು ಮಹತ್ವದ ಚರ್ಚೆ

ಸಂಶೋಧನಾ ವಿಶ್ವವಿದ್ಯಾಲಯವಾದ ಯುಪಿಇಎಸ್, ಬೆಂಗಳೂರಿನಲ್ಲಿ ‘ದೃಷ್ಟಿ ಕೋನ 3.0’ ಕಾರ್ಯಕ್ರಮ ಆಯೋಜಿಸಿ, ಕೈಗಾರಿಕಾ ನಾಯಕರು ಹಾಗೂ ಶೈಕ್ಷಣಿಕ ವಲಯದ ತಜ್ಞರನ್ನು ಒಂದೇ ವೇದಿಕೆಯಲ್ಲಿ ಸೇರಿಸಿತು. ‘ಪರಿಸರ ಒಕ್ಕೂಟ: ಕೈಗಾರಿಕೆ, ನವೀನತೆ, ನೈತಿಕತೆ’ ಎಂಬ ವಿಷಯದಡಿ ನಡೆದ ಈ ಸಂವಾದದಲ್ಲಿ ಡೀಪ್‌ಟೆಕ್, ಸ್ಟಾರ್ಟ್‌ಅಪ್ ವೃದ್ಧಿ ಹಾಗೂ ಜಾಗತಿಕ ಸಾಮರ್ಥ್ಯ ಕೇಂದ್ರಗಳ ರೂಪಾಂತರಗಳು ಭವಿಷ್ಯದ ಕೈಗಾರಿಕಾ ಅಭಿವೃದ್ಧಿಯಲ್ಲಿ ಹೇಗೆ ಪ್ರಭಾವ ಬೀರುತ್ತವೆ

Chikkamagaluru News: ಎನ್.ಆರ್.ಪುರದಲ್ಲಿ ಸೇತುವೆ ಮೇಲಿಂದ ಹೊಳೆಗೆ ಹಾರಿ ನರ್ಸ್‌ ಆತ್ಮಹತ್ಯೆ

ಎನ್.ಆರ್.ಪುರದಲ್ಲಿ ಸೇತುವೆ ಮೇಲಿಂದ ಹೊಳೆಗೆ ಹಾರಿ ನರ್ಸ್‌ ಆತ್ಮಹತ್ಯೆ

NR Pura Nurse Death Case: ಶಿವಮೊಗ್ಗದ ಪ್ರತಿಷ್ಠಿತ 'ನಾರಾಯಣ ಹೃದಯಾಲಯ' ಆಸ್ಪತ್ರೆಯ ನರ್ಸ್ ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸ ಮುಗಿಸಿ ಮುತ್ತಿನಕೊಪ್ಪದ ಮನೆಗೆ ಮರಳಿದ್ದ ಅವರು, ಮುಡುಬ ಸಮೀಪದ ಸೇತುವೆ ಮೇಲಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾರತದಲ್ಲಿ ರಿಯಲ್‌ಮಿ 16 5G ಬಿಡುಗಡೆ: 7000mAh ಬ್ಯಾಟರಿ, ಡ್ಯುಯಲ್ 50MP ಕ್ಯಾಮೆರಾದೊಂದಿಗೆ ₹30,000ದೊಳಗಿನ ಬೆಸ್ಟ್ ಸ್ಮಾರ್ಟ್‌ಫೋನ್!

ಭಾರತದಲ್ಲಿ ರಿಯಲ್‌ಮಿ 16 5G ಬಿಡುಗಡೆ

ಯುವಜನತೆಯ ಅಚ್ಚುಮೆಚ್ಚಿನ ಟೆಕ್ ಬ್ರ್ಯಾಂಡ್ ರಿಯಲ್‌ಮಿ, ತನ್ನ 'ನಂಬರ್ ಸೀರೀಸ್' ಅಡಿಯಲ್ಲಿ ಬಹುನಿರೀಕ್ಷಿತ ರಿಯಲ್‌ಮಿ 16 5G ಸ್ಮಾರ್ಟ್‌ಫೋನ್ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಯುವ ಸಮುದಾಯದ ಫೋಟೋಗ್ರಫಿ ಆಸಕ್ತಿ, ಗೇಮಿಂಗ್ ಮತ್ತು ದೈನಂದಿನ ದೀರ್ಘಾವಧಿ ಬಳಕೆ ಯನ್ನು ಗಮನದಲ್ಲಿಟ್ಟುಕೊಂಡು ಈ ಫೋನ್ ಅನ್ನು ವಿನ್ಯಾಸಗೊಳಿಸಲಾಗಿದೆ.

Skill training: ಲರ್ನಿಂಗ್‌ ಫಾರ್‌ ಲೈಫ್‌ ಯೋಜನೆಯಡಿ 300ಕ್ಕೂ ಹೆಚ್ಚು ಯುವಕರಿಗೆ ಕೌಶಲ್ಯ ತರಬೇತಿ

300ಕ್ಕೂ ಹೆಚ್ಚು ಯುವಕರಿಗೆ ಕೌಶಲ್ಯ ತರಬೇತಿ

ಆತಿಥ್ಯ ಕ್ಷೇತ್ರವು ಉದ್ಯೋಗ ಮತ್ತು ಬೆಳವಣಿಗೆಯ ಪ್ರಮುಖ ಮೂಲವಾಗಿದೆ. ‘ಲರ್ನಿಂಗ್ ಫಾರ್ ಲೈಫ್’ ಯೋಜನೆಯ ಮೂಲಕ ನಾವು ಯುವಕರಿಗೆ ಅಗತ್ಯ ಕೌಶಲ್ಯ, ಆತ್ಮ ವಿಶ್ವಾಸ ಮತ್ತು ಉದ್ಯಮ ಪರಿಚಯ ವನ್ನು ಒದಗಿಸುತ್ತಿದ್ದೇವೆ. ಭವಿಷ್ಯದಲ್ಲಿ ಪ್ರತಿಯೊಬ್ಬರು ಉದ್ಯೋಗಸ್ಥರಾಗಬೇಕೆಂಬ ಹಿನ್ನೆಲೆಯಲ್ಲಿ ಈ ಯೋಜನೆ ಕೈಗೊಂಡಿದ್ದು, ಯಶಸ್ವಿಯಾಗಿ ಮುನ್ನಡೆಯುತ್ತಾ ಬರುತ್ತಿದೆ

ಮಹಾದೇವಪುರದ ಕಿಮ್ಸ್ ಆಸ್ಪತ್ರೆಯಲ್ಲಿ ನರವಿಜ್ಞಾನ ಸಂಸ್ಥೆ ಮತ್ತು ನರಮಾಡ್ಯುಲೇಷನ್‌ನಲ್ಲಿ ಶ್ರೇಷ್ಠತಾ ಕೇಂದ್ರ ಆರಂಭ

ನರವಿಜ್ಞಾನ ಸಂಸ್ಥೆ ಮತ್ತು ನರಮಾಡ್ಯುಲೇಷನ್‌ನಲ್ಲಿ ಶ್ರೇಷ್ಠತಾ ಕೇಂದ್ರ ಆರಂಭ

ಪಾರ್ಕಿನ್ಸನ್ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸರಳದಿಂದ ಸಂಕೀರ್ಣವಾದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ನರವಿಜ್ಞಾನದಲ್ಲಿನ ಪ್ರಗತಿಯ ಬಗ್ಗೆ ಮಾತನಾಡಲು ಮತ್ತು ರೋಗಿಗಳಿಗೆ ಪ್ರಯೋಜನಗಳನ್ನು ವಿವರಿಸಲು ಇದು ಉದ್ದೇಶಿಸಲಾಗಿದೆ. ಈ ಸಭೆಯು ರೋಗಿಗಳು ಮತ್ತು ಆರೈಕೆ ನೀಡುವವರಿಗೆ ತಮ್ಮ ಕಥೆಯನ್ನು ಹಂಚಿಕೊಳ್ಳಲು ಮತ್ತು ಒಗ್ಗಟ್ಟಿನ ಬಲವನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ಒದಗಿಸಿತು.

Muda Case: ಮುಡಾ ಪ್ರಕರಣ; ಬಿ ರಿಪೋರ್ಟ್​ ಅಂಗೀಕಾರ ಪ್ರಶ್ನಿಸಿ ಹೈಕೋರ್ಟ್​ಗೆ ಇಡಿ ಅರ್ಜಿ

ಮುಡಾ ಪ್ರಕರಣ; ಬಿ ರಿಪೋರ್ಟ್​ ಅಂಗೀಕಾರ ಪ್ರಶ್ನಿಸಿ ಇಡಿ ಅರ್ಜಿ

ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಹಾಗೂ ಮತ್ತಿತರರು ಆರೋಪ ಎದುರಿಸುತ್ತಿದ್ದ ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್‌ ಅಂಗೀಕರಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜಾರಿ ನಿರ್ದೇಶನಾಲಯವು (ಇಡಿ) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

Basava Jaya Mruthyunjaya Swamiji: ಲೈಂಗಿಕ ದೌರ್ಜನ್ಯ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಹಿಳೆ ದೂರು

ಲೈಂಗಿಕ ದೌರ್ಜನ್ಯ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಹಿಳೆ ದೂರು

ಬೆಂಗಳೂರಿನ ತ್ಯಾಗರಾಜನಗರ ನಿವಾಸಿಯಾಗಿರುವ ಮಹಿಳೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಸ್ವಾಮೀಜಿ ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಸ್ವಾಮೀಜಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.

Fruits Price Rise: ಹೆಚ್ಚಿದ ಬಿಸಿಲಿನ ಕಾವು: ಹಣ್ಣುಗಳ ದರ ಭಾರೀ ಏರಿಕೆ

ಹೆಚ್ಚಿದ ಬಿಸಿಲಿನ ಕಾವು: ಹಣ್ಣುಗಳ ದರ ಭಾರೀ ಏರಿಕೆ

ಬಿಸಿಲ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದಣಿವಾರಿಸಿಕೊಳ್ಳಲು ನಾಗರಿಕರು ತಂಪು ಪಾನೀಯ ಗಳತ್ತ ಮುಖ ಮಾಡಿದ್ದಾರೆ. ಇದರಿಂದ ಎಳನೀರು, ಕಲ್ಲಂಗಡಿ, ನಿಂಬೆ ಹಣ್ಣು ಸೌತೆಕಾಯಿ ಗಳಿಗೆ ಭಾರಿ ಬೇಡಿಕೆ ಬಂದಿದೆ. ಒಂದು ಎಳನೀರಿಗೆ ಗ್ರಾಹಕರು 60 ರಿಂದ 65 ರು. ನೀಡಬೇಕಿದ್ದು, ಒಂದು ನಿಂಬೆಹಣ್ಣು ಚಿಲ್ಲರೆ ದರ ಸಣ್ಣ ಗಾತ್ರ 7-8 ರು. ಆಗಿದ್ದರೆ, ದಪ್ಪ 10 ರು.ರಿಂದ 12 ರು. ಆಗಿದೆ.

Murder Case: ಅಕ್ರಮ ಸಂಬಂಧಕ್ಕೆ ಅಡ್ಡಿ, ಪ್ರೇಯಸಿಯ ಗಂಡನನ್ನೇ ಕೊಂದು ಮೂಟೆಕಟ್ಟಿದ ಪಾಪಿ

ಅಕ್ರಮ ಸಂಬಂಧಕ್ಕೆ ಅಡ್ಡಿ, ಪ್ರೇಯಸಿಯ ಗಂಡನನ್ನೇ ಕೊಂದು ಮೂಟೆಕಟ್ಟಿದ ಪಾಪಿ

ಕೊಲೆಯಾದ ಸುನೀಲ್ ನಾಯಕ್ ಪತ್ನಿಯೊಂದಿಗೆ ಆರೋಪಿ ಬಸುದೇವ್ ಮಲ್ಲಿಕ್ ಅನೈತಿಕ ಸಂಬಂಧ ಹೊಂದಿದ್ದ. ಈ ವಿಷಯ ಸುನೀಲ್‌ಗೆ ತಿಳಿದು ಮನೆಯಲ್ಲಿ ದಂಪತಿಗಳ ನಡುವೆ ತೀವ್ರ ಗಲಾಟೆ ನಡೆದಿತ್ತು. ತನ್ನ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಸುನೀಲ್‌ನನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ಸಂಚು ರೂಪಿಸಿದ್ದ ಬಸುದೇವ್.

2nd PUC Exam result: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಏ.9ರಂದು, ನೋಡುವುದು ಹೇಗೆ?

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಏ.9ರಂದು, ನೋಡುವುದು ಹೇಗೆ?

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈಗಾಗಲೇ ಮೌಲ್ಯಮಾಪನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಫಲಿತಾಂಶ ಬಿಡುಗಡೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ತಾಂತ್ರಿಕ ಕೆಲಸಗಳು ಹಾಗೂ ಅಂಕಗಳ ಕ್ರೋಡೀಕರಣ ಪ್ರಕ್ರಿಯೆ ಮುಗಿದಿದ್ದು, ಏಪ್ರಿಲ್ 9 ರಂದು ರಿಸಲ್ಟ್ ನೀಡಲು ಇಲಾಖೆ ಉತ್ಸುಕವಾಗಿದೆ.

Loading...