ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ವಿರಾಟ್ ಕೊಹ್ಲಿ ಸಹ-ಮಾಲೀಕತ್ವ ಹೊಂದಿದ್ದ 'ಒನ್8 ಕಮ್ಯೂನ್' ಮುಚ್ಚುವಂತೆ ಕೋರ್ಟ್‌ ಆದೇಶ!

2 ಕೋಟಿ ರು ಬಾಡಿಗೆ ಬಾಕಿ; One8 Commune ರೆಸ್ಟೋರೆಂಟ್‌ ಬಂದ್‌!

ಅರ್ಧ ವರ್ಷ ಬಾಡಿಗೆ ಬಾಕಿ ಇಟ್ಟುಕೊಂಡಿದ್ದ ಕಾರಣ ಒನ್‌8 ಕಮ್ಯೂನ್‌ ರೆಸ್ಟೋರೆಂಟ್‌ ಅನ್ನು ಮುಚ್ಚುವಂತೆ ಬೆಂಗಳೂರು ನಗರದ ಸಿಟಿ ಸಿವಿಲ್‌ ಕೋರ್ಟ್‌ ಆದೇಶ ನೀಡಿದೆ. ಒನ್‌8 ಕಮ್ಯೂನ್‌ ಸುಮಾರು 2 ಕೋಟಿ ರು ಗಳ ಬಾಡಿಗೆ ನೀಡುವುದನ್ನು ಬಾಕಿ ಉಳಿಸಿಕೊಂಡಿದೆ. ಇದರಿಂದಾಗಿ ಕಟ್ಟಡದ ಮಾಲೀಕರು ಕೋರ್ಟ್‌ ಮೊರೆ ಹೋಗಿದ್ದಾರೆ.

Sadhana Sourabha: ಏಪ್ರಿಲ್‌ 26ರಂದು ಕುಮಟಾದಲ್ಲಿ ಸಾಧನಾ ಸೌರಭ; ವಿಶ್ವೇಶ್ವರ ಭಟ್ಟರಿಗೆ ʼರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿʼ ಪ್ರದಾನ

ಏ.26ಕ್ಕೆ ಸಾಧನಾ ಸೌರಭ; ಸಾಂಸ್ಕೃತಿಕ ಅನುಸಂಧಾನ, ಪ್ರಶಸ್ತಿ ಪ್ರದಾನ ಸಮಾರಂಭ

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹವ್ಯಕ ಸಭಾಮಂಟಪದಲ್ಲಿ ಏಪ್ರಿಲ್‌ 26ರಂದು ಭಾನುವಾರ ಬೆಳಗ್ಗೆ 9.30 ಗಂಟೆಗೆ ʼಸಾಧನಾ ಸೌರಭ; ಸಾಂಸ್ಕೃತಿಕ ಅನುಸಂಧಾನ ಮತ್ತು ರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿ ಪ್ರದಾನ ಸಮಾರಂಭʼ ಹಮ್ಮಿಕೊಳ್ಳಲಾಗಿದೆ. 30 ವರ್ಷಗಳ ಇತಿಹಾಸವನ್ನು ಹೊಂದಿರುವ ಸೌರಭ, ಅಪೂರ್ವ ಸದಭಿರುಚಿಯ 'ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದ ಉತ್ತರ ಕನ್ನಡದ ಅಗ್ರಗಣ್ಯ ಸಂಸ್ಥೆಗಳಲ್ಲೊಂದಾಗಿದೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ 5 ಕೋಟಿ ರುಪಾಯಿ ಅನುದಾನ ಬಿಡುಗಡೆ: ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಸಂಸದ ಬಿ.ವೈ. ರಾಘವೇಂದ್ರ ಧನ್ಯವಾದ Video

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ 5 ಕೋಟಿ ರುಪಾಯಿ ಅನುದಾನ ಬಿಡುಗಡೆ

Shivamogga’s McGann Hospital: ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿರುವುದರಿಂದ, ಪ್ರಸ್ತುತ ಇರುವ 30 ಬೆಡ್‌ಗಳ NICU ಘಟಕವನ್ನು ವಿಸ್ತರಿಸುವ ಅಗತ್ಯವಿತ್ತು. ಹೀಗಾಗಿ ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮನವಿ ಮಾಡಿದಾಗ, ಅವರು ಕೂಡಲೇ ಸ್ಪಂದಿಸಿ ತಮ್ಮ ಸಂಸದರ ನಿಧಿಯ ಪೂರ್ಣ 5 ಕೋಟಿ ರುಪಾಯಿ ನೀಡಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Dharwad Akashvani: 'ಧಾರವಾಡ ಆಕಾಶವಾಣಿ ಕೇಂದ್ರ' ಸ್ಥಳಾಂತರಿಸದಂತೆ ಅಶ್ವಿನಿ ವೈಷ್ಣವ ಆದೇಶ: ಜೋಶಿ ಮನವಿಗೆ ಸ್ಪಂದನೆ

ಧಾರವಾಡ ಆಕಾಶವಾಣಿ ಕೇಂದ್ರ ಸ್ಥಳಾಂತರಿಸದಂತೆ ಅಶ್ವಿನಿ ವೈಷ್ಣವ ಆದೇಶ

Pralhad Joshi: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರ ಮನವಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಸ್ಪಂದಿಸಿದ್ದು, ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರವನ್ನು ಧಾರವಾಡದಲ್ಲಿಯೇ ಮುಂದುವರಿಸುವಂತೆ ಪ್ರಸಾರ ಭಾರತಿಗೆ ಆದೇಶಿಸಿದ್ದಾರೆ.

Victoria Hospital: ಮರ್ಮಾಂಗದ ಸರ್ಜರಿ ಬಳಿಕ ಹೊಲಿಗೆ ಹಾಕೋದನ್ನೇ ಮರೆತ್ರು; ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು!

ಮರ್ಮಾಂಗದ ಸರ್ಜರಿ ಬಳಿಕ ಹೊಲಿಗೆ ಹಾಕೋದನ್ನೇ ಮರೆತ ವೈದ್ಯರು; ರೋಗಿ ಸಾವು!

Bengaluru News: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ಎಡವಟ್ಟಿನಿಂದ ರೋಗಿ ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಮರ್ಮಾಂಗದ ಶಸ್ತ್ರಚಿಕಿತ್ಸೆ ಬಳಿಕ ಹೊಲಿಗೆ ಹಾಕದ ಹಿನ್ನೆಲೆಯಲ್ಲಿ ರೋಗಿಯೊಬ್ಬರು ನೋವಿನಿಂದ ನರಳಾಡಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಟುಂಬಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ.

Ranya Rao Case: ನಟಿ ರನ್ಯಾರಾವ್‌ಗೆ ಜಾಮೀನು ಮಂಜೂರು; ಒಂದು ವರ್ಷದ ಬಳಿಕ ಜೈಲಿನಿಂದ ಬಿಡುಗಡೆ ಭಾಗ್ಯ

ನಟಿ ರನ್ಯಾರಾವ್‌ಗೆ ಬಿಗ್ ರಿಲೀಫ್; ಕೋರ್ಟ್‌ನಿಂದ ಜಾಮೀನು ಮಂಜೂರು

gold smuggling case: ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನವಾಗಿ, ಕಳೆದೊಂದು ವರ್ಷದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಅವರಿಗೆ ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದ್ದು, ಸಂಜೆ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ ಎಂದು ತಿಳಿದುಬಂದಿದೆ.

ಗಂಡ, ಮಕ್ಕಳಿಗೆ ನಿದ್ರೆ ಮಾತ್ರೆ ಹಾಕಿ ಕಟಿಂಗ್‌ ಶಾಪ್‌ನವನ ಜತೆ ಮಹಿಳೆ ಪರಾರಿ; ಕಸ ಹಾಕಿ ಬರ್ತೀನಿ ಎಂದು ಹೇಳಿ ಎಸ್ಕೇಪ್‌!

ಗಂಡ, ಮಕ್ಕಳಿಗೆ ನಿದ್ರೆ ಮಾತ್ರೆ ಹಾಕಿ ಪ್ರಿಯಕರನ ಜತೆ ಮಹಿಳೆ ಪರಾರಿ!

ನಾನು ಕೆಲಸಕ್ಕೆ ಹೋದ ಸಮಯದಲ್ಲಿ ನಮ್ಮ ಏರಿಯಾದಲ್ಲಿ ಕಟಿಂಗ್ ಶಾಪ್ ನಡೆಸುತ್ತಿದ್ದ ವ್ಯಕ್ತಿ ಜತೆ ಭೇಟಿಯಾಗುತ್ತಿದ್ದಳು. ಏ.11ರ ರಾತ್ರಿ ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ. ಮಧ್ಯರಾತ್ರಿ ಕಸ ಎಸೆದು ಬರುವುದಾಗಿ ಮನೆಯಿಂದ ಕಸದ ಬಕೆಟ್ ಹಿಡಿದು ಹೊರಟವಳು, ಪ್ರಿಯಕರನ ಜತೆ ಪರಾರಿಯಾಗಿದ್ದಾಳೆ ಎಂದು ಪತಿ ಅಳಲು ತೋಡಿಕೊಂಡಿದ್ದಾರೆ.

ಬಿ.ಎಲ್.ಎಸ್ ಇಂಟರ್ನ್ಯಾಷನಲ್ ಮತ್ತು ಐಎಸಿಸಿಐಎನಿಂದ ಒಪ್ಪಂದಕ್ಕೆ ಸಹಿ

ಬಿ.ಎಲ್.ಎಸ್ ಇಂಟರ್ನ್ಯಾಷನಲ್ ಮತ್ತು ಐಎಸಿಸಿಐಎನಿಂದ ಒಪ್ಪಂದಕ್ಕೆ ಸಹಿ

ಬಿ.ಎಲ್.ಎಸ್ ಇಂಟರ್ನ್ಯಾಷನಲ್‌, ವಿಶ್ವಾಸಾರ್ಹ ದೃಢೀಕರಣ ಮತ್ತು ಕಾನ್ಸುಲರ್ ಸೇವೆಗಳ ಮೂಲಕ ಜಾಗತಿಕ ಸಂಬಂಧಗಳನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಈ ಹೊಸ ಸಹಯೋಗ ನಮ್ಮ ಪಯಣ ದಲ್ಲಿನ ಮತ್ತೊಂದು ಮೈಲುಗಲ್ಲು. ಭಾರತ ಮತ್ತು ಅರಬ್ ದೇಶಗಳ ವಾಣಿಜ್ಯ, ಕೈಗಾರಿಕೆ ಮತ್ತು ಕೃಷಿ ಮಂಡಳಿ (ಐಎಸಿಸಿಐಎ) ಜೊತೆ ಕೈಜೋಡಿಸುವ ಮೂಲಕ, ನಾವು ಭಾರತ ಮತ್ತು ಅರಬ್ ಜಗತ್ತಿನ ನಡುವಿನ ಸಹಕಾರವನ್ನು ಮತ್ತು ವ್ಯಾಪಾರ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲಿದ್ದೇವೆ

ಸಾಫ್ಟ್‌ವೇರ್ ವಿನ್ಯಾಸ, ಅಭಿವೃದ್ಧಿ ಕಾರ್ಯಗಳಿಗೆ ಎಐ: ಓಪನ್ಎಐ ಜತೆ ಕೈ ಜೋಡಿಸಿದ ಕಾಗ್ನಿಜೆಂಟ್

ಓಪನ್ಎಐನ 'ಕೋಡೆಕ್ಸ್' ಅಳವಡಿಸಿಕೊಳ್ಳಲು ಕಾಗ್ನಿಜೆಂಟ್ ಒಪ್ಪಂದ

Cognizant: ಪ್ರಖ್ಯಾತ ಐಟಿ ಸೇವಾ ಸಂಸ್ಥೆ ಕಾಗ್ನಿಜೆಂಟ್, ಎಂಟರ್‌ಪ್ರೈಸ್ ಗ್ರಾಹಕರಿಗೆ ಎಐ ತಂತ್ರಜ್ಞಾನದ ಗರಿಷ್ಠ ಲಾಭ ಒದಗಿಸಲು ಓಪನ್ಎಐ ಜತೆ ಮಹತ್ವದ ಪಾಲುದಾರಿಕೆ ಮಾಡಿಕೊಂಡಿದೆ. ಈ ಒಪ್ಪಂದದ ಅಡಿಯಲ್ಲಿ ಓಪನ್ಎಐನ 'ಕೋಡೆಕ್ಸ್' ತಂತ್ರಜ್ಞಾನವನ್ನು ಕಾಗ್ನಿಜೆಂಟ್ ತನ್ನ ಸಾಫ್ಟ್‌ವೇರ್ ಎಂಜಿನಿಯರಿಂಗ್ ವಿಭಾಗದಲ್ಲಿ ಅಳವಡಿಸಿಕೊಳ್ಳಲಿದೆ.

Gold Price Today On 22nd April 2026: ಆಭರಣ ಗ್ರಾಹಕರಿಗೆ ಗುಡ್‌ನ್ಯೂಸ್‌; ಮತ್ತೆ ಇಳಿದ ಚಿನ್ನದ ದರ

ಚಿನ್ನದ ದರದಲ್ಲಿ ಮತ್ತೆ ಇಳಿಕೆ

Gold Silver Price Today: ಬುಧವಾರ ಚಿನ್ನದ ದರದಲ್ಲಿ ಅಲ್ಪ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 50 ರುಪಾಯಿ ಕಡಿಮೆಯಾಗಿದ್ದು, 14,185 ರುಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 54 ರುಪಾಯಿ ಅಗ್ಗವಾಗಿದ್ದು, ನೀವು 15,475 ರುಪಾಯಿ ಪಾವತಿಸಬೇಕಾಗುತ್ತದೆ.

Karnataka SSLC Result 2026 Date: ಎಸ್ಸೆಸ್ಸೆಲ್ಸಿ ಫಲಿತಾಂಶ ಬಿಡುಗಡೆ ಯಾವಾಗ, ಅಂಕಪಟ್ಟಿ ಡೌನ್‌ಲೋಡ್ ಮಾಡೋದು ಹೇಗೆ? ಇಲ್ಲಿದೆ ವಿವರ

ಎಸ್ಸೆಸ್ಸೆಲ್ಸಿ ರಿಸಲ್ಟ್ ಯಾವಾಗ, ಅಂಕಪಟ್ಟಿ ಡೌನ್‌ಲೋಡ್ ವಿವರ ಇಲ್ಲಿದೆ

2026 ಮಾರ್ಚ್ 18 ರಿಂದ ಏಪ್ರಿಲ್ 2ರವರೆಗೆ ಎಸ್ಎಸ್ಎಲ್‌ಸಿ ಪರೀಕ್ಷೆಗಳು ನಡೆದಿವೆ. ಈ ವರೆಗೆ ಪೋಷಕರು ಮತ್ತು ಮಕ್ಕಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಈ ಬಾರಿ 10ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯಲು 9.02 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದರು. ಫಲಿತಾಂಶ ಯಾವೆಲ್ಲ ವೇದಿಕೆಗಳಲ್ಲಿ ಲಭ್ಯವಿದೆ, ಡೌನ್‌ಲೋಡ್ ಮಾಡುವುದು ಹೇಗೆ, ಅಧಿಕೃತ ಲಿಂಕ್ ಇತ್ಯಾದಿ ಮಾಹಿತಿ ಇಲ್ಲಿದೆ.

Physical Abuse: ಕೊಡಗಿನ ಹೋಮ್‌ಸ್ಟೇಯಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ಇಬ್ಬರ ಬಂಧನ

ಕೊಡಗಿನ ಹೋಮ್‌ಸ್ಟೇಯಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ಇಬ್ಬರ ಬಂಧನ

ಅಮೆರಿಕದ ವಾಶಿಂಗ್ಟನ್ ಮೂಲದ ಮಹಿಳೆ ಏಪ್ರಿಲ್ 19ರಂದು ದೇವಿ ವಿಲ್ಲಾ ಎಂಬ ಹೋಂಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ವೇಳೆ, ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Lover murder case: 4.5 ಲಕ್ಷದ ಬೈಕ್‌ ಕೊಡಿಸಿದ ಪ್ರೇಯಸಿಯೇ ಕೈಕಾಲು ಕಟ್ಟಿಹಾಕಿ, ಬೆಂಕಿ ಹಚ್ಚಿ ಪ್ರಿಯಕರನ ಕೊಂದಳೇಕೆ?

4.5 ಲಕ್ಷದ ಬೈಕ್‌ ಕೊಡಿಸಹೊರಟ ಪ್ರೇಯಸಿಯೇ ಬೆಂಕಿ ಹಚ್ಚಿ ಕೊಂದಳೇಕೆ?

ಫೆಬ್ರವರಿ 14ರ ‘ವ್ಯಾಲೆಂಟೈನ್ಸ್ ಡೇ’ ದಿನ ಪ್ರೇಮಾ ತನ್ನ ಪ್ರೀತಿಯನ್ನು ನಿವೇದಿಸಿದ್ದಳು. ಕಿರಣ್ ಕೂಡ ಒಪ್ಪಿಕೊಂಡಿದ್ದ. ಪ್ರಿಯಕರನಿಗಾಗಿ ಪ್ರೇಮಾ ಬರೋಬ್ಬರಿ 4.5 ಲಕ್ಷ ರೂಪಾಯಿ ಮೌಲ್ಯದ ಬೈಕ್ ಮತ್ತು ಮೊಬೈಲ್ ಫೋನ್ ಕೊಡಿಸಲು ಮುಂದಾಗಿದ್ದಳು. ಕೊಲೆ ಕೃತ್ಯ ನಡೆದ ದಿನವೂ ಇಬ್ಬರೂ ಸೇರಿ ಬೈಕ್ ನೋಡಲು ಹೋಗಿದ್ದರು ಎನ್ನಲಾಗಿದೆ.

ಇಂಡಿಯಾಸ್ ಕ್ರಿಪ್ಟೊ ಪೋರ್ಟ್ ಫೋಲಿಯೊ; ಹೌ ಇಂಡಿಯಾ ಇನ್ವೆಸ್ಟ್ಸ್” ಬಿಡುಗಡೆ

ಇಂಡಿಯಾಸ್ ಕ್ರಿಪ್ಟೊ ಪೋರ್ಟ್ ಫೋಲಿಯೊ; ಹೌ ಇಂಡಿಯಾ ಇನ್ವೆಸ್ಟ್ಸ್” ಬಿಡುಗಡೆ

ಯುವ ಸಮೂಹವು ಪ್ರಯೋಗದ ಹಂತಗಳಲ್ಲಿ ಮಾರುಕಟ್ಟೆಗಳನ್ನು ಪ್ರವೇಶಿಸಿದರೆ ಜೆನ್ ಎಕ್ಸ್ ಮತ್ತು ಅದಕ್ಕಿಂತ ಹೆಚ್ಚಿನ ಮಿಲೆನಿಯಲ್ ಗಳು ಅವುಗಳ ದೀರ್ಘಾವಧಿ ಮೌಲ್ಯ ಮತ್ತು ನಿಯಂತ್ರಣ ದ ಸ್ಪಷ್ಟತೆ ಪಡೆದ ನಂತರ ಹೊಸ ಹಣಕಾಸು ಸಂಪತ್ತುಗಳಿಗೆ ಹೂಡಿಕೆ ಮಾಡುತ್ತಿದ್ದಾರೆ. ಈ ಬದಲಾವಣೆಯು ಭಾರತದಲ್ಲಿ ಕ್ರಿಪ್ಟೊ ಪ್ರಾರಂಭಿಕ ಅಳವಡಿಕೆಯಿಂದ ಹೆಚ್ಚು ಪ್ರಬುದ್ಧ ಭಾಗ ವಹಿಸುವಿಕೆ ಹಂತಕ್ಕೆ ಚಲಿಸುತ್ತಿದ್ದು ಇದರಲ್ಲಿ ಹೆಚ್ಚಿನ ಹಣಕಾಸು ಅನುಭವ ಮತ್ತು ಬಂಡವಾಳ ಹೊಂದಿರುವ ಹೂಡಿಕೆದಾರರು ಮಾರುಕಟ್ಟೆ ಪ್ರವೇಶ ಮಾಡುತ್ತಿದ್ದಾರೆ.

Bengaluru Ring Road: ಬೆಂಗಳೂರಿಗೆ ಬರಲಿದೆ ನಾಲ್ಕನೇ ರಿಂಗ್‌ ರಸ್ತೆ, 12 ಉಪನಗರಗಳಿಗೆ ಸಂಪರ್ಕ ಕೊಂಡಿ

ಬೆಂಗಳೂರಿಗೆ ಬರಲಿದೆ 4ನೇ ರಿಂಗ್‌ ರಸ್ತೆ, 12 ಉಪನಗರಗಳಿಗೆ ಸಂಪರ್ಕ ಕೊಂಡಿ

ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಈ ಯೋಜನೆಯನ್ನು ಜಾರಿಗೊಳಿಸಲಿದೆ. 210 ಕಿ.ಮೀ ಉದ್ದದ ಈ ಕಾರಿಡಾರ್ ಅನ್ನು 2007 ರಲ್ಲಿಯೇ ಪ್ರಸ್ತಾಪಿಸಲಾಗಿತ್ತು. ಆದರೆ, ಕಾನೂನು ತೊಡಕುಗಳು ಮತ್ತು ಭೂಸ್ವಾಧೀನದ ಸವಾಲುಗಳಿಂದಾಗಿ ನೆನೆಗುದಿಗೆ ಬಿದ್ದಿತ್ತು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಈ ಯೋಜನೆಗೆ ಈಗ ಮರುಜೀವ ನೀಡಲಾಗಿದೆ.

SSLC Third language: ಎಸ್ಸೆಸ್ಸೆಲ್ಸಿಯಲ್ಲಿ ತೃತೀಯ ಭಾಷೆ: ರಾಜ್ಯ ಸರ್ಕಾರದ ಮುಂದಿನ ನಡೆ ಏನು?

ಎಸ್ಸೆಸ್ಸೆಲ್ಸಿಯಲ್ಲಿ ತೃತೀಯ ಭಾಷೆ: ರಾಜ್ಯ ಸರ್ಕಾರದ ಮುಂದಿನ ನಡೆ ಏನು?

ಹೈಕೋರ್ಟ್ ಮಂಗಳವಾರ ನೀಡಿದ ನಿರ್ದೇಶನದಂತೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷಾ ವಿಷಯಕ್ಕೆ ಗ್ರೇಡ್ ಬದಲು ಅಂಕಗಳನ್ನು ನೀಡಬೇಕು ಎಂದು ಸೂಚಿಸಿದೆ. ಈ ತೀರ್ಪಿನ ಹಿನ್ನೆಲೆ ಸರ್ಕಾರದ ಮುಂದಿನ ನಡೆ ಏನು ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ.

Heat Stroke: ಹೀಟ್‌ ಸ್ಟ್ರೋಕ್‌ಗೆ ರಾಜ್ಯದಲ್ಲಿ ಎರಡನೇ ಬಲಿ, ಬೆಳಗಾವಿಯಲ್ಲಿ ಅಧಿಕಾರಿ ಸಾವು

ಹೀಟ್‌ ಸ್ಟ್ರೋಕ್‌ಗೆ ರಾಜ್ಯದಲ್ಲಿ ಎರಡನೇ ಬಲಿ, ಬೆಳಗಾವಿಯಲ್ಲಿ ಅಧಿಕಾರಿ ಸಾವು

ವೆಂಕಟೇಶ್ ಬಳ್ಳಾರಿ ಸೋಮವಾರ (ಏ.21) ಬಸವೇಶ್ವರ ಜಯಂತಿ ಸಂದರ್ಭದಲ್ಲಿ ಫೋಟೋ ಪೂಜೆ ಬಳಿಕ ಮೆರವಣಿಗೆ ಸಂದರ್ಭದಲ್ಲಿ ತಲೆ ತಿರುಗಿ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಉಷ್ಣಾಘಾತದ ಪರಿಣಾಮ ಹೃದಯಾಘಾತವಾಗಿದೆ ಎನ್ನಲಾಗಿದೆ.

Karnataka Weather: ಹೆಚ್ಚಾಗಲಿದೆ ರಣಬಿಸಿಲು, ಕರಾವಳಿಯಲ್ಲಿ ಮಳೆ ಸಂಭವ

ಹೆಚ್ಚಾಗಲಿದೆ ರಣಬಿಸಿಲು, ಕರಾವಳಿಯಲ್ಲಿ ಮಳೆ ಸಂಭವ

ಮುಂಬರುವ ದಿನಗಳಲ್ಲಿ ರಾಜ್ಯದೆಲ್ಲೆಡೆ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಟ್‌ ಸ್ಟ್ರೋಕ್‌ ಆಗಬಹುದು. ಹೀಗಾಗಿ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅವಶ್ಯಕತೆ ಇಲ್ಲದೆ ಮನೆಯಿಂದ ಹೊರಬರುವುದು, ಮಕ್ಕಳು ಬಿಸಿಲಲ್ಲಿ ಆಟವಾಡುವುದನ್ನು ಆದಷ್ಟು ನಿಯಂತ್ರಿಸುವಂತೆ ಸೂಚಿಸಲಾಗಿದೆ.

ನಿಮ್ಮ ಗೆಲುವಿನಲ್ಲಿ ಸಚಿವರ ಪಾತ್ರ ಎಷ್ಟಿದೆ ಎಂಬುದು ಆತ್ಮವಿಮರ್ಶೆ ಮಾಡಿಕೊಳ್ಳಿ : ಭರಣಿ ವೆಂಕಟೇಶ್ ವಾಗ್ದಾಳಿ

ಗೆಲುವಿನಲ್ಲಿ ಸಚಿವರ ಪಾತ್ರ ಎಷ್ಟಿದೆ ಎಂಬುದು ಆತ್ಮವಿಮರ್ಶೆ ಮಾಡಿಕೊಳ್ಳಿ

ಬುಧವಾರ ನಾವು ಸುದ್ದಿಗೋಷ್ಠಿ ನಡೆಸುವ ವಿಚಾರ ತಿಳಿಯುತ್ತಿದ್ದಂತೆ ಯಾರೋ ಒಬ್ಬರು ಪೋನ್ ಸರ್ ಮಾಡಿ ತಪ್ಪಾಗಿದೆ. ಬೈ ಮಿಸ್ಟೇಕ್ ಅದನ್ನು ಮಾಧ್ಯಮಕ್ಕೆ ಕೊಟ್ಟು ಬಿಟ್ಟಿದ್ದಾರೆ. ಅದೆಲ್ಲಾ ಸುಳ್ಳು, 3 ಕೋಟಿ ಅನುದಾನದ ಪೈಕಿ 99 ಲಕ್ಷ ಮೊದಲು ಕಂತಾಗಿ ಬಿಡುಗಡೆ ಮಾಡಿದ್ದು ಆಕ್ಷನ್ ಪ್ಲಾನ್ ಆಗಿದೆ. ಕಾಮಗಾರಿ ನಡೆಯುತ್ತಿದೆ.

MP Dr.K.Sudhakar: ನಾರಿ ಶಕ್ತಿ ವಂದನಾ ಅಧಿನಿಯಮ ವಿರೋಧಿಸಿ ಮಹಿಳೆಯರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್‌, ಮತ ಕೊಡಲು ಮಾತ್ರ ಮಹಿಳೆಯರು ಬೇಕಾ?: ಡಾ.ಕೆ.ಸುಧಾಕರ್‌ ಆಕ್ರೋಶ

ಮತ ಕೊಡಲು ಮಾತ್ರ ಮಹಿಳೆಯರು ಬೇಕಾ?

ಮಹಿಳೆಯರು ರಾಜಕೀಯದಲ್ಲಿ ಹೆಚ್ಚು ಭಾಗವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ನಾರಿ ಶಕ್ತಿ ವಂದನಾ ಅಧಿನಿಯಮ ತಿದ್ದುಪಡಿ ಮಸೂದೆ ಜಾರಿ ಮಾಡಲು ಮುಂದಾಗಿದ್ದರು. ಆದರೆ ಕಾಂಗ್ರೆಸ್‌ ಸೇರಿದಂತೆ ಇಂಡಿ ಕೂಟದ ಸದಸ್ಯರು ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ವಿರೋಧ ಮಾಡಿ ದ್ದಾರೆ. 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಎಂದಿಗೂ ಮಹಿಳಾ ಮೀಸಲಾತಿ ನೀಡಲಿಲ್ಲ

ಪ್ರಧಾನಿ ಮೋದಿ ವಿರುದ್ಧ ಲಘು ಹೇಳಿಕೆ; ಖರ್ಗೆ ಕ್ಷಮೆಯಾಚಿಸಲಿ ಎಂದು ಜೋಶಿ ಆಗ್ರಹ

ಪ್ರಧಾನಿ ಮೋದಿ ವಿರುದ್ಧ ಖರ್ಗೆ ಹೇಳಿಕೆಗೆ ಜೋಶಿ ತೀವ್ರ ಖಂಡನೆ

Pralhad Joshi: ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಈರ್ವರೂ ಘನತೆ, ಗೌರವ ಮರೆತು ಪ್ರಧಾನಿ ವಿರುದ್ಧ ಕೆಳಮಟ್ಟದ ಭಾಷಣ ಮಾಡಿರುವುದು ದುರಹಂಕಾರದ ಪರಮಾವಧಿ. ಇದು ಅವರ ನೀಚ ರಾಜಕಾರಣವನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಕಿಡಿಕಾರಿದ್ದಾರೆ.

Shivamogga Trial Blast Case: ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌ ಪ್ರಕರಣ; ಅಪರಾಧಿ ಅರಾಫತ್ ಅಲಿಗೆ 6 ವರ್ಷ ಜೈಲು ಶಿಕ್ಷೆ

ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌ ಪ್ರಕರಣ; ಅರಾಫತ್ ಅಲಿಗೆ 6 ವರ್ಷ ಜೈಲು

ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಅರಾಫತ್ ಅಲಿಯನ್ನು ಎನ್ಐಎ ಅಧಿಕಾರಿಗಳು ದೆಹಲಿಯಲ್ಲಿ 2023ರಲ್ಲಿ ಬಂಧಿಸಿದ್ದರು. ಈತ ವಿಚಾರಣೆ ವೇಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ. ಇದೀಗ ಈತನಿಗೆ 6 ವರ್ಷ ಜೈಲು ಶಿಕ್ಷೆ, 47 ಸಾವಿರ ರೂ. ದಂಡ ವಿಧಿಸಿ ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

Akshaya Tritiya: ಇನ್‌ಸ್ಟಾಮಾರ್ಟ್‌ನಲ್ಲಿ 2 ಲಕ್ಷದ ಚಿನ್ನ-ಬೆಳ್ಳಿ ಆರ್ಡರ್‌ ಮಾಡಿದ ಬೆಂಗಳೂರಿಗ; ಬಂಗಾರದ ಖರೀದಿ 49 ಪಟ್ಟು ಹೆಚ್ಚಳ!

ಇನ್‌ಸ್ಟಾಮಾರ್ಟ್‌ನಲ್ಲಿ 2 ಲಕ್ಷದ ಚಿನ್ನ-ಬೆಳ್ಳಿ ಆರ್ಡರ್‌ ಮಾಡಿದ ಬೆಂಗಳೂರಿಗ

Instamart: 2026ರ ಅಕ್ಷಯ ತೃತೀಯ ದಿನದಂದು ಕ್ವಿಕ್ ಕಾಮರ್ಸ್ ದೈತ್ಯ 'ಇನ್‌ಸ್ಟಾಮಾರ್ಟ್' ದಾಖಲೆಯ ಮಟ್ಟದ ವಹಿವಾಟು ನಡೆಸಿದೆ. ಹಬ್ಬದ ಖರೀದಿ ಎಂದರೆ ಕೇವಲ ಚಿನ್ನವಷ್ಟೇ ಅಲ್ಲ ಎಂಬುದನ್ನು ಬೆಂಗಳೂರಿನ ಗ್ರಾಹಕನೊಬ್ಬ ಸಾಬೀತು ಮಾಡಿದ್ದಾನೆ. ಈತ ಒಂದೇ ಆರ್ಡರ್‌ನಲ್ಲಿ ಬರೋಬ್ಬರಿ 1,99,917 ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿದ್ದಾನೆ! ಇದರಲ್ಲಿ 1.65 ಲಕ್ಷ ರುಪಾಯಿ ಮೌಲ್ಯದ ಬೆಳ್ಳಿಯ ಗಟ್ಟಿಗಳು, 31,800 ರುಪಾಯಿ ಮೌಲ್ಯದ ಚಿನ್ನದ ನಾಣ್ಯಗಳು ಇದ್ದವು.

ಯಕ್ಷಗಾನದಲ್ಲಿ ʼರಾಮಾಯಣʼಕ್ಕೆ ಅವಮಾನ? ವಿವಾದದ ಬೆನ್ನಲ್ಲೇ ʼವಿಶ್ವವಾಣಿʼಗೆ ಕಲಾವಿದ ದಿನೇಶ್‌ ಕೋಡಪದವು ಫಸ್ಟ್‌ ರಿಯಾಕ್ಷನ್‌

ನಾನೂ ರಾಮನ ಭಕ್ತ: ವಿವಾದ ಬೆನ್ನಲ್ಲೇ ಯಕ್ಷಗಾನ ಕಲಾವಿದ ದಿನೇಶ್‌ ಸ್ಪಷ್ಟನೆ

Yakshagana Controversy: ದಕ್ಷಿಣ ಕನ್ನಡದ ಜನಪ್ರಿಯ ಬಪ್ಪನಾಡು ಮೇಳದ ತುಳು ಯಕ್ಷಗಾನ ಪ್ರದರ್ಶನದ ವೇಳೆ ಹಾಸ್ಯ ಕಲಾವಿದ ದಿನೇಶ್‌ ಕೋಡಪದವು ಹಿಂದೂಗಳ ಪವಿತ್ರ ಮಹಾಕಾವ್ಯ ʼರಾಮಾಯಣʼವನ್ನು ತಿರುಚಿದ್ದಲ್ಲದೆ ರಾಮನನ್ನು ಅವಮಾನಿಸಿದ್ದಾರೆ ಎನ್ನುವ ವಿಚಾರ ಸದ್ಯ ಸಂಚಲನ ಮೂಡಿಸಿದೆ. ಇದೀಗ ಅವರು ʼವಿಶ್ವವಾಣಿ ಟಿವಿʼ ಯೂಟ್ಯೂಬ್‌ ಚಾನೆಲ್‌ ಜತೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

Loading...