ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್
ದುಬೈ ಪ್ರವಾಸಕ್ಕೆ ತೆರಳಿ ಅಲ್ಲಿನ ಮುನುಕುಲ್ ನಗರದಲ್ಲಿ ವಿಮಾನಯಾನ ಸೇವೆ ರದ್ದಾಗಿ ಬಳ್ಳಾರಿ ಜಿಲ್ಲೆಯ 32 ಜನ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದರು. ಬಳ್ಳಾರಿ ಪ್ರವಾಸಿಗರು ಸೇರಿ 50 ಮಂದಿ ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದ ಕನ್ನಡಿಗರನ್ನು ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಹಾಗೂ ಜಗಳೂರು ಶಾಸಕ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಸ್ವಾಗತಿಸಿದ್ದಾರೆ.