ಬಂಗ್ಲೆಗುಡ್ಡ: ಅಸ್ಥಿಪಂಜರದ ಬಳಿ ಸಿಕ್ಕ ಐಡಿ ಕಾರ್ಡ್ ಗುರುತು ಪತ್ತೆ
Banglegudda Case: ಧರ್ಮಸ್ಥಳದ ಸಮೀಪದ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಮಾನವ ಅವಶೇಷ ಬಳಿ ಪತ್ತೆಯಾದ ಐಡಿ ಕಾರ್ಡ್‌ನ ರಹಸ್ಯ ಬಯಲಾಗಿದೆ. ಇದು ಯು.ಬಿ.ಅಯ್ಯಪ್ಪ (70) ಎಂಬುವರ ಐಡಿ ಕಾರ್ಡ್ ಎನ್ನುವುದು ಗೊತ್ತಾಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದ ನಿವಾಸಿ ಅಯ್ಯಪ್ಪ 2017ರಲ್ಲಿ ನಾಪತ್ತೆಯಾಗಿದ್ದರು.