ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Maize Growers Protest: ಮೋಟೆಬೆನ್ನೂರು ಬಳಿ ಡಿ.8ಕ್ಕೆ ಮೆಕ್ಕೆಜೋಳ ಬೆಳೆಗಾರರ ಪ್ರತಿಭಟನೆ; ಹೆದ್ದಾರಿ ಬಂದ್‌ಗೆ ಅವಕಾಶವಿಲ್ಲ ಎಂದ ಹಾವೇರಿ ಎಸ್‌ಪಿ

ಹೆದ್ದಾರಿ ಬಂದ್‌ಗೆ ಅವಕಾಶವಿಲ್ಲ ಎಂದ ಹಾವೇರಿ ಎಸ್‌ಪಿ

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಮತ್ತು ಖರೀದಿ ಪ್ರಮಾಣ ಹೆಚ್ಚಿಸಲು ಆಗ್ರಹಿಸಿ ಡಿಸೆಂಬರ್ 8 ರಂದು ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಅಹೋರಾತ್ರಿ ಹೋರಾಟ ನಡೆಸಲು ರೈತರು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ಬಂದ್‌ಗೆ ಅವಕಾಶವಿಲ್ಲ ಎಂದು ಹಾವೇರಿ ಎಸ್‌ಪಿ ಯಶೋಧಾ ವಂಟಗೋಡಿ ಹೇಳಿದ್ದಾರೆ.

Expensive watch row: ನನ್ನ ದುಡ್ಡಲ್ಲಿ ನಾನು ಎಷ್ಟು ವಾಚ್ ಬೇಕಾದ್ರೂ ಖರೀದಿ ಮಾಡ್ತೇನೆ ಎಂದ ಡಿಕೆಶಿ

ನನ್ನ ದುಡ್ಡಲ್ಲಿ ನಾನು ಎಷ್ಟು ವಾಚ್ ಬೇಕಾದ್ರೂ ಖರೀದಿ ಮಾಡ್ತೇನೆ: ಡಿಕೆಶಿ

ನಾನು 1 ಸಾವಿರ ರೂಪಾಯಿ ವಾಚನ್ನೂ ಕಟ್ಟುವೆ, 10 ಲಕ್ಷ ರೂಪಾಯಿ ವಾಚನ್ನೂ ಕಟ್ಟುವೆ. ಅದು ನನಗೆ ಬಿಟ್ಟ ವಿಚಾರ. ನನ್ನ ಶ್ರಮ, ನನ್ನ ಸಂಪಾದನೆ, ನನ್ನ ಆಸ್ತಿ. ಪಾಪ, ವಿರೋಧ ಪಕ್ಷದ ನಾಯಕರಿಗೆ ಅನುಭವದ ಕೊರತೆ ಇದೆ. ಅವರಿಗೆ ಚುನಾವಣೆ ನಿಂತ ಅನುಭವವೂ ಇಲ್ಲ. ಹೀಗಾಗಿ ಗೊತ್ತಿಲ್ಲದೆ ಮಾತನಾಡಿದ್ದಾರೆ. ಅವರು ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿರುವುದರಿಂದ ಪ್ರತಿಕ್ರಿಯೆ ನೀಡಿದ್ದೇನೆ. ಬೇರೆಯವರಾಗಿದ್ದರೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

obesity Awareness: ಒಬೆಸಿಟಿ ಕುರಿತು ಮಕ್ಕಳಿಗೆ ಶಾಲೆಯಂದಲೇ ಅರಿವು ಮೂಡಿಸುವ ಕೆಲಸವಾಗಬೇಕು : ಮಕ್ಕಳ ತಜ್ಞ ಡಾ. ರಾಜೀವ್‌ ಅಗರ್ವಾಲ್‌

ಒಬೆಸಿಟಿ ಕುರಿತು ಮಕ್ಕಳಿಗೆ ಶಾಲೆಯಂದಲೇ ಅರಿವು ಮೂಡಿಸುವ ಕೆಲಸವಾಗಬೇಕು

ಇಂದಿನ ದಿನಗಳಲ್ಲಿ ನಾಲಿಗೆಗೆ ರುಚಿ ಹೆಚ್ಚಿಸುವ ಆಹಾರಗಳು ಮಕ್ಕಳ ಕೈಗೆ ಸುಲಭವಾಗಿ ಸಿಗು ತ್ತಿರುವ ಕಾರಣ, ಜಂಕ್‌ಫುಡ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅವರಿಗೆ ಯಾವುದು ಆರೋಗ್ಯಕ್ಕೆ ಆಪ್ತ ಹಾಗೂ ಆಪತ್ತು ಎಂಬುದನ್ನು ತಿಳಿ ಹೇಳುವ ಕೆಲಸ ಶಾಲೆಯಿಂದಲೇ ಆಗಬೇಕು. ಮನೆಯಲ್ಲಿ ಪೋಷಕರಷ್ಟೇ ಶಿಕ್ಷಕರಿಗೂ ಜವಾಬ್ದಾರಿ ಇರಲಿದೆ.

Karnataka CM Row: ಡಿಕೆಶಿ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡವೇ ಬೇಡ ಎಂದ ಕೆ.ಎನ್‌. ರಾಜಣ್ಣ!

ಡಿಕೆಶಿ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ ಎಂದ ಕೆ.ಎನ್‌. ರಾಜಣ್ಣ!

KN Rajanna: ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತು ನಡೆಯುತ್ತಿದ್ದ ಚರ್ಚೆ, ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ನಡುವೆ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬಳಿಕ ಸ್ಪಲ್ಪ ತಣ್ಣಗಾಗಿದೆ. ಈ ನಡುವೆ ಮಾಜಿ ಸಚಿವ ಕೆ.ಎನ್‌.ರಾಜಣ್ಣ ಮಹತ್ವದ ಹೇಳಿಕೆ ನೀಡಿದ್ದಾರೆ.

ಎ.ಪಿ.ಎಸ್‌ ನಲ್ಲಿ ಸ್ಮರಣೀಯದಿನ: ಅನಂತಚಾರ್ಯ ಸಭಾಂಗಣದಲ್ಲಿ ಭಾರತದರ್ಶನ ಕಾರ್ಯಕ್ರಮ ಆಯೋಜನೆ

ಅನಂತಚಾರ್ಯ ಸಭಾಂಗಣದಲ್ಲಿ ಭಾರತದರ್ಶನ ಕಾರ್ಯಕ್ರಮ ಆಯೋಜನೆ

ಕನಕಪುರ ರಸ್ತೆಯ ಸೋಮನಹಳ್ಳಿಯಲ್ಲಿ ಅನಂತಜ್ಞಾನ ಗಂಗೋತ್ರಿ 8ಕ್ರೀಡಾ ಕ್ಲಬ್ ಗಳನ್ನು ಉದ್ಘಾಟಿಸ ಲಾಯಿತು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಆರೋಗ್ಯ ಮತ್ತು ಶಕ್ತಿ ವೃದ್ಧಿಗೆ ಎ.ಪಿ.ಎಸ್‌ ಜ್ಞಾನ ಗಂಗೋತ್ರಿ ಕ್ಯಾಂಪಸ್ನಲ್ಲಿ ವಿವಿಧ ಕ್ರೀಡಾ ಮತ್ತು ಫಿಟ್ನೆಸ್‌ ಕ್ಲಬ್ಗಳನ್ನು ಉದ್ಘಾಟಿಸ ಲಾಯಿತು.

ಒಂದೇ ದಿನ ಸಾವಿರ ತಂಡಗಳಿಂದ ಚಿನ್ನ ಖರೀದಿ: ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಇಂದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ದಾಖಲೆ ಸಾಧನೆ

ಸ್ವರ್ಣಾರ್ಪಣಂ ಸಾಂಸ್ಕೃತಿ ಕಾರ್ಯಕ್ರಮ : ಆಭರಣಗಳ ಸ್ವರ್ಣ ನಡಿಗೆ ಪ್ರದರ್ಶನ

ಕೌಶಲ್ಯ ಮತ್ತು ಕಲಾ ಸಂವೇದನೆಯ ಈ ವಿನೂತನ ಸಂಗಮ ಕಾರ್ಯಕ್ರಮದಲ್ಲಿ ಕರುಣೆ, ಶಕ್ತಿ ಮತ್ತು ನಿತ್ಯ ಸೌಂದರ್ಯದ ಚಿಹ್ನೆಯಾದ ದೇವಿ ದುರ್ಗೆಯ ನವ ರೂಪಗಳಿಗೆ ಗೌರವ ನಮನ ಸಲ್ಲಿಸುವ “ಸ್ವರ್ಣಾರ್ಪಣಂ – ಶಕ್ತಿಯ ನವರತ್ನ ” ಕಾರ್ಯಕ್ರಮ ಪ್ರಸ್ತುತವಾಗಲಿದೆ. ಸಂಜೆ 5.30ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾಶ್ರೀ ಡಾ. ಅನುರಾಧ ವಿಕ್ರಾಂತ್ ಹಾಗೂ ದೃಷ್ಟಿ ಡ್ಯಾನ್ಸ್ ಎನ್ಸೆಂಬರ್ ತಂಡ ಈ ವಿನೂತನ ಕಾರ್ಯಕ್ರಮವನ್ನು ಪ್ರಸ್ತುಪಡಿಸುತ್ತಿದೆ.

ಸಂಸ್ಕೃತ ವಿವಿ ಆವರಣದಲ್ಲಿ ನಡೆದ ಏಳು ದಿನಗಳ ರಾಷ್ಟ್ರೀಯ ಭಾರತೀಯ ಅನುಸಂಧಾನ ಪದ್ದತಿ ಕುರಿತ ಕಾರ್ಯಾಗಾರ

ಏಳು ದಿನಗಳ ರಾಷ್ಟ್ರೀಯ ಭಾರತೀಯ ಅನುಸಂಧಾನ ಪದ್ದತಿ ಕುರಿತ ಕಾರ್ಯಾಗಾರ

ಸಂಸ್ಕೃತ ಶಾಸ್ತ್ರಗಳಲ್ಲಿ ಹಾಗೂ ಭಾರತೀಯ ವಾಹ್ಮಯದಲ್ಲಿ ಅನುಸಂಧಾನದ ಗುಣಮಟ್ಟ ವೃದ್ಧಿಸುವ ಹಿನ್ನೆಲೆಯಲ್ಲಿ ದೇಶದ ಅನೇಕ ಭಾಗಗಳಿಂದ ನಾನಾ ಶಾಸ್ತ್ರಗಳಲ್ಲಿ ಪರಿಣತರಾದ 70ಕ್ಕೂ ಅಧಿಕ ವಿದ್ವಾಂಸರು ವ್ಯಾಕರಣ, ವೇದಾಂತ, ನ್ಯಾಯ ಮತ್ತಿತರೆ ವಿಚಾರಗಳ ಬಗ್ಗೆ ಗಹನವಾಗಿ ಚರ್ಚಿಸಿದರು.

ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಆರನೇ ಗ್ಯಾರಂಟಿ 'ಭೂಮಿ ಗ್ಯಾರಂಟಿ' ಅನುಷ್ಠಾನ: ಡಿಸಿಎಂ ಡಿ.ಕೆ. ಶಿವಕುಮಾರ್

ಆರನೇ ಗ್ಯಾರಂಟಿ 'ಭೂಮಿ ಗ್ಯಾರಂಟಿ' ಅನುಷ್ಠಾನ: ಡಿ.ಕೆ. ಶಿವಕುಮಾರ್

DK Shivakumar: ಹಾಸನದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ. ಕೊಟ್ಟ ಮಾತಿನಂತೆ ನಮ್ಮ ಸರ್ಕಾರ 142 ಭರವಸೆಗಳನ್ನು ಈಡೇರಿಸಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರ ಜೇಬಿಗೆ 1 ಲಕ್ಷ ಕೋಟಿ ಹಾಕಿದ್ದೇವೆ ಎಂದು ಡಿಸಿಎಂ ಹೇಳಿದ್ದಾರೆ.

HD Kumaraswamy: ರಾಜ್ಯ ಸರ್ಕಾರದ ಬೆಂಬಲವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದ ಎಚ್.ಡಿ. ಕುಮಾರಸ್ವಾಮಿ

ರಾಜ್ಯ ಸರ್ಕಾರದ ಬೆಂಬಲವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ: ಎಚ್‌ಡಿಕೆ

Karnataka Government: ಮಂಡ್ಯದ ವಿಸಿ ಫಾರಂನಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ, ಕುಮಾರಣ್ಣ ಬೃಹತ್ ಕೈಗಾರಿಕಾ ಸಚಿವರಾಗಿದ್ದಾರೆ. ಜಿಲ್ಲೆಗೆ ಏನಾದರೂ ಕೈಗಾರಿಕೆ ತರಬಹುದು ಎಂಬ ನಿರೀಕ್ಷೆ ಜನರಲ್ಲಿದೆ. ಕನಿಷ್ಠ ಒಂದು ಕಾರ್ಖಾನೆಯನ್ನಾದರು ಮಂಡ್ಯಕ್ಕೆ ತರಲು ಒಂದು ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಇನ್ನೂ ಸರ್ಕಾರ ನಮಗೆ ಜಾಗ ನೀಡಿಲ್ಲ ಎಂದು ಹೇಳಿದ್ದಾರೆ.

HD Kumaraswamy: ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ?; ಸಿಎಂ ಸಿದ್ದರಾಮಯ್ಯಗೆ ಎಚ್‌ಡಿಕೆ ತಿರುಗೇಟು

ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ?: ಎಚ್‌ಡಿಕೆ

ಕುಮಾರಸ್ವಾಮಿ ಮನುವಾದಿ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ? ಹಾಗಾದರೆ, ಸಿದ್ದರಾಮಯ್ಯ ಅವರು ಮಕ್ಕಳಿಗೆ ಏನು ಬೋಧಿಸಲು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

HD Kumaraswamy: ನನ್ನ ಹೇಳಿಕೆಯಿಂದ ಆದಿಚುಂಚನಗಿರಿ ಶ್ರೀಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುವೆ: ಎಚ್.ಡಿ. ಕುಮಾರಸ್ವಾಮಿ

ಆದಿಚುಂಚನಗಿರಿ ಶ್ರೀಗಳ ಕ್ಷಮೆ ಕೇಳಿದ ಎಚ್.ಡಿ. ಕುಮಾರಸ್ವಾಮಿ

ರಾಜ್ಯದಲ್ಲಿ ಇತ್ತೀಚೆಗೆ ಸಿಎಂ ಬದಲಾವಣೆ ಕೂಗು ಜೋರಾದ ವೇಳೆ ಡಿ.ಕೆ.ಶಿವಕುಮಾರ್‌ ಪರ ಆದಿಚುಂಚನಗಿರಿ ಶ್ರೀಗಳು ಬೆಂಬಲ ಸೂಚಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರು, ನಾನು ಎರಡು ಬಾರಿ ಸಿಎಂ ಆದೆ. ಅಧಿಕಾರ ಹೋದಾಗ ನಾನು ಮಠಾಧೀಶರ ನೆರವು ಕೇಳಿಲ್ಲ ಎಂದು ಹೇಳಿದ್ದರು. ಇದೀಗ ತಮ್ಮ ಹೇಳಿಕೆಯಿಂದ ಆದಿಚುಂಚನಗಿರಿ ಶ್ರೀಗಳಿಗೆ ನೋವಾಗಿದ್ದರೆ ಕ್ಷಮೆಯಾಚಿಸುವೆ ಎಂದು ತಿಳಿಸಿದ್ದಾರೆ.

HD Kumaraswamy: ಮೈಶುಗರ್‌ ಶಾಲೆ ಶಿಕ್ಷಕರಿಗೆ ನೆರವಾದ ಎಚ್.ಡಿ. ಕುಮಾರಸ್ವಾಮಿ; 19,94,200 ರೂ. ಚೆಕ್‌ ಹಸ್ತಾಂತರ

ಮೈಶುಗರ್‌ ಶಾಲೆ ಶಿಕ್ಷಕರಿಗೆ ವೇತನ ನೀಡಲು ಎಚ್.ಡಿ. ಕುಮಾರಸ್ವಾಮಿ ನೆರವು

Mandya Mysugar School: ಹದಿನೈದು ತಿಂಗಳಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್‌ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ತಮ್ಮ ಸಂಸದರ ವೇತನವನ್ನೇ ನೀಡಿದ್ದಾರೆ. ಶನಿವಾರ ಬೆಳಗ್ಗೆ ಶಾಲೆಗೆ ಭೇಟಿ ನೀಡಿದ ಸಚಿವರು, ಶನಿವಾರ 19,94,200 ಮೊತ್ತದ ಚೆಕ್‌ ಅನ್ನು ಶಾಲೆಯ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿದ್ದಾರೆ.

Karnataka Weather: ಮುಂದಿನ 2 ದಿನ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ, ಉಳಿದೆಡೆ ಒಣ ಹವೆ

ಮುಂದಿನ 2 ದಿನ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಬಹುತೇಕ ಕಡೆ ಶನಿವಾರ ಕೂಡ ಒಣ ಹವೆಯ ವಾತಾವರಣ ಕಂಡುಬಂದಿದೆ. ಇನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವದಲ್ಲಿ ದಟ್ಟ ಮಂಜು ಕವಿಯುವ ಸಾಧ್ಯತೆ ಇದೆ.

ಇ.ಎಸ್.ಐ.ಸಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಮಾದರಿ ಆಸ್ಪತ್ರೆಯಲ್ಲಿ ಕನ್ನಡ ವೈಭವದ ರಾಜ್ಯೋತ್ಸವ

ಕನ್ನಡ ನಮ್ಮ ಜೀವನದ ನಡಿಗೆ : ಬಿ.ಆರ್. ಲಕ್ಷ್ಮಣ್ ರಾವ್

ರಾಜಾಜಿನಗರದ ಇ.ಎಸ್.ಐ.ಸಿ ವೈದ್ಯಕೀಯ ಕಾಲೇಜು ಮತ್ತು ಮಾದರಿ ಆಸ್ಪತ್ರೆಯಲ್ಲಿ ಕನ್ನಡ ರಾಜ್ಯೋ ತ್ಸವವನ್ನು ಅತ್ಯಂತ ಭವ್ಯ ಮತ್ತು ಸಾಂಸ್ಕೃತಿಕ ವೈಭವದಿಂದ ಆಚರಿಸಲಾಯಿತು. ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಕನ್ನಡ ತಾಯಿಯ ಗೌರವವನ್ನು ಪ್ರತಿಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳು ಇಡೀ ದಿನ ನಡೆಯಿತು.

National Herald Case: ಇಡಿ ಸಮನ್ಸ್; ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೆಂಬಲಿಗರಿಗೆ ಕಿರುಕುಳ ಎಂದ ಡಿ.ಕೆ. ಶಿವಕುಮಾರ್‌

ಇಡಿ ಕಿರುಕುಳ ಖಂಡನೀಯ ಎಂದ ಡಿ.ಕೆ. ಶಿವಕುಮಾರ್

ಇಡಿ ಸಮನ್ಸ್ ನೀಡಿರುವ ಬಗ್ಗೆ ಮಾಧ್ಯಮಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಮೊದಲಿನಿಂದಲೂ ತನಿಖೆಗೆ ಸಹಕರಿಸುತ್ತಲೇ ಬಂದಿದ್ದೇವೆ. ಇಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಇಷ್ಟೆಲ್ಲಾ ಆದರೂ ಇಡಿ ಚಾರ್ಜ್ ಶೀಟ್ ಹಾಕಿರೋದು ಏಕೆ ಎಂಬುದೇ ಗೊತ್ತಿಲ್ಲ. ಇದರಲ್ಲಿ ಪೊಲೀಸರು ಪ್ರಕರಣ ದಾಖಲಿಸುವ ಅಗತ್ಯ ಇರಲಿಲ್ಲ ಎಂದು ತಿಳಿಸಿದ್ದಾರೆ.

Mahaparinirvan Diwas: ದಲಿತರು ಮಾತ್ರವಲ್ಲದೆ ಎಲ್ಲಾ ಶೋಷಿತರ ಹಕ್ಕುಗಳಿಗಾಗಿ ಅಂಬೇಡ್ಕರ್‌ ಹೋರಾಡಿದರು: ಸಿಎಂ

ಶೋಷಿತ ವರ್ಗಗಳ ಹಕ್ಕುಗಳಿಗಾಗಿ ಅಂಬೇಡ್ಕರ್‌ ಹೋರಾಡಿದರು: ಸಿಎಂ

CM Siddaramaiah: ನಮ್ಮ ಸಾಮಾಜಿಕ ವ್ಯವಸ್ಥೆಯ ಬದಲಾವಣೆಯಾಗಬೇಕು, ಎಲ್ಲರಿಗೂ ಸಮಾನ ಅವಕಾಶಗಳು ದೊರಕಬೇಕು ಹಾಗೂ ಸಾಮಾಜಿಕ ನ್ಯಾಯ ಸ್ಥಾಪನೆಯಾಗಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Viral News: ಪುರುಷತ್ವ ಪರೀಕ್ಷೆ ಮಾಡಿಸಲು ಪತಿ ನಕಾರ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

ಪುರುಷತ್ವ ಪರೀಕ್ಷೆ ಮಾಡಿಸಲು ಪತಿ ನಕಾರ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

ಐದಾರು ತಿಂಗಳ ಹಿಂದೆ ನಡೆದ ಮದುವೆಯೊಂದು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಪ್ರಕರಣ ಬೆಂಗಳೂರಿನ ನೆಲಮಂಗಲ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೆಸರಘಟ್ಟದ 26 ವರ್ಷದ ಯುವತಿ ಮತ್ತು ನೆಲಮಂಗಲದ 30 ವರ್ಷದ ಚಾರ್ಟೆಡ್ ಅಕೌಂಟೆಂಟ್‌ ಜೋಡಿ ಜೂನ್ 9ರಂದು ವೈಭವದಿಂದ ಮದುವೆಯಾಗಿದ್ದರು.

ನ್ಯಾಷನಲ್‌ ಹೆರಾಲ್ಡ್‌ ಕೇಸ್‌; ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌

ನ್ಯಾಷನಲ್‌ ಹೆರಾಲ್ಡ್‌ ಕೇಸ್‌; ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌

National Herald Case: ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು 2014ರ ಜೂನ್‌ 26ರಂದು ದಾಖಲಿಸಿದ್ದ ಖಾಸಗಿ ದೂರನ್ನು ಪಟಿಯಾಲಾ ಹೌಸ್‌ ನ್ಯಾಯಾಲಯದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟರು ಪರಿಗಣನೆಗೆ ತೆಗೆದುಕೊಂಡ ನಂತರ 2021ರಲ್ಲಿ ವಿಚಾರಣೆ ಆರಂಭಿಸಿದ್ದ ಇ.ಡಿ ರಾಹುಲ್‌ ಮತ್ತು ಸೋನಿಯಾ ಗಾಂಧಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.

Car Accident: ಡಿವೈಡರ್​ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು; ಲೋಕಾಯುಕ್ತ ಇನ್ಸ್​ಪೆಕ್ಟರ್ ಸಜೀವ ದಹನ

ಹೊತ್ತಿ ಉರಿದ ಕಾರು; ಲೋಕಾಯುಕ್ತ ಇನ್ಸ್​ಪೆಕ್ಟರ್ ಸಜೀವ ದಹನ

ಕಾರು ಡಿವೈಡರ್​ಗೆ ಡಿಕ್ಕಿಯಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದಿದ್ದು, ಕಾರಿನಲ್ಲಿದ್ದ ಲೋಕಾಯುಕ್ತ ಇನ್ಸ್​​ಪೆಕ್ಟರ್‌ ಸಜೀವ ದಹನವಾಗಿದ್ದಾರೆ. ಧಾರವಾಡ (Dharwad) ಜಿಲ್ಲೆ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಹಾವೇರಿ ಲೋಕಾಯುಕ್ತ ಇನ್ಸ್​​ಪೆಕ್ಟರ್​​​ ಆಗಿದ್ದ ಪಂಚಾಕ್ಷರಿ ಸಾಲಿಮಠ ಅವರು ದುರ್ಗಘಟನೆಯಲ್ಲಿ ಮೃತಪಟ್ಟಿದ್ದಾರೆ.

ಎಐ-ಲೇಸರ್ ತಂತ್ರಜ್ಞಾನದಿಂದ ದೃಷ್ಟಿ ಚಿಕಿತ್ಸೆಯಲ್ಲಿ ದೊಡ್ಡ ಯಶಸ್ಸು

ಎಐ-ಲೇಸರ್ ತಂತ್ರಜ್ಞಾನದಿಂದ ದೃಷ್ಟಿ ಚಿಕಿತ್ಸೆಯಲ್ಲಿ ದೊಡ್ಡ ಯಶಸ್ಸು

45 ವರ್ಷದೊಳಗಿನ 770 ರೋಗಿಗಳ ದತ್ತಾಂಶವನ್ನು ಪರಿಶೀಲಿಸಿದ ಈ ಅಧ್ಯಯನದಲ್ಲಿ, 98% ಕಣ್ಣು ಗಳು ಚಶ್ಮೆಯಿಲ್ಲದೆ 20/20 ದೃಷ್ಟಿಯನ್ನು (ಪರಿಪೂರ್ಣ ದೃಷ್ಟಿ) ಶಸ್ತ್ರಚಿಕಿತ್ಸೆಯ ಕೇವಲ 15 ದಿನಗಳೊ ಳಗೇ ಪಡೆದುಕೊಂಡಿದ್ದು, 99% ಕಣ್ಣುಗಳು ಉದ್ದೇಶಿತ ತಿದ್ದುಪಡಿಯ ಶ್ರೇಣಿಯೊಳಗೆ ಇದ್ದವು.

Shidlaghatta News: ರಥೋತ್ಸವದಂತಹ ಧಾರ್ಮಿಕ ಆಚರಣೆಗಳು ಗ್ರಾಮೀಣರಲ್ಲಿ ಒಗ್ಗಟ್ಟಿಗೆ ಕಾರಣವಾಗಲಿದೆ : ಕಾಂಗ್ರೆಸ್ ಮುಖಂಡ ರಾಜೀವ್ ಗೌಡ

ರಥೋತ್ಸವದಂತಹ ಧಾರ್ಮಿಕ ಆಚರಣೆಗಳು ಗ್ರಾಮೀಣರಲ್ಲಿ ಒಗ್ಗಟ್ಟಿಗೆ ಕಾರಣವಾಗಲಿದೆ

ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ರಥೋತ್ಸವ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇತಿಹಾಸ ಪ್ರಸಿದ್ದ ಶ್ರೀ ಶ್ರೀ ಮಳ್ಳೂರಾಂಭ ದೇವಿಯ ಪ್ರತಿ ವರ್ಷ ದಂತೆ ಅನಾದಿ ಕಾಲದಿಂದ ನಡೆಸಿಕೊಂಡು ಬರುತಿದ್ದು ಜಾತ್ರೆಯ ವಿಶೇಷ ಅದ್ದೂರಿ ರಥೋತ್ಸವ ಜಿಲ್ಲೆಯಲ್ಲಿ ಮಾದರಿಯಾಗಿದೆ

Chikkaballapur News: ಸಾಮಾಜಿಕ ನ್ಯಾಯಕ್ಕೆ ಆಗ್ರಹಿಸಿ ಡಿ.೬ರಂದು ಸಿದ್ದರಾಮನ ಹುಂಡಿಯಿಂದ ಕಾಲ್ನಡಿಗೆ ಜಾಥ : ಸಮಿತಿ ರಾಜ್ಯಾಧ್ಯಕ್ಷ ಕೇಶವಮೂರ್ತಿ ಹೇಳಿಕೆ

ಡಿ.೬ರಂದು ಸಿದ್ದರಾಮನ ಹುಂಡಿಯಿಂದ ಕಾಲ್ನಡಿಗೆ ಜಾಥ

ಮಾದಿಗ ಮೀಸಲಾತಿ ಹೋರಾಟ ಸಮಿತಿ ಸೇರಿದಂತೆ ರಾಜ್ಯದಲ್ಲಿ ಕಳೆದ ೩೫ ವರ್ಷಗಳಿಂದ ಒಳ ಮೀಸಲಾತಿ ಹೋರಾಟಗಳು ನಿರಂತರವಾಗಿ ನಡೆದಿವೆ. ಈ ಹೋರಾಟ ತೀವ್ರವಾಗುತ್ತಿದ್ದಂತೆ ರಾಜ್ಯ ಸರ್ಕಾರ ಜಸ್ಟೀಸ್ ಸದಾಶಿವ ಆಯೋಗ, ಕಾಂತರಾಜು ಆಯೋಗ, ಈಗ ಜಸ್ಟಿಸ್ ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿತು

MP Dr.K.Sudhakar: ಎರಡು ರೈತ ಕೇಂದ್ರಿತ ಖಾಸಗಿ ಮಸೂದೆಗಳ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್

ಹೈನುಗಾರರು ಹಾಗೂ ಹೂ ಬೆಳೆಗಾರರ ಕಲ್ಯಾಣಕ್ಕೆ ಎರಡು ಮಸೂದೆ

ಅನ್ನದಾತ ರೈತರ ಕಲ್ಯಾಣಕ್ಕಾಗಿ ಸಂಸದ ಡಾ.ಕೆ.ಸುಧಾಕರ್ ಲೋಕಸಭೆಯಲ್ಲಿ ಎರಡು ಮಹತ್ವದ ಖಾಸಗಿ ಮಸೂದೆಗಳನ್ನು ಮಂಡಿಸಿದ್ದಾರೆ. ಈ ಮಸೂದೆಗಳು ಕೃಷಿ ಆರ್ಥಿಕತೆ ಹಾಗೂ ಗ್ರಾಮೀಣ ಕುಟುಂಬಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು. ೧. ಹೈನುಗಾರರ (ಕಲ್ಯಾಣ) ಮಸೂದೆ, 2024. ಈ ಮಸೂದೆಯು ಭಾರತದ ೭ ಕೋಟಿ ಡೇರಿ ಆಧಾರಿತ ಕೃಷಿ ಕುಟುಂಬ ಗಳಿಗೆ ಸಾಮಾಜಿಕ ಭದ್ರತೆಯ ನೆರವು ನೀಡುತ್ತದೆ.

MLA S.N. Subbareddy: ಕಲೆ ಗೊತ್ತಿದ್ರೆ ಜಗತ್ತನ್ನೇ ಗೆಲ್ಲಬಹುದು ಪ್ರತಿಭಾ ಕಾರಂಜಿಯಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಕಿವಿಮಾತು

ಕಲೆ ಗೊತ್ತಿದ್ರೆ ಜಗತ್ತನ್ನೇ ಗೆಲ್ಲಬಹುದು

ಮಕ್ಕಳಿಗೆ ಒತ್ತಡವನ್ನು ಹೇರಬಾರದು, ಅವರಲ್ಲಿರುವ ಪ್ರತಿಭೆಯನ್ನು ಗುರ್ತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಇನ್ನೂ ವಿದ್ಯಾರ್ಥಿಗಳು ಶೇ.೭೫ ರಷ್ಟು ಸಮಯವನ್ನು ವಿದ್ಯಾಭ್ಯಾಸಕ್ಕೆ ಮೀಸಲಿಟ್ಟರೆ, ಉಳಿದ ಶೇ.೨೫ ರಷ್ಟು ಸಮಯವನ್ನು ಕಲೆ, ಸಂಸ್ಕೃತಿ ಮತ್ತು ಪ್ರತಿಭಾ ಪ್ರದರ್ಶನ ಗಳಿಗೆ ನೀಡಬೇಕು.

Loading...