ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಕೊಡುವವರೆಗೆ ಹೋರಾಟ ಮುಂದುವರಿಯಲಿದೆ: ಬಿ.ವೈ. ವಿಜಯೇಂದ್ರ

ನಾಗೇಂದ್ರ ರಾಜೀನಾಮೆ ಕೊಡುವವರೆಗೆ ಹೋರಾಟ ಮುಂದುವರಿಯಲಿದೆ: ಬಿವೈವಿ

BY Vijayendra: ನಮ್ಮ ಉದ್ದೇಶ ನಾಗೇಂದ್ರ ಅವರ ತೇಜೋವಧೆ ಮಾಡುವುದಲ್ಲ. ದಲಿತ ಸಮುದಾಯಕ್ಕೆ ನ್ಯಾಯ ಕೊಡಿಸುವುದೇ ನಮ್ಮ ಉದ್ದೇಶ. ನಾಗೇಂದ್ರ ಅವರು ರಾಜೀನಾಮೆ ಕೊಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

Dharwad Cylinder Blast: ಧಾರವಾಡದಲ್ಲಿ ಸಿಲಿಂಡರ್ ಸ್ಫೋಟದಿಂದ ಮನೆ ಛಿದ್ರ ಛಿದ್ರ; ಒಬ್ಬರ ಸ್ಥಿತಿ ಗಂಭೀರ!

ಧಾರವಾಡದಲ್ಲಿ ಸಿಲಿಂಡರ್ ಸ್ಫೋಟ; ಒಬ್ಬರ ಸ್ಥಿತಿ ಗಂಭೀರ

Dharwad News: ಧಾರವಾಡದ ಜನ್ನತ್ ನಗರದಲ್ಲಿ ಘಟನೆ ನಡೆದಿದೆ. ಸಿಲಿಂಡರ್‌ ಸ್ಫೋಟದಿಂದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್‌ಪಿಜಿ ಸಿಲಿಂಡರ್‌ಗೆ ಅಳವಡಿಸಿದ್ದ ಪೈಪ್ ತುಂಡಾಗಿ ಮನೆಯೊಳಗೆ ಅನಿಲ ಸೋರಿಕೆಯಾಗಿ, ದುರಂತ ಸಂಭವಿಸಿದೆ.

ಇಂದು ಮೈಸೂರಿಗೆ ಗಜಪಡೆ ಆಗಮನ

ಇಂದು ಮೈಸೂರಿಗೆ ಗಜಪಡೆ ಆಗಮನ

ಅರಣ್ಯದಿಂದ ಅರಮನೆಯತ್ತ: ಮೈಸೂರು ಮಹಾ ರಾಜರ ಕಾಲದಿಂದಲೂ ದಸರಾ ಆನೆಗಳನ್ನು ಅರಣ್ಯ ಶಿಬಿರಗಳಲ್ಲಿ ಪಳಗಿಸಿ, ಶುಭದಿನದಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾಲ್ನಡಿಗೆಯಲ್ಲಿ ಮೈಸೂರಿಗೆ ಕರೆತರುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಕಾಲ ಬದಲಾದಂತೆ ರಸ್ತೆ ಸಂಚಾರ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಂದ ಆನೆಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯ ಎದುರಾಯಿತು

Gold Price Today On August 26th 2026: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಂದಿನ ಬೆಲೆ ಚೆಕ್‌ ಮಾಡಿ

ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

Gold Rate Today: ಚಿನ್ನದ ಬೆಲೆಯಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಮಂಗಳವಾರ ಇಳಿಕೆಯಾಗಿದ್ದ ಚಿನ್ನದ ದರ ಬುಧವಾರ (ಆಗಸ್ಟ್‌ 26) ಅದೇ ರೀತಿ ಮುಂದುವರಿದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನ 15,010 ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 16,375 ರುಪಾಯಿಗೆ ಇದೆ.

ವಿಜಯಪುರದ ಪ್ರಸಿದ್ಧ ಪ್ರವಾಸಿ ತಾಣ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬದ ಆರು ಮೃತದೇಹಗಳು ಪತ್ತೆ!

ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬದ ಆರು ಮೃತದೇಹಗಳು ಪತ್ತೆ

Crime News: ವಿಜಯಪುರ ನಗರದ ಹೊರವಲಯದಲ್ಲಿರುವ ಐತಿಹಾಸಿಕ ಪ್ರವಾಸಿ ತಾಣವಾದ ಭೂತನಾಳ ಕೆರೆಯಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಆರು ಜನರ ಮೃತದೇಹಗಳು ಪತ್ತೆಯಾಗಿದೆ. ಮೃತರ ಪೈಕಿ ಐವರು ಅಪ್ರಾಪ್ತ ಮಕ್ಕಳು ಹಾಗೂ ಒಬ್ಬ ಮಹಿಳೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಕನ್ನಡದಲ್ಲೇ ಸಹಾಯವಾಣಿ, ಸ್ವಿಗ್ಗಿಯಿಂದ ಹೋಟೆಲ್ ಮಾಲೀಕರಿಗೆ ಮತ್ತೊಂದು ಮಹತ್ವದ ಸೇವೆ ಆರಂಭ

ಕನ್ನಡದಲ್ಲೇ ಸಹಾಯವಾಣಿ, ಸ್ವಿಗ್ಗಿಯಿಂದ ಮಹತ್ವದ ಸೇವೆ ಆರಂಭ

ಭಾರತದ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ ತನ್ನ ಜೊತೆ ಕೈಜೋಡಿಸಿರುವ ರೆಸ್ಟೋರೆಂಟ್ ಪಾಲುದಾರರ ಅನುಕೂಲಕ್ಕಾಗಿ ಹೊಸದೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಹೋಟೆಲ್ ಮಾಲೀಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ ಬಹುಭಾಷಾ ಐವಿಆರ್ ಕರೆ ಸೌಲಭ್ಯ ಹಾಗೂ ಪ್ರತ್ಯೇಕ ಹೆಲ್ಪ್‌ಡೆಸ್ಕ್ ಅನ್ನು ಆರಂಭಿಸಿದೆ.

ABVP: ಸಿಎಂ ಮನೆಗೇ ನುಗ್ಗಿದ ಎಬಿವಿಪಿ: ಪೊಲೀಸರಿಗೆ ಗೊತ್ತಿಲ್ಲದೇ ಮುತ್ತಿಗೆ, ಗುಪ್ತಚರ ವೈಫಲ್ಯ?, ಲಾಠಿಚಾರ್ಜ್

ABVP: ಸಿಎಂ ಮನೆಗೇ ನುಗ್ಗಿದ ಎಬಿವಿಪಿ

ಇನ್ನು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿ ಭಟನಾಕಾರರು ಮೆಜೆಸ್ಟಿಕ್ ಹಾಗೂ ಫ್ರೀಡಂ ಪಾರ್ಕ್ ಸುತ್ತಮುತ್ತಲಿನ ಪ್ರದೇಶಗಳತ್ತ ತೆರಳಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಮುಂದಾದರು. ಪ್ರತಿಭಟನಾಕಾರರು ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಪರಿಣಾಮ ಕೆಲವೆಡೆ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಸೆ.1ರಿಂದ 10ರ ತನಕ ರಾಯಚೂರಿನಿಂದ ಬಳ್ಳಾರಿ ತನಕ ಪಾದಯಾತ್ರೆ

ಸೆ.1ರಿಂದ 10ರ ತನಕ ರಾಯಚೂರಿನಿಂದ ಬಳ್ಳಾರಿ ತನಕ ಪಾದಯಾತ್ರೆ

ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದ ಬಿಜೆಪಿ ಇದೀಗ ಸದನದ ಹೊರಗೂ ಈ ಹೋರಾಟದ ಬಿಸಿಯನ್ನು ಉಳಿಸುವ ಲೆಕ್ಕಾಚಾರ ದಲ್ಲಿದ್ದು, ಇದರ ಭಾಗವಾಗಿ ಪಾದಯಾತ್ರೆಯನ್ನು ಘೋಷಿಸಿದೆ. ಸೆ.1ರಿಂದ 10ರ ವರೆಗೆ ರಾಯಚೂ ರಿನ ಗುರಗುಂಟಾದಿಂದ ಬಳ್ಳಾರಿವರೆಗೆ ಸುಮಾರು 170 ಕಿಮೀ ಪಾದಯಾತ್ರೆ ಮಾಡುವುದಾಗಿ ಮಂಗಳವಾರ ಬಿಜೆಪಿ ಘೋಷಿಸಿದ್ದು, ಈ ಪಾದಯಾತ್ರೆಯಲ್ಲಿ ಮೈತ್ರಿ ಪಕ್ಷ ಜೆಡಿಎಸ್ ಸಹ ಭಾಗವಹಿಸಲಿದೆ ಎಂದು ಹೇಳಿದೆ

ಜು.13ರ ಅಮಾನತು ಆದೇಶ ರದ್ದು ಮಾಡಿದ ʼಹೈʼ: ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ 2ನೇ ಬಾರಿ ಅಮಾನತು!

ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ 2ನೇ ಬಾರಿ ಅಮಾನತು!

ಮೊದಲ ಬಾರಿ ಅಮಾನತಾದಾಗ, ಸಚಿವ ಸಂಪುಟ ಅಮಾನತಿಗೆ ಶಿಫಾರಸು ಮಾಡಿಲ್ಲ. ಹಾಗಾಗಿ ರಾಜ್ಯ ಪಾಲರ ಅಮಾನತು ಆದೇಶವನ್ನು ರದ್ದುಪಡಿಸುವಂತೆ ಶಿವಶಂಕರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕಾರಣಕ್ಕೆ ಶಿವಶಂಕರಪ್ಪ ಅವರನ್ನು ಅಮಾನತು ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿ ಸಚಿವ ಸಂಪುಟ ಸಭೆಯು ಘಟನೋತ್ತರ ತೀರ್ಮಾನ ಮಾಡಿತ್ತು.

ಮಹಿಳಾ ಅಭ್ಯರ್ಥಿ ಜತೆ ಹೊಸ ಮುಖ ಸೇರ್ಪಡೆ ಸಂಭವ: ಮತ್ತೆ ʼಸಂಪುಟ್ಟʼ ಸರ್ಜರಿ ?

ಮತ್ತೆ ʼಸಂಪುಟ್ಟʼ ಸರ್ಜರಿ ?

ವಾಲ್ಮೀಕಿ ಹಗರಣದ ಆರೋಪಿ ಬಿ.ನಾಗೇಂದ್ರರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಬಿಜೆಪಿ ಪಟ್ಟುಹಿಡಿದಿದೆ. ಅವರ ತಲೆದಂಡವಾಗಬಹುದೆಂದು ಹೇಳಲಾಗಿದೆ. ಶಿವಕುಮಾರ್ ಅವರು ಒಂದು ಸ್ಥಾನವನ್ನು ಖಾಲಿ ಉಳಿಸಿಕೊಂಡು ಸಂಪುಟ ಭರ್ತಿ ಮಾಡಿಕೊಂಡಿದ್ದಾರೆ. ಆದರೆ ಇದೀಗ ಹತ್ತಾರು ಶಾಸಕರು ಅಸಮಾಧಾನಗೊಂಡಿದ್ದು, ಪಕ್ಷ ಮತ್ತು ಸರಕಾರದೊಳಗೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಜೋರಾಗಿ ಕೇಳಿ ಬರುತ್ತಿದೆ.

ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ನೂತನ ಕಾರ್ಯಕಾರಿ ಸಮಿತಿಗೆ ಅವಿರೋಧ ಆಯ್ಕೆ

ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಮಹಾಸಭೆ

ನಗರದ ಹೊರವಲಯದ ಚಿತ್ರಾವತಿ ಆರ್ಯ ವೈಶ್ಯ ಕಲ್ಯಾಣ ಮಂಟಪದಲ್ಲಿ ನಡೆದ ಸರ್ವ ಸದಸ್ಯರ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಮಹಾಸಭೆ ನಡೆಯಿತು. ಒಕ್ಕೂಟದ ಅಧ್ಯಕ್ಷ ಬಯ್ಯರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೆಕ್ಕಪತ್ರಗಳ ಪರಿಶೋಧನೆ ನಡೆಸಿ, ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಂತರ ನಡೆದ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಆರ್‌ಎಸ್‌ಎಸ್‌ನಿಂದ ಯಾವುದೇ ಗಲಭೆಗಳಾಗಿಲ್ಲ ಎಂದ ಪ್ರಿಯಾಂಕ್‌ ಖರ್ಗೆ; ಕಾರಣವನ್ನೂ ವಿವರಿಸಿದ ಗೃಹ ಸಚಿವ ಬಿಜೆಪಿಗೆ ತಿರುಗೇಟು ಕೊಟ್ಟಿದ್ದೇಗೆ?

ಆರ್‌ಎಸ್‌ಎಸ್‌ನಿಂದ ಯಾವುದೇ ಗಲಭೆಗಳಾಗಿಲ್ಲ ಎಂದ ಪ್ರಿಯಾಂಕ್‌ ಖರ್ಗೆ

RSS v/s Priyank Kharge: ಆರ್‌ಎಸ್‌ಎಸ್‌ ಶಾಖೆ ಹಾಗೂ ಪಥ ಸಂಚಲನದಲ್ಲಿ ಇದುವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ವಿಧಾನ ಪರಿಷತ್ತಿನಲ್ಲಿ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಉತ್ತರಿಸಿದ್ದಾರೆ. ಇದುವರೆಗೆ ಆರ್‌ಎಸ್‌ಎಸ್‌ ವಿರುದ್ಧ ಕಿಡಿಕಾರುತ್ತಿದ್ದ ಅವರು ಇದ್ದಕ್ಕಿದ್ದಂತೆ ಅದ್ಯಾಕೆ ಹೀಗಡ ಹೇಳಿದರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.

Chikkaballapur News: ಪಾರ್ಥೇನಿಯಂ ಮುಕ್ತ ಗ್ರಾಮ ನಿರ್ಮಾಣಕ್ಕೆ ಕೈಜೋಡಿಸಿ: ಡಾ. ಕೆ.ಎನ್.ಗೀತಾ

ಪಾರ್ಥೇನಿಯಂ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮ ಅಗತ್ಯ

ತಾಲೂಕಿನ ಗಂಗರೇಕಾಲುವೆ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಪಾರ್ಥೇನಿಯಂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಲದ ಬದು, ರಸ್ತೆ ಬದಿ ಹಾಗೂ ಖಾಲಿ ಜಾಗಗಳನ್ನು ಸ್ವಚ್ಛವಾಗಿಟ್ಟುಕೊಂಡು ಸೂಕ್ತ ಕಳೆ ನಿರ್ವಹಣಾ ಕ್ರಮಗಳನ್ನು ಅನುಸರಿಸುವ ಮೂಲಕ ಪಾರ್ಥೇನಿಯಂ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು

ಮದುವೆಯಾಗುವುದಾಗಿ ನಂಬಿಸಿ ವಂಚನೆ ಆರೋಪ: ಕೆಎಸ್‌ಆರ್‌ಟಿಸಿ ಕಂಡಕ್ಟರ್ ವಿರುದ್ಧ ಮಹಿಳೆಯಿಂದ ದೂರು

ಕೆಎಸ್‌ಆರ್‌ಟಿಸಿ ಕಂಡಕ್ಟರ್ ವಿರುದ್ಧ ಮಹಿಳೆಯಿಂದ ದೂರು

ಚಿತ್ರದುರ್ಗ ಮೂಲದ ಕಾವೇರಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾದಿಯಾಗಿ ಕೆಲಸ ಮಾಡು ತ್ತಿದ್ದು, ತರಬೇತಿಗಾಗಿ ಮೈಸೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬಸ್‌ನಲ್ಲಿ ಬಾಗೇಪಲ್ಲಿ ಮೂಲದ ಕೆಎಸ್‌ಆರ್‌ ಟಿಸಿ ಕಂಡಕ್ಟರ್‌ ಶ್ರೀನಾಥ್ ಪರಿಚಯವಾಗಿದ್ದ. ಕಳೆದ ಒಂದು ವರ್ಷದಿಂದ ಮದುವೆ ಯಾಗುವುದಾಗಿ ನಂಬಿಸಿ ತನ್ನೊಂದಿಗೆ ಸಂಬಂಧ ಬೆಳೆಸಿದ್ದಲ್ಲದೆ, ಕಷ್ಟದಲ್ಲಿರುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನ ಪಡೆದಿದ್ದಾರೆ ಎಂದು ಕಾವೇರಿ ಆರೋಪಿಸಿದ್ದಾರೆ

ವಾಪಸಂದ್ರದಲ್ಲಿ ಶ್ರದ್ಧಾಭಕ್ತಿಯಿಂದ ಓಂ ಶಕ್ತಿ ಪೂರಂ ಗಂಜಿ ಮಹೋತ್ಸವ

ವಾಪಸಂದ್ರದಲ್ಲಿ ಶ್ರದ್ಧಾಭಕ್ತಿಯಿಂದ ಓಂ ಶಕ್ತಿ ಪೂರಂ ಗಂಜಿ ಮಹೋತ್ಸವ

ಚಂಡಿಕಾ ಹೋಮದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು. ಭಾನುವಾರ ಬೆಳಿಗ್ಗೆ ನೂರಾರು ಮಹಿಳೆಯರು ಗಂಜಿ ಮಡಿಕೆಗಳನ್ನು ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿ ದರು. ಬಿಬಿ ರಸ್ತೆ, ಬಜಾರ್ ರಸ್ತೆ ಹಾಗೂ ಗಂಗಮ್ಮ ಗುಡಿ ರಸ್ತೆಯ ಮೂಲಕ ಸಾಗಿದ ಮೆರವಣಿಗೆಯಲ್ಲಿ ಭಕ್ತರು ದೇವಿಯ ನಾಮಸ್ಮರಣೆ, ಭಜನೆ ಹಾಗೂ ಧಾರ್ಮಿಕ ಆಚರಣೆಗಳ ಮೂಲಕ ಭಕ್ತಿಭಾವ ಮೆರೆದರು.

ಅಧಿಕಾರ ಇರಲಿ, ಇಲ್ಲದಿರಲಿ ಒಳ ಮೀಸಲಾತಿಯ ಪರ: ಮಾಜಿ ಸಿಎಂ ಸಿದ್ದರಾಮಯ್ಯ

ಅಧಿಕಾರ ಇರಲಿ, ಇಲ್ಲದಿರಲಿ ಒಳ ಮೀಸಲಾತಿಯ ಪರ: ಮಾಜಿ ಸಿಎಂ ಸಿದ್ದರಾಮಯ್ಯ

Former CM Siddaramaiah: ನಾನೀಗ ಸರ್ಕಾರದ ಮುಖ್ಯಸ್ಥನಲ್ಲ, ನನ್ನ ಬಳಿ ಅಧಿಕಾರವಿಲ್ಲ. ಆದರೆ ಒಳ ಮೀಸಲಾತಿಯ ಪರವಿರುವವನು, ಮೀಸಲಾತಿ ವ್ಯವಸ್ಥೆಯ ಪರ, ಸಾಮಾಜಿಕ ನ್ಯಾಯದ ಪರ ಇರುವವನು. ಈ ವಿಚಾರದಲ್ಲಿ ಹಿಂದೆಯೂ ರಾಜಿಯಾಗಿಲ್ಲ, ಮುಂದೆಯೂ ರಾಜಿಯಾಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Chikkaballapur News: ಅತಿಕ್ರಮಣಕ್ಕೆ ಅವಕಾಶವಿಲ್ಲ ಎಂದ ಜಿಲ್ಲಾಡಳಿತ: ಆ.27ರಂದು ಸಾಗುವಳಿ ಭೂ ಪ್ರವೇಶ ಹೋರಾಟಕ್ಕೆ ರೈತ–ದಲಿತ ಸಂಘಟನೆಗಳ ಕರೆ

ಶಿಂಗಾಡಿಕದಿರೇನಹಳ್ಳಿ ಅರಣ್ಯ ಭೂಮಿ ವಿವಾದಕ್ಕೆ ಮತ್ತೆ ಕಾವು

ಶಿಂಗಾಡಿಕದಿರೇನಹಳ್ಳಿ ಗ್ರಾಮದ ಸರ್ವೆ ನಂ.67 ಕರ್ನಾಟಕ ಅರಣ್ಯ ಕಾಯ್ದೆ-1963ರ ಸೆಕ್ಷನ್-4ರಡಿ ಅರಣ್ಯ ಪ್ರದೇಶವಾಗಿದ್ದು, ಕಂದಾಯ ದಾಖಲೆಗಳ ಪಹಣಿಯಲ್ಲಿಯೂ ಅರಣ್ಯವೆಂದು ನಮೂದಾಗಿದೆ. ಅನುಮತಿಯಿಲ್ಲದೆ ಪ್ರದೇಶ ಪ್ರವೇಶಿಸುವುದು, ಸ್ವಾಧೀನಪಡಿಸಿಕೊಳ್ಳುವುದು ಅಥವಾ ಅತಿಕ್ರಮಿಸುವುದು ಕಾನೂನುಬಾಹಿರವಾಗಿದ್ದು, ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಸಿದೆ.

7ನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಚಿಕ್ಕಬಳ್ಳಾಪುರ ವಿದ್ಯಾರ್ಥಿಗಳ ಸಾಧನೆ

7ನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಕ್ರೀಡಾಕೂಟ

ಶಿವಮೊಗ್ಗದಲ್ಲಿ ಆ.22 ಮತ್ತು 23ರಂದು ನಡೆದ 7ನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಕ್ರೀಡಾಕೂಟ ದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿಗಳು ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ನಮ್ಮ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್ ಕೌಂಟರ್‌ಗಳಿಲ್ಲ,  ಅನ್ನ, ಅಕ್ಷರ, ಆರೋಗ್ಯ ವಾಣಿಜ್ಯಕ್ಕೆ ಬಳಕೆಯಾಗದಿರಲಿ: ಸದ್ಗುರು ಶ್ರೀ ಮಧುಸೂದನ ಸಾಯಿ

ಕನ್ನಡಿಗರಂತಹ ಒಳ್ಳೆಯ ಜನರನ್ನು ಎಲ್ಲಿಯೂ ನೋಡಲಿಲ್ಲ: ಶ್ರೀ ಮಧುಸೂದನ ಸಾಯಿ

Sadguru Sri Madhusudan Sai: ನಮ್ಮ ಕೆಲಸ ಮಾತನಾಡಬೇಕೇ ಹೊರತು, ನಾವು ಮಾತನಾಡಬಾರದು ಎಂದು ಬಾಬಾ ಹೇಳಿಕೊಟ್ಟಿದ್ದರು. ಅದರಂತೆ ನಾವು ಕೆಲಸ ಮಾಡುತ್ತಾ ಸಾಗುತ್ತಿದ್ದೇವೆ. ನಮ್ಮ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್ ಕೌಂಟರ್‌ಗಳು ಇಲ್ಲ. ದೇಶದಲ್ಲಿ ಅನ್ನ, ಅಕ್ಷರ ಮತ್ತು ಆರೋಗ್ಯ ಎಂದಿಗೂ ವಾಣಿಜ್ಯಕ್ಕೆ ಬಳಕೆಯಾಗಿರಲಿಲ್ಲ. ಆ ಕಾಲ ಮತ್ತೆ ಬರಬೇಕಿದೆ ಎಂದು ಒನ್‌ ವರ್ಲ್ಡ್‌ ಒನ್‌ ಫ್ಯಾಮಿಲಿ ಮಿಷನ್ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದ್ದಾರೆ.

ಯೋಗಿಯ ಸಮಾಧಿಸ್ಥಿತಿಯಲ್ಲಿ ಉಸಿರಾಟವಿಲ್ಲದೆಯೂ ಬದುಕಿರಬಹುದು: ರಾಘವೇಶ್ವರ ಭಾರತೀ ಶ್ರೀ

ಊಟವಿಲ್ಲದೆ ಬದುಕಬಹುದು, ಉಸಿರಿಲ್ಲದೆ ಸಾಧ್ಯವಿಲ್ಲ: ರಾಘವೇಶ್ವರ ಭಾರತೀ ಶ್ರೀ

Sri Raghaveshwara Bharathi Swamiji: ಸರಿಯಾದ ಉಸಿರಾಟವು ಮೂಲಾಧಾರ ಚಕ್ರದವರೆಗೆ ಸಂಚರಿಸಬೇಕು. ಉಸಿರಾಡುವಾಗ ಶ್ವಾಸಕೋಶದವರೆಗೆ ಗಾಳಿರೂಪದಲ್ಲಿ ಸಂಚರಿಸಿದರೆ, ಮುಂದೆ ಮೂಲಾಧಾರ ಚಕ್ರದವರೆಗೆ ಶ್ವಾಸವು ಚೈತನ್ಯದ ರೂಪದಲ್ಲಿ ಸಂಚರಿಸುತ್ತದೆ. ಉಸಿರಾಟದ ಗತಿಯು ಹಂಸದಂತೆ ಧಾವಂತ ಇಲ್ಲದೇ ಸರಾಗವಾಗಿ ಆದಾಗ ಸಮಾಧಾನವನ್ನು ಸಾಧಿಸಿಕೊಳ್ಳಲು ಸಾಧ್ಯ. ಸಮಾಧಾನದಿಂದ ಶರೀರ, ಮನಸ್ಸು, ಜೀವನಕ್ಕೆ ಅಪಾರವಾದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.

Hospet News: 'ನಾನು ಕರ್ನಾಟಕ ಆರಿಸಿಕೊಂಡಿಲ್ಲ, ಕನ್ನಡಾಂಬೆಯೇ ನನ್ನನ್ನು ಆರಿಸಿಕೊಂಡಿದ್ದಾರೆ': ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರತಿಪಾದನೆ

ನಾನು ಕರ್ನಾಟಕ ಆರಿಸಿಕೊಂಡಿಲ್ಲ, ಕನ್ನಡಾಂಬೆಯೇ ನನ್ನನ್ನು ಆರಿಸಿಕೊಂಡಿದ್ದಾರೆ

ನಾನು ಭಗವಾನ್ ಸತ್ಯ ಸಾಯಿ ಬಾಬಾರವರ ಶಿಷ್ಯ. ಅವರ ಶಿಕ್ಷಣ ಸಂಸ್ಥೆಗಳಲ್ಲಿ ಓದಿ ಸೇವಾ ಚಟುವಟಿಕೆಗಳಿಗಾಗಿ ಅವರ ಮಾರ್ಗದರ್ಶನದ ನಿರೀಕ್ಷೆಯಲ್ಲಿದ್ದೆ. ಅವರ ಮಹಾಸಮಾಧಿಯ ನಂತರ ನನಗೆ ಆಧ್ಯಾತ್ಮಿಕ ಅನುಭವವಾಯಿತು. ಅದರಂತೆ ಅವರ ಸೂಚನೆಯಂತೆ ಕರ್ನಾಟಕದಲ್ಲಿ ಸೇವಾ ಚಟುವಟಿಕೆ ಆರಂಭಿಸಿದೆವು

ಅನ್ವೇಷಣಾ 2026ರಲ್ಲಿ 61 ಯುವ ಸಂಶೋಧಕರು 20 ಸ್ವತಂತ್ರ ಸಂಶೋಧನಾ ಯೋಜನೆಗಳ ಪ್ರದರ್ಶನ

ಅನ್ವೇಷಣಾ 2026ರಲ್ಲಿ ಸಂಶೋಧನಾ ಯೋಜನೆಗಳ ಪ್ರದರ್ಶನ

ಪ್ರಯೋಗದ ವಿದ್ಯಾರ್ಥಿ ಸಂಶೋಧನಾ ಕಾರ್ಯಕ್ರಮದ ಎರಡು ದಿನಗಳ ಸಮಾರೋಪವು ಕುತೂಹಲ, ವೈಜ್ಞಾನಿಕ ಅನ್ವೇಷಣೆ ಮತ್ತು ಮುಂದಿನ ಪೀಳಿಗೆಯ ಸಂಶೋಧಕರನ್ನು ಸಂಭ್ರಮಿಸಿತು. ಅನ್ವೇಷಣಾ 2026ರಲ್ಲಿ ಪ್ರಸ್ತುತಪಡಿಸಲಾದ 20 ಸಂಶೋಧನಾ ಯೋಜನೆಗಳಲ್ಲಿ ನಾಲ್ಕು ಯೋಜನೆಗಳು ಅತ್ಯುತ್ತಮ ಪ್ರದರ್ಶನ ನೀಡಿದ ಯೋಜನೆಗಳಾಗಿ ಹೊರಹೊಮ್ಮಿದವು.

ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಇಂಡಿಯಾ ಸ್ಟಾರ್ಟ್‌ ಅಪ್ ಸಪ್ತಾಹ 2026

ಅದ್ದೂರಿಯಾಗಿ ನಡೆದ ಇಂಡಿಯಾ ಸ್ಟಾರ್ಟ್‌ ಅಪ್ ಸಪ್ತಾಹ 2026

ಕೌಶಲ್ಯಾಭಿವೃದ್ಧಿ, ನೆಟ್‌ ವರ್ಕಿಂಗ್ ಮತ್ತು ಅನ್ವೇಷಣೆ ಎಂಬ ಆಶಯದೊಂದಿಗೆ ನಡೆದ ಈ ಕಾರ್ಯ ಕ್ರಮವು, ಕೇವಲ ಸಾಂಪ್ರದಾಯಿಕ ಉಪನ್ಯಾಸಗಳಿಗೆ ಸೀಮಿತವಾಗಿರದೆ ಸ್ಟಾರ್ಟ್‌ ಅಪ್ ಸಂಸ್ಥಾಪಕರು ಎದುರಿಸುತ್ತಿರುವ ಬಂಡವಾಳ ಹೂಡಿಕೆ, ಗ್ರಾಹಕರ ಸಂಪಾದನೆ, ನಾಯಕತ್ವ ನಿರ್ವಹಣೆ ಮತ್ತು ಜಾಗತಿಕ ವಿಸ್ತರಣೆಯಂತಹ ನೈಜ ಸವಾಲುಗಳ ಪರಿಹಾರದ ಕುರಿತು ಪ್ರಮುಖವಾಗಿ ಗಮನಹರಿಸಿತು.

ಬಂಧಿತ ಸರ್ಕಾರಿ ಅಧಿಕಾರಿ ಜೈಲಿನಲ್ಲಿರಬೇಕಾದ ಬದಲು ಗೆಳತಿಯೊಂದಿಗೆ ಆಸ್ಪತ್ರೆಯಲ್ಲಿ ಪತ್ತೆ: ನ್ಯಾಯಾಧೀಶರು ಗರಂ

ಬಂಧಿತ ಅಧಿಕಾರಿ ಗೆಳತಿಯೊಂದಿಗೆ ಆಸ್ಪತ್ರೆಯಲ್ಲಿ ಕಳ್ಳಾಟ

Government officer in hospital: ಕರ್ನಾಟಕ ಲೋಕಾಯುಕ್ತರಿಂದ ಬಂಧನಕ್ಕೊಳಗಾಗಿದ್ದ ಸರ್ಕಾರಿ ಅಧಿಕಾರಿಯೊಬ್ಬರಿಗೆ ಮಂಡ್ಯ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ವಿಐಪಿ ಸೌಲಭ್ಯ ನೀಡಲಾಗುತ್ತಿರುವುದು ಪತ್ತೆಯಾಗಿದೆ. ಮಂಡ್ಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿ. ಚಂದ್ರಶೇಖರ್ ಹಠಾತ್ ತಪಾಸಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

Loading...