ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

CT Ravi: ಕಾಂಗ್ರೆಸ್ಸಿನವರಿಗೆ ಬಾಂಬ್ ಸ್ಫೋಟದ ಕುರಿತು ಆತಂಕ ಇಲ್ಲ: ಸಿ.ಟಿ. ರವಿ ಕಿಡಿ

ಕಾಂಗ್ರೆಸ್ಸಿನವರಿಗೆ ಬಾಂಬ್ ಸ್ಫೋಟದ ಕುರಿತು ಆತಂಕ ಇಲ್ಲ: ಸಿ.ಟಿ. ರವಿ ಕಿಡಿ

Delhi Blast Case: ಲಕ್ಷಗಟ್ಟಲೆ ಜನರ ಸಾವಿನ ಬಗ್ಗೆ ಕಾಂಗ್ರೆಸ್ಸಿಗೆ ಆತಂಕ ಇರಬೇಕಾಗಿತ್ತು. ಅವರು ತಮ್ಮ ಯೋಜನೆಯಲ್ಲಿ ಯಶ ಪಡೆದಿದ್ದರೆ ಎಷ್ಟು ಲಕ್ಷ ಜನರು ಸಾಯುತ್ತಿದ್ದರೆಂಬ ಆತಂಕ ಇರಬೇಕಿತ್ತು. ಆದರೆ, ಬಿಹಾರ ಚುನಾವಣೆಗೆ ಮುಂಚೆಯೇ ಯಾಕಾಯಿತು? ಎಂಬುದು ಇವರ ಆತಂಕ. ಭಯೋತ್ಪಾದಕರು ಬಾಂಬ್ ಇಟ್ಟರೆ ಬಿಜೆಪಿಗೇ ಲಾಭ ಆಗುತ್ತದೆಯೇ? ನಿಮಗೆ ಯಾಕೆ ಲಾಭ ಆಗಬಾರದು ಎಂದು ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

Sugarcane Farmers Protest: ಬಾಗಲಕೋಟೆಯ ಸೈದಾಪುರದಲ್ಲಿ ಕಬ್ಬು ತುಂಬಿದ್ದ 30 ಟ್ರ್ಯಾಕ್ಟರ್‌ಗಳಿಗೆ ಬೆಂಕಿ; ಲೋಡ್‌ಗಟ್ಟಲೆ ಕಬ್ಬು ಸುಟ್ಟು ಕರಕಲು!

ಬಾಗಲಕೋಟೆಯ ಸೈದಾಪುರದಲ್ಲಿ ಕಬ್ಬು ತುಂಬಿದ್ದ 30 ಟ್ರ್ಯಾಕ್ಟರ್‌ಗಳಿಗೆ ಬೆಂಕಿ

Sugarcane growers Protest in Bagalkot: ಮುಧೋಳ ತಾಲೂಕಿನ ಸೈದಾಪುರದ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರತಿ ಟನ್‌ಗೆ 3,500 ನೀಡಬೇಕು ಎಂದು ರೈತರು ಮುಧೋಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಕೇವಲ ನೂರು ಹೆಚ್ಚಳ ಮಾಡಿದ್ದರಿಂದ ರೊಚ್ಚಿಗೆದ್ದ ಕೆಲವರು, ಕಾರ್ಖಾನೆ ಮುಂದೆ ನಿಲ್ಲಿಸಿದ್ದ ಕಬ್ಬು ತುಂಬಿದ್ದ ಟ್ರಾಲಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.

Karnataka Weather: ಹವಾಮಾನ ವರದಿ; ನಾಳೆ ಬೆಂಗಳೂರಿನಲ್ಲಿ ಮೋಡ ಕವಿದ ಆಕಾಶ, ಉಳಿದೆಡೆ ಒಣ ಹವೆ

ನಾಳೆ ಬೆಂಗಳೂರಿನಲ್ಲಿ ಮೋಡ ಕವಿದ ಆಕಾಶ, ಉಳಿದೆಡೆ ಒಣ ಹವೆ

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಕಡೆಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Pocso Case: ಪೋಕ್ಸೊ ಕೇಸ್‌ನಲ್ಲಿ ಬಿ.ಎಸ್. ಯಡಿಯೂರಪ್ಪಗೆ ನೀಡಿದ್ದ ಸಮನ್ಸ್‌ ರದ್ದು ಮಾಡಲು ಹೈಕೋರ್ಟ್‌ ನಕಾರ

ಯಡಿಯೂರಪ್ಪಗೆ ನೀಡಿದ್ದ ಸಮನ್ಸ್‌ ರದ್ದು ಮಾಡಲು ಹೈಕೋರ್ಟ್‌ ನಕಾರ

POCSO case against BS Yediyurappa: ವಿಚಾರಣಾ ಹಂತದಲ್ಲಿ ಯಡಿಯೂರಪ್ಪ ಅವರ ಅಗತ್ಯವಿಲ್ಲದಿದ್ದರೆ ವಿಚಾರಣೆಗೆ ಹಾಜರಾಗುವಂತೆ ಒತ್ತಾಯಿಸಬಾರದು ಎಂದು ನ್ಯಾಯಾಲಯ ಹೇಳಿದೆ. ಯಡಿಯೂರಪ್ಪ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡನೆ ಮಾಡಿದ್ದರು. ಅರ್ಜಿದಾರರ ಪರ ವಕೀಲರ ವಾದ ಮತ್ತು ಸಿಐಡಿ ತನಿಖಾಧಿಕಾರಿ ಪರ ವಿಶೇಷ ಅಭಿಯೋಜಕರ ಪ್ರತಿವಾದ ಆಲಿಸಿ ಕೋರ್ಟ್‌ ಆದೇಶ ನೀಡಿದೆ.

ಫ್ಲಿಪ್‌ಕಾರ್ಟ್ ನ ಡೆಲಿವರಿ ವಾಹನಗಳ ವಿಭಾಗದಲ್ಲಿ 20 ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಬಳಕೆ

ಡೆಲಿವರಿಗಾಗಿ 20 ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಬಳಕೆ

ಮಹಾನಗರಗಳಲ್ಲಿ ಮತ್ತು ಎರಡನೇ ಹಂತದ ನಗರಗಳಲ್ಲಿ ದೈನಂದಿನ ಬಳಕೆಯ ವಸ್ತು ಗಳನ್ನು ಡೆಲಿವರಿ ಮಾಡಲು ಶೇ.70ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಾಗುತ್ತಿದೆ. ಫ್ಲಿಪ್‌ಕಾರ್ಟ್ ಸಂಸ್ಥೆಯು ದೀರ್ಘ ದೂರದ ಸರಕು ಸಾಗಾಣಿಕೆಯಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆ ಸಾಧ್ಯತೆಯನ್ನು ಪರೀಕ್ಷಿಸಲು ದೆಹಲಿ- ಜೈಪುರ ಕಾರಿಡಾರ್‌ ನಲ್ಲಿ ಲಾಂಗ್-ಹಾಲ್ ಎಲೆಕ್ಟ್ರಿಕ್ ಟ್ರಕ್ ಪೈಲೆಟ್ ಯೋಜನೆಯನ್ನು ಆರಂಭ ಮಾಡಿದೆ.

MLA K.H. Puttaswamygowda: ಸರಕಾರಿ ಆಸ್ಪತ್ರೆ ವೈದ್ಯರಲ್ಲಿ ಸೇವಾ ಮನೋಭಾವ ಬತ್ತದಿರಲಿ : ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ

ಸರಕಾರಿ ಆಸ್ಪತ್ರೆ ವೈದ್ಯರಲ್ಲಿ ಸೇವಾ ಮನೋಭಾವ ಬತ್ತದಿರಲಿ

ವೈದ್ಯರ ಮೇಲೆ ರೋಗಿಗಳು ಅಪಾರ ನಂಬಿಕೆ ಇಟ್ಟು ಕೊಂಡಿರುತ್ತಾರೆ. ವೈದ್ಯರು ಬದ್ಧತೆಯಿಂದ ಸೇವೆ ಸಲ್ಲಿಸಬೇಕು, ಹಣದ ಆಸೆಗೆ ಕರ್ತವ್ಯ ನಿರ್ವಹಿಸು ವುದನ್ನು ಸಹಿಸುವುದಿಲ್ಲ. ಅಂತಹ ದೂರುಗಳು ಕೇಳಿ ಬಂದಲ್ಲಿ ಮುಲಾ ಜಿಲ್ಲದೆ ಕ್ರಮ ಜರುಗಿಸಲಾಗುವುದು. ಸಂಬಂಧಪಟ್ಟ ವೈದ್ಯಾಧಿಕಾರಿಗಳು ಈ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಿದರು.

Chittapur RSS March: ಚಿತ್ತಾಪುರದಲ್ಲಿ ನ.16ರಂದು ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಹೈಕೋರ್ಟ್‌ ಗ್ರೀನ್ ಸಿಗ್ನಲ್

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್‌

Chittapur RSS Route March on November 16: ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನದಲ್ಲಿ 300 ಕಾರ್ಯಕರ್ತರು, 50 ಮಂದಿ ಬ್ಯಾಂಡ್‌ನವರು ಸೇರಿ ಕೇವಲ 350 ಜನರು ಮಾತ್ರವೇ ಸೇರಬಹುದು. ಅದರ ಹೊರತಾಗಿ ಹೆಚ್ಚಿನವರು ಸೇರುವಂತಿಲ್ಲ ಎಂಬುದಾಗಿ ಷರತ್ತುಬದ್ಧ ಅನುಮತಿಯನ್ನು ನೀಡಿ ಹೈಕೋರ್ಟ್ ಆದೇಶಿಸಿದೆ.

Chikkaballapur News: ಪೋಶೆಟ್ಟಿಹಳ್ಳಿ ಶಾಲೆಯಲ್ಲಿ ಕಸಾಪದಿಂದ ಗೀತಗಾಯನ, ರಸಪ್ರಶ್ನೆ ಕಾರ್ಯಕ್ರಮ

ಪೋಶೆಟ್ಟಿಹಳ್ಳಿ ಶಾಲೆಯಲ್ಲಿ ಕಸಾಪದಿಂದ ಗೀತಗಾಯನ, ರಸಪ್ರಶ್ನೆ ಕಾರ್ಯಕ್ರಮ

ಎರಡು ಸಾವಿರ ವರ್ಷಗಳ ಇತಿಹಾಸವುಳ್ಳ ನಾಡಿನ ಕನ್ನಡ ಭಾಷಯ ಹಿರಿಮೆಯು ಹೆಮ್ಮೆ ಪಡುವಂತದ್ದು, ಗ್ರೀಕರ ನಾಟಕಗಳಲ್ಲಿ ಕನ್ನಡದ ಪದಪುಂಜಗಳು ಕಂಡುಬರುವುದನ್ನು ಇತಿಹಾಸಕಾರರು ಗುರುತಿಸಿದ್ದಾರೆ. ನಾಡಿನ ಮೊಟ್ಟಮೊದಲ ಶಾಸನವು ಹಲ್ಮಿಡಿ ಶಾಸನ ವಾಗಿದ್ದು, ಮೊಟ್ಟಮೊದಲ ಗದ್ಯಕೃತಿ ಶಿವಕೋಟ್ಯಾಚಾರ್ಯರ ವಡ್ಡಾರಾಧನೆ. ಕಾವ್ಯ ಕೃತಿ ಕವಿರಾಜಮಾರ್ಗ ಎಂಬುದು ಕನ್ನಡಿಗರಲ್ಲಿ ರೋಮಾಂಚನಗೊಳಿಸುವಂತದ್ದು.

Kannada Rajyotsava 2025: ಸರ್ವ ಜನಾಂಗದ ಶಾಂತಿಯ ತೋಟ ಎನ್ನುವುದೇ ಕನ್ನಡ ಮಣ್ಣಿನ ಮೌಲ್ಯ: ಕೆ.ವಿ. ಪ್ರಭಾಕರ್‌

ಸರ್ವ ಜನಾಂಗದ ಶಾಂತಿಯ ತೋಟ ಎನ್ನುವುದೇ ಈ ಮಣ್ಣಿನ ಮೌಲ್ಯ: ಕೆವಿಪಿ

KV Prabhakar: ಸಾಮಾಜಿಕ ನ್ಯಾಯದ ನೆಲೆಯಲ್ಲಿ ಕರ್ನಾಟಕ ಏಕೀಕರಣ ಆಗಿದೆ. ಎಲ್ಲ ಕನ್ನಡ ಮಾತನಾಡುವ ಪ್ರದೇಶಗಳ ಜನರ ಅಭಿವೃದ್ಧಿ ಮತ್ತು ದಮನಿತ ಸಮುದಾಯಗಳ ಏಳಿಗೆಯ ಆಶಯ ಕರ್ನಾಟಕ ರಾಜ್ಯ ಉದಯದ ಹಿಂದಿನ ಪ್ರಮುಖ ಆಶಯವಾಗಿತ್ತು. ʼಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟʼ ದ ಕಲ್ಪನೆ ರೂಪುಗೊಂಡಿದ್ದು ಹೀಗೆಯೇ. ಕುವೆಂಪು ಅವರ 'ಸರ್ವ ಜನಾಂಗದ ಶಾಂತಿಯ ತೋಟ' ಎನ್ನುವ ಮಾತು ಕನ್ನಡ ಸಂಸ್ಕೃತಿಯ ಮೌಲ್ಯವಾಗಿದ್ದು, ಅದನ್ನು ಸಾಧಿಸುವಲ್ಲಿ ನಾವು ಎಷ್ಟು ಯಶಸ್ವಿಯಾಗಿದ್ದೇವೆ ಎಂಬುದರ ಕುರಿತು ಅವಲೋಕಿಸಬೇಕಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ.

MB Patil: 4 ರೈಲು ನಿಲ್ದಾಣಗಳಿಗೆ ಸಂತರ ಹೆಸರು- ಕೇಂದ್ರಕ್ಕೆ ಪತ್ರ ಬರೆದ ಎಂ.ಬಿ. ಪಾಟೀಲ್‌

4 ರೈಲು ನಿಲ್ದಾಣಗಳಿಗೆ ಸಂತರ ಹೆಸರು- ಕೇಂದ್ರಕ್ಕೆ ಎಂ.ಬಿ. ಪಾಟೀಲ್‌ ಪತ್ರ

ವಿಜಯಪುರ, ಬೆಳಗಾವಿ, ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿರುವ ಸೂರಗೊಂಡನಕೊಪ್ಪ ರೈಲು ನಿಲ್ದಾಣಗಳನ್ನು ಸ್ಥಳೀಯ ಸಾಂಸ್ಕೃತಿಕ ಮಹತ್ವಕ್ಕೆ ಪೂರಕವಾಗಿ ಬದಲಿಸಿ, ಹೊಸ ನಾಮಕರಣ ಮಾಡಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಶಿಫಾರಸು ಮಾಡಿದ್ದು, ಈ ಸಂಬಂಧವಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

Mekedatu Project: ಮೇಕೆದಾಟು ಯೋಜನೆ: ಕರ್ನಾಟಕದ ಪರ ಸುಪ್ರೀಂ ಕೋರ್ಟ್‌ ತೀರ್ಪು, ತಮಿಳುನಾಡು ಅರ್ಜಿ ವಜಾ

ಕರ್ನಾಟಕದ ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ

ಮೇಕೆದಾಟು ಯೋಜನೆ (Mekedatu project) ಪ್ರಶ್ನಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಅವರಿದ್ದ ಪೀಠ, ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಮೇಕೆದಾಟು ಯೋಜನೆಯು ಇನ್ನೂ ಆರಂಭಿಕ ಹಂತದಲ್ಲಿದ್ದು, ಯಾವುದೇ ನಿರ್ಮಾಣ ಕಾರ್ಯ ಪ್ರಾರಂಭವಾಗಿಲ್ಲ. ಈ ಯೋಜನೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕೇಂದ್ರ ಜಲ ಆಯೋಗದಂತಹ ತಜ್ಞ ಸಂಸ್ಥೆಗಳ ಪರಿಶೀಲನೆಯಲ್ಲಿದೆ. ಹೀಗಾಗಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ.

Self Harming: ವಿಡಿಯೋ ಮಾಡಿಟ್ಟು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ

ವಿಡಿಯೋ ಮಾಡಿಟ್ಟು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ

BJP worker Death: ಬಿಜೆಪಿ ಕಾರ್ಯಕರ್ತ ವೆಂಕಟೇಶ್ ಚೀಟಿ ನಡೆಸುತ್ತಿದ್ದರು. ಆದರೆ 7 ಜನ ಚೀಟಿ ಹಣ ಕಟ್ಟದೇ ಮೋಸ ಮಾಡಿದ್ದರು. ಇದೇ ಸಮಯದಲ್ಲಿ ಚೀಟಿ ಕಟ್ಟಿದ್ದ ಇನ್ನುಳಿದ ನಾಲ್ವರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರಂತೆ. ಇದರಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದ ವೆಂಕಟೇಶ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸಾಯುವ ಮುನ್ನ ವಿಡಿಯೋ ಮಾಡಿಟ್ಟು, ಹಣಕಾಸು ನಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ.

ಯುವಜನತೆಯ ಡೇಟಿಂಗ್‌ ವರದಿ ಬಿಡುಗಡೆ ಮಾಡಿದ ಡೇಟಿಂಗ್‌ ಆಪ್‌ “ಐಸಲ್‌ ನೆಟ್‌ವರ್ಕ್‌”

ಯುವಜನತೆಯ ಡೇಟಿಂಗ್‌: ವರದಿ ಬಿಡುಗಡೆ ಮಾಡಿದ ಆಪ್‌ “ಐಸಲ್‌ ನೆಟ್‌ವರ್ಕ್‌”

ಅಧ್ಯಯನವು ಆಧುನಿಕ ಪ್ರೇಮದತ್ತ ಭಾರತೀಯರ ಮನೋಭಾವದಲ್ಲಿ ಸಂಭವಿಸಿರುವ ಬೃಹತ್ ಸಾಂಸ್ಕೃತಿಕ ಬದಲಾವಣೆಯನ್ನು ಬಹಿರಂಗಪಡಿಸುತ್ತದೆ. ಹಿಂದಿನ ದಶಕದಲ್ಲಿ ಹೆಚ್ಚಾಗಿ ಕಂಡುಬಂದ ‘ಕ್ಯಾಶುಯಲ್ ಡೇಟಿಂಗ್’ ಪರಂಪರೆಯ ಬದಲಿಗೆ ಈಗ 97% ಮಹಿಳೆ ಯರು ನಿಷ್ಠೆ ಮತ್ತು ಬದ್ಧತೆಯನ್ನು ಪ್ರಾಮುಖ್ಯತೆ ನೀಡುತ್ತಿದ್ದಾರೆ.

Belekeri Iron ore case: ಅಕ್ರಮವಾಗಿ ಅದಿರು ಸಾಗಣೆ ಪ್ರಕರಣ; ಶಾಸಕ ಸತೀಶ್‌ ಸೈಲ್‌ ವೈದ್ಯಕೀಯ ಜಾಮೀನು ನ.20ರವರೆಗೆ ವಿಸ್ತರಣೆ

ಶಾಸಕ ಸತೀಶ್‌ ಸೈಲ್‌ ವೈದ್ಯಕೀಯ ಜಾಮೀನು ನ.20ರವರೆಗೆ ವಿಸ್ತರಣೆ

MLA Satish Sail: ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟ ಆರೋಪಕ್ಕೆ ಸಂಬಂಧಿಸಿ ಇಡಿ ದಾಖಲಿಸಿರುವ ಪ್ರಕರಣದಲ್ಲಿ ಶಾಸಕ ಸತೀಶ್‌ ಸೈಲ್‌ ಅವರಿಗೆ ನ.13ರವರೆಗೆ ಮಧ್ಯಂತರ ವೈದ್ಯಕೀಯ ಜಾಮೀನನ್ನು ಹೈಕೋರ್ಟ್‌ ವಿಸ್ತರಿಸಿತ್ತು. ಇದೀಗ ಮತ್ತೆ ಜಾಮೀನು ವಿಸ್ತರಿಸಲಾಗಿದೆ.

ಎಲ್ಲರೆದುರೇ ರಶ್ಮಿಕಾ ಕೈಗೆ ಮುತ್ತಿಟ್ಟ ನಟ ವಿಜಯ್ ದೇವರಕೊಂಡ- ವಿಡಿಯೊ ವೈರಲ್

ರಶ್ಮಿಕಾ ಕೈಗೆ ಮುತ್ತಿಟ್ಟ ನಟ ವಿಜಯ್ ದೇವರಕೊಂಡ

Vijay Deverakonda And Rashmika Mandanna: ನಟಿ ರಶ್ಮಿಕಾ ಅಭಿನಯದ ದಿ ಗರ್ಲ್ ಫ್ರೆಂಡ್ ಸಿನಿಮಾದ ಸಕ್ಸಸ್ ಪಾರ್ಟಿಗೆ ನಟ ವಿಜಯ್ ದೇವರಕೊಂಡ ಆಗಮಿಸಿದ್ದಾರೆ‌. ಈ ವೇಳೆ ವೇದಿಕೆ ಬಳಿಯಲ್ಲಿಯೇ ರಶ್ಮಿಕಾ ಕೈಗೆ ವಿಜಯ್ ಮುತ್ತು ಕೊಟ್ಟಿದ್ದ ವಿಡಿಯೋ ಒಂದು ಸೋಶಿಯಲ್ ‌ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Menstrual Leave Eligibility: ಮಹಿಳೆಯರಿಗೆ ಮಾಸಿಕ 1 ದಿನ ಋತುಚಕ್ರ ರಜೆ, ಷರತ್ತುಗಳು ಅನ್ವಯ

ಮಹಿಳೆಯರಿಗೆ ಮಾಸಿಕ 1 ದಿನ ಋತುಚಕ್ರ ರಜೆ, ಷರತ್ತುಗಳು ಅನ್ವಯ

Karnatka Menstrual Leave Policy 2025: ಮಹಿಳಾ ನೌಕರರು ಆಯಾ ತಿಂಗಳ ಋತುಚಕ್ರ ರಜೆಯನ್ನು ಆಯಾ ತಿಂಗಳಿನಲ್ಲಿಯೇ ಬಳಸಿಕೊಳ್ಳುವುದು. ಹಿಂದಿನ ತಿಂಗಳ ಋತುಚಕ್ರ ರಜೆಯನ್ನು ಮುಂದಿನ ತಿಂಗಳಿಗೆ ವಿಸ್ತರಿಸಲು ಅವಕಾಶವಿರುವುದಿಲ್ಲ. ಪ್ರತಿ ತಿಂಗಳು ಒಂದು ದಿನದ ʼಋತುಚಕ್ರ ರಜೆʼ ಪಡೆಯಲು ಮಹಿಳಾ ನೌಕರರು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸುವ ಅವಶ್ಯಕತೆ ಇರುವುದಿಲ್ಲ. ಖಾಯಂ, ಗುತ್ತಿಗೆ, ಹೊರಗುತ್ತಿಗೆ ಎಲ್ಲಾ ಮಾದರಿಯ ಆಧಾರದಲ್ಲಿ ಕೆಲಸ ಮಾಡುವ ಮಹಿಳೆಯರಿಗೂ ಇದು ಅನ್ವಯವಾಗಲಿದೆ.

Gold price today on 13th November 2025: ಚಿನ್ನದ ದರದಲ್ಲಿ ಭಾರೀ ಏರಿಕೆ; ಸ್ವರ್ಣಪ್ರಿಯರಿಗೆ ಶಾಕ್‌!

ಚಿನ್ನದ ದರದಲ್ಲಿ ಭಾರೀ ಏರಿಕೆ; ಸ್ವರ್ಣಪ್ರಿಯರಿಗೆ ಶಾಕ್‌!

Gold and Silver price today: ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 210ರೂ. ಏರಿಕೆ ಕಂಡು ಬಂದಿದ್ದು, 11,715 ರೂ. ಗೆ ತಲುಪಿದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 229 ರೂ. ಏರಿಕೆಯಾಗಿ, 12,780 ರೂ ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 92,720 ರೂ. ಬಾಳಿದರೆ, 10 ಗ್ರಾಂಗೆ ನೀವು 1,17,150 ಹಾಗೂ 100 ಗ್ರಾಂಗೆ 11,70,500 ರೂ., ನೀಡಬೇಕಾಗುತ್ತದೆ.

Delhi Blast: ದೆಹಲಿ ಕಾರು ಸ್ಫೋಟಕ್ಕೆ ಸಂಬಂಧಿಸಿ ತುಮಕೂರಿನಲ್ಲಿ ಮಾಜಿ ಉಗ್ರನ ವಿಚಾರಣೆ

ದೆಹಲಿ ಕಾರು ಸ್ಫೋಟಕ್ಕೆ ಸಂಬಂಧಿಸಿ ತುಮಕೂರಿನಲ್ಲಿ ಮಾಜಿ ಉಗ್ರನ ವಿಚಾರಣೆ

Tumakuru news: ಮಾಜಿ ಉಗ್ರನನ್ನು 2016ರಲ್ಲಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಬಳಿಕ 6 ವರ್ಷಗಳ ಕಾಲ ತಿಹಾರ್ ಜೈಲಿನಲಿದ್ದ. ಖಲಿಫತ್ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಈತ, ಸಂಘಟನೆ ಮುಖಂಡರಿಗೆ ತುಮಕೂರಿನಲ್ಲಿ ಸಭೆಗೆ ಅವಕಾಶ ಮಾಡಿ, ಅದರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಸದ್ಯ ದೆಹಲಿ ಪ್ರಕರಣ ಸಂಬಂಧ ಉಗ್ರನ ವಿಚಾರಣೆ ಮಾಡಲಾಗಿದೆ. ಪ್ರಕರಣದಲ್ಲಿ ಈತನ ಪಾತ್ರವಿಲ್ಲ ಎಂದು ತಿಳಿದುಬಂದಿದ್ದು, ಬಿಟ್ಟುಕಳುಹಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ನಯನತಾರಾ ದಂಪತಿ, ಸರ್ಪಸಂಸ್ಕಾರದಲ್ಲಿ ಭಾಗಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ವಿಧಿ ನೆರವೇರಿಸಿದ ನಯನತಾರಾ ದಂಪತಿ

Kukke Subrahmanya Temple: ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಿನಿಮಾ ಹಾಗೂ ಕ್ರಿಕೆಟ್‌ನ ಸೆಲೆಬ್ರಿಟಿಗಳು ಆಗಾಗ ಆಗಮಿಸುತ್ತಿರುತ್ತಾರೆ. ಕೆಲ ತಿಂಗಳ ಹಿಂದೆ ಬಾಲಿವುಡ್ ನಟಿ ಕತ್ರಿನಾ ಕೈಫ್‌ ತಮ್ಮ ಗಂಡ ವಿಕ್ಕಿ ಕೌಶಲ್‌ ಜೊತೆಗೆ ಆಗಮಿಸಿ ಸರ್ಪಸಂಸ್ಕಾರ ಪೂಜೆ ನೆರವೇರಿಸಿದ್ದರು. ಆ ಬಳಿಕ ಅವರು ಗರ್ಭಿಣಿಯಾಗಿದ್ದರು. ಸಂತಾನಫಲದ ಸಮಸ್ಯೆಯನ್ನು ಹೊಂದಿದವರಿಗೆ ಕುಕ್ಕೆ ಸುಬ್ರಹ್ಮಣ್ಯದ ಭೇಟಿಗೆ ಜ್ಯೋತಿಷಿಗಳು ಸೂಚಿಸುವುದು ಸಾಮಾನ್ಯವಾಗಿದೆ. ಸಚಿನ್‌ ತೆಂಡುಲ್ಕರ್‌, ಶಿಲ್ಪಾ ಶೆಟ್ಟಿ ಮೊದಲಾದವರೆಲ್ಲ ಇಲ್ಲಿಗೆ ಭೇಟಿ ನೀಡಿದ್ದಾರೆ.

Chikkaballapur News: ಸಚಿವ ಸಮೀರ್ ಅಹ್ಮದ್ ಮತ್ತು ಸಹಚರರ ವಿರುದ್ಧ ತೀವ್ರ ಆಕ್ರೋಶ : ಪ್ರಮೋದ್ ಮುತಾಲಿಕ್ ಸಾಥ್

ಕೋಡಿಹಳ್ಳಿ ಬಣದ ರೈತಸಂಘದಿಂದ ಮೆಕ್ಕೆಜೋಳ ಬೆಳೆದ ರೈತರ ಪರವಾಗಿ ಪ್ರತಿಭಟನೆ

ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ವ್ಯಾಪ್ತಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ನಿಗದಿ ಪಡಿಸಿರುವ ಜಮೀನುಗಳಲ್ಲಿ ಯಥೇಚ್ಛವಾಗಿ ಹಿಪ್ಪು ನೇರಳೆ ಸೇರಿ ಬೆಳೆಯುತ್ತಿದ್ದಾರೆ. ಆದರೆ ಇದೀಗ ಹಿಪ್ಪುನೇರಳೆ ಬೆಳೆಗಳನ್ನು ನಾಶ ಮಾಡಿ ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಚಾಲನೆ ನೀಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ.

Viral News: ಬೆಂಗಳೂರಿನ ಫ್ಲೈಓವರ್‌ ಕಂಬದಲ್ಲಿ ವ್ಯಕ್ತಿಯ ವಾಸ್ತವ್ಯ, ಸಿಟಿ ಜನ ಶಾಕ್!

ಬೆಂಗಳೂರಿನ ಫ್ಲೈಓವರ್‌ ಕಂಬದಲ್ಲಿ ವ್ಯಕ್ತಿಯ ವಾಸ್ತವ್ಯ, ಸಿಟಿ ಜನ ಶಾಕ್!

Bengaluru news: ಈ ವಿಲಕ್ಷಣ ದೃಶ್ಯ ತಕ್ಷಣವೇ ದೊಡ್ಡ ಜನಸಮೂಹವನ್ನು ಸೆಳೆದಿದೆ. ಜನ ಇದನ್ನು ನಂಬಲಾಗದವರಂತೆ ಸುತ್ತಲೂ ಜಮಾಯಿಸಿ ವೀಕ್ಷಿಸಿದ್ದಾರೆ. ಆ ವ್ಯಕ್ತಿ ಅಷ್ಟೊಂದು ಎತ್ತರದ ಜಾಗಕ್ಕೆ ಯಾವುದೇ ಏಣಿಯಂಥ ಆಧಾರವಿಲ್ಲದೆ ಹೇಗೆ ಹತ್ತಿದ, ಅಲ್ಲಿ ಹೇಗೆ ಇದ್ದಾನೆ ಎಂಬುದು ಆಶ್ಚರ್ಯಕರವಾಗಿದೆ. ತನ್ನ ಸುತ್ತಮುತ್ತ ನಡೆಯುತ್ತಿರುವ ಯಾವುದೇ ಗದ್ದಲ ಆತನನ್ನು ಚಿಂತೆಗೀಡು ಮಾಡಿಲ್ಲ. ಪಾರಿವಾಳಗಳು ಮಾತ್ರ ಇರಬಹುದಾದ ಜಾಗದಲ್ಲಿ ಈತ ಹೇಗೆ ಬಂದ ಎಂಬುದು ಕುತೂಹಲ ಮೂಡಿಸಿದೆ.

G Parameshwara: ಗೃಹ ಸಚಿವರಿಗೆ ಅವಹೇಳನ, ಚಿಕ್ಕಮಗಳೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಂಧನ

ಗೃಹ ಸಚಿವರಿಗೆ ಅವಹೇಳನ, ಚಿಕ್ಕಮಗಳೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಂಧನ

ಬಂಧನದ ವೇಳೆ ಚಿಕ್ಕಮಗಳೂರು (Chikkamagaluru News) ನಗರದಲ್ಲಿರುವ ಮಾರ್ಕೆಟ್ ರಸ್ತೆಯಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಕಂಡಿತು. ಸಂತೋಷ್ ಕೋಟ್ಯಾನ್ ಅವರನ್ನು ಪೊಲೀಸ್ ಜೀಪ್‌ಗೆ ಕರೆದೊಯ್ಯುವ ವೇಳೆ ಬಿಜೆಪಿ ಕಾರ್ಯಕರ್ತರು ಅಡ್ಡಬಂದಿದ್ದು, ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ನೂಕಾಟ ತಳ್ಳಾಟ ನಡೆಯಿತು. ಸಂತೋಷ್ ಬಂಧನ ಖಂಡಿಸಿ ನಗರ ಠಾಣೆ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸರು ಠಾಣೆ ಪ್ರದೇಶದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.

Karnataka Weather: ಇಂದಿನ ಹವಾಮಾನ; ಮೈಸೂರು ಸೇರಿ ಈ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

ಇಂದಿನ ಹವಾಮಾನ; ಮೈಸೂರು ಸೇರಿ ಈ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಡಿಗ್ರಿ ಸೆ. ಮತ್ತು 19 ಡಿಗ್ರಿ ಸೆ. ಇರಲಿದೆ.

CM Siddaramaiah: ಕುಖ್ಯಾತ ರೌಡಿಯಿಂದ ನನಗೆ ಜೀವ ಬೆದರಿಕೆ ಬಂದಿತ್ತು: ಸಿಎಂ ಸಿದ್ದರಾಮಯ್ಯ

ಕುಖ್ಯಾತ ರೌಡಿಯಿಂದ ನನಗೆ ಜೀವ ಬೆದರಿಕೆ ಬಂದಿತ್ತು: ಸಿಎಂ ಸಿದ್ದರಾಮಯ್ಯ

ಕುರುಬರ ಸಂಘ ಮತ್ತು ಕುರುಬ ಸಮಾಜದ ಪೀಠವನ್ನು ಉಳಿಸಿದ್ದು ನಾನು. ರಾಜ್ಯ ಸುತ್ತಿ ಸಮಾಜದ ಸಂಘಟಿಸಿದ್ದು ನಾನು, ಮುಕುಡಪ್ಪ, ಮಾಸ್ತಿ ಮತ್ತು ಇತರರು. ಆಮೇಲೆ ವಿಶ್ವನಾಥ್ ಅವರನ್ನು ಪೀಠದ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ್ದು ನಾನು. ಈಗ ವಿಶ್ವನಾಥ್ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಆದ್ದರಿಂದ ಇಡೀ ಸಮಾಜ ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ಹೇಳಿದ್ದಾರೆ.

Loading...