ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Chikkaballapur news: ಬಾಗೇಪಲ್ಲಿಯಲ್ಲಿ ಸಂಭ್ರಮದ ನಾಗರ ಪಂಚಮಿ, ಹುತ್ತಕ್ಕೆ ಹಾಲೆರೆದು ಮಹಿಳೆಯರಿಂದ ಪೂಜೆ

ಸಂಭ್ರಮದ ನಾಗರ ಪಂಚಮಿ, ಹುತ್ತಕ್ಕೆ ಹಾಲೆರೆದು ಮಹಿಳೆಯರಿಂದ ಪೂಜೆ

ಮನೆಯಲ್ಲಿಯೇ ಸಿದ್ಧಪಡಿಸಿದ ತಂಬಿಟ್ಟಿನ ಉಂಡಿ, ಕಡಲೆ ಉಂಡಿ, ಶೇಂಗಾ ಉಂಡಿ, ಅಂಟ ಉಂಡಿ, ಎಳ್ಳು ಉಂಡಿ,ಬೆಲ್ಲ ನೆನೆಸಿದ ಅಕ್ಕಿ ಮೊದಲಾದ ಖಾದ್ಯ ಗಳನ್ನು ತಯಾರಿಸಿ ನೈವೇದ್ಯ ಮಾಡಿ ದೇವರಿಗೆ ಸಮರ್ಪಿಸಿ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಹುತ್ತಕ್ಕೆ ಕಲ್ಲಿನ ನಾಗಪ್ಪನಿಗೆ ಹಾಲೆರೆಯುವ ಮೂಲಕ ನಾಗರ ಪಂಚಮಿ ಹಬ್ಬ ಆಚರಿಸಿದರು.

Nagara Panchami: ನಾಗರಪಂಚಮಿ ಅಂಗವಾಗಿ ಹುತ್ತ ಮತ್ತು ಸುಬ್ರಹ್ಮಣ್ಯ ದೇವಾಲಯಗಳಲ್ಲಿ ವಿಶೇಷ ಪೂಜೆ

ಹುತ್ತ ಮತ್ತು ಸುಬ್ರಹ್ಮಣ್ಯ ದೇವಾಲಯಗಳಲ್ಲಿ ವಿಶೇಷ ಪೂಜೆ

ನಾಗ ಶ್ರೀಸುಬ್ರಹ್ಮಣ್ಯಸ್ವಾಮಿ ಒಂದು ಪ್ರತೀಕವಾಗಿದೆ. ಈದಿನ ನಾಗ ದೇವರಿಗೆ ಪೂಜಿಸಿದರೆ ಸಂತಾನ ಭಾಗ್ಯ, ವಿವಾಹ ದೋಷ ಪರಿಹಾರ, ರೋಗರುಜಿನ ನಿವಾರಣೆಯಾಗಿ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯಲಿದೆ ಎಂಬ ನಂಬಿಕೆ ಇದೆ. ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯಿತು.

ನಾಗರ ಪಂಚಮಿ 2025: ಈಶಾ ಸದ್ಗುರು ಸನ್ನಿಧಿಯ ನಾಗ ಮಂಟಪದಲ್ಲಿ ಪವಿತ್ರ ಅರ್ಪಣೆಗಳು ಮತ್ತು ಆಚರಣೆಗಳು

ನಾಗ ಮಂಟಪದಲ್ಲಿ ಪವಿತ್ರ ಅರ್ಪಣೆಗಳು ಮತ್ತು ಆಚರಣೆಗಳು

ನಾಗ ಪಂಚಮಿಯ ಶುಭ ಸಂದರ್ಭದಲ್ಲಿ, ಸದ್ಗುರು ಸನ್ನಿಧಿಯ ಸುತ್ತಲಿನ ಹಳ್ಳಿಗಳ ನೂರಾರು ಜನರು ಸದ್ಗುರುಗಳಿಂದ ಪ್ರತಿಷ್ಠಿತಗೊಂಡ ನಾಗ ಹಾಗೂ ಯೋಗೇಶ್ವರ ಲಿಂಗಕ್ಕೆ ಹಾಲನ್ನು ಸಮರ್ಪಿಸಿ ಅಭಿಷೇಕ ಮಾಡಿದರು. ತುಂಬಿದ ಹಾಲಿನ ಬಿಂದಿಗೆಗಳನ್ನು, ಮಕ್ಕಳಿಂದ ದೊಡ್ಡವ ರವರೆಗೆ ತಮ್ಮ ಹಳ್ಳಿಗಳಿಂದ ಶೋಭಾಯಾತ್ರೆಯ ಮೂಲಕ  ತಂದು, ಅದನ್ನು ನಾಗ ಹಾಗೂ ಯೋಗೇಶ್ವರ ಲಿಂಗದ ಸನ್ನಿಧಿಯಲ್ಲಿ ಸಮರ್ಪಿಸಿದರು.

ಬೆಂಗಳೂರಿನಲ್ಲಿ ಭಕ್ತಿಯ ಹೊಳೆ ಹರಿಸಿದ ಕೃಷ್ಣ- ಮ್ಯೂಸಿಕ್, ಬ್ಲಿಸ್ ಮತ್ತು ಬಿಯಾಂಡ್‌ ಕಾರ್ಯಕ್ರಮ

ಕೃಷ್ಣ- ಮ್ಯೂಸಿಕ್, ಬ್ಲಿಸ್ ಮತ್ತು ಬಿಯಾಂಡ್‌ ಕಾರ್ಯಕ್ರಮ

ಅಮೇಯಾ ಡಬ್ಲಿ ಅವರ 25 ಅದ್ಭುತ ಕಲಾವಿದರ ತಂಡ ಮೊದಲ ಬಾರಿಗೆ ಬೆಂಗಳೂರಿನಲ್ಲಿ ತಮ್ಮ ಅಭೂತಪೂರ್ವ ಸಂಗೀತ ಕಾರ್ಯಕ್ರಮದ ಮೂಲಕ ಶ್ರೀ ಕೃಷ್ಣ ಭಕ್ತರನ್ನು ಭಕ್ತಿಯ ಅಲೆಯಲ್ಲಿ ಮುಳು ಗಿಸಿದರು. ಸಂಗೀತ, ಭಕ್ತಿ ಮತ್ತು ಭಾವನೆಗಳನ್ನು ಸರಾಗವಾಗಿ ಬೆರೆಸುವುದಕ್ಕೆ ಹೆಸರುವಾಸಿಯಾಗಿದ್ದ ಅವರು ಕೇವಲ ಸಂಗೀತ ಕಚೇರಿಯನ್ನು ನೀಡಲಿಲ್ಲ

ಗಾರ್ಡನ್‌ ಸಿಟಿಗೆ ಹಸಿರು ತಂದ ಸತ್ತ್ವ ಗ್ರೂಪ್‌: 1,077 ಪ್ರೀಮಿಯಂ ಮನೆಗಳೊಂದಿಗೆ ಸತ್ತ್ವ ಅರ್ಬಾನಾ ಲೋಕಾರ್ಪಣೆ

1,077 ಪ್ರೀಮಿಯಂ ಮನೆಗಳೊಂದಿಗೆ ಸತ್ತ್ವ ಅರ್ಬಾನಾ ಲೋಕಾರ್ಪಣೆ

ಸತ್ತ್ವ ವಸಂತ ಸ್ಕೈ 16 ಎಕರೆ ವಿಸ್ತೀರ್ಣದಲ್ಲಿ 13 ಎಕರೆ ಮುಕ್ತ ಜಾಗವನ್ನು ಹೊಂದಿದೆ. ಈ ಅಭಿವೃದ್ಧಿ ಯು ಮೂರು ವಾಸ್ತುಶಿಲ್ಪದ ಗೋಪುರಗಳ ಒಳಗೆ ಇರಿಸಲಾಗಿರುವ 1,077 ಸೂಕ್ಷ್ಮವಾಗಿ ರಚಿಸಲಾದ ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದೆ. ಇದನ್ನು ಹಸಿರು ಓಯಸಿಸ್ ಆಗಿ ವಿನ್ಯಾಸಗೊಳಿಸಲಾಗಿದೆ. ಆಧುನಿಕ ನಗರ ಜೀವನವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಸಹಬಾಳ್ವೆ ನಡೆಸುತ್ತದೆ.

ದಂಪತಿಗಳಲ್ಲಿ ಸಮಾನತೆ ಸೃಷ್ಟಿಸುವ  “ನೇಮ್‌ಪ್ಲೇಟ್‌” ಅಭಿಯಾನ ಪ್ರಾರಂಭಿಸಿದ ಸನ್‌ಫೀಸ್ಟ್‌ ಮಾರಿಲೈಟ್‌: ನಟಿ ಜ್ಯೋತಿಕ ಮೂಲಕ ಸಂದೇಶ

ಸನ್‌ಫೀಸ್ಟ್‌ ಮಾರಿಲೈಟ್‌ “ನೇಮ್‌ಪ್ಲೇಟ್‌” ಅಭಿಯಾನ ಪ್ರಾರಂಭ

ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕದ ಮೂರರಲ್ಲಿ ಎರಡಷ್ಟು ಮನೆಗಳಲ್ಲಿ ತಮ್ಮ ಮನೆಯ ನೇಮ್‌ಪ್ಲೇಟ್‌ಗಳಲ್ಲಿ ಗಂಡ-ಹೆಂಡತಿ ಇಬ್ಬರೂ ಹೆಸರೂ ಇದೆ, ಉಳಿದಂತೆ ಕೇವಲ ಗಂಡನ ಹೆಸರಷ್ಟೇ ಇದೆ. ಸುಖ ಸಂಸಾರ ಸಾಗಿಸುವ ಈ ಜೀವನದಲ್ಲಿ ಗಂಡ-ಹೆಂಡತಿ ಇಬ್ಬರೂ ಸಮಾನವಾಗಿ ಜವಾಬ್ದಾರಿ ಹೊತ್ತಿರುತ್ತಾರೆ. ಮನೆ ಮುಂಭಾಗದ ನೇಮ್‌ಪ್ಲೇಟ್ ನಂತಹ ಸಣ್ಣ ವಿಷಯಗಳಲ್ಲೂ ಸಮಾನತೆ ಹೊಂದದೇ ಹೋದರೆ ಹೇಗೆ? ಹೀಗಾಗಿ ಸನ್‌ಫೀಸ್ಟ್‌ ಮಾರಿ ಲೈಟ್‌ ಇಂತಹ ಸಣ್ಣ ವಿಷಯಗಳಲ್ಲೂ ದಂಪತಿಗಳ ನಡುವೆ ಪ್ರೀತಿ ಹೆಚ್ಚಿಸುವ ನಿಟ್ಟಿನಲ್ಲಿ ನಾವು ಈ ಉಪಕ್ರಮ ತಂದಿದ್ದೇವೆ

ಚರ್ಮ, ಕೂದಲು-ಕಸಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ನಕಲಿ ತಜ್ಞರನ್ನು ನಿಯಂತ್ರಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒತ್ತಾಯ

ನಕಲಿ ತಜ್ಞರನ್ನು ನಿಯಂತ್ರಿಸುವಂತೆ ಒತ್ತಾಯ

ಐಎಡಿವಿಎಲ್-ಕೆಎನ್ನ ಅಂಟಿಕ್ವ್ಯಾಕರಿ ಮತ್ತು ಕಾನೂನು ವಿಭಾಗವು ಕರ್ನಾಟಕದಾದ್ಯಂತ 65 ಕ್ಕೂ ಅಧಿಕ ನಕಲಿ ಚರ್ಮ ಕ್ಲಿನಿಕ್ಗಳ ಬಗ್ಗೆ ಸ್ಪಷ್ಟ ದಾಖಲೆಗಳನ್ನು ಸಂಗ್ರಹಿಸಿದೆ. ಈ ಚರ್ಮ ಕ್ಲಿನಿಕ್‌ ಗಳನ್ನು, ದಂತಚಿಕಿತ್ಸಕರು, ಬ್ಯೂಟಿಷಿಯನ್‌ಗಳು, ಸ್ಥಳೀಯ ಧಾರಾವಾಹಿ ನಟಿಯರು ಹಾಗೂ ಕೇವಲ ಹತ್ತನೇ ಅಥವಾ ಹನ್ನೆರಡನೇ ತರಗತಿವರೆಗೆ ಶಿಕ್ಷಣ ಪಡೆದ ವ್ಯಕ್ತಿಗಳು ನಕಲಿ ಪ್ರಮಾಣಪತ್ರ ಗಳು ಹಾಗೂ ಮಾನ್ಯತೆ ಇಲ್ಲದ ಪದವಿಗಳನ್ನು ಬಳಸಿ ನಡೆಸುತ್ತಿದ್ದಾರೆ ಎಂದು ನಿಯೋಗ ಆರೋ ಪಿಸಿದೆ.

Mantralaya Raghavendra Swamy Matha: ಮಂತ್ರಾಲಯ ಹುಂಡಿ ಎಣಿಕೆ; ದಾಖಲೆಯ ಕಾಣಿಕೆ, ಚಿನ್ನ- ಬೆಳ್ಳಿ ಸಂಗ್ರಹ

ಮಂತ್ರಾಲಯ ಹುಂಡಿ ಎಣಿಕೆ; ದಾಖಲೆಯ ಕಾಣಿಕೆ, ಚಿನ್ನ- ಬೆಳ್ಳಿ ಸಂಗ್ರಹ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹುಂಡಿ ಎಣಿಕೆ ಕಾರ್ಯ ಮಾಡಲಾಗಿದ್ದು, ಒಟ್ಟು 5,46,06,555 ರೂ. ನಗದು ಕಾಣಿಕೆ ಮತ್ತು 127 ಗ್ರಾಂ ಚಿನ್ನ ಹಾಗೂ 1,820 ಗ್ರಾಂ ಬೆಳ್ಳಿ ಕಾಣಿಕೆಯನ್ನು ಭಕ್ತರು ಸಮರ್ಪಿಸಿದ್ದಾರೆ ಎಂದು ಶ್ರೀಮಠದ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸ ರಾವ್ ತಿಳಿಸಿದ್ದಾರೆ.

Bellary News: ಬಳ್ಳಾರಿಯಲ್ಲಿ ಕಸದ ವಾಹನ ಹರಿದು 3 ವರ್ಷದ ಬಾಲಕ ಸಾವು

ಬಳ್ಳಾರಿಯಲ್ಲಿ ಕಸದ ವಾಹನ ಹರಿದು 3 ವರ್ಷದ ಬಾಲಕ ಸಾವು

Bellary News: ಬಳ್ಳಾರಿಯ ಬಾಪೂಜಿ ನಗರದಲ್ಲಿ ಘಟನೆ ನಡೆದಿದೆ. ರಸ್ತೆ ಬದಿ ಆಟ ಆಡುತ್ತಿದ್ದ ಬಾಲಕನ ತಲೆ ಮೇಲೆ ವಾಹನ ಹರಿದು ದುರಂತ ನಡೆದಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪಾಲಿಕೆ ಮೇಯರ್ ನಂದೀಶ್ ಹಾಗೂ ಪೊಲೀಸರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ACP Daya Nayak: ಸಹಾಯಕ ಪೊಲೀಸ್ ಆಯುಕ್ತರಾಗಿ ಬಡ್ತಿ ಪಡೆದ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್

ಎಸಿಪಿಯಾಗಿ ಬಡ್ತಿ ಪಡೆದ ದಯಾ ನಾಯಕ್

ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಗ್ರಾಮದವರಾದ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರಿಗೆ ಸಹಾಯಕ ಪೊಲೀಸ್ ಆಯುಕ್ತರನ್ನಾಗಿ ಬಡ್ತಿ ನೀಡಲಾಗಿದೆ. ಮಹಾರಾಷ್ಟ್ರ ಗೃಹ ಇಲಾಖೆಯ ಆದೇಶದ ಮೇರೆಗೆ ಹಿರಿಯ ಇನ್ಸ್‌ಪೆಕ್ಟರ್‌ಗಳಾದ ಜೀವನ್ ಖರತ್, ದೀಪಕ್ ದಳವಿ ಮತ್ತು ಪಾಂಡುರಂಗ ಪವಾರ್ ಅವರಿಗೂ ಎಸಿಪಿಯನ್ನಾಗಿ ಮಾಡಲಾಗಿದೆ.

ಉಚಿತ ನೇತ್ರ ತಪಾಸಣೆ ಶಿಬಿರ

ಉಚಿತ ನೇತ್ರ ತಪಾಸಣೆ ಶಿಬಿರ

ಕಣ್ಣು ಮಾನವನ ಅತೀ ಸೂಕ್ಷ್ಮವಾದ ಅಂಗ. ಇದನ್ನು ಅತಿ ಜಾಗರೂಕತೆಯಿಂದ ಕಾಪಾಡಿ ಕೊಳ್ಳಬೇಕು. ನಮ್ಮ ಸೇವಾ ಸಂಸ್ಥೆಯು ಸತತ 27 ವರ್ಷಗಳಿಂದ ನಿರಂತರವಾಗಿ ವಿವಿಧ ಕಾರ್ಯ ಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. 8 ಲಕ್ಷ ಕುಟುಂಬಗಳಿಗೆ ಸಾಮಾಜಿಕವಾಗಿ ಸ್ಪಂದಿಸಿದ್ದೇವೆ. ಉಚಿತ ನೇತ್ರ ತಪಾಸಣ ಶಿಬಿರ ಮಾಡಿ ಸಾವಿರಾರು ಮಂದಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗಿದೆ.

KSRTC Bus: ಕೆಎಸ್‌ಆರ್‌ಟಿಸಿಯಲ್ಲಿ ನೂತನ ಲಗೇಜ್ ನಿಯಮ ಜಾರಿಯಾಗಿಲ್ಲ: ನಿಗಮ ಸ್ಪಷ್ಟನೆ

ಕೆಎಸ್‌ಆರ್‌ಟಿಸಿಯಲ್ಲಿ ನೂತನ ಲಗೇಜ್ ನಿಯಮ ಜಾರಿಯಾಗಿಲ್ಲ: ನಿಗಮ ಸ್ಪಷ್ಟನೆ

Luggage Guidelines: ಕೆಎಸ್‌ಆರ್‌ಟಿಸಿಯಲ್ಲಿ ನೂತನ ಲಗೇಜ್ ನಿಯಮ ಜಾರಿ ಎಂದು ಸಾಮಾಜಿಕ‌ ಜಾಲತಾಣ ಮತ್ತು ಕೆಲವೊಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಹೀಗಾಗಿ ಕೆಎಸ್‌ಆರ್‌ಟಿಸಿ ನಿಗಮದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. 2022ರ ಅ. 28 ನಂತರ ಯಾವುದೇ ಹೊಸ ಲಗೇಜ್ ನಿಯಮ / ಸುತ್ತೋಲೆಯನ್ನು ನಿಗಮದಲ್ಲಿ ಜಾರಿಗೆ ತಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Karnataka Rains: ಹವಾಮಾನ ವರದಿ; ನಾಳೆ ರಾಜ್ಯದ ಈ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಸಾಧ್ಯತೆ!

ನಾಳೆ ರಾಜ್ಯದ ಈ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಸಾಧ್ಯತೆ!

Weather Forecast: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27°C ಮತ್ತು 19°C ಇರುವ ಸಾಧ್ಯತೆ ಇದೆ.

DK Shivakumar: ಶಾಸಕರ ಜತೆ ಸಿಎಂ ಸಭೆ; ಅದರಲ್ಲಿ ತಪ್ಪೇನಿದೆ ಎಂದ ಡಿ.ಕೆ.ಶಿವಕುಮಾರ್

ಶಾಸಕರ ಜತೆ ಸಿಎಂ ಸಭೆ; ಅದರಲ್ಲಿ ತಪ್ಪೇನಿದೆ ಎಂದ ಡಿ.ಕೆ.ಶಿವಕುಮಾರ್

DK Shivakumar: ಉಪಮುಖ್ಯಮಂತ್ರಿಗಳನ್ನು ಸಿಎಂ ಕಡೆಗಣಿಸಿದ್ದಾರೆ ಎನ್ನುವ ಬಿಜೆಪಿ ಟೀಕೆಯ ಬಗ್ಗೆ ಡಿಸಿಎಂ ಡಿಕೆಶಿ ಅವರು ಪ್ರತಿಕ್ರಿಯಿಸಿ, ಅವರು ಮೊದಲು ಅವರ ಮನೆಯನ್ನು ಸರಿ ಮಾಡಿಕೊಳ್ಳಲಿ. ಅವರ ಪಕ್ಷ, ಮನೆಯೇ ಅಸ್ತವ್ಯಸ್ತವಾಗಿದೆ. ಅವರ ಪಕ್ಷದ ಒಳಗೆ ಅನೇಕ ಮೇಲಾಟಗಳು ನಡೆಯುತ್ತಿವೆ. ಅವರ ಪಕ್ಷದ ನಾಯಕರ ಹೇಳಿಕೆಗಳನ್ನು ಎಲ್ಲರೂ ನೋಡಿದ್ದಾರೆ ಎಂದು ಟೀಕಿಸಿದ್ದಾರೆ.

Actor Pratham: ಫಿಲ್ಮ್‌ ಚೇಂಬರ್‌ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ ನಟ ಪ್ರಥಮ್‌; ದರ್ಶನ್‌ ಸ್ಪಷ್ಟನೆಗೆ ಒತ್ತಾಯ

ಫಿಲ್ಮ್‌ ಚೇಂಬರ್‌ ಎದುರು ಉಪವಾಸ ಸತ್ಯಾಗ್ರಹ ಕುಳಿತ ನಟ ಪ್ರಥಮ್‌

Actor Pratham: ತಮ್ಮ ಮೇಲೆ ಹಲ್ಲೆಗೆ ಯತ್ನ ಹಾಗೂ ಕೊಲೆ ಬೆದರಿಕೆಯ ಹಿನ್ನೆಲೆಯಲ್ಲಿ ನಟ ಪ್ರಥಮ್ ದೂರು ನೀಡಿದ್ದರು. ಬೇಕರಿ ರಘು ಮತ್ತು ಗ್ಯಾಂಗ್ ವಿರುದ್ಧ ದೂರು ಸಲ್ಲಿಕೆಯಾಗಿತ್ತು. ನನ್ನ ಮೇಲೆ ನಡೆದಿರುವ ಹಲ್ಲೆಗೆ ನಟ ದರ್ಶನ್‌ ಸ್ಪಷ್ಟನೆ ನೀಡಬೇಕು. ನನಗೆ ಹೆಚ್ಚು ಕಡಿಮೆಯಾದರೆ ನೀವೇ ಹೊಣೆ ಎಂದು ನಟ ದರ್ಶನ್‌ಗೆ ಪ್ರಥಮ್‌ ಎಚ್ಚರಿಕೆ ನೀಡಿದ್ದಾರೆ.

Sridevi Byrappa: ತಮ್ಮ ಕುಟುಂಬದ ಮಹಿಳೆಗೆ ಅನ್ಯಾಯವಾದಾಗ ನೀವು ಏನು ಮಾಡುತ್ತಿದ್ರಿ?; ರಮ್ಯಾ ಪರ ನಿಂತ ನಟ ಶಿವಣ್ಣ, ವಿನಯ್‌ಗೆ ಯುವ ಪತ್ನಿ ಶ್ರೀದೇವಿ ಪ್ರಶ್ನೆ

ರಮ್ಯಾ ಪರ ನಿಂತ ಶಿವಣ್ಣ, ವಿನಯ್‌ ವಿರುದ್ಧ ಯುವ ಪತ್ನಿ ಶ್ರೀದೇವಿ ಅಸಮಾಧಾನ!

Sridevi Byrappa: ಅಸಭ್ಯ ಕಮೆಂಟ್‌ ಮಾಡಿದ್ದರಿಂದ ದರ್ಶನ್‌ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ದೂರು ನೀಡಿದ್ದರು. ಈ ವಿಚಾರದಲ್ಲಿ ರಮ್ಯಾಗೆ ನಟ ಶಿವರಾಜ್‌ ಕುಮಾರ್‌, ವಿನಯ್‌ ರಾಜ್‌ಕುಮಾರ್‌ ಬೆಂಬಲ ಸೂಚಿಸಿದ್ದರು. ತನಗೆ ಅನ್ಯಾಯವಾದಾಗ ಯಾರೂ ದನಿಯೆತ್ತಲಿಲ್ಲ. ಈ ನಟಿ ರಮ್ಯಾಗೆ ಬೆಂಬಲ ಸೂಚಿಸಿದ್ದಾರೆ ಎಂದು ಯುವ ಪತ್ನಿ ಶ್ರೀದೇವಿ ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

Road Accident: ಚಳ್ಳಕೆರೆಯಲ್ಲಿ ಕಾರು-ಬೈಕ್ ಡಿಕ್ಕಿಯಾಗಿ ಅಣ್ಣ-ತಂಗಿ ದಾರುಣ ಸಾವು

ಚಳ್ಳಕೆರೆಯಲ್ಲಿ ಕಾರು-ಬೈಕ್ ಡಿಕ್ಕಿಯಾಗಿ ಅಣ್ಣ-ತಂಗಿ ದಾರುಣ ಸಾವು

Challakere News: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಳಿ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಬೈಕ್‍ನಲ್ಲಿದ್ದ ಅಣ್ಣ-ತಂಗಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕಾರು ಚಾಲಕನಿಗೂ ಗಾಯಗಳಾಗಿವೆ. ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tiptur News: ತಿಪಟೂರಿನಲ್ಲಿ ಯುವಕ ಅನುಮಾನಾಸ್ಪದ ಸಾವು; ನ್ಯಾಯ ಕೊಡಿಸಲು ಕುಟುಂಬಸ್ಥರ ಆಗ್ರಹ

ತಿಪಟೂರಿನಲ್ಲಿ ಯುವಕ ಅನುಮಾನಾಸ್ಪದ ಸಾವು

Tiptur News: ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಗದಹಳ್ಳಿಯಲ್ಲಿ ಜರುಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅರಸೀಕೆರೆ ತಾಲೂಕಿನ ಬೆಳಗುಂಬ ಗ್ರಾಮದ ಹರ್ಷ ಬಿ.ಪಿ (25) ಮೃತ ಯುವಕ ಎಂದು ಗುರುತಿಸಲಾಗಿದೆ.

Actor Pratham: ಆಮರಣಾಂತ ಉಪವಾಸಕ್ಕೆ ಪ್ರಥಮ್ ನಿರ್ಧಾರ; ಹಲ್ಲೆ ಯತ್ನದ ಬಗ್ಗೆ ಸ್ಪಷ್ಟನೆ ನೀಡಲು ನಟ ದರ್ಶನ್‌ಗೆ ಆಗ್ರಹ

ಹಲ್ಲೆ ಯತ್ನ ಪ್ರಕರಣ; ಆಮರಣಾಂತ ಉಪವಾಸಕ್ಕೆ ಪ್ರಥಮ್ ನಿರ್ಧಾರ

Actor Pratham: ನನ್ನ ಮೇಲೆ ನಡೆದಿರುವ ಹಲ್ಲೆಗೆ ನಟ ದರ್ಶನ್‌ ಸ್ಪಷ್ಟನೆ ನೀಡಬೇಕು. ನನಗೆ ಹೆಚ್ಚು ಕಡಿಮೆಯಾದರೆ ನೀವೇ ಹೊಣೆ. ದರ್ಶನ್‌ ಅವರು ಫ್ಯಾನ್ಸ್‌ ಬಾಯಿ ಮುಚ್ಚಿಸಬೇಕು. ಯಾವುದೇ ನಟರ ಬಗ್ಗೆ ಟ್ರೋಲ್‌ ಮಾಡಬಾರದು. ನಿಮ್ಮ ಫ್ಯಾನ್ಸ್‌ಗೆ ಹೇಳಿ, ಇಲ್ಲವೆಂದರೆ ನೀವೇ ಜವಾಬ್ದಾರಿ ಎಂದು‌ ನಟ ಪ್ರಥಮ್ ಆಕ್ರೋಶ ಹೊರಹಾಕಿದ್ದಾರೆ.

Actress Ramya: ನಿಮ್ಮ ಜತೆಗೆ ನಾವು ಸದಾ ನಿಲ್ಲುತ್ತೇವೆ; ರಮ್ಯಾಗೆ ನಟ ಶಿವಣ್ಣ ಬೆಂಬಲ

ನಿಮ್ಮ ಜತೆಗೆ ನಾವು ಸದಾ ನಿಲ್ಲುತ್ತೇವೆ; ರಮ್ಯಾಗೆ ನಟ ಶಿವಣ್ಣ ಬೆಂಬಲ

Actress Ramya: ನಟಿ ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ; ಅದನ್ನು ನಾವು ಸಹಿಸಬಾರದು. ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ ಎಂದು ನಟ ಶಿವರಾಜ್‌ ಕುಮಾರ್‌ ತಿಳಿಸಿದ್ದಾರೆ.

Physical Abuse: ಕಲಬುರಗಿಯಲ್ಲಿ ಪೈಶಾಚಿಕ ಕೃತ್ಯ; ಆಸ್ಪತ್ರೆಯಲ್ಲೇ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸಿಬ್ಬಂದಿ!

ಆಸ್ಪತ್ರೆಯಲ್ಲೇ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸಿಬ್ಬಂದಿ!

Kalaburagi News: ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ತಂದೆಯ ಆರೈಕೆಗೆ ಆಸ್ಪತ್ರೆಗೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವೇಳೆ ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪರಿಚಯಸ್ಥ ಸಿಬ್ಬಂದಿಯೊಬ್ಬ ಹೀನ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

Fraud Case: ಚಾಮರಾಜನಗರ: ಉದ್ಯಮಿಗೆ 3.70 ಲಕ್ಷ ರೂ. ವಂಚಿಸಿ ಪೊಲೀಸರೇ ನಾಪತ್ತೆ!

ಚಾಮರಾಜನಗರ: ಉದ್ಯಮಿಗೆ 3.70 ಲಕ್ಷ ರೂ. ವಂಚಿಸಿ ಪೊಲೀಸರೇ ನಾಪತ್ತೆ!

Chamarajanagara news: ಸುಲಿಗೆಕೋರ ವಂಚಕರು ಹಾಗೂ ಧನದಾಹಿ ಪೊಲೀಸರು ಸೇರಿಕೊಂಡು ನಡೆಸಿದ ವಂಚನೆಯ ಕಥೆ ಇದು. ತಮಿಳುನಾಡು ಮೂಲದ ಉದ್ಯಮಿಯನ್ನು ಇವರೆಲ್ಲ ಸೇರಿಕೊಂಡು ಬೆದರಿಸಿ 3.70 ಲಕ್ಷ ರೂ. ಹಣ ದೋಚಿದ್ದಾರೆ. ಇದೀಗ ಪಿಎಸ್‌ಐ ಮತ್ತು ಪೇದೆಗಳು ಪರಾರಿಯಾಗಿದ್ದಾರೆ.

ಬೆಂಗಳೂರಲ್ಲಿ ಡೆಂಘೀ ಗಣನೀಯ ಇಳಿಕೆ

ಬೆಂಗಳೂರಲ್ಲಿ ಡೆಂಘೀ ಗಣನೀಯ ಇಳಿಕೆ

ಮಳೆಗಾಲದ ಆರಂಭದಲ್ಲಿಯೇ ಡೆಂಘೀ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆಯೇ ಅಧಿಕಾರಿಗಳು ನಿಯಂತ್ರಿಸಲು ಕ್ರಮ ಕೈಗೊಂಡಿದ್ದರಿಂದ ಡೆಂಘೀ ಪ್ರಕರಣಗಳಲ್ಲಿ ಇಳಿಕೆ ಕಂಡಿದ್ದು, ಶೇ.50ರಷ್ಟು ಪ್ರಕರಣಗಳು ಕಡಿಮೆಯಾಗಿದೆ. ಜನವರಿ 1 ರಿಂದ ಜುಲೈ 23 ರವರೆಗೆ ನಗರದಲ್ಲಿ ಕೇವಲ 1676 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

Street Dog attack: ಬೆಂಗಳೂರಿನಲ್ಲಿ ಬೀದಿನಾಯಿಗಳ ಬರ್ಬರ ದಾಳಿಗೆ ವೃದ್ಧ ಬಲಿ

ಬೆಂಗಳೂರಿನಲ್ಲಿ ಬೀದಿನಾಯಿಗಳ ಬರ್ಬರ ದಾಳಿಗೆ ವೃದ್ಧ ಬಲಿ

Bengaluru News: ನಿನ್ನೆ ಬೆಳಿಗ್ಗೆ ವಾಕಿಂಗ್ ಹೋಗುತ್ತಿದ್ದಾಗ ಸೀತಪ್ಪ ಅವರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಓಡಲಾಗದೆ ಬಿದ್ದ ವೃದ್ಧ ಸೀತಪ್ಪ ಅವರ ಕೈ ಕಾಲು ಮತ್ತು ಮುಖಕ್ಕೆ ಬೀದಿ ನಾಯಿಗಳು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದವು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಒಯ್ಯಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿ ಆಗದೆ ಸೀತಪ್ಪ ಕೊನೆಯುಸಿರೆಳೆದಿದ್ದಾರೆ.

Loading...