ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Chikkanayakanahalli News: ದಾರ್ಶನಿಕರ ಜಯಂತಿ ಕರಪತ್ರದಲ್ಲಿ ಸರಕಾರಿ ಲೋಗೋ ದುರ್ಬಳಕೆ: ಶಾಸಕರ ವಿರುದ್ದ ಕಾಂಗ್ರೆಸ್ ವಾಗ್ದಾಳಿ

ದಾರ್ಶನಿಕರ ಜಯಂತಿ ಕರಪತ್ರದಲ್ಲಿ ಸರಕಾರಿ ಲೋಗೋ ದುರ್ಬಳಕೆ

ಸರಕಾರಿ ಲಾಂಛನವನ್ನು ಸರಕಾರದ ಅಧಿಕೃತ ಉದ್ದೇಶಗಳನ್ನು ಹೊರತುಪಡಿಸಿ ರಾಜಕೀಯ ಪಕ್ಷದ ಕಾರ್ಯಕ್ರಮಗಳು, ವೈಯಕ್ತಿಕ ಪ್ರಚಾರ, ಖಾಸಗಿ ಉದ್ದೇಶಗಳಿಗಾಗಿ ಬಳಸುವಂತಿಲ್ಲ. ಇದು ಜನರನ್ನು ದಾರಿ ತಪ್ಪಿಸುವ ಮತ್ತು ಸರಕಾರಿ ಸಂಪನ್ಮೂಲಗಳನ್ನು ಪಕ್ಷದ ಪ್ರಚಾರಕ್ಕೆ ಬಳಸುವ ಪ್ರಯತ್ನವಾಗಿದೆ

Dharmasthala case: ಧರ್ಮಸ್ಥಳ ಪ್ರಕರಣ; ಆರೋಪಿ ಚಿನ್ನಯ್ಯನಿಗೆ ಷರತ್ತುಬದ್ಧ ಜಾಮೀನು ಮಂಜೂರು

ಧರ್ಮಸ್ಥಳ ಪ್ರಕರಣ; ಆರೋಪಿ ಚಿನ್ನಯ್ಯನಿಗೆ ಷರತ್ತುಬದ್ಧ ಜಾಮೀನು ಮಂಜೂರು

ಧರ್ಮಸ್ಥಳ ಪ್ರಕರಣದ ಆರೋಪಿ ಚಿನ್ನಯ್ಯಗೆ ಮಂಗಳೂರಿನ ಜಿಲ್ಲಾ ಕೋರ್ಟ್ ಜಾಮೀನು ನೀಡಿದೆ. 1 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿಯೊಂದಿಗೆ 12 ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ. ಹೀಗಾಗಿ ಶಿವಮೊಗ್ಗ ಜೈಲಿನಿಂದ ನಾಳೆ ಆರೋಪಿ ಚಿನ್ನಯ್ಯ ಬಿಡುಗಡೆಯಾಗುವ ಸಾಧ್ಯತೆ ಇದೆ.

Mandya News: ಎಚ್‌.ಡಿ. ಕುಮಾರಸ್ವಾಮಿ ಅಭಿಮಾನಿ ಆತ್ಮಹತ್ಯೆ; ಕುಟುಂಬಸ್ಥರಿಗೆ ನಿಖಿಲ್ ಸಾಂತ್ವನ

ಎಚ್‌ಡಿಕೆ ಅಭಿಮಾನಿ ಆತ್ಮಹತ್ಯೆ; ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಿಖಿಲ್

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೇವೇಗೌಡನ ದೊಡ್ಡಿ ಗ್ರಾಮದ ಜೆಡಿಎಸ್ ಪಕ್ಷದ ಕಾರ್ಯಕರ್ತ, ಮಾಜಿ ಸಿಎಂ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಅಪ್ಪಟ ಅಭಿಮಾನಿ ಮಹದೇವು ಅವರ ನಿವಾಸಕ್ಕೆ ಸೋಮವಾರ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ, ಮೃತ ಮಹದೇವು ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಆರ್ಥಿಕ ನೆರವು ನೀಡಿದ್ದಾರೆ.

ಗ್ಯಾರಂಟಿ, ಗ್ಯಾರಂಟಿ ಅಂತಾರೆ, ಅದನ್ನೂ ಸರಿಯಾಗಿ ಕೊಟ್ಟಿಲ್ಲ: ಕಾಂಗ್ರೆಸ್‌ ಸರ್ಕಾರದ ವಿರುದ್ಧ ನಿಖಿಲ್ ವ್ಯಂಗ್ಯ

ಗ್ಯಾರಂಟಿ, ಗ್ಯಾರಂಟಿ ಅಂತಾರೆ, ಅದನ್ನೂ ಸರಿಯಾಗಿ ಕೊಟ್ಟಿಲ್ಲ: ನಿಖಿಲ್

Nikhil Kumaraswamy: ರಾಜ್ಯದ ಇತಿಹಾಸದಲ್ಲಿ ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲಬೇಕು. ಗ್ಯಾರಂಟಿ, ಗ್ಯಾರಂಟಿ ಅಂತಾರೆ ಅದನ್ನು ಕೂಡ ಸರಿಯಾಗಿ ಕೊಟ್ಟಿಲ್ಲ. ಯುವನಿಧಿ ಕೊಟ್ಟಿದ್ದಿರಾ? ಚುನಾವಣೆ ಸಂದರ್ಭದಲ್ಲಿ ಮಾತ್ರ ದುಡ್ಡು ಬಿಡುಗಡೆ ಮಾಡ್ತಾರೆ. ಈ ಸರ್ಕಾರದಲ್ಲಿ ಬಡವರು ಬದುಕಲು ಆಗುತ್ತಿಲ್ಲ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಪಿಆರ್ ತರಬೇತಿ ಕಾರ್ಯಕ್ರಮ ಆಯೋಜಿಸಿದ ಫೋರ್ಟಿಸ್ ಆಸ್ಪತ್ರೆಗಳು

ಸಿಪಿಆರ್ ತರಬೇತಿ ಕಾರ್ಯಕ್ರಮ ಆಯೋಜಿಸಿದ ಫೋರ್ಟಿಸ್ ಆಸ್ಪತ್ರೆಗಳು

ಪ್ರತೀ 90 ನಿಮಿಷಗಳ ತರಬೇತಿ ಸೆಷನ್‌ ನಲ್ಲಿ ಸಿಪಿಆರ್ ತಂತ್ರಗಳ ಪ್ರಾಯೋಗಿಕ ಪ್ರದರ್ಶನ, ಉಸಿರುಗಟ್ಟುವಿಕೆಯಿಂದ ರಕ್ಷಿಸುವ ವಿಧಾನಗಳು (ಚೋಕಿಂಗ್ ರೆಸ್ಕ್ಯೂ ಮೆಥಡ್) ಮತ್ತು ತುರ್ತು ಔಷಧ ತಜ್ಞರು, ತರಬೇತಿ ಪಡೆದ ನರ್ಸ್‌ ಗಳು ಹಾಗೂ ಪ್ರಮಾಣೀಕೃತ ಸಿಪಿಆರ್ ತರಬೇತಿದಾರರ ಜೊತೆ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನ.25, 26ರಂದು ಕರೆಂಟ್‌ ಇರಲ್ಲ

ಬೆಂಗಳೂರಿನ ಈ ಪ್ರದೇಶಗಳಲ್ಲಿ ನ.25, 26ರಂದು ಕರೆಂಟ್‌ ಇರಲ್ಲ

BESCOM News: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11ಕೆವಿ ಮಹಾಲಕ್ಷ್ಮಿ ಲೇಔಟ್ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ನ.25ರಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

Basavaraj Bommai: ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಬಸವರಾಜ ಬೊಮ್ಮಾಯಿ

ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಬಸವರಾಜ ಬೊಮ್ಮಾಯಿ

Mysuru Sri Ramakrishna Ashram Centenary: ನಮ್ಮ ಮನಸ್ಸಿನಲ್ಲಿ ಯಾವಾಗಲೂ ಗೊಂದಲ ಇರುತ್ತದೆ. ಬುದ್ಧಿ ಒಂದು ಹೇಳಿದರೆ ಮನಸ್ಸು ಇನ್ನೊಂದು ಹೇಳುತ್ತದೆ. ಬುದ್ದಿ ಮತ್ತು ಮನಸ್ಸನ್ನು ಯಾವಾಗ ಒಂದುಗೂಡಿಸುತ್ತೇವೆಯೇ ಅದೇ ಅಮೃತಗಳಿಗೆ. ಮನಸ್ಸು ಮತ್ತು ಹೃದಯ ಒಂದಾದಾಗ ಅಮೃತ ಘಳಿಗೆಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಐಸಿಎಫ್ಎಐ ಅಂತರರಾಷ್ಟ್ರೀಯ ತರಬೇತಿ; ನೇಪಾಳ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಪ್ರತಿನಿಧಿ ಮಂಡಳಿ ಭಾಗಿ

ನೇಪಾಳ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಪ್ರತಿನಿಧಿ ಮಂಡಳಿ ಭಾಗಿ

ನೇಪಾಳದ ಎಲ್ಲ ಪ್ರತಿನಿಧಿಗಳನ್ನು ಕೊಡುಗೆ ಯನ್ನು ಸ್ಮರಿಸಿದರು. ಹಿಮಾಲಯ ರಾಜ್ಯ ದೊಂದಿಗೆ ಇರುವ ದೀರ್ಘಕಾಲದ ಸಂಬಂಧವನ್ನು ಪ್ರಸ್ತಾಪಿಸಿದರು. ಐಸಿಎಫ್ಎಐ ಗುಂಪು ಉನ್ನತ ಶಿಕ್ಷಣ ಮತ್ತು ವೃತ್ತಿಪರ ಅಭಿವೃದ್ಧಿ ಕ್ಷೇತ್ರಗಳಲ್ಲಿ ನೀಡುತ್ತಿರುವ ವ್ಯಾಪಕ ಸೇವೆಗಳು ಮತ್ತು ಪರಿಣಾಮಕಾರಿ ಕೊಡುಗೆಗಳ ಕುರಿತು ವಿವರಿಸಿದರು.

ಶಾಸಕರ ಖರೀದಿ, ಕುದುರೆ ವ್ಯಾಪಾರ ಮಾಡೋದು ಬಿಜೆಪಿ ಸಂಸ್ಕೃತಿ: ಡಿ.ಕೆ. ಶಿವಕುಮಾರ್ ತಿರುಗೇಟು

ಶಾಸಕರ ಖರೀದಿ ಮಾಡೋದು ಬಿಜೆಪಿ ಸಂಸ್ಕೃತಿ: ಡಿ.ಕೆ. ಶಿವಕುಮಾರ್ ಕಿಡಿ

DK Shivakumar: ಕಾಂಗ್ರೆಸ್ ಶಾಸಕರನ್ನು ಕಾಂಗ್ರೆಸ್ ಪಕ್ಷದ ನಾಯಕರೇ ಖರೀದಿ ಮಾಡುವ ಪರಿಸ್ಥಿತಿ ಬಂದಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಮಂತ್ರಿ ಹುದ್ದೆಗೆ ಎಷ್ಟು ಹಣ ನೀಡಲಾಗಿದೆ ಎಂದು ಅವರದೇ ಪಕ್ಷದ ನಾಯಕರು ಬಹಿರಂಗ ಹೇಳಿಕೆ ನೀಡಿದ್ದಾರೆ. ಶಾಸಕರ ಖರೀದಿ ಬಿಜೆಪಿಯವರ ಪ್ರವೃತ್ತಿ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮೂರನೇ ಎಕ್ಸ್‌ಪೀರಿಯನ್ಸ್‌ ಸೆಂಟರ್‌ ಪ್ರಾರಂಭಿಸಿದ ULTRAVIOLETTE

ಮೂರನೇ ಎಕ್ಸ್‌ಪೀರಿಯನ್ಸ್‌ ಸೆಂಟರ್‌ ಪ್ರಾರಂಭಿಸಿದ ULTRAVIOLETTE

ಎಲ್ಲ ಬಗೆಯ ಭೂಪ್ರದೇಶಗಳಲ್ಲಿ ಸುಲಭವಾಗಿ ಬಳಸಬಹುದಾದ ಇತ್ತೀಚೆಗಷ್ಟೇ ಮಾರು ಕಟ್ಟೆಗೆ ಯಶಸ್ವಿಯಾಗಿ ಪರಿಚಯಿಸಿದ X-47 Crossover ಮೋಟರ್‌ಸೈಕಲ್ ಮತ್ತು ಎರಡು ವಿಭಿನ್ನ ಧ್ವನಿ ಮೂಲಗಳನ್ನು ಪರಸ್ಪರ ಸಂಪರ್ಕಿಸುವ (ಕ್ರಾಸ್‌ಫೇಡ್‌) ರೇಡಾರ್ ಸಂವಹನ ಸೌಲಭ್ಯದ ಮೊದಲ ಕಾರ್ಬನ್ ಫೈಬರ್ ಹೆಲ್ಮೆಟ್ - UV ಕ್ರಾಸ್‌ಫೇಡ್ ಅನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದ ನಂತರ, ಇಂದು ಹೊಸೂರು ರಸ್ತೆಯಲ್ಲಿ ತನ್ನ ಅತ್ಯಾಧುನಿಕ ಎಕ್ಸ್‌ಪೀರಿಯನ್ಸ್‌ ಸೆಂಟರ್‌ ಆರಂಭಿಸಿದೆ.

Karnataka Politics: ಹೈಕಮಾಂಡ್‌ ನಿರ್ಧಾರವನ್ನು ನಾನು, ಡಿ.ಕೆ.ಶಿವಕುಮಾರ್ ಒಪ್ಪಬೇಕು: ಸಿಎಂ ಸಿದ್ದರಾಮಯ್ಯ

ಹೈಕಮಾಂಡ್‌ ನಿರ್ಧಾರಕ್ಕೆ ನಾನು, ಡಿ.ಕೆ.ಶಿವಕುಮಾರ್ ಬದ್ಧ: ಸಿದ್ದರಾಮಯ್ಯ

CM Siddaramaiah: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಜೋರಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿದ ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ವಿವಿಧ ಸಚಿವರ ಜತೆ ಸಭೆ ನಡೆಸಿದ್ದರು. ಏನೇ ವಿಚಾರವಿದ್ದರೂ ಅಂತಿಮವಾಗಿ ಹೈಕಮಾಂಡ್‌ ತೀರ್ಮಾನ ಮಾಡಲಿದೆ ಎಂದು ಅವರು ತಿಳಿಸಿದ್ದರು. ಇದೀಗ ಪಕ್ಷದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು ಟೆಕ್ ಸಮ್ಮಿಟ್ 2025: ಜಾಗತಿಕ ಪಾಲುದಾರಿಕೆ ಘೋಷಿಸಿದ ಕೆಡಿಇಎಂ

ಜಾಗತಿಕ ಪಾಲುದಾರಿಕೆ ಘೋಷಿಸಿದ ಕೆಡಿಇಎಂ

ರಾಜ್ಯದಾದ್ಯಂತ ಸಮುದಾಯಗಳು, ಉದ್ಯಮಗಳು ಮತ್ತು ಹೊಸ ನಾವೀನ್ಯತಾ ಕ್ಲಸ್ಟರ್‌ ಗಳಿಗೆ ಅತ್ಯುತ್ತಮ ಫಲಿತಾಂಶ ಒದಗಿ ಸುವ ತಂತ್ರಜ್ಞಾನ ಕರೂಪಿಸುವ ಜಾಗತಿಕ ಸಂಪರ್ಕ ಹೊಂದಿ ರುವ, ಉದ್ಯಮ-ನೇತೃತ್ವದ ಡಿಜಿಟಲ್ ಪರಿಸರ ವ್ಯವಸ್ಥೆಗಳನ್ನು ಕಟ್ಟುವ ಕರ್ನಾಟಕದ ಗುರಿ ಯಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ.

Teachers Protest: ಟಿಇಟಿ ಕಡ್ಡಾಯ ವಿರೋಧಿಸಿ ಪ್ರಾಥಮಿಕ ಶಾಲಾ ಶಿಕ್ಷಕರಿಂದ ನವದೆಹಲಿಯಲ್ಲಿ ಬೃಹತ್‌ ಪ್ರತಿಭಟನೆ

ಟಿಇಟಿ ಕಡ್ಡಾಯ ವಿರೋಧಿಸಿ ಶಿಕ್ಷಕರಿಂದ ನವದೆಹಲಿಯಲ್ಲಿ ಬೃಹತ್‌ ಪ್ರತಿಭಟನೆ

Protest against mandatory TET: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸಿರುವ ನಿರ್ಧಾರ ಹಿಂಪಡೆಯಬೇಕು ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಷನ್ ರಾಷ್ಟ್ರಾಧ್ಯಕ್ಷ ಬಸವರಾಜ ಗುರಿಕಾರ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಒತ್ತಾಯ ಮಾಡಿದ್ದಾರೆ.

Bengaluru Murder Case: ಯುವತಿಯನ್ನು ಸ್ನೇಹಿತೆಯ ರೂಮ್‌ಗೆ ಕರೆದೊಯ್ದು ಭೀಕರವಾಗಿ ಕೊಲೆಗೈದ ಯುವಕ

ಬೆಂಗಳೂರಿನಲ್ಲಿ ಯುವತಿಯನ್ನು ಭೀಕರವಾಗಿ ಕೊಲೆಗೈದ ಯುವಕ

Bengaluru News: ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಯುವತಿಯ ಭೀಕರ ಹತ್ಯೆ ನಡೆದಿದೆ. ಆಂಧ್ರ ಮೂಲದ ಯುವತಿಯ ಕೊಲೆ ನಡೆದಿದ್ದು, ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

DK Shivakumar: ಡಿಕೆ ಶಿವಕುಮಾರ್‌ ಮನೆಗೆ ನಾಗಾ ಸಾಧುಗಳ ಭೇಟಿ, ಏನಂತ ಆಶೀರ್ವದಿಸಿದ್ರು?

ಡಿಕೆ ಶಿವಕುಮಾರ್‌ ಮನೆಗೆ ನಾಗಾ ಸಾಧುಗಳ ಭೇಟಿ, ಏನಂತ ಆಶೀರ್ವದಿಸಿದ್ರು?

Naga Sadhu in DK Shivakumar home: ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ನಿವಾಸದಲ್ಲಿ ರಾಜಕೀಯ ಚಟುವಟಿಗಳು ಗರಿಗೆದರಿದೆ. ಇದರ ನಡುವೆಯೇ ಡಿಕೆ ಶಿವಕುಮಾರ್ ಮನೆಗೆ ಹೋದ ನಾಗಾ ಸಾಧುಗಳು, ಡಿಕೆಶಿ ತಲೆ ಮೇಲೆ ಕೈಯಿಟ್ಟು ಆಶೀರ್ವಾದಿಸಿದ್ದಾರೆ. ʻಪವರ್‌ ಫೈಟ್‌ʼ ನಡುವೆ ಕಾಶಿಯಿಂದ ಬಂದ ನಾಗ ಸಾಧುಗಳ ಆಶೀರ್ವಾದ ಡಿಸಿಎಂ ಡಿಕೆಶಿ ಅವರಿಗೆ ದೊರೆತಿದೆ.

Gold Price Today on 24th November 2025: ಗ್ರಾಹಕರಿಗೆ ಕೊಂಚ ನಿರಾಳ; ಚಿನ್ನದ ದರದಲ್ಲಿ ಇಳಿಕೆ

ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold and Silver Rate: ಚಿನ್ನದ ದರದಲ್ಲಿ ಇಂದು ಕೊಂಚ ಇಳಿಕೆ ಕಂಡು ಬಂದಿದ್ದು, ಸ್ವರ್ಣಪ್ರಿಯರಿಗೆ ಸಂತಸ ತಂದಿದೆ. ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ65 ರೂ. ಇಳಿಕೆ ಆಗಿದ್ದು, 11,470 ರೂ. ಇದ್ದರೆ, 24 ಕ್ಯಾರಟ್‌ ಚಿನ್ನದ 1 ಗ್ರಾಂ ಚಿನ್ನದ ಬೆಲೆಯಲ್ಲಿ 71 ಇಳಿಕೆ ಆಗಿದ್ದು ಇಂದು 12,513 ರೂ. ಇದೆ.

Road Accident: ಬೆಂಗಳೂರು- ಚೆನ್ನೈ ಹೈವೇಯಲ್ಲಿ ಭೀಕರ ಕಾರು ಅಪಘಾತ, ನಾಲ್ವರು ಸಾವು

ಬೆಂಗಳೂರು- ಚೆನ್ನೈ ಹೈವೇಯಲ್ಲಿ ಭೀಕರ ಕಾರು ಅಪಘಾತ, ನಾಲ್ವರು ಸಾವು

Bengaluru- Chennai highway: ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಮಧ್ಯರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆ ನೋಡಿ ಜನರು ಬೆಚ್ಚಿಬಿದ್ದಿದ್ದಾರೆ. ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು ಬಳಿಕ ಬ್ರಿಡ್ಜ್​​ನಿಂದ ಕೆಳಗೆ ಚಿಮ್ಮಿ ಬಿದ್ದಿದೆ. ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ನಾಲ್ವರು ಮೃತಪಟ್ಟಿದ್ದಾರೆ.

ನ.28ರಂದು ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ರೋಡ್ ಶೋ ರದ್ದು

ನ.28ರಂದು ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ರೋಡ್ ಶೋ ರದ್ದು

Udupi Sri Krishna Math: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕಾಗಿ ರೋಡ್ ಶೋ ನಡೆಸಲು ಯೋಜಿಸಲಾಗಿತ್ತು. ಆದರೆ, ಪರಿಷ್ಕೃತ ಪಟ್ಟಿಯಲ್ಲಿ ರೋಡ್ ಶೋ ರದ್ದುಗೊಳಿಸಲಾಗಿದೆ. ಹೆಲಿಪ್ಯಾಡ್‌ನಿಂದ ನೇರವಾಗಿ ಮಧ್ಯಾಹ್ನ 12 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿರುವ ಮೋದಿ, ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ. ತದನಂತರ ಐತಿಹಾಸಿಕ 'ಲಕ್ಷ ಕಂಠ ಗೀತ ಗಾಯನ' ಕಾರ್ಯಕ್ರಮದಲ್ಲಿ ಭಾಗವಹಿಸಿ, ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ʼತಂತ್ರಜ್ಞಾನ ಮತ್ತು ಮಾನವೀಯತೆ ಸದಾ ಜೊತೆಯಾಗಿರಲಿʼ: ಮಾಹೆಯ 33ನೇ ಘಟಿಕೋತ್ಸವದಲ್ಲಿ ಪ್ರತಿಧ್ವನಿಸಿದ ಆಶಯ

ʼತಂತ್ರಜ್ಞಾನ ಮತ್ತು ಮಾನವೀಯತೆ ಸದಾ ಜೊತೆಯಾಗಿರಲಿʼ

ಗ್ಲಾಸ್ಗೊದ ರಾಯಲ್ ಕಾಲೇಜ್ ಆಫ್ ಫಿಸಿಶಿ ಯನ್ಸ್ ಅಂಡ್ ಸರ್ಜನ್ಸ್‌ನ ಅಧ್ಯಕ್ಷರಾದ ಪ್ರೊಫೆಸರ್ ಹ್ಯಾನಿ ಎಟೀಬಾ, ತಂತ್ರಜ್ಞಾನಾ ಧಾರಿತ ಪ್ರಪಂಚದಲ್ಲಿ ಅನುಕಂಪಪೂರಿತ ಸಂವಹನದ ಮಹತ್ವವನ್ನು ಒತ್ತಿ ಹೇಳಿದರು. ಜ್ಞಾನವು ಕಾಳಜಿ ಧನಾತ್ಮಕ ಪರಿಣಾವಾಗಿ ಪರಿವರ್ತನೆ ಯಾಗಲು ಅನುಕಂಪಪೂರಿತ ಸಂವಹನ ಬಲು ಮಹತ್ವದ ಸೇತುವೆಯಾಗುತ್ತದೆ ಎಂದರು.

QSR ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದ ಬರ್ಗರ್ ಸಿಂಗ್: ಒಂದೇ ದಿನದಲ್ಲಿ 3300 ಕ್ಕಿಂತ ಹೆಚ್ಚು ಉಚಿತ ಊಟಗಳ ವಿತರಣೆ

QSR ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದ ಬರ್ಗರ್ ಸಿಂಗ್

ಗ್ರಾಹಕರಿಗೆ ಬರ್ಗರ್ ಸಿಂಗ್‌ನ ಅತ್ಯಂತ ಜನಪ್ರಿಯ ಆಯ್ಕೆಗಳಾದ ಬಿಗ್ ಕ್ರಿಸ್ಪಿ ಚಿಕನ್ ಮೀಲ್ಸ್ ಮತ್ತು ಉಡ್ತಾ ಪಂಜಾಬ್ 2.0 ಮೀಲ್ಸ್, ಹತ್ತಿರದ ದಿಲ್ಲಿ 6 ಫ್ರೈಸ್ಸ್ ಮತ್ತು ಖಾಸಗಿ ಗುಲಾಬೋ ಪಾನೀಯದೊಂದಿಗೆ ನೀಡಲಾಯಿತು. ಅತಿಥಿಗಳು ಧೈರ್ಯಶಾಲಿ ದೇಸಿ ರುಚಿಗಳು, ಬರ್ಗರ್‌ಗಳ ಜ್ಯೂಸಿನೆಸ್, ವಿಶಿಷ್ಟ ಮಸಾಲೆ ಸವರಿದ ಫ್ರೈಸ್ಸ್ ಮತ್ತು ತಾಜಾ ಮಸಾಲಾ ಸಂಯೋಜಿತ ಗುಲಾ ಬೋ ಪಾನೀಯವನ್ನು ಮೆಚ್ಚಿದರು.

Bengaluru Robbery Case: ಬೆಂಗಳೂರು ದರೋಡೆ ಆರೋಪಿ ಕಾನ್ಸ್‌ಟೇಬಲ್ ವಜಾ, ಖಾಕಿ ಮೇಲೂ ಹದ್ದಿನ ಕಣ್ಣು

ಬೆಂಗಳೂರು ದರೋಡೆ ಆರೋಪಿ ಕಾನ್ಸ್‌ಟೇಬಲ್ ವಜಾ, ಖಾಕಿ ಮೇಲೂ ಹದ್ದಿನ ಕಣ್ಣು

ರಾಬರಿ ಪ್ರಕರಣದಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ನೇ ಶಾಮೀಲು ಆಗಿರುವುದರಿಂದ ಪೊಲೀಸ್ ಇಲಾಖೆ (police department) ಅಲರ್ಟ್ ಆಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ (Bengaluru Police Commissioner) ಸೀಮಂತ್ ಕುಮಾರ್ ಸಿಂಗ್, ಬೆಂಗಳೂರಿನ ಎಲ್ಲಾ ಠಾಣೆಯ ಪಿಎಸ್‌ಐ, ಎಎಸ್‌ಐ, ಹೆಡ್ ಕಾನ್ಸ್‌ಟೇಬಲ್ ಹಾಗೂ ಕಾನ್ಸ್‌ಟೇಬಲ್‌ಗಳ ಮಾನಿಟರಿಂಗ್‌ಗೆ ಸೂಚನೆ ನೀಡಿದ್ದಾರೆ.

Karnataka Weather: ಇಂದಿನ ಹವಾಮಾನ; ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ

ಇಂದಿನ ಹವಾಮಾನ; ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ

Karnataka Weather Report: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಮಂಜು ಬೀಳುವ ಸಾಧ್ಯತೆ ಇದೆ. ಇನ್ನು ಮುಂದಿನ 6 ದಿನ ರಾಜ್ಯದ ಹವಾಮಾನ ಹೇಗಿರಲಿದೆ ಎಂಬ ಕುರಿತ ವರದಿ ಇಲ್ಲಿದೆ.

Bengaluru News: ವಂದೇ ಭಾರತ್‌ ರೈಲಿಗೆ ಸಿಲುಕಿ ಇಬ್ಬರು ನರ್ಸಿಂಗ್‌ ವಿದ್ಯಾರ್ಥಿಗಳ ಸಾವು

ವಂದೇ ಭಾರತ್‌ ರೈಲಿಗೆ ಸಿಲುಕಿ ಇಬ್ಬರು ನರ್ಸಿಂಗ್‌ ವಿದ್ಯಾರ್ಥಿಗಳ ಸಾವು

Bengaluru News: ಹೆಸರಘಟ್ಟ ರಸ್ತೆಯ ಸಪ್ತಗಿರಿ ನರ್ಸಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್ಸಿ ವಿಭಾಗದಲ್ಲಿ ಇಬ್ಬರು ವ್ಯಾಸಂಗ ಮಾಡುತ್ತಿದ್ದು, ಕಾಲೇಜು ಸಮೀಪದಲ್ಲೇ ಇಬ್ಬರು ವಾಸವಾಗಿದ್ದರು. ಈ ಘಟನೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ. ರೈಲಿಗೆ ಆಕಸ್ಮಿಕವಾಗಿ ಸಿಲುಕಿ ಮೃತಪಟ್ಟಿದ್ದಾರೆಯೇ ಅಥವಾ ಆತ್ಮಹತ್ಯೆಯೇ ಎಂಬುದರ ಬಗ್ಗೆ ತನಿಖೆ ನಡೆದಿದೆ.

ಜಂಗಮಕೋಟೆ ಹೋಬಳಿ ಕೆಐಎಡಿಬಿ ಭೂ ವಶ ಪರ ಹೋರಾಟಗಾರರಿಂದ ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ ಧರಣಿ ಆರಂಭ

ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ ಧರಣಿ ಆರಂಭ

ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ, ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿ 13 ಹಳ್ಳಿಗಳಲ್ಲಿ 2823,ಎಕರೆ ಭೂಮಿಯನ್ನು ಸರ್ಕಾರ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ಭೂಸ್ವಾದೀನ ಪ್ರಕ್ರಿಯೆಗೆ 2024ರ ಜೂನ್ 24 ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿ ತ್ತು .

Loading...