ಹುಬ್ಬಳ್ಳಿಯಲ್ಲಿ ಆರ್ಎಸ್ಎಸ್ ಬೃಹತ್ ಪಥ ಸಂಚಲನ; ಪ್ರಲ್ಹಾದ್ ಜೋಶಿ ಭಾಗಿ
ಆರ್ಎಸ್ಎಸ್ನ ಪ್ರಮುಖ ವಾರ್ಷಿಕ ಕಾರ್ಯಕ್ರಮಗಳಲ್ಲಿ ವಿಜಯದಶಮಿ ಉತ್ಸವವೂ ಒಂದಾಗಿದ್ದು, ಹುಬ್ಬಳ್ಳಿಯಲ್ಲಿ ಸಹಸ್ರಾರು ಸ್ವಯಂಸೇವಕರು ಭಾನುವಾರ ಸಂಜೆ ನೆಹರು ಮೈದಾನದಲ್ಲಿ ಸೇರಿ ಅಲ್ಲಿಂದಲೇ ಆಕರ್ಷಕ ಪಥ ಸಂಚಲನ ಆರಂಭಿಸಿದರು. ಸಂಘದ ಶಿಸ್ತು, ಸಂಘಟನೆ ಹಾಗೂ ಸಾಮೂಹಿಕ ಕಾರ್ಯಚಟುವಟಿಕೆ ಪ್ರತಿಬಿಂಬಿಸುವ ರೀತಿಯಲ್ಲಿ ಸ್ವಯಂಸೇವಕರು ಶಾಂತಿ -ಸೌಹಾರ್ದದ ಪ್ರತೀಕವಾಗಿ ಪಥ ಸಂಚಲನ ನಡೆಸಿದ್ದು ವಿಶೇಷವಾಗಿತ್ತು.