ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬೆನಾಡಿಯ 30ಕ್ಕೂ ಹೆಚ್ಚು ಕಾರ್ಯಕರ್ತರು
ಕ್ಷೇತ್ರದ ಬೆನಾಡಿ ಗ್ರಾಮದ ದಲಿತ ಸಮಾಜದ ಪ್ರಮುಖ ಮುಖಂಡರಾದ ಬಾಳಾಸೋ ಮಾಳಗೆ, ಮೋಹನ ಕೋರೆ, ಅಜೀತ ಮಾನೆ ಹಾಗೂ ಮಹಾದೇವ ಬೋರೆ ಅವರ ನೇತೃತ್ವದಲ್ಲಿ, ರಾಷ್ಟ್ರವಾದಿ ಕಾಂಗ್ರೆಸ್ (NCP) ಹಾಗೂ ಕಾಂಗ್ರೆಸ್ ಪಕ್ಷದ 30ಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರು ಇತ್ತೀಚೆಗೆ ಕಾಂಗ್ರೆಸ್ಗೆ ಗುಡ್ಬೈ ಹೇಳಿ ಬಿಜೆಪಿ ಸೇರ್ಪಡೆಯಾದರು.