ಅ.11ರಿಂದ 21ರವರೆಗೆ ಪರಮ್ನ ಡಿಜಿಟಲ್ ದಸರಾ ಅನುಭವ
ದಸರಾ(Dasara) ಮಹೋತ್ಸವದ ಅಂಗವಾಗಿ ಭಾರತದ ಐತಿಹಾಸಿಕ ವೀರ-ಶೌರ್ಯದ ಕಥೆಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಜನರಿಗೆ ಉಣಬಡಿಸುವ ವಿನೂತನ ‘ಶಕ್ತಿ ಉತ್ಸವ’ (Shakti Utsav) ನಗರದ ಜಯನಗರದಲ್ಲಿ ಅ.11ರಂದು ಆಯೋಜನೆಗೊಂಡಿದೆ. ಮೈಸೂರು ಸಂಸ್ಥಾನದ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಪುತ್ರಿ ಮಹಾರಾಜಕುಮಾರಿ ಶ್ರೀಮತಿ ಕಾಮಾಕ್ಷಿ ದೇವಿ ಹಾಗೂ ಅವರ ಸೊಸೆ ಶ್ರೀಮತಿ ದರ್ಶಿಕಾ ಕುಮಾರಿ ಅವರು ಈ ಕಾರ್ಯಕ್ರಮದಲ್ಲಿ ವಿಶೇಷ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.