35 ವರ್ಷದ ಟೆಕ್ಕಿಯನ್ನು ಕೊಂದ 18 ವರ್ಷದ ವಿದ್ಯಾರ್ಥಿ
Bengaluru News: ಬೆಂಗಳೂರಿನ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಬಡಾವಣೆಯ ಅಪಾರ್ಟ್‌ಮೆಂಟ್‌ನಲ್ಲಿ ಜನವರಿ 3ರಂದು ಉಸಿರುಗಟ್ಟಿ ಮೃತಪಟ್ಟ ಮಹಿಳಾ ಟೆಕ್ಕಿಯ ಸಾವಿನ ಪ್ರಕರಣಕ್ಕೆ ತಿರುವು ಲಭಿಸಿದ್ದು, ಇದೊಂದು ವ್ಯವಸ್ಥಿತ ಕೊಲೆ ಎನ್ನುವುದು ತನಿಖೆಯಿಂದ ಬಯಲಾಗಿದೆ. ಕೊಲೆಗಾರನನ್ನು 18 ವರ್ಷದ ವಿದ್ಯಾರ್ಥಿ, ಕೇರಳ ಮೂಲದ ಕರ್ನಲ್ ಕುರೈ ಎಂದು ಗುರುತಿಸಲಾಗಿದೆ.