ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Gudibande News: ಸರಕಾರಗಳಿಂದ ರೈತರ ಬದುಕನ್ನು ಹಸನು ಮಾಡುವ ಕೆಲಸ ನಡೆಯಬೇಕಿದೆ : ಮಂಜುನಾಥ್

ಸರಕಾರಗಳಿಂದ ರೈತರ ಬದುಕನ್ನು ಹಸನು ಮಾಡುವ ಕೆಲಸ ನಡೆಯಬೇಕಿದೆ

ಇಂದು ರೈತರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಒಬ್ಬ ರೈತ ಏನೇನೆ ಸಮಸ್ಯೆ ಬಂದರೂ ಕೃಷಿಯನ್ನು ಮಾತ್ರ ಬಿಡುವುದಿಲ್ಲ. ಲಾಭ ಬರಲಿ, ನಷ್ಟ ಬರಲಿ ಕೃಷಿ ಚಟುವಟಿಕೆಯನ್ನು ಮಾತ್ರ ಬಿಡುವುದಿಲ್ಲ. ಇಂದು ರೈತ ತುಂಬಾ ಸಂಕಷ್ಟದಲ್ಲಿದ್ದಾನೆ. ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆತನು ಬೆಳೆ ಚೆನ್ನಾಗಿ ಬಂದರೇ ಬೆಲೆ ಸಿಗುವುದಿಲ್ಲ,

MLA B.N. Ravikumar: 3ನೇ ವರ್ಷದ ಕ್ರೈಸ್ತ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಬಿಎನ್ ರವಿಕುಮಾರ್ ಚಾಲನೆ

3ನೇ ವರ್ಷದ ಕ್ರೈಸ್ತ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಬಿಎನ್ ರವಿಕುಮಾರ್ ಚಾಲನೆ

ಎಲ್ಲಾ ಜಾತಿ ಜನಾಂಗದಲ್ಲಿಯೂ, ಬಡವರು, ಹಿಂದುಳಿದವರು ಬದುಕಿಗಾಗಿ ನಿತ್ಯವೂ ಹಗಲಿರುಳು ಕಷ್ಟಪಡುತ್ತಿರುವವರು ಇನ್ನೂ ಇದ್ದಾರೆ. ಅವರೆಲ್ಲರಿಗೂ ಕ್ರೈಸ್ತ ಜಯಂತಿಯ ಶುಭಾಶಯಗಳನ್ನು ತಿಳಿಸುತ್ತಾ 1979-80 ರಲ್ಲಿ ಸುಮಾರು 2 ವರ್ಷಗಳ ಕಾಲ ಪ್ರತಿ ಶುಕ್ರವಾರ ಚರ್ಚ್ನಲ್ಲಿ ನಾನು ಕೂಡ ಪ್ರಾರ್ಥನೆ ಮಾಡಿರುವುದಾಗಿ ತಿಳಿಸಿದರು.

Bagepally News: ಕರವೇಯಿಂದ ರಾಜ್ಯೋತ್ಸವ ಆಚರಣೆ

Bagepally News: ಕರವೇಯಿಂದ ರಾಜ್ಯೋತ್ಸವ ಆಚರಣೆ

ಗುಡಿಬಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಎಂ. ನಯಾಜ್ ಅಹಮದ್ ಮಾತನಾಡಿ, ಕಾಸರಗೋಡು, ಬೆಳಗಾವಿ ಸೇರಿದಂತೆ ಗಡಿ ಹಾಗೂ ಬೆಂಗಳೂರು ನಗರ ಪ್ರದೇಶ ದಲ್ಲಿ ಕರವೇ ಹೋರಾಟದಿಂದ ಕನ್ನಡ ಭಾಷೆ ಉಳಿದಿದೆ. ಕರವೇ ಹೋರಾಟದಿಂದ ಕಾವೇರಿ ನದಿ ನೀರು ಹಂಚಿಕೆ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ ಎಂದರು.

Bagepally News: 6 ಕೋಟಿ ಸರಕಾರಿ ಭೂಮಿ ವಶಪಡಿಸಿಕೊಂಡ ತಾಲೂಕು ಆಡಳಿತ

6೬ ಕೋಟಿ ಸರಕಾರಿ ಭೂಮಿ ವಶಪಡಿಸಿಕೊಂಡ ತಾಲೂಕು ಆಡಳಿತ

ಬಾಗೇಪಲ್ಲಿ ಪಾತಪಾಳ್ಯ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು 11 ಎಕರೆ ಸರ್ಕಾರಿ ಜಮೀನು ಇದ್ದು, ಸದರಿ ಸರ್ಕಾರಿ ಜಮೀನಿನ ವಿಸ್ತೀರ್ಣದಲ್ಲಿ ಚಿಕ್ಕತಿಮ್ಮನಹಳ್ಳಿಯ ನಂಜುಂಡಪ್ಪ ಎಂಬವರಿಗೆ 2 ಎಕರೆ, ರ‍್ರಪ್ಪ ಎಂಬವರಿಗೆ 3 ಎಕರೆ ಜಮೀನು ಮಂಜೂರು ಆಗಿದ್ದು, ಉಳಿಕೆ 6 ಎಕರೆ ಜಮೀನು ಸರ್ಕಾರಿ ಬೀಳು ಎಂದು ಕಂದಾಯ ಇಲಾಖೆ ಮೂಲ ದಾಖಲೆ ಸೇರಿದಂತೆ ಪಹಣಿ ಮತ್ತು ಮುಟೇಷನ್‌ನಲ್ಲಿ ನಮೂದಾಗಿರುತ್ತದೆ.

ಬೆಂಗಳೂರಿನಲ್ಲಿ ಪತ್ನಿಯನ್ನು ಗುಂಡು ಹಾರಿಸಿ ಕೊಂದು ಪೊಲೀಸರಿಗೆ ಶರಣಾದ ಪತಿ!

ಪತ್ನಿಯನ್ನು ಗುಂಡು ಹಾರಿಸಿ ಕೊಂದು ಪೊಲೀಸರಿಗೆ ಶರಣಾದ ಪತಿ!

Bengaluru shootout case: ಬೆಂಗಳೂರಿನಲ್ಲಿ ನೆಲೆಸಿದ್ದ ತಮಿಳುನಾಡಿನ ಸೇಲಂ ಮೂಲದ ದಂಪತಿ, ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್‌ನಲ್ಲಿ ವಿಚಾರಣೆ ಮುಗಿದ ಬಳಿಕ ಬಸವೇಶ್ವರ ನಗರದ ಹೋಟೆಲ್‌ ಬಳಿ ಇಬ್ಬರಿಗೂ ಜಗಳ ನಡೆದಿದ್ದು, ಈ ವೇಳೆ ಗನ್‌ನಿಂದ ಶೂಟ್‌ ಮಾಡಿ ಪತ್ನಿಯನ್ನು ಗಂಡ ಕೊಲೆ ಮಾಡಿದ್ದಾನೆ.

ಸೃಷ್ಟಿ ಮಣಿಪಾಲ್ ವಿದ್ಯಾರ್ಥಿಗಳಿಂದ ಭವಿಷ್ಯದ ಮರುಕಲ್ಪನೆ: ಕಲೆ ಮತ್ತು ವಿನ್ಯಾಸದ ಮೂಲಕ 'ಹೊಸ ಲೋಕ' ಅನಾವರಣಗೊಳಿಸಿದ ನಾಲ್ಕು ದಿನಗಳ ಪ್ರದರ್ಶನ

ಸೃಷ್ಟಿ ಮಣಿಪಾಲ್ ವಿದ್ಯಾರ್ಥಿಗಳಿಂದ ಭವಿಷ್ಯದ ಮರುಕಲ್ಪನೆ

‘ಪ್ರೊಲೋಗ್: ಮೇಕ್ ನ್ಯೂ ವರ್ಲ್ಡ್ಸ್’ - ಸಾಧ್ಯತೆಗಳ ಸಂಭ್ರಮ: ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಡಿ.20 ಮತ್ತು 21 ರಂದು ಪದವಿಪೂರ್ವ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ‘ಪ್ರೊಲೋಗ್: ಮೇಕ್ ನ್ಯೂ ವರ್ಲ್ಡ್ಸ್’ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ 11 ವಿಭಿನ್ನ ಕೋರ್ಸ್‌ಗಳ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು.

ವಂಡರ್ಲಾದಲ್ಲಿ ಜನವರಿ 4 ರವರೆಗೆ 16 ದಿನಗಳ ಅತ್ಯಂತ ವಿಶೇಷ ಸಂಭ್ರಮಾಚರಣೆ

ವಂಡರ್ಲಾದಲ್ಲಿ ಜನವರಿ 4 ರವರೆಗೆ 16 ದಿನಗಳ ಅತ್ಯಂತ ವಿಶೇಷ ಸಂಭ್ರಮಾಚರಣೆ

ವಂಡರ್ಲಾದ ಎಲ್ಲ ಸ್ಥಳಗಳಲ್ಲಿ ವಿಶೇಷ ಕ್ರಿಸ್‌ಮಸ್ ಟ್ರೀ ಲೈಟಿಂಗ್ ಸಹಿತವಾದ ಉತ್ಸವಗಳು ಪ್ರಾರಂಭ ವಾಗಿವೆ. ಬೆಂಗಳೂರಿನ ವಂಡರ್ಲಾದ ವೇವ್ ಪೂಲ್‌ನಲ್ಲಿ ಅತಿಥಿಗಳು ಡಿಜೆ ನೈಟ್ಸ್, ಹೈ-ಎನರ್ಜಿ ಬ್ಯಾಂಡ್ ಶೋಗಳು ಮತ್ತು ಆಕರ್ಷಕ ಜುಂಬಾ ಸೇರಿದಂತೆ ವೈವಿಧ್ಯಮಯ ಮನರಂಜನೆಯನ್ನು ಹೊಂದಬಹುದು.

50 ಸಾವಿರಕ್ಕೂ ಹೆಚ್ಚು ಜನರು ಭಾಗಿ; ಬೆಂಗಳೂರು ಕಾಮಿಕ್ ಕಾನ್ ಅದ್ದೂರಿ ಸಮಾರೋಪ

50 ಸಾವಿರಕ್ಕೂ ಹೆಚ್ಚು ಜನರು ಭಾಗಿ; ಕಾಮಿಕ್ ಕಾನ್ ಅದ್ದೂರಿ ಸಮಾರೋಪ

ಎರಡು ದಿನಗಳ ಕಾಲ ಬೆಂಗಳೂರಿನ ವೈಟ್‌ಫೀಲ್ಡ್‌ ನ ಕೆಟಿಪಿಓದಲ್ಲಿ ನಡೆದ ಬೆಂಗಳೂರು ಕಾಮಿಕ್ ಕಾನ್ ಅದ್ದೂರಿಯಾಗಿ ಸಮಾರೋಪಗೊಂಡಿದೆ. ಈ ಆವೃತ್ತಿಯಲ್ಲಿ 50,000ಕ್ಕೂ ಹೆಚ್ಚು ಜನರು ಈ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದು, ಈ ವರ್ಷದ ಕಾಮಿಕ್ ಕಾನ್ ಭಾರತದ ಅತ್ಯಂತ ಜನಪ್ರಿಯ ಪಾಪ್ ಕಲ್ಚರ್ ಕೇಂದ್ರ ಗಳಲ್ಲಿ ಒಂದಾಗಿರುವ ಬೆಂಗಳೂರಿನ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸಿತು.

ವೀಕ್‌ ಡೇಸ್‌ನಲ್ಲಿ ಕನ್ನಡ ಪ್ರೊಫೆಸರ್, ವೀಕೆಂಡ್‌ನಲ್ಲಿ ಕಿಲಾಡಿ ಕಳ್ಳಿ; 32 ಲಕ್ಷ ಮೌಲ್ಯದ ಚಿನ್ನ, ನಗದು ಕಳ್ಳತನ!

ಈಕೆ ವೀಕ್‌ ಡೇಸ್‌ನಲ್ಲಿ ಕನ್ನಡ ಪ್ರೊಫೆಸರ್, ವೀಕೆಂಡ್‌ನಲ್ಲಿ ಕಿಲಾಡಿ ಕಳ್ಳಿ!

ಬೆಂಗಳೂರಿನ ಬೆಳ್ಳಂದೂರು ಬಳಿಯ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ಆಗಿದ್ದ ಆರೋಪಿ, ವಾರಪೂರ್ತಿ ಪಾಠ ಮಾಡುತ್ತಿದ್ದಳು. ಆದರೆ ಭಾನುವಾರ ಮಾತ್ರ ಸಂಬಂಧಿಕರ ರೀತಿಯಲ್ಲಿ ಕಲ್ಯಾಣ ಮಂಟಪ ಪ್ರವೇಶಿಸಿ, ನಗದು ಮತ್ತು ಚಿನ್ನಾಭರಣ ಕದಿಯುತ್ತಿದ್ದಳು.

ಚಿಕ್ಕಬಳ್ಳಾಪುರದ ಜ್ಯುವೆಲ್ಲರಿ ಶಾಪ್‌ನಲ್ಲಿ ಕಳ್ಳರ ಕರಾಮತ್ತು; 3 ಕೋಟಿ ಮೌಲ್ಯದ 140 ಕೆ.ಜಿ ಬೆಳ್ಳಿ ಆಭರಣ ಕಳವು

ಚಿಕ್ಕಬಳ್ಳಾಪುರದ ಜ್ಯುವೆಲ್ಲರಿ ಶಾಪ್‌ನಲ್ಲಿ 140 ಕೆ.ಜಿ ಬೆಳ್ಳಿ ಆಭರಣ ಕಳವು

Chikkaballapur News: ಚಿಕ್ಕಬಳ್ಳಾಪುರ ನಗರದ ಮುಖ್ಯರಸ್ತೆಯಲ್ಲಿರುವ ಎಯು ಜ್ಯುವೆಲ್ಲರ್ಸ್‌ ಮಳಿಗೆಯ ಷಟರ್‌ನ ಬೀಗ ಮುರಿದು ಒಳಪ್ರವೇಶಿಸಿರುವ ಕಳ್ಳರು, ಪ್ರದರ್ಶನದ ಕಪಾಟಿನಲ್ಲಿಟ್ಟಿದ್ದ 140 ಕೆ.ಜಿ. ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜೃಂಭಣೆಯಿಂದ ನೆರವೇರಿದ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ ರಜತ ಮಹೋತ್ಸವ

ವಿಜೃಂಭಣೆಯಿಂದ ನಡೆದ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ರಜತ ಮಹೋತ್ಸವ

Sri Jnanakshi Vidyaniketan School: ಬೆಂಗಳೂರಿನ ಆರ್‌ಆರ್‌ ನಗರದ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ ರಜತ ಮಹೋತ್ಸವದಲ್ಲಿ ಭಾಗಿಯಾದ ಗಣ್ಯರು, ಸಂವಾದದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಬಹಳ ಅರ್ಥಪೂರ್ಣವಾಗಿ ಉತ್ತರಿಸಿದರು. ಇದೇ ವೇಳೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

ಬೆಂಗಳೂರಿನ ಜೀವನ ಶೈಲಿಗೆ ಮನಸೋತ ರಷ್ಯಾ ಕುಟುಂಬ: ಇಲ್ಲಿನ ಜನರ ನಗುವೇ ನಮಗೆ ಆಸ್ತಿ ಎಂದು ಗುಣಗಾನ

ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡ ರಷ್ಯಾ ಕುಟುಂಬ ಹೇಳಿದ್ದೇನು?

Viral Video: ಸಾಮಾನ್ಯವಾಗಿ ವಿದೇಶಿಯರು ಭಾರತವನ್ನು ಪ್ರವಾಸಿ ತಾಣವಾಗಿ ಇಷ್ಟ ಪಡುತ್ತಾರೆ. ಇಲ್ಲಿನ ಸಂಸ್ಕೃತಿ, ಆಚರಣೆಯನ್ನು ಸವಿದು ಪ್ರವಾಸಿಗರಾಗಿ ಬಂದು ಹೋಗುತ್ತಾರೆ. ಆದರೆ ಕಂಟೆಟ್ ಕ್ರಿಯೇಟರ್ ಯಾನಾ ಮತ್ತು ಅವರ ಪತಿ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ಅವರು ಇಲ್ಲಿನ ಜನ ಜೀವನವನ್ನು ಹಾಡಿ ಹೊಗಳಿದ್ದಾರೆ.

ಶಾಸಕ ಬೈರತಿ ಬಸವರಾಜ್‌ ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ

ಶಾಸಕ ಬೈರತಿ ಬಸವರಾಜ್‌ಗೆ ಶಾಕ್; ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಬಂಧನದ ಭೀತಿಯಿಂದ ಈಗಾಗಲೇ ಶಾಸಕ ಬೈರತಿ ಬಸವರಾಜ್ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಸಿಐಡಿ ಪೊಲೀಸರು 3 ವಿಶೇಷ ತಂಡ ರಚನೆ ಮಾಡಿ ಬಲೆ ಬೀಸಿದ್ದಾರೆ. ಗೋವಾ ಮತ್ತು ಮಹಾರಾಷ್ಟ್ರ ಸೇರಿ ವಿವಿಧೆಡೆ ಪೊಲೀಸರಿಂದ ಹುಡುಕಾಟ ನಡೆಸುತ್ತಿದ್ದಾರೆ.

ಬೆಂಗಳೂರು-ಕರಾವಳಿ ಜಿಲ್ಲೆಗಳ ನಡುವೆ ವಂದೇ ಭಾರತ್‌ ರೈಲು ಸೇವೆ ಆರಂಭಿಸಿ; ರೈಲ್ವೆ ಸಚಿವರಿಗೆ ಎಚ್‌.ಡಿ. ಕುಮಾರಸ್ವಾಮಿ ಪತ್ರ

ಬೆಂಗಳೂರು-ಕರಾವಳಿ ಜಿಲ್ಲೆಗಳ ನಡುವೆ ವಂದೇ ಭಾರತ್‌ ರೈಲು ಆರಂಭಿಸಿ

HD Kumaraswamy: ಬೆಂಗಳೂರು ನಗರದಿಂದ ಹಾಸನ- ಮಂಗಳೂರು ಜಂಕ್ಷನ್‌- ಉಡುಪಿ ಮತ್ತು ಕಾರವಾರ ಮಾರ್ಗವಾಗಿ ಗೋವಾದ ಮಡಗಾಂವ್‌ವರೆಗೆ ಅತಿವೇಗದ ವಂದೇ ಭಾರತ್‌ ರೈಲು ಸೇವೆ ಆರಂಭಿಸುವಂತೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಮನವಿ ಮಾಡಿದ್ದಾರೆ.

ಅಂತರ ಕಾಯ್ದುಕೊಳ್ಳಿ...ಇಎಂಐ ಬಾಕಿ ಇದೆ! ಮಂಗಳೂರಿನ ಆಲ್ಟೋ ಕಾರಿನ ಬರಹಕ್ಕೆ ನೆಟ್ಟಿಗರು ಫಿದಾ

ಭಾರಿ ವೈರಲ್ ಆಗ್ತಿದೆ ಮಂಗಳೂರಿನ ಆಲ್ಟೋ ಕಾರಿನ ಬರಹ: ಅಂತದೇನಿದೆ?

Viral Video: ಜನರು ತಮ್ಮ ವಾಹನಗಳಲ್ಲಿ ತಮಾಷೆಯ ಸಾಲುಗಳನ್ನು ಬರೆದಿರುವುದನ್ನು ನೀವು ಗಮನಿಸಿರಬಹುದು. ಅನೇಕ ಟ್ರಕ್‌, ಆಟೋ ಮತ್ತು ಬಸ್‌ಗಳಲ್ಲಿ ಬರೆದಿರುವ ಫನ್‌ ಸಾಲುಗಳು ಟ್ರಾಫಿಕ್‌ನಲ್ಲಿ ಕಾಯುತ್ತಿರುವ ಜನರನ್ನು ನಗಿಸಿದ ಉದಾಹರಣೆ ಇದೆ. ಇದೀಗ ಮಂಗಳೂರು ನೋಂದಣಿಯ ಮಾರುತಿ ಸುಜುಕಿ ಆಲ್ಟೋ ಕಾರಿನ ಹಿಂಭಾಗದಲ್ಲಿ ಬರೆದಿರುವ ಸಾಲು ನೆಟ್ಟಿಗರ ಗಮನ ಸೆಳೆದಿದೆ.

2nd Ayurveda World Summit: ಡಿ.25ರಿಂದ 28ರವರೆಗೆ ಬೆಂಗಳೂರಿನಲ್ಲಿ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ

ಡಿ.25ರಿಂದ ಬೆಂಗಳೂರಿನಲ್ಲಿ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ

ಕಜೆ ಆಯುರ್ವೇದ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಸಹಯೋಗದಲ್ಲಿ ಡಿಸೆಂಬರ್ 25 ರಿಂದ 28ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ ಆಯೋಜಿಸಲಾಗಿದೆ. 4 ದಿನದ ಕಾರ್ಯಕ್ರಮದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ.

Bengaluru Power Cut: ನಾಳೆ ಬೆಂಗಳೂರಿನ ವಿಜಯನಗರ, ಬಸವೇಶ್ವರನಗರ ಸೇರಿ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ನಾಳೆ ಬೆಂಗಳೂರಿನ ವಿಜಯನಗರ ಸೇರಿ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

BESCOM News: 66/11 ಕೆವಿ ವಿಜಯನಗರ ಸ್ಟೇಷನ್‌ನಲ್ಲಿ ‌ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಡಿ.24ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ದಯಾನಂದ ಸಾಗರ್‌ ಕಾಲೇಜಿನಲ್ಲಿ ಯಶಸ್ವಿಯಾಗಿ ನೆರವೇರಿದ ʼಅವೇಗ 2025ʼ

ದಯಾನಂದ ಸಾಗರ್‌ ಕಾಲೇಜಿನಲ್ಲಿ ಯಶಸ್ವಿಯಾಗಿ ನೆರವೇರಿದ ʼಅವೇಗ 2025ʼ

Dayananda Sagar College of Engineering: ಅವೇಗ 2025 ನಿರ್ವಹಣಾ ಉತ್ಸವವು ಶೈಕ್ಷಣಿಕ ಕಲಿಕೆ ಮತ್ತು ಪ್ರಾಯೋಗಿಕ ಅನ್ವಯದ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ದಯಾನಂದ ಸಾಗರ್‌ ಎಂಜಿನಿಯರಿಂಗ್‌ ಕಾಲೇಜಿನ ನಿರ್ವಹಣಾ ಅಧ್ಯಯನ ವಿಭಾಗದ ವಾರ್ಷಿಕ ಉಪಕ್ರಮವಾಗಿದೆ.

Bengaluru Customs Auction: MSTC ಇ-ಕಾಮರ್ಸ್ ಪೋರ್ಟಲ್‌ನಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಹರಾಜು; ಕಡಿಮೆ ಬೆಲೆಗೆ ಸಿಗಲಿದೆ ದುಬಾರಿ ಐಫೋನ್‌

ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡ ವಸ್ತುಗಳ ಇ-ಹರಾಜು

ಸರ್ಕಾರಿ ಮೂಲದ MSTC ಇ-ಕಾಮರ್ಸ್ ಪೋರ್ಟಲ್ ಮೂಲಕ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವ ಅವಕಾಶ ಲಭ್ಯವಿದೆ. ಈ ಪೋರ್ಟಲ್‌ನಲ್ಲಿ ನೋಂದಣಿ ಮಾಡುವುದು, ವಸ್ತುಗಳನ್ನು ಆಯ್ಕೆ ಮಾಡುವುದು ಹಾಗೂ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಹೇಗೆ ಎಂಬುದರ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ.

ಟಿಪ್ಸ್ ಕೊಡೋದ್ರಲ್ಲಿ ಬೆಂಗಳೂರೇ ನಂಬರ್ 1: ಆನ್‌ಲೈನ್‌ ಡೆಲಿವರಿ ಬಾಯ್ಸ್‌ಗೆ ಗ್ರಾಹಕರು ಕೊಟ್ಟ ಟಿಪ್ಸ್ ಮೊತ್ತ ಕೇಳಿದ್ರೆ ದಂಗಾಗ್ತೀರ

ಡೆಲಿವರಿ ಬಾಯ್‌ಗೆ ಬರೋಬ್ಬರಿ 68,600 ರು. ಟಿಪ್ಸ್ ಕೊಟ್ಟ ಗ್ರಾಹಕ

Viral News: ಗ್ರಾಹಕರು ತಾವು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ವಸ್ತುಗಳನ್ನು ತಂದುಕೊಡುವ ಡೆಲಿವರಿ ಬಾಯ್ಸ್‌ಗೆ ಟಿಪ್ಸ್ ನೀಡುತ್ತಾರೆ. ಬೆಂಗಳೂರಿನಲ್ಲಿ ಇನ್‌ಸ್ಟಾಮಾರ್ಟ್ ಬಳಕೆದಾರರೊಬ್ಬರು ಬರೋಬ್ಬರಿ 68,600 ರೂ. ಟಿಪ್ಸ್ ಅನ್ನು ಪಾವತಿ ಮಾಡಿದ್ದಾರೆ. ಸದ್ಯ ಈ ಸುದ್ದಿ ಭಾರಿ ವೈರಲ್ ಆಗಿದೆ.

ಬಿಕ್ಲು ಶಿವ ಹತ್ಯೆ ಪ್ರಕರಣ; ಶಾಸಕ ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್‌

ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್‌

Rowdy Biklu Shiva murder case: ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣಕ್ಕೆ ಸಂಬಂಧಿಸಿ 18 ಆರೋಪಿಗಳ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಿಐಡಿ ಪೊಲೀಸರು ಸೋಮವಾರ ಆರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ ಆದೇಶವನ್ನು ಕೋರ್ಟ್‌ ಕಾಯ್ದಿರಿಸಿದೆ.

3 ವರ್ಷಗಳಿಂದ ಶೇಕಡಾ 100ರಷ್ಟು ಪ್ಲೇಸ್‌ಮೆಂಟ್‌: ಡಾ. ಕೆ.ಬಿ. ಉಮೇಶ್ ಶೆಟ್ಟಿ

3 ವರ್ಷಗಳಿಂದ ಶೇಕಡಾ 100ರಷ್ಟು ಪ್ಲೇಸ್‌ಮೆಂಟ್‌: ಡಾ. ಕೆ.ಬಿ. ಉಮೇಶ್ ಶೆಟ್ಟಿ

ಕುಂದಾಪುರ ಎಜುಕೇಷನ್ ಸೊಸೈಟಿಗೆ 50 ವರ್ಷಗಳಾಗಿವೆ. ಸುಕುಮಾರ್ ಶೆಟ್ಟಿ ಅವರ ನೇತೃತ್ವ, ಗುರಿ, ಅವರ ದಿಟ್ಟತನದಿಂದಾಗಿ ಸಂಸ್ಥೆ ಈ ಮಟ್ಟಕ್ಕೆ ಏರಿದೆ. ಕುಂದಾಪುರ ಎಜುಕೇಷನ್ ಸೊಸೈಟಿಯ ಭಾಗವಾಗಿರುವ ಡಾ. ಬಿ.ಬಿ. ಹೆಗ್ಡೆ ಕಾಲೇಜು ಪ್ರಾಂಶುಪಾಲ ಡಾ. ಕೆ.ಬಿ. ಉಮೇಶ್ ಶೆಟ್ಟಿ ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಚಾಕೋಲೆಟ್‌ ನೀಡಿ ಲೈಂಗಿಕ ದೌರ್ಜನ್ಯ; ಹಾಸನದಲ್ಲಿ ಮಗುವಿಗೆ ಜನ್ಮ ನೀಡಿದ 10ನೇ ತರಗತಿ ಬಾಲಕಿ

ಹಾಸನದಲ್ಲಿ ಮಗುವಿಗೆ ಜನ್ಮ ನೀಡಿದ 10ನೇ ತರಗತಿ ಬಾಲಕಿ

Hassan News: ಬಾಲಕಿಯ ಮೇಲೆ ಅದೇ ಶಾಲೆಯ ಬಸ್ ಚಾಲಕ ಲೈಂಗಿಕ ದೌರ್ಜನ್ಯ‌ ಎಸಗಿದ್ದ. ಹೀಗಾಗಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆರೋಪಿಯು ನಿತ್ಯ ಚಾಕೋಲೆಟ್​ ನೀಡಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಸದ್ಯ ಆರೋಪಿಯನ್ನು ಚನ್ನರಾಯಪಟ್ಟಣ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

K Raghunath Murder Case: ಉದ್ಯಮಿ ರಘುನಾಥ್‌ ಹತ್ಯೆ ಕೇಸ್‌: ಸಿಬಿಐಗೆ ಸಿಕ್ಕಿಬಿದ್ದ ಟಿಟಿಡಿ ಮಾಜಿ ಅಧ್ಯಕ್ಷ ಆದಿಕೇಶವುಲು ಮಕ್ಕಳು

ಉದ್ಯಮಿ ಹತ್ಯೆ: ಟಿಟಿಡಿ ಮಾಜಿ ಅಧ್ಯಕ್ಷ ಆದಿಕೇಶವುಲು ಮಕ್ಕಳು ಸಿಬಿಐ ವಶಕ್ಕೆ

ಹೆಚ್‌ಎಎಲ್‌ ಠಾಣಾ ವ್ಯಾಪ್ತಿಯ ಕುಂದಲಹಳ್ಳಿ ಬಳಿ ಮೇ 14, 2019 ರಲ್ಲಿಆದಿಕೇಶವುಲು ಗೆಸ್ಟ್ ಹೌಸ್‌ನಲ್ಲಿ ರಘುನಾಥ್ ಮೃತಪಟ್ಟಿದ್ದರು. ತನಿಖೆ ಆರಂಭಿಸಿದ ಚೆನ್ನೈ ಸಿಬಿಐ ಕೊಲೆ ಕೇಸ್‌ ದಾಖಲಿಸಿ ಈಗ ಆದಿಕೇಶವುಲು ಮಗ ಶ್ರೀನಿವಾಸ್‌ ಹಾಗೂ ಮಗಳು ಕಲ್ಪಜರನ್ನು ಬಂಧಿಸಿದೆ. ತನಿಖೆ ನಡೆಸಿದ್ದ ಅಂದಿನ ಹೆಚ್‌ಎಎಲ್‌ ಇನ್ಸ್‌ಪೆಕ್ಟರ್‌ ಮೋಹನ್‌ ಅವರನ್ನೂ ಸಿಬಿಐ ಬಂಧಿಸಿ ವಿಚಾರಣೆ ನಡೆಸುತ್ತಿದೆ.

Loading...