ಮನೆಯಿಂದ ಪರಾರಿಯಾಗಿ ಶಕ್ತಿ ಯೋಜನೆ ಬಳಸಿ ಊರು ಸುತ್ತಾಡಿದ ಅಕ್ಕ- ತಮ್ಮ!
ಟ್ಯೂಷನ್ ಗೆ ಹಾಜರಾಗದ ಕಾರಣ ಪೋಷಕರು ಮಕ್ಕಳನ್ನು ಬೈದಿದ್ದರು. ಬೈದಿದ್ದರಿಂದ ಅಸಮಾಧಾನಗೊಂಡ 13 ವರ್ಷದ ಬಾಲಕಿ ತನ್ನ ಒಂಬತ್ತು ವರ್ಷದ ಸಹೋದರನೊಂದಿಗೆ ಮನೆ ತೊರೆಯಲು ನಿರ್ಧರಿಸಿದ್ದಳು. ಫೆಬ್ರವರಿ 1ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾಲಕಿ ತನ್ನ ಆಧಾರ್ ಕಾರ್ಡ್ ತೆಗೆದುಕೊಂಡು ತನ್ನ ಸಹೋದರನೊಂದಿಗೆ ಮನೆಯಿಂದ ಹೊರಬಂದಿದ್ದಳು.