ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

M. Eshwar: ತುಮಕೂರಿನ ಹಿರಿಯ ಪತ್ರಕರ್ತ ಎಂ. ಈಶ್ವರ್ ಅನಾರೋಗ್ಯದಿಂದ ನಿಧನ

ತುಮಕೂರಿನ ಹಿರಿಯ ಪತ್ರಕರ್ತ ಎಂ. ಈಶ್ವರ್ ಅನಾರೋಗ್ಯದಿಂದ ನಿಧನ

ತುಮಕೂರು ವಾರ್ತೆ ಪತ್ರಿಕೆಯ ವರದಿಗಾರ ಎಂ. ಈಶ್ವರ್ ಅವರು ಮೆದುಳಿನ ಪಾರ್ಶ್ವವಾಯು ಸಮಸ್ಯೆಯಿಂದಾಗಿ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಇವರ ನಿಧನಕ್ಕೆ ಡಿಸಿಎಂ ಡಾ.ಜಿ.ಪರಮೇಶ್ವರ್‌ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Haveri Clash: ರೈತರ ಕೈ ಕತ್ತರಿಸೋ ಮಟ್ಟಿಗೆ ಹದಗೆಟ್ಟಿದೆ ಕಾನೂನು ಸುವ್ಯವಸ್ಥೆ: ರಾಜ್ಯ ಸರ್ಕಾರದ ವಿರುದ್ಧ ಜೋಶಿ ಆಕ್ರೋಶ

ರೈತರ ಕೈ ಕತ್ತರಿಸೋ ಮಟ್ಟಿಗೆ ಹದಗೆಟ್ಟಿದೆ ಕಾನೂನು ಸುವ್ಯವಸ್ಥೆ: ಜೋಶಿ

Pralhad Joshi: ಕಾರ ಹುಣ್ಣಿಮೆ ದಿನ ಎತ್ತುಗಳ ಮೆರವಣಿಗೆ ನಡೆಸುವುದು ಹಳ್ಳಿ ಸಂಪ್ರದಾಯ. ಹಬ್ಬದ ಸಂಭ್ರಮಕ್ಕೆ ಪಟಾಕಿ ಸಿಡಿಸುವುದೂ ಸಹಜವೇ. ಆದರೆ, ʼಮಸೀದಿ ಬಳಿ ಏಕೆ ಪಟಾಕಿ ಸಿಡಿಸುತ್ತೀರಿʼ ಎಂದು ಅನ್ಯ ಕೋಮಿನವರು ಕ್ಯಾತೆ ತೆಗೆದದ್ದು ದುರುದ್ದೇಶ ಪೂರಕವಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.

ಹಾವೇರಿಯ ಗುತ್ತಲ ವ್ಯಾಪ್ತಿಯಲ್ಲಿ ಅಕ್ರಮ ಮರಳು ಅಡ್ಡೆ ಮೇಲೆ ಅಧಿಕಾರಿಗಳ ದಾಳಿ: ಪ್ರಕರಣ ದಾಖಲು

ಗುತ್ತಲ ವ್ಯಾಪ್ತಿಯಲ್ಲಿ ಅಕ್ರಮ ಮರಳು ಅಡ್ಡೆ ಮೇಲೆ ಅಧಿಕಾರಿಗಳ ದಾಳಿ

Haveri News: ಹಾವೇರಿ ತಾಲೂಕಿನ ಗುತ್ತಲ ವ್ಯಾಪ್ತಿಯಲ್ಲಿ ಹರಿಯುವ ತುಂಗಭದ್ರಾ‌ ತೀರದಲ್ಲಿ ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿರುವ ಹಾವೇರಿಯ ಗಣಿ ಮತ್ತು ಭೂ ವಿಜ್ಞಾನ ಹಿರಿಯ ಅಧಿಕಾರಿಗಳು, 80 ಟನ್ ಮರಳು ಹಾಗೂ ಎರಡು ತೆಪ್ಪಗಳು ಸೇರಿದಂತೆ ಲಾರಿಗಳನ್ನು ವಶಪಡಿಸಿಕೊಂಡಿರುವ ಘಟನೆ ಜರುಗಿದೆ.

Haveri Clash: ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ರೈತನ ಕೈ ಕಟ್‌; ಎರಡು ಕೋಮುಗಳ ನಡುವೆ ಮಾರಾಮಾರಿ, 8 ಮಂದಿಗೆ ಗಾಯ

ಹಾವೇರಿಯಲ್ಲಿ ಮಸೀದಿ ಮುಂದೆ ಪಟಾಕಿ ಸಿಡಿಸಿದ್ದಕ್ಕೆ ರೈತನ ಕೈ ಕಟ್‌

ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ನರೇಗಲ್ ಗ್ರಾಮದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಹೋರಿ ಓಡಿಸುವ ಕಾರ್ಯಕ್ರಮವಿತ್ತು. ಅದರಂತೆ ಎತ್ತುಗಳನ್ನು ಓಡಿಸುವ ಸಂದರ್ಭದಲ್ಲಿ ಗ್ರಾಮದ ಮಸೀದಿ ಬಳಿ ಹಿಂದೂ ಯುವಕರು ಪಟಾಕಿ ಸಿಡಿಸಿದ್ದರು. ಇದಕ್ಕೆ ಆಕ್ಷೇಪ ಅನ್ಯ ಸಮುದಾಯದ ಗುಂಪು ವ್ಯಕ್ತಪಡಿಸಿದ್ದು, ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ.

ʼʼನೆರೆಹೊರೆಯವರು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆʼʼ: ತಮಿಳುನಾಡಿನ ಎಸಿ ಬಸ್ ಉಲ್ಲೇಖಿಸಿ ಬೆಂಗಳೂರಿನಲ್ಲಿ ಇವಿ ಬಸ್‌ ಸಂಖ್ಯೆ ಹೆಚ್ಚಳಕ್ಕೆ ಮೋಹನ್‌ದಾಸ್ ಪೈ ಆಗ್ರಹ

ಬೆಂಗಳೂರಿನಲ್ಲಿ ಇವಿ ಬಸ್‌ ಸಂಖ್ಯೆ ಹೆಚ್ಚಳಕ್ಕೆ ಮೋಹನ್‌ದಾಸ್ ಪೈ ಆಗ್ರಹ

Mohandas Pai: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿದ ಉದ್ಯಮಿ ಮೋಹನ್‌ದಾಸ್‌ ಪೈ, ನೆರೆಯ ರಾಜ್ಯ ತಮಿಳುನಾಡು ವೇಗವಾಗಿ ಅಭಿವೃದ್ದಿ ಹೊಂದುತ್ತಿದೆ ಎಂದಿದ್ದಾರೆ. ಆದರೆ ಕರ್ನಾಟಕವು ತನ್ನ ಅನುಮೋದಿತ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡುಗಡೆ ಮಾಡುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ.

Gubbi News: ಸರ್ವ ರೋಗಕ್ಕೂ ಸಿರಿಧಾನ್ಯವೇ ಮದ್ದು : ಆಹಾರ ತಜ್ಞ ಡಾ.ಖಾದರ್

ಸರ್ವ ರೋಗಕ್ಕೂ ಸಿರಿಧಾನ್ಯವೇ ಮದ್ದು

ಹರಿ ಚಂದನ ಎಂಬ ಮೂಲ ಹೆಸರಿನ ಶ್ರೀಗಂಧ ಬೆಳೆಯನ್ನು ವಾಣಿಜ್ಯಕರವಾಗಿ ಬೆಳಯದೆ, ಪ್ರತಿಯೊಬ್ಬರು ಒಂದೂಂದು ಶ್ರೀಗಂಧ ಗಿಡವನ್ನು ಬೆಳೆದು ಅವರಿಂದ ದೊರೆಯುವ ಆರೋಗ್ಯಕರ ವಾತಾವರಣ ಗಮನಿಸಬಹುದಾಗಿದೆ. ಶ್ರೀಗಂಧ ಲೇಪನ ಸೇವಿಸುವುದರಿಂದ ಮನುಷ್ಯನಿಗೆ ಹರಡುವ ಕಾಯಿಲೆಗಳನ್ನು ತಡೆಗಟ್ಟಬಹುದು.

ಉರಿ ಬಿಸಿಲಿಗೆ ಕಮರುತ್ತಿದೆ ರಾಜ್ಯದ ಯುವಜನರ ಭವಿಷ್ಯ! ಕರುನಾಡಿನ 'ತಾಪ'ದ ಬಗ್ಗೆ ತಜ್ಞರ ಕಳವಳ

ಉರಿ ಬಿಸಿಲಿಗೆ ಕಮರುತ್ತಿದೆ ರಾಜ್ಯದ ಯುವಜನರ ಭವಿಷ್ಯ!

"ಕರ್ನಾಟಕದಲ್ಲಿ ಬಿಸಿಲು, ಆರೋಗ್ಯ ಮತ್ತು ಯುವಜನತೆ: ಯುವ-ಸ್ನೇಹಿ ಮತ್ತು ತಾಪಮಾನ-ನಿರೋಧಕ ನೀತಿ ವ್ಯವಸ್ಥೆಯ ನಿರ್ಮಾಣ" (Heat, Health and Young People in Karnataka) ಹೆಸರಿನ ಈ ವರದಿಯನ್ನು ಬೆಂಗಳೂರಿನ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್‌ನಲ್ಲಿ ಬಿಡುಗಡೆ ಮಾಡಲಾಯಿತು.

ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಯಶಸ್ಸು: ಮೃತ ದಾನಿಯ ಅಂಗಾಂಗದಿಂದ ರೋಗಿಗಳಿಗೆ ಹೊಸ ಬದುಕು!

ಮೃತ ದಾನಿಯ ಅಂಗಾಂಗದಿಂದ ರೋಗಿಗಳಿಗೆ ಹೊಸ ಬದುಕು!

ಡೆಲಿವರಿ ರೈಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನಂತ್ ಕುಮಾರ್, ಇಬ್ಬರು ಮಕ್ಕಳ ತಂದೆ ಯಾಗಿದ್ದರು. ಅಪಘಾತದ ನಂತರ ಅವರನ್ನು ಸಮೀಪದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆ, ಸರ್ಜಾಪುರ ರಸ್ತೆಗೆ ದಾಖಲಿಸಲಾಗಿತ್ತು. ವೈದ್ಯರು ನಿರಂತರ ಪ್ರಯತ್ನ ಪಟ್ಟರೂ, ಮೆದುಳಿಗೆ ಉಂಟಾಗಿದ್ದ ತೀವ್ರ ಗಾಯಗಳಿಂದಾಗಿ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ

Bairati Suresh: ಬಸ್ ಓಡಿದರೂ, ಓಡದಿದ್ದರೂ ದುಡ್ಡು ಕೊಡಲು ಸಾಧ್ಯವೇ?: ಬೈರತಿ ಸುರೇಶ್ ಪ್ರಶ್ನೆ

ಬಸ್ ಓಡಿದರೂ, ಓಡದಿದ್ದರೂ ದುಡ್ಡು ಕೊಡಲು ಸಾಧ್ಯವೇ?:

ಒಟ್ಟು 4500 ಎಲೆಕ್ಟ್ರಿಕ್ ಬಸ್ ಗಳನ್ನು ಎಂಟು ವರ್ಷಗಳ ಅವಧಿಯಲ್ಲಿ ಗುತ್ತಿಗೆ ಪಡೆಯಬೇಕಾಗಿದೆ. ಈ ಬಸ್ ಗಳಿಗೆ ಕೇಂದ್ರ ಸರ್ಕಾರವೇನೂ ಸಂಪೂರ್ಣ ಅನುದಾನ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಒಂದು ಬಸ್ ಗೆ ಕೇವಲ 30 ರಿಂದ 35 ಲಕ್ಷ ರೂಪಾಯಿಯನ್ನು ಮಾತ್ರ ನೀಡುತ್ತದೆ. ರಾಜ್ಯ ಸರ್ಕಾರ ವಾರ್ಷಿಕ ಕಿಲೋಮೀಟರ್ ಆಧಾರದಲ್ಲಿ ಸುಮಾರು 2850 ರಿಂದ 3000 ಕೋಟಿ ರೂಪಾಯಿ ಹಣ ವನ್ನು ಬಸ್ ನೀಡುವ ಗುತ್ತಿಗೆದಾರ ಸಂಸ್ಥೆಗೆ ನೀಡಬೇಕಾಗುತ್ತದೆ

K.T. Shivaprasad: ರಾಜ್ಯದ ಖ್ಯಾತ ಚಿತ್ರ ಕಲಾವಿದ, ಪ್ರಗತಿಪರ ಚಿಂತಕ ಕೆ.ಟಿ. ಶಿವಪ್ರಸಾದ್ ಇನ್ನಿಲ್ಲ

ಖ್ಯಾತ ಚಿತ್ರ ಕಲಾವಿದ, ಪ್ರಗತಿಪರ ಚಿಂತಕ ಕೆ.ಟಿ. ಶಿವಪ್ರಸಾದ್ ಇನ್ನಿಲ್ಲ

ಚಿತ್ರ ಕಲಾವಿದ, ಪ್ರಗತಿಪರ ಚಿಂತಕ ಕೆ.ಟಿ. ಶಿವಪ್ರಸಾದ್ ಅವರು ತಮ್ಮ ಕಲೆಯ ಮೂಲಕ ಸಾಮಾಜಿಕ ಬದ್ಧತೆಯನ್ನು ಅಭಿವ್ಯಕ್ತಿಸಿದ ಅಪರೂಪದ ಕಲಾವಿದರಾಗಿದ್ದರು. ರೈತ ಹಾಗೂ ದಲಿತ ಚಳವಳಿಗಳೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದ ಇವರು, ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಆಪ್ತ ಸ್ನೇಹಿತರಾಗಿಯೂ ಪರಿಚಿತರಾಗಿದ್ದರು.

CM DK Shivakumar: ಮಾದಕ ವಸ್ತುಗಳ ಜಾಲ; ಮಾಹಿತಿ ನೀಡಿದರೆ ಬಹುಮಾನ: ಸಿಎಂ ಡಿ.ಕೆ. ಶಿವಕುಮಾರ್

ಮಾದಕ ವಸ್ತುಗಳ ಜಾಲ; ಮಾಹಿತಿ ನೀಡಿದರೆ ಬಹುಮಾನ: ಸಿಎಂ ಡಿ.ಕೆ. ಶಿವಕುಮಾರ್

CM DK Shivakumar: ಮಾದಕ ವಸ್ತುಗಳ ಸೇವನೆ ಬಗ್ಗೆ ಸಾರ್ವಜನಿಕರು, ಪೋಷಕರು ಗುಪ್ತ ಮಾಹಿತಿ ನೀಡಿದರೆ ಅವರಿಗೆ ಪೊಲೀಸ್ ಇಲಾಖೆಯಿಂದ ಬಹುಮಾನ ನೀಡುವ ತೀರ್ಮಾನ ಮಾಡಲಾಗಿದೆ. ಇದರಿಂದ ಸರಬರಾಜು ಜಾಲವನ್ನು ಹತ್ತಿಕ್ಕಬಹುದು. ಮಾದಕ ವಸ್ತುಗಳ ವಿರುದ್ಧದ ಹೋರಾಟದಿಂದ ನಿಮ್ಮ ಕುಟುಂಬ, ಊರು, ಪರಿಸರ ಹಾಗೂ ರಾಜ್ಯ ಎಲ್ಲವೂ ಚೆನ್ನಾಗಿರಲಿದೆ. ದೇಶದ ಪ್ರಗತಿಗೂ ಸಹಕಾರಿಯಾಗಲಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸ್ತ್ರೀ ಲೀಡ್‌ಹರ್‌ ಪ್ರಶಸ್ತಿ 2026; ಒಂದೇ ವೇದಿಕೆಯಲ್ಲಿ 365 ಮಹಿಳೆಯರಿಗೆ ಸನ್ಮಾನ, ರಾಷ್ಟ್ರೀಯ ದಾಖಲೆ ನಿರ್ಮಾಣ

ಒಂದೇ ವೇದಿಕೆಯಲ್ಲಿ 365 ಮಹಿಳೆಯರಿಗೆ ಸನ್ಮಾನ; ರಾಷ್ಟ್ರೀಯ ದಾಖಲೆ ನಿರ್ಮಾಣ

ಬೆಂಗಳೂರಿನ ಜೆ.ಪಿ. ನಗರದಲ್ಲಿ ‘ದಿ ಸ್ತ್ರೀ – ಲವ್ ದೈಸೆಲ್ಫ್’ ಸಂಸ್ಥೆಯು ಆಯೋಜಿಸಿದ್ದ ‘ಸ್ತ್ರೀ ಲೀಡ್‌ಹರ್‌ ಪ್ರಶಸ್ತಿ 2026’ ಸಮಾರಂಭದ ಒಂದೇ ವೇದಿಕೆಯಲ್ಲಿ 365 ಮಹಿಳಾ ಸಾಧಕಿಯರನ್ನು ಸನ್ಮಾನಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಈ ಮೂಲಕ "ಸಂಸ್ಥೆಯೊಂದರಿಂದ ಅತಿ ಹೆಚ್ಚು ಮಹಿಳಾ ಸಾಧಕಿಯರಿಗೆ ಸನ್ಮಾನ" ಎಂಬ ಶೀರ್ಷಿಕೆಯಡಿಯಲ್ಲಿ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ʼ ಸೇರಿದೆ.

ಇಲಾಖೆಯ ಎಡವಟ್ಟಿಗೆ ಗುತ್ತಿಗೆದಾರ-ಕುಲಕಸುಬುದಾರರ ನಡುವೆ ಸಂಘರ್ಷ

ಗುತ್ತಿಗೆದಾರ ಇರುವ ಜಾಗದಲ್ಲಿ ಅನಾಮಧೇಯರು

ಕವರನಹಳ್ಳಿ ಸರ್ವೆ ನಂಬರ್-1ರಲ್ಲಿ ಒಟ್ಟು 16 ಎಕರೆ ಬಂಡೆ ಪ್ರದೇಶವಿದ್ದು, ಈ ಪೈಕಿ ಒಂದು ಎಕರೆ ಪ್ರದೇಶವನ್ನು ಶ್ರೀನಿವಾಸಪ್ಪ ಎಂಬುವರಿಗೆ 10 ವರ್ಷಗಳ ಅವಧಿಗೆ ಕಟ್ಟಡ ಕಲ್ಲು ಗಣಿಗಾರಿಕೆ ನಡೆಸಲು ಗಣಿ ಇಲಾಖೆ ಲೈಸೆನ್ಸ್ ನೀಡಿದೆ.  ಇದರಲ್ಲಿ ಕಾನೂನು ರೀತ್ಯಾ ರಾಯಲ್ಟಿ ಸೇರಿದಂತೆ ಎಲ್ಲ ಶುಲ್ಕಗಳನ್ನು ಪಾವತಿಸಿ  ಗಣಿಗಾರಿಕೆ ನಡೆಸುತ್ತಿದ್ದೇನೆ, ಆದರೂ ನನಗೆ ಕೆಲವರು ತೊಂದರೆ ಕೊಡುತ್ತಿದ್ದಾರೆ ಎಂದು ಶ್ರೀನಿವಾಸಪ್ಪ ತಿಳಿಸಿದ್ದಾರೆ.

Bandipur and Nagarahole safari: ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ಆರಂಭಿಸಲು ಸಿಎಂ ಸೂಚನೆ

ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ಆರಂಭಿಸಲು ಸಿಎಂ ಸೂಚನೆ

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಲ್ಲಿ ಸಫಾರಿ ಪುನರಾರಂಭಿಸಲು ಸಿಎಂ ಸೂಚಿಸಿದ್ದಾರೆ.

ಜಾಗತಿಕ ನೇತ್ರವಿಜ್ಞಾನ ಸಂಸ್ಥೆಯಿಂದ ಪ್ರೊ.ಡಾ.ಶ್ರೀ ಗಣೇಶ್ ಅವರಿಗೆ ಪ್ರತಿಷ್ಠಿತ 'ಎಲ್ಐಎಂ' ಉಪನ್ಯಾಸ ಗೌರವ

ಪ್ರೊ.ಡಾ.ಶ್ರೀ ಗಣೇಶ್ ಅವರಿಗೆ ಪ್ರತಿಷ್ಠಿತ 'ಎಲ್ಐಎಂ' ಉಪನ್ಯಾಸ ಗೌರವ

APACRS 2026ರ ವಾರ್ಷಿಕ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದ್ದು, ನೇತ್ರವಿಜ್ಞಾನ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ ಸಾಧಕರಿಗೆ ಇದನ್ನು ನೀಡಲಾಗು ತ್ತದೆ. ಈ ಪ್ರಶಸ್ತಿಯು 35 ವರ್ಷಗಳ ಇತಿಹಾಸದಲ್ಲಿ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಭಾರತದ ಕೇವಲ ಮೂರನೇ ನೇತ್ರ ತಜ್ಞರು ಎಂಬ ಹೆಗ್ಗಳಿಕೆಗೆ ಪ್ರೊ.ಡಾ.ಶ್ರೀ ಗಣೇಶ್ ಪಾತ್ರರಾಗಿದ್ದಾರೆ.

MLA Pradeep Eshwar: ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಿದ ಮುಖಂಡರ ನಿಯೋಗ; ಪ್ರಚೋದನೆ, ಅಧಿಕಾರ ದುರ್ಬಳಕೆ ಆರೋಪ

ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಎಫ್‌ಐಆರ್‌ಗೆ ಬಿಜೆಪಿ-ಜೆಡಿಎಸ್ ಒತ್ತಾಯ

ಜಯಂತಿ ಕಾರ್ಯಕ್ರಮದಲ್ಲಿ ಕೆಲವು ಯುವಕರನ್ನು ಒಳಗೆ ಪ್ರವೇಶಿಸದಂತೆ ಗೇಟಿಗೆ ಬೀಗ ಹಾಕಿಸಿ ದ್ದು, ಪ್ರತಿಭಟಿಸಿದವರ ಮೇಲೆ ಲಾಠಿಚಾರ್ಜ್ ನಡೆಸಲು ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸ ಲಾಗಿದೆ. ಬಳಿಕ ಕಾರ್ಯಕ್ರಮದ ವೇದಿಕೆಯಲ್ಲಿಯೂ ಹಾಗೂ ಕಾರ್ಯಕ್ರಮ ಮುಗಿದ ನಂತರ ಕಾರಿನ ಮೇಲೆ ನಿಂತು ಅಸಭ್ಯ ಸನ್ನೆಗಳು, ತೊಡೆತಟ್ಟುವುದು, ಮೀಸೆ ತಿರುಗಿಸುವುದು ಸೇರಿದಂತೆ ಯುವಕರನ್ನು ಮತ್ತಷ್ಟು ಕೆರಳಿಸುವ ರೀತಿಯ ವರ್ತನೆ ನಡೆಸಿದ್ದಾರೆ

Chinthamani News: ಕೈವಾರದಲ್ಲಿ ಹುಣ್ಣಿಮೆ ಪೂಜೆ ರಥೋತ್ಸವ

ಕೈವಾರದಲ್ಲಿ ಹುಣ್ಣಿಮೆ ಪೂಜೆ ರಥೋತ್ಸವ

ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ವಿಶೇಷ ಪ್ರವಚನವನ್ನು ನೀಡಿದರು. ಹುಣ್ಣಿಮೆ ಪ್ರಯುಕ್ತ ನಾದಸುಧಾರಸ ಸಾಂಸ್ಕöÈತಿಕ ವೇದಿಕೆಯಲ್ಲಿ ಅಖಂಡ ಸಂಕೀರ್ತನೆಯನ್ನು ಏರ್ಪಡಿಸ ಲಾಗಿತ್ತು. ಗರ್ಭಗುಡಿಯಲ್ಲಿ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ಮೂಲ ವಿಗ್ರಹಕ್ಕೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿತ್ತು.

Pradeep Eshwar: ಸಿದ್ದರಾಮಯ್ಯ ಭೇಟಿಯಾಗಿ ನೋವು ಹಂಚಿಕೊಂಡ ಶಾಸಕ ಪ್ರದೀಪ್‌ ಈಶ್ವರ್‌; ಧೈರ್ಯ ತುಂಬಿದ ಮಾಜಿ ಸಿಎಂ

ಶಾಸಕ ಪ್ರದೀಪ್‌ ಈಶ್ವರ್‌ಗೆ ಧೈರ್ಯ ತುಂಬಿದ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ವೇಳೆ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಚಪ್ಪಲಿ ಎಸೆದಿದ್ದಲ್ಲದೆ, ತಮ್ಮ ಹಾಗೂ ತಮ್ಮ ಕುಟುಂಬವನ್ನು ನಿಂದಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಳಿ ಶಾಸಕ ಪ್ರದೀಪ್‌ ಈಶ್ವರ್ ನೋವು ತೋಡಿಕೊಂಡಿದ್ದಾರೆ. ಈ ವೇಳೆ ರಾಜಕಾರಣದಲ್ಲಿ ಇಂತಹ ಘಟನೆಗಳು ಸಾಮಾನ್ಯ. ಇದರಿಂದ ಧೃತಿಗೆಡಬೇಡಿ ಎಂದು ಮಾಜಿ ಸಿಎಂ ಧೈರ್ಯ ತುಂಬಿದ್ದಾರೆ.

Karnataka SIR: ಎನ್ಯುಮರೇಶನ್ ಫಾರಂ ಭರ್ತಿ ಮೂಲಕ ಎಸ್ಐಆರ್ ಪ್ರಕ್ರಿಯೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

ಎನ್ಯುಮರೇಶನ್ ಫಾರಂ ಭರ್ತಿ ಮೂಲಕ ಎಸ್ಐಆರ್ ಪ್ರಕ್ರಿಯೆಗೆ ಸಿಎಂ ಡಿಕೆಶಿ ಚಾಲನೆ

CM DK Shivakumar: ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಆರಂಭವಾಗಿದ್ದು, ನನ್ನ ಮನೆಯಿಂದಲೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನನ್ನ ಎನ್ಯುಮರೇಷನ್ ಅರ್ಜಿಯನ್ನು ಭರ್ತಿ ಮಾಡಿ ಸಹಿ ಮಾಡಿ ಸಲ್ಲಿಕೆ ಮಾಡಿರುವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ ಅವಘಡ; ಆಪರೇಷನ್ ಥಿಯೇಟರ್​ನಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ

ಆಪರೇಷನ್ ಥಿಯೇಟರ್​ನಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ!

ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಭೀಕರ ಆಕ್ಸಿಜನ್ ಸಿಲಿಂಡ‌ರ್ ಸ್ಫೋಟ ಸಂಭವಿಸಿದೆ. ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ (OT) ಇದ್ದಕ್ಕಿದ್ದಂತೆ ಸಿಲಿಂಡ‌ರ್ ಸ್ಫೋಟಗೊಂಡಿದ್ದರಿಂದ, ಇಡೀ ಆವರಣದಲ್ಲಿ ದಟ್ಟವಾದ ಹೊಗೆ ಆವರಿಸಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಏಕಾಏಕಿ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿದೆ.

ಕತಾರ್ ನಿವಾಸಿ ಮಹೇಶ್ ಗೌಡಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ

ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ

ಸಮಾಜಸೇವೆ, ಜನಕಲ್ಯಾಣ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉತ್ತೇಜನಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಕತಾರ್‌ ನಿವಾಸಿ, ಸಮುದಾಯ ಮುಖಂಡ ಹಾಗೂ ಕರ್ನಾಟಕ ಸಂಘ ಕತಾರ್‌ನ ಮಾಜಿ ಅಧ್ಯಕ್ಷರಾದ ಮಹೇಶ್ ಗೌಡ ಅವರಿಗೆ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರತಿಷ್ಠಿತ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ, 6 ಮಂದಿಯ ರಕ್ಷಣೆ

ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ, 6 ಮಂದಿ ರಕ್ಷಣೆ

ಮಂಗಳೂರಿನ ಸಮುದ್ರದಲ್ಲಿ ಐಎಫ್‌ಬಿ ಮಂಜುಮಾತಾ ಮೀನುಗಾರಿಕಾ ಬೋಟ್ ಒಂದು ಮುಳುಗಿ ಅವಘಡ ಸಂಭವಿಸಿದೆ. ಸದ್ಯ ಭಾರತೀಯ ಕರಾವಳಿ ರಕ್ಷಣಾ ಪಡೆ ಆರು ಜನ ಮೀನುಗಾರರ ರಕ್ಷಣೆ ಮಾಡಿದೆ. ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಅರಬ್ಬಿ ಸಮುದ್ರದ ಮಧ್ಯೆ ಭೀಕರ ಅಲೆಗಳ ಅಬ್ಬರಕ್ಕೆ ಸಿಲುಕಿ ಮೀನುಗಾರಿಕಾ ಬೋಟ್‌ ಮುಳುಗಡೆಯಾಗಿದೆ.

ಅಕ್ರಮ ಸಂಬಂಧದ ಕುರಿತು ಪ್ರಶ್ನಿಸಿದ ಪತ್ನಿಯನ್ನೇ ರಾಡ್‌ನಿಂದ ಹೊಡೆದು ಕೊಂದ ಪತಿ

ಪತ್ನಿಯನ್ನೇ ರಾಡ್‌ನಿಂದ ಹೊಡೆದು ಕೊಂದ ಪತಿ

ಅನೈತಿಕ ಸಂಬಂಧ ಇಟ್ಟುಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪತಿಯೇ ಪತ್ನಿಯನ್ನು ಕೊಂದ ಘಟನೆ ಬೀದರ್ (Bidar) ಜಿಲ್ಲೆಯ ಭಾಲ್ಕಿ ತಾಲೂಕಿನ ಗಾಯಮುಖ ದೇವಸ್ಥಾನದ ಬಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಬೀದರ್ ತಾಲೂಕಿನ ಹೊನ್ನಿಕೇರಿ ಗ್ರಾಮದ ಸಂಜನಾ (26) ಕೊಲೆಯಾದ ದುರ್ದೈವಿ ಪತ್ನಿ.

ಇಂದಿನಿಂದ ಪ್ರತಿ ಮನೆಗೆ ನಮೂನೆ ಪತ್ರ ವಿತರಣೆ

ಇಂದಿನಿಂದ ಪ್ರತಿ ಮನೆಗೆ ನಮೂನೆ ಪತ್ರ ವಿತರಣೆ

ರಾಜ್ಯಾದ್ಯಂತ ೧.೧೫ ಲಕ್ಷಕ್ಕೂ ಹೆಚ್ಚು ಬೂತ್ ಮಟ್ಟದ ಏಜೆಂಟರನ್ನು ವಿವಿಧ ರಾಜಕೀಯ ಪಕ್ಷಗಳು ನೇಮಕ ಮಾಡಿವೆ. ಇವರ ಸಹಕಾರದೊಂದಿಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಯಶಸ್ವಿಯಾಗಿ ನಡೆಸಲಾಗುವುದು. ಪ್ರತಿ ಮತದಾರರಿಗೆ ಎರಡು ಪ್ರತಿಗಳ ಎನ್ಯೂಮರೇಷನ್ ಫಾರ್ಮ್ ನೀಡಲಾಗುತ್ತಿದ್ದು, ಸುಮಾರು ೧೧ ಕೋಟಿ ಫಾರ್ಮ್ ಮುದ್ರಿಸಲಾಗಿದೆ

Loading...