ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Bus Caught fire: ಸರ್ಕಾರಿ ಬಸ್‌ನಲ್ಲಿ ಆಕಸ್ಮಿಕ ಬೆಂಕಿ, ತಪ್ಪಿದ ದೊಡ್ಡ ಅನಾಹುತ

ಸರ್ಕಾರಿ ಬಸ್‌ನಲ್ಲಿ ಆಕಸ್ಮಿಕ ಬೆಂಕಿ, ತಪ್ಪಿದ ದೊಡ್ಡ ಅನಾಹುತ

ಮುರುಡೇಶ್ವರ ದೇವಸ್ಥಾನ ರಸ್ತೆಯಲ್ಲಿ ದೂರವಾಣಿ ಕೇಂದ್ರದ ಎದುರುಗಡೆ ಸಾಗುತ್ತಿದ್ದ ಸರ್ಕಾರಿ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಸಂಭವಿಸಿದೆ. ಈ ಬಸ್ ವಾಯುವ್ಯ ಕರ್ನಾಟಕ ಸಾರಿಗೆ ವಿಭಾಗಕ್ಕೆ ಸೇರಿದ್ದು, ಕುಮಟಾದಿಂದ ಭಟ್ಕಳ ಮಾರ್ಗವಾಗಿ ಮುರುಡೇಶ್ವರ ಬಸ್ ನಿಲ್ದಾಣದತ್ತ ಸಾಗುತ್ತಿತ್ತು.

ಪ್ಲಂಬೆಕ್ಸ್ ಇಂದಿಯಾ 2026ಕ್ಕೆ ಇಂದು ಚಾಲನೆ, ನೀರಿನ ಭದ್ರತೆ ಮತ್ತು ಸುಸ್ಥಿರ ನಗರ ವ್ಯವಸ್ಥೆಗಳಿಗೆ ಆದ್ಯತೆ

ಪ್ಲಂಬೆಕ್ಸ್ ಇಂದಿಯಾ 2026ಕ್ಕೆ ಇಂದು ಚಾಲನೆ

ಮೊದಲ ದಿನದಲ್ಲಿ ನಗರದ ಪ್ರಮುಖ ನೀರಿನ ಸವಾಲುಗಳು ಮತ್ತು ನೀತಿಯ ಚೌಕಟ್ಟುಗಳ ಕುರಿತು ಬೆಳಕು ಚೆಲ್ಲಲಾಯತು. ವಿಕಾಸ್ ಬ್ರಹ್ಮಾವರ್ (ಟ್ರಾನ್ಸ್ ವಾಟರ್ ಸಿಸ್ಟಂ ಪ್ರೈ.ಲಿ.), ಡಾ.ಶಿಹಾಬುದ್ದೀನ್ ಎ. ಮಳಿಯೆಕ್ಕಲ್ (ಐಐಟಿ ತಿರುಪತಿ), ಡಾ. ಪ್ರಮೋದ್ ಕುಮಾರ್ (ಐಐಎಸ್ಸಿ, ಬೆಂಗಳೂರು) ಮತ್ತು ಆರ್ಕಿಟೆಕ್ಟ್ ವಿ. ವಿಶ್ವನಾಥ್ (ವೈವಿ ಆರ್ಕಿಟೆಕ್ಟ್ಸ್) ಒಳನೋಟಯುಕ್ತ ಚರ್ಚೆಗಳನ್ನು ನಡೆಸಿದರು.

'ಬ್ರಾಹ್ಮಣರ ಕಾಫಿ ಬಾರ್‌'ನ ರಾಧಾಕೃಷ್ಣ ಅಡಿಗರ ಜೀವನ ಕಥನ ಏ.19ರಂದು ಬಿಡುಗಡೆ

'ಬ್ರಾಹ್ಮಣರ ಕಾಫಿ ಬಾರ್‌'ನ ರಾಧಾಕೃಷ್ಣ ಅಡಿಗರ ಜೀವನ ಕಥನ ಏ.19ರಂದು ಬಿಡುಗಡೆ

ಬೆಂಗಳೂರಿನಲ್ಲಿ ʼಬ್ರಾಹ್ಮಣರ ಕಾಫಿ ಬಾರ್‌ʼ ಎಲ್ಲಿದೆ ಎಂದು ಆಹಾರಪ್ರಿಯರಿಗೆ ಎಲ್ಲರಿಗೂ ಗೊತ್ತು. ಅಂಥ ಯಶಸ್ವಿ ಮತ್ತು ರುಚಿಕರ ಹೋಟೆಲ್‌ ಉದ್ಯಮವನ್ನು ಕಟ್ಟಿದ ರಾಧಾಕೃಷ್ಣ ಅಡಿಗರ ಜೀವನ ಕಥನ ಏ.19ರಂದು ಬಿಡುಗಡೆಯಾಗಲಿದೆ. ನ್ಯಾ.ದೇವದಾಸ್‌, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌, ಗೃಹ ಸಚಿವ ಜಿ ಪರಮೇಶ್ವರ್‌, ಸಂಸದ ತೇಜಸ್ವಿ ಸೂರ್ಯ ಮೊದಲಾದವರು ಭಾಗವಹಿಸಲಿದ್ದಾರೆ.

ʼಧರ್ಮಶ್ರೀʼಗೆ 65 ವರ್ಷ! ಏ.18ರಂದು ಬೆಂಗಳೂರಿನಲ್ಲಿ ಭೈರಪ್ಪ ಸಾಹಿತ್ಯ ಸ್ಮರಣೆ

ʼಧರ್ಮಶ್ರೀʼಗೆ 65 ವರ್ಷ! ನಾಳೆ ಬೆಂಗಳೂರಿನಲ್ಲಿ ಭೈರಪ್ಪ ಸಾಹಿತ್ಯ ಸ್ಮರಣೆ

ಧರ್ಮಶ್ರೀ ಕಾದಂಬರಿ ಎಸ್‌ ಎಲ್‌ ಭೈರಪ್ಪ ಅವರ ಮಹತ್ವದ ಕಾದಂಬರಿಗಳಲ್ಲಿ ಒಂದಾಗಿದ್ದು, ಅದನ್ನು ಅವರು ಬರೆದು 65 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನ್ಯಾಷನಲ್‌ ಕಾಲೇಜ್‌ ಸಭಾಂಗಣದಲ್ಲಿ ಏ.18ರಂದು ಶನಿವಾರ ಸಂಜೆ 5 ಗಂಟೆಗೆ ಎಸ್‌ ಎಲ್‌ ಭೈರಪ್ಪ ಸಾಹಿತ್ಯ ಸಂಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಮುಂದಿನ ಜನರೇಶನ್ ಇಂಟ್ರಾಓಕ್ಯುಲರ್ ಲೆನ್ಸ್ ಅನ್ನು ಪರಿಚಯಿಸಿದ ಜಾನ್ಸನ್ ಮತ್ತು ಜಾನ್ಸನ್

ಇಂಟ್ರಾಓಕ್ಯುಲರ್ ಲೆನ್ಸ್ ಅನ್ನು ಪರಿಚಯಿಸಿದ ಜಾನ್ಸನ್ ಮತ್ತು ಜಾನ್ಸನ್

ಹೊಸ ಫುಲ್ ವಿಸುವಲ್ ರೇಂಜ್*1 ಐಓಎಲ್ ಉನ್ನತ ಗುಣಮಟ್ಟದ ಹಾಗೂ ನಿರಂತರ ದೃಷ್ಟಿಯನ್ನು, ಸಾಟಿಯಿಲ್ಲದ ಶ್ರೇಣಿಯೊಂದಿಗೆ ಒದಗಿಸುತ್ತದೆ$6,16 ಇದರಿಂದ ರೋಗಿಗಳು ದೂರದಿಂದ ಹತ್ತಿರದವರೆಗೆ ಹಾಗೂ ಮಧ್ಯಂತರ ದೂರಗಳಲ್ಲೂ ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತದೆ ಮತ್ತು ಕನ್ನಡಕದ ಅವಶ್ಯಕತೆ ಕಡಿಮೆಯಾಗುತ್ತದೆ.‡+2,6,7 ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಟೆಕ್ನಿಸ್ ಪ್ಲಾಟ್‌ ಫಾರ್ಮ್ ಮೇಲೆ ತಯಾರಿಸಲಾಗಿದ್ದು, ಸುಧಾರಿತ ಆಪ್ಟಿಕ್ಸ್ ಮತ್ತು ಸ್ವಂತ ವಸ್ತುಗಳನ್ನು ಹೊಂದಿರುವ ಟೆಕ್ನಿಸ್ ಒಡಿಸ್ಸಿ ಐಓಎಲ್ ಸದಾ ಸ್ಪಷ್ಟ ಮತ್ತು ಹೈ-ಕಾಂಟ್ರಾಸ್ಟ್ ದೃಷ್ಟಿಯನ್ನು ಒದಗಿಸುತ್ತದೆ

ವಿಪ್ರೋದಿಂದ ಮಾರ್ಚ್ 31ಕ್ಕೆ ಅಂತ್ಯವಾದ ತ್ರೈಮಾಸಿಕದ ಫಲಿತಾಂಶಗಳ ಪ್ರಕಟ

ವಿಪ್ರೋದಿಂದ ಮಾರ್ಚ್ 31ಕ್ಕೆ ಅಂತ್ಯವಾದ ತ್ರೈಮಾಸಿಕದ ಫಲಿತಾಂಶಗಳ ಪ್ರಕಟ

ಮುಂಚೂಣಿಯ ಎಐ-ಪವರ್ಡ್ ತಂತ್ರಜ್ಞಾನ ಸೇವೆಗಳು ಮತ್ತು ಕನ್ಸಲ್ಟಿಂಗ್ ಕಂಪನಿ ವಿಪ್ರೋ ಲಿಮಿ ಟೆಡ್ (ಎನ್.ವೈ.ಎಸ್.ಇ.: ಡಬ್ಲ್ಯೂ.ಐ.ಟಿ., ಬಿ.ಎಸ್.ಇ: 507685, ಎನ್.ಎಸ್.ಇ.: ವಿಪ್ರೊ) ಮಾರ್ಚ್ 31,2026ಕ್ಕೆ ಅಂತ್ಯವಾದ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಇಂಟರ್ನ್ಯಾಷ ನಲ್ ಫೈನಾನ್ಷಿ ಯಲ್ ರಿಪೋರ್ಟಿಂಗ್ ಸ್ಟಾಂಡರ್ಡ್ಸ್ (ಐ.ಎಫ್.ಆರ್.ಎಸ್.) ಅಡಿಯಲ್ಲಿ ಪ್ರಕಟಿಸಿದೆ.

ಅಧಿಕಾರಿಗಳ ಕಿತ್ತಾಟ: ನಿರೀಕ್ಷೆಯಂತೆ ನಡೆಯದ ಕೆಲಸ

ಅಧಿಕಾರಿಗಳ ಕಿತ್ತಾಟ: ನಿರೀಕ್ಷೆಯಂತೆ ನಡೆಯದ ಕೆಲಸ

ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಕೆಲ ಅಧಿಕಾರಿಗಳಿಗೆ, ಯಾವುದೇ ತಾಂತ್ರಿಕ ಅರ್ಹತೆ ಹೊಂದಿಲ್ಲ. ಆದರೆ ಪ್ರಭಾವವನ್ನು ಬಳಸಿಕೊಂಡು, ಬೈಯಪ್ಪನಹಳ್ಳಿ ವಿಭಾಗದ ಉನ್ನತ ಹುದ್ದೆಗೆ ನೇಮಕಗೊಂಡಿ ದ್ದಾರೆ. ಕೆಲಸಕ್ಕೆ ಸೇರಿದ ಬಳಿಕ, ರಾಜ್ಯ ಸರಕಾರದ ಅಧೀನಕ್ಕೊಳಪಡದ ಹಿನ್ನೆಲೆ ಮೆಟ್ರೋದ ನಿಯಮಗಳು ಅನ್ವಯಿಸುವುದಿಲ್ಲ. ಕೇಂದ್ರ ಸರಕಾರದ ಅಧೀನದಲ್ಲಿ ಬರುತ್ತೇವೆ ಎಂದು ಹೇಳಿ ದೈನಂದಿನ ಚಟುವಟಿಕೆಗಳಿಗೆ ಸಮಸ್ಯೆಯಾಗುವಂತೆ ಹಾಗೂ ಕಾನೂನು ಉಲ್ಲಂಘನೆಯಾಗುವಂತೆ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ

Road Accident: ಯಾದಗಿರಿ ಬಳಿ ಭೀಕರ ಅಪಘಾತ, ಡಿಕ್ಕಿಯಾಗಿ ಹೊತ್ತಿ ಉರಿದ ಕಾರು- ಬಸ್ಸು, 7 ಮಂದಿ ದುರ್ಮರಣ

ಯಾದಗಿರಿ ಬಳಿ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು- ಬಸ್ಸು, 7 ಮಂದಿ ಸಾವು

ಬೆಂಗಳೂರಿನಿಂದ ಕಲಬುರಗಿಗೆ ಹೊರಟಿದ್ದ ವಿಆರ್​ಎಲ್​​ ಖಾಸಗಿ ಬಸ್ ಹಾಗೂ ಕಲಬುರಗಿಯಿಂದ ಲಿಂಗಸೂಗೂರು ಕಡೆಗೆ ಸಾಗುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, 7 ಮಂದಿ ಸಜೀವ ದಹನಗೊಂಡಿದ್ದಾರೆ. ಅಪಘಾತದಲ್ಲಿ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

Bird flu: ಚಿಕನ್‌ ಪ್ರಿಯರೇ ಎಚ್ಚರ! ಕರ್ನಾಟಕದಲ್ಲಿ H5N1 ವೈರಸ್ ಪತ್ತೆ, ಕೋಳಿ ಸಾಕಣೆಗಾರರಿಗೆ ಕ್ವಾರಂಟೈನ್

ಚಿಕನ್‌ ಪ್ರಿಯರೇ ಎಚ್ಚರ! ಕರ್ನಾಟಕದಲ್ಲಿ H5N1 ವೈರಸ್ ಪತ್ತೆ

H5 N1 ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ಹೆಸರಘಟ್ಟ ಪೌಲ್ಟ್ರಿ ಫಾರಂನಿಂದ ಇತರ ಭಾಗಗಳಿಗೆ ಕೋಳಿ ಸಾಗಣೆ ಮಾಡುವ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಮೂಲಕ H5 N1 ವೈರಸ್ ಮತ್ತಷ್ಟು ಹರಡದಂತೆ ಎಚ್ಚರ ವಹಿಸಲಾಗಿದೆ. ಸರ್ಕಾರದ ಪಶು ವೈದ್ಯಾಧಿಕಾರಿಗಳಿಂದ ಸುತ್ತಮುತ್ತ ಪಂಚಾಯಿತಿಗಳಿಗೂ ನೋಟಿಸ್ ನೀಡಲಾಗಿದೆ.

Tumkur news: ನಾಪತ್ತೆಯಾಗಿದ್ದ ಮಹಿಳೆಯ ತಲೆಬುರುಡೆ ಪತ್ತೆ, ಸಿಸಿಟಿವಿಯಲ್ಲಿ ಸಿಕ್ಕಿತು ಕೊಲೆ ಸುಳಿವು

ನಾಪತ್ತೆಯಾದ ಮಹಿಳೆಯ ತಲೆಬುರುಡೆ ಪತ್ತೆ, ಸಿಸಿಟಿವಿ ನೀಡಿತು ಕೊಲೆ ಸುಳಿವು

ಮೃತ ಯುಮುನಾ ತನ್ನ ಗಂಡ ಹಾಗೂ ಮಕ್ಕಳೊಂದಿಗೆ ಮಾ.19ರಂದು ಬರ್ತಡೇ ಆಚರಿಸಿಕೊಂಡಿದ್ದರು. ನಂತರ ಮಾ.21ರಂದು ಎಂದಿನಂತೆ ಕೆಲಸಕ್ಕೆ ಬಂದಿದ್ದಾರೆ. ಅಂದು ಸಂಜೆ ಕೆಲಸ ಬಿಟ್ಟಾಗ ಅನೈತಿಕ ಸಂಬಂಧ ಹೊಂದಿದ್ದ ರಾಘವೇಂದ್ರನ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Transfer of Judges: ರಾಜ್ಯಾದ್ಯಂತ 365 ನ್ಯಾಯಾಧೀಶರ ವರ್ಗಾವಣೆ

ರಾಜ್ಯಾದ್ಯಂತ 365 ನ್ಯಾಯಾಧೀಶರ ವರ್ಗಾವಣೆ

ಪ್ರತಿವರ್ಷದಂತೆ ನಡೆಯುವ ಸಾಮಾನ್ಯ ವಾರ್ಷಿಕ ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿ ಈ ವರ್ಗಾವಣೆ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ವರ್ಗಾವಣೆಗೊಂಡಿರುವ ಎಲ್ಲಾ ನ್ಯಾಯಾಧೀಶರು ಜೂನ್ 1 ರಿಂದಲೇ ಅನ್ವಯವಾಗುವಂತೆ ತಮ್ಮ ಹೊಸ ಕಾರ್ಯಕ್ಷೇತ್ರಗಳಲ್ಲಿ ಜವಾಬ್ದಾರಿ ವಹಿಸಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

Prakash Raj: ರಾಮ ವಲಸೆ ಕಾರ್ಮಿಕ, ರಾವಣನ ತೋಟದ ಹಣ್ಣು ಕಿತ್ತು ತಿಂದ: ಪ್ರಕಾಶ್‌ ರಾಜ್‌ ಹೊಸ ರಾಮಾಯಣ

ರಾಮ ವಲಸೆ ಕಾರ್ಮಿಕ, ರಾವಣನ ತೋಟದ ಹಣ್ಣು ತಿಂದ: ಪ್ರಕಾಶ್‌ ರಾಜ್‌ ವಿವಾದ

ಶ್ರೀ ರಾಮ ಮತ್ತು ಲಕ್ಷ್ಮಣರನ್ನು ಉತ್ತರ ಭಾರತದಿಂದ ವಲಸೆ ಬಂದ ಕಾರ್ಮಿಕರಿಗೆ ಪ್ರಕಾಶ್ ರಾಜ್ ಹೋಲಿಸಿದ್ದಾರೆ. ಉತ್ತರ ಭಾರತದ ಕಾರ್ಮಿಕರಾದ ರಾಮ ಹಾಗೂ ಲಕ್ಷ್ಮಣರು ದಕ್ಷಿಣ ಭಾರತದ ರಾವಣದ ಮಾಲಿಕತ್ವದ ಜಮೀನಿಗೆ ಪ್ರವೇಶಿಸಿ, ಅಲ್ಲಿನ ಹಣ್ಣುಗಳನ್ನು ಕದ್ದು ತಿಂದರು ಎಂದಿದ್ದಾರೆ. ಇದು ಕೆಲವರಿಗೆ ಕೋಪ ತರಿಸಿದೆ.

IPL match ticket black market: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಟಿಕೆಟ್‌ ಕಾಳಸಂತೆ ದಂಧೆ ಪತ್ತೆ, ಕ್ಯಾಂಟೀನ್‌ ನೌಕರ ಸೆರೆ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ‌ ಐಪಿಎಲ್ ಟಿಕೆಟ್‌ ಕಾಳಸಂತೆ ದಂಧೆ ಪತ್ತೆ

ಆರೋಪಿ ಚಂದ್ರಶೇಖರ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ನೀಡಿದ್ದಾನೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಸದಸ್ಯ ಎನ್ನಲಾದ ಗಣೇಶ್ ಹರಿಕೇಶ್ ಎಂಬವರು ತನಗೆ ಈ ಟಿಕೆಟ್‌ಗಳನ್ನು ನೀಡಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತೆ ಸೂಚಿಸಿದ್ದರು ಎಂದು ಆತ ಒಪ್ಪಿಕೊಂಡಿದ್ದಾನೆ. ಇದರಿಂದಾಗಿ ಈ ದಂಧೆಯ ಬೇರುಗಳು ಬಹಳ ಆಳವಾಗಿರುವುದು ಸ್ಪಷ್ಟವಾಗಿದೆ.

Cabinet meeting: ವಿವಿಗಳಲ್ಲಿ ರೋಹಿತ್‌ ವೇಮುಲ ಕಾಯ್ದೆ ಜಾರಿ, ಬೆಂಗಳೂರಿನಲ್ಲಿ 11 ಎಲಿವೇಟೆಡ್‌ ಕಾರಿಡಾರ್:‌ ಸಂಪುಟ ನಿರ್ಣಯ

ರೋಹಿತ್‌ ವೇಮುಲ ಕಾಯ್ದೆ, ಬೆಂಗಳೂರಿಗೆ 11 ಎಲಿವೇಟೆಡ್‌ ಕಾರಿಡಾರ್:‌ ಸಂಪುಟ

ಶಿಕ್ಷಣದಲ್ಲಿನ ತಾರತಮ್ಯ ಹಾಗೂ ಅನ್ಯಾಯವನ್ನು ತಡೆಯುವ ನಿಟ್ಟಿನಲ್ಲಿ 'ಕರ್ನಾಟಕ ರೋಹಿತ್ ವೇಮುಲ (ಬಹಿಷ್ಕಾರ ಅಥವಾ ಅನ್ಯಾಯದ ತಾರತಮ್ಯ ತಡೆ ಮತ್ತು ಘನತೆಯ ಹಕ್ಕು) ವಿಧೇಯಕ' ಮಂಡನೆಗೆ ನಿನ್ನೆ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

Census: ಇಂದಿನಿಂದ ಮನೆ ಮನೆ ಜನಗಣತಿ, ಈ 33 ಪ್ರಶ್ನೆಗಳಿಗೆ ಉತ್ತರಿಸಿ

ಇಂದಿನಿಂದ ಮನೆ ಮನೆ ಜನಗಣತಿ, ಈ 33 ಪ್ರಶ್ನೆಗಳಿಗೆ ಉತ್ತರಿಸಿ

ಏ. 16ರಿಂದ ಮೇ 15ರವರೆಗಿನ ಮೊದಲ ಹಂತದಲ್ಲಿ ಮನೆ ಪಟ್ಟಿ ಮತ್ತು ಮನೆ ಗಣತಿ ನಡೆಯಲಿದೆ. ಈ ವೇಳೆ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಕಾರ್ಯ ಮುಗಿದ ನಂತರ 2027ರ ಏಪ್ರಿಲ್‌ನಲ್ಲಿ ಎರಡನೇ ಹಂತದ ಜನಗಣತಿ ಕಾರ್ಯ ಆರಂಭವಾಗಲಿದೆ.

Karnataka DG-IGP MA Saleem: ರಾಜ್ಯ ಡಿಜಿ-ಐಜಿಪಿ ಎಂ.ಎ. ಸಲೀಂ ಸೇವಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ

ಡಿಜಿ-ಐಜಿಪಿ ಎಂ.ಎ. ಸಲೀಂ ಸೇವಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ

1993ರ ಬ್ಯಾಚ್ IPS ಅಧಿಕಾರಿಯಾಗಿರುವ ಎಂ.ಎ.ಸಲೀಂ ಅವರು 2025ರ ಮೇನಲ್ಲಿ ಪ್ರಭಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕವಾಗಿದ್ದರು. ಈ ವರ್ಷದ ಜೂನ್​ನಲ್ಲಿ ನಿವೃತ್ತಿಯಾಗಬೇಕಿತ್ತು. ಆದರೆ ಸುಪ್ರೀಂಕೋರ್ಟ್​ ತೀರ್ಪಿನ ಅನುಸಾರ ಎಂ.ಎ.ಸಲೀಂ ಅವರ ಸೇವಾವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ.

2nd PUC Exam-2: ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

Second puc exam 2 registration: ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಅರ್ಜಿ ಸಲ್ಲಿಸಲು ಈ ಮೊದಲು ಏಪ್ರಿಲ್ 17 ಕೊನೆಯ ದಿನವಾಗಿತ್ತು. ಆದರೆ, ಇದೀಗ ಅಭ್ಯರ್ಥಿಗಳ ಅನುಕೂಲವಾಗಲು ಅರ್ಜಿ ಸಲ್ಲಿಕೆ ಅವಧಿಯನ್ನು ಮತ್ತೊಂದು ದಿನವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವಿಸ್ತರಿಸಿದೆ.

50 ಲಕ್ಷ ರುಪಾಯಿ ಸಂಬಳವಿದ್ದರೂ ಐಷಾರಾಮಿ ವಸ್ತು ಬಳಸದ ಬೆಂಗಳೂರಿನ ಯುವತಿ: ಜೆನ್‌ ಝೀಗಳಿಗೆ ಮಾದರಿ ಇವರ ನಡೆ

50 ಲಕ್ಷ ರುಪಾಯಿ ವೇತನ ಇದ್ದರೂ ಐಷಾರಾಮಿ ವಸ್ತು ಬಳಸದ ಯುವತಿ

Viral Video: ಬೆಂಗಳೂರಿನಲ್ಲಿ ಉದ್ಯೋಗ ಮಾಡುವ 27 ವರ್ಷದ ಎಂಜಿನಿಯರ್ ಒಬ್ಬರು ವಿಭಿನ್ನ ಜೀವನ ಶೈಲಿ ಅನುಸರಿಸುವ ಮೂಲಕ ಸುದ್ದಿಯಾಗಿದ್ದಾರೆ. ಇವರು ಉತ್ತಮ ಸಂಬಳ ಪಡೆಯುತ್ತಿದ್ದರೂ ಸರಳವಾಗಿ ಬದುಕು ಸಾಗಿಸುತ್ತಿದ್ದಾರೆ. ಸದ್ಯ ಈ ಯುವತಿಯ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

CITU: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರು ಸಿಐಟಿಯು ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ

ಇಲಾಖೆ ಕಾರ್ಯದರ್ಶಿಗಳು ಪ್ರೀಡಂ ಪಾರ್ಕಿನಲ್ಲಿ ನೀಡಿದ್ದ ಭರವಸೆಯಂತೆ 19 ಬೇಡಿಕೆಗಳಲ್ಲಿ ಸರ್ಕಾರದ ಹಂತದಲ್ಲಿರುವ ಬೇಡಿಕೆಗಳನ್ನು ಹೊರತುಪಡಿಸಿ ಉಳಿದ 7 ಬೇಡಿಕೆಗಳನ್ನು ಈಡೇರಿಸಿ ಆದೇಶ ಮಾಡುವುದಾಗಿ ಹೇಳಿದ್ದರು. ಆ ಪೈಕಿ ಇಲ್ಲೀವರೆಗೆ ಒಂದೇ ಒಂದು ಬೇಡಿಕೆ ಈಡೇರಿಸದೇ ಇರುವುದು ವಿಷಾದನೀಯ. ಹೀಗಾಗಿ ಇಡೀ ರಾಜ್ಯದ ಪಂಚಾಯತ್ ನೌಕರರು ಅಸಮಾಧಾನ ಗೊಂಡು ಇಲಾಖೆಯ ವಿಳಂಬ ನೀತಿಯನ್ನು ಖಂಡಿಸಿ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಕಚೇರಿಗಳ ಮುಂದೆ ಹೋರಾಟ ನಡೆಸಲಾಗುತ್ತಿದೆ

ಹೈಕಮಾಂಡ್‌ ನಿರ್ಧಾರಕ್ಕೆ ಎಲ್ಲರೂ ಬದ್ಧ: ಸಚಿವ ಎಂ ಸಿ ಸುಧಾಕರ್

ಹೈಕಮಾಂಡ್‌ ನಿರ್ಧಾರಕ್ಕೆ ಎಲ್ಲರೂ ಬದ್ಧ: ಸಚಿವ ಎಂ ಸಿ ಸುಧಾಕರ್

ಹೈಕಮಾಂಡ್ ಯಾವ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಂಡಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಮಾಹಿತಿಯಿಲ್ಲದೆ ಮಾತನಾಡುವುದು ಸರಿಯಲ್ಲ. ಆದರೂ ಪಕ್ಷದ ಶಿಸ್ತಿಗೆ ಗೌರವ ನೀಡುವ ಜೊತೆಗೆ, ಉಂಟಾಗಿರುವ ಗೊಂದಲಗಳನ್ನು ಸರಿಪಡಿಸಿಕೊಳ್ಳುವ ಬಗ್ಗೆ ಹಿರಿಯರೊಂದಿಗೆ ಚರ್ಚಿಸುತ್ತೇವೆ

ಹೃದಯ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿ ನಿಂತ ಬೆಂಗಳೂರು: ಕೇವಲ 3 ದಿನಗಳಲ್ಲಿ ಚೇತರಿಸಿಕೊಳ್ಳುವಂತೆ ಮಾಡುವ ಕ್ರಾಂತಿಕಾರಿ ತಂತ್ರಜ್ಞಾನ ಬಳಕೆ

ಹೃದಯ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿ ನಿಂತ ಬೆಂಗಳೂರು

ವೈದ್ಯರು ಈಗ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳಾದ ಟಿಎವಿಆರ್ (ಟ್ರಾನ್ಸ್‌ ಕ್ಯಾತಿಟರ್ ಅಯೋ ರ್ಟಿಕ್ ವಾಲ್ವ್ ರಿಪ್ಲೇಸ್‌ಮೆಂಟ್) ಮತ್ತು ಟಿಎಂವಿಆರ್ (ಟ್ರಾನ್ಸ್‌ಕ್ಯಾತಿಟರ್ ಮಿಟ್ರಲ್ ವಾಲ್ವ್ ರಿಪ್ಲೇಸ್‌ಮೆಂಟ್) ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ. ಈ ವಿಧಾನಗಳು ಹಳೆಯ ಸಾಂಪ್ರದಾಯಿಕ ವಿಧಾನವಾದ ತೆರೆದ ಹೃದಯ ಚಿಕಿತ್ಸೆಗಳಿಲ್ಲದೆ, ಸಂಕೀರ್ಣ ಸಮಸ್ಯೆಗಳನ್ನೂ ಪರಿಹರಿಸುತ್ತಿವೆ.

ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ಜೋಯಾ ಐಷಾರಾಮಿ ಆಭರಣ:  ಸಂಸ್ಥೆಯ ಎರಡನೇ ಮಳಿಗೆ ಉದ್ಘಾಟನೆ

ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ಜೋಯಾ ಐಷಾರಾಮಿ ಆಭರಣ

ಒಂದು ಸುಂದರ ಕವಿತೆಯಂತೆ ವಿನ್ಯಾಸಗೊಂಡಿರುವ ಈ ಮಳಿಗೆಯು ಕೇವಲ ವ್ಯಾಪಾರ ಮಳಿಗೆ ಯಾಗಿರದೆ, ಕಲಾತ್ಮಕ ಗ್ಯಾಲರಿಯಂತೆ ಭಾಸವಾಗುತ್ತದೆ. ವಿಶಿಷ್ಟ ವ್ಯಕ್ತಿತ್ವ ಹೊಂದಿರುವ ಸ್ತ್ರೀಯರನ್ನು ತಕ್ಷಣವೇ ಆಕರ್ಷಿಸುವಂತಿದೆ. ಗ್ರಾಹಕರು ಮಳಿಗೆಯೊಳಗೆ ಸಾಗುತ್ತಿದ್ದಂತೆ, ಅದ್ಭುತ ಕರಕುಶಲತೆ ಮತ್ತು ಸೊಗಸಾದ ಆಭರಣಗಳನ್ನು ಎದುರುಗೊಳ್ಳುತ್ತಾರೆ.

Yogesh Gowda Murder Case: ಮೂವರು ಮಕ್ಕಳು ಇದ್ದಾರೆ, ಕಡಿಮೆ ಶಿಕ್ಷೆ ಕೊಡಿ; ಜಡ್ಜ್‌ಗೆ ಶಾಸಕ ವಿನಯ್‌ ಕುಲಕರ್ಣಿ ಮನವಿ

ನನಗೆ ಕಡಿಮೆ ಶಿಕ್ಷೆ ಕೊಡಿ; ಜಡ್ಜ್‌ಗೆ ಶಾಸಕ ವಿನಯ್‌ ಕುಲಕರ್ಣಿ ಮನವಿ

MLA Vinay Kulkarni: ಶಾಸಕ ವಿನಯ್‌ ಕುಲಕರ್ಣಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಎಸ್‌ ಶ್ಯಾಮ್‌ಸುಂದರ್‌ ಅವರು, ವಿನಯ್‌ ಕುಲಕರ್ಣಿ ಜನರ ವಿಶ್ವಾಸ ಗಳಿಸಿ ಗೆದ್ದಿದ್ದಾರೆ. ಮೂವರು ಮಕ್ಕಳಿದ್ದು, 3,500ಕ್ಕೂ ಅಧಿಕ ಆಕಳು/ಎಮ್ಮೆ ಸಾಕಿದ್ದು, ಅವುಗಳನ್ನು ನೋಡಿಕೊಳ್ಳಬೇಕಿದೆ. ಅವರಿಗೆ ಕಡಿಮೆ ಶಿಕ್ಷೆ ವಿಧಿಸಬೇಕು ಎಂದು ಕೋರಿದ್ದಾರೆ.

ಗಲಾಟೆ ಕೇಸ್‌ನಲ್ಲಿ ಮಾಜಿ ಸಂಸದ ಅನಂತಕುಮಾರ್‌ ಹೆಗಡೆ ಪುತ್ರನಿಗೆ ತಾತ್ಕಾಲಿಕ ರಿಲೀಫ್‌; ವಿಚಾರಣೆಗೆ ಹೈಕೋರ್ಟ್‌ ತಡೆ

ಅನಂತಕುಮಾರ್‌ ಹೆಗಡೆ ಪುತ್ರನ ವಿರುದ್ಧದ ವಿಚಾರಣೆಗೆ ಹೈಕೋರ್ಟ್‌ ತಡೆ

Road rage case: ಪುತ್ರ ಅಶುತೋಷ್ ಹೆಗಡೆ ವಿದೇಶದಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಗಲಾಟೆ ಪ್ರಕರಣದಿಂದ ಪಾಸ್‌ಪೋರ್ಟ್ ಪಡೆಯಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಮಗನ ಹೆಸರನ್ನು ಪ್ರಕರಣದಿಂದ ಕೈಬಿಡಿ ಎಂದು ಮಾಜಿ ಸಂಸದ ಅನಂತಕುಮಾರ್ ಹೆಗಡೆ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಹೈಕೋರ್ಟ್‌ ಆದೇಶದಿಂದ ದಾಬಸ್‌ಪೇಟೆ ಬಳಿ ನಡೆದಿದ್ದ ರೋಡ್‌ ರೇಜ್‌ ಪ್ರಕರಣದಲ್ಲಿ ಅಶುತೋಷ್‌ಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದಿದೆ.

Loading...