ನನ್ನ ಕುಟುಂಬವನ್ನು ಬೀದಿಗೆ ತಂದಿದ್ದಾರೆ: ಶಾಸಕ ರಾಜೇಗೌಡ ಕಣ್ಣೀರು
ಶೃಂಗೇರಿ ಕ್ಷೇತ್ರದ ರೈತರ ಕಾರ್ಮಿಕರ ಮತ್ತು ನೆಲವಾಸಿಗಳ ಸಮಸ್ಯೆ ಕುರಿತು ಚರ್ಚಿಸಲು ಆಯೋಜಿಸಿದ್ದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿದ್ದು, ಈ ವೇಳೆ ನಮ್ಮ ಕುಟುಂಬಕ್ಕೆ ವಿನಾಕಾರಣ ತೊಂದರೆ ನೀಡಲಾಗುತ್ತಿದೆ ಎಂದು ಮಾಜಿ ಶಾಸಕ ಜೀವರಾಜ್ ವಿರುದ್ಧ ಆರೋಪಿಸಿದ್ದಾರೆ.