ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Dr. Vijaya Sankeshwar: ನಾವು ಎಷ್ಟೇ ದೊಡ್ಡವರಾದರೂ ತಂದೆ ತಾಯಿ ಋಣ ತೀರಿಸಲು ಅಸಾಧ್ಯ: ಡಾ.ವಿಜಯ ಸಂಕೇಶ್ವರ

ಸನಾತನ ಧರ್ಮ ಉಳಿಯಬೇಕು

ಮನುಷ್ಯ ಪ್ರತಿಯೊಂದನ್ನೂ ಕಷ್ಟಪಟ್ಟು ಪಡೆದುಕೊಂಡಾಗ ಮಾತ್ರ ಅದರ ಬೆಲೆ ಅವನಿಗೆ ತಿಳಿಯುತ್ತದೆ. ಬಿಟ್ಟಿ ಅಥವಾ ಉಚಿತವಾಗಿ ಪಡೆದುಕೊಂಡರೆ ಅದರ ಮೌಲ್ಯ ಅವನಿಗೆ ಗೊತ್ತಾ ಗಲ್ಲ. ಉಚಿತವಾಗಿ ಸಿಗುವ ಎಲ್ಲದ್ದರಿಂದ ಮನುಷ್ಯ ಉದ್ಧಾರವಾಗಲ್ಲ ಬದಲಾಗಿ ದುಷ್ಠನಾಗು ತ್ತಾನೆ, ದೇಶದ್ರೋಹಿಯಾಗುತ್ತಾನೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಈ ಸುರಕ್ಷತಾ ಮಾನದಂಡ ಪಾಲಿಸಿದರೆ ಮಾತ್ರ ಖಾಸಗಿ ಬಸ್‌ಗಳಿಗೆ ಎಫ್‌ಸಿ; ಸರ್ಕಾರದಿಂದ ಕಠಿಣ ಮಾರ್ಗಸೂಚಿ

ಈ ಸುರಕ್ಷತಾ ಮಾನದಂಡ ಪಾಲಿಸಿದರೆ ಮಾತ್ರ ಖಾಸಗಿ ಬಸ್‌ಗಳಿಗೆ ಎಫ್‌ಸಿ

Fitness Certificate for Private buses: ಪ್ರಯಾಣಿಕರ ಸುರಕ್ಷತಾ ಮಾನದಂಡಗಳನ್ನು ಪಾಲಿಸಿದರೆ ಮಾತ್ರ ಖಾಸಗಿ ಹವಾನಿಯಂತ್ರಿತ ಸ್ಲೀಪರ್ ಕೋಚ್ ಹಾಗೂ ಪ್ರವಾಸಿ ಬಸ್‌ಗಳಿಗೆ ವಾಹನ ಸಾಮರ್ಥ್ಯ ಪ್ರಮಾಣ ಪತ್ರ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

Dr.M.C.Sudhakar: ಜ.26, 27 ದಿನಗಳ ಫಲಪುಷ್ಪ ಪ್ರದರ್ಶನ : ದೇಶಿ, ವಿದೇಶಿ ಹೂಹಣ್ಣು ತರಕಾರಿ ಪ್ರದರ್ಶನ

ಜ.26, 27 ದಿನಗಳ ಫಲಪುಷ್ಪ ಪ್ರದರ್ಶನ

ಪ್ರಮುಖ ಆಕರ್ಷಣೆಗಳಾಗಿ ಹೂವುಗಳಿಂದ ಅಲಂಕರಿಸಿದ ಐಸಿಸಿ ಮಹಿಳಾ ವಿಶ್ವ ಕಪ್ ಕಲಾಕೃತಿಯ ಚಿತ್ರ , ಕ್ರಿಕೆಟ್ ಬ್ಯಾಟ್ ಮತ್ತು ಬಾಲ್, ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರ ಪ್ರತಿಮೆ, ಡಾ ಎಂ.ಹೆಚ್.ಮರೀಗೌಡರ ಪ್ರತಿಮೆ, ಹಸು-ಕರು ಪ್ರತಿಮೆ, ಜಿಲ್ಲೆಯ ರೈತ ಮಹಿಳೆಯ ರಿಂದ ತಯಾರಿಸಲ್ಪಡುವ ಹೂವಿನ ಜೋಡಣೆ ಕಲಾಕೃತಿ, ಹೂವುಗಳಿಂದ ಅಲಂಕರಿಸಿದ ಆಧುನಿಕ ಮಹಿಳೆ ಕಲಾಕೃತಿ, ಮಾದರಿ ಕೈತೋಟ ಕಿಟೆನ್ ಗಾರ್ಡನ್ ಇರಲಿದೆ

Sandalwood actor Ganeshrao Kesarkar: ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಮೇಲೆ ಅನಗತ್ಯ ಒತ್ತಡ ಬೇಡ: ಸಿನಿಮಾ ನಟ ಗಣೇಶ್‌ರಾವ್ ಕೇಸರ್‌ಕರ್ ಅಭಿಮತ

ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಮೇಲೆ ಅನಗತ್ಯ ಒತ್ತಡ ಬೇಡ

ನಾನೂ ಕೂಡ ಶಾಲಾ ಹಂತದಲ್ಲಿ ದೊರೆತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನದ ವೇದಿಕೆಯಿಂದಲೇ ಇಂದು ಖ್ಯಾತ ನಟನಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಯರ‍್ಯಾರ ಹಣೆಯಲ್ಲಿ ಏನೇನು ಬರೆದಿದೆಯೋ ಅದೇ ಆಗಲಿದೆ. ಯಾವುದನ್ನೂ ನಾವು ಅಮುಖ್ಯ ಎಂದು ಭಾವಿಸಿ ಕಡೆಗಣಿಸಬಾರದು.

2 ಸಾವಿರಕ್ಕೆ ಮರುಳಾಗಬೇಡಿ, 5 ವರ್ಷ ಒಂದು ಅವಕಾಶ ಕೊಡಿ: ಗೃಹಲಕ್ಷ್ಮಿಯರಿಗೆ ಎಚ್‌.ಡಿ. ಕುಮಾರಸ್ವಾಮಿ ಮನವಿ

2 ಸಾವಿರಕ್ಕೆ ಮರುಳಾಗಬೇಡಿ, 5 ವರ್ಷ ಒಂದು ಅವಕಾಶ ಕೊಡಿ: ಎಚ್‌ಡಿಕೆ ಮನವಿ

HD Kumaraswamy: ತಾತ್ಕಾಲಿಕ ಉಪಶಮನ ಅಷ್ಟೇ ಐದು ಗ್ಯಾರಂಟಿಗಳು. ಇವುಗಳಿಂದ ಏನು ಉಪಯೋಗ ಇಲ್ಲ. ಕಾಂಗ್ರೆಸ್‌ ಸರ್ಕಾರವು ಗ್ಯಾರಂಟಿಗಳಿಗೆ ವರ್ಷಕ್ಕೆ ₹50,000 ಕೋಟಿ ಹಣವನ್ನು ಖರ್ಚು ಮಾಡುತ್ತಿದೆ. ನೀವು ಕಟ್ಟುವ ತೆರಿಗೆ ಹಣವನ್ನೇ ನಿಮಗೆ ನೀಡುತ್ತಿದೆ. ಇದಕ್ಕೆ ಪ್ರತಿಯಾಗಿ ವಾರ್ಷಿಕ ₹1ರಿಂದ ₹1.25 ಲಕ್ಷ ಕೋಟಿ ಸಾಲ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

Actor Kishore Kumar: ಪ್ರಾಕೃತಿಕ ಸಂಪನ್ಮೂಲಗಳ ಉಳಿವಿಗೆ ಶ್ರಮಿಸೋಣ : ಸಮಸಮಾಜ ಕಟ್ಟೋಣ : ಚಿತ್ರನಟ ಕಿಶೋರ್‌ಕುಮಾರ್

ಪ್ರಾಕೃತಿಕ ಸಂಪನ್ಮೂಲಗಳ ಉಳಿವಿಗೆ ಶ್ರಮಿಸೋಣ : ಸಮಸಮಾಜ ಕಟ್ಟೋಣ

ಮುಂದುವರೆದ ರಾಷ್ಟ್ರಗಳು ಪ್ರಕೃತಿಯ ಸಂಪನ್ಮೂಲಗಳನ್ನು ತಮಗೆ ಬೇಕಾದಂತೆ ಬಳಸು ವಂತೆ, ಭಾರತದಲ್ಲಿಯೂ ಕೂಡ ಹುಸಿಯಾದ ಅಭಿವೃದ್ದಿಯ ಕನಸುಗಳನ್ನು ಬಡವರ ಎದೆಗಳಿಗೆ ಬಿತ್ತಲಾಗುತ್ತಿದೆ. ಶಾಲಾ ಕಾಲೇಜು ಮಕ್ಕಳೇ ಮೊದಲಾಗಿ ಬಡವರು ಶ್ರಮಿಕರು ನಾವು ನೀವು ಎಚ್ಚರಗೊಳ್ಳಲಿಲ್ಲ ಎಂದರೆ ಶುದ್ಧವಾದ ಗಾಳಿ, ನೀರು, ಆಹಾರವನ್ನು ಹಣ ಕೊಟ್ಟು ಕೊಳ್ಳಬೇಕಾಗುವ ದಿನಗಳು ದೂರವಿಲ್ಲ

ಎಸ್‌ಎಸ್‌ಎಲ್‌ಸಿ ಟಾಪರ್‌ಗಳಿಗೆ ಸಿಹಿಸುದ್ದಿ; ತಾಲೂಕು, ಜಿಲ್ಲಾವಾರು ಅತೀ ಹೆಚ್ಚು ಅಂಕ ಪಡೆದವರಿಗೆ ಸರ್ಕಾರದಿಂದ 50,000 ನಗದು ಪುರಸ್ಕಾರ

ಎಸ್‌ಎಸ್‌ಎಲ್‌ಸಿ ಟಾಪರ್‌ಗಳಿಗೆ ಸರ್ಕಾರದಿಂದ 50,000 ನಗದು ಪುರಸ್ಕಾರ

Cash award for sslc toppers: ಪ್ರತೀ ತಾಲೂಕು ಹಾಗೂ ಪ್ರತೀ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದ 3 ವಿದ್ಯಾರ್ಥಿಗಳಿಗೆ ʼಗುಣಮಟ್ಟ ಭರವಸೆ ಮತ್ತು ವಿದ್ಯಾರ್ಥಿ ಪ್ರೇರಣಾ ಉಪಕ್ರಮʼದಲ್ಲಿ ಲ್ಯಾಪ್‌ಟಾಪ್‌ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ, ಈಗ ಲ್ಯಾಪ್‌ಟಾಪ್‌ ಬದಲಿಗೆ 50 ಸಾವಿರ ನಗದು ನೀಡಲು ಕ್ರಮ ಕೈಗೊಳ್ಳಲಾಗಿದೆ.

Ballari News: ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಯ ಮಾಡೆಲ್ ಹೌಸ್‌ಗೆ ಬೆಂಕಿ; ಕಾಂಗ್ರೆಸ್‌ನವರ ಕೃತ್ಯ ಎಂದ ಸೋಮಶೇಖರ್‌ ರೆಡ್ಡಿ

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮಾಡೆಲ್ ಹೌಸ್‌ಗೆ ಬೆಂಕಿ

ಮೊನ್ನೆ ಬ್ಯಾನರ್ ಗಲಾಟೆಯಾದಾಗ ಬೆಂಕಿ ಹಚ್ಚುತ್ತೇನೆಂದು ಹೇಳಿದ್ದರು. ಅಂದಿನ ಘಟನೆಗೆ ಸಾಕ್ಷಿ ಎನ್ನುವಂತೆ ಇದೀಗ ನಮಗೆ ಸೇರಿದ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ್ದಾರೆ. ಈ ಅವಘಡದ ಹಿಂದೆ ಕಾಂಗ್ರೆಸ್‌ನವರ ಕೈವಾಡವಿದೆ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಆರೋಪಿಸಿದ್ದಾರೆ.

ಚಿರತೆ ದಾಳಿ ಆತಂಕ; ಮಲೆ ಮಲೆಮಹದೇಶ್ವರ ಬೆಟ್ಟಕ್ಕೆ ರಾತ್ರಿ ವೇಳೆ ಪಾದಯಾತ್ರೆ ನಿಷೇಧ

ಚಿರತೆ ದಾಳಿ ಭೀತಿ; ಮಹದೇಶ್ವರ ಬೆಟ್ಟಕ್ಕೆ ರಾತ್ರಿ ವೇಳೆ ಪಾದಯಾತ್ರೆ ನಿಷೇಧ

Male Mahadeshwara Hill: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಪ್ರವೀಣ್ ಎಂಬುವವರು ಇತ್ತೀಚೆಗೆ ಬಲಿಯಾಗಿದ್ದರು. ಹೀಗಾಗಿ ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಬೆಟ್ಟಕ್ಕೆ ತೆರಳುವ ಪಾದಯಾತ್ರಿಗಳಿಗೆ ಹೊಸ ನಿಯಮ ಜಾರಿಗೊಳಿಸಿದೆ.

ಪ್ರವಾಸಿ ಫೋಟೋಗ್ರಫಿಗೆ OPPO India ಹೊಸ Reno15 Series ಟಚ್‌

ಪ್ರವಾಸಿ ಫೋಟೋಗ್ರಫಿಗೆ OPPO India ಹೊಸ Reno15 Series ಟಚ್‌

ಪ್ರಾಕೃತಿಕ ತತ್ವಗಳಿಂದ ಪ್ರೇರಿತ ಬಣ್ಣದ ಫಿನಿಶ್‌ಗಳು ಮತ್ತು ಪ್ರಥಮ ಬಾರಿಗೆ HoloFusion Technology ಇರುವ Reno15 Series, ಎರ್ಗೋನಾಮಿಕ್ ಫಾರ್ಮ್ ಫ್ಯಾಕ್ಟರ್ ಅನ್ನು ದೃಢವಾದ ನಿರ್ಮಾಣ ಗುಣಮಟ್ಟದೊಂದಿಗೆ ಸಂಯೋಜಿಸುತ್ತದೆ. Reno15 Pro ಮತ್ತು Reno15 Pro Mini ಫೋಟೋಗ್ರಫಿಯನ್ನು ಮತ್ತಷ್ಟು ಮುಂದುವರಿಸುತ್ತವೆ, ಇದರಲ್ಲಿ 200MP ಕ್ಯಾಮೆರಾ ಇದ್ದು ಅದ್ಭುತ ಕ್ಲಾರಿಟಿ ನೀಡುತ್ತದೆ,

ಬೆಂಗಳೂರಿನಲ್ಲಿ ಅತ್ಯಾಧುನಿಕ ಶೋರೂಮ್, ಮೇಬ್ಯಾಕ್ ಲಾಂಜ್ - ವಿವಾ ಸ್ಟಾರ್ ಉದ್ಘಾಟನೆ

ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಂಡ ಮರ್ಸಿಡಿಸ್- ಬೆಂಜ್

ಬೆಂಗಳೂರಿನ ವಿವಾ ಸ್ಟಾರ್‌ ಕರ್ನಾಟಕದ ಮೊತ್ತ ಮೊದಲ ಎಕ್ಸ್ ಕ್ಲೂಸಿವ್ ‘ಮರ್ಸಿಡಿಸ್- ಮೇಬ್ಯಾಕ್ ಲಾಂಜ್’ ಅನ್ನು ಹೊಂದಿದ್ದು, ಇದು ಉನ್ನತ ದರ್ಜೆಯ ಗ್ರಾಹಕರಿಗೆ ಮತ್ತು ಐಷಾರಾಮಿ ಕಾರು ಪ್ರಿಯರಿಗೆ ವಿಶಿಷ್ಟವಾದ ಮೇಬ್ಯಾಕ್ ಬ್ರ್ಯಾಂಡ್ ಅನುಭವವನ್ನು ಒದಗಿಸು ತ್ತದೆ. ಈ ‘ಮೇಬ್ಯಾಕ್ ಲಾಂಜ್’ ಕರ್ನಾಟಕದಲ್ಲಿ ಮೊದಲ ಬಾರಿಗೆ 'ಮೇಬ್ಯಾಕ್ ಶಾಪ್-ಇನ್- ಶಾಪ್' ಪರಿಕಲ್ಪನೆಯನ್ನು ಪರಿಚಯಿಸುತ್ತಿದ್ದು, ನವೀನವಾದ 'ಮೇಬ್ಯಾಕ್ ರಿಟೇಲ್ ಕಿಟ್' ಮೂಲಕ ವಿಶಿಷ್ಟವಾದ ರೀಟೇಲ್ ಅಂಶಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ

ಅಂಕೋಲಾದಲ್ಲಿ ಗುಂಡು ಹಾರಿಸಿಕೊಂಡು ಫಾರ್ಮಾಸಿಸ್ಟ್ ಆತ್ಮಹತ್ಯೆ; ವೈರಲ್‌ ವಿಡಿಯೋದಿಂದ ಮನನೊಂದು ಸಾವಿಗೆ ಶರಣು

ಅಂಕೋಲಾದಲ್ಲಿ ಗುಂಡು ಹಾರಿಸಿಕೊಂಡು ಫಾರ್ಮಾಸಿಸ್ಟ್ ರಾಜೀವ ಪಿಕಳೆ ಆತ್ಮಹತ್ಯೆ

Ankola News: ಕಾರವಾರದ ಖಾಸಗಿ ಆಸ್ಪತ್ರೆಯಲ್ಲಿ ಫಾರ್ಮಾಸಿಸ್ಟ್ ಆಗಿದ್ದ ರಾಜೀವ ಪಿಕಳೆ ಅವರು ಕೆಲ ದಿನಗಳ ಹಿಂದೆ ಅವಧಿ ಮೀರಿದ ಮಾತ್ರೆ ನೀಡಿದ ಬಗ್ಗೆ ವಿಡಿಯೋ ವೈರಲ್ ಆಗಿತ್ತು. ಈ ಘಟನೆಯಿಂದ ನೊಂದಿದ್ದ ರಾಜೀವ್‌ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರಜ್ವಲ್‌ ರೇವಣ್ಣ ಕೇಸ್‌ ತನಿಖೆ ನಡೆಸಿದ ಪೊಲೀಸ್‌ ಅಧಿಕಾರಿಗಳಿಗೆ ನಗದು ಬಹುಮಾನ ಘೋಷಣೆ

ಪ್ರಜ್ವಲ್‌ ರೇವಣ್ಣ ಕೇಸ್‌ ತನಿಖೆ ನಡೆಸಿದ ಪೊಲೀಸರಿಗೆ ನಗದು ಬಹುಮಾನ

ಡಿಜಿ ಮತ್ತು ಐಜಿಪಿ ಶ್ರೇಣಿಯ ಅಧಿಕಾರಿಗಳಿಗೆ ತಲಾ 20,000 ರೂ.ನಂತೆ ಒಟ್ಟು 25 ಲಕ್ಷ ರೂ. ನೀಡಲಾಗುತ್ತದೆ. ಡಿಜಿಪಿ, ಎಡಿಜಿಪಿ ಮತ್ತು ಐಜಿಪಿ ಶ್ರೇಣಿಯ ಅಧಿಕಾರಿಗಳಿಗೆ ತಲಾ 8,000 ರೂ.ನಂತೆ ಒಟ್ಟು 3 ಲಕ್ಷ ರೂ., ಇಲಾಖೆಯ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಲಾ 5,000 ರೂ.ನಂತೆ ಒಟ್ಟು 2 ಲಕ್ಷ, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಲಾ 5,000 ರೂ.ನಂತೆ 1 ಲಕ್ಷ ನೀಡಲಾಗುತ್ತದೆ.

Kalaburagi News: ಮದುವೆ ಬಳಿಕ ಗಂಡನೊಂದಿಗೆ ಹಳ್ಳಿಯಲ್ಲಿ ನೆಲೆಸಲು ಇಷ್ಟವಿಲ್ಲದೆ ನವವಿವಾಹಿತೆ ಆತ್ಮಹತ್ಯೆ

ಗಂಡನೊಂದಿಗೆ ಹಳ್ಳಿಯಲ್ಲಿ ನೆಲೆಸಲು ಇಷ್ಟವಿಲ್ಲದೆ ನವವಿವಾಹಿತೆ ಆತ್ಮಹತ್ಯೆ

ಕಲಬುರಗಿ ನಗರದ ಸಿದ್ದೇಶ್ವರ ಕಾಲೋನಿಯಲ್ಲಿ ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಎರಡೇ ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮದುವೆಯ ನಂತರ ಗಂಡನೊಂದಿಗೆ ಹಳ್ಳಿಯಲ್ಲಿ ವಾಸಿಸುವುದಕ್ಕೆ ಯುವತಿಗೆ ಇಷ್ಟವಿರಲಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ.

Bharat Connect ಮೂಲಕ ಸರಳೀಕೃತ EV ವಾಲೆಟ್ ರೀಚಾರ್ಜ್ ಮೂಲಕ NBBL ಮೊಬಿಲಿಟಿ ಕ್ಷೇತ್ರಕ್ಕೆ ಶಕ್ತಿ

EV ವಾಲೆಟ್‌ಗಳನ್ನು ಸುಗಮವಾಗಿ ರೀಚಾರ್ಜ್ ಮಾಡುವ ಅವಕಾಶ

ನೀತಿ ಆಯೋಗದ ವರದಿಯ ಪ್ರಕಾರ, ಭಾರತದಲ್ಲಿ EVಗಳ ಮಾರಾಟವು 2016ರಲ್ಲಿ 50,000 ರಿಂದ 2024ರಲ್ಲಿ 2.08 ಮಿಲಿಯನ್‌ಗೆ ಹೆಚ್ಚಾಗಿದೆ. ವರದಿ ಮುಂದುವರೆದು, 2030ರ ವೇಳೆಗೆ ಮಾರಾಟವಾಗುವ ಒಟ್ಟು ವಾಹನಗಳಲ್ಲಿ 30% ಪಾಲನ್ನು ವಿದ್ಯುತ್ ವಾಹನಗಳು ಹೊಂದುವ ಗುರಿಯನ್ನು ಭಾರತ ಹೊಂದಿದೆ ಎಂದು ತಿಳಿಸುತ್ತದೆ.

ವೈರಲ್ ಉಸಿರಾಟದ ಸೋಂಕು: ಆರಂಭಿಕ ಹಂತದ ವೈದ್ಯಕೀಯ ಚಿಕಿತ್ಸೆ ಪಡೆಯಲು ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆ ವೈದ್ಯರ ಸಲಹೆ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವೈರಲ್ ಉಸಿರಾಟದ ಸೋಂಕು

ವೈರಲ್ ಉಸಿರಾಟದ ಸೋಂಕುಗಳು ಚಳಿಗಾಲದಲ್ಲಿ ಸಾಮಾನ್ಯವಾಗಿದ್ದರೂ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಪ್ರಕರಣಗಳ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ ಎಂದು ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ವಿಶೇಷವಾಗಿ ಮಕ್ಕಳು, ಹಿರಿಯ ನಾಗರಿಕರು ಮತ್ತು ಮೊದಲೇ ಆರೋಗ್ಯ ಸಮಸ್ಯೆ ಇರುವವರಲ್ಲಿ ಈ ರೋಗ ಲಕ್ಷಣಗಳು ದೀರ್ಘಕಾಲದವರೆಗೆ ಕಂಡುಬರುತ್ತಿವೆ.

ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ 2024–25ರ ಉದ್ಘಾಟನಾ ವಾರ್ಷಿಕ ಪ್ರಶಸ್ತಿಗಳಲ್ಲಿ ಬಿ ಎಲ್ ಕಶ್ಯಪ್ & ಸನ್ಸ್ ಬೆಂಬಲಿತ ರೂಟ್ಸ್ ಫುಟ್ಬಾಲ್ ಕ್ಲಬ್ʼಗೆ ಗೌರವ

ಬಿ ಎಲ್ ಕಶ್ಯಪ್ & ಸನ್ಸ್ ಬೆಂಬಲಿತ ರೂಟ್ಸ್ ಫುಟ್ಬಾಲ್ ಕ್ಲಬ್ʼಗೆ ಗೌರವ

ಅತ್ಯುತ್ತಮ ಯುವ ಅಭಿವೃದ್ಧಿ ಕ್ಲಬ್ ಮತ್ತು ಅತ್ಯುತ್ತಮ ಫುಟ್ಬಾಲ್ ಅಕಾಡೆಮಿ ಗೌರವ ಗಳನ್ನು ರೂಟ್ಸ್ ಫುಟ್ಬಾಲ್ ಕ್ಲಬ್ ಪಡೆದುಕೊಂಡಿತು. ಉರಾ ದಿಮ್ರಿ ಅವರನ್ನು ವರ್ಷದ ಉದಯೋ ನ್ಮುಖ ಆಟಗಾರ್ತಿ (ಮಹಿಳೆಯರು) ಎಂಬ ಗೌರವಕ್ಕ ಪಾತ್ರರಾಗಿದ್ದು, ಕ್ಲಬ್ನ ಮಹಿಳಾ ಫುಟ್ಬಾಲ್ ಕಾರ್ಯಕ್ರಮಕ್ಕೆ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ.

ದ್ವಿಚಕ್ರ ವಾಹನಗಳನ್ನು ಟ್ಯಾಕ್ಸಿಯಾಗಿ ಬಳಸಬಹುದು ಎಂದ ಹೈಕೋರ್ಟ್

ಬೈಕ್‌ ಟ್ಯಾಕ್ಸಿ ನಿಷೇಧಿಸಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆ

ದ್ವಿಚಕ್ರ ವಾಹನಗಳನ್ನು ಟ್ಯಾಕ್ಸಿಯಾಗಿ ಬಳಸಬಹುದು ಎಂದು ಹೈಕೋರ್ಟ್ ಹೇಳಿದ್ದು, ಇದರಿಂದ ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ನಿಷೇಧಿಸಿದ್ದ ರಾಜ್ಯ ಸರ್ಕಾರಕ್ಕೆ ಭಾರಿ ಹಿನ್ನಡೆಯುಂಟಾದಂತಾಗಿದೆ. ರಾಜ್ಯ ಸರ್ಕಾರದ ಆದೇಶವನ್ನು ಈ ಹಿಂದೆ ಏಕಸದಸ್ಯ ಪೀಠ ಎತ್ತಿ ಹಿಡಿದಿತ್ತು. ಆದರೆ ಇದೀಗ ಅದನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಬೆಂಗಳೂರಿನಲ್ಲಿ ಶುರುವಾಯ್ತು ಮೈಸೂರಿನ ಮೈಲಾರಿ ಹೋಟೆಲ್;  ಉದ್ಘಾಟಿಸಿ, ದೋಸೆ ಸವಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರಿನಲ್ಲಿ ಶುರುವಾಯ್ತು ಮೈಸೂರಿನ ಮೈಲಾರಿ ಹೋಟೆಲ್‌

ಐತಿಹಾಸಿಕ ರುಚಿಯನ್ನು ಹೊತ್ತು ಬಂದಿರುವ ಪ್ರಸಿದ್ಧ 'ಒರಿಜಿನಲ್ ವಿನಾಯಕ ಮೈಲಾರಿ-1938 ಹೋಟೆಲ್‌ನ ಬೆಂಗಳೂರು ಶಾಖೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಸಿಎಂ ಸಿದ್ದರಾಮಯ್ಯ ಅವರು ಖುದ್ದಾಗಿ ಕುಳಿತು ಪ್ರಸಿದ್ಧ ಬೆಣ್ಣೆ ಖಾಲಿ ದೋಸೆ ಮತ್ತು ಕಾಶಿ ಹಲ್ವಾವನ್ನು ಸವಿದರು.

ಸಮವಸ್ತ್ರದ ಆಚೆಗೂ ಮುಂದುವರಿಯುವ ಧ್ಯೇಯ: ಭಾರತೀಯ ಸೇನೆಯಿಂದ ಎಡಬ್ಲ್ಯೂಎಸ್ ವರೆಗೆ ಕುಮಾರ್ ವಿಕ್ರಮ್ ಸಿಂಗ್ ಅವರ ಪ್ರಯಾಣ

ಭಾರತೀಯ ಸೇನೆಯಿಂದ ಎಡಬ್ಲ್ಯೂಎಸ್ ವರೆಗೆ ಕುಮಾರ್ ವಿಕ್ರಮ್ ಪ್ರಯಾಣ

ವಿಕ್ರಮ್ 2022ರಲ್ಲಿ ಎಡಬ್ಲ್ಯೂಎಸ್ ಸೇರ್ಪಡಯಾಗಿದ್ದು ಅಮೆಜಾನ್ ನಾಯಕತ್ವ ತತ್ವಗಳಲ್ಲಿ ಸಹಜವಾಗಿರುವ ಯುದ್ಧ ಮತ್ತು ಯುದ್ಧೇತರ ಹುದ್ದೆಗಳಲ್ಲಿ ಅಪಾರ ಅನುಭವ ತಂದಿದ್ದಾರೆ. “ನಾವು ಜೀವಿಸುತ್ತಿರುವ ಹಲವು ಮೌಲ್ಯಗಳಾದ ಮಾಲೀಕತ್ವ, ಲೆಕ್ಕಾಚಾರದ ರಿಸ್ಕ್-ತೆಗೆದು ಕೊಳ್ಳುವಿಕೆ ಮತ್ತು ಫಲಿತಾಂಶಗಳನ್ನು ನೀಡುವುದು ಎಲ್ಲವೂ ಅಮೆಜಾನ್ ನಾಯಕತ್ವ ತತ್ವಗಳಲ್ಲಿ ಸಂಯೋಜನೆಗೊಂಡಿವೆ” ಎಂದು ಅವರು ಹೇಳಿದರು

Fund for Badami Development: ಬಾದಾಮಿ ಅಭಿವೃದ್ಧಿಗೆ ಬರುವುದೇ ಅನುದಾನ ?

ಬಾದಾಮಿ ಅಭಿವೃದ್ಧಿಗೆ ಬರುವುದೇ ಅನುದಾನ ?

ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯಲ್ಲಿ ಮೂರು ದಿನಗಳ ಕಾಲ ನಡೆದ ಚಾಲುಕ್ಯ ಉತ್ಸವಕ್ಕೆ ಬುಧವಾರ ರಾತ್ರಿ ತೆರೆ ಬಿದ್ದಿದೆ. ಉತ್ಸವದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಸಂಸದ ಪಿ.ಸಿ.ಗದ್ದಿಗೌಡರ ಅಭಿವೃದ್ಧಿಗೆ ಬದ್ಧ ಎಂಬ ಮಾತು ಗಳನ್ನು ಹೇಳಿರುವುದು ಜನರು ಸಂತಸಗೊಂಡಿದ್ದಾರೆ.

ಧರ್ಮಸ್ಥಳ ಬುರುಡೆ ಪ್ರಕರಣ; ಇಂದು ಶ್ರೀ ಕ್ಷೇತ್ರದ ಪರ ಸಲ್ಲಿಸಿದ ಅರ್ಜಿ ವಿಚಾರಣೆ, ಬೆಳ್ತಂಗಡಿಗೆ ಹಿರಿಯ ನ್ಯಾಯವಾದಿ ರಾಜಶೇಖರ್ ಹಿಲಿಯಾರ್  ಭೇಟಿ

ಬೆಳ್ತಂಗಡಿ ನ್ಯಾಯಾಲಯಕ್ಕೆ ಹಿರಿಯ ನ್ಯಾಯವಾದಿ ರಾಜಶೇಖರ್ ಹಿಲಿಯಾರ್ ಭೇಟಿ

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಹೊಸ ಬೆಳವಣಿಗೆ ಕಂಡುಬಂದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಸಲ್ಲಿಸಲಾದ ಅರ್ಜಿ ವಿಚಾರಣೆಗಾಗಿ ಹಿರಿಯ ಹಾಗೂ ಖ್ಯಾತ ವಕೀಲ ರಾಜಶೇಖರ್ ಹಿಲಿಯಾರ್ ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಲಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಅವರು ವಕೀಲರ ತಂಡದ ಭಾಗವಾಗಿ ಹಾಜರಾಗುತ್ತಿದ್ದು, ಈ ಹಿಂದೆ ಸಿ.ವಿ. ನಾಗೇಶ್ ಅವರು ಕ್ಷೇತ್ರದ ಪರವಾಗಿ ವಕಾಲತ್ತು ವಹಿಸಿದರು.

Bone Marrow Transplant Unit: ಸ್ಪರ್ಶ್‌ ಆಸ್ಪತ್ರೆ ಹೆಣ್ಣೂರು ರಸ್ತೆ ಶಾಖೆಯಲ್ಲಿ ಅತ್ಯಾಧುನಿಕ ಅಸ್ಥಿಮಜ್ಜೆ ಕಸಿ ಘಟಕ ಆರಂಭ

ಅತ್ಯಾಧುನಿಕ ಅಸ್ಥಿಮಜ್ಜೆ ಕಸಿ ಘಟಕ ಆರಂಭ

ಅತ್ಯಾಧುನಿಕ ಆಸ್ಪತ್ರೆಗಳಲ್ಲಿ ಒಂದಾಗಿರುವ ಹೆಣ್ಣೂರು ಸ್ಪರ್ಶ್‌ ಆಸ್ಪತ್ರೆಯು ಈ ಮೂಲಕ ಕನಾಟಕದಲ್ಲಿ ಹೆಚ್ಚುತ್ತಿರುವ ಗಂಭೀರ ರಕ್ತ ಕ್ಯಾನ್ಸರ್‌ಗಳ ಚಿಕಿತ್ಸೆಗೆ ಸುಧಾರಿತ ತಂತ್ರಜ್ಞಾನ ಹಾಗೂ ತಜ್ಞ ವೈದ್ಯರು, ವೈದ್ಯಕೀಯ ಸವಲತ್ತುಗಳೊಂದಿಗೆ ಸಜ್ಜಾಗಿದ್ದು ಕೇವಲ ರಾಜ್ಯ ಮಾತ್ರ ವಲ್ಲ ದಕ್ಷಿಣ ಭಾರತದ ಹಾಗೂ ವಿದೇಶಗಳ ರೋಗಿಗಳಿಗೂ ಕ್ಯಾನ್ಸರ್‌ನಿಂದ ಗುಣಮುಖ ರಾಗುವ ಭರವಸೆ ಮೂಡಿಸಿದೆ

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: ಸಿವಿಲ್ ಸೇವಾ ಹುದ್ದೆಗಳ ವಯೋಮಿತಿ 5 ವರ್ಷ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು

ಸಿವಿಲ್ ಸೇವಾ ಹುದ್ದೆಗಳ ವಯೋಮಿತಿ 5 ವರ್ಷ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು

ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ಮತ್ತು ಅಲೆಮಾರಿ ಸಮುದಾಯಕ್ಕೆ ಸಿಹಿ ಸುದ್ದಿ ನೀಡಲಾಗಿದೆ.

Loading...