ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ಅದ್ಧೂರಿಯಾಗಿ ನೆರವೇರಿದ ಐತಿಹಾಸಿಕ ಕುರುಗೋಡು ದೊಡ್ಡ ಬಸವೇಶ್ವರ ರಥೋತ್ಸವ

ಅದ್ಧೂರಿಯಾಗಿ ನಡೆದ ಕುರುಗೋಡು ದೊಡ್ಡ ಬಸವೇಶ್ವರ ರಥೋತ್ಸವ

Kurugodu News: ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಕುರುಗೋಡು ದೊಡ್ಡ ಬಸವೇಶ್ವರ ರಥೋತ್ಸವವು ಮಂಗಳವಾರ ಮಧ್ಯಾಹ್ನ‌ 1 ಗಂಟೆ 40 ನಿಮಿಷಕ್ಕೆ ಭಕ್ತಿ ಭಾವದಿಂದ ಜರುಗಿತು. ರಥೋತ್ಸವವು ಜಾತ್ರೆಯೂ ಗ್ರಹಣದ ಹಿನ್ನೆಲೆ ಸಮಯಕ್ಕೂ ಮುನ್ನವೇ ನೆರವೇರಿತು

ದಾವಣಗೆರೆಯಲ್ಲಿ ಉದ್ಯಮಿ ದಂಪತಿ, ಇಬ್ಬರು ಯುವತಿಯರಿಂದ ಜೈನ ಸನ್ಯಾಸ ದೀಕ್ಷೆ ಸ್ವೀಕಾರ

ದಾವಣಗೆರೆಯಲ್ಲಿ ನಾಲ್ವರಿಂದ ಜೈನ ಸನ್ಯಾಸ ದೀಕ್ಷೆ ಸ್ವೀಕಾರ

ದಾವಣಗೆರೆಯಲ್ಲಿ ಕೋಟ್ಯಂತರ ರೂಪಾಯಿಯ ಹಣ-ಆಸ್ತಿ ದಾನ ಮಾಡಿ ದಂಪತಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಈ ದಂಪತಿಯ ಇಬ್ಬರು ಪುತ್ರರು ಕೂಡ ಮೂರು ವರ್ಷಗಳ ಹಿಂದೆಯೇ ಸನ್ಯಾಸತ್ವ ಸ್ವೀಕರಿಸಿದ್ದರು. ಇನ್ನು ಇದೇ ವೇಳೆ ಇಬ್ಬರು ಯುವತಿಯರು ಕೂಡ ಲೌಕಿಕ ಜೀವನ ತೊರೆದು ಸನ್ಯಾಸ ಜೀವನ ಆಯ್ಕೆ ಮಾಡಿಕೊಂಡಿದ್ದಾರೆ.

ಕುಟುಂಬವನ್ನು ಬೀದಿಗೆ ತಂದಿದ್ದಾರೆ, ನಾನು ಚುನಾವಣೆಗೆ ಸ್ಪರ್ಧಿಸಲ್ಲ: ಶೃಂಗೇರಿ ಶಾಸಕ ರಾಜೇಗೌಡ ಕಣ್ಣೀರು

ನನ್ನ ಕುಟುಂಬವನ್ನು ಬೀದಿಗೆ ತಂದಿದ್ದಾರೆ: ಶಾಸಕ ರಾಜೇಗೌಡ ಕಣ್ಣೀರು

ಶೃಂಗೇರಿ ಕ್ಷೇತ್ರದ ರೈತರ ಕಾರ್ಮಿಕರ ಮತ್ತು ನೆಲವಾಸಿಗಳ ಸಮಸ್ಯೆ ಕುರಿತು ಚರ್ಚಿಸಲು ಆಯೋಜಿಸಿದ್ದ ಕಾಂಗ್ರೆಸ್‌ ಜನಾಂದೋಲನ ಸಮಾವೇಶದಲ್ಲಿ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿದ್ದು, ಈ ವೇಳೆ ನಮ್ಮ ಕುಟುಂಬಕ್ಕೆ ವಿನಾಕಾರಣ ತೊಂದರೆ ನೀಡಲಾಗುತ್ತಿದೆ ಎಂದು ಮಾಜಿ ಶಾಸಕ ಜೀವರಾಜ್‌ ವಿರುದ್ಧ ಆರೋಪಿಸಿದ್ದಾರೆ.

Appke EV Scooter Scam: ಬೆಂಗಳೂರಿನಲ್ಲಿ ಇವಿ ಸ್ಕೂಟರ್ ಶೋ ರೂಮ್‌ನಿಂದ 35 ಕೋಟಿ ರೂ. ವಂಚನೆ; ಗ್ರಾಹಕರ ಹೆಸರಲ್ಲಿ 35,000 ಬೆಲೆಯ ವಾಹನಕ್ಕೆ 1.50 ಲಕ್ಷ ಲೋನ್‌!

ಬೆಂಗಳೂರಿನಲ್ಲಿ ಇವಿ ಸ್ಕೂಟರ್ ಹೆಸರಲ್ಲಿ 35 ಕೋಟಿ ರೂ. ವಂಚನೆ

ಇವಿ ಸ್ಕೂಟರ್ ನೀಡುವ ನೆಪದಲ್ಲಿ ಗ್ರಾಹಕರಿಂದ ಆಧಾರ್, ಪಾನ್ ಕಾರ್ಡ್ ಪಡೆದ ಶೋರೂಂ ಮಾಲೀಕರು, ಗ್ರಾಹಕರಿಗೆ ತಿಳಿಯದಂತೆ ಕೊಟಕ್ ಮಹೀಂದ್ರಾ ಬ್ಯಾಂಕ್ ಮೂಲಕ ಲೋನ್ ಮಾಡಿಸಿದ್ದಾರೆ. ಕೇವಲ 35,000 ರೂ. ಬೆಲೆಬಾಳುವ ಸಾಧಾರಣ ಇವಿ ಸ್ಕೂಟರ್‌ಗೆ 1.50 ಲಕ್ಷ ರೂಪಾಯಿ ಲೋನ್ ಮಾಡಿಸಿ ಬ್ಯಾಂಕ್‌ನಿಂದ ಹಣ ಪಡೆದುಕೊಳ್ಳಲಾಗಿದೆ. ಇದರಿಂದ ಗ್ರಾಹಕರು ಸಂಕಷ್ಟಕ್ಕೀಡಾಗಿದ್ದಾರೆ.

Phone Tapping: ಫೋನ್‌ ಕದ್ದಾಲಿಕೆ ನನ್ನ ಗುಣವಲ್ಲ, ಅದೇನಿದ್ದರೂ ಕಾಂಗ್ರೆಸ್ ಪಕ್ಷದ್ದೇ ಆವಿಷ್ಕಾರ; ಸಿಎಂ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ಕಿಡಿ

ಕದ್ದಾಲಿಕೆ ನನ್ನ ಗುಣವಲ್ಲ, ಅದು ಕಾಂಗ್ರೆಸ್‌ನ ಆವಿಷ್ಕಾರ ಎಂದ ಎಚ್‌ಡಿಕೆ

ನಿಮ್ಮ ಪಕ್ಷದಲ್ಲಿನ ಕುರ್ಚಿ ಕಾಳಗದ ಮುಂದುವರಿದ ಭಾಗವೇ ಫೋನ್ ಕದ್ದಾಲಿಕೆ ಎನ್ನುವ ಅನುಮಾನ ಪ್ರತಿಪಕ್ಷಗಳದ್ದು ಮತ್ತು ಮಾಧ್ಯಮಗಳದ್ದು. ಪ್ರಶ್ನಿಸುವ ಜಾಗದಲ್ಲಿ ಪ್ರತಿಪಕ್ಷಗಳಿವೆ, ಉತ್ತರಿಸಿ. ವಿಷಯಾಂತರ ಬಿಟ್ಟು ಸತ್ಯ ಹೇಳಿ. ಸತ್ಯ ನಿಮ್ಮನೆ ದೇವ್ರು ಅಲ್ಲವೇ? ಸತ್ಯಮೇವ ಜಯತೇ ನಿಮ್ಮ ಸಿದ್ಧಸ್ಲೋಗನ್! ಕಥೆ ಕಟ್ಟಿ ಕಾಲಹರಣ ಮಾಡುತ್ತಿರೇಕೆ? ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Haveri News: ಕಜ್ಜರಿ ಪ್ಲಾಟ್ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ; ಸಮಸ್ಯೆ ಪರಿಹರಿಸಲು ಗ್ರಾಮಸ್ಥರ ಆಗ್ರಹ

ಕಜ್ಜರಿ ಪ್ಲಾಟ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ; ಗ್ರಾಮಸ್ಥರ ಪರದಾಟ

Haveri News: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸಮೀಪದ ಕಜ್ಜರಿ ಪ್ಲಾಟ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ತೀವ್ರವಾಗುತ್ತಿದ್ದು, ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಗ್ರಾಮಸ್ಥರ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೈವಾರ ತಾತಯ್ಯ ಬರೆದಿರುವ 'ಕಾಲಜ್ಞಾನ' ಇಂದಿಗೂ ಪ್ರಸ್ತುತ: ಕೆ.ವಿ. ಪ್ರಭಾಕರ್

ಕೈವಾರ ತಾತಯ್ಯ ಬರೆದಿರುವ 'ಕಾಲಜ್ಞಾನ' ಇಂದಿಗೂ ಪ್ರಸ್ತುತ: ಕೆವಿಪಿ

KV Prabhakar: ಮನುಷ್ಯನ ಶ್ರೇಷ್ಠತೆಯ ವ್ಯಸನಕ್ಕೆ ತಮ್ಮ ಅನುಭಾವದ ಮೂಲಕ ಮದ್ದು ಅರೆದವರು ಕೈವಾರ ತಾತಯ್ಯ ಅವರು, ಅಧ್ಯಾತ್ಮ‌ ಅಂದರೆ ಚರ್ಮಶುದ್ಧಿ ಅಲ್ಲ, ಅಂತರಂಗದ ಶುದ್ದಿ ಎಂದು ಬದುಕಿ‌ ತೋರಿಸಿದವರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿದ್ದಾರೆ.

Kalaburagi News: ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಅಪರಿಚಿತರಿಂದ ಬಾಂಬ್ ಬೆದರಿಕೆ ಸಂದೇಶ

ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

Kalaburagi News: ಕಲಬುರಗಿ ಡಿಸ್ಟ್ರಿಕ್ಟ್ ಕೋರ್ಟ್ ಆಫೀಸ್ ಇ-ಮೇಲ್‌ಗೆ ಬಂದ ಸಂದೇಶದಲ್ಲಿ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಇಟ್ಟಿರುವುದಾಗಿ ಉಲ್ಲೇಖಿಸಲಾಗಿತ್ತು. ಈ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ತಕ್ಷಣವೇ ಎಚ್ಚೆತ್ತುಕೊಂಡು ಭದ್ರತಾ ಕ್ರಮಗಳನ್ನು ಕೈಗೊಂಡರು. ಈ ಕುರಿತ ವಿವರ ಇಲ್ಲಿದೆ.

Bangalore Tunnel Road: ಸಂಚಾರ ದಟ್ಟಣೆ ಮುಕ್ತಿಗೆ ಬೆಂಗಳೂರಿನಲ್ಲಿ ಶೀಘ್ರವೇ ಮತ್ತೊಂದು ಸುರಂಗ ಮಾರ್ಗ

ಸಂಚಾರ ದಟ್ಟಣೆ ಮುಕ್ತಿಗೆ ಬೆಂಗಳೂರಿನಲ್ಲಿ ಶೀಘ್ರವೇ ಮತ್ತೊಂದು ಸುರಂಗ ಮಾರ್ಗ

ಗೊರಗುಂಟೆಪಾಳ್ಯ ಜಂಕ್ಷನ್ ವಾಯುವ್ಯ ಬೆಂಗಳೂರಿನ ಪ್ರಮುಖ ಸಂಚಾರ ಕೇಂದ್ರವಾಗಿದ್ದು, ತುಮಕೂರು ರಸ್ತೆ, ಹೊರ ವರ್ತುಲ ರಸ್ತೆ ಹಾಗೂ ಸುತ್ತಮುತ್ತಲಿನ ಕೈಗಾರಿಕಾ ಮತ್ತು ವಸತಿ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಪೀಕ್ ಅವಧಿಯಲ್ಲಿ ಇಲ್ಲಿ ಸಂಚಾರ ನಿಧಾನಗೊಳ್ಳುವುದು, ಸಿಗ್ನಲ್‌ಗಳಲ್ಲಿ ದೀರ್ಘ ಸಾಲುಗಳು ನಿರ್ಮಾಣವಾಗುವುದು ಸಾಮಾನ್ಯ ದೃಶ್ಯವಾಗಿದೆ.

ಪೋಕ್ಸೊ ಕೇಸ್; ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮಾ.6ಕ್ಕೆ ಮುಂದೂಡಿಕೆ

ಮುತ್ಯಾ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Mallikarjun Mutya Case: ಮಲ್ಲಿಕಾರ್ಜುನ ಮುತ್ಯಾ ಅವರ ನಿರೀಕ್ಷಣಾ ಜಾಮೀನು ಅರ್ಜಿಗೆ ಸರಕಾರದ ಪರ ವಕೀಲರದಿಂದ ಆಕ್ಷೇಪಣೆ ಹಿನ್ನೆಲೆಯಲ್ಲಿ ಮಾರ್ಚ್ 6ಕ್ಕೆ ವಿಚಾರಣೆಯನ್ನು ಯಾದಗಿರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಮಂಗಳವಾರ ಮುಂದೂಡಿದೆ.

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ 10 ಕೋಟಿ ಮೌಲ್ಯದ ಡ್ರಗ್ಸ್‌ ಪತ್ತೆ; ಕೇರಳ ಮೂಲದ ಇಬ್ಬರ ಬಂಧನ

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ 10 ಕೋಟಿ ಮೌಲ್ಯದ ಡ್ರಗ್ಸ್‌ ಪತ್ತೆ

Drugs seized in Bengaluru: ಬೆಂಗಳೂರು ಹೊರವಲಯದ ಬಾಗಲೂರಿನ ಪ್ರೆಸ್ಟೀಜ್‌ ಫೈನ್‌ ಬೇಕರಿ ಪಾರ್ಕ್‌ನ ಫ್ಲ್ಯಾಟ್‌ವೊಂದರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್‌ ಅನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದು, ಕೇರಳ ಮೂಲದ ಇಬ್ಬರನ್ನು ಬಂಧಿಸಿದ್ದಾರೆ.

ವಿದ್ಯುತ್‌ ಸಂಬಂಧಿತ ದೂರುಗಳಿಗೆ 1912 ಅಥವಾ ವಾಟ್ಸ್‌ಆ್ಯಪ್‌ ಸಹಾಯವಾಣಿ ಬಳಸಿ: ಬೆಸ್ಕಾಂ

ವಿದ್ಯುತ್‌ ಸಂಬಂಧಿತ ದೂರುಗಳಿಗೆ ಬೆಸ್ಕಾಂ ವಾಟ್ಸ್‌ಆ್ಯಪ್‌ ಸಹಾಯವಾಣಿ ಬಳಸಿ

Bescom Helpline: ವಿದ್ಯುತ್‌ ಪೂರೈಕೆ ಸೇರಿದಂತೆ ವಿದ್ಯುತ್‌ ಸಂಬಂಧಿತ ದೂರುಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಿಗೆ ಸಂಬಂಧಿಸಿದಂತೆ 11 ʼವಾಟ್ಸ್‌ ಆ್ಯಪ್‌ʼ ಸಹಾಯವಾಣಿ ಸಂಖ್ಯೆಗಳು ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಸ್ಕಾಂ ತಿಳಿಸಿದೆ.

DK Shivakumar: ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಮಾರ್ಚ್ 10ರಂದು ಡಿಸಿಎಂ ಡಿಕೆ ಶಿವಕುಮಾರ್‌ ಡಿನ್ನರ್ ಪಾರ್ಟಿ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಮಾ‌ರ್ಚ್ 10ರಂದು ಡಿಸಿಎಂ ಡಿನ್ನರ್ ಪಾರ್ಟಿ

ಸಿಎಂ ಸಿದ್ದರಾಮಯ್ಯ, ಸಚಿವರು ಹಾಗೂ ಪಕ್ಷದ ಶಾಸಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಅಹ್ವಾನ ನೀಡಿದ್ದಾರೆ. ಈ ಡಿನ್ನರ್ ಪಾರ್ಟಿ ಆಯೋಜನೆ ಮೂಲಕ ಶಾಸಕರಲ್ಲಿ ವಿಶ್ವಾಸ ಹಚ್ಚಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೈಕಮಾಂಡ್‌ ನಾಯಕರು ಕೂಡ ಈ ಪಾರ್ಟಿಗೆ ಬರುವ ಸಾಧ್ಯತೆ ಇದೆ.

ಮಲ್ಲಿಕಾರ್ಜುನ ಮುತ್ಯಾ ಪ್ರಕರಣಕ್ಕೆ ಸಂಬಂಧಿಸಿದ ಪೋಟೊ, ವಿಡಿಯೊ ಹಂಚಿಕೊಂಡ್ರೆ ಕಾನೂನು ಕ್ರಮ: ಎಸ್‌ಪಿ ಪೃಥ್ವಿಕ್ ಶಂಕರ್

ಮಲ್ಲಿಕಾರ್ಜುನ ಮುತ್ಯಾ ಪೋಟೊ, ವಿಡಿಯೊ ಹಂಚಿಕೊಂಡ್ರೆ ಕಾನೂನು ಕ್ರಮ

ಬಾಲಕಿಯೊಂದಿಗೆ ಅನುಚಿತ ವರ್ತನೆ ಆರೋಪದಡಿ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲಾಗಿ, ತನಿಖೆ ನಡೆಯುತ್ತಿದೆ. ಹೀಗಾಗಿ ಸಾರ್ವಜನಿಕರು ಈ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಪೋಟೊ ಅಥವಾ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ಯಾದಗಿರಿ ಎಸ್‌ಪಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.

Murder Case: ನಿಧಾನವಾಗಿ ಓಡಿಸು ಎಂದು ತಿಳಿಹೇಳಿದವನ ಮೇಲೆ ಕಾರು ಓಡಿಸಿ ಹತ್ಯೆ

ನಿಧಾನವಾಗಿ ಓಡಿಸು ಎಂದು ತಿಳಿಹೇಳಿದವನ ಮೇಲೆ ಕಾರು ಓಡಿಸಿ ಹತ್ಯೆ

KA-01-ಎಂಎಫ್-2883 ನಂಬರ್‌ನ ಕಾರು ಓಡಿಸುತ್ತಿದ್ದ ವ್ಯಕ್ತಿಯೇ ಕೊಲೆಗಾರ. ಆತ ಅತಿ ವೇಗವಾಗಿ ಬಂದಿದ್ದಾನೆ. ಇದನ್ನು ಕಂಡ ಯುವಕರ ತಂಡ, ಕಾರು ಚಾಲಕನಿಗೆ ನಿಧಾನವಾಗಿ ಹೋಗು ಎಂದು ಹೇಳಿದ್ದರು. ಇದರಿಂದ ಕೋಪಗೊಂಡ ಕಾರು ಚಾಲಕ ಸ್ಬಲ್ಪ ದೂರು ಹೋಗಿ ತಿರುಗಿಸಿಕೊಂಡು ಬಂದು, ಮಾತನಾಡುತ್ತ ನಿಂತಿದ್ದವರಿಗೆ ಡಿಕ್ಕಿ ಹೊಡೆಸಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.

ಉಚಿತ ನಾರಾಯಣ ಕೃತಕ ಕಾಲು ಮತ್ತು ಕ್ಯಾಲಿಪರ್ ಅಳವಡಿಕೆ ಶಿಬಿರದಲ್ಲಿ 558 ವಿಕಲಚೇತನರಿಗೆ ನೆರವಾದ ನಾರಾಯಣ ಸೇವಾ ಸಂಸ್ಥಾನ

558 ವಿಕಲಚೇತನರಿಗೆ ನೆರವಾದ ನಾರಾಯಣ ಸೇವಾ ಸಂಸ್ಥಾನ

ಶಿಬಿರದಲ್ಲಿ 558 ವಿಕಲಚೇತನರು ಭಾಗವಹಿಸಿದ್ದು, ಸುಮಾರು 602 ಕೃತಕ ಕಾಲುಗಳು ಮತ್ತು ಕ್ಯಾಲಿಪರ್ ಗಳನ್ನು ಉಚಿತವಾಗಿ ಅಳವಡಿಸಲಾಯಿತು. ಇದರಲ್ಲಿ ಮೇಲ್ಭಾಗದ ಅಂಗಗಳು, ಕೆಳಭಾಗದ ಅಂಗಗಳು, ಬಹು ಅಂಗಗಳು ಮತ್ತು ಕ್ಯಾಲಿಪರ್ ಗಳನ್ನು ಒದಗಿಸ ಲಾಗಿದ್ದು, ಎಲ್ಲಾ ವಯೋಮಾನದ ಫಲಾನುಭವಿಗಳಿಗೆ, ವಿಶೇಷವಾಗಿ ಯುವಪೀಳಿಗೆಯ ಮಂದಿಗೆ ಗುಣಮಟ್ಟದ ಜೀವನ ಸಾಗಿಸಲು ಮತ್ತು ಸ್ವತಂತ್ರ ಜೀವನದತ್ತ ಆತ್ಮವಿಶ್ವಾಸದ ಹೆಜ್ಜೆ ಇಡಲು ಸಹಾಯ ಮಾಡಿತು

ಫೋನ್‌ ಕದ್ದಾಲಿಕೆ ಆರೋಪ: ನಾನು- ಡಿಕೆಶಿ ಹಾಲು ಜೇನಿನಂತೆ, ಹುಳಿ ಹಿಂಡುವ ಪ್ರಯತ್ನ ನಡೆಯದು: ಸಿಎಂ ಸಿದ್ದರಾಮಯ್ಯ

ನಾನು- ಡಿಕೆಶಿ ಹಾಲು ಜೇನಿನಂತೆ, ಹುಳಿ ಹಿಂಡುವ ಪ್ರಯತ್ನ ನಡೆಯದು: ಸಿಎಂ

ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ನಿರುದ್ಯೋಗಿ ವಿರೋಧ ಪಕ್ಷದ ನಾಯಕರು ನನ್ನ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಪ್ರಯತ್ನಿಸುತ್ತಲೇ ಇದ್ದಾರೆ, ಇದರಿಂದ ಅವರೊಳಗೆ ತುಂಬಿಕೊಂಡಿರುವ ಹುಳಿ ಖಾಲಿಯಾಗಬಹುದೇ ಹೊರತು ನಮ್ಮ ಹಾಲು-ಜೇನಿನಂತಹ ಸಂಬಂಧದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎನ್ನುವುದು ಇಬ್ಬರಿಗೂ ತಿಳಿದಿರಲಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

Gold Rate Today 3rd March 2026: ಯುದ್ಧದ ನಡುವೆಯೂ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ; ಇಂದು ಅಗ್ಗವಾಗಿದ್ದೆಷ್ಟು?

ಮತ್ತೆ ಗ್ರಾಹಕರ ನಿದ್ದೆಗೆಡಿಸಿದ ಬಂಗಾರ

Gold Silver Rate Today: ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಮಂಗಳವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 45 ರುಪಾಯಿ ಇಳಿಕೆಯಾಗಿ 15,585 ರುಪಾಯಿಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 49 ಕಡಿಮೆಯಾಗಲಿದ್ದು, 17,002 ರುಪಾಯಿ ಇದೆ.

Petrol Price hike: ಗಲ್ಫ್‌ ಯುದ್ಧದ ನಡುವೆ ರಾಜ್ಯ ಬಜೆಟ್‌ನಲ್ಲೂ ಪೆಟ್ರೋಲ್‌ ಬೆಲೆ ಏರಿಕೆ ಚಿಂತನೆ!

ಗಲ್ಫ್‌ ಸಮರ ನಡುವೆ ರಾಜ್ಯ ಬಜೆಟ್‌ನಲ್ಲೂ ಪೆಟ್ರೋಲ್‌ ಬೆಲೆ ಏರಿಕೆ ಚಿಂತನೆ!

ಹಣಕಾಸು ಇಲಾಖೆ ಅಧಿಕಾರಿಗಳ ಜತೆಗೆ ಕಳೆದ ಕೆಲ ದಿನಗಳಿಂದ ಪ್ರತ್ಯೇಕ ಚರ್ಚೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಈ ಪ್ರಸ್ತಾಪವೊಂದು ಈಗಾಗಲೇ ಸಲ್ಲಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ 1 ರೂ. ಹೆಚ್ಚುವರಿ ಮಾರಾಟ ತೆರಿಗೆ ವಿಧಿಸುವುದರಿಂದ ತಕ್ಕಮಟ್ಟಿಗೆ ಸಂಪನ್ಮೂಲ ಕ್ರೋಡೀಕರಣಕ್ಕೆ ವೇಗ ನೀಡಬಹುದೆಂದು ಚರ್ಚಿಸಲಾಗುತ್ತಿದೆ.

Fire Accident: ಬೆಂಗಳೂರಿನ ಮನೆಯೊಳಗೆ ಅಗ್ನಿ ದುರಂತ, ಮಹಿಳೆ ದುರ್ಮರಣ, ಮೂವರ ರಕ್ಷಣೆ

ಬೆಂಗಳೂರಿನ ಮನೆಯೊಳಗೆ ಅಗ್ನಿ ದುರಂತ, ಮಹಿಳೆ ದುರ್ಮರಣ, ಮೂವರ ರಕ್ಷಣೆ

ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಮೂವರನ್ನು ರಕ್ಷಿಸಿದ್ದಾರೆ. ಸುಟ್ಟಗಾಯಗಳಿಂದ ಮಹಿಳೆ ಮೃತಪಟ್ಟಿದ್ದಾರೆ. ಉಳಿದ ಗಾಯಗೊಂಡವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಮಲ್ಲೇಶ್ವರಂ ಎಸಿಪಿ ವೇಣುಗೋಪಾಲ್ ಹಾಗೂ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ತನಿಖೆ ಮುಂದುವರಿದಿದೆ.

ದುಬೈನಿಂದ ಎರಡನೇ ವಿಮಾನ ಬೆಂಗಳೂರಿಗೆ; ಎಂಎಲ್‌ಸಿ ಭೋಜೇಗೌಡ, ಪಿವಿ ಸಿಂಧು ಸೇರಿ 490 ಪ್ರಯಾಣಿಕರು ಸುರಕ್ಷಿತವಾಗಿ ವಾಪಸ್

ದುಬೈನಿಂದ ಎರಡನೇ ವಿಮಾನ ಬೆಂಗಳೂರಿಗೆ; 490 ಪ್ರಯಾಣಿಕರು ವಾಪಸ್

ಮೊದಲ ವಿಮಾನದಲ್ಲಿ 213 ಪ್ರಯಾಣಿಕರು ಆಗಮಿಸಿದ್ದರು. ಇದೀಗ ಎರಡನೇ ವಿಮಾನದಲ್ಲಿ ದಾಖಲೆ ಸಂಖ್ಯೆಯ 490 ಜನರು ಮರಳಿದ್ದು, ವಿಮಾನ ನಿಲ್ದಾಣದಲ್ಲಿ ಭಾವನಾತ್ಮಕ ಕ್ಷಣಗಳು ಕಂಡುಬಂದವು. ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರನ್ನು ಅಧಿಕಾರಿಗಳು ಬರಮಾಡಿಕೊಂಡಿದ್ದು, ಅಗತ್ಯ ವೈದ್ಯಕೀಯ ತಪಾಸಣೆ ನಡೆಸಲಾಯಿತು.

ಟ್ರಾಫಿಕ್ ಕಿರಿಕಿರಿ ನಡುವೆ ಮನ ತಣಿಸುವ ಸೌಂದರ್ಯದ ಗಣಿ: ಹೂ ರಾಶಿಗೆ ಮನಸೋತ ಬೆಂಗಳೂರಿಗರು

ಸಿಲಿಕಾನ್ ಸಿಟಿಯಲ್ಲಿ ಕಣ್ಮನ ಸೆಳೆವ ದೃಶ್ಯ: ರಸ್ತೆ ಮಧ್ಯೆ ಅರಳಿದ ಹೂ

Viral News: ಬೆಂಗಳೂರಿನ ಸೌಂದರ್ಯ ಬಗ್ಗೆ ಯುವತಿಯೊಬ್ಬರು ಪೋಸ್ಟ್ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ನಗರದಾದ್ಯಂತ ಮೋಡ ವಾತಾವರಣ, ಲಘುವಾದ ಸೂರ್ಯನ ಬಿಸಿಲು ಮತ್ತು ರಸ್ತೆಯ ಪಕ್ಕದಲ್ಲಿ ಅರಳಿ ನಿಂತಿರುವ ಗುಲಾಬಿ ಬಣ್ಣದ ಹೂವುಗಳು ನಿಜವಾಗಿಯೂ ಸ್ವರ್ಗ ಎಂದು ಅವರು ಬರೆದುಕೊಂಡಿದ್ದಾರೆ.‌

Murder Case: ಇಬ್ಬರು ಗಂಡಂದಿರನ್ನು ಬಿಟ್ಟು ಮೂರನೆಯ ಪ್ರಿಯಕರನಿಂದ ಹತ್ಯೆಯಾದ ಮಹಿಳೆ

ಇಬ್ಬರು ಗಂಡಂದಿರನ್ನು ಬಿಟ್ಟು ಪ್ರಿಯಕರನಿಂದ ಹತ್ಯೆಯಾದ ಮಹಿಳೆ

ತಂದೆ-ತಾಯಿಗೆ ಒಬ್ಬಳೇ ಹೆಣ್ಣು ಮಗಳಾದ ತೇಜಸ್ವಿನಿ 20ನೇ ವಯಸ್ಸಿನಲ್ಲೇ ಓಡಿ ಹೋಗಿ ಲವ್ ಮ್ಯಾರೇಜ್ ಆಗಿದ್ದಳು. ಒಂದು ಮಗು ಆದ ಬಳಿಕ ಕುಟುಂಬ ಕಲಹ ಉಂಟಾಗಿ ಆತನನ್ನು ದೂರ ಮಾಡಿ ಮತ್ತೊಬ್ಬನ ಜೊತೆ ಓಡಿ ಹೋಗಿ ಮದ್ವೆಯಾಗಿದ್ದಳು. ಆತನಿಂದಲೂ ಒಂದು ಮಗುವಾದ ಬಳಿಕ ಆತನಿಂದಲೂ ದೂರವಾಗಿ ಮಕ್ಕಳೊಂದಿಗೆ ಪ್ರತ್ಯೇಕ ವಾಸವಾಗಿದ್ದಳು. ಇದೇ ಸಂದರ್ಭದಲ್ಲಿ ಸಂದೀಪ್ ಎನ್ನುವ ಯುವಕನೊಂದಿಗೆ ಲಿವಿಂಗ್ ರಿಲೇಶನ್ ಶಿಪ್​​ನಲ್ಲಿದ್ದಳು.

Shidlaghatta News: ಶಿಡ್ಲಘಟ್ಟದಲ್ಲಿ ಪೂಜಮ್ಮ ದೇವಿಯ ಹಸಿಕರಗ ಮಹೋತ್ಸವ ಅದ್ದೂರಿ

ತಮಟೆ ತಾಳಕ್ಕೆ ಹೆಜ್ಜೆ ಹಾಕಿದ ಹಸಿಕರಗ – ಭಕ್ತರ ಸಂಭ್ರಮ

ಮೆರವಣಿಗೆಯ ವೇಳೆ ತಮಟೆ ತಾಳಕ್ಕೆ ಕರಗದ ಪೂಜಾರಿ ಶಿವರಾಜ್ ಅವರು ಹೆಜ್ಜೆ ಹಾಕಿ ಸಾಂಪ್ರದಾ ಯಿಕ ನೃತ್ಯ ಪ್ರದರ್ಶಿಸಿದರು. ಡೊಳ್ಳು, ತಾಳ, ನಾದಸ್ವರಗಳ ಘೋಷದಲ್ಲಿ ಅವರ ಚುರುಕು ನೃತ್ಯ ಭಕ್ತರ ಮನ ಗೆದ್ದಿತು. ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯನ್ನು ಸಾರ್ವಜನಿಕರು ಹೂವಿನ ಸುರಿಮಳೆಯ ಮೂಲಕ ಭಕ್ತಿಯಿಂದ ಸ್ವಾಗತಿಸಿದರು

Loading...