ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Chhatrapati Shivaji Maharaja: ಧೈರ್ಯ ಮತ್ತು ಸಹಿಷ್ಣುತೆಯ ಪ್ರತೀಕ ಛತ್ರಪತಿ ಶಿವಾಜಿ: ರಂಜಿತ್ ಕಾಳೆ

ಧೈರ್ಯ ಮತ್ತು ಸಹಿಷ್ಣುತೆಯ ಪ್ರತೀಕ ಛತ್ರಪತಿ ಶಿವಾಜಿ

ಶಿವಾಜಿ ಮಹಾರಾಜರ ಧೈರ್ಯ ಮತ್ತು ಸ್ಪೂರ್ತಿದಾಯಕ ಕಾರ್ಯಗಳನ್ನು ಗೌರವಿಸ ಬೇಕಿದೆ. ಶಿವಾಜಿಯ ತಾಯಿ ಜೀಜಾಬಾಯಿ ಮತ್ತು ಮಾರ್ಗದರ್ಶಕ ದಾದಾಜಿ ಕೊಂಡದೇವ ಅವರು ಶಿವಾಜಿ ರೂಪ ನಿರ್ಮಾಣ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಚಿಕ್ಕ ವಯಸ್ಸಿ ನಿಂದಲೇ ಅವರಿಗೆ ಧೈರ್ಯ ಮತ್ತು ನ್ಯಾಯಯುತತೆಯಂತಹ ಮೌಲ್ಯಗಳನ್ನು ಕಲಿಸಿದ್ದರು. ಇವರ ಆದರ್ಶಗಳನ್ನು ಯುವ ಜನಾಂಗ ಮೈಗೂಡಿಸಿಕೊಳ್ಳಬೇಕು

Mandya News: ಮಂಡ್ಯದಲ್ಲಿ ಅಮಾನವೀಯ ಕೃತ್ಯ; ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಮನಸೋ ಇಚ್ಛೆ ಹಲ್ಲೆ

ಮಂಡ್ಯದಲ್ಲಿ ಅಮಾನವೀಯ ಕೃತ್ಯ; ವ್ಯಕ್ತಿಯ ಮೇಲೆ ಮನಸೋ ಇಚ್ಛೆ ಹಲ್ಲೆ

Mandya Assault Case: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ಘಟನೆ ನಡೆದಿದೆ. ಯುವತಿ ನಾಪತ್ತೆಗೆ ಕಾರಣವೆಂದು ಆರೋಪಿಸಿ ವ್ಯಕ್ತಿಯ ಮೇಲೆ ಐವರ ಗುಂಪು ಹಲ್ಲೆ ಮಾಡಿದೆ. ಈ ವೇಳೆ ದೊಡ್ಡ ಸೈಜುಗಲ್ಲು ಎತ್ತಿ ಹಾಕಿ ವ್ಯಕ್ತಿಯ ಕಾಲು ಮುರಿದಿದ್ದಾರೆ.

DCM D.K. Shivakumar: ಜನವಿರೋಧಿ ಆಡಳಿತದ ಮೂಲಕ ಬಿಜೆಪಿ ಅಂತಿಮ ದಿನಗಳು ಸಮೀಪಿಸುತ್ತಿವೆ: ಡಿಸಿಎಂ ಡಿ.ಕೆ. ಶಿವಕುಮಾರ್ ಭವಿಷ್ಯ

ಜನವಿರೋಧಿ ಆಡಳಿತದ ಮೂಲಕ ಬಿಜೆಪಿ ಅಂತಿಮ ದಿನಗಳು ಸಮೀಪಿಸುತ್ತಿವೆ

ಈ ದೇಶ ಉಳಿಸಲು ಇಂದು ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಪಕ್ಷ ಸದಾ ಎಲ್ಲಾ ವರ್ಗದ ಜನರಿಗೆ ಕಾರ್ಯಕ್ರಮ ನೀಡುತ್ತಾ ಬದುಕಿನಲ್ಲಿ ಬದಲಾವಣೆ ತರುವ ಕೆಲಸ ಮಾಡಿಕೊಂಡು ಬರುತ್ತಿದೆ. ಮಹಾತ್ಮ ಗಾಂಧಿ ಅವರ ಹೆಸರಿನಲ್ಲಿ 20 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರವು ಬಡವರಿಗಾಗಿ ಉದ್ಯೋಗ ಖಾತರಿ ಕಾರ್ಯಕ್ರಮ ನೀಡಿತ್ತು

ಏಷ್ಯಾದಲ್ಲಿ ಅಮೆಜಾನ್‌ ನ ಎರಡನೇ ಅತಿ ದೊಡ್ಡ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ

ಅಮೆಜಾನ್‌ ನ ಎರಡನೇ ಅತಿ ದೊಡ್ಡ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ

ಭಾರತದಲ್ಲಿ ಅಮೆಜಾನ್‌ ನ ನಿರಂತರ ಹೂಡಿಕೆಯ ಭಾಗವಾಗಿ ಈ ಹೊಸ ಕ್ಯಾಂಪಸ್‌ ನ ಉದ್ಘಾಟನೆಗೊಂಡಿದೆ. ಕಂಪನಿಯು ಈಗಾಗಲೇ ಭಾರತದಲ್ಲಿ 40 ಶತಕೋಟಿ ಡಾಲರ್‌ ಗಿಂತಲೂ ಹೆಚ್ಚು ಹೂಡಿಕೆ ಮಾಡಿದ್ದು, 2030ರ ವೇಳೆಗೆ ಹೆಚ್ಚುವರಿಯಾಗಿ 35 ಶತಕೋಟಿ ಡಾಲರ್‌ ಹೂಡಿಕೆ ಮಾಡಲು ಬದ್ಧವಾಗಿದೆ.

Adichunchanagiri Sri: ಆಧ್ಯಾತ್ಮಿಕ ಸಾಧನೆಯೇ ಮಾನಸಿಕ ಆರೋಗ್ಯದ ಸಾಧನ: ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ

ಆಧ್ಯಾತ್ಮಿಕ ಸಾಧನೆಯೇ ಮಾನಸಿಕ ಆರೋಗ್ಯದ ಸಾಧನ

ದೇಹ ಹಾಗೂ ಮನಸ್ಸನ್ನು ಸಕಾರಾತ್ಮಕವಾಗಿ ರೂಪಿಸಿಕೊಳ್ಳುವುದರ ಅಗತ್ಯವಿದೆ. ತಿಳಿಯಾದ ನೀರು ಕದಡುವಂತೆ, ಹಾಗೆಯೇ ಕಲ್ಮಶಗೊಂಡಿರುವ ನೀರನ್ನು ಶುದ್ದೀಕರಣ ಗೊಳಿಸುವ ಮಾದರಿಯಲ್ಲಿ ಆಂತರಿಕ ಬೌದ್ಧಿಕ ಪ್ರಜ್ಞೆಯು ಎಚ್ಚೆತ್ತುಕೊಳ್ಳುತ್ತಿರಬೇಕು. ಈ ನಿಟ್ಟಿನಲ್ಲಿ ಧಾರ್ಮಿಕ ಆಚರಣೆಗಳು ಹಾಗೂ ಸತ್ಕಾರ್ಯ ಚಟುವಟಿಕೆಯು ಒಳ್ಳೆಯ ಪ್ರಭಾವ ಬೀರುತ್ತದೆ

Adichunchanagiri Sri: ಆಧ್ಯಾತ್ಮಿಕ ಸಾಧನೆಯೇ ಮಾನಸಿಕ ಆರೋಗ್ಯದ ಸಾಧನ: ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ

ಆಧ್ಯಾತ್ಮಿಕ ಸಾಧನೆಯೇ ಮಾನಸಿಕ ಆರೋಗ್ಯದ ಸಾಧನ

ದೇಹ ಹಾಗೂ ಮನಸ್ಸನ್ನು ಸಕಾರಾತ್ಮಕವಾಗಿ ರೂಪಿಸಿಕೊಳ್ಳುವುದರ ಅಗತ್ಯವಿದೆ. ತಿಳಿಯಾದ ನೀರು ಕದಡುವಂತೆ, ಹಾಗೆಯೇ ಕಲ್ಮಶಗೊಂಡಿರುವ ನೀರನ್ನು ಶುದ್ದೀಕರಣ ಗೊಳಿಸುವ ಮಾದರಿಯಲ್ಲಿ ಆಂತರಿಕ ಬೌದ್ಧಿಕ ಪ್ರಜ್ಞೆಯು ಎಚ್ಚೆತ್ತುಕೊಳ್ಳುತ್ತಿರಬೇಕು. ಈ ನಿಟ್ಟಿನಲ್ಲಿ ಧಾರ್ಮಿಕ ಆಚರಣೆಗಳು ಹಾಗೂ ಸತ್ಕಾರ್ಯ ಚಟುವಟಿಕೆಯು ಒಳ್ಳೆಯ ಪ್ರಭಾವ ಬೀರುತ್ತದೆ

MNarega Bachav Movement: ಚಿಕ್ಕಬಳ್ಳಾಪುರದಲ್ಲಿ ಮೇಳೈಸಿದ ನರೇಗಾ ಬಚಾವ್ ಜನಾಂದೋಲನದ ರಣಕಹಳೆ : ಲಕ್ಷ ಲಕ್ಷ ಜನಸಂಗಮ

ಚಿಕ್ಕಬಳ್ಳಾಪುರದಲ್ಲಿ ಮೇಳೈಸಿದ ನರೇಗಾ ಬಚಾವ್ ಜನಾಂದೋಲನದ ರಣಕಹಳೆ

ತಾಲೂಕಿನ ಅಗಲಗುರ್ಕಿ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ 30 ಎಕರೆ ಬಯಲು ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ಸೋಮವಾರ ನಡೆದ ನರೇಗಾ ಬಚಾವ್ ಆಂದೋಲನದಲ್ಲಿ ಭಾಗಿಯಾಗಿದ್ದ ಗಣ್ಯರು ವಿರಾಜಮಾನವಾಗಿದ್ದರೆ ವೇದಿಕೆ ಯ ಮುಂಭಾಗದ ಬೃಹತ್ ಅವರಣದಲ್ಲಿ ಜನತೆಗಾಗಿ ಮೀಸಲಾಗಿದ್ದ ಆಸನಗಳಲ್ಲಿ ಆಸೀನರಾಗಿ ಮುಖ್ಯಮಂತ್ರಿ ಸಹಿತ ಗಣ್ಯರ ಮಾತುಗಳಿಗೆ ಕಿವಿಯಾದರು.

ಕುರುಬ ಸಮುದಾಯಕ್ಕೆ ಎಸ್‌ಟಿ ಸಿಂಧುತ್ವ ಪ್ರಮಾಣಪತ್ರ ನೀಡಲು ಆಗ್ರಹ; ಯಾದಗಿರಿಯಲ್ಲಿ ಕುರಿ ಹಿಂಡುಗಳೊಂದಿಗೆ ಪ್ರತಿಭಟನೆ

ಕುರುಬರಿಗೆ ಎಸ್‌ಟಿ ಪ್ರಮಾಣಪತ್ರ ನೀಡಲು ಆಗ್ರಹಿಸಿ ಯಾದಗಿರಿಯಲ್ಲಿ ಪ್ರತಿಭಟನೆ

2016ರ ರಾಜ್ಯ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅರ್ಹ ಕುರುಬ ಸಮುದಾಯದವರಿಗೆ ತಕ್ಷಣ ಎಸ್.ಟಿ ಸಿಂಧುತ್ವ ಪ್ರಮಾಣಪತ್ರ ನೀಡಬೇಕು. ಓಆರ್ಜಿಐ ಮತ್ತು ಎಸ್.ಟಿ ಆಯೋಗದ ನಡುವೆ ಸಮನ್ವಯ ಸಭೆ ನಡೆಸಿ ತಾರತಮ್ಯ ನಿವಾರಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಎಸ್.ಟಿ ಹೋರಾಟ ಸಮಿತಿ ಹಾಗೂ ಕುರುಬ ಹೋರಾಟ ಸಮಿತಿ ಆಗ್ರಹಿಸಿವೆ.

ಈ ಬಾರಿ ಬಜೆಟ್‌ನಲ್ಲಿ ಪತ್ರಕರ್ತ ಸಮುದಾಯಕ್ಕೆ ಸಿಹಿ ಸುದ್ದಿ ಇರುತ್ತೆ: ಕೆ.ವಿ. ಪ್ರಭಾಕರ್

ಈ ಬಾರಿ ಬಜೆಟ್‌ನಲ್ಲಿ ಪತ್ರಕರ್ತ ಸಮುದಾಯಕ್ಕೆ ಸಿಹಿ ಸುದ್ದಿ: ಕೆವಿಪಿ

KV Prabhakar: ಪತ್ರಕರ್ತ ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲಿನಿಂದಲೂ ನೆರಳಾಗಿ ನಿಂತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲೂ ಶ್ರಮಿಕ ಪತ್ರಕರ್ತ ಸಮುದಾಯಕ್ಕೆ ಉತ್ತಮ‌ ಅನುಕೂಲಗಳು ಆಗುವ ಭರವಸೆ ಇದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ.

ಹುಳಿಯಾರು, ಹಂದನಕೆರೆ ಠಾಣೆಗಳಿಗೆ ಬೇಕಿದೆ 'ಕಾಯಂ' ಸಾರಥಿ: ಪ್ರಭಾರ ಹೊರೆಯಿಂದ ತಿಪಟೂರು ಪಿಎಸ್‌ಐ ಯತೀಶ್ ಹೈರಾಣ!

ಹುಳಿಯಾರು, ಹಂದನಕೆರೆ ಠಾಣೆಗಳಿಗೆ ಬೇಕಿದೆ 'ಕಾಯಂ' ಸಾರಥಿ

Chikkanayakanahalli News: ಚಿಕ್ಕನಾಯಕನಹಳ್ಳಿ ತಾಲೂಕಿನ ಪ್ರಮುಖ ವ್ಯಾಪ್ತಿ ಹೊಂದಿರುವ ಹುಳಿಯಾರು ಮತ್ತು ಹಂದನಕೆರೆ ಪೊಲೀಸ್ ಠಾಣೆಗಳು ಈಗ ಪೂರ್ಣ ಪ್ರಮಾಣದ ಅಧಿಕಾರಿಯಿಲ್ಲದೆ ಅನಾಥವಾಗಿವೆ. ತಿಪಟೂರು ನಗರ ಪಿಎಸ್‌ಐ ಯತೀಶ್ ಅವರಿಗೆ ಈ ಎರಡೂ ಠಾಣೆಗಳ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಇದರಿಂದ ಅವರು ಹೈರಾಣಾಗುವಂತಾಗಿದೆ.

ಭಾರತದಲ್ಲಿ ವಿದ್ಯಾರ್ಥಿಗಳ ಸಾಧನೆ ಸಂಭ್ರಮಿಸುವ ಪಿವಿಐ 3ನೇ ಘಟಿಕೋತ್ಸವ

ಭಾರತದಲ್ಲಿ ವಿದ್ಯಾರ್ಥಿಗಳ ಸಾಧನೆ ಸಂಭ್ರಮಿಸುವ ಪಿವಿಐ 3ನೇ ಘಟಿಕೋತ್ಸವ

ಒಂದು ವರ್ಷ ಮತ್ತು ಎರಡು ವರ್ಷಗಳ ಕಲಿಕೆ ಮತ್ತು ವೈಯಕ್ತಿಕ ಕೋರ್ಸ್‍ಗಳನ್ನು ಪೂರ್ಣ ಗೊಳಿಸಿದ ಕಲಿಕಾರ್ಥಿಗಳಿಗೆ ಔಪಚಾರಿಕ ಪದವಿ ಪ್ರದಾನ ಸಮಾರಂಭ, ವಿಶೇಷ ಅತಿಥಿಗಳ ಸ್ಪೂರ್ತಿದಾಯಕ ಭಾಷಣಗಳು ಮತ್ತು ಪಿವಿಐನ ಸೇರ್ಪಡೆಗಾಗಿ ಪ್ರತಿಜ್ಞೆಯ ಮೂಲಕ ಸಾಮೂಹಿಕ ಕ್ರಮಕ್ಕಾಗಿ ಬಲವಾದ ಸಂದೇಶ ಕಾರ್ಯಕ್ರಮದ ವಿಶೇಷವಾಗಿತ್ತು.

ಮ್ಯಾಟ್ರಿಮೋನಿಯಲ್ಲಿ ವಧು ಹುಡುಕುವವರೇ ಎಚ್ಚರ; ಬರೋಬ್ಬರಿ 21 ಲಕ್ಷ ಕಳೆದುಕೊಂಡ ಬೆಂಗಳೂರಿನ ಯುವಕ!

ಮ್ಯಾಟ್ರಿಮೋನಿ ವಂಚನೆ; ಬೆಂಗಳೂರಿನ ಯುವಕನಿಗೆ 21 ಲಕ್ಷ ವಂಚಿಸಿದ ಯುವತಿ!

Matrimony Fraud: ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯವಾಗಿದ್ದ ಯುವತಿಯೊಬ್ಬಳು ಮದುವೆಯಾಗುವುದಾಗಿ ನಂಬಿಸಿದ್ದಲ್ಲದೇ, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ಹೇಳಿದ್ದಾಳೆ. ಇದರಿಂದ ಬೆಂಗಳೂರಿನ ಯುವಕ 21.22 ಲಕ್ಷ ರೂಪಾಯಿ ನೀಡಿ ವಂಚನೆಗೊಳಗಾಗಿದ್ದಾನೆ.

ಕಾಂಗ್ರೆಸ್ಸಿನವರು ಎಷ್ಟು ಬಟ್ಟೆ ಬಿಚ್ಚಿಕೊಂಡರೂ ವಿಬಿ ಜಿ ರಾಮ್ ಜಿ ಯೇ ಊರ್ಜಿತ: ಛಲವಾದಿ ನಾರಾಯಣಸ್ವಾಮಿ

ಕಾಂಗ್ರೆಸ್ಸಿನವರು ಎಷ್ಟು ಬಟ್ಟೆ ಬಿಚ್ಚಿದರೂ ವಿಬಿ ಜಿ ರಾಮ್ ಜಿ ಯೇ ಊರ್ಜಿತ

Chalavadi Narayanaswamy: ವಿಬಿ ಜಿ ರಾಮ್ ಜಿ ಜಾಗೃತಿಗಾಗಿ ಎಲ್ಲ ಕಡೆ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಇಡೀ ದೇಶವ್ಯಾಪಿ ಬೆಂಬಲವೂ ಅದಕ್ಕೆ ವ್ಯಕ್ತವಾಗಿದೆ. ಅದನ್ನು ವಾಪಸ್ ಪಡೆಯುವ ಸಂದರ್ಭ ಒದಗಿಬರಲಾರದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಇದು ಜುಮ್ಕಿ ಕಮಾಲ್‌; ಪತ್ನಿಯ ಕಿವಿಯೋಲೆ ಆಟೋದಲ್ಲಿ ನೇತು ಹಾಕಿದ ಚಾಲಕ: ವಿಡಿಯೊ ವೈರಲ್

ಆಟೋದಲ್ಲಿ ಪತ್ನಿಯ ಕಿವಿಯೋಲೆ: ಪ್ರೀತಿ ಗೆದ್ದ ಬೆಂಗಳೂರು ಚಾಲಕ

Viral Video: ಪ್ರೀತಿ ಅನ್ನೋದು ಕೇವಲ ದುಬಾರಿ ಕಾರು, ಮನೆ, ಐಷಾರಾಮಿ ವಸ್ತುಗಳಿಗೆ ಸೀಮಿತವಾಗಿಲ್ಲ.‌ ಅದು ದೈನಂದಿನ ಬದುಕಿನ ಸಣ್ಣ ಪುಟ್ಟ ಸಂಗತಿಯಲ್ಲೂ ಅಡಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರು ನಗರದ ಆಟೋ ಚಾಲಕನೊಬ್ಬ ತನ್ನ ಮಡದಿಗಾಗಿ ಪ್ರೀತಿಯನ್ನು ವ್ಯಕ್ತಪಡಿಸಿದ ರೀತಿ ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟಕ್ಕೆ ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಕರೆ

ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟಕ್ಕೆ ಬೆಂಬಲಿಸಿ: ಸಿಎಂ ಕರೆ

MGNREGA Bachao Sangram: ಮನರೇಗಾ ಕಾಯ್ದೆಗೆ ಗ್ರಾಮೀಣಾಭಿವೃದ್ಧಿಯ ಕನಸು ಕಂಡಿದ್ದ ಮಹಾತ್ಮ ಗಾಂಧಿಯವರ ಹೆಸರನ್ನು ಇಡಲಾಗಿತ್ತು. ಅವರ ಗ್ರಾಮ ಸ್ವರಾಜ್ಯದ ಕಲ್ಪನೆಗೆ ಮನರೇಗಾ ಶಕ್ತಿ ತುಂಬಿತ್ತು. ಆದರೆ ಜನಪರ ಕಾಯ್ದೆಗಳನ್ನು ದುರ್ಬಲಗೊಳಿಸುವ ಕೆಲಸವನ್ನು ಮೋದಿ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ನಾಳೆ ಹಂಪಿ ಕನ್ನಡ ವಿಶ್ವವಿದ್ಯಾಲಯದ 34ನೇ ನುಡಿ ಹಬ್ಬ; ಲೇಖಕ ಡಾ. ಜಿ.ರಾಮಕೃಷ್ಣ ಸೇರಿ ಮೂವರಿಗೆ ನಾಡೋಜ ಗೌರವ

ನಾಳೆ ಹಂಪಿ ಕನ್ನಡ ವಿವಿ 34ನೇ ನುಡಿ ಹಬ್ಬ; ಮೂವರಿಗೆ ನಾಡೋಜ ಗೌರವ

ಈ ಬಾರಿ ಬೆಂಗಳೂರಿನ ವಿದ್ವಾಂಸ ಮತ್ತು ಲೇಖಕ ಡಾ. ಜಿ.ರಾಮಕೃಷ್ಣ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸಿ.ಮಹಾದೇವಪ್ಪ, ವಿಶ್ರಾಂತ ಆಡಳಿತಾಧಿಕಾರಿ ಡಾ.ಎಚ್‌.ಸಿ.ಸತ್ಯನ್‌ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪದವಿಗೆ ಆಯ್ಕೆಯಾಗಿದ್ದಾರೆ. ಇನ್ನು 107 ಮಂದಿಗೆ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪ್ರದಾನ ಮಾಡಲಾಗುತ್ತದೆ.

ವಿದೇಶಕ್ಕೆ ಹೋಲಿಸಿದರೆ ಬೆಂಗಳೂರೇ ಬೆಸ್ಟ್‌: ವರ್ಲ್ಡ್ ಬೆಸ್ಟ್‌ ಪ್ಲೇಸ್ ಎಂದ ನೆಟ್ಟಿಗನ ಪೋಸ್ಟ್‌ ವೈರಲ್‌

ಬೆಂಗಳೂರಿನ ಹವಾಮಾನಕ್ಕೆ ವ್ಯಕ್ತಿ ಫಿದಾ

Viral Video: ಕೆಲಸದ ನಿಮಿತ್ತ ಬೆಂಗಳೂರನ್ನು ಆಯ್ಕೆ ಮಾಡಿಕೊಂಡವರು ಹಲವು ಮಂದಿ ಇದ್ದಾರೆ. ಇಲ್ಲಿನ ಜೀವನ ಶೈಲಿ ದುಬಾರಿಯಾಗಿದ್ದು, ಹೆಚ್ಚಿನವರಿಗೆ ಹೊಂದಿಕೊಳ್ಳುವುದು ಕಷ್ಟವೇ ಆಗಿದೆ. ಹಾಗೆಯೇ ಇಲ್ಲಿನ ಟ್ರಾಫಿಕ್ ಮತ್ತು ಮೂಲ ಸೌಕರ್ಯಗಳ ಬಗ್ಗೆ ಹೆಚ್ಚಿನ ದೂರುಗಳಿದ್ದರೂ, ಇಲ್ಲಿ ವರ್ಷಪೂರ್ತಿ ಆಹ್ಲಾದಕರವಾದ ಹವಾಮಾನ, ತಂಪಾದ ವಾತಾವರಣ ಇರುತ್ತದೆ ಎಂದು ಹೊಗಳುವವರೂ ಇದ್ದಾರೆ. ಇತ್ತೀಚೆಗೆ ವಿದೇಶದಿಂದ ಬಂದ ವ್ಯಕ್ತಿಯೊಬ್ಬರು ಬೆಂಗಳೂರಿನ ಹವಾಮಾನಕ್ಕೆ ಫಿದಾ ಆಗಿದ್ದು, ವರ್ಲ್ಡ್ ಬೆಸ್ಟ್ ಸಿಟಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಉಡುಪಿಯ ನಡುರಸ್ತೆಯಲ್ಲೇ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ!

ಉಡುಪಿಯಲ್ಲಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ!

Udupi News: ಉಡುಪಿ ನಗರದ ಕಲ್ಸಂಕ ಜಂಕ್ಷನ್‌ನಲ್ಲಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೈ ಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಆತನನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಕೌಟುಂಬಿಕ ಕಲಹದಿಂದ ನೊಂದು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

ಏಷ್ಯಾದಲ್ಲೇ 2 ನೇ ಅತಿದೊಡ್ಡ ಅಮೆಜಾನ್ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ

ಅಮೆಜಾನ್ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ

Amazon: ಅಮೆಜಾನ್ ಬೆಂಗಳೂರಿನಲ್ಲಿ ತನ್ನ ಎರಡನೇ ಅತಿದೊಡ್ಡ ಕಚೇರಿಯನ್ನು ಅಧಿಕೃತವಾಗಿ ತೆರೆದಿದ್ದು, ಭಾರತದೊಂದಿಗಿನ ತನ್ನ ಸಂಬಂಧವನ್ನು ಮತ್ತಷ್ಟು ಬಿಗಿಗೊಳಿಸಿದೆ. 1.1 ಮಿಲಿಯನ್ ಚದರ ಅಡಿ ವಿಸ್ತೀರ್ಣದ, 12 ಅಂತಸ್ತಿನ ಕ್ಯಾಂಪಸ್‌ನಲ್ಲಿ ಇ-ಕಾಮರ್ಸ್, ಕಾರ್ಯಾಚರಣೆಗಳು, ಪಾವತಿಗಳು, ತಂತ್ರಜ್ಞಾನ ಮತ್ತು ಮಾರಾಟಗಾರರ ಸೇವೆಗಳಲ್ಲಿ 7,000 ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸಲಿದ್ದಾರೆ.

Mobile Ban in Schools: ಶಾಲೆಗಳಲ್ಲಿ ಮೊಬೈಲ್ ಬ್ಯಾನ್ ವಿಚಾರ ಚರ್ಚೆಯಲ್ಲಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

ಶಾಲೆಗಳಲ್ಲಿ ಮೊಬೈಲ್ ಬ್ಯಾನ್ ವಿಚಾರ ಚರ್ಚೆಯಲ್ಲಿದೆ: ಡಿ.ಕೆ.ಶಿವಕುಮಾರ್

ಶಾಲೆಗಳಲ್ಲಿ ಮಕ್ಕಳು ಮೊಬೈಲ್ ಬಳಕೆಗೆ ಕಡಿವಾಣ ಹಾಕುವ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಪ್ರತಿಕ್ರಿಯಿಸಿದ್ದಾರೆ. ನಮ್ಮ ಶಾಲೆಗಳಲ್ಲೂ ಮೊಬೈಲ್ ಬ್ಯಾನ್ ಮಾಡಿದ್ದೇವೆ. ಯಾವ ರೀತಿ ಮೊಬೈಲ್ ಬಳಕೆ ದುರುಪಯೋಗವಾಗುತ್ತಿದೆ ಎಂದು ಬಹಿರಂಗಗೊಳಿಸಲು ಆಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Drinking Water: ಬೇಸಿಗೆ ಅಬ್ಬರ ಆರಂಭ: ರಾಜಧಾನಿಯಲ್ಲಿ ಕುಡಿಯುವ ನೀರಿನ ಕೊರತೆ?

ಬೇಸಿಗೆ ಅಬ್ಬರ ಆರಂಭ: ರಾಜಧಾನಿಯಲ್ಲಿ ಕುಡಿಯುವ ನೀರಿನ ಕೊರತೆ?

ಈ‌ ಬಾರಿ ವಾಡಿಕೆಗಿಂತ ಅಧಿಕ ತಾಪಮಾನ ಎದುರಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದರ ನಡುವೆ ಬೇಸಿಗೆಯಲ್ಲಿ ಪವರ್​ ಕಟ್ ಹಾಗೂ ನೀರಿನ ಅಭಾವದ ಬಿಸಿ ತಟ್ಟುವ ಆತಂಕ ಜನರಲ್ಲಿದೆ. ರಾಜಧಾನಿಗೆ ನೀರೊದಗಿಸುವ ಜಲಾಶಯಗಳ ಸ್ಥಿತಿಗತಿ ಗಮನಿಸಿದರೆ ಈ ಆತಂಕ ಸುಳ್ಳು ಎನ್ನಲಾಗದು. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳಬಹುದಾದ 21 ಹೈ ರಿಸ್ಕ್ ಏರಿಯಾಗಳನ್ನು ಗುರುತಿಸುವ ಕೆಲಸ ಜಿಬಿಎ ಮಾಡಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿ, ಜೆಡಿಎಸ್ ತಾಕತ್ ತೋರಿಸುತ್ತೇವೆ ಎಂದ ನಿಖಿಲ್ ಕುಮಾರಸ್ವಾಮಿ

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿ, ಜೆಡಿಎಸ್ ತಾಕತ್ ತೋರಿಸುತ್ತೇವೆ

Nikhil Kumaraswamy: ಹಿಂದೆ 5 ವರ್ಷ ಈಗ 3 ವರ್ಷ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಏಳು ಲಕ್ಷದ ಅರವತ್ತು ಕೋಟಿ ಸಾಲ ಮಾಡಿ ಈ ರಾಜ್ಯದ ಜನರ ಮೇಲೆ ಸಾಲದ ಹೊರೆಯನ್ನು ಹೊರಿಸುವುದಲ್ಲದೆ ಸಾಲಗಾರ ಸರ್ಕಾರ ಎಂಬ ಬಿರುದಿನೊಂದಿಗೆ ಅಭಿವೃದ್ಧಿ ಮಾಡದೆ ಅಧಿಕಾರದ ತಿಕ್ಕಾಟದಲ್ಲಿ ಕಾಲ ಕಳೆಯುತ್ತಿದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.

Chikkamagaluru: ಕಾಡಾನೆ ದಾಳಿಗೆ ಬಲಿ, ಲಾಠಿಚಾರ್ಜ್‌ ಪ್ರಕರಣ: ಚಿಕ್ಕಮಗಳೂರು ಜಿಲ್ಲೆ ಭಾಗಶಃ ಬಂದ್‌

ಕಾಡಾನೆ ದಾಳಿಗೆ ಬಲಿ, ಲಾಠಿಚಾರ್ಜ್‌: ಚಿಕ್ಕಮಗಳೂರು ಜಿಲ್ಲೆ ಭಾಗಶಃ ಬಂದ್‌

ಜನರ ಆಕ್ರೋಶದ ಕಟ್ಟೆ ಒಡೆದ ಪರಿಣಾಮ ಚಿಕ್ಕಮಗಳೂರು ಜಿಲ್ಲೆ ಭಾಗಶಃ ಬಂದ್​​ ಆಗಿದೆ. ನಿನ್ನೆ ನಡೆದ ಘಟನೆ ಖಂಡಿಸಿ ಬಾಳೆಹೊನ್ನೂರಿನ JCI ಸರ್ಕಲ್ ನಲ್ಲಿ ಪ್ರತಿಭಟನೆ ನಡೆದಿದ್ದು, ನೂರಾರು ಜನರು ಭಾಗಿಯಾಗಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಪಡಿಸಿದ್ದಾರೆ.

road accident: ಹೆಲ್ಮೆಟ್‌ ಧರಿಸದೆ ಬುಲೆಟ್‌ ಚಾಲನೆ; ಹಂಪ್‌ನಲ್ಲಿ ಬೈಕ್‌ ಎಗರಿ ಯುವತಿ ಸಾವು, ಇನ್ನೊಬ್ಬಾಕೆ ಗಂಭೀರ

ಹಂಪ್‌ನಲ್ಲಿ ಬೈಕ್‌ ಎಗರಿ ಬಿದ್ದು ಯುವತಿ ಸಾವು, ಇನ್ನೊಬ್ಬಾಕೆ ಗಂಭೀರ

ಇಬ್ಬರು ಯುವತಿಯರು ಹೆಲ್ಮೆಟ್ ಧರಿಸದೇ ಬುಲೆಟ್ ಬೈಕ್‌ನಲ್ಲಿ ಹೊರಟಿದ್ದರು. ಪ್ರಿಯಾ ಬೈಕ್ ಚಲಾಯಿಸುತ್ತಿದ್ದು, ಸ್ವಾತಿ ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದಳು. ಈ ವೇಳೆ ಹಂಪ್ಸ್ ಕಾಣದೇ ಇಬ್ಬರೂ ರಸ್ತೆಗೆ ಚಿಮ್ಮಿ ಬಿದ್ದಿದ್ದಾರೆ. ಹೆಲ್ಮೆಟ್‌ ಧರಿಸದ ಪರಿಣಾಮ ತಲೆಗೆ ಏಟು ಬಿದ್ದು ಪ್ರಿಯಾ ಮೃತಪಟ್ಟಿದ್ದಾಳೆ. ಸ್ವಾತಿ ಸ್ಥಿತಿ ಗಂಭೀರವಾಗಿದೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಸ್ವಾತಿಯನ್ನು ಬೆಂಗಳೂರಿನ ಆಸ್ಪತ್ರೆ ರವಾನೆ ಮಾಡಲಾಗಿದೆ.

Loading...