ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Gold Price Today On October 12, 2026: ನವರಾತ್ರಿಯ ಎರಡನೇ ದಿನ ಆಭರಣಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

ಆಭರಣಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

Gold Price Today: ಸೋಮವಾರ ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 40 ರೂಪಾಯಿ ಇಳಿಕೆಯಾಗಿ 13,840 ರೂಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 44 ರುಪಾಯಿ ಕಡಿಮೆಯಾಗಿ 15,098 ರೂಪಾಯಿ ಕಂಡು ಬಂದಿದೆ.

ಪರಪ್ಪನ ಅಗ್ರಹಾರದಿಂದ ಹಿಂಡಲಗಾ ಜೈಲಿಗೆ ತೆರಳುತ್ತಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್‌; ದಿಢೀರ್‌ ಬೆಳವಣಿಗೆಗೆ ಕಾರಣವೇನು?

ಹಿಂಡಲಗಾ ಜೈಲಿಗೆ ತೆರಳುತ್ತಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್‌

Prajwal Revanna: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರು ಸೆಂಟ್ರಲ್ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾಯಿಸುವ ಪ್ರಕ್ರಿಯೆಗೆ ಬ್ರೇಕ್‌ ಬಿದ್ದಿದೆ. ಬೆಳಗಾವಿಗೆ ಕರೆದೊಯ್ಯುತ್ತಿದ್ದ ಪೊಲೀಸರು, ತುಮಕೂರು ತಲುಪಿದ ಬಳಿಕ ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ.

ಕಾಣದಂತೆ ಮಾಯವಾದ ಮಳೆ; ರಾಜ್ಯಾದ್ಯಂತ ಒಣಹವೆ, ಇನ್ನು ವರ್ಷಧಾರೆಯಾಗೋದು ಯಾವಾಗ?

ರಾಜ್ಯಾದ್ಯಂತ ಮುಂದುವರಿಯಲಿದೆ ಒಣಹವೆ

Karnataka Weather: ಎಲ್‌ ನೀನೊ ಪರಿಣಾಮದಿಂದ ದೇಶಾದ್ಯಂತ ಬರದ ಛಾಯೆ ಎದುರಾಗಿದ್ದು, ಇನ್ನು ರಾಜ್ಯದಲ್ಲಿಯೂ ಮುಂಗಾರು ದುರ್ಬಲವಾಗಿದೆ. ಸೋಮವಾರವೂ (ಅಕ್ಟೋಬರ್‌ 12) ರಾಜ್ಯಾದ್ಯಂತ ಒಣಹವೆಯೇ ಮುಂದುವರಿಯಲಿದೆ. ಬೆಂಗಳೂರು ಸೇರಿ ಎಲ್ಲೂ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಹೋಟೆಲ್‌ನಲ್ಲಿ ಸಿಎಂ ರಹಸ್ಯ ಸಭೆ ನಡೆಸಿದ್ದು ಯಾರೊಂದಿಗೆ? ಕುಮಾರಸ್ವಾಮಿ ಪ್ರಶ್ನೆ

ಡಿಕೆಯೇ ಸ್ಟಿಂಗ್ ಆಪರೇಶನ್ ಸೂತ್ರದಾರ: ಎಚ್‌ಡಿಕೆ

ಡಿ.ಕೆ.ಶಿವಕುಮಾರ್ ಅವರು ಐವರು ಸಚಿವರನ್ನು ‘ನಿಮ್ಮ ವಿರುದ್ಧ ಸ್ಟಿಂಗ್ ಆಗಿದೆ ಎಂದು ಬ್ಲ್ಯಾಕ್ ಮೇಲ್ ಮಾಡುವ ಮುನ್ನ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜ್ ಪಕ್ಕದ ಪಂಚತಾರಾ ಹೋಟೆಲ್‌ನಲ್ಲಿ ಸ್ಟಿಂಗ್ ಮಾಡುವ ವ್ಯಕ್ತಿಯೊಂದಿಗೆ ಗಂಟೆಗಟ್ಟಲೆ ಚರ್ಚೆ ನಡೆಸಿದ್ದರು. ಆ ಹೋಟೆಲ್‌ ನಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಕೂತಿದ್ದ ಆ ವ್ಯಕ್ತಿ ಯಾರು? ಆ ವ್ಯಕ್ತಿಯ ಜತೆ ಈ ಮುಖ್ಯಮಂತ್ರಿಗೆ ಏನು ಸಂಬಂಧ? ಆ ವ್ಯಕ್ತಿಯನ್ನು ಇಟ್ಟುಕೊಂಡು ಮುಖ್ಯಮಂತ್ರಿ ಯಾರ ಯಾರ ವಿರುದ್ಧ ಸ್ಟಿಂಗ್ ಮಾಡಿಸಿದ್ದರು ಎಂಬುದನ್ನು ಡಿಕೆಶಿ ಅವರು ರಾಜ್ಯದ ಜನರಿಗೆ ಹೇಳಬೇಕಾಗುತ್ತದೆ’ ಎಂದು ಅಗ್ರಹಿಸಿದರು.

ಪೊಲೀಸರ ಮಾನವೀಯತೆ: 112 ವಾಹನದಲ್ಲಿ ಗಾಯಾಳು ಆಸ್ಪತ್ರೆಗೆ ದಾಖಲು

112 ವಾಹನದಲ್ಲಿ ಗಾಯಾಳು ಆಸ್ಪತ್ರೆಗೆ ದಾಖಲು

ಸ್ಥಳೀಯರು ವಿಷಯ ಮುಟ್ಟಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು,112 ಜನಸ್ನೇಹಿ ಪೊಲೀಸ್ ವಾಹನದಲ್ಲಿ ಗಾಯಾಳುವನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಿದ್ದಾರೆ. ಬಾಲರಾಜು ಚಿಕ್ಕಬಳ್ಳಾಪುರದಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಗಾಯಾಳು ಬಾಲರಾಜು ಅವರನ್ನು ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸುವ ಮೂಲಕ ಪೊಲೀಸರು ತಮ್ಮ ಮಾನವೀಯತೆ ಮೆರೆದಿದ್ದಾರೆ.

ಸಾಗರದಲ್ಲಿ ಘೋರ ಘಟನೆ; ಕೆರೆಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು

ಕೆರೆಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು

Shivamogga News: ಶಿವಮೊಗ್ಗ ಜಿಲ್ಲೆಯ ಸಾಗರದ ಆಲಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಭಾನುವಾರ ಇಬ್ಬರು ಬಾಲಕರು ಕೆರೆಗೆ ಈಜಲು ತೆರಳಿದ್ದಾಗ, ಆಳ ಅರಿಯದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sumangali Seva Ashrama: ಡಾ.ಸುಶೀಲಮ್ಮ ಇಡೀ ಹೆಬ್ಬಾಳ ಕ್ಷೇತ್ರಕ್ಕೆ ಮಹಾತಾಯಿ ಇದ್ದಂತೆ: ಸುಮಂಗಲಿ ಸೇವಾಶ್ರಮ ನಾಡಿನ ಹೆಮ್ಮೆ: ಬೈರತಿ ಸುರೇಶ್

ಸುಮಂಗಲಿ ಸೇವಾಶ್ರಮ ನಾಡಿನ ಹೆಮ್ಮೆ: ಬೈರತಿ ಸುರೇಶ್

ಸುಶೀಲಮ್ಮ ಮತ್ತು ಅವರ ತಂಡ ನಡೆಸುತ್ತಿರುವ ಈ ಕಾರ್ಯದಿಂದಾಗಿ ಸಾವಿರಾರು ಹೆಣ್ಣು ಮಕ್ಕಳು ಇಂದು ಸಮಾಜದಲ್ಲಿ ತಲೆ ಎತ್ತಿ ನಡೆದಾಡಿ ಸ್ವಾವಲಂಬಿ ಜೀವನ ಸಾಗಿಸುವಂತಾಗಿದೆ. ಈ ಕಾರಣ ದಿಂದಲೇ ಸುಶೀಲಮ್ಮ ಅವರು ಕೇವಲ ಆಶ್ರಮ ವಾಸಿಗಳಿಗೆ ತಾಯಿಯಲ್ಲ, ಇಡೀ ಹೆಬ್ಬಾಳ ಕ್ಷೇತ್ರದ ಮಹಾತಾಯಿಯಾಗಿದ್ದಾರೆ ಎಂದು ಬಣ್ಣಿಸಿದರು.

Navaratri Utsava: ದೇವರಿಗೆ ಕೃತಜ್ಞತೆ ಸಲ್ಲಿಸುವ ಪರ್ವಕಾಲವೇ ನವರಾತ್ರಿ: ಸದ್ಗುರು ಮಧುಸೂದನ ಸಾಯಿ

ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವ ಆರಂಭ

ತಾಲ್ಲೂಕಿನ ಸತ್ಯ ಸಾಯಿ ಗ್ರಾಮದಲ್ಲಿ ಭಾನುವಾರ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಆಶೀರ್ವ ಚನ ನೀಡಿದ ಅವರು, ನವರಾತ್ರಿ ಬ್ರಹ್ಮಾನುಭವದ ಪಯಣಕ್ಕೆ ಉತ್ತಮ ವೇದಿಕೆಯಾಗಿದೆ. ಮನುಷ್ಯರ ಬದುಕಿಗೆ ಅಗತ್ಯವಾದ ಪಂಚಭೂತ ಸೇರಿದಂತೆ ಎಲ್ಲವನ್ನೂ ನೀಡಿದ ದೇವರಿಗೆ ಪೂಜೆ, ಹೋಮಗಳ ಮೂಲಕ ಕೃತಜ್ಞತೆ ಸಲ್ಲಿಸಲು ಈ ಪರ್ವಕಾಲ ಅವಕಾಶ ಕಲ್ಪಿಸುತ್ತದೆ ಎಂದರು.

MLA G B Jyoti ganesh: ​ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಬಿಜೆಪಿ-ಜೆಡಿಎಸ್ ಸಂಕಲ್ಪ: ದಾಖಲೆ ಮತಗಳ ಅಂತರಕ್ಕೆ ಶ್ರಮಿಸಲು ಕರೆ

​ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಬಿಜೆಪಿ-ಜೆಡಿಎಸ್ ಸಂಕಲ್ಪ

ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರ ಗೆಲುವು ನಿಶ್ಚಿತವಾಗಿದೆ. ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಒಟ್ಟಾಗಿ ಶ್ರಮಿಸಿ, ಸುರೇಶ್ ಅವರನ್ನು ದಾಖಲೆ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಶಾಸಕ ಜಿ.ಬಿ. ಜ್ಯೋತಿ ಗಣೇಶ್ (MLA G B Jyoti ganesh) ಮನವಿ ಮಾಡಿದರು.

Navaratra Namasya: ನವರಾತ್ರಿಯ ಪರ್ವಕಾಲ ದೇವಿಯ ಉಪಾಸನೆಗೆ ಅತ್ಯುತ್ತಮ ಕಾಲ: ರಾಘವೇಶ್ವರ ಶ್ರೀ

ನವರಾತ್ರಿಯು ದೇವಿಯ ಉಪಾಸನೆಗೆ ಅತ್ಯುತ್ತಮ ಕಾಲ: ರಾಘವೇಶ್ವರ ಶ್ರೀ

ನವರಾತ್ರಿ ವ್ರತದ ಆಚರಣೆಯನ್ನು ಯಾರು ಬೇಕಾದರೂ ಮಾಡಬಹುದಾಗಿದ್ದು, ಮೊದಲಿನಿಂದ ನವರಾತ್ರಿ ವ್ರತವನ್ನು ಆಚರಿಸುವ ಪರಂಪರೆಯನ್ನು ಹೊಂದಿರುವವರು ಆಚರಣೆಯನ್ನು ಬಿಡಬಾರದು. ಆಚರಣೆ ಬಿಟ್ಟುರುವವರು ಹಲವಾರು ರೀತಿಯಲ್ಲಿ ತೊಂದರೆಗೊಳಗಾಗಿರುವುದನ್ನು ಕಾಣಬಹುದು ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ತಿಳಿಸಿದ್ದಾರೆ.

ದೈಹಿಕ ಆರೋಗ್ಯಕ್ಕೆ ನೀಡುವಷ್ಟೇ ಪ್ರಾಮುಖ್ಯತೆ ಮಾನಸಿಕ ಆರೋಗ್ಯಕ್ಕೂ ನೀಡಿ: ಶಾಸಕ ಎಸ್.ಆರ್. ವಿಶ್ವನಾಥ್ ಕರೆ

ಮಾನಸಿಕ ಆರೋಗ್ಯ ಸಾಕ್ಷರತೆ ಹೆಚ್ಚಿಸಲು ಜಾಗೃತಿ ನಡಿಗೆ

World Mental Health Day: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ (ಮಾಹೆ) ಬೆಂಗಳೂರು ಕ್ಯಾಂಪಸ್‌ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಮಾರ್ಗ ಮೈಂಡ್ ಕೇರ್ ಸಹಯೋಗದಲ್ಲಿ ಜಾಗೃತಿ ನಡಿಗೆ ಆಯೋಜಿಸಿತು. ಶಾಸಕ ಎಸ್.ಆರ್. ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

MLA B N Ravikumar: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ: ಎನ್‌ಡಿಎ ಮುಖಂಡರ ಸಭೆ: ಸಂಘಟಿತ ಹೋರಾಟಕ್ಕೆ ಶಾಸಕ ಬಿ.ಎನ್.ರವಿಕುಮಾರ್ ಕರೆ

ಸಂಘಟಿತ ಹೋರಾಟಕ್ಕೆ ಶಾಸಕ ಬಿ.ಎನ್.ರವಿಕುಮಾರ್ ಕರೆ

ಚುನಾವಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಂಘಟಿತ ಪ್ರಯತ್ನಗಳು ನಿರ್ಣಾ ಯಕ ಪಾತ್ರ ವಹಿಸುತ್ತವೆ. ಅಭ್ಯರ್ಥಿ ಕೆ.ಎಸ್. ಸುರೇಶ್ ಅವರ ಪರವಾಗಿ ಪರಿಣಾಮ ಕಾರಿಯಾಗಿ ಪ್ರಚಾರ ನಡೆಸಿ, ಪದವೀಧರ ಮತದಾರರನ್ನು ನೇರವಾಗಿ ಸಂಪರ್ಕಿಸಬೇಕು. ಚುನಾವಣೆಯ ಮಹತ್ವ ತಿಳಿಸುವುದರ ಜತೆಗೆ ಅಭ್ಯರ್ಥಿಯ ಪರವಾಗಿ ಬೆಂಬಲ ಕೋರಿ, ಮತದಾರರ ವಿಶ್ವಾಸ ಗಳಿಸಲು ಎಲ್ಲರೂ ಶ್ರಮಿಸಬೇಕು

B M Prameela Mahadev: ದಸರಾ ಪ್ರಧಾನ ಕವಿಗೋಷ್ಠಿಗೆ ಆಯ್ಕೆಯಾದ ಪ್ರಮೀಳ ಮಹದೇವಗೆ ಕಸಾಪ ಸನ್ಮಾನ

ಪ್ರಮೀಳ ಮಹದೇವಗೆ ಕಸಾಪ ಸನ್ಮಾನ

ಮೈಸೂರು ದಸರಾ(Dasara) ನಾಡಹಬ್ಬದ ಪ್ರಧಾನ ಕವಿಗೋಷ್ಠಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಸಾಹಿತಿ ಹಾಗೂ ಅಧ್ಯಾಪಕಿ, ‘ಸಿರಿಮಲ್ಲಿಗೆ’ ಖ್ಯಾತಿಯ ಬಿ.ಎಂ.ಪ್ರಮೀಳ ಮಹದೇವ(B M Prameela Mahadev) ಆಯ್ಕೆಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು(Kannada Sahithya parishad) ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ರಾಜ್ಯದಲ್ಲಿ ಬರಗಾಲ, ʼಕಹಿʼಯಾಗಲಿದೆ ಸಕ್ಕರೆ

ರಾಜ್ಯದಲ್ಲಿ ಬರಗಾಲ, ʼಕಹಿʼಯಾಗಲಿದೆ ಸಕ್ಕರೆ

ಕಳೆದ ವರ್ಷ ರಾಜ್ಯದಲ್ಲಿರುವ 81 ಸಕ್ಕರೆ ಕಾರ್ಖಾನೆ ಗಳಿಂದ 576 ಲಕ್ಷ ಟನ್ ಕಬ್ಬು ಅರೆಯಲಾಗಿತ್ತು. ಕಳೆದ ವರ್ಷ ಕರ್ನಾಟಕ ಹಾಗೂ ಮಹಾ ರಾಷ್ಟ್ರದಲ್ಲಿ ಇಳುವರಿ ಹೆಚ್ಚಾಗಿದ್ದರಿಂದ ದೇಶದ ಒಟ್ಟು ಸಕ್ಕರೆ ಉತ್ಪಾದನೆ ಶೇ.7ರಷ್ಟು ಏರಿಕೆಯಾಗಿತ್ತು. ಆದರೆ ಈ ಬಾರಿ ಕರ್ನಾಟಕದಲ್ಲಿ ಭೀಕರ ಕ್ಷಾಮ ಆವರಿಸಿರುವುದರಿಂದ, ಶೇ.35ರಿಂದ 40ರಷ್ಟು ಕಬ್ಬು ಇಳುವರಿ ಕಡಿಮೆಯಾಗಲಿದೆ ಎನ್ನುವ ಆತಂಕ ಶುರುವಾಗಿದೆ.

ಶೃಂಗೇರಿಯಲ್ಲಿ ವೈದ್ಯಕೀಯ ಕ್ರಾಂತಿ: ಅತ್ಯಾಧುನಿಕ ಕ್ಯಾಥ್‌ ಲ್ಯಾಬ್‌ ಮತ್ತು ಎಮ್‌ಆರ್‌ʼಐ ಘಟಕ ಉದ್ಘಾಟನೆ

ಶೃಂಗೇರಿಯಲ್ಲಿ ಅತ್ಯಾಧುನಿಕ ಎಮ್‌ಆರ್‌ʼಐ ಘಟಕ ಉದ್ಘಾಟನೆ

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರಂಗೇರಿ ಮಠದ ಸಿಇಒ ಮತ್ತು ಆಡಳಿತಾಧಿಕಾರಿಗಳಾದ ಪಿ.ಎ.ಮುರಳಿ,‘ ಶೃಂಗೇರಿ ಸಂಸ್ಥಾನವು ಮೊದಲಿನಿಂದಲೂ ನಮ್ಮ ಗ್ರಾಮೀಣ ಭಾಗದ ಜನರ ಆರೋಗ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾ ಬಂದಿದೆ. ಇದೇ ಉದ್ದೇಶದಿಂದ ಮಲೆನಾಡಿಗರಿಗೆ ಸಹಾಯವಾಗಲಿ ಎನ್ನುವ ನಿಟ್ಟಿನಲ್ಲಿ ಈಗ ಅತ್ಯಾಧುನಿಕ ಹೃದ್ರೋಗ ಚಿಕಿತ್ಸೆ ಹಾಗೂ ಎಮ್‌ಆರ್‌ʼಐ ಸೌಲಭ್ಯಗಳನ್ನು ಆರಂಭಿಸಲಾಗಿದೆ.

Belagavi Accident: ಹುಕ್ಕೇರಿಯಲ್ಲಿ ದುರ್ಗಾ ಮಾತೆ ಮೆರವಣಿಗೆ ವೇಳೆ ಭೀಕರ ಅಪಘಾತ; ಟ್ರ್ಯಾಕ್ಟರ್‌ಗೆ ಟ್ರಕ್ ಡಿಕ್ಕಿಯಾಗಿ ಮೂವರ ಸಾವು

ಹುಕ್ಕೇರಿಯಲ್ಲಿ ದುರ್ಗಾ ದೇವಿ ಮೆರವಣಿಗೆ ವೇಳೆ ಅಪಘಾತ; ಮೂವರ ಸಾವು

Hukkeri Accident: ದುರ್ಗಾದೇವಿ ಮೂರ್ತಿಯನ್ನು ಬೆಳಗಾವಿಯಿಂದ ಹುಕ್ಕೇರಿ ತಾಲೂಕಿನ ಹುಂಚ್ಯಾನಟ್ಟಿ ಗ್ರಾಮಕ್ಕೆ ಟ್ರ್ಯಾಕ್ಟ‌ರ್‌ನಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಯಮಕನಮರಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Mysuru Dasara 2026: ಅಧರ್ಮದ ಮುಳ್ಳನ್ನು ಧರ್ಮದ ಮುಳ್ಳಿನಿಂದ ತೆಗೆಯುವುದೇ ದಸರಾ: ಸಿಎಂ ಡಿಕೆಶಿ

ಅಧರ್ಮದ ಮುಳ್ಳನ್ನು ಧರ್ಮದ ಮುಳ್ಳಿನಿಂದ ತೆಗೆಯುವುದೇ ದಸರಾ: ಸಿಎಂ

ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಬದುಕಿನ ಸ್ಮರಣೀಯ ಕ್ಷಣ. ಇವತ್ತು ಚಾಮುಂಡಿಯ ದರ್ಶನ ಪಡೆದು, ಶ್ರೀಗಳ ಕೈಯಲ್ಲಿ ದಸರಾ ಉದ್ಘಾಟನೆ ಮಾಡಿಸಿರುವುದು ನನಗೆ ಸಿಕ್ಕ ಭಾಗ್ಯ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು‌ ಹೇಳಿದರು.

Mysuru Dasara 2026: ನಾಡಿನ ಭೂತ, ವರ್ತಮಾನ, ಭವಿಷ್ಯದ ಸಂಗಮವೇ ಮೈಸೂರು ದಸರಾ: ಅಭಿನವ ಗವಿಸಿದ್ದೇಶ್ವರ ಶ್ರೀ

ಭೂತ, ವರ್ತಮಾನ, ಭವಿಷ್ಯದ ಸಂಗಮವೇ ದಸರಾ: ಗವಿಸಿದ್ದೇಶ್ವರ ಶ್ರೀ

ಚಾಮುಂಡಿ ಬೆಟ್ಟದಲ್ಲಿ ಭಾನುವಾರ ನಡೆದ ದಸರಾ ಉದ್ಘಾಟನೆ ಕಾರ್ಯಕ್ರಮಲ್ಲಿ ಗವಿಮಠದ ಶ್ರೀಗಳು ಮಾತನಾಡಿದ್ದಾರೆ. ಒಂದು ಕಾಲಕ್ಕೆ ಯಾವ ದಸರಾ ಕೇವಲ ದೊರೆಗಳ ಹಬ್ಬವಾಗಿತ್ತೋ ಇಂದು ಅದು ಧರೆಯ ಹಬ್ಬವಾಗಿ ವಿಶ್ವವಿಖ್ಯಾತವಾಗಿದೆ. ಇಡೀ ಆರು ಕೋಟಿ ಕನ್ನಡಿಗರ ಪರವಾಗಿ ಚಾಮುಂಡಿ ತಾಯಿ ಸನ್ನಿಧಿಯನ್ನು ದೀಪ ಹಚ್ಚಿ, ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಶ್ರೀಗಳು ಹೇಳಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಗವಿಸಿದ್ದೇಶ್ವರ ಸ್ವಾಮೀಜಿ; ಈ ಬಾರಿ ವಿಶೇಷತೆ ಏನು?

ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಗವಿಸಿದ್ದೇಶ್ವರ ಸ್ವಾಮೀಜಿ

ವಿಶ್ವವಿಖ್ಯಾತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವ 2026 ಕ್ಕೆ ಇಂದು ಅಧಿಕೃತವಾಗಿ ಅದ್ಧೂರಿ ಚಾಲನೆ ದೊರೆತಿದೆ. ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಈ ಬಾರಿ ಅಧಿಕೃತವಾಗಿ ದಸರಾಗೆ ಚಾಲನೆ ನೀಡಿದ್ದಾರೆ. ಇನ್ನು ಭಾನುವಾರ ಸಂಜೆ ದಸರಾ ಮಹೋತ್ಸದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ 10 ದಿನಗಳ ನಾಡಹಬ್ಬ ದಸರಾ ಆರಂಭ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ 10 ದಿನಗಳ ನಾಡಹಬ್ಬ ದಸರಾ ಆರಂಭ

ಅ.11ರ ಭಾನುವಾರ ಬೆಳಗ್ಗೆ 11.50ರಿಂದ 12.13ರವರೆಗೆ ಸಲ್ಲುವ ಧನುರ್ ಲಗ್ನದಲ್ಲಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ 2026ರ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಕೊಪ್ಪಳ ಗವಿಮಠದ ಶ್ರೀಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ದಸರಾ ಉದ್ಘಾಟಿಸಲಿದ್ದಾರೆ.

ರಾಜ್ಯದಲ್ಲಿ ಮುಂಗಾರು ಕ್ಷೀಣ: ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ, ಉತ್ತರ ಕರ್ನಾಟಕದಲ್ಲಿ ಒಣ ಹವೆ

ರಾಜ್ಯದಲ್ಲಿ ಮುಂಗಾರು ಕ್ಷೀಣ: ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ

ರಾಜ್ಯದಲ್ಲಿ ಮುಂಗಾರು ಮಾರುತಗಳ ಪ್ರಭಾವ ಕ್ಷೀಣಿಸುತ್ತಿದ್ದರೂ, ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

Navaratri Celebration in Bengali Style: ಸತ್ಯಸಾಯಿ ಗ್ರಾಮದಲ್ಲಿ ಬಂಗಾಳ ಶೈಲಿಯಲ್ಲಿ ನವರಾತ್ರಿ ಆಚರಣೆ: 18ರಿಂದ ನಾಲ್ಕು ದಿನ ಮಹಾ ರುದ್ರಯಾಗ

ಸತ್ಯಸಾಯಿ ಗ್ರಾಮದಲ್ಲಿ ಬಂಗಾಳ ಶೈಲಿಯಲ್ಲಿ ನವರಾತ್ರಿ ಆಚರಣೆ

ಸತ್ಯಸಾಯಿ ಹೃದಯ ಮಂದಿರದ ಆವರಣದಲ್ಲಿರುವ ಯಾಗಶಾಲೆಯಲ್ಲಿ ಅ.11ರಿಂದ 21ರವರೆಗೆ ಪ್ರತಿದಿನ ಬೆಳಗ್ಗೆ 7.30ಕ್ಕೆ ವಿವಿಧ ಹೋಮಗಳು ನಡೆಯಲಿವೆ. ಮೊದಲ ದಿನ ಸಹಸ್ರ ಮೋದಕ ಗಣಪತಿ ಹೋಮ, ನವಗ್ರಹ ಹೋಮ ಹಾಗೂ ಶನಿ ಶಾಂತಿ ಕಾರ್ಯಕ್ರಮಗಳೊಂದಿಗೆ ಆರಂಭವಾಗಲಿದ್ದು, ನಂತರದ ದಿನಗಳಲ್ಲಿ ದುರ್ಗಾ ಹೋಮ, ಧನ್ವಂತರಿ ಹೋಮ, ಲಲಿತಾ ಹೋಮ, ಮಹಾ ಸರಸ್ವತಿ ಹೋಮ, ಲಕ್ಷ್ಮೀನರಸಿಂಹ ಹೋಮ, ಶಿವ ಪಂಚಾಕ್ಷರಿ ಹೋಮ ಸೇರಿದಂತೆ ವಿವಿಧ ಹೋಮಗಳು ನಡೆಯಲಿವೆ

Gubbi News: ಚೇಳೂರು ಜಿಪಂ ಕ್ಷೇತ್ರಕ್ಕೆ ಮೈತ್ರಿ ಪಕ್ಷದ ಪ್ರಬಲ ಆಕಾಂಕ್ಷಿಯಾಗಿ ಗುಡ್ಡದಹಳ್ಳಿ ಬಸವರಾಜು

ಚೇಳೂರು ಕ್ಷೇತ್ರ: ಮೈತ್ರಿ ಪಕ್ಷದ ಆಕಾಂಕ್ಷಿಯಾಗಿ ಗುಡ್ಡದಹಳ್ಳಿ ಬಸವರಾಜು

ಪಟ್ಟಣದ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಸಭಾಂಗಣದಲ್ಲಿ ನಡೆದ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಮೂಕ ಪ್ರೇಕ್ಷಕನಾಗಿ ಮತ ಹಾಕುತ್ತಾ ಬಂದಿರುವ ಕಾಡು ಗೊಲ್ಲ ಸಮುದಾಯಕ್ಕೆ ಚೇಳೂರು ಕ್ಷೇತ್ರ ಮಾತ್ರ ಅವಕಾಶ ಒದಗಿಸಿದೆ. ಸಿಕ್ಕಿದ ಈ ಸ್ಥಾನಕ್ಕೆ ಕಳೆದ 32 ವರ್ಶದಿಂದ ಬಿಜೆಪಿ ಪಕ್ಷ ಸಂಘಟನೆ ಮಾಡಿರುವ ನನಗೆ ಪಕ್ಷ ಟಿಕೆಟ್ ನೀಡಿ ಗೆಲುವಿಗೆ ಅವಕಾಶ ಮಾಡಿಕೊಡಲಿದೆ

ಔಷಧಿಗಳ ಹೆಸರಿನಲ್ಲಿ ದುಪ್ಪಟ್ಟು ಹಣ ವಸೂಲಿಗೆ ಬ್ರೇಕ್‌; ಇನ್ನುಮುಂದೆ ಮೂಲ ಬೆಲೆ, ಎಂಆರ್‌ಪಿ ವಿವರ ಕಡ್ಡಾಯ

ಔಷಧಿ ಹೆಸರಲ್ಲಿ ದುಪ್ಪಟ್ಟು ಹಣ ವಸೂಲಿಗೆ ಬ್ರೇಕ್‌; ಹೊಸ ಮಾರ್ಗಸೂಚಿ

Medicine purchase and selling prices: ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್‌ ಹೋಮ್‌ಗಳು, ಕ್ಲಿನಿಕ್‌ಗಳು, ಡೇ ಕೇರ್‌ ಸೆಂಟರ್‌ಗಳು ಹಾಗೂ ಡಯಾಗ್ನಸ್ಟಿಕ್‌ ಸೆಂಟರ್‌ಗಳಿಗೆ ಈ ಮಾರ್ಗಸೂಚಿ ಅನ್ವಯವಾಗಲಿದೆ. ಔಷಧಿಗಳ ಹೆಸರಿನಲ್ಲಿ ರೋಗಿಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡುವುದನ್ನು ತಡೆಯಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.

Loading...