ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Shidlaghatta News: ದೇಶದಲ್ಲಿ ಅಧಿಕಾರಕ್ಕೋಸ್ಕರವೇ ಮತಗಳ್ಳತನ ಎಂಬ ಅಡ್ಡದಾರಿ ಹಿಡಿಯುವುದು ಮಹಾ ಮೋಸ

ಮತಗಳ್ಳತನ ಎಂಬ ಅಡ್ಡದಾರಿ ಹಿಡಿಯುವುದು ಮಹಾ ಮೋಸ

ದೇಶದಲ್ಲಿ ಬಿಜೆಪಿ ಪಕ್ಷದವರು ಮತ ಕಳ್ಳತನದಂತಹ ದುಸ್ಸಾಹಕ್ಕೆ ಕೈ ಹಾಕಿದ ಪರಿಣಾಮ ವಾಗಿ ದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಬಿಹಾರ್ ಮಾತ್ರ ವಲ್ಲದೇ ರಾಜ್ಯದ ಹಲವು ಕಡೆ ಮತ ಕಳ್ಳತನದಂತಹ ಘಟನೆಗಳು ನಡೆದಿವೆ. ಬಿಜೆಪಿ ಸೇರಿದಂತೆ ಕೋಮುವಾದಿ ಪಕ್ಷಗಳು ದೇಶದಲ್ಲಿ ಅಧಿಕಾರಕ್ಕೋಸ್ಕರ ಆಯೋಗದ ಮೂಲಕ ನಡೆಸುತ್ತಿರುವ ಮತಗಳ್ಳತನ ನಿಲ್ಲಬೇಕು

Sadhguru Shri Madhusudan Sai: ಒಟ್ಟಾಗಿ ಕೆಲಸ ಮಾಡಿದರೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ :  ಶ್ರೀ ಮಧುಸೂದನ ಸಾಯಿ

ಒಟ್ಟಾಗಿ ಕೆಲಸ ಮಾಡಿದರೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ

ಸಾರ್ವಜನಿಕ ಹಣ, ಆಸ್ತಿಯನ್ನು ಪಾರದರ್ಶಕವಾಗಿ ನಿಸ್ವಾರ್ಥ ಅಥವಾ ವಸ್ತುನಿಷ್ಠತೆಯ ತತ್ವಗಳ ಮೇಲೆ ನಿರ್ವಹಿಸಬೇಕು. ನಮ್ಮ ವೆಚ್ಚವನ್ನು ಕನಿಷ್ಠ ಮಟ್ಟದಲ್ಲಿರಿಸಿಕೊಳ್ಳುವುದು ಮತ್ತು ಸಾಧ್ಯವಾದಷ್ಟು ಕಾಳಜಿಯನ್ನು ವಹಿಸುತ್ತಿದ್ದೇವೆ. ದಕ್ಷತೆಯ ಜೊತೆಗೆ ವೆಚ್ಚಗಳನ್ನು ಕಡಿಮೆ ಮಾಡಿ ವೇಗವಾಗಿ ಕೆಲಸಗಳು ನಡೆಯುವಂತೆ ನೋಡಿಕೊಳ್ಳುತ್ತಿದ್ದೇವೆ.

Namaz at Bengaluru airport: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ನಮಾಜ್‌; ತನಿಖೆಗೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹ

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ನಮಾಜ್‌; ತನಿಖೆಗೆ ಆಗ್ರಹ

Hindu Janajagruti Samiti: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನಲ್ಲಿ ಕೆಲ ಮುಸ್ಲಿಮರು ಸಾರ್ವಜನಿಕವಾಗಿ ನಮಾಜ್ ಪಠಣ ನಡೆಸಿರುವ ಘಟನೆ ಗಂಭೀರ ಆತಂಕಕ್ಕೆ ಕಾರಣವಾಗಿದೆ. ಅಲ್ಲಿ ಸುರಕ್ಷತಾ ಅಧಿಕಾರಿಗಳು ಮತ್ತು ನಿರ್ವಾಹಕ ಸಿಬ್ಬಂದಿ ಇದ್ದರೂ ಅವರು ಈ ನಡೆಯ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದು ಪ್ರಶ್ನಾರ್ಹವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ತಿಳಿಸಿದ್ದಾರೆ.

Dharmasthala: ನವೆಂಬರ್‌ 15ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ: ಮಂಜುನಾಥನ ಸನ್ನಿಧಿಯಲ್ಲಿ ಮೇಳೈಸಲಿದೆ ಸುಜ್ಞಾನ ಬೆಳಕಿನ ವೈಭವ

ನ.18 ಸರ್ವಧರ್ಮ ಸಮ್ಮೇಳನ, ನ.19: ಸಾಹಿತ್ಯ ಸಮ್ಮೇಳನ

Dharmasthala Lakshdeepotsava: ಪ್ರತಿ ವರ್ಷದಿಂತೆ ಈ ಬಾರಿಯೂ ಕಾರ್ತಿಕ ಮಾಸದಲ್ಲಿ ಧರ್ಮಸ್ಥಳದಲ್ಲಿ ಲಕ್ಷ್ಮ ದೀಪೋತ್ಸವವನ್ನು ಆಯೋಜಿಸಲಾಗಿದೆ. ಇದು ಸುಮಾರು ಐದು ದಿನಗಳ ಕಾಲ ನಡೆಯಲಿದ್ದು, ಕಾರ್ತಿಕ ಮಾಸದಲ್ಲಿ ನಡೆಯುವ ಈ ಲಕ್ಷದೀಪೋತ್ಸವ ಸಂಭ್ರಮದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಸೇರಿದಂತೆ ಹತ್ತು ಹಲವು ಕಾರ್ಯಕ್ರಮ ನಡೆಯಲಿದೆ.

Delhi Blast: ರಾಜ್ಯದಲ್ಲಿ ಭದ್ರತೆ ಹೆಚ್ಚಳಕ್ಕೆ ಸೂಚಿಸಿದ್ದೇನೆ; ದೆಹಲಿ ಸ್ಫೋಟದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ರಾಜ್ಯದಲ್ಲಿ ಭದ್ರತೆ ಹೆಚ್ಚಳಕ್ಕೆ ಸೂಚನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಏರ್‌ಪೋರ್ಟ್‌, ರೈಲು ನಿಲ್ದಾಣ ಹಾಗೂ ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲು ಸೂಚಿಸುತ್ತೇನೆ. ಇನ್ನು ನವದೆಹಲಿ ಘಟನೆಯಲ್ಲಿ ಮೃತರಾದವರಿಗೆ ಸಂತಾಪ ಸೂಚಿಸುತ್ತೇನೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Sadguru Sri Madhusudan Sai: ಒಟ್ಟಾಗಿ ಕೆಲಸ ಮಾಡಿದರೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ: ಶ್ರೀ ಮಧುಸೂದನ ಸಾಯಿ

ಒಟ್ಟಾಗಿ ಕೆಲಸ ಮಾಡಿದರೆ ಸಮಸ್ಯೆಗಳ ಬಗೆಹರಿಸಲು ಸಾಧ್ಯ: ಶ್ರೀ ಮಧುಸೂದನ ಸಾಯಿ

Sathya Sai Grama: ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ' ದ 87ನೇ ದಿನವಾದ ಸೋಮವಾರ ಆಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು, ಸತ್ಯ ಸಾಯಿ ಸಂಸ್ಥೆಗೆ ಬೆಂಬಲ ನೀಡುತ್ತಿರುವ, ನಮ್ಮೊಂದಿಗೆ ಕೆಲಸ ಮಾಡುತ್ತಿರುವ ಕೆಲವು ಕಾರ್ಪೊರೇಟ್ ಕೇಂದ್ರಗಳಿಗೆ ಗೌರವ ನೀಡುವ ಸಲುವಾಗಿ ಸಿಎಸ್ಆರ್ ಪುರಸ್ಕಾರವನ್ನು ನೀಡಲಾಗುತ್ತಿದೆ. ನಾವು ಒಟ್ಟಾಗಿ ಹೋದಾಗ ಎಲ್ಲರೂ ಒಟ್ಟಾಗಿ ಬೆಳೆಯಬಹುದು. ಯಾರೋ ಒಬ್ಬರಿಂದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಟೈಟಾನ್ ನ ಸೊಗಸಾದ ಸ್ಮಾರ್ಟ್ ಸರಣಿ: ಆಧುನಿಕ ವಿನ್ಯಾಸ ಮತ್ತು ಸ್ಮಾರ್ಟ್ ವಿಶೇಷತೆ ಹೊಂದಿರುವ ಟೈಟಾನ್ ಸ್ಮಾರ್ಟ್ ಇವೋಕ್ 2.0 ಬಿಡುಗಡೆ

ಟೈಟಾನ್ ನ ಸೊಗಸಾದ ಸ್ಮಾರ್ಟ್ ಸರಣಿ

ವಾಚ್ ಸರಣಿಯನ್ನು ಹೊಸತನ ಮತ್ತು ಶಾರ್ಪ್ ಎಡ್ಜಿ ಡಿಸೈನ್ ಅನ್ನು ಬಳಸಿ ರೂಪಿಸಲಾಗಿದೆ. ಟೈಟಾನ್ ಸ್ಮಾರ್ಟ್‌ ನ ಕುಶಲಗಾರಿಕೆ ಮತ್ತು ವಿನ್ಯಾಸ ಬುದ್ಧಿಮತ್ತೆಯ ಪರಂಪರೆಯ ಆಧಾರ ದಲ್ಲಿ ಟೈಟಾನ್ ತನ್ನೆಲ್ಲಾ ವಾಚ್ ಗಳನ್ನು ತಯಾರಿಸುತ್ತಿದ್ದು, ಇದೀಗ ಬಿಡುಗಡೆಯಾಗಿರುವ ಇವೋಕ್ 2.0 ಟೈಟಾನ್ ಬ್ರ್ಯಾಂಡ್‌ ನ “ಪ್ಯಾಶನ್ ಮೀಟ್ಸ್ ಫ್ಯಾಷನ್” ಎಂಬ ತತ್ವಕ್ಕೆ ಪೂರಕ ವಾಗಿ ಮೂಡಿ ಬಂದಿದೆ

Delhi Blast: ದೆಹಲಿಯಲ್ಲಿ ಸ್ಫೋಟ ಹಿನ್ನೆಲೆ ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್‌

ದೆಹಲಿ ಸ್ಫೋಟ; ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್‌

High alert in Bengaluru: ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮೆಟ್ರೋ, ರೈಲ್ವೆ ನಿಲ್ದಾಣ ಹಾಗೂ ಏರ್‌ಪೋರ್ಟ್‌ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ಹೊರ ರಾಜ್ಯದವರ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.

Bangalore News: ಬ್ರಿಟಿಷ್ ಕೌನ್ಸಿಲ್‌ʼನ ಮೊದಲ ‘ಕ್ರಿಯೇಟಿವ್ ಕನ್ವರ್ಜೆನ್ಸ್: ಗ್ರೋತ್ ರೀಇಮ್ಯಾಜಿನ್’ ಬೆಂಗಳೂರಿನಲ್ಲಿ ಆರಂಭ

ಭಾರತ-ಬ್ರಿಟನ್ ನಡುವಿನ ಸೃಜನಾತ್ಮಕ ಸಹಕಾರಕ್ಕೊಂದು ಹೊಸ ಅಧ್ಯಾಯ

ಬ್ರಿಟಿಷ್ ಕೌನ್ಸಿಲ್‌ʼನ ಅಂತರರಾಷ್ಟ್ರೀಯ ಸೃಜನಾತ್ಮಕ ಜಾಲಗಳನ್ನು ಬಲಪಡಿಸುವ ಪ್ರಯತ್ನ ಇದಾಗಿದ್ದು, 2025ರ ಮೇ ತಿಂಗಳಲ್ಲಿ ಯುಕೆ ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡೆ ಸಚಿವರು ಹಾಗೂ ಭಾರತದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರು ಸಹಿ ಮಾಡಿದ್ದ “ಇಂಡಿಯಾ–ಯುಕೆ ಪ್ರೋಗ್ರಾಂ ಆಫ್ ಕಲ್ಚರಲ್ ಕೋ-ಆಪರೇಶನ್ (2025–2030)”ನ ಉದ್ದೇಶಗಳನ್ನು ಮುಂದುವರಿಸುತ್ತದೆ.

ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿದ ಕೋಕಾ-ಕೋಲಾ ಅಭಿಯಾನ

ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿದ ಕೋಕಾ-ಕೋಲಾ ಅಭಿಯಾನ

ಆದಿತ್ಯ ಗದ್ವಿ ಇನ್ನಿಂಗ್ಸ್‌ ಗಳ ಮಧ್ಯದ ವಿರಾಮದಲ್ಲಿ ಕ್ರೀಡಾಂಗಣದ ಕೇಂದ್ರ ಬಿಂದು ವಾದರು. ಕ್ಯಾನೆಸ್ ಲಯನ್ಸ್ ಪ್ರಶಸ್ತಿ ವಿಜೇತ ಅಭಿಯಾನ ಖಲಾಸಿಯ ಮತ್ತು ಗುಜರಾತ್‌ನ ಜಾನಪದ ಪರಂಪರೆಗೆ ಸೇರಿದ ಉತ್ಸಾಹಭರಿತ ಮೀಠಾ ಖಾರಾ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿ ದರು. ಈ ಪ್ರದರ್ಶನ ಕೋಕ್ ಸ್ಟುಡಿಯೋ ಭಾರತ್‌ನ ಸಾಮರ್ಥ್ಯವನ್ನು ತೋರಿಸಿದೆ.

ಮಾಹೆ ಬೆಂಗಳೂರು ಓಪನ್ ಹೌಸ್ 3.0: ಪರಂಪರೆಯಿಂದ ಭವಿಷ್ಯದ ಕಲಿಕೆಯ ಕಡೆಗೆ

ಮಾಹೆ ಬೆಂಗಳೂರು ಓಪನ್ ಹೌಸ್ 3.0

ದಿನಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪೋಷ ಕರು ಪಾಲ್ಗೊಂಡಿದ್ದರು. ಸಂವಾದಾತ್ಮಕ ಕಾರ್ಯಾಗಾರಗಳು ಮತ್ತು ನೇರ ಸಂದರ್ಶನ, ಶಿಕ್ಷಕರ ಜೊತೆ ಮಾತುಕತೆ, ಸಮಾಲೋಚನೆ, ಕ್ಯಾಂಪಸ್‌ ಅನುಭವ ಪಡೆಯುವ ಮೂಲಕ ವಿದ್ಯಾರ್ಥಿ ಗಳು ತಮ್ಮ ಕಲಿಕೆಯ ಮಾರ್ಗವನ್ನು ನಿರ್ಧರಿಸಲು ಇದೊಂದು ಅದ್ಭುತ ವೇದಿಕೆಯಾಗಿತ್ತು

Hospet News: 40ನೇ ಶ್ರೀ ಶಿವಚಿದಂಬರ ಗುರುಗಳ ಜಯಂತ್ಯೋತ್ಸವ ಸಂಪನ್ನ

40ನೇ ಶ್ರೀ ಶಿವಚಿದಂಬರ ಗುರುಗಳ ಜಯಂತ್ಯೋತ್ಸವ ಸಂಪನ್ನ

ನಗರದ ಅಮರಾವತಿಯ ಶ್ರೀ ಯಾಜ್ಞವಲ್ಕ ಸೇವಾ ಟ್ರಸ್ಟ್ ವತಿಯಿಂದ ಶ್ರೀವಡಕರಾಯ ಸ್ವಾಮಿ ದೇಗುಲದಲ್ಲಿ 40ನೇ ಶ್ರೀ ಶಿವಚಿದಂಬರ ಗುರುಗಳ ಜಯಂತ್ಯೋ ತ್ಸವ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಶ್ರೀ ಗುರುಗಳ ಭಾವಚಿತ್ರವನ್ನು ದೇವಸ್ಥಾನದಲ್ಲಿ ಸ್ಥಾಪಿಸಲಾಯಿತು. ನಂತರ ಕಾಕಡಾರತಿ, ರುದ್ರಾಭೀಷೇಕ, ಶ್ರೀ ಗುರುಗಳ ಜನೋತ್ಸವ ತೊಟ್ಟಿಲು ಸೇವೆ ಜರುಗಿತು.

Mysuru KDP Meeting: ಶಿಕ್ಷಣ ಸೂಚ್ಯಂಕದಲ್ಲಿ ಮೈಸೂರು ಜಿಲ್ಲೆ 7ರಿಂದ 14ನೇ ಸ್ಥಾನಕ್ಕೆ ಕುಸಿತ; ಡಿಡಿಪಿಐಗೆ ಸಿಎಂ ತರಾಟೆ

ಶಿಕ್ಷಣ ಸೂಚ್ಯಂಕದಲ್ಲಿ ಮೈಸೂರು ಕುಸಿತ; ಡಿಡಿಪಿಐ ವಿರುದ್ಧ ಸಿಎಂ ಗರಂ

Mysuru News: ಕೆಡಿಪಿ ಸಭೆಯಲ್ಲಿ ಮೈಸೂರು ಡಿಡಿಪಿಐನಿಂದ ವಿವರ ಕೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮುಂದಿನ ಸಾರಿ ಫಲಿತಾಂಶ ಸುಧಾರಿಸಬೇಕು. ಇಲ್ಲದಿದ್ದರೆ, ಡಿಡಿಪಿಐ ಮತ್ತು ಬಿಇಒ ಗಳನ್ನು ಇದಕ್ಕೆ ಹೊಣೆ ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Malur poll votes Recount: ನಾಳೆ ಮಾಲೂರು ಕ್ಷೇತ್ರದ ಮರು ಮತ ಎಣಿಕೆ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯಲಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ

ಮಾಲೂರು ಕ್ಷೇತ್ರ ಮರು ಮತ ಎಣಿಕೆ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯಲಿ

Malur Assembly Constituency: ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಹಿನ್ನೆಲೆಯಲ್ಲಿ ಸೋಮವಾರ ಕೋಲಾರದ ಜಿಲ್ಲಾಧಿಕಾರಿಗಳನ್ನು ಬಿಜೆಪಿ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಹಳ ಕಡಿಮೆ ಅಂತರದಲ್ಲಿ ಅಭ್ಯರ್ಥಿ ಸೋಲು- ಗೆಲುವು ಆಗಿದೆ. ಯಾವುದೇ ಎಣಿಕೆ ನಡೆಯುವಾಗ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯುತ್ತದೆ. ಇಡೀ ರಾಜ್ಯದ ಇತರ ಕ್ಷೇತ್ರಗಳ ಕ್ಯಾಮೆರಾ ದಾಖಲಾತಿ ಇದೆ. ಆದರೆ, ಮಾಲೂರಿನದು ಯಾಕೆ ಇಲ್ಲ ಎಂದು ಪ್ರಶ್ನಿಸಿದ್ದಾರೆ.

Vijayapura News: ವಿಜಯಪುರ ಜಿಲ್ಲೆಯಲ್ಲಿ 5 ಕೋಟಿ ಗಿಡ ನೆಡುವ ಗುರಿ: ಎಂ.ಬಿ. ಪಾಟೀಲ್‌

ವಿಜಯಪುರ ಜಿಲ್ಲೆಯಲ್ಲಿ 5 ಕೋಟಿ ಗಿಡ ನೆಡುವ ಗುರಿ: ಎಂ.ಬಿ. ಪಾಟೀಲ

M B Patil: ವೃಕ್ಷೋಥಾನ್-2025 ಕಾರ್ಯಕ್ರಮವು ಈ ಬಾರಿ ಡಿ.7ರ ಭಾನುವಾರ ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ನಡೆಯಲಿದ್ದು, 15 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇದರಲ್ಲಿ ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ, ಸೇನಾ ಸಿಬ್ಬಂದಿ, ವಿಜಯಪುರ ಸೈಕ್ಲಿಂಗ್ ಗ್ರೂಪ್, ಅರಣ್ಯ ಇಲಾಖೆ, 50ಕ್ಕೂ ಹೆಚ್ಚು ಸಂಘಸಂಸ್ಥೆಗಳು ಸಕ್ರಿಯವಾಗಿ ತೊಡಗಿಕೊಳ್ಳಲಿವೆ. ಇದರಲ್ಲಿ ಒಟ್ಟು 10 ಲಕ್ಷ ರೂ. ಮೊತ್ತದ ಬಹುಮಾನ ನೀಡಲಾಗುವುದು.

Bengaluru central jail: ಕರ್ನಾಟಕದಲ್ಲಿ ಕ್ರಿಮಿನಲ್‍ಗಳು, ಭಯೋತ್ಪಾದಕರಿಗೆ ರಾಜಾಶ್ರಯ: ಸಿ.ಟಿ. ರವಿ ಆರೋಪ

ಕರ್ನಾಟಕದಲ್ಲಿ ಕ್ರಿಮಿನಲ್‍ಗಳು, ಭಯೋತ್ಪಾದಕರಿಗೆ ರಾಜಾಶ್ರಯ: ಸಿ.ಟಿ. ರವಿ

MLC CT Ravi: ಭಯೋತ್ಪಾದಕನ ಕೈಗೆ ಮೊಬೈಲ್ ಸಿಗುವುದಾದರೆ ದೇಶದ್ರೋಹದ ಚಟುವಟಿಕೆಗೆ ರಾಜಾಶ್ರಯ ನೀಡಿದಂತೆ ಅಲ್ಲವೇ ಎಂದ ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಕಿಡಿ ಕಾರಿದ್ದಾರೆ. ಉಮೇಶ್ ರೆಡ್ಡಿ ಎಂಬ ಅತ್ಯಾಚಾರಿ ಜೈಲಿನಲ್ಲಿ ಮೋಜು ಮಸ್ತಿ ಮಾಡಬಹುದಾದರೆ, ಜೈಲಿನಲ್ಲಿ ಕ್ರಿಮಿನಲ್‍ಗಳಿಗೆ ರಾಜಾಶ್ರಯ ಇದೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ ಎಂದು ಅವರು ಪ್ರಶ್ನಿಸಿದ್ದಾರೆ.

Mysore Silk Sarees: ಮೈಸೂರು ಸಿಲ್ಕ್‌ ಸೀರೆಗಳಿಗೆ ಹೆಚ್ಚಿದ ಬೇಡಿಕೆ; ಉತ್ಪಾದನೆ ಹೆಚ್ಚಿಸಲು ಸಿಎಂ ಸೂಚನೆ

ಮೈಸೂರು ಸಿಲ್ಕ್‌ ಸೀರೆಗಳ ಉತ್ಪಾದನೆ ಹೆಚ್ಚಿಸಲು ಸಿಎಂ ಸೂಚನೆ

ಬೇಡಿಕೆಗೆ ತಕ್ಕಂತೆ ಮೈಸೂರು ಸಿಲ್ಕ್‌ ಸೀರೆ ಸಿದ್ಧಪಡಿಸಲು ಸಮಸ್ಯೆ ಏನು? ಇದಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರ್‌ ನಾಥ್‌ ಅವರು ಗಮನಕ್ಕೆ ತಂದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಮೈಸೂರು ರೇಷ್ಮೆ ಸೀರೆ ಉತ್ಪಾದನೆ ಹೆಚ್ಚಿಸಲು ಸೂಚಿಸಿದ್ದಾರೆ.

BJP Protest: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ; ಸಿಎಂ, ಗೃಹ ಸಚಿವರ ರಾಜೀನಾಮೆಗೆ ಬಿ.ವೈ. ವಿಜಯೇಂದ್ರ ಆಗ್ರಹ

ಸಿಎಂ, ಗೃಹ ಸಚಿವರ ರಾಜೀನಾಮೆಗೆ ಬಿ.ವೈ. ವಿಜಯೇಂದ್ರ ಆಗ್ರಹ

BY Vijayendra: ಪರಪ್ಪನ ಅಗ್ರಹಾರ ಜೈಲು ಒಂದು ರೀತಿ ನೈಟ್ ಕ್ಲಬ್ ಆಗಿ, ಮನರಂಜನಾ ಕ್ಲಬ್ ಆಗಿ ಪರಿವರ್ತನೆಗೊಂಡಿದೆ. ಭಯೋತ್ಪಾದಕರು, ಐಎಸ್‍ಐ ಏಜೆಂಟರು, ಮುಸ್ಲಿಂ ಮೂಲಭೂತವಾದಿಗಳು- ಇವರೆಲ್ಲರಿಗೂ ಪರಪ್ಪನ ಅಗ್ರಹಾರ ಜೈಲು ಮನರಂಜನಾ ಕ್ಲಬ್ ಆಗಿದೆ. ಇಂಥ ದೇಶದ್ರೋಹಿಗಳಿಗೆ ಟಿವಿ, ಮೊಬೈಲ್ ಫೋನ್, ಗುಂಡು- ತುಂಡುಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಎಲ್ಲವೂ ಬಹಳ ಸರಾಗವಾಗಿ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ಸ್ಯಾನಿಟರಿ ಪ್ಯಾಡ್‍ಗಳಿಂದ ಹಿಡಿದು ಪುಸ್ತಕಗಳವರೆಗೆ; ಬೆಂಗಳೂರಿನಲ್ಲಿದೆ ಸೂಪರ್‌ಮ್ಯಾನ್ ಆಟೋ!

ಬೆಂಗಳೂರಿನಲ್ಲಿದೆ ವಿಶಿಷ್ಟ ಸೂಪರ್‌ಮ್ಯಾನ್ ಆಟೋ

Bengaluru’s Unique Auto: ಬೆಂಗಳೂರು ನಗರದ ಬೀದಿಗಳಲ್ಲಿ ಸಂಚರಿಸುವ ಈ ಸೂಪರ್‌ಮ್ಯಾನ್ ಆಟೋ ಇತರ ಆಟೋಗಳಿಂದ ಸಂಪೂರ್ಣ ವಿಭಿನ್ನವಾಗಿದೆ. ಪ್ರಯಾಣಿಕರನ್ನು ಗಮ್ಯಸ್ಥಾನಕ್ಕೆ ಕರೆದೊಯ್ಯುವುದರ ಜೊತೆಗೆ, ಈ ಆಟೋದಲ್ಲಿ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳು, ಪುಸ್ತಕಗಳು ಮತ್ತು ಅಗತ್ಯ ವಸ್ತುಗಳು ಲಭ್ಯವಿವೆ.

Mysuru KDP Meeting: ಜನರನ್ನು ಕಚೇರಿಗಳಿಗೆ ಅಲೆದಾಡಿಸಿದರೆ ಸಹಿಸಲ್ಲ: ಅಧಿಕಾರಿಗಳಿಗೆ ಸಿಎಂ ಖಡಕ್‌ ಎಚ್ಚರಿಕೆ

ಜನರನ್ನು ಕಚೇರಿಗಳಿಗೆ ಅಲೆದಾಡಿಸಿದರೆ ಸಹಿಸಲ್ಲ: ಸಿಎಂ ಖಡಕ್‌ ಎಚ್ಚರಿಕೆ

CM Siddaramaiah: ಅಧಿಕಾರಿಗಳು ಮತ್ತು ಸಿಬ್ಬಂದಿ ಜನ ಸೇವೆಯ ಪ್ರಮಾಣ ಮಾಡಿ ಹುದ್ದೆ ಸ್ವೀಕರಿಸಿದ್ದೀರಿ. ಜನರನ್ನು ಅಲೆದಾಡಿಸಬಾರದು, ನಾವು ಐದು ವರ್ಷಕ್ಕೊಮ್ಮೆ ಬರುವವರು. ಅಧಿಕಾರಿಗಳು ಶಾಶ್ವತವಾಗಿ ಇರುವವರು ಎನ್ನುವ ಭಾವನೆ ಬಿಟ್ಟು ಕೆಲಸ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

Bengaluru Central Jail: ಕೈದಿಗಳಿಗೆ ರಾಜಾತಿಥ್ಯ ಪ್ರಕರಣ: ತನಿಖೆಗೆ ಸಮಿತಿ ರಚನೆ, ಎಎಸ್ಪಿ- ಸೂಪರಿಂಟೆಂಡೆಂಟ್‌ ಅಮಾನತು

ಕೈದಿಗಳಿಗೆ ರಾಜಾತಿಥ್ಯ: ತನಿಖೆಗೆ ಸಮಿತಿ, ಎಎಸ್ಪಿ-ಸೂಪರಿಂಟೆಂಡೆಂಟ್‌ ಅಮಾನತು

G Parameshwara: ಬೆಂಗಳೂರು ಕಾರಾಗೃಹದ ಮುಖ್ಯ ಅಧೀಕ್ಷಕ ಕೆ. ಸುರೇಶ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಸೂಪರಿಂಟೆಂಡೆಂಟ್ ಇಮಾಮ್‌ಸಾಬ್ ಮೈಗೇರಿ ಮತ್ತು ಸಹಾಯಕ ಸೂಪರಿಂಟೆಂಡೆಂಟ್ ಅಶೋಕ್ ಭಜಂತ್ರಿ ಅವರನ್ನು ಅಮಾನತುಗೊಳಿಸಲಾಗಿದೆ. ಇನ್ನು ಮುಂದೆ ಪರಪ್ಪನ ಅಗ್ರಹಾರ ಜೈಲಿನ (ಬೆಂಗಳೂರು) ಉಸ್ತುವಾರಿಯನ್ನು ಐಪಿಎಸ್ ಅಧಿಕಾರಿಯೊಬ್ಬರು ವಹಿಸಿಕೊಳ್ಳಬೇಕೆಂದು ನಿರ್ಧರಿಸಲಾಗಿದೆ. ಜೈಲಿನಲ್ಲಿರುವ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಸಂಪರ್ಕಿಸುವ ಕಮಾಂಡ್ ಸೆಂಟರ್ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಘೋಷಿಸಿದರು.

Mass Namaz: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಾಮೂಹಿಕ ನಮಾಜ್‌: ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?

ಏರ್‌ಪೋರ್ಟ್‌ನಲ್ಲಿ ಸಾಮೂಹಿಕ ನಮಾಜ್‌: ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?

Priyank Kharge: ಏರ್‌ಪೋರ್ಟ್‌ಗಳಲ್ಲಿ ಪ್ರಾರ್ಥನೆಗೆ ಪ್ರತ್ಯೇಕ ಕೊಠಡಿಗಳು ಇರುತ್ತವೆ. ಎಲ್ಲ ಧರ್ಮದವರೂ ಅವರ ಆಚರಣೆಗಳಲ್ಲಿ ಅಲ್ಲಿ ಮಾಡಿಕೊಳ್ಳಲಿ. ಆದರೆ ಇಲ್ಲಿ ಸಾರ್ವಜನಿಕವಾಗಿ ನಮಾಜ್ ಮಾಡಿದ್ದಾರೆ ಎನ್ನಲಾಗಿದೆ. ಈಗ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತು ಗುಜರಾತ್‌ ಏರ್‌ಪೋರ್ಟ್‌ನಲ್ಲಿ ಗರ್ಭಾ ಡ್ಯಾನ್ಸ್‌ ಮಾಡಿದರು. ಅದು ಸರಿ ಎಂದು ಒಪ್ಪಿಕೊಳ್ತಾರಾ ಎಂದು ಖರ್ಗೆ ಪ್ರಶ್ನಿಸಿದರು.

Gold price today on 10th November 2025: ಸ್ವರ್ಣಪ್ರಿಯರಿಗೆ ಮತ್ತೆ ಆತಂಕ; ಇಂದು ಚಿನ್ನದ ದರದಲ್ಲಿ ಏರಿಕೆ

ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold and Silver price today: ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂ. ಏರಿಕೆ ಕಂಡು ಬಂದಿದ್ದು, 11,295 ರೂ. ಗೆ ತಲುಪಿದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 120 ರೂ. ಏರಿಕೆಯಾಗಿ, 12,322 ರೂ ಆಗಿದೆ.

Bengaluru central Jail: ಸೆಂಟ್ರಲ್‌ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ, ಸಿಸಿಬಿಯಿಂದ ದರ್ಶನ್‌ ಆಪ್ತ ಧನ್ವೀರ್‌ ವಿಚಾರಣೆ

ಜೈಲಿನಲ್ಲಿ ರಾಜಾತಿಥ್ಯ, ಸಿಸಿಬಿಯಿಂದ ದರ್ಶನ್‌ ಆಪ್ತ ಧನ್ವೀರ್‌ ವಿಚಾರಣೆ

Parappana Agrahara Jail: ಜೈಲಿನ ವಿಡಿಯೋ ಹೊರಗಡೆ ಬಂದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ದರ್ಶನ್ ಆಪ್ತ ಧನ್ವೀರನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಡರಾತ್ರಿ ಒಂದು ಗಂಟೆಗೆ ಮನೆಯ ಬಳಿ ಧನ್ವೀರನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಹಿನ್ನೆಲೆಯಲ್ಲಿ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

Loading...