ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Vidhana Soudha Tour: ಜೂನ್‌ 1ರಿಂದ ಸಾರ್ವಜನಿಕರಿಗೆ ತೆರೆಯಲಿರುವ ವಿಧಾನಸೌಧ; ಯಾವಾಗ, ಶುಲ್ಕ ಎಷ್ಟು?

ಜೂನ್‌ 1ರಿಂದ ಸಾರ್ವಜನಿಕರಿಗೆ ತೆರೆಯಲಿರುವ ವಿಧಾನಸೌಧ; ಶುಲ್ಕ ಎಷ್ಟು?

Vidhana Soudha Tour: ಆಸಕ್ತರು KSTDC ಆನ್ ಲೈನ್ ಮೂಲಕ ಬುಕ್ ಮಾಡಬೇಕು. 30 ಜನರನ್ನು ಒಳಗೊಂಡ ಗ್ರೂಪ್‌ನ್ನು ಪ್ರತಿ ಪ್ರವಾಸಕ್ಕೆ ನಿಗದಿ ಮಾಡಲಾಗುತ್ತದೆ. ಒಂದು ಗ್ರೂಪ್‌ಗೆ 90 ನಿಮಿಷಗಳ ಅವಧಿ ಇರಲಿದ್ದು, ಒಂದು ದಿನಕ್ಕೆ 300 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇರಲಿದೆ.

Rave Party: ರೇವ್‌ ಪಾರ್ಟಿ ಮೇಲೆ ಪೊಲೀಸ್‌ ರೈಡ್‌, 30ಕ್ಕೂ ಹೆಚ್ಚು ಮಂದಿ ವಶಕ್ಕೆ

ರೇವ್‌ ಪಾರ್ಟಿ ಮೇಲೆ ಪೊಲೀಸ್‌ ರೈಡ್‌, 30ಕ್ಕೂ ಹೆಚ್ಚು ಮಂದಿ ವಶಕ್ಕೆ

ರೇವ್ ಪಾರ್ಟಿಯಲ್ಲಿ (Rave Party) ಭಾಗವಹಿಸಿದ್ದ ಯುವಕ-ಯುವತಿಯರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಯುವಕ ಯುವತಿಯರ ವಿಚಾರಣೆ ಅಂತ್ಯದ ಬಳಿಕ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದವರನ್ನು ಪೊಲೀಸ್ ವ್ಯಾನ್‌ನಲ್ಲಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಮೆಡಿಕಲ್ ಚೆಕ್​ ಅಪ್ ಕೂಡ ಮಾಡಿಸಲಾಗಿದೆ.

Murder Case: ಹಳೆ ದ್ವೇಷ, ಚೂರಿಯಿಂದ ಇರಿದು ಯುವಕನ ಭೀಕರ ಹತ್ಯೆ

ಹಳೆ ದ್ವೇಷ, ಚೂರಿಯಿಂದ ಇರಿದು ಯುವಕನ ಭೀಕರ ಹತ್ಯೆ

ಭಾನುವಾರ ಮಧ್ಯಾಹ್ಮದ ವೇಳೆ ಹಳೆ ದ್ವೇಷದ ಹಿನ್ನೆಲೆ ಇಬ್ಬರು ಯುವಕರು ಚಾಕುವಿನಿಂದ ಇರಿದು ಕೊಲೆ (Murder Case) ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮಹ್ಮದ್ ಆರೀಫ್‌ನನ್ನು ನವೋದಯ ‌ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

Bank Robbery: ವಿಜಯಪುರದಲ್ಲಿ ಬ್ಯಾಂಕ್‌ ದರೋಡೆಗೆ ಯತ್ನ, ಬೀಗ ಮುರಿದ ಕಳ್ಳರು

ವಿಜಯಪುರದಲ್ಲಿ ಬ್ಯಾಂಕ್‌ ದರೋಡೆಗೆ ಯತ್ನ, ಬೀಗ ಮುರಿದ ಕಳ್ಳರು

Bank Robbery: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ ಈ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ಶನಿವಾರ ತಡರಾತ್ರಿ ಕಳ್ಳರು ಬ್ಯಾಂಕ್‌ನ ಮುಂಭಾಗದ ಬಾಗಿಲಿನ ಕೀಯನ್ನು ಮುರಿದು ಒಳನುಗ್ಗಿರುವ ಘಟನೆ ಭಾನುವಾರ ಗೊತ್ತಾಗಿದೆ.

SSLC Exam 2: ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2: ಈ ನಿಯಮಗಳ ಪಾಲನೆ ಕಡ್ಡಾಯ

ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2: ಈ ನಿಯಮಗಳ ಪಾಲನೆ ಕಡ್ಡಾಯ

SSLC Exam 2: ಗುರುತಿನ ಚೀಟಿ ಹಾಗೂ ಹಾಲ್ ಟಿಕೆಟ್ ಕಡ್ಡಾಯವಾಗಿದೆ. ಮೊಬೈಲ್ ಫೋನ್ , ಎಲೆಕ್ಟ್ರಿಕಲ್ ಉಪಕರಣಗಳ ಬಳಕೆ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್ ಪೇಜರ್, ಝರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ.

Corona Virus: ರಾಜ್ಯದಲ್ಲಿ ಕೊರೊನಾಗೆ ಇನ್ನೊಬ್ಬ ಬಲಿ,  ಪ್ರಕರಣ 98ಕ್ಕೆ ಏರಿಕೆ

ರಾಜ್ಯದಲ್ಲಿ ಕೊರೊನಾಗೆ ಇನ್ನೊಬ್ಬ ಬಲಿ, ಪ್ರಕರಣ 98ಕ್ಕೆ ಏರಿಕೆ

ಆರೋಗ್ಯ ಇಲಾಖೆ ಕಳೆದ 24 ಗಂಟೆಯಲ್ಲಿ 104 ಮಂದಿಯನ್ನು ಕರೋನಾ ಪರೀಕ್ಷೆಗೆ ಒಳಪಡಿಸಿದ್ದು, 9 ಹೊಸ ಪ್ರಕರಣ ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.8.65 ನಷ್ಟಿದೆ. ಕೇರಳ ಮತ್ತು ಆಂಧ್ರಪ್ರದೇಶದಲ್ಲೂ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿವೆ. ರಾಜ್ಯದಲ್ಲಿ ಯಾವುದೇ ಹೊಸ ರೂಪಾಂತರಿ ವೈರಸ್ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

Karnataka Weather: ರೆಡ್‌ ಅಲರ್ಟ್; ಇಂದು ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಮಳೆ

ಇಂದು ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಮಳೆ

Karnataka Weather: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27°C ಮತ್ತು 21°C ಇರುವ ಸಾಧ್ಯತೆ ಇದೆ.

Jan Aushadhi Kendra: ಜನೌಷಧಿ ಕೇಂದ್ರಗಳ ಸ್ಥಗಿತ ಮೆಡಿಕಲ್ ಮಾಫಿಯಾದ ಕೈವಾಡ: ಛಲವಾದಿ ನಾರಾಯಣಸ್ವಾಮಿ

ಜನೌಷಧಿ ಕೇಂದ್ರಗಳ ಸ್ಥಗಿತ ಮೆಡಿಕಲ್ ಮಾಫಿಯಾದ ಕೈವಾಡ: ಛಲವಾದಿ ನಾರಾಯಣಸ್ವಾಮಿ

Jan Aushadhi Kendra: ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ನೀತಿ ಆಯೋಗದ ಸಭೆಗೆ ಹೋಗಿರುವಾಗ ಇವರು ಮಾತ್ರ ಸಭೆಯಿಂದ ಹೊರಗೆ ಇರುವುದು ಸರಿಯಲ್ಲ. ಮೇಲಾಗಿ ಇಂತಹ ಸಭೆಗೆ ಯಾರನ್ನೋ ಕಳಿಸಿದರೆ ಅನ್ಯಾಯ ಆಗದೆ ಏನಾಗುತ್ತದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

Corona Cases: ರಾಜ್ಯದಲ್ಲಿಂದು  9 ಮಂದಿಗೆ ಕರೋನಾ ಪಾಸಿಟಿವ್;‌ ಸಕ್ರಿಯ ಪ್ರಕರಣಗಳ ಸಂಖ್ಯೆ 47ಕ್ಕೆ ಏರಿಕೆ

ರಾಜ್ಯದಲ್ಲಿಂದು 9 ಮಂದಿಗೆ ಕರೋನಾ ಪಾಸಿಟಿವ್

Corona Cases: ರಾಜ್ಯದಲ್ಲಿ ಭಾನುವಾರ 104 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆ ಪೈಕಿ 9 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಒಟ್ಟು 47 ಸಕ್ರಿಯ ಪ್ರಕರಣಗಳಿದ್ದು, 46 ಮಂದಿ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Bengaluru News: ಎಂ.ಕೆ.ಪಿ.ಎಂ – ಆರ್.ವಿ.ಐ.ಎಲ್.ಎಸ್ ನಿಂದ ಪದವಿ ದಿನ

ಎಂ.ಕೆ.ಪಿ.ಎಂ – ಆರ್.ವಿ.ಐ.ಎಲ್.ಎಸ್ ನಿಂದ ಪದವಿ ದಿನ

ಎಂ.ಕೆ.ಪಿ.ಎಂ – ಆರ್.ವಿ.ಐ. ಎಲ್.ಎಸ್ ನಿಂದ ಆಯೋಜಿಸಲಾಗಿದ್ದ ಪದವಿ ದಿನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಲೇಜು ಜೀವನ “ಸುವರ್ಣಯುಗ”ವಾಗಿದೆ. ಕಾನೂನು ಪದವೀಧರರಿಗೆ ಅನೇಕ ಅವಕಾಶಗಳಿವೆ. ವಿದ್ಯಾರ್ಥಿ ಜೀವನದಲ್ಲಿ ಕಾಲೇಜು ನಿರ್ಣಾಯಕ ಪಾತ್ರ ವಹಿಸುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮ ಗಳು, ಚರ್ಚಾ ಸ್ಪರ್ಧೆಗಳು ಅತ್ಯಂತ ಮಹತ್ವದ್ದಾಗಿವೆ.

ನ್ಯಾಯಮೂರ್ತಿ ಪಿ ಬಿ ಬಜಂತ್ರಿ ಅವರಿಗೆ ತಪ್ಪಿದ ಮಣಿಪುರ ಮುಖ್ಯನ್ಯಾಯಮೂರ್ತಿ ಹುದ್ದೆ: ಅಖಿಲ ಕರ್ನಾಟಕ ಕುಳುವ ಮಹಾಸಂಘ, ಬೆಂಗಳೂರು ಅಸಮಾಧಾನ

ತಪ್ಪಿದ ಮಣಿಪುರ ಮುಖ್ಯನ್ಯಾಯಮೂರ್ತಿ ಹುದ್ದೆ

ನ್ಯಾ. ಪಿ. ಬಿ. ಬಜಂತ್ರಿ. ಕರ್ನಾಟಕ ರಾಜ್ಯದ "ಕೊರಮ" ಪರಿಶಿಷ್ಟ ಜಾತಿಯ ಅತೀ ಸೂಕ್ಷ್ಮ ಅಲೆಮಾರಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರು. ಭಾರತ ಸ್ವತಂತ್ರ ಪಡೆದು 78 ವರ್ಷಗಳ ಅವಧಿ ಯಲ್ಲಿ ಅತೀ ಸೂಕ್ಷ್ಮ ಅಲೆಮಾರಿ ಕೊರಮ ಜನಾಂಗದ ಪರಿಶಿಷ್ಟ ಜಾತಿಯ ನ್ಯಾಯಾದೀಶ್ ರಾದ ಪಿ ಬಿ ಭಜಂತ್ರಿ ರವರು 2015 ರ ಜನವರಿ 2 ರಂದು ಕರ್ನಾಟಕದ ಹೈಕೋರ್ಟ್‌ನ ನ್ಯಾಯಾಧೀಶರ ಹುದ್ದೆಗೆ ನೇಮಕಾತಿ ಆದ ರಾಜ್ಯದ ಏಕೈಕ ನ್ಯಾಯಾಧೀಶರಾಗಿದ್ದಾರೆ

Chikkanayakanahalli (Tumkur) News: ದೇವಾಲಯದ ಸನ್ನಿಧಿಯಲ್ಲೇ ವಾಮಾಚಾರ, ಭ್ರಷ್ಟಾಚಾರದ ಜಾಲ !

ದೇವಾಲಯದ ಸನ್ನಿಧಿಯಲ್ಲೇ ವಾಮಾಚಾರ, ಭ್ರಷ್ಟಾಚಾರದ ಜಾಲ !

ಶಕ್ತಿ ಸ್ವರೂಪಿಣಿ ಎಂದು ನಂಬಲಾಗಿರುವ ಅಮ್ಮನವರ ಸನ್ನಿಧಿಗೆ ಬರುವ ಭಕ್ತರು ದೇವಿಗೆ ಸೀರೆ, ಮಡಿಲಕ್ಕಿ, ಚಿನ್ನ, ಬೆಳ್ಳಿ ಆಭರಣ ಸೇರಿದಂತೆ ಹಣವನ್ನು ಕಾಣಿಕೆಯಾಗಿ ಸಮರ್ಪಣೆ ಮಾಡುತ್ತಾರೆ. ಆದರೆ ಇಲ್ಲಿನ ಅರ್ಚಕರು ಇದನ್ನು ದಂಧೆ ಮಾಡಿ ಕೊಂಡು, ಭಕ್ತರು ನೀಡುವ ಕಾಣಿಕೆ ಹಣವನ್ನು ದೇವರ ಹುಂಡಿಗೆ ಹಾಕಿಸದೆ ತಮ್ಮ ತಟ್ಟೆಗೆ ಹಾಕಿಸಿಕೊಂಡು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ.

Karnataka Weather: ಮುಂದಿನ 2 ದಿನ ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ; ರೆಡ್‌ ಅಲರ್ಟ್ ಘೋಷಣೆ

ಮುಂದಿನ 2 ದಿನ ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ ಸಾಧ್ಯತೆ

Karnataka Weather: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27°C ಮತ್ತು 21°C ಇರುವ ಸಾಧ್ಯತೆ ಇದೆ.

Bamul Election: ಬಮುಲ್‌ ಚುನಾವಣೆ ವೇಳೆ ಹೈಡ್ರಾಮಾ; ಡಿ.ಕೆ.ಸುರೇಶ್‌ ಎದುರೇ ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ

ಬೆಂಗಳೂರಲ್ಲಿ ಬಮುಲ್‌ ಚುನಾವಣೆ ವೇಳೆ ಹೈಡ್ರಾಮಾ

Bamul Election: ಬಮುಲ್‌ನ 14 ನಿರ್ದೇಶಕ ಸ್ಥಾನಗಳ ಪೈಕಿ ಮೂವರು ಅವಿರೋಧ ಆಯ್ಕೆಯಾಗಿದ್ದು, ಇನ್ನುಳಿದ 11 ನಿರ್ದೇಶಕ ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದೆ. ಚುನಾವಣೆ ನಡೆಯುತ್ತಿದ್ದ ಸ್ಥಳಕ್ಕೆ ಡಿ.ಕೆ.ಸುರೇಶ್‌ ಬರುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.

Ashwini puneeth: ರಾಜಾಜಿನಗರದಲ್ಲಿ ಜೂನಿಯರ್ ಟೋಸ್ ಶುಭಾರಂಭ; ಅಶ್ವಿನಿ ಪುನೀತ್ ಕನಸಿಗೆ ಶಾಸಕ ಗೋಪಾಲಯ್ಯ-ಅನುಶ್ರೀ ಸಾಥ್

ಪುನೀತ್ ಕನಸು ನನಸು: ಜೂನಿಯರ್ ಟೋಸ್ ಪ್ರಿಸ್ಕೂಲ್ ಶುಭಾರಂಭ

ಜೂನಿಯರ್ ಟೋಸ್ ಇಂಟರ್‌ನ್ಯಾಷನಲ್‌ ಪ್ರಿಸ್ಕೂಲ್ ಬೆಂಗಳೂರಿನ ರಾಜಾಜಿನಗರದಲ್ಲಿ ಶುಭಾರಂಭಗೊಂಡಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಈ ಶಿಕ್ಷಣದ ಕನಸಿಗೆ ಆ್ಯಂಕರ್ ಅನುಶ್ರೀ ಹಾಗೂ ಶಾಸಕ ಗೋಪಾಲಯ್ಯ ಸಾಥ್ ಕೊಟ್ಟಿದ್ದಾರೆ. ಅಶ್ವಿನಿ ಅವರ ಜತೆ ನಾಯಕತ್ವ ತರಬೇತಿದಾರರು ಮತ್ತು ಪ್ರೇರಕ ಭಾಷಣಕಾರ್ತಿ ಸ್ಫೂರ್ತಿ ವಿಶ್ವಾಸ್, ಸುನೀತಾ ಗೌಡ ಮತ್ತು ಶ್ರುತಿ ಕಿರಣ್‌ ಕೈಜೋಡಿಸಿದ್ದಾರೆ.

My Hero Movie: ಮೇ 30 ರಿಂದ ಅಮೇಜಾನ್ ಪ್ರೈಮ್‌ನಲ್ಲಿ ʼಮೈ ಹೀರೋʼ ಪ್ರದರ್ಶನ

ಮೇ 30 ರಿಂದ ಅಮೇಜಾನ್ ಪ್ರೈಮ್‌ನಲ್ಲಿ ʼಮೈ ಹೀರೋʼ ಪ್ರದರ್ಶನ

My Hero Movie: ಅವಿನಾಶ್ ವಿಜಯಕುಮಾರ್ ನಿರ್ಮಿಸಿ, ನಿರ್ದೇಶಿಸಿರುವ ಮೈ ಹೀರೋ ಚಿತ್ರದಲ್ಲಿ ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಗಗನ್ ಬಡೇರಿಯಾ ಸಂಗೀತ ನಿರ್ದೇಶನ ಹಾಗೂ ವೀನಸ್ ನಾಗರಾಜ್ ಅವರ ಛಾಯಾಗ್ರಹಣ "ಮೈ ಹೀರೊ" ಚಿತ್ರಕ್ಕಿದೆ.

Suspension of BJP MLAs: ಬಿಜೆಪಿಯ 18 ಶಾಸಕರ ಅಮಾನತು ಆದೇಶ ವಾಪಸ್‌

ಬಿಜೆಪಿಯ 18 ಶಾಸಕರ ಅಮಾನತು ಆದೇಶ ವಾಪಸ್‌

Suspension of BJP MLAs: ಮಾರ್ಚ್‌ 21ರಂದು ವಿಧಾನಸಭೆಯಲ್ಲಿ ಸ್ಪೀಕರ್ ಹುದ್ದೆಗೆ ಅಗೌರವ ತೋರಿದ ಹಿನ್ನೆಲೆಯಲ್ಲಿ 18 ಬಿಜೆಪಿ ಶಾಸಕರನ್ನು 6 ತಿಂಗಳ ಕಾಲ ಸ್ಪೀಕರ್ ಯು.ಟಿ. ಖಾದರ್ ಅವರು ಅಮಾನತು ಮಾಡಿದ್ದರು. ಇದೀಗ ಸ್ಪೀಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಮಾನತು ಆದೇಶ ಹಿಂಪಡೆಯಲು ನಿರ್ಧರಿಸಲಾಗಿದೆ.

Karnataka Rains: ಶಿರಾಡಿ ಘಾಟ್‌ನಲ್ಲಿ ಭೂ ಕುಸಿತ, ಸಂಚಾರಕ್ಕೆ ಅಡಚಣೆ; ಸಕಲೇಶಪುರದಲ್ಲಿ ಹೋಟೆಲ್ ಗೋಡೆ ಬಿದ್ದು ನಾಲ್ವರಿಗೆ ಗಾಯ

ಶಿರಾಡಿ ಘಾಟ್‌ನಲ್ಲಿ ಭೂ ಕುಸಿತ; ಸಂಚಾರಕ್ಕೆ ಅಡಚಣೆ

Karnataka Rains:: ಕರ್ನಾಟಕದ ಕರಾವಳಿ ಸೇರಿ ಹಲವು ಜಿಲ್ಲೆಗಳಲ್ಲಿ ಇನ್ನೊಂದು ವಾರ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಮೇ ಅಂತ್ಯದವರೆಗೆ ಕರ್ನಾಟಕದಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ.

Vidhana Soudha Guided Tour: ವಿಧಾನಸೌಧ ಗೈಡೆಡ್ ಟೂರ್‌ಗೆ ಚಾಲನೆ; ಜೂನ್ 1 ರಿಂದ ಪ್ರವೇಶ, ಶುಲ್ಕ ಎಷ್ಟು?

ವಿಧಾನಸೌಧ ಗೈಡೆಡ್ ಟೂರ್‌ಗೆ ಚಾಲನೆ; ಜೂನ್ 1 ರಿಂದ ಪ್ರವೇಶ, ಶುಲ್ಕ ಎಷ್ಟು?

Vidhana Soudha Guided Tour: ಜೂನ್ 1ರಿಂದ ವಿಧಾನಸೌಧ ಟೂರ್ ಗೈಡ್ ಪ್ರಾರಂಭವಾಗಲಿದೆ. 15 ವರ್ಷ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ವಯಸ್ಕರಿಗೆ ಪ್ರವೇಶ ಶುಲ್ಕ ಇರಲಿದೆ. ಒಂದು ದಿನಕ್ಕೆ 300 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇರಲಿದೆ.

Revoking Suspension: ಬಿಜೆಪಿಯ 18 ಶಾಸಕರ ಅಮಾನತು ಆದೇಶ ಹಿಂಪಡೆಯಲು ಚಿಂತನೆ : ಸ್ಪೀಕರ್ ಯು.ಟಿ.ಖಾದರ್

ಬಿಜೆಪಿಯ 18 ಶಾಸಕರ ಅಮಾನತು ಆದೇಶ ಹಿಂಪಡೆಯಲು ಸ್ಪೀಕರ್ ಚಿಂತನೆ

Revoking Suspension: ಬಿಜೆಪಿಯ 18 ಶಾಸಕರ ಅಮಾನತು ಆದೇಶ ಹಿಂಪಡೆಯುವ ಬಗ್ಗೆ ಸಿಎಂ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ.ಪಾಟೀಲ್, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಇತರರ ಜತೆ ಇಂದು (ಭಾನುವಾರ) ಸಂಜೆ ಚರ್ಚೆ ನಡೆಸಲಾಗುವುದು ಎಂದು ಸ್ಪೀಕರ್‌ ಯು.ಟಿ.ಖಾದರ್ ತಿಳಿಸಿದ್ದಾರೆ.

Covid-19 Test: ರಾಜ್ಯದಲ್ಲಿ ಕೋವಿಡ್‌ ಪರೀಕ್ಷೆ ಹೆಚ್ಚಿಸಲು ಆರೋಗ್ಯ ಇಲಾಖೆ ಸೂಚನೆ

ಕೋವಿಡ್‌ ಪರೀಕ್ಷೆ ಹೆಚ್ಚಿಸಲು ಆರೋಗ್ಯ ಇಲಾಖೆ ಸೂಚನೆ

Covid-19 Test: ಕೋವಿಡ್‌ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಈಗಾಗಲೇ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರಿನಲ್ಲಿ ನೆನ್ನೆ ಸೋಂಕಿನಿಂದ ವೃದ್ಧರೊಬ್ಬರು ಸಾವನ್ನಪ್ಪಿದ್ದರು. ಅಲ್ಲದೇ ಬೆಂಗಳೂರಿನಲ್ಲಿ ಮತ್ತೆ ಎರಡು ಕರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

Madenuru Manu: ದರ್ಶನ್‌ ಸತ್ತೋದ, ಶಿವಣ್ಣ ಇನ್ನೊಂದು 6 ವರ್ಷ; ನಾಲಿಗೆ ಹರಿಬಿಟ್ಟ ಮಡೆನೂರು ಮನು, ಆಡಿಯೋ ವೈರಲ್‌!

ದರ್ಶನ್‌ ಸತ್ತೋದ, ಶಿವಣ್ಣ ಇನ್ನೊಂದು 6 ವರ್ಷ; ಮಡೆನೂರು ಮನು ಆಡಿಯೋ ವೈರಲ್‌!

Madenuru Manu: ನಟ ಮಡೆನೂರು ಮನು ಕನ್ನಡದ ಪ್ರಮುಖ ನಟರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಇದಕ್ಕೆ ನಟರ ಅಭಿಮಾನಿಗಳು ಗರಂ ಆಗಿದ್ದಾರೆ. ಇದನ್ನು ನಾವು ಸಹಿಸಲ್ಲ, ಇನ್ನು ಮುಂದೆ ಮಡೆನೂರು ಮನುಗೆ ಯಾವುದೇ ಶೋಗಳಲ್ಲಿ ಅವಕಾಶ ಕೊಡಬಾರದು. ಈ ಬಗ್ಗೆ ದೊಡ್ಡಮಟ್ಟದಲ್ಲಿ ಹೋರಾಟ ಮಾಡ್ತೀವಿ ಎಂದು ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.

Physical Abuse Case: ಜಾಮೀನು ಸಿಗುತ್ತಿದ್ದಂತೆ  ಮೆರವಣಿಗೆ , ರೋಡ್‌ ಶೋ....... ಗ್ಯಾಂಗ್ ರೇಪ್ ಆರೋಪಿಗಳು ಮತ್ತೆ ಅಂದರ್

ಜಾಮೀನು ಸಿಗುತ್ತಿದ್ದಂತೆ ರೋಡ್‌ ಶೋ;ಗ್ಯಾಂಗ್ ರೇಪ್ ಆರೋಪಿಗಳು ಮತ್ತೆ ಅಂದರ್

ಕಳೆದ ವರ್ಷ ಹಾವೇರಿಯ (Haveri) ಹಾನಗಲ್‌ನಲ್ಲಿ ಮಹಿಳೆಯ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಸಿಕ್ಕ ಬಳಿಕ ಜೈಲಿನಿಂದ ಬಿಡುಗಡೆಯಾಗಿ ಕಾರುಗಳಲ್ಲಿ ರೋಡ್ ಶೋ ಮಾಡಿ ವಿಜಯೋತ್ಸವ ಮಾಡಿದ್ದ ಏಳು ಆರೋಪಿಗಳನ್ನು ಪೊಲೀಸರು ಮತ್ತೆ ಜೈಲಿಗಟ್ಟಿದ್ದಾರೆ.

Gold Rate Today: ಚಿನ್ನದ ದರದಲ್ಲಿ ಯಥಾಸ್ಥಿತಿ- ಇಂದಿನ ರೇಟ್‌ ಚೆಕ್‌  ಮಾಡಿ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today on 25th May 2025: ನಿನ್ನೆ ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 50 ರೂ. ಏರಿಕೆ ಕಂಡಿದ್ದು, 8,990 ರೂ.ಗೆ ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 55 ರೂ. ಏರಿಕೆಯಾಗಿ 9,808 ರೂ.ಗೆ ಬಂದು ನಿಂತಿತ್ತು. 22 ಕ್ಯಾರಟ್‌ನ 8 ಗ್ರಾಂ ಚಿನ್ನ 71,920 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 89,900 ರೂ. ಮತ್ತು 100 ಗ್ರಾಂಗೆ 9,99,000 ರೂ. ನೀಡಬೇಕಾಗುತ್ತದೆ.