ಭಾರತದ ಕ್ವಾಂಟಮ್ ಪ್ರಗತಿಗೆ ಮಾಹೆ ಕೊಡುಗೆ: ಕ್ವಾಂಟಮ್-ಹಬ್@ಮಾಹೆ ಸ್ಥಾಪನೆ
ವಿನ್ಯಾಸದಿಂದ ಅನುಷ್ಠಾನದ ತನಕ ಎಲ್ಲವನ್ನೂ ಒಳಗೊಂಡ ವೇದಿಕೆಯಾಗಿರುವ ಕ್ಯು-ಹಬ್@ಮಾಹೆ, ಕ್ವಾಂಟಮ್ ಹಾರ್ಡ್‌ವೇರ್ ಪ್ರಯೋಗಗಳು, ಡೀಪ್ ಟೆಕ್ ಸ್ಟಾರ್ಟಪ್ ಇಂಕ್ಯು ಬೇಶನ್, ಮಾನವ ಸಂಪನ್ಮೂಲ ಅಭಿವೃದ್ಧಿ, ಪರೀಕ್ಷಾ ಮೂಲಸೌಕರ್ಯ, ಮತ್ತು ಏಕೀಕೃತ ಶೈಕ್ಷಣಿಕ ವ್ಯವಸ್ಥೆಯಡಿ ಸಂಶೋಧನೆಗಳನ್ನು ಒಳಗೊಂಡಿದೆ. ಈ ಕ್ರಮ ಭಾರತದ ಕ್ವಾಂಟಮ್ ತಂತ್ರಜ್ಞಾನ ಮೌಲ್ಯ ವ್ಯವಸ್ಥೆಯ ಎಲ್ಲ ಹಂತಗಳಲ್ಲೂ ಭಾರತವನ್ನು ಸಂಪೂರ್ಣವಾಗಿ ಸ್ವಾವಲಂಬಿಯಾಗಿಸುವ ಗುರಿ ಹೊಂದಿದೆ.