ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿಗೆ ರಿಲೀಫ್‌; ಜಾಮೀನು ಮಂಜೂರು

ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿಗೆ ಜಾಮೀನು ಮಂಜೂರು

MLA Dr. Chandru Lamani: ಗುತ್ತಿಗೆದಾರನಿಂದ 5 ಲಕ್ಷ ರುಪಾಯಿ ಲಂಚ‌ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದು ಬಂಧನಕ್ಕೊಳಗಾಗಿದ್ದ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ‌ ಡಾ. ಚಂದ್ರು ಲಮಾಣಿ ಅವರಿಗೆ ಜಾಮೀನು ಮಂಜೂರಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರದಿಂದ ಅಗತ್ಯ ಕ್ರಮ ಎಂದ ವಿಜಯೇಂದ್ರ

ಸಿಲಿಂಡರ್ ಪೂರೈಕೆಗೆ ಕೇಂದ್ರದಿಂದ ಅಗತ್ಯ ಕ್ರಮ: ವಿಜಯೇಂದ್ರ

BY Vijayendra: ಅಡುಗೆ ಅನಿಲ ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ದಿಢೀರ್ ಯುದ್ಧದ ಪರಿಣಾಮ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಯಾವುದೇ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರಕ್ಕೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಶಿಕ್ಷಕಿಯ ನಿರ್ಲಕ್ಷ್ಯ; ಅಂಗನವಾಡಿ ಬಳಿ ಆಡುತ್ತಿದ್ದ ಮಗುವಿನ ಮರ್ಮಾಂಗಕ್ಕೆ ಗಾಯ

ಅಂಗನವಾಡಿ ಬಳಿ ಆಡುತ್ತಿದ್ದ ಮಗುವಿನ ಮರ್ಮಾಂಗಕ್ಕೆ ಗಾಯ

Chikkamagaluru News: ಚಿಕ್ಕಮಗಳೂರು ನಗರದ ಗೌರಿ ಕಾಲುವೆ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಘೋರ ನಡೆದಿದ್ದು, ಆಟವಾಡುತ್ತಿದ್ದ ವೇಳೆ ಮಗುವಿಗೆ ಕಬ್ಬಿಣದ ಜಾಲರಿ ತಂತಿ ತಗುಲಿ ಮರ್ಮಾಂಗಕ್ಕೆ ಗಾಯವಾಗಿದೆ. ಶಿಕ್ಷಕಿ ನಿರ್ಲಕ್ಷ್ಯ ತೋರಿದ್ದರಿಂದಲೇ ಈ ಘಟನೆ ನಡೆದಿದೆ ಎಂದು ಪೋಷಕರು ದೂರಿದ್ದಾರೆ.

Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

Laxmi Hebbalkar: ಬೆಂಗಳೂರಿನಲ್ಲಿರುವ ಆಸ್ಟ್ರೇಲಿಯನ್ ಕೌನ್ಸುಲೇಟ್ ಜನರಲ್‌ ಕಚೇರಿಯ ಕೌನ್ಸಿಲ್‌ ಜನರಲ್ ಹಿಲರಿ ಮ್ಯಾಕ್ ಗೀಚಿ ಮತ್ತು ಉಪ ಕೌನ್ಸಿಲ್‌ ಹ್ಯಾರೀಟ್ ಅವರನ್ನೊಳಗೊಂಡ ನಿಯೋಗ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ‌ ಮಾತುಕತೆ ನಡೆಸಿತು.

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಸಚಿವ ಎಂ.ಬಿ. ಪಾಟೀಲ್‌ ಆಗ್ರಹ

ತಮಿಳುನಾಡಿಗೆ ಬೆಣ್ಣೆ, ನಮಗೆ ಸುಣ್ಣ: ಎಂ.ಬಿ. ಪಾಟೀಲ್‌ ಗುಡುಗು

MB Patil: ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳ ಪೈಕಿ ಒಂದನ್ನಾದರೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸಬೇಕು. ಎರಡನ್ನೂ ಉನ್ನತೀಕರಿಸಿದರೆ ಅದು ಇನ್ನೂ ಸ್ವಾಗತಾರ್ಹ. ರಾಜ್ಯದ ಅಗತ್ಯವನ್ನು ಕೇಂದ್ರ ಮನಗಾಣಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.

ಇನ್ನೆರಡು ತಿಂಗಳಲ್ಲಿ ಉದ್ಯೋಗಿನಿ‌ ಯೋಜನೆಯ ಸಹಾಯ ಧನ ಬಿಡುಗಡೆ; ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಘೋಷಣೆ

ಇನ್ನೆರಡು ತಿಂಗಳಲ್ಲಿ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಲಕ್ಷ್ಮಿ ಹೆಬ್ಬಾಳ್ಕರ್

Laxmi Hebbalkar: ಉದ್ಯೋಗಿ‌ನಿ ಯೋಜನೆಯ ಸಹಾಯಧನ ತಲುಪಲು ಬ್ಯಾಂಕ್‌ಗಳು ಕೂಡ ಸರಿಯಾಗಿ ಸಹಕರಿಸುತ್ತಿಲ್ಲ. ಶಾಸಕರು ಆಯ್ಕೆ ಮಾಡಿದ ಫಲಾನುಭವಿಗಳಲ್ಲಿ ಸಿಬಿಲ್‌ ಸ್ಕೋರ್‌ ಆಧಾರದ ಮೇಲೆ ಬ್ಯಾಂಕ್‌ಗಳೂ ಫಲಾನುಭವಿಗಳನ್ನು ಆಯ್ಕೆ ಮಾಡಲು ವಿಳಂಬ ಮಾಡುತ್ತಿವೆ.‌ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಬ್ಯಾಂಕ್ಸ್ ಕಮಿಟಿಯಲ್ಲಿ ಈ ಸಂಬಂಧ ಸಾಲ ಮಂಜೂರಾತಿಯನ್ನು ತುರ್ತಾಗಿ ಮಾಡುವಂತೆ ತಿಳಿಸಿದ್ದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ರೈತರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದಿಂದ ಪಿಎಂ ಕುಸುಮ್ 2.0 ಯೋಜನೆ

ರೈತರಿಗೆ ಕೇಂದ್ರದಿಂದ ಗುಡ್‌ನ್ಯೂಸ್‌; ಕುಸುಮ್ 2.0 ಯೋಜನೆಗೆ ಸಿದ್ಧತೆ

Pralhad Joshi: PM ಕುಸುಮ್ 2.0 ಯೋಜನೆ ಗ್ರಾಮೀಣ ಭಾರತದಲ್ಲಿ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೊಸ ಮಾದರಿ ಸೃಷ್ಟಿಸುತ್ತದೆ. ಈ ಮೂಲಕ ಗ್ರಾಮೀಣ ಆರ್ಥಿಕತೆ ಉತ್ತೇಜನ ಮತ್ತು ರೈತರ ಆದಾಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್‌; 90 ದಿನಗಳೊಳಗೆ ಅಂಗನವಾಡಿ ಖಾಲಿ ಹುದ್ದೆ ಭರ್ತಿಗೆ ಕ್ರಮ ಎಂದ ಲಕ್ಷ್ಮಿ ಹೆಬ್ಬಾಳ್ಕರ್‌

90 ದಿನಗಳೊಳಗೆ ಅಂಗನವಾಡಿ ಖಾಲಿ ಹುದ್ದೆ ಭರ್ತಿಗೆ ಕ್ರಮ: ಹೆಬ್ಬಾಳ್ಕರ್‌

Laxmi Hebbalkar: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್‌ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಆಯ್ಕೆ ಸಮಿತಿ ಮೂಲಕ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.

Sharavathi Pumped Storage Project: ಶರಾವತಿ ಪಂಪ್ ಸ್ಟೋರೇಜ್‌ ಯೋಜನೆಗೆ ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ

ಶರಾವತಿ ಪಂಪ್ ಸ್ಟೋರೇಜ್‌ ಯೋಜನೆಗೆ ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ

ಶರಾವತಿ ಪಂಪ್ ಸ್ಟೋರೇಜ್‌ (Sharavathi Pumped Storage) ಜಲವಿದ್ಯುತ್‌ ಯೋಜನೆಯ ಕಾಮಗಾರಿಯನ್ನು ಅರಣ್ಯ ಪ್ರದೇಶದಲ್ಲಿ ಕೈಗೊಳ್ಳುವುದಕ್ಕೆ ಕರ್ನಾಟಕ ಹೈಕೋರ್ಟ್‌ (karnataka high court) ಮಂಗಳವಾರ ಮಧ್ಯಂತರ ತಡೆಯಾಜ್ಞೆ (interin stay) ನೀಡಿದೆ. ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಇನ್ನೂ ಸಿಕ್ಕಿಲ್ಲ.

ಪೊಲೀಸ್‌ ಇನ್‌ಸ್ಪೆಕ್ಟರ್‌ ವೇಷದಲ್ಲಿ ಬಂದು ನಗ- ನಗದು ದೋಚಿದವರು ಆರೆಸ್ಟ್‌

ಪೊಲೀಸ್‌ ಇನ್‌ಸ್ಪೆಕ್ಟರ್‌ ವೇಷದಲ್ಲಿ ಬಂದು ನಗ- ನಗದು ದೋಚಿದವರು ಆರೆಸ್ಟ್‌

ಪೆರೋಲ್ ಮೇಲೆ ಹೊರಬಂದಿದ್ದ ಕುಖ್ಯಾತ ಆರೋಪಿ ನಾಗೇಂದ್ರ ಎಂಬಾತ ಪಿಎಸ್‌ಐ ಸಮವಸ್ತ್ರ ಧರಿಸಿ ಅಧಿಕಾರಿಯಂತೆ ಮನೆಗೆ ನುಗ್ಗಿದ್ದ. ಮನೆಯವರ ಕೈಕಾಲುಗಳಿಗೆ ಟೇಪ್ ಸುತ್ತಿ, ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ ಜೀವ ಬೆದರಿಕೆ ಹಾಕಿದ್ದ ಈ ಗ್ಯಾಂಗ್, ಒಟ್ಟು 20 ಲಕ್ಷ ರೂಪಾಯಿ ನಗದು ಮತ್ತು 677 ಗ್ರಾಂ ಚಿನ್ನವನ್ನು ದೋಚಿ ಪರಾರಿಯಾಗಿತ್ತು.

Voters List: ಬೆಂಗಳೂರಿನ ಮತದಾರರ ಪಟ್ಟಿ ಪ್ರಕಟ: ನಿಮ್ಮ ಹೆಸರು, ವಾರ್ಡ್‌ ಹುಡುಕಿ, ಆಕ್ಷೇಪ ಸಲ್ಲಿಕೆಗೆ ಮಾ.16ರವರೆಗೆ ಅವಕಾಶ

ಬೆಂಗಳೂರಿನ ಮತದಾರರ ಪಟ್ಟಿ ಪ್ರಕಟ: ಆಕ್ಷೇಪ ಸಲ್ಲಿಕೆಗೆ ಮಾ.16ರವರೆಗೆ ಅವಕಾಶ

ಮತದಾರರು ತಮ್ಮ ಹೆಸರು ಅಥವಾ ಮತದಾರರ ಚೀಟಿಯ ಎಪಿಕ್‌ ಸಂಖ್ಯೆಯೊಂದಿಗೆ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಬಹುದು. ಹೆಸರು ಬಿಟ್ಟು ಹೋಗಿದ್ದರೆ, ಸೇರ್ಪಡೆ ಆಗಿರದೇ ಇದ್ದರೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಲೋಪದೋಷಗಳಾಗಿದ್ದರೆ, ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲವಾದರೆ, ಮತ್ತೊಂದು ವಾರ್ಡ್‌ ವ್ಯಾಪ್ತಿಯಲ್ಲಿ ಹೆಸರು ಪ್ರಕಟವಾಗಿದ್ದರೆ, ಮಾರ್ಚ್ 16ರೊಳಗೆ ಆಕ್ಷೇಪಣೆ ಸಲ್ಲಿಸಬೇಕು.

LPG Crisis: ಗ್ಯಾಸ್‌ ಸಿಲಿಂಡರ್‌ ಅಲಭ್ಯ, ಬನಶಂಕರಿ ದೇವಾಲಯದಲ್ಲಿ ಅನ್ನ ಪ್ರಸಾದ ಬಂದ್‌

ಗ್ಯಾಸ್‌ ಸಿಲಿಂಡರ್‌ ಅಲಭ್ಯ, ಬನಶಂಕರಿ ದೇವಾಲಯದಲ್ಲಿ ಅನ್ನ ಪ್ರಸಾದ ಬಂದ್‌

ಬನಶಂಕರಿ ದೇವಸ್ಥಾನದಲ್ಲಿ ಪ್ರತಿದಿನ ಸಾವಿರಾರು ಜನರಿಗೆ ಅಡುಗೆ ತಯಾರಿಸಲು ಹೆಚ್ಚಿನ ಸಂಖ್ಯೆಯ ವಾಣಿಜ್ಯ ಸಿಲಿಂಡರ್‌ಗಳ ಅವಶ್ಯಕತೆಯಿದೆ. ಆದರೆ ಸಮಯಕ್ಕೆ ಸರಿಯಾಗಿ ಗ್ಯಾಸ್ ಲಭ್ಯವಾಗುತ್ತಿಲ್ಲ. ಸಿಲಿಂಡರ್ ಪೂರೈಕೆ ಸಹಜ ಸ್ಥಿತಿಗೆ ಬರುವವರೆಗೆ ಅನ್ನಪ್ರಸಾದ ವಿತರಣೆಯನ್ನು ಸ್ಥಗಿತಗೊಳಿಸಲು ದೇವಸ್ಥಾನದ ಮಂಡಳಿ ನಿರ್ಧರಿಸಿದೆ.

Adigas Yatra: ಅಡಿಗಾಸ್ ಯಾತ್ರಾದಿಂದ ಅಸ್ಸಾಂ- ಮೇಘಾಲಯ ಪ್ರವಾಸ: ಪ್ರಕೃತಿ ಪ್ರೇಮಿಗಳ ಬಹು ಬೇಡಿಕೆಯ ಟೂರ್

ಅಡಿಗಾಸ್ ಯಾತ್ರಾದಿಂದ ಅಸ್ಸಾಂ- ಮೇಘಾಲಯ ಪ್ರವಾಸ: ಪ್ರಕೃತಿಯಲ್ಲಿ ಒಂದಾಗಿ

ಅಡಿಗಾಸ್ ಯಾತ್ರಾ ಏ‌ರ್ಪಡಿಸುತ್ತಿರುವ ಅಸ್ಸಾಂ- ಮೇಘಾಲಯ ಪ್ರವಾಸ ಪ್ಯಾಕೇಜ್‌ಗಳು ಪ್ರಕೃತಿಪ್ರಿಯರ ಬಹು ಬೇಡಿಕೆಯ ಪ್ರವಾಸಗಳಲ್ಲಿ ಒಂದಾಗಿದೆ. ಎರಡೂ ರಾಜ್ಯಗಳು ನಿಸರ್ಗದ ಮಡಿಲಿನಲ್ಲಿರುವ, ಸುಂದರ ಗಿರಿಧಾಮ, ರಾಷ್ಟ್ರೀಯ ಉದ್ಯಾನವನ, ವನ್ಯಜೀವಿಗಳು, ಜಲಪಾತಗಳು ಇತ್ಯಾದಿಗಳನ್ನೊಳಗೊಂಡ ಚೆಲುವಿನ ನೆಲೆ. ಸುಂದರ ಅನುಭವ ನಿಮ್ಮದಾಗುವುದು ಖಾತ್ರಿ.

Chanakya Niti: ನಾಯಿಗಳಿಂದ ಕಲಿಯಿರಿ ಈ 4 ಜೀವನ ಪಾಠಗಳು; ಚಾಣಕ್ಯ ನೀತಿ ಹೇಳುವ ಮಹತ್ವದ ವಿಷಯ ಇದು

ನಾಯಿಗಳಿಂದ ಕಲಿಯಬೇಕಾದ ಪಾಠಗಳು ಇವು

ಆಚಾರ್ಯ ಚಾಣಕ್ಯರ ಪ್ರಕಾರ, ನಾಯಿ ಎಂಬ ನಿಷ್ಠಾವಂತ ಪ್ರಾಣಿಯಿಂದ ಮನುಷ್ಯರು ಹಲವು ಮಹತ್ವದ ಜೀವನ ಪಾಠಗಳನ್ನು ಕಲಿಯಬಹುದು. ನಿಷ್ಠೆ, ತೃಪ್ತಿ, ಜಾಗರೂಕತೆ ಮತ್ತು ಧೈರ್ಯ ಎಂಬ ಗುಣಗಳು ಜೀವನವನ್ನು ಯಶಸ್ವಿಯಾಗಿ ನಡೆಸಲು ಸಹಾಯ ಮಾಡುತ್ತವೆ.

DK Shivakumar: ಡಿಕೆ ಶಿವಕುಮಾರ್‌ ಡಿನ್ನರ್‌ ಪಾರ್ಟಿ, ಸಿಎಂ ಸಹಿತ ಎಲ್ಲ ಶಾಸಕರು ಹಾಜರ್

ಡಿಕೆ ಶಿವಕುಮಾರ್‌ ಡಿನ್ನರ್‌ ಪಾರ್ಟಿ, ಸಿಎಂ ಸಹಿತ ಎಲ್ಲ ಶಾಸಕರು ಹಾಜರ್

ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು ಹಾಗೂ ಶಾಸಕರು ಭೋಜನ ಕೂಟದಲ್ಲಿ ಭಾಗಿಯಾಗಿದ್ದರು. ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟು ಕೊಡೋ ಬಗ್ಗೆ ಡಿಕೆಶಿ ಸುಳಿವು ಕೊಟ್ಟಿದ್ದರು. ಬಿಜೆಪಿ ಶಾಸಕರಾದ ಎಸ್‌ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಡಿನ್ನರ್ ಪಾರ್ಟಿಗೆ ಹಾಜರಾಗಿದ್ದರು.

Hotels bandh: ವಾಣಿಜ್ಯ ಸಿಲಿಂಡರ್‌ ಬ್ಲ್ಯಾಕ್‌ ಮಾರ್ಕೆಟ್‌ನಲ್ಲಿ 4000 ರೂ.! ಇಂದು ಬೆಂಗಳೂರಿನಲ್ಲಿ ಹೋಟೆಲ್‌ಗಳು ಮುಚ್ಚುವ ಭೀತಿ

ವಾಣಿಜ್ಯ ಸಿಲಿಂಡರ್‌ ಬ್ಲ್ಯಾಕ್‌ ಮಾರ್ಕೆಟ್‌ನಲ್ಲಿ 4000 ರೂ.!

ಸೋಮವಾರವೇ ಸಮರ್ಪಕವಾಗಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳನ್ನು ಸರಬರಾಜು ಮಾಡಿಲ್ಲ ಎಂದು ಬೆಂಗಳೂರು ಹೋಟೆಲುಗಳ ಸಂಘವು ಆಕ್ರೋಶ ವ್ಯಕ್ತಪಡಿಸಿತ್ತು. ಆದರೂ ಮಂಗಳವಾರವೂ ಸಿಲಿಂಡರ್ ಸರಬರಾಜು ಆಗದೇ ಇರುವುದರಿಂದ ಬುಧವಾರದಿಂದ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಹೋಟೆಲ್ ಉದ್ಯಮ ಆತಂಕ ವ್ಯಕ್ತಪಡಿಸಿದೆ.

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಾ.11ರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಮುಷ್ಕರ

ಮಾ.11ರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಮುಷ್ಕರ

ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಸಾಕಷ್ಟು ಸಮಸ್ಯೆಗಳನ್ನ ಎದುರಿಸು ತ್ತಿದ್ದಾರೆ. ಈ ಸಂಬಂಧ ನಮ್ಮ ಕರ್ನಾಟಕ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘದ ವತಿಯಿಂದ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಗಿತ್ತು. ಇಲಾಖೆಯ ಯಾವುದೇ ಅಧಿಕಾರಿ, ನೌಕರ ಸಿಬ್ಬಂದಿಗಳಿಗೆ 5 ವರ್ಷಗಳಿಂದ ಮುಂಬಡ್ತಿ ನೀಡಿಲ್ಲ.

ಹಳೆಯ ಶೇ.15ರ ಮೀಸಲಾತಿಯಂತೆಯೇ 56 ಸಾವಿರ ಉದ್ಯೋಗಗಳ ನೇಮಕಾತಿ ಮಾಡಿ : ಶ್ರೀರಾಮ್ ನಾಯಕ್ ಒತ್ತಾಯ

ಶೇ.15ರ ಮೀಸಲಾತಿಯಂತೆಯೇ 56 ಸಾವಿರ ಉದ್ಯೋಗಗಳ ನೇಮಕಾತಿ ಮಾಡಿ

ನಿವೃತ್ತ ನ್ಯಾ. ನಾಗಮೋಹನ್ ದಾಸ್ ವರದಿ(Retired Justice Nagamohan Das's report)ಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಜಾರಿ ಮಾಡಿರುವ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿಗಳನ್ನು 3 ಗುಂಪುಗಳಾಗಿ ವಿಂಗಡಿಸಲಾಗಿದೆ. ಬಲಗೈ ಸಮುದಾಯವನ್ನು ಬಿ ಗುಂಪಿಗೆ ಸೇರಿಸಿ ರೋಸ್ಟರ್ ಬಿಂದುವಿನಲ್ಲಿ 9ನೇ ಸ್ಥಾನಕ್ಕೆ ಇಳಿಸಲಾಗಿದೆ.

ನಿರ್ಮಲಾ ಸೀತಾರಾಮನ್ ಬಜೆಟ್ ಖಾಲಿ ಡ್ರಮ್‌: ಡಿ.ಕೆ. ಶಿವಕುಮಾರ್ ಲೇವಡಿ

ನಿರ್ಮಲಾ ಸೀತಾರಾಮನ್ ಬಜೆಟ್ ಖಾಲಿ ಡ್ರಮ್‌: ಡಿ.ಕೆ. ಶಿವಕುಮಾರ್

DK Shivakumar: ವಿಧಾನಸಭೆಯ ಚರ್ಚೆಯ ನಡುವೆ ವಿರೋಧ ಪಕ್ಷದ ನಾಯಕ ಅರ್. ಅಶೋಕ್ ಅವರ ಮಾತಿಗೆ ತಿರುಗೇಟು ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಬಜೆಟ್ ಅನ್ನು ನಾವು ಖಾಲಿ ಡ್ರಮ್ ಎಂದು ನಾವು ವಿವರಿಸುತ್ತೇವೆ ಎಂದಿದ್ದಾರೆ.

MLA Pradeep Eshwar: ಶಾಸಕರಾಗಿ ನೀಡಿರುವ ಭರವಸೆಗಳನ್ನು ಈಡೇರಿಸಿ, ಇಲ್ಲವೇ ಪ್ರತಿಭಟನೆ ಎದುರಿಸಿ : ಸುಷ್ಮಾ ಶ್ರೀನಿವಾಸ್ ಆಗ್ರಹ

ಶಾಸಕರಾಗಿ ನೀಡಿರುವ ಭರವಸೆಗಳನ್ನು ಈಡೇರಿಸಿ, ಇಲ್ಲವೇ ಪ್ರತಿಭಟನೆ ಎದುರಿಸಿ

ಯುವಕರು, ಪ್ರಜ್ಞಾವಂತರು, ರಾಜಕೀಯ ಹಿನ್ನೆಲೆ ಇಲ್ಲದ ಸಾಮಾನ್ಯನೊಬ್ಬ ಚುನಾವಣೆ ಯಲ್ಲಿ ಗೆದ್ದು ಬಂದಾಗ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದೆ ಎಂದು ತಿಳಿದಿದ್ದೆವು. ಆದರೆ ಶಾಸಕ ಪ್ರದೀಪ್ ಈಶ್ವರ್ ಜನತೆಯಿಟ್ಟಿ ನಂಬಿಕೆಯನ್ನು ಈ 3 ವರ್ಷಗಳಲ್ಲಿ ಹುಸಿ ಗೊಳಿಸಿದ್ದಾರೆ. ಶಾಸಕರಾಗುವುದಕ್ಕೂ ಮುನ್ನ ಹೆಚ್.ಎನ್.ವ್ಯಾಲಿ ನೀರಿನ ಅಪಾಯಗಳ ಬಗ್ಗೆ ವೀರಾವೇಶದಿಂದ ಆಡಿದ್ದ ಮಾತುಗಳೇಕೋ ಮರೆತಂತಿದೆ.

Doctors strike: ರಾಜ್ಯ ಸರ್ಕಾರದ ಸಂಧಾನ ಯಶಸ್ವಿ; ಮುಷ್ಕರ ವಾಪಸ್‌ ಪಡೆದ ವೈದ್ಯರು

ರಾಜ್ಯ ಸರ್ಕಾರದ ಸಂಧಾನ ಯಶಸ್ವಿ; ಮುಷ್ಕರ ವಾಪಸ್‌ ಪಡೆದ ವೈದ್ಯರು

ವೈದ್ಯಾಧಿಕಾರಿಗಳ ಸಂಘದೊಂದಿಗೆ ಸಚಿವ ಮಹದೇವಪ್ಪ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ ಮಾಡಿದ್ದು, ವೈದ್ಯರ ಬೇಡಿಕೆಗಳನ್ನು ಆಲಿಸಿ, ಈಡೇರಿಸುವ ಭರವಸೆಯನ್ನು ನೀಡಿದ್ದಾರೆ. ಹೀಗಾಗಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಬುಧವಾರದಿಂದ ಕರೆದಿದ್ದ ಮುಷ್ಕರದಿಂದ ಹಿಂದೆ ಸರಿದಿದೆ.

Lok Adalat on March 14:ಮಾ.14ಕ್ಕೆ ಬೃಹತ್ ಲೋಕಾ ಅದಾಲತ್: 12222 ಪ್ರಕರಣಗಳ ಇತ್ಯರ್ಥದ ಗುರಿ: ನ್ಯಾ.ಟಿ.ಪಿ.ರಾಮಲಿಂಗೇಗೌಡ

ಮಾ.14ಕ್ಕೆ ಬೃಹತ್ ಲೋಕಾ ಅದಾಲತ್: 12222 ಪ್ರಕರಣಗಳ ಇತ್ಯರ್ಥದ ಗುರಿ

ಜಿಲ್ಲೆಯ ನ್ಯಾಯಾಲಯಗಳಲ್ಲಿ 49,000ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ ಇವುಗಳ ಪೈಕಿ ಈಗಾಗಲೆ  ಲೋಕಾ ಅದಾಲತ್‌ಗೆ ಈ ಬಾರಿ ತೆಗೆದುಕೊಳ್ಳಲು 12,222 ಪ್ರಕರಣ ಗಳನ್ನು ಗುರುತಿಸಲಾಗಿದೆ. ಮಾ.13ನೇ ತಾರೀಕಿನವರೆಗೆ ಇನ್ನೂ ಹೆಚ್ಚಿನ ಪ್ರಕರಣಗಳು ಅದಾಲತ್‌ಗೆ ಬರುವ ನಿರೀಕ್ಷೆ ಇದೆ.

MLA B.N.Ravikumar: ಸ್ಲಂ ಬೋರ್ಡ್ ಮನೆ ಹಂಚಿಕೆಯಲ್ಲಿ ಅಕ್ರಮ: ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ರವಿಕುಮಾರ್

ಸ್ಲಂ ಬೋರ್ಡ್ ಮನೆ ಹಂಚಿಕೆಯಲ್ಲಿ ಅಕ್ರಮ: ಶಾಸಕ ರವಿಕುಮಾರ್

2018–19ನೇ ಸಾಲಿನಲ್ಲಿ ಸುಮಾರು 500 ಮನೆಗಳನ್ನು ಮಂಜೂರು ಮಾಡಲಾಗಿತ್ತು. ನಂತರ 2021–22ನೇ ಸಾಲಿ ನಲ್ಲಿ 612 ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಆದರೆ ಈ ಮನೆಗಳ ಹಂಚಿಕೆ ಹಾಗೂ ನಿರ್ಮಾಣ ಪ್ರಕ್ರಿಯೆಯಲ್ಲಿ ಹಲವು ಅಕ್ರಮಗಳು ನಡೆದಿರು ವುದು ಗಮನಕ್ಕೆ ಬಂದಿದೆ

ಬೆಂಗಳೂರಿನಲ್ಲಿ ಸಿಂಗಾಪುರಕ್ಕಿಂತಲೂ ಉತ್ತಮ ಬಸ್​ ನಿಲ್ದಾಣ ನಿರ್ಮಿಸುತ್ತೇವೆ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರಿನಲ್ಲಿ ಸಿಂಗಾಪುರಕ್ಕಿಂತಲೂ ಉತ್ತಮ ಬಸ್​ ನಿಲ್ದಾಣ: ರಾಮಲಿಂಗಾರೆಡ್ಡಿ

ಮೆಜೆಸ್ಟಿಕ್‌ನಲ್ಲಿ 32 ಎಕರೆ ಜಾಗ ಇದೆ. ಬಸ್‌ಗಳು ನಿತ್ಯ 11 ಸಾವಿರ ಟ್ರಿಪ್ ಓಡಾಡುತ್ತದೆ. ಇಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ಮಾಡುವ ಉದ್ದೇಶ ಇದೆ. ಸಿಂಗಾಪುರ್‌ಗಿಂತ ಉತ್ತಮ ನಿಲ್ದಾಣ ಮಾಡುತ್ತೇವೆ ಎಂದು ವಿಧಾನ ಪರಿಷತ್‌ನಲ್ಲಿ ಸಾರಿಗೆ ಸಚಿವ

Loading...