ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ಮಧುಗಿರಿಯ ಶ್ರೀ ದಂಡಿನ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಎಸಿ ಗೋಟೂರು ಶಿವಪ್ಪ ಚಾಲನೆ

ಮಧುಗಿರಿ ಶ್ರೀ ದಂಡಿನ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಚಾಲನೆ

Madhugiri News: ಮಧುಗಿರಿ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮನವರ-2026ನೇ ಸಾಲಿನ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ದೇವಸ್ಥಾನದ ಆಡಳಿತ ಅಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ಚಾಲನೆ ನೀಡಿದರು. ಈ ಕುರಿತ ವಿವರ ಇಲ್ಲಿದೆ

Gold Rate Today 5th March 2026: ಮತ್ತೆ ಕಡಿಮೆಯಾಯ್ತು ಚಿನ್ನದ ದರ; ಇಂದು ಇಳಿಕೆಯಾಗಿದ್ದು 900 ರುಪಾಯಿ

ಮತ್ತೆ ಕಡಿಮೆಯಾಯ್ತು ಚಿನ್ನದ ದರ

Gold Price Today: ಕೆಲವು ದಿನಗಳಿಂದ ಇಳಿಕೆಯ ಹಾದಿಯಲ್ಲಿರುವ ಚಿನ್ನದ ದರ ಗುರುವಾರ ಕೆಳಮುಖವಾಗಿ ಸಾಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 90 ರುಪಾಯಿ ಇಳಿಕೆಯಾಗಿ 14,990 ರುಪಾಯಿಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 98 ರುಪಾಯಿ ಕಡಿಮೆಯಾಗಿದ್ದು, 16,353 ರುಪಾಯಿಗೆ ಕುಸಿದಿದೆ.

Iran- Israel War: ಖಮೇನಿ ಹತ್ಯೆ ಖಂಡಿಸಿ ಪ್ರತಿಭಟಿಸಿದ ಕಾಂಗ್ರೆಸ್‌ ಶಾಸಕನಿಗೆ ಈಗ ಸಂಕಷ್ಟ

ಖಮೇನಿ ಹತ್ಯೆ ಖಂಡಿಸಿ ಪ್ರತಿಭಟಿಸಿದ ಕಾಂಗ್ರೆಸ್‌ ಶಾಸಕನಿಗೆ ಈಗ ಸಂಕಷ್ಟ

ಹಿಂದೂ ಸಂಘಟನೆ ಕಾರ್ಯಕರ್ತ ತೇಜಸ್ ಗೌಡ ಅವರು ಶಾಸಕ ಎನ್ಎ ಹ್ಯಾರಿಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಡಿಜಿ ಹಾಗೂ ಐಜಿಪಿಗೆ ದೂರು ಸಲ್ಲಿಸಿದ್ದಾರೆ. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

Hitech Cricket Stadium: ಕಲಬುರಗಿಗೆ ಹೈಟೆಕ್‌ ಕ್ರಿಕೆಟ್‌ ಕ್ರೀಡಾಂಗಣ ಕೊಡಿ

ಕಲಬುರಗಿಗೆ ಹೈಟೆಕ್‌ ಕ್ರಿಕೆಟ್‌ ಕ್ರೀಡಾಂಗಣ ಕೊಡಿ

ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ತಮಿಳುನಾಡು ಹಾಗೂ ಗುಜರಾತ್‌ನಂತಹ ರಾಜ್ಯ ಗಳಲ್ಲಿ ಐದಾರು ಅಂತಾರಾಷ್ಟ್ರೀಯ ಮೈದಾನಗಳಿದ್ದರೆ, ಕರ್ನಾಟಕದಲ್ಲಿ ಮಾತ್ರ ಕೇವಲ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೀಮಿತವಾಗಿರುವುದು ರಾಜ್ಯದ ಕ್ರೀಡಾ ಬದ್ಧತೆ ಪ್ರಶ್ನಿಸುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿನ ಪ್ರಾದೇಶಿಕ ಅಸಮತೋಲನ ನಿವಾರಿಸಲು ಕಲಬುರಗಿ ಯಲ್ಲಿ ಹೈಟೆಕ್ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡುವುದು ಸರಕಾರದ ಆದ್ಯತೆಯಾಗಬೇಕಿದೆ.

Holi Festival: ಕೆರೂರಲ್ಲಿ ಇಂದು ʼಹೋಳಿ ಹಬ್ಬ ಸಂಭ್ರಮʼ

Holi Festival: ಕೆರೂರಲ್ಲಿ ಇಂದು ʼಹೋಳಿ ಹಬ್ಬ ಸಂಭ್ರಮʼ

ಪತ್ರಿ ಮನೆಯಲ್ಲೂ ಕಾಮನಿನಗೆ ಹೋಳಿಗೆ ಇಲ್ಲವೆ ಬೆಲ್ಲ ಸಕ್ಕರೆ ನೈವೇದ್ಯ ಕೊಟ್ಟು ಕಾಮನಿನಗೆ ಅಂತಿಮ ವಿದಾಯ ಹೇಳಿದ್ದು ವಿಶೇಷವಾಗಿತ್ತು. ಇಲ್ಲಿಯ ಹಳಪೇಟೆ, ಚಿನಗುಂಡಿ ಪ್ಲಾಟ, ಇತರೆಡೆಗಳಲ್ಲಿ ಬುಧವಾರ ಬೆಳಗ್ಗಿನ ಜಾವ ಕಾಮದಹನವಾದರೆ ಸಾರ್ವಜನಿಕ ತರಕಾರಿ ಮಾರ್ಕೆಟ್ ಮತ್ತು ಕಿಲ್ಲಾ ಹೊಸಪೇಟೆ ನೆಹರು ನಗರ ಹಾಗೂ ಬಸರಿಗಿಡಪೇಟೆ ಓಣಿ ಮಧ್ಯಾಹ್ನ ದ ವೇಳೆಗೆ ಕಾಮ ದಹನ ಮಾಡಲಾಯಿತು.‌

Gadag News: ಆರ್ಕೆಸ್ಟ್ರಾ ನೋಡಿ ಮರಳುತ್ತಿದ್ದವರಿಗೆ ಅಪಘಾತ, ಇಬ್ಬರು ಸಾವು

ಆರ್ಕೆಸ್ಟ್ರಾ ನೋಡಿ ಮರಳುತ್ತಿದ್ದವರಿಗೆ ಅಪಘಾತ, ಇಬ್ಬರು ಸಾವು

ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದ ನಿವಾಸಿಗಳಾದ ನಿಂಗಪ್ಪ ಯಳವತ್ತಿ (36) ಮತ್ತು ಮುತ್ತಪ್ಪ ಸತ್ತಿಗೇರಿ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಟಾಟಾ ಎಸಿ ವಾಹನದಲ್ಲಿ ಗ್ರಾಮದ ಮಂದಿಯೊಂದಿಗೆ ಪ್ರಯಾಣಿಸುತ್ತಿದ್ದರು. ಗ್ರಾಮದಲ್ಲಿ ನಡೆಯುತ್ತಿದ್ದ ಆರ್ಕೆಸ್ಟ್ರಾ ನೋಡಲು ಎಲ್ಲರೂ ಒಟ್ಟಾಗಿ ತೆರಳಿದ್ದರು. ವಾಹನದಲ್ಲಿ ಒಟ್ಟು ಹತ್ತು ಮಂದಿ ಇದ್ದರು ಎಂದು ತಿಳಿದುಬಂದಿದೆ.

ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ-ಟಿ.ಎನ್.ಎಸ್.ಡಿ.ಸಿ ಸಹಯೋಗ: ಸೆಂಟರ್ ಆಫ್ ಎಕ್ಸʼಲೆನ್ಸ್ ಕೇಂದ್ರದ ಉದ್ಘಾಟನೆ

ಸೆಂಟರ್ ಆಫ್ ಎಕ್ಸʼಲೆನ್ಸ್ ಕೇಂದ್ರದ ಉದ್ಘಾಟನೆ

ಪ್ರಮುಖ ಉತ್ಪಾದನಾ ಕೇಂದ್ರವಾಗಿ ತಮಿಳುನಾಡಿನ ಸ್ಥಾನವನ್ನು ಬಲಪಡಿಸುವತ್ತ ಒಂದು ಭವಿಷ್ಯದ ಹೆಜ್ಜೆ ಇಡುವುದು ಮತ್ತು ಅದೇ ವೇಳೆ, ಉದ್ಯಮ 4.0 ಅವಶ್ಯಕತೆಗಳಿಗೆ ಅನುಗುಣ ವಾಗಿ ಭವಿಷ್ಯಕ್ಕೆ ಸಿದ್ಧವಾಗಿರುವ, ಯಾಂತ್ರೀಕೃತ-ಕೌಶಲ್ಯವುಳ್ಳ ಕಾರ್ಯಪಡೆಯ ಅಭಿವೃದ್ಧಿಗೆ ವೇಗ ತರುವಲ್ಲಿ ಈ ಉಪಕ್ರಮವು ಪ್ರಮುಖ ಪಾತ್ರ ವಹಿಸುವುದು.

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: ಪೊಲೀಸ್‌ ಇಲಾಖೆಯಲ್ಲಿ 8157 ಹುದ್ದೆ ಭರ್ತಿಗೆ ಸೂಚನೆ

ಸಿಹಿ ಸುದ್ದಿ: ಪೊಲೀಸ್‌ ಇಲಾಖೆಯಲ್ಲಿ 8157 ಹುದ್ದೆ ಭರ್ತಿಗೆ ಸೂಚನೆ

ಒಟ್ಟು 8,157 ಹುದ್ದೆಗಳನ್ನು ನೇರ ನೇಮಕಾತಿ (Job recruitment) ಮೂಲಕ ಭರ್ತಿ ಮಾಡಲು ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಒಟ್ಟು ಹುದ್ದೆಗಳಲ್ಲಿ ಶೇ. 6 ರಷ್ಟು ಹುದ್ದೆಗಳನ್ನು (ಪರಿಶಿಷ್ಟ ಜಾತಿಗೆ ಶೇ. 2 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 4) ಹೈಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟು ಕಾಯ್ದಿರಿಸಲಾಗುವುದು ಎಂದು ತಿಳಿಸಲಾಗಿದೆ.

Lokayukta Raid: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಶಾಕ್‌, ವಿವಿಧೆಡೆ ಲೋಕಾಯುಕ್ತ ದಾಳಿ

ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಶಾಕ್‌, ವಿವಿಧೆಡೆ ಲೋಕಾಯುಕ್ತ ದಾಳಿ

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಅಧಿಕಾರಿಗಳು ಆಸ್ತಿ ಪತ್ರಗಳು, ಬ್ಯಾಂಕ್ ಪಾಸ್‌ಬುಕ್ ಮತ್ತು ನಗದು ಹಣದ ಬಗ್ಗೆ ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಪ್ರಸ್ತುತ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ದಾಳಿಗೆ ಒಳಗಾದ ಅಧಿಕಾರಿಗಳ ಹೆಸರು ಮತ್ತು ವಶಪಡಿಸಿಕೊಳ್ಳಲಾದ ಅಕ್ರಮ ಆಸ್ತಿಯ ಸಂಪೂರ್ಣ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.

Iran Israel War: ಇದುವರೆಗೂ 5 ವಿಮಾನಗಳಲ್ಲಿ 1500 ಮಂದಿ ಗಲ್ಫ್‌ನಿಂದ ಬೆಂಗಳೂರಿಗೆ

ಇದುವರೆಗೂ 5 ವಿಮಾನಗಳಲ್ಲಿ 1500 ಮಂದಿ ಗಲ್ಫ್‌ನಿಂದ ಬೆಂಗಳೂರಿಗೆ

ಕಳೆದ ಸೋಮವಾರ 2ನೇ ತಾರೀಕು ರಾತ್ರಿ 9.40ಕ್ಕೆ ಬಂದ ಮೊದಲ ಫ್ಲೈಟ್‌ನಲ್ಲಿ 213 ಜನ ವಾಪಸ್ ಆಗಿದ್ದರೆ, 3ನೇ ತಾರೀಕು ಮುಂಜಾನೆ 3 ಗಂಟೆಗೆ ಬಂದ 2ನೇ ಫ್ಲೈಟ್‌ನಲ್ಲಿ 490 ಜನ, ಹಾಗೇ ಅದೇ ದಿನ ಸಂಜೆ 7 ಗಂಟೆಗೆ ಬಂದ 3ನೇ ಫ್ಲೈಟ್‌ನಲ್ಲಿ 350 ಮಂದಿ, ನಾಲ್ಕನೇ ತಾರೀಕು ಮಧ್ಯರಾತ್ರಿ 1 ಗಂಟೆಗೆ ಬಂದ ಫ್ಲೈಟ್‌ನಲ್ಲಿ 200 ಜನ, ಉಳಿದಂತೆ ಬುಧವಾರ ಸಂಜೆ 7 ಗಂಟೆಗೆ ಬಂದ ವಿಮಾನದಲ್ಲಿ 246 ಪ್ರಯಾಣಿಕರು ವಾಪಸಾಗಿದ್ದು ಈವರೆಗೆ 1500 ಮಂದಿ ಸುರಕ್ಷಿತವಾಗಿ ಮರಳಿದ್ದಾರೆ.

Bidar news: ಬಸವಕಲ್ಯಾಣದಲ್ಲಿ ಮುಸ್ಲಿಂ ಯುವಕರಿಂದ ಭಾರಿ ಪ್ರತಿಭಟನೆ, ಠಾಣೆಗೆ ಮುತ್ತಿಗೆ

ಬಸವಕಲ್ಯಾಣದಲ್ಲಿ ಮುಸ್ಲಿಂ ಯುವಕರಿಂದ ಭಾರಿ ಪ್ರತಿಭಟನೆ, ಠಾಣೆಗೆ ಮುತ್ತಿಗೆ

ಕೆಲವು ಹಿಂದೂ ಯುವಕರು ಮುಸ್ಲಿಂ ಮೌಲ್ವಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ವಿಚಾರ ನಗರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಇದರಿಂದ ಕೆರಳಿದ ಮುಸ್ಲಿಂ ಸಮುದಾಯದ ಸಾವಿರಾರು ಯುವಕರು ಮತ್ತು ಮುಖಂಡರು ನಗರದ ಗಾಂಧಿ ವೃತ್ತದಲ್ಲಿರುವ ಪೊಲೀಸ್ ಠಾಣೆಯತ್ತ ಧಾವಿಸಿ‌ದ್ದಾರೆ. ಠಾಣೆಯ ಮುಂಭಾಗದಲ್ಲಿ ಭಾರಿ ಗದ್ದಲ ಸೃಷ್ಟಿಸಿದ್ದಾರೆ.

ಶೂನ್ಯ ಚತುಷ್ಪಥದ ಕಲಬುರಗಿಗೆ ಸಿಗುವುದೇ ವೇಗ ?

ಶೂನ್ಯ ಚತುಷ್ಪಥದ ಕಲಬುರಗಿಗೆ ಸಿಗುವುದೇ ವೇಗ ?

ರಾಜ್ಯದ 2ನೇ ಅತಿದೊಡ್ಡ ಜಿಲ್ಲೆ, ಕಲ್ಯಾಣ ಕರ್ನಾಟಕದ ಆಡಳಿತ ಕೇಂದ್ರ ಮತ್ತು ವಿಭಾಗೀಯ ಕೇಂದ್ರ ಎಂಬ ಹತ್ತಾರು ಹಣೆಪಟ್ಟಿಗಳಿರುವ ಕಲಬುರಗಿ ಜಿಲ್ಲೆಗೆ ಇಂದು ಒಂದೇ ಒಂದು ಸಮರ್ಪಕ ‘ಚತುಷ್ಪಥ ರಸ್ತೆ’ ಇಲ್ಲದಿರುವುದು ವಿಪರ್ಯಾಸ. ರಾಜ್ಯದ ಇತರೆ ನಗರಗಳು ಎಕ್ಸ್‌ ಪ್ರೆಸ್ ಹೈವೇಗಳ ಮೂಲಕ ಸಮೃದ್ಧಿಯತ್ತ ಓಡುತ್ತಿದ್ದರೆ, ಕಲಬುರಗಿ ಮಾತ್ರ ದ್ವಿಪಥದ ಇಕ್ಕಟ್ಟಾದ ರಸ್ತೆಗಳಲ್ಲಿ ಸಿಲುಕಿ ಒದ್ದಾಡುತ್ತಿದೆ.

Pralhad Joshi: ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಬಗ್ಗೆ ವಿಸ್ತೃತ ಚರ್ಚೆ ಅಗತ್ಯ: ಜೋಶಿ

ಹು.ಧಾ. ಪ್ರತ್ಯೇಕ ಮಹಾನಗರ ಪಾಲಿಕೆ ಬಗ್ಗೆ ವಿಸ್ತೃತ ಚರ್ಚೆ ಅಗತ್ಯ: ಜೋಶಿ

Pralhad Joshi: ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಬಗ್ಗೆ ಗಹನ ಚರ್ಚೆ, ಆಲೋಚನೆ ಅಗತ್ಯ. ಈ ಸಂಬಂಧ ಸಾಧಕ - ಬಾಧಕಗಳ ಚಿಂತನೆ ಅತ್ಯಗತ್ಯವಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

Bagepally News: ಶ್ರದ್ಧಾಭಕ್ತಿಯಿಂದ ನಡೆದ ಐತಿಹಾಸಿಕ ಮಿಟ್ಟೇಮರಿ ಪ್ರಸಿದ್ಧ ಗರುಡಾದ್ರಿ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ಪ್ರಸಿದ್ಧ ಗರುಡಾದ್ರಿ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ದೇವಾಲಯದಲ್ಲಿ ಬೆಳಗ್ಗೆ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಹೋಮ ಹವನಗಳು ಹಾಗೂ ದೇವರಿಗೆ ವಿಶೇಷ ಪೂಜಾ ಕಾರ್ಯಗಳು ನಡೆದವು. ಬಳಿಕ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ಗಂಧೋತ್ಸವ ನಡೆಸಲಾಯಿತು. ಉತ್ಸವದಲ್ಲಿ ದೇವರ ಮೂರ್ತಿಗಳನ್ನು ಕರೆ ತಂದು ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು. ಶಾಸಕ ಎಸ್.ಎನ್ ಸುಬ್ಬಾರೆಡ್ಡಿ, ತಹಸೀಲ್ದಾರ್ ಮನಿಷಾ ಮಹೇಶ್ ಎನ್.ಪತ್ರಿ ಹೋಮ  ಹೋಮಗಳನ್ನು ಮಾಡಿ ರಥೋತ್ಸವಕ್ಕೆ ಚಾಲನೆ ನೀಡಿದರು.

50ಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಸಿ ದಾಖಲೆ ಬರೆದ ಕಾಂಗ್ರೆಸ್ ಸರ್ಕಾರ: ಜೋಶಿ ತರಾಟೆ

ಅಗತ್ಯ ವಸ್ತುಗಳ ಬೆಲೆ ಏರಿಸಿ ದಾಖಲೆ ಬರೆದ ಕಾಂಗ್ರೆಸ್ ಸರ್ಕಾರ: ಜೋಶಿ

Union Minister Pralhad Joshi: ರಾಜ್ಯದಲ್ಲಿ ಗೃಹೋಪಯೋಗಿ, ಕೈಗಾರಿಕೆ ಹಾಗೂ ವಾಣಿಜ್ಯೋಪಯೋಗಿ ವಿದ್ಯುತ್ ದರ ಹೆಚ್ಚಿಸಲು ತಯಾರಿ ನಡೆದಿದೆ. ಇದು ಸರ್ಕಾರದ ಕೈಗಾರಿಕಾ ವಿರೋಧಿ ನೀತಿಯನ್ನು ನಿರೂಪಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಟೀಕಿಸಿದ್ದಾರೆ.

Gudibande News: ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ವೃದ್ದಿ : ಬಿ.ಅಮೀರ್ ಜಾನ್

ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ವೃದ್ದಿ

ಇಂದಿನ ಆಧುನಿಕ ಯುಗದಲ್ಲಿ ದಿನಕ್ಕೊಂದು ಆವಿಷ್ಕಾರಗಳು ನಡೆಯುತ್ತಿದೆ. ಅದಕ್ಕೆ ಪೂರಕ ಎಂಬಂತೆ ಈ ರೀತಿಯ ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳಲ್ಲಿನ ವಿಜ್ಞಾನ ಮನೋಭಾವ ಬೆಳೆಸಲು ಸಹಕಾರಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿ ದಂತಹ ಸರ್.ಎಂ.ವಿ. ವಿಶ್ವೇಶ್ವರಯ್ಯ, ಹೆಚ್.ನರಸಿಂಹಯ್ಯ ನವರನ್ನು ಆದರ್ಶವಾಗಿ ತೆಗೆದು ಕೊಂಡು ವಿದ್ಯಾರ್ಥಿಗಳು ಅವರಂತೆ ಸಾಧನೆ ಮಾಡಬೇಕು

Bagepally News: ಸರ್ಕಾರಿ ಘಂಟಂವಾರಿಪಲ್ಲಿ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಹಾಗೂ ಆಪ್ತ ಸಮಾಲೋಚನೆ ಕಾರ್ಯಕ್ರಮ

ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಹಾಗೂ ಆಪ್ತ ಸಮಾಲೋಚನೆ

ಗ್ರಾಮೀಣ ಪ್ರದೇಶ ದಲ್ಲಿ ಎಸ್‌ಎಸ್‌ಎಲ್‌ಸಿ ನಂತರ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳುವ ಗೊಂದಲ ದಲ್ಲಿರುತ್ತಾರೆ. ಎಸ್‌ಎಸ್‌ಎಲ್‌ಸಿ ನಂತರ ರಕ್ಷಣಾ ಕ್ಷೇತ್ರದಲ್ಲಿನ ಆರ್ಮಿ, ನೇವಿ, ಏರ್‌ ಪೋರ್ಸ್ಗಳಲ್ಲಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಹಾಗೂ ವೃತ್ತಿಪರ ಕೋರ್ಸ್ಗಳಲ್ಲಿ ಸಾಕಷ್ಟು ಅವಕಾಶಗಳಿದ್ದು, ನಿತ್ಯ ಪತ್ರಿಕೆಗಳನ್ನು ಓದುವ ಮೂಲಕ ಹೆಚ್ಚಿನ ವಿಷಯ ಅರಿಯಬೇಕು.

ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್‌; ಭಟ್ಕಳದಲ್ಲಿ ಪೆಟ್ರೋಲ್‌ ಬಂಕ್‌ಗಳಿಗೆ ಮುಗಿಬಿದ್ದ ಜನ, ʼನೋ ಸ್ಟಾಕ್‌ʼ!

ಬೆಲೆ ಏರಿಕೆ ಭೀತಿ; ಭಟ್ಕಳದಲ್ಲಿ ಪೆಟ್ರೋಲ್‌ ಬಂಕ್‌ಗಳಿಗೆ ಮುಗಿಬಿದ್ದ ಜನ!

Iran-Israel war: ಇರಾನ್‌-ಇಸ್ರೇಲ್‌ ಯುದ್ಧದಿಂದ ಪೆಟ್ರೋಲ್ ಬೆಲೆ ಏಕಾಏಕಿ ಹೆಚ್ಚಾಗಬಹುದು ಎಂಬ ತಪ್ಪು ಗ್ರಹಿಕೆಯಿಂದ ಜನರು ಹೆಚ್ಚುವರಿ ಪೆಟ್ರೋಲ್, ಡೀಸೆಲ್ ಸಂಗ್ರಹಕ್ಕೆ ಮುಂದಾಗಿದ್ದಾರೆ. ಇದರಿಂದ ಭಟ್ಕಳಲ್ಲಿ ಪೆಟ್ರೋಲ್‌ ಬಂಕ್‌ಗಳ ಮುಂದೆ ವಾಹನ ಸವಾರರ ಸಾಲುಗಟ್ಟಿ ನಿಂತಿರುವುದು ಕಂಡುಬಂದಿದೆ.

Shidlaghatta News: ಶಿಡ್ಲಘಟ್ಟದಲ್ಲಿ ಪೂಜಮ್ಮ ದೇವಿ ಕರಗ ಮಹೋತ್ಸವ ವೈಭವ: ಭಕ್ತರ ಸಾಗರ

ಶಿಡ್ಲಘಟ್ಟದಲ್ಲಿ ಪೂಜಮ್ಮ ದೇವಿ ಕರಗ ಮಹೋತ್ಸವ ವೈಭವ

ಕರಗ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಭಕ್ತರ ಹರ್ಷೋದ್ಗಾರಗಳ ನಡುವೆ ಸಾಗಿತು. ಮನೆಮನೆಗಳ ಮುಂದೆ ಭಕ್ತರು ಹೂವಿನ ಹಾರ ಹಾಗೂ ಕರ್ಪೂರ ಆರತಿ ನೀಡಿ ಕರಗವನ್ನು ಭಕ್ತಿಯಿಂದ ಸ್ವಾಗತಿಸಿದರು. ಮಹೋತ್ಸವವು ನಗರದಲ್ಲಿ ಧಾರ್ಮಿಕ ಸಂಭ್ರಮ ವನ್ನು ಮೂಡಿಸಿ ಭಕ್ತರಲ್ಲಿ ಏಕತೆ ಮತ್ತು ಭಕ್ತಿಭಾವವನ್ನು ಗಟ್ಟಿಗೊಳಿಸಿತು.

Gauribidanur News: ಗೆಳೆಯನ ಹೆಸರಿನ ಪ್ರಶಸ್ತಿ ಮತ್ತೊಬ್ಬ ಗೆಳೆಯನಿಗೆ ಕೊಡುವುದು ವಿಶಿಷ್ಟವಾದದ್ದು: ಪ್ರೊ.ನಗರಗೆರೆ ರಮೇಶ್ ಅಭಿಮತ

ಗೆಳೆಯನ ಹೆಸರಿನ ಪ್ರಶಸ್ತಿ ಮತ್ತೊಬ್ಬ ಗೆಳೆಯನಿಗೆ ಕೊಡುವುದು ವಿಶಿಷ್ಟವಾದದ್ದು

ಕೆ.ನಾರಾಯಣಸ್ವಾಮಿ ಮತ್ತು ಡಾ.ಎಸ್. ಬಿಸಲಯ್ಯ ದೀರ್ಘ ಕಾಲದ ಸ್ನೇಹಿತರು. ಸಮಾನ ಮನಸ್ಕರು. ಸಾಮಾಜಿಕ ಕಳಕಳಿಯನ್ನು ಹೊಂದಿರುವವರು. ಶೈಕ್ಷಣಿಕ ಕ್ಷೇತ್ರದಲ್ಲಿ ಅತಿ ಎತ್ತರಕ್ಕೆ ಬೆಳೆದವರು. ಇಂತಹ ಮೇಧಾವಿ ಗಳನ್ನು ಪ್ರಶಸ್ತಿ ಮೂಲಕ ಸಮಾಗಮ ಮಾಡಿರುವುದು ಸಮಂಜಸವಾಗಿದೆ

Chikkaballapur News:ಸಹಸ್ರಾರು ಭಕ್ತರ ಜಯಘೋಷದ ನಡುವೆ ಸದ್ಗುರು ತಾತಯ್ಯನವರ ರಥೋತ್ಸವ ಸಂಪನ್ನ

ಜಯಘೋಷದ ನಡುವೆ ಸದ್ಗುರು ತಾತಯ್ಯನವರ ರಥೋತ್ಸವ ಸಂಪನ್ನ

ರಥೋತ್ಸವದ ಅಂಗವಾಗಿ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಮಠದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸದ್ಗುರು ಯೋಗಿನಾರೇಯಣ ತಾತಯ್ಯನವರ ಮೂಲ ವಿಗ್ರಹವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸದ್ಗುರು ತಾತಯ್ಯನವರ ಉತ್ಸವ ವಿಗ್ರಹಕ್ಕೆ ವಿಶೇಷ ಅಭಿಷೇಕ ಮತ್ತು ವೇದಘೋಷದೊಂದಿಗೆ ಅಷ್ಟಾವಧಾನ ಸೇವೆಯನ್ನು ಸಮರ್ಪಿಸಲಾಯಿತು.

ಮೀಸಲಾತಿ ಜಾರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆಯೇ ಇಲ್ಲ: ಛಲವಾದಿ ನಾರಾಯಣಸ್ವಾಮಿ

ಮೀಸಲಾತಿ ಜಾರಿಯಲ್ಲಿ ರಾಜ್ಯ ಸರ್ಕಾರ ಕಳ್ಳಾಟ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy: ಮೀಸಲಾತಿ ಮತ್ತು ಒಳಮೀಸಲಾತಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಕಳ್ಳಾಟ ಆಡುತ್ತಿದೆ. ಯಾರಾದರೂ ಕೋರ್ಟಿಗೆ ಹೋಗಲಿ, ಪ್ರಶ್ನೆ ಮಾಡಲಿ, ಹೇಗಾದರೂ ನಿಂತು ಹೋಗಲಿ ಎಂಬ ಮನಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಂತಿದೆ. ಇದರ ವಿರುದ್ಧ ಜನರ ಆಕ್ರೋಶ ಇದೆ. ಅದನ್ನು ಆಂದೋಲನವಾಗಿ ಪರಿವರ್ತಿಸುತ್ತೇವೆ. ಇಡೀ ರಾಜ್ಯದಲ್ಲಿ ದೊಡ್ಡ ಹೋರಾಟ ಆರಂಭವಾಗಲಿದೆ. ಇದರ ರೂಪರೇಷೆ ಚರ್ಚೆ ಮಾಡುತ್ತೇವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

Holi 2026: ಹಾವೇರಿ ಜಿಲ್ಲೆಯಲ್ಲಿ ಸಡಗರ ಸಂಭ್ರಮದಿಂದ ಹೋಳಿ ಆಚರಣೆ; ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನ

ಹಾವೇರಿ ಜಿಲ್ಲೆಯಲ್ಲಿ ಸಡಗರ ಸಂಭ್ರಮದಿಂದ ಹೋಳಿ ಆಚರಣೆ

Haveri News: ಹಾವೇರಿ ಸೇರಿದಂತೆ ಜಿಲ್ಲೆಯ ಬಹುತೇಕ ಹಳ್ಳಿ, ನಗರಗಳಲ್ಲಿ ಹೋಳಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಬುಧವಾರ ಬೆಳಿಗ್ಗೆಯೇ ನಗರದ ವಿವಿಧ ಗಲ್ಲಿ, ಓಣಿಗಳಲ್ಲಿ ಹೋಳಿ ಹಬ್ಬವು ತುಂಬಾ ಸಡಗರ ಸಂಭ್ರಮದಿಂದ ಜರುಗಿತು.

ನಮ್ಮದು ನಾಳೆ ಎನ್ನುವ ಸರ್ಕಾರವಲ್ಲ, ಇಂದೇ ಎನ್ನುವ ಸರ್ಕಾರ: ಡಿಸಿಎಂ ಡಿ.ಕೆ. ಶಿವಕುಮಾರ್

ನಮ್ಮದು ನಾಳೆ ಎನ್ನುವ ಸರ್ಕಾರವಲ್ಲ, ಇಂದೇ ಎನ್ನುವ ಸರ್ಕಾರ: ಡಿಕೆಶಿ

ಶಾಸಕರಾಗಿ, ಸಂಸದರಾಗಿ ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವರು ಇಲ್ಲಿಗೆ ಬಂದು ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡುತ್ತಾರೆ. ನಾಳೆ ಕೆಲಸ ಮಾಡುತ್ತೇವೆ ಎಂಬುದು ಶತೃತ್ವ, ಇವತ್ತೇ ಕೆಲಸ ಮಾಡುತ್ತೇವೆ ಎಂಬುದು ಮಿತ್ರತ್ವ. ನಾಳೆ ಯಾರು ಇರುತ್ತಾರೋ ಇರುವುದಿಲ್ಲವೋ ಗೊತ್ತಿಲ್ಲ. ಅಧಿಕಾರ ಇದ್ದಾಗ ನಾವು ಏನು ಮಾಡಿದೆವು ಎಂಬುದು ಮುಖ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Loading...