ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Electricity Bill: ಸದ್ಯದಲ್ಲೇ ಇನ್ನೊಂದು ದರ ಏರಿಕೆ ಶಾಕ್‌, ಎಸ್ಕಾಂಗಳಿಂದ ‌ಕರೆಂಟ್ ಬೆಲೆ ಏರಿಕೆಗೆ ಮನವಿ

ಸದ್ಯದಲ್ಲೇ ಇನ್ನೊಂದು ದರ ಏರಿಕೆ, ಎಸ್ಕಾಂಗಳಿಂದ ಕರೆಂಟ್ ಬೆಲೆ ಏರಿಕೆಗೆ ಮನವಿ

ರಾಜ್ಯದ ಎಲ್ಲಾ ಎಸ್ಕಾಂಗಳಿಂದಲೂ ವಿದ್ಯುತ್ ದರ ಏರಿಕೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) ಮನವಿ ಮಾಡಿದೆ. ಎಸ್ಕಾಂಗಳ ಖರ್ಚು ವೆಚ್ಚ ಸರಿದೂಗಿಸಲು ದರ ಏರಿಕೆ ಅಗತ್ಯ ಎಂದು ಸಂಸ್ಥೆಗಳು ಹೇಳಿವೆ. ವಿದ್ಯುಚ್ಛಕ್ತಿಗೆ ಯುನಿಟ್‌ಗೆ ಒಂದು ರೂ.ವರೆಗೆ ದರ ಏರಿಕೆಗೆ ಎಸ್ಕಾಂಗಳು ಮನವಿ ಸಲ್ಲಿಸಿವೆ.

Social Media: ರಾಜ್ಯದಲ್ಲಿ ಸೋಶಿಯಲ್ ಮೀಡಿಯಾ ಪೋಸ್ಟ್ ವಿರುದ್ಧ ಏಕಾಏಕಿ ಕೇಸ್‌ಗೆ ಬ್ರೇಕ್: ಮಾರ್ಗಸೂಚಿ ಪ್ರಕಟ

ಸೋಶಿಯಲ್ ಮೀಡಿಯಾ ಪೋಸ್ಟ್ ವಿರುದ್ಧ ಏಕಾಏಕಿ ಕೇಸ್‌ಗೆ ಬ್ರೇಕ್, ಮಾರ್ಗಸೂಚಿ

ಸುಪ್ರೀಂ ಕೋರ್ಟ್ ನಿಗದಿಪಡಿಸಿದಂತೆ ಪ್ರಾಥಮಿಕ ವಿಚಾರಣೆಗಳನ್ನು ಕೈಗೊಳ್ಳದೆ, ಪೊಲೀಸ್ ಅಧಿಕಾರಿಗಳು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದ ಪ್ರಕರಣವನ್ನು ಯಾಂತ್ರಿಕವಾಗಿ ದಾಖಲಿಸುತ್ತಿದ್ದಾರೆ. ಹೀಗಾಗಿ, ಸುಪ್ರೀಂ ಕೋರ್ಟ್, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ಉಂಟಾಗುವ ಪ್ರಕರಣಗಳಲ್ಲಿ FIR ಗಳ ನೋಂದಣಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ತೀರ್ಪಿನಲ್ಲಿ ಎತ್ತಿಹಿಡಿದಿದೆ.

Minister Chirag Paswan: "50 ವರ್ಷ್ಸ್, ಒನ್ ನೇಷನ್, ಕೌಂಟ್ಲೆಸ್ MAGGI ‘ಮೊಮೆಂಟ್ಸ್ ಆಫ್ ಟುಗೆದರ್ ನೆಸ್’ – ನೌ ಅಧಿಕ್ಯಲೀಸ್ಟ್ಯಾಂಪ್ಡ್"

ಕೌಂಟ್ಲೆಸ್ MAGGI ‘ಮೊಮೆಂಟ್ಸ್ ಆಫ್ ಟುಗೆದರ್ ನೆಸ್’

ಕಳೆದ ಐದು ದಶಕಗಳಲ್ಲಿಯೂ, MAGGI ವಿವಿಧ ರುಚಿಕರರೂಪಗಳಲ್ಲಿ ಭಾರತೀಯ ಮನೆಗಳಲ್ಲಿ ತನ್ನ ಸ್ಥಳವನ್ನು ಕಂಡುಕೊಂಡಿದೆ– ನೂಡಲ್ಸ್ ಮತ್ತು ಮಸಾಲಾ ಮಿಶ್ರಣಗಳಿಂದ ಶೋಸ್, ಸೂಪ್‌ಗಳುಮತ್ತು ತಯಾರಿಗಾಗಿ ಸಿದ್ಧವಾದ ಸವಿಯಲು ಬಳಸಬಹುದಾದಆಹಾರವರೆಗೂ. ತ್ವರಿತವಾಗಿ ತಯಾರಿಸುವ ಏಕಾಂಗಉಪಾಹಾರದಿಂದ ಕುಟುಂಬವನ್ನು ಒಟ್ಟಿಗೆ ತರಬಹುದಾದ ಊಟವರೆಗೆ, ಹಾಸ್ಟೆಲ್ ಅಡುಗೆ ಮನೆಗಳಿಂದ ದೊಡ್ಡ ಕೂಟದಸಂದರ್ಭಗಳವರೆಗೆ, MAGGI ದೇಶಾದ್ಯಂತ ಅನೇಕ ಆಹಾರದ ಕ್ಷಣಗಳಭಾಗವಾಗಿದೆ

Bagepally News: ಧರ್ಮಸ್ಥಳ ಸಂಸ್ಥೆಯಿಂದ ಅನಾಥ ವೃದ್ಧರಿಗೆ ವಾತ್ಸಲ್ಯ ಕಿಟ್ ವಿತರಣೆ

ಧರ್ಮಸ್ಥಳ ಸಂಸ್ಥೆಯಿಂದ ಅನಾಥ ವೃದ್ಧರಿಗೆ ವಾತ್ಸಲ್ಯ ಕಿಟ್ ವಿತರಣೆ

ಪೂಜ್ಯ ವೀರೇಂದ್ರಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು ನಿರಾಶ್ರಿತರಿಗೆ ನೆರವಾಗ ಬೇಕು ಅವರ ನೋವಿನೋಂದಿಗೆ ನಾವು ಇರಬೇಕು ಎನ್ನುವ ಸದುದ್ದೇದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕವೆ ಹತ್ತಾರು ಜನಪರ ಯೋಜನೆ ಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಮಾಸಾಶನ ಮತ್ತು ವಾಸ್ತಲ್ಯ ಕಿಟ್ ವಿತರಣೆಗಳು ಸೇರಿವೆ

Dr. M.C. Sudhakar: 2027ರ ಹೊತ್ತಿಗೆ ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯಲಿದೆ : ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್

2027ರ ಹೊತ್ತಿಗೆ ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯಲಿದೆ

2014ರಲ್ಲಿ ಎತ್ತಿನ ಹೊಳೆ ಯೋಜನೆ ಶಂಕುಸ್ಥಾಪನೆ ಪ್ರಾರಂಭವಾಗಿದ್ದು ಚಿಕ್ಕಬಳ್ಳಾಪುರದಲ್ಲಿ ತಾನೆ.ಆಗಿನಿಂದ ಈವರೆಗೆ ಎಷ್ಟೆಲ್ಲಾ ಸರಕಾರಗಳು ಬದಲಾಗಿವೆ, ಯರ‍್ಯಾರು ಸಚಿವರಾಗಿದ್ದರು ಎಂಬುದು ಗೊತ್ತಿದೆ. ಆಗಿನಿಂದಲೇ ಕಾಲಮಿತಿಯಲ್ಲಿ ಈ ಯೋಜನೆ ಮುಗಿಸಿದ್ದರೆ ಅನುದಾನದ ಗಾತ್ರ ಹಿಗ್ಗುತ್ತಲೇ ಇರಲಿಲ್ಲ. 12 ವರ್ಷಗಳಲ್ಲ ಸಿಮೆಂಟ್, ಕಲ್ಲು ಕಬ್ಬಿಣ, ಭೂಮಿ ಬೆಲೆ ಹೆಚ್ಚಿದಂತೆ ಪ್ರಾಜೆಕ್ಟ್ ಗಾತ್ರವೂ ಹಿಗ್ಗುವುದು ಸಹಜ.

Bagepally News: ಖಾಸಗಿ ಶಾಲೆಗಳು ವ್ಯಾಮೋಹಕ್ಕೆ ಒಳಗಾಗದೆ ಪಿ.ಎಂ.ಶ್ರೀ ಶಾಲೆಗೆ ಸೇರಿಸಿ: ಆರ್.ಹನುಮಂತ ರೆಡ್ಡಿ ಮನವಿ

ಖಾಸಗಿ ಶಾಲೆಗಳು ವ್ಯಾಮೋಹಕ್ಕೆ ಒಳಗಾಗದೆ ಪಿ.ಎಂ.ಶ್ರೀ ಶಾಲೆಗೆ ಸೇರಿಸಿ

ಸೆಹಗಲ್ ಫೌಂಡೇಷನ್ ಶಾಲಾ ಆವರಣದಲ್ಲಿ ಹೆಣ್ಣುಮಕ್ಕಳಿಗೆ ಹೈಟೆಕ್ ಶೌಚಾಲಯ ನಿರ್ಮಿಸಿದೆ. ಹಾಲು ಒಕ್ಕೂಟದ ನಿರ್ದೇಶಕ ವಿ.ಮಂಜುನಾಥರೆಡ್ಡಿ 3 ಕಂಪ್ಯೂಟರ್, ಶಾಸಕ ಎಸ್.ಎನ್. ಸುಬ್ಬಾ ರೆಡ್ಡಿ ನಿರ್ವಹಣಾ ವೆಚ್ಚಕ್ಕೆ ₹2 ಲಕ್ಷ ಅನುದಾನ ನೀಡಿದ್ದು, ಖಾಸಗಿ ಸಂಘ, ಸಂಸ್ಥೆಗಳಿಂದ ಹಾಗೂ ಜನಪ್ರತಿನಿಧಿಗಳು ಶಾಲೆಯ ಪ್ರಗತಿಗೆ ಸಹಕಾರ ನೀಡಿದ್ದಾರೆ

Chikkaballapur News: 70ರ ದಶಕದ ದಸಂಸ ಎಲ್ಲಾ ಹೋರಾಟಗಳ ಮಹಾಮನೆ, ಇತಿಹಾಸ ಮರುಕಳಿಸಬೇಕಿದೆ : ಬಿ.ವಿ. ಆನಂದ್ ಅಭಿಮತ

70ರ ದಶಕದ ದಸಂಸ ಎಲ್ಲಾ ಹೋರಾಟಗಳ ಮಹಾಮನೆ: ಇತಿಹಾಸ ಮರುಕಳಿಸಬೇಕಿದೆ

ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಭವಿಷ್ಯ ನಿರ್ಮಾಣದಲ್ಲಿ ದಸಂಸ ಪಾತ್ರ ದೊಡ್ಡದಿದೆ. 70ರ ದಶಕದಿಂದ ಈತನಕ ಲಕ್ಷಾಂತರ ಮಂದಿ ಕಾರ್ಯಕರ್ತರ ಮುಖಂದರ ತ್ಯಾಗ ಬಲಿದಾನವಿದೆ. ಸಮ ಸಮಾಜದ ಆಶಯವಿದೆ ನಿಷ್ಕಲ್ಮಶ ಹೋರಾಟವಿದೆ. 50 ವರ್ಷಗಳ ಈ ಸುದೀರ್ಘ ಇತಿಹಾಸದಲ್ಲಿ ಒಟ್ಟಾಗಿದ್ದ ದಸಂಸ ಬಣಗಳಾಗಿ ವಿಭಜನೆಯಾಗಿದೆ.

ಬೆಂಗಳೂರಿನಲ್ಲಿ 3 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯ‌ರ್

3 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಬೆಸ್ಕಾಂ ಎಂಜಿನಿಯ‌ರ್ ಅರೆಸ್ಟ್‌

Lokayukta Raid: ವಿದ್ಯುತ್ ಮೀಟರ್ ಸಂಪರ್ಕ ಮರುಚಾಲನೆ ಮತ್ತು ನೂತನ ಸಂಪರ್ಕ ನೀಡಲು 3 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಬೆಂಗಳೂರಿನ ಇಂದಿರಾನಗರದ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯ‌ರ್ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್‌ ದೇವರಾಜ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.

ಉಚಿತ ಸ್ಪೆಷಲ್‌ ಇ ಖಾತಾ ಅಭಿಯಾನ ಪ್ರಾರಂಭಕ್ಕೆ ಡಿ.ಕೆ. ಶಿವಕುಮಾರ್‌ ಸೂಚನೆ

ಉಚಿತ ಇ ಖಾತಾ ಅಭಿಯಾನ ಪ್ರಾರಂಭಕ್ಕೆ ಡಿ.ಕೆ. ಶಿವಕುಮಾರ್‌ ಸೂಚನೆ

ಆಸ್ತಿ ದಾಖಲೆಗಳ ಡಿಜಿಟಲೀಕರಣ ಈ ವರ್ಷದ ಪ್ರಮುಖ ತೀರ್ಮಾನ. ಏಕೆಂದರೆ ಕಳೆದ 50 ವರ್ಷಗಳಿಂದಲೂ ಇದು ಮುನ್ನೆಲೆಗೆ ಬಂದಿರಲಿಲ್ಲ. ಈ ಹಿಂದೆ ಕೃಷಿ ಭೂಮಿ ಡಿಜಿಟಲೀಕರಣಕ್ಕೆ ಭೂಮಿ ಯೋಜನೆ ತರಲಾಗಿತ್ತು. ನಮ್ಮ ಬೆಂಗಳೂರಿನ ಎಲ್ಲಾ ಆಸ್ತಿ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಇ – ಖಾತೆ ವ್ಯವಸ್ಥೆ ತರಬೇಕು ಎಂದು ಹೊರಟಿದ್ದೇವೆ. ಈ ಮೂಲಕ ತೆರಿಗೆ ಸೋರಿಕೆ ತಡೆಯಬೇಕು ಎಂಬುದು ನಮ್ಮ ಉದ್ದೇಶ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಡಿಸಿಎಂ, ಕೆಪಿಸಿಸಿ ಅಧ್ಯಕ್ಷನಾಗಿ ದೆಹಲಿಗೆ ಭೇಟಿ; ಸಿಎಂ ಅನುಮತಿ ಪಡೆಯುವೆ ಎಂದ ಡಿ.ಕೆ.ಶಿವಕುಮಾರ್‌

ಡಿಸಿಎಂ, ಕೆಪಿಸಿಸಿ ಅಧ್ಯಕ್ಷನಾಗಿ ದೆಹಲಿಗೆ ಭೇಟಿ ನೀಡುತ್ತಿರುವೆ: ಡಿಕೆಶಿ

DK Shivakumar: ದೆಹಲಿ ಪ್ರವಾಸದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ. ದೆಹಲಿ ಪ್ರವಾಸದಲ್ಲಿ ರಾಜಕಾರಣ ಜತೆಗೆ ಕೇಂದ್ರ ಜಲಶಕ್ತಿ ಸಚಿವರು, ಕಾನೂನು ತಜ್ಞರನ್ನು ಭೇಟಿ ಮಾಡುತ್ತಿರುವೆ ಎಂದು ಹೇಳಿದ್ದಾರೆ.

ಭಾರತ-ಚೀನಾ ಗಡಿ ಸಂಘರ್ಷದ ವೇಳೆಯೇ ಪ್ರಧಾನಿ ಮೋದಿ ಟೊಳ್ಳುತನ ಜಗಜ್ಜಾಹೀರಾಗಿದೆ: ಸಿಎಂ ಟೀಕೆ

ಲೋಕಸಭೆಗೆ ಪ್ರಧಾನಿ ಮೋದಿ ಗೈರಾಗಿರುವುದು ನಾಚಿಕೆಗೇಡು: ಸಿಎಂ

ಪ್ರಧಾನಿಯವರ ಈ ಪಲಾಯನವಾದಿ ನಡೆಯು ಸಂಸತ್ತಿನಲ್ಲಿ ಚರ್ಚೆ ಆಗಬಾರದೆಂಬ ಕಾರಣಕ್ಕೆ ರಾಹುಲ್ ಗಾಂಧಿಯವರು ಭಾಷಣ ಮಾಡದಂತೆ ತಡೆಯಲಾಗಿದೆ. ದೇಶದ ಬಹುಸಂಖ್ಯೆಯ ಜನರನ್ನು ಪ್ರತಿನಿಧಿಸುವ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದಿದ್ದು ನಮ್ಮ ಸರ್ಕಾರವೇ ಎಂದ ಡಿ.ಕೆ. ಶಿವಕುಮಾರ್‌

ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದಿದ್ದು ರಾಜ್ಯ ಸರ್ಕಾರ: ಡಿಕೆಶಿ

Bengaluru metro fare hike: ಮೆಟ್ರೋ ಪ್ರಯಾಣ ದರ ಏರಿಕೆ ತಡೆ ಹಿಡಿಯಿರಿ ಎಂದು ಕೇಂದ್ರ ಸರ್ಕಾರದವರು ಪತ್ರ ಬರೆದಿರಬಹುದು. ಆದರೆ ಈ ರೀತಿ ಮಾಡಲು ಅವರಿಗೂ ಕಾನೂನಿನಲ್ಲಿ ಅವಕಾಶವಿಲ್ಲ. ಅವರು ಯಾವ ಕಾನೂನಿನ ಅಡಿ, ಯಾವ ಆಕ್ಟ್‌ ಅನ್ವಯ ಪತ್ರ ಬರೆದಿದ್ದಾರೆ ಎಂದು ಹೇಳಿದರೆ ಒಪ್ಪಿಕೊಳ್ಳೋಣ. ಇದನ್ನು ಹೊಸದಾಗಿ ತೀರ್ಮಾನ ಮಾಡಬೇಕು ಎಂದಾದರೆ ನೂತನ ದರ ನಿಗದಿ ಸಮಿತಿ ರಚನೆ ಆಗಬೇಕು. ನಾನು ನಮ್ಮ ಜನರ ದನಿಯಾಗಬೇಕು ಎಂದು ಕೆಲಸ ಮಾಡುತ್ತಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಉಕ್ಕು ಉದ್ಯಮಕ್ಕೆ ಮತ್ತಷ್ಟು ಬಲ; ಪಿಎಲ್ಐ 1.2 ಆರಂಭಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಉಕ್ಕು ಉದ್ಯಮಕ್ಕೆ ಮತ್ತಷ್ಟು ಬಲ; ಪಿಎಲ್ಐ 1.2 ಆರಂಭಿಸಿದ ಎಚ್‌ಡಿಕೆ

HD Kumaraswamy: ಪಿಎಲ್ಐ ಯೋಜನೆ 1.2ರ ಅಡಿಯಲ್ಲಿ 85 ಒಪ್ಪಂದಗಳಿಗೆ 55 ಕಂಪನಿಗಳೊಂದಿಗೆ ತಿಳಿವಳಿಕೆ ಪತ್ರಗಳಿಗೆ ಸಹಿ ಹಾಕಲಾಗಿದ್ದು, ₹11,887 ಕೋಟಿ ಹೂಡಿಕೆ ಮಾಡಲಾಗಿದೆ. ಈ ಯೋಜನೆಗಳು 2031ರ ಹಣಕಾಸು ವರ್ಷದ ವೇಳೆಗೆ 8.7 ಮಿಲಿಯನ್ ಟನ್ ವಿಶೇಷ ಉಕ್ಕಿನ ಉತ್ಪಾದನಾ ಸಾಮರ್ಥ್ಯವನ್ನು ಹೊಂದುವ ನಿರೀಕ್ಷೆಯಿದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಮೈಸೂರು ಸ್ಯಾಂಡಲ್ ಸೋಪ್‌ ರಾಯಭಾರಿಯಾಗಿ ಪ್ರಚಾರ ಕಾರ್ಯ ಆರಂಭಿಸಿದ ನಟಿ ತಮನ್ನಾ

ಸ್ಯಾಂಡಲ್ ಸೋಪ್‌ ರಾಯಭಾರಿಯಾಗಿ ನಟಿ ತಮನ್ನಾ ಪ್ರಚಾರ ಆರಂಭ

Mysore Sandal Soap brand ambassador: ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್‌ಡಿಎಲ್) ಸಂಸ್ಥೆಯು ತಮನ್ನಾ ಭಾಟಿಯಾ ಅವರೊಂದಿಗೆ ಎರಡು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ಅವರಿಗೆ 6.2 ಕೋಟಿ ಸಂಭಾವನೆ ನೀಡಲಾಗುತ್ತಿದೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟ ಖಾಲಿ ಟ್ರಂಕ್ ಹಿಡಿದಿರುವ ತೇಜಸ್ವಿ ಸೂರ್ಯ: ಡಿ.ಕೆ. ಸುರೇಶ್ ವ್ಯಂಗ್ಯ

ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟ ಕೊಡುಗೆ ಪಟ್ಟಿ ಹೇಳಲಿ: ಡಿ.ಕೆ. ಸುರೇಶ್

DK Suresh: ಸಂಸದ ತೇಜಸ್ವಿ ಸೂರ್ಯ ಖಾಲಿ ಟ್ರಂಕ್ ಹಿಡಿದಿರುವುದು, ಕರ್ನಾಟಕದ 4.5- 5 ಲಕ್ಷ ಕೋಟಿ ತೆರಿಗೆ ಹಣವನ್ನು ಲೂಟಿ ಮಾಡಿಕೊಂಡು ಹೋಗುತ್ತಿರುವುದನ್ನು ತೋರಿಸಲು. ಕೇಂದ್ರ ಸರ್ಕಾರ ಕಳೆದ 12 ವರ್ಷಗಳಿಂದ ಕರ್ನಾಟಕಕ್ಕೆ ಕೊಟ್ಟಿರುವ ಕೊಡುಗೆ ಪಟ್ಟಿ ಹೇಳಲಿ. ಬೆಂಗಳೂರಿಗೆ ಅವರ ಕೊಡುಗೆ ಖಾಲಿ ಡಬ್ಬ ಎಂದು ತೇಜಸ್ವಿ ಸೂರ್ಯ ತೋರಿಸುತ್ತಿರುವುದನ್ನು ಮಾಧ್ಯಮಗಳು ಚೆನ್ನಾಗಿ ತೋರಿಸಿ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಕಿಡಿಕಾರಿದ್ದಾರೆ.

Nandini Brand Ambassador: ನಂದಿನಿ ಬಮುಲ್ ಉತ್ಪನ್ನಗಳ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ನೇಮಕ

ನಂದಿನಿ ಬಮುಲ್ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ನೇಮಕ

Nandini BAMUL: ನಂದಿನಿ ಬಮುಲ್‌ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ಅವರು ಆಯ್ಕೆಯಾಗಿದ್ದು, ಬಮುಲ್‌ ಕುಟುಂಬಕ್ಕೆ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮುಲ್‌) ಅಧ್ಯಕ್ಷ ಡಿ.ಕೆ.ಸುರೇಶ್‌ ತಿಳಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಕಾಲೇಜು ವಿದ್ಯಾರ್ಥಿನಿಯ ಕಿಡ್ನ್ಯಾಪ್‌ಗೆ ಯತ್ನ; ತಪ್ಪಿಸಿಕೊಳ್ಳುವ ವೇಳೆ ಚಾಕು ಇರಿತ

ಬೆಳ್ತಂಗಡಿಯಲ್ಲಿ ಕಾಲೇಜು ವಿದ್ಯಾರ್ಥಿನಿಯ ಕಿಡ್ನ್ಯಾಪ್‌ಗೆ ಯತ್ನ

Kidnap Attempt: ಬೆಳ್ತಂಗಡಿ ಪಟ್ಟಣದ ಸಮೀಪ ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ ನಡೆದಿದೆ. ಬಾಲಕಿ ಸ್ಕೂಟಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದ ವೇಳೆ ನಿರ್ಜನ ಪ್ರದೇಶವೊಂದರಲ್ಲಿ ಕಾರಿನಲ್ಲಿ ಬಂದ ಮೂವರು ಅಪರಿಚಿತರು ಕಿಡ್ನ್ಯಾಪ್‌ಗೆ ಯತ್ನಿಸಿದ್ದಾರೆ. ಬೆಳ್ತಂಗಡಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಭದ್ರಾವತಿಯಲ್ಲಿ ಕ್ರೈಸ್ತ ಧರ್ಮ ಸೇರಿದ ಹಿಂದೂ ಮಹಿಳೆ; ಮತಾಂತರವಾಗಲು ಗಂಡ, ಮಕ್ಕಳಿಗೂ ಕಿರುಕುಳ!

ಕ್ರೈಸ್ತ ಧರ್ಮ ಸೇರಿದ ಹಿಂದೂ ಪತ್ನಿ; ಪತಿಯಿಂದ ದೂರು

ನನ್ನ ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಈಗ ನನ್ನನ್ನೂ ಹಾಗೂ ನನ್ನ ಇಬ್ಬರು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನೂ ಮತಾಂತರಗೊಳ್ಳುವಂತೆ ಒತ್ತಾಯಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Bengaluru Power Cut: ಫೆ.10ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಫೆ.10ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

BESCOM News: ಕೆಪಿಟಿಸಿಎಲ್ ವತಿಯಿಂದ ಜಾಲಹಳ್ಳಿ ವಿಭಾಗದ 66/11 ಕೆವಿ ಎ೦.ಇ.ಐ ಸಬ್‌ಸ್ಟೇಷನ್ ಉಪಕೇಂದ್ರದಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಫೆ.10ರಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ವಾಣಿಜ್ಯ ನಗರಿಯಲ್ಲಿ ಸಾಂಸ್ಕೃತಿಕ ರಸದೌತಣ; ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಅದ್ಧೂರಿ ತೆರೆ

ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಅದ್ಧೂರಿ ತೆರೆ

International Kite Festival-2026: ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ʼಅಂತಾರಾಷ್ಟ್ರೀಯ ಗಾಳಿಪಟ ಉತ್ಸವʼ ಮತ್ತು ಸಂಸದರ ಕ್ರೀಡಾ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಸತತ ಏಳನೇ ಬಾರಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರ ಸಾರಥ್ಯದಲ್ಲಿ ಆಯೋಜಿಸಿದ್ದ ’ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ-2026' ಕ್ಕೆ ಈ ಬಾರಿ ಹಿಂದೆಂದಿಗಿಂತ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಮುಗಿಲೆತ್ತರಕ್ಕೆ ಕಲರ್ ಕಲರ್ ಗಾಳಿಪಟಗಳನ್ನು ಹಾರಿಬಿಟ್ಟು ಸಹಸ್ರಾರು ಜನರ ಕಣ್ಣರಳಿಸಿದರು.

ಮಂಡ್ಯದಲ್ಲಿ ಘೋರ ಘಟನೆ; ಪಕ್ಕದ ಮನೆಯವರ ಕಿರುಕುಳ, ಬೆದರಿಕೆಗೆ ಬೇಸತ್ತು ತಾಯಿ-ಮಗಳು ಆತ್ಮಹತ್ಯೆ

ಪಕ್ಕದ ಮನೆಯವರ ಕಿರುಕುಳಕ್ಕೆ ಬೇಸತ್ತು ತಾಯಿ-ಮಗಳು ಆತ್ಮಹತ್ಯೆ

Mandya News: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿ ಘಟನೆ ನಡೆದಿದೆ. ಪಕ್ಕದ ಮನೆಯವರ ಬೆದರಿಕೆಗೆ ಹೆದರಿ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.

Computer Cleanup Day: ಇಂದು ಕಂಪ್ಯೂಟರ್‌ ಸ್ವಚ್ಛತಾ ದಿನ

ಇಂದು ಕಂಪ್ಯೂಟರ್‌ ಸ್ವಚ್ಛತಾ ದಿನ

ದಿನವಿಡೀ ನಮ್ಮ ಕೆಲಸದ ಅವಿಭಾಜ್ಯ ಅಂಗವಾಗಿರುವ ಕಂಪ್ಯೂಟರ್‌ ಅಥವಾ ಲ್ಯಾಪ್‌ ಟಾಪ್‌ಗಳ ಸ್ವಚ್ಛತೆಯ ಬಗ್ಗೆ ಎಷ್ಟು ಗಮನ ಹರಿಸುತ್ತೇವೆ? ಈ ಪ್ರಶ್ನೆಯನ್ನು ನೆನಪಿಸಲು ಮತ್ತು ಡಿಜಿಟಲ್ ಶಿಸ್ತನ್ನು ಮೈಗೂಡಿಸಿಕೊಳ್ಳಲು ಪ್ರತಿ ವರ್ಷ ಫೆಬ್ರವರಿ ತಿಂಗಳ 2ನೇ ಸೋಮವಾರದಂದು (ಫೆ.9)‘ರಾಷ್ಟ್ರೀಯ ಕಂಪ್ಯೂ ಟರ್ ಸ್ವಚ್ಛತಾ ದಿನ’ವನ್ನು ಆಚರಿಸಲಾಗುತ್ತದೆ.

Tejasvi Surya: ನಮ್ಮ ಮೆಟ್ರೋ ದರ ಏರಿಕೆಗೆ ಸಂಸದ ತೇಜಸ್ವಿ ಸೂರ್ಯ ಖಾಲಿ ಟ್ರಂಕ್‌ ಹಿಡಿದು ಪ್ರತಿಭಟನೆ, ಬಂಧನ

ನಮ್ಮ ಮೆಟ್ರೋ ದರ ಏರಿಕೆಗೆ ಸಂಸದ ತೇಜಸ್ವಿ ಸೂರ್ಯ ಪ್ರತಿಭಟನೆ, ಬಂಧನ

ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಉತ್ತಮ ಮೂಲಸೌಕರ್ಯಕ್ಕೆ ಬೇಡಿಕೆ ಇಟ್ಟರೆ ಬಂಧನವಾಗುತ್ತದೆ. ಉತ್ತಮ ಬೆಂಗಳೂರಿಗಾಗಿ ಹೋರಾಟ ಮಾಡುವುದು ಅಪರಾಧವಾಗಿದ್ದರೆ, ನಾನು ಸಾವಿರ ಬಾರಿ ಬಂಧನಕ್ಕೊಳಗಾಗಲು ಸಿದ್ಧ ಎಂದು ತೇಜಸ್ವಿ ಸೂರ್ಯ ಹೇಳಿದರು.

Crime news: ಪ್ರಿಯಕರನಿಗೆ ತಾಯಿ, ಸಂಬಂಧಿಯ ಖಾಸಗಿ ಫೋಟೋ ಕಳಿಸಿದ ಪಾಪಿ ಮಗಳು!

ಪ್ರಿಯಕರನಿಗೆ ತಾಯಿ, ಸಂಬಂಧಿಯ ಖಾಸಗಿ ಫೋಟೋ ಕಳಿಸಿದ ಮಗಳು!

ತಾಯಿ ಮತ್ತು ಆಂಟಿ ಮಲಗಿದ್ದಾಗ ಖಾಸಗಿ ಫೋಟೋ ತೆಗೆದು ಮಗಳು ಪ್ರಿಯಕರನಿಗೆ ಕಳುಹಿಸಿದ್ದಾಳೆ. ಈ ಕುರಿತು ಪ್ರಶ್ನೆ ಮಾಡಿದಾಗ ಆತನನ್ನೇ ಮದುವೆಯಾಗುವುದಾಗಿ ಮಗಳು ಹಠಕ್ಕೆ ಬಿದ್ದಿದ್ದಾಳೆ. ಮಗಳಿಗೆ ಬುದ್ಧಿ ಹೇಳಿ ತಾಯಿ ಫೋಟೋಗಳನ್ನು ಡಿಲೀಟ್ ಮಾಡಿಸಿದ್ದಾರೆ. ಮಗಳು ಮತ್ತು ಆಕೆಯ ಪ್ರಿಯಕರನ ವಿರುದ್ಧ ತಾಯಿ ಠಾಣೆಗೆ ದೂರು ನೀಡಿದ್ದಾರೆ.

Loading...