ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ವೈರಲ್ 'ದುಬೈ ಚಾಕೊಲೇಟ್'ಗೆ ಈಗ ಫುಲ್‌ ಡಿಮ್ಯಾಂಡ್‌; ಬೆಂಗಳೂರಿಗರ ಚಾಕೊಲೇಟ್ ಕ್ರೇಜ್‌ ಬಿಚ್ಚಿಟ್ಟ ಇನ್‌ಸ್ಟಾಮಾರ್ಟ್‌!

ವೈರಲ್ 'ದುಬೈ ಚಾಕೊಲೇಟ್'ಗೆ ಈಗ ಫುಲ್‌ ಡಿಮ್ಯಾಂಡ್‌!

Instamart: ಜುಲೈ 2025 ರಿಂದ ಜೂನ್ 2026 ರವರೆಗೆ ದೇಶದ 130ಕ್ಕೂ ಹೆಚ್ಚು ನಗರಗಳಲ್ಲಿ ಗ್ರಾಹಕರು ಮಾಡಿರುವ ಆರ್ಡರ್‌ಗಳ ಡೇಟಾವನ್ನು ಇನ್‌ಸ್ಟಾಮಾರ್ಟ್ ವಿಶ್ಲೇಷಿಸಿದ್ದು, ವರದಿಯೊಂದನ್ನು ತಯಾರಿಸಿದೆ. ಇದರಲ್ಲಿ ಹಲವು ಅಚ್ಚರಿಯ ವಿಚಾರಗಳು ಹೊರಬಿದ್ದಿವೆ. ಈ ಬಗ್ಗೆ ಡಿಟೇಲ್ಸ್‌ ಇಲ್ಲಿದೆ.

PM Narendra Modi: ವಿವಾಹ ಜೀವನಕ್ಕೆ ಶುಭ ಹಾರೈಸಿದ ಪ್ರಧಾನಿ ಮೋದಿ; ನಮೋ ಪತ್ರ ನೋಡಿ ಚಿಕ್ಕಬಳ್ಳಾಪುರದ ನವದಂಪತಿ ಫುಲ್‌ ಖುಷ್‌!

ಚಿಕ್ಕಬಳ್ಳಾಪುರದ ನವದಂಪತಿಗೆ ಶುಭ ಹಾರೈಸಿದ ಪ್ರಧಾನಿ ಮೋದಿ

ಚಿಕ್ಕಬಳ್ಳಾಪುರ ತಾಲೂಕಿನ ನುಗುತಹಳ್ಳಿಯ ಯುವಕ ಮಂಜುನಾಥ್ ಹಾಗೂ ತೋಕಲಘಟ್ಟದ ಯುವತಿ ವಿದ್ಯಾಶ್ರೀ ಅವರ ವಿವಾಹವು ಕಳೆದ ಮೇ 13 ರಂದು ಚಿಕ್ಕಬಳ್ಳಾಪುರದ ಕಂದವಾರ ಬಾಗಿಲಿನ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಜೋಡಿಯು ತಮ್ಮ ಮದುವೆಯ ಲಗ್ನ ಪತ್ರಿಕೆಯನ್ನು ಪೋಸ್ಟ್ ಮೂಲಕ ಕಳುಹಿಸಿ ಆಮಂತ್ರಿಸಿತ್ತು.

Bengaluru Murder: ಬಾರ್‌ನಲ್ಲಿ ಜಸ್ಟ್ ಗುರಾಯಿಸಿದ್ದಕ್ಕೆ ಚಾಕು ಇರಿದು ಯುವಕನ ಬರ್ಬರ ಹತ್ಯೆ!

ಜಸ್ಟ್ ಗುರಾಯಿಸಿದ್ದಕ್ಕೆ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!

ಬಾರ್‌ನಲ್ಲಿ ಗುರಾಯಿಸಿ ನೋಡಿದ್ದಾನೆ ಎಂಬ ಕಾರಣಕ್ಕೆ ಅಪರಿಚಿತ ವ್ಯಕ್ತಿಗಳು ಗಲಾಟೆ ಆರಂಭಿಸಿ, ಹಲ್ಲೆ ಮಾಡಿದ್ದಾರೆ. ಇದರಿಂದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಬೆಂಗಳೂರಿನಲ್ಲಿ ಮತ್ತೊಂದು ರೋಡ್‌ ರೇಜ್‌; ರಸ್ತೆ ಮಧ್ಯೆಯೇ ಕಾರ್ ಅಡ್ಡಗಟ್ಟಿ ಕುಟುಂಬದ ಮೇಲೆ ಅಪರಿಚಿತರಿಂದ ಹಲ್ಲೆ

ಬೆಂಗಳೂ ಕಾರಿನಲ್ಲಿ ಅಡ್ಡಗಟ್ಟಿ ಹಲ್ಲೆ ಎಸಗಿದ ದುಷ್ಕರ್ಮಿಗಳು: ವಿಡಿಯೊ ವೈರಲ್

Viral Video: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬದ ಮೇಲೆ ಅಪರಿಚಿತ ಪುರುಷರ ಗುಂಪೊಂದು ಹಲ್ಲೆ ಎಸಗಿರುವ ಘಟನೆಯೊಂದು ನಡೆದಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಈ ಭೀಕರ ಕೃತ್ಯ ನಡೆದಿದೆ‌. ಹಿಂದೆ ಚಲಿಸುತ್ತಿದ್ದ ವಾಹನದ ಡ್ಯಾಶ್‌ಕ್ಯಾಮ್‌ನಲ್ಲಿ ಈ ಘಟನೆ ಸೆರೆಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನನಗೆ ಬದುಕು ಸಾಕಾಗಿದೆ; ಪ್ರಿಯಕರನಿಗೆ ಕೊನೆಯ ಮೆಸೇಜ್‌ ಮಾಡಿ ಸ್ಯಾಂಕಿ ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಪ್ರೀತಿಗೆ ಪೋಷಕರ ವಿರೋಧ; ಸ್ಯಾಂಕಿ ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

Bengaluru Student Suicide: ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಕಾಲೇಜಿನಲ್ಲಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಇದಕ್ಕೆ ಪೋಷಕರು ಬುದ್ಧಿವಾದ ಹೇಳಿದ್ದರು. ಇದರಿಂದ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಕಲಬುರಗಿಯನ್ನ ಬರಪೀಡಿತ ಜಿಲ್ಲೆಯೆಂದು ಘೋಷಿಸಲು ಸಿಎಂಗೆ ಬಿಜೆಪಿ ನಿಯೋಗ ಮನವಿ

ಕೃಷಿ ಸಾಲ ಮನ್ನಾ, ಎಕರೆಗೆ 50 ಸಾವಿರ ಪರಿಹಾರಕ್ಕೆ ಆಗ್ರಹ

ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ್ ಜಾಧವ್, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಡಾ. ಬಿ.ಜಿ ಪಾಟೀಲ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ನಿಯೋಗವು, ಜಿಲ್ಲೆಯ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿತು.

KKCCI: ಕಲ್ಯಾಣ ಕರ್ನಾಟಕದ ಸಮಗ್ರ ಪ್ರಗತಿಗೆ ವಿಶೇಷ ‘ಬೆಳವಣಿಗೆ ಮಿಷನ್’ ಆರಂಭಿಸಿ: ಸಿಎಂಗೆ ಕೆಕೆಸಿಸಿಐ ಮನವಿ

ಕಲ್ಯಾಣ ಕರ್ನಾಟಕದ ಸಮಗ್ರ ಪ್ರಗತಿಗೆ ವಿಶೇಷ ‘ಬೆಳವಣಿಗೆ ಮಿಷನ್’ ಆರಂಭಿಸಿ

ಕಲ್ಯಾಣ ಕರ್ನಾಟಕ ಪ್ರವಾಸ ನಿಮಿತ್ತ ಕಲಬುರಗಿಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (Chief Minister D K Shivkumar) ಅವರಿಗೆ ಮಂಗಳವಾರ ನಗರದ ಐವಾನ್-ಏ-ಶಾಹಿ ಅತಿಥಿ ಗೃಹದಲ್ಲಿ ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ ಹಾಗೂ ಗೌರವ ಕಾರ್ಯದರ್ಶಿ ಶಿವರಾಜ್ ಇಂಗಿನಶೆಟ್ಟಿ ಅವರು, 18 ಪ್ರಮುಖ ಬೇಡಿಕೆಗಳನ್ನೊಳಗೊಂಡ ಜ್ಞಾಪನಾ ಪತ್ರವನ್ನು ಸಲ್ಲಿಸಿದರು

ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ ಡಿ.ಕೆ.ಶಿವಕುಮಾರ್: ಅತಿಥಿ ಗೃಹಕ್ಕೆ ಹರಿದುಬಂದ ಜನಸಾಗರ

ರೈತರು, ಸಾರ್ವಜನಿಕರು, ಮುಖಂಡರಿಂದ ಮುಖಾಮುಖಿ ಭೇಟಿ

ಬೆಳಿಗ್ಗೆಯಿಂದಲೇ ಜಿಲ್ಲೆಯ ಮೂಲೆ ಮೂಲೆಗಳಿಂದ ಹಾಗೂ ಕಲ್ಯಾಣ ಕರ್ನಾಟಕದ ವಿವಿಧ ಭಾಗ ಗಳಿಂದ ಆಗಮಿಸಿದ್ದ ನೂರಾರು ಸಾರ್ವಜನಿಕರು ಮತ್ತು ರೈತರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಸರತಿಯಲ್ಲಿ ನಿಂತಿದ್ದರು. ಪ್ರತಿಯೊಬ್ಬರನ್ನೂ ಮುಖಾಮುಖಿಯಾಗಿ ಮಾತನಾಡಿಸಿದ ಮುಖ್ಯಮಂತ್ರಿಗಳು, ಅವರ ಕೈಯಿಂದಲೇ ಮನವಿ ಪತ್ರಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಸಮಾಧಾನ ದಿಂದ ಆಲಿಸಿದರು.

CM DK Shivakumar: ಕಾನೂನು ಚೌಕಟ್ಟಿನಲ್ಲಿ ಬರಗಾಲ ಪರಿಸ್ಥಿತಿ ಪರಾಮರ್ಶೆ, ಬರ ಪರಿಹಾರಕ್ಕೆ ಚಿಂತನೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಬರ ಪರಿಹಾರಕ್ಕೆ ಚಿಂತನೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕಲಬುರಗಿ ವಿಭಾಗದ ಪ್ರಗತಿ ಹಾಗೂ ಬರ ಪರಿಸ್ಥಿತಿಯ ಅವಲೋಕನಕ್ಕಾಗಿ ಆಗಮಿಸಿರುವ ಮುಖ್ಯ ಮಂತ್ರಿಗಳು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಸ್ವತಃ ಎಲ್ಲಾ ಜಿಲ್ಲೆಗಳ ಪ್ರವಾಸ ಕೈಗೊಂಡು ಜನರ ಹಾಗೂ ಜನಪ್ರತಿನಿಧಿಗಳ ಭೇಟಿ ಮಾಡಿ ಸ್ಥಳೀಯ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸುತ್ತಿದ್ದೇನೆ.

ಬೆಂಗಳೂರಿನಲ್ಲಿ ಭಾರತದ ಏಕೈಕ ಆಸ್ಕರ್-ಮಾನ್ಯತೆ ಪಡೆದ ಕಿರುಚಿತ್ರೋತ್ಸವದ 16ನೇ ಆವೃತ್ತಿ ಆರಂಭ

ಆಸ್ಕರ್-ಮಾನ್ಯತೆ ಪಡೆದ ಕಿರುಚಿತ್ರೋತ್ಸವದ 16ನೇ ಆವೃತ್ತಿ ಆರಂಭ

ಭಾರತದ ಅತಿ ದೊಡ್ಡ ಮತ್ತು ಏಕೈಕ ಆಸ್ಕರ್-ಮಾನ್ಯತೆ (Oscar-accredited) ಪಡೆದ ಕಿರುಚಿತ್ರೋತ್ಸವ ವಾದ 'ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ' (BISFF), ತನ್ನ 16ನೇ ಆವೃತ್ತಿಯನ್ನು 2026 ರ ಆಗಸ್ಟ್ 14 ರಿಂದ 16 ರವರೆಗೆ (ಆನ್‌ಲೈನ್‌ನಲ್ಲಿ: ಆಗಸ್ಟ್ 06 ರಿಂದ 16) ಬೆಂಗಳೂರಿನ ಆರಕ್ಕೂ ಹೆಚ್ಚು ಸ್ಥಳಗಳಲ್ಲಿ ಆಯೋಜಿಸಲಿದೆ.

ಬ್ರಿಡ್ಜ್ ಮ್ಯಾನ್ ಖ್ಯಾತಿಯ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ನಿಧನ

ಬ್ರಿಡ್ಜ್ ಮ್ಯಾನ್ ಖ್ಯಾತಿಯ ಡಾ.ಗಿರೀಶ್ ಭಾರದ್ವಾಜ್ ನಿಧನ

Girish Bharadwaj: ದೇಶದ ಬ್ರಿಡ್ಜ್ ಮ್ಯಾನ್’ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಮಂಗಳವಾರ (ಜು 7) ಮುಂಜಾನೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

600 ಕೋಟಿ ರೂ.ನ ನೂತನ ಅನುಭವ ಮಂಟಪ ಶೀಘ್ರ ಲೋಕಾರ್ಪಣೆ

600 ಕೋಟಿ ರೂ.ನ ನೂತನ ಅನುಭವ ಮಂಟಪ ಶೀಘ್ರ ಲೋಕಾರ್ಪಣೆ

ಜಿಲ್ಲೆಯ ಬಸವಕಲ್ಯಾಣ ನಗರದ ತ್ರಿಪುರಾಂತ ಕೆರೆಯ ದಡದಲ್ಲಿ 7.5 ಎಕರೆ ವಿಸ್ತಾರ, ಸುಮಾರು 600 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ, 6 ಅಂತಸ್ತಿನ ಅನುಭವ ಮಂಟಪದ ಕಾಮಗಾರಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವೀಕ್ಷಿಸಿದರು.ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.

ಚಿಕ್ಕಬಳ್ಳಾಪುರದಲ್ಲಿ ಆಂಧ್ರ ಸಾರಿಗೆ ಸಂಸ್ಥೆಯ ಬಸ್ ಭೀಕರ ಅಪಘಾತ; ಇಬ್ಬರು ಸಾವು

ಚಿಕ್ಕಬಳ್ಳಾಪುರದಲ್ಲಿ ಆಂಧ್ರ ಸಾರಿಗೆ ಸಂಸ್ಥೆಯ ಬಸ್ ಭೀಕರ ಅಪಘಾತ

ಬೆಂಗಳೂರು – ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ-44 ರ ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಪೈಲಗುರ್ಕಿ ಬಳಿ ಭೀಕರ ಅಪಘಾತ ಉಂಟಾಗಿದ್ದು, ಕರ್ನೂಲಿನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಮುಂದೆ ಸಾಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಂಧ್ರಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ ಲಕ್ಷ್ಮಣ್ (52) ಹಾಗೂ ಪ್ರಯಾಣಿಕ ಬೆಂಗಳೂರಿನ ಕಲ್ಯಾಣ ನಗರದ ನಿವಾಸಿ ಉಮಾಕಾಂತ್ ರಾವ್ ಮೃತಪಟ್ಟಿದ್ದಾರೆ.

SIR: ಎಸ್‌ʼಐಆರ್‌ʼನಲ್ಲಿ ʼಕೈʼಚಳಕ: ತಿರುಗಿಬಿದ್ದ ಬಿಜೆಪಿ, ಜೆಡಿಎಸ್‌

SIR: ಎಸ್‌ʼಐಆರ್‌ʼನಲ್ಲಿ ʼಕೈʼಚಳಕ: ತಿರುಗಿಬಿದ್ದ ಬಿಜೆಪಿ, ಜೆಡಿಎಸ್‌

ರಾಜ್ಯದಲ್ಲಿ ಎಸ್‌ಐಆರ್ ಆರಂಭಗೊಂಡು ವಾರ ಕಳೆದರೂ, ಆಡಳಿತ-ಪ್ರತಿಪಕ್ಷಗಳ ನಡುವಿನ ದೂರು-ಪ್ರತಿದೂರು ನಿಲ್ಲುವ ಹಾಗೆ ಕಾಣುತ್ತಿಲ್ಲ. ಸಾಮೂಹಿಕವಾಗಿ ಎಸ್‌ಐಆರ್ ಅರ್ಜಿ ಭರ್ತಿಗೆ ಸಂಬಂಧಿಸಿ ದಂತೆ ಈಗಾಗಲೇ ದೂರು ನೀಡಿದ್ದ ಬಿಜೆಪಿ-ಜೆಡಿಎಸ್ ಇದೀಗ ಜಂಟಿಯಾಗಿ ಮತ್ತೊಂದು ದೂರನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ಮರು ಎಸ್‌ಐಆರ್‌ಗೆ ಆಗ್ರಹಿಸಿವೆ.

Karnataka Weather: ಭಾರಿ ಮಳೆ ಮುನ್ಸೂಚನೆ; ಇಂದು ಉತ್ತರ ಕನ್ನಡ, ಉಡುಪಿಗೆ ರೆಡ್‌ ಅಲರ್ಟ್, ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ

ಭಾರಿ ಮಳೆ ಮುನ್ಸೂಚನೆ; ಇಂದು ಉತ್ತರ ಕನ್ನಡ, ಉಡುಪಿಗೆ ರೆಡ್‌ ಅಲರ್ಟ್‌

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೊಂದಿಗೆ ಹಗುರದಿಂದ ಮಧ್ಯಮ ಮಳೆಯಾಗಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30°C ಮತ್ತು 21°C ಇರುವ ಸಾಧ್ಯತೆಯಿದೆ.

ಯಾವುದೇ ಕ್ಷಣದಲ್ಲಿ ಜಿಬಿಎ ಚುನಾವಣೆ ದಿನಾಂಕ ಘೋಷಣೆ; ಸಿದ್ಧರಾಗಲು ಕಾರ್ಯಕರ್ತರಿಗೆ ಎಚ್‌ಡಿಕೆ ಸೂಚನೆ

ಯಾವುದೇ ಕ್ಷಣದಲ್ಲಿ ಜಿಬಿಎ ಚುನಾವಣೆ ದಿನಾಂಕ ಘೋಷಣೆ ಸಾಧ್ಯತೆ: ಎಚ್‌ಡಿಕೆ

HD Kumaraswamy: ರಾಜ್ಯ ಸರ್ಕಾರ ಮೇಲಿಂದ ಮೇಲೆ ಗ್ರೇಟರ್ ಬೆಂಗಳೂರು ಚುನಾವಣೆಯನ್ನು ಮುಂದಕ್ಕೆ ಹಾಕಿಕೊಂಡು ಬರುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಮತ್ತಷ್ಟು ಮುಂದಕ್ಕೆ ಹಾಕಲು ಸಾಧ್ಯವಿಲ್ಲ. ಹೀಗಾಗಿ ಯಾವಾಗ ಬೇಕಾದರೂ ಚುನಾವಣೆ ದಿನಾಂಕ ಘೋಷಣೆ ಆಗಬಹುದು ಎಂದು ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Gudibande News: ಗುಡಿಬಂಡೆಯಲ್ಲಿ ಅರ್ಥಪೂರ್ಣವಾಗಿ ಬಾಬು ಜಗಜೀವನ್ ರಾಂ ರವರ ಪುಣ್ಯಸ್ಮರಣೆ

ಗುಡಿಬಂಡೆಯಲ್ಲಿ ಅರ್ಥಪೂರ್ಣವಾಗಿ ಬಾಬು ಜಗಜೀವನ್ ರಾಂ ರವರ ಪುಣ್ಯಸ್ಮರಣೆ

ಸಮಾಜದಲ್ಲಿನ ದೀನ ದಲಿತ ಜನಾಂಗಕ್ಕೆ ಆಗುತ್ತಿದ್ದ ಅನ್ಯಾಯವನ್ನು ವಿರೋಧಿಸಿ ಹೋರಾಟ ನಡೆಸಿದ ಜಗಜೀವನರಾಂ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ತಮ್ಮ ಹೋರಾಟದ ಮೂಲಕ ಸಮಾಜದಲ್ಲಿ ಶೋಷಿತ ಎಲ್ಲ ಜಾತಿ ವರ್ಗಗಳಿಗೆ ಆದರ್ಶವಾಗಿದ್ದಾರೆ. ಅವರನ್ನು ಕೇವಲ ಒಂದು ದಿನಕ್ಕೆ ಮಾತ್ರ ನೆನಪಿಸಿಕೊಳ್ಳದೇ ಸದಾ ಅವರನ್ನು ನೆನಪಿಸಿಕೊಳ್ಳಬೇಕು

ಯಶಸ್ಸು ಎಂದರೆ ಇದು: ಒಂದು ಕಾಲದಲ್ಲಿ ಕಾಲೇಜ್‌ ಫೀಸ್ ಕಟ್ಟಲೂ ಹಣವಿಲ್ಲದೆ ಅಮ್ಮನ ಬಳೆ ಮಾರಾಟ ಮಾಡಬೇಕಾದ ಸ್ಥಿತಿ; ಇಂದು 1.9 ಕೋಟಿ ರುಪಾಯಿ ಸಂಬಳ!

ಕಾಲೇಜ್‌ ಫೀಸ್‌ಗಾಗಿ ತಾಯಿಯ ಚಿನ್ನ ಮಾರಾಟ; ಮಗನ ಭಾವನಾತ್ಮಕ ಪೋಸ್ಟ್

Viral News: ಕೆಲವರು ಹುಟ್ಟಿನಿಂದಲೇ ಶ್ರಿಮಂತರಾಗಿರುವುದಿಲ್ಲ. ಬಡತನವಿದ್ದರೂ ಶ್ರಮಪಟ್ಟು ಸಾಧನೆ ಮಾಡಿದ ಅನೇಕರಿದ್ದಾರೆ. ಇದೀಗ ಬೆಂಗಳೂರಿನ ಯುವಕನೊಬ್ಬ ಮೈಕ್ರೋಸಾಫ್ಟ್‌ನಲ್ಲಿ 1.9 ಕೋಟಿ ರುಪಾಯಿ ಸಂಬಳ ಪಡೆಯುತ್ತಿದ್ದಾನೆ. ಈ ಯಶಸ್ಸಿನ ಹಿಂದೆ ಅಡಗಿದ ನೋವಿನ ಘಟನೆಯೊಂದನ್ನು ಶೇರ್ ಮಾಡಿದ್ದಾನೆ. ತನ್ನ ಇಂದಿನ ಸಾಧನೆಗೆ ಬೆಂಬಲ ನೀಡಿದವರು ಪೋಷಕರು, ಅವರ ತ್ಯಾಗವನ್ನು ಮರೆಯುವಂತಿಲ್ಲ ಎಂದು ಈ ಘಟನೆಯನ್ನು ನೆನಪಿಸಿಕೊಂಡಿದ್ದಾನೆ.

ಕೈಗಾ ಅಣು ವಿದ್ಯುತ್ ಸ್ಥಾವರ: ಇತಿಹಾಸದಲ್ಲೇ ಅತಿ ದೊಡ್ಡ ಏಕಶಿಲಾ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಳಿಸಿದ ‘ಮೇಘಾ ಎಂಜಿನಿಯರಿಂಗ್‌’

ಅತಿ ದೊಡ್ಡ ಏಕಶಿಲಾ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಳಿಸಿದ MEIL

MEIL: ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ‘ಪ್ರೆಶರೈಸ್ಡ್ ಹೆವಿ ವಾಟರ್ ರಿಯಾಕ್ಟರ್ʼ ಯೋಜನೆಗಾಗಿ ಭಾರತೀಯ ಪರಮಾಣು ವಿದ್ಯುತ್ ನಿಗಮದ ಇತಿಹಾಸದಲ್ಲೇ ಅತ್ಯಂತ ಬೃಹತ್ ಪ್ರಮಾಣದ ಏಕಶಿಲಾ (ಮೊನೊಲಿಥಿಕ್) ಕಾಂಕ್ರೀಟ್ ಹಾಕುವ ಕಾಮಗಾರಿಯನ್ನು ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಸಂಸ್ಥೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

Chikkaballapur News: ಸಮುದಾಯದ ಸೇವೆಯೇ ನನ್ನ ಜೀವನದ ಧ್ಯೇಯ: ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಅಭಿಮತ

ಸಮುದಾಯದ ಸೇವೆಯೇ ನನ್ನ ಜೀವನದ ಧ್ಯೇಯ

ಜನ್ಮದಿನವೆಂದರೆ ಆಡಂಬರವಲ್ಲ, ಬದಲಿಗೆ ನಾವು ನಡೆದು ಬಂದ ಹಾದಿಯನ್ನು ಅವಲೋಕಿಸುವ ಸಂದರ್ಭ. ಆ ಮೂಲಕ ಭವಿಷ್ಯದಲ್ಲಿ ಇನ್ನಷ್ಟು ಜನಪರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಸಂಕಲ್ಪಿಸುವ ದಿನ ಎಂದರೆ ತಪ್ಪಿಲ್ಲ. ಏನೇ ಆಗಲಿ ಇಂತಹ ಕಾರ್ಯಕ್ರಮಗಳು ಜೀವನೋ ತ್ಸಾಹಕ್ಕೆ ಸ್ಫೂರ್ತಿ ನೀಡುತ್ತವೆ

115ನೇ ದಿನಕ್ಕೆ ಮುಂದುವರಿಕೆ ಪ್ರತಿಭಟನೆಗೆ ಹೆಚ್.ಡಿ.ಕುಮಾರಸ್ವಾಮಿ ಬೆಂಬಲ : ಭಕ್ತರಹಳ್ಳಿ ಬೈರೇಗೌಡ

ಜಂಗಮಕೋಟೆ ಕೆಐಎಡಿಬಿಗೆ ಜಮೀನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ

ಜಂಗಮಕೋಟೆ ಹೋಬಳಿ ವ್ಯಾಪ್ತಿಯ 13 ಗ್ರಾಮಗಳ ಸುಮಾರು 2823 ಎಕರೆ ಫಲವತ್ತಾದ ಕೃಷಿಭೂಮಿ ಯನ್ನು ಕೈಗಾರಿಕಾ ಪಾರ್ಕ್ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವ ಕ್ರಮವನ್ನು ಖಂಡಿಸಿ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ಕಳೆದ 115 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದೆ.

RSS route march: ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಸರ್ಕಾರದ ಅನುಮತಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ಕಡ್ಡಾಯ: ಪ್ರಿಯಾಂಕ್ ಖರ್ಗೆ

Home Minister Priyank Kharge: ಆರ್‌ಎಸ್‌ಎಸ್‌ಗೆ 100 ವರ್ಷದ ಇತಿಹಾಸವಿದೆ ಎಂದು ಹೇಳಿಕೊಳ್ಳುತ್ತೀರಿ. ಆದರೆ ನಿಮ್ಮ ಸಂಘಟನೆಯ ಕಾನೂನುಬದ್ಧ ದಾಖಲೆಗಳು ಎಲ್ಲಿವೆ? ಪಥಸಂಚಲನ ನಡೆಸಬೇಕಾದರೆ ಸರ್ಕಾರದ ಅನುಮತಿ ಕಡ್ಡಾಯ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

Gauribidanur News: ಶ್ರೀ ಆದಿಶಕ್ತಿ ಅನ್ನಪೂರ್ಣೇಶ್ವರಿ ದೇವಿಯ ಒಂಬತ್ತನೇ ಬ್ರಹ್ಮರಥೋತ್ಸವ

ಶ್ರೀ ಆದಿಶಕ್ತಿ ಅನ್ನಪೂರ್ಣೇಶ್ವರಿ ದೇವಿಯ ಒಂಬತ್ತನೇ ಬ್ರಹ್ಮರಥೋತ್ಸವ

ಜು.6ರಂದು ಸೋಮವಾರ ಸಂಜೆ 5 ಗಂಟೆಗೆ ಗಂಗಾ ನಯನ, ದೇವತಾ ಪ್ರಾರ್ಥನೆ, ಗುರುಪ್ರಾರ್ಥನೆ, ಗಣಪತಿ ಪೂಜೆ, ಮಹಾಸಂಕಲ್ಪ ಸೇರಿದಂತೆ ಇತರ ಪೂಜಾ ಕೈಂಕಾರ್ಯಗಳೊಂದಿಗೆ ದೇವತಾ ಕಾರ್ಯ ಆರಂಭವಾಗಲಿದೆ. ಜು.7ರಂದು ಮಂಗಳವಾರ ಬೆಳಿಗ್ಗೆ 8.30ಕ್ಕೆ ವೇದ ಪಾರಾಯಣ, ಕಶಸಾರಾಧನೆ, ಪ್ರಾತಃ ನಿತ್ಯ ಹೋಮ, ರಂಗ ಹೋಮ ನಡೆಯಲಿದೆ.

ಮೊಬೈಲ್ ಟಾರ್ಚ್ ಬಳಸಿ‌ ಸಾರಿಗೆ ಬಸ್ ಚಾಲನೆ; ಮೂವರು ಸಿಬ್ಬಂದಿ ಸಸ್ಪೆಂಡ್‌

ಮೊಬೈಲ್ ಟಾರ್ಚ್ ಬಳಸಿ‌ ಸಾರಿಗೆ ಬಸ್ ಚಾಲನೆ; ಮೂವರು ಸಸ್ಪೆಂಡ್‌

ಜುಲೈ 4ರಂದು ರಾತ್ರಿ ಕಲಬುರಗಿಯಿಂದ ಚಿಂಚೋಳಿಗೆ ಹೊರಟಿದ್ದ ಕೆಕೆಆರ್‌ಟಿಸಿ ಬಸ್‌ನ ಹೆಡ್‌ಲೈಟ್ ಸಮಸ್ಯೆಯಾಗಿತ್ತು. ಹೀಗಾಗಿ ಬಸ್ ನಿರ್ವಾಹಕ ಹಾಗೂ ಇತರ ಪ್ರಯಾಣಿಕರ ಮೊಬೈಲ್ ಟಾರ್ಚ್ ಬೆಳಕಲ್ಲೇ ಬಸ್ ಚಿಂಚೋಳಿ ತಲುಪಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ, ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ.

Loading...