Drugs Ban: ರಾಜ್ಯದಲ್ಲಿ 15 ಔಷಧ, ಸೌಂದರ್ಯವರ್ಧಕಗಳ ಬಳಕೆಗೆ ನಿರ್ಬಂಧ ವಿಧಿಸಿ ಸರ್ಕಾರ ಆದೇಶ
ಗುಣಮಟ್ಟ ಪರೀಕ್ಷೆಯಲ್ಲಿ ಪೋಮೋಲ್-650 (ಪ್ಯಾರಾಸಿಟಮೋಲ್), ಮೈಸೂರಿನ ಸೈಕಲ್ ಬ್ರ್ಯಾಂಡ್ ಕಂಪನಿಯ ಓ ಶಾಂತಿ ಗೋಲ್ಡ್ ಕುಂಕುಮ್, ವಿವಿಧ ಕಂಪನಿಗಳ ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್ಜೆಕ್ಷನ್ ಐಪಿ(ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್) ಸೇರಿ 15 ಔಷಧ ಹಾಗೂ ಸೌಂದರ್ಯವರ್ಧಕಗಳು ಅಸುರಕ್ಷಿತ ಎಂದು ವರದಿ ಬಂದಿದೆ.


ಬೆಂಗಳೂರು: ಕರ್ನಾಟಕದ ಔಷಧ ಪರೀಕ್ಷಾ ಪ್ರಯೋಗಾಲಯವು ವಿವಿಧ ಕಂಪನಿಗಳ 15 ಔಷಧ, ಸೌಂದರ್ಯವರ್ಧಕಗಳು 'ಪ್ರಮಾಣೀಕೃತ ಗುಣಮಟ್ಟದಲ್ಲಿಲ್ಲ' ಎಂದು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಈ ಔಷಧಗಳ ಬಳಕೆಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ನಿರ್ಬಂಧಿತ ಔಷಧ ಮತ್ತು ಕಾಂತಿವರ್ಧಕಗಳನ್ನು (Drugs Ban) ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ಹೋಂನವರು ದಾಸ್ತಾನು ಮಾಡುವುದು, ಮಾರಾಟ ಮಾಡುವುದು ಅಥವಾ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ ಎಂದು ಉಪ ಔಷಧ ನಿಯಂತ್ರಕರು ಮತ್ತು ನಿಯಂತ್ರಣಾಧಿಕಾರಿ ಬಿ.ಪಿ.ಅರುಣ್ ತಿಳಿಸಿದ್ದಾರೆ.
ಗುಣಮಟ್ಟ ಪರೀಕ್ಷೆಯಲ್ಲಿ ಪೋಮೋಲ್-650 (ಪ್ಯಾರಾಸಿಟಮೋಲ್), ಮೈಸೂರಿನ ಸೈಕಲ್ ಬ್ರ್ಯಾಂಡ್ ಕಂಪನಿಯ ಓ ಶಾಂತಿ ಗೋಲ್ಡ್ ಕುಂಕುಮ್, ವಿವಿಧ ಕಂಪನಿಗಳ ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್ಜೆಕ್ಷನ್ ಐಪಿ(ರಿಂಗರ್ ಲ್ಯಾಕ್ಟೆಟ್ ಸಲ್ಯೂಷನ್ ಫಾರ್ ಇಂಜೆಕ್ಷನ್ ) ಸೇರಿ 15 ಔಷಧ ಹಾಗೂ ಸೌಂದರ್ಯವರ್ಧಕಗಳು ಅಸುರಕ್ಷಿತ ಎಂದು ವರದಿ ಬಂದಿದೆ. ರಾಜ್ಯ, ಹೊರ ರಾಜ್ಯದ ಔಷಧ ತಯಾರಿಕಾ ಕಂಪನಿಗಳು ಈ ಪಟ್ಟಿಯಲ್ಲಿವೆ. ಹೀಗಾಗಿ ಅಸುರಕ್ಷಿತ ಔಷಧ ಬಳಕೆ ಮತ್ತು ಮಾರಾಟ ಮಾಡದಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಯಾವೆಲ್ಲ ಔಷಧಗಳಿಗೆ ನಿರ್ಬಂಧ:
- ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್ಜೆಕ್ಷನ್ ಐಪಿ – ಮೆ. ಅಲ್ಟ್ರಾ ಲ್ಯಾಬೋರೇಟರಿಸ್ ಪ್ರೈ. ಲಿಮಿಟೆಡ್.
- ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್ಜೆಕ್ಷನ್ ಐಪಿ – ಮೇ. ಟಾಮ್ ಬ್ರಾನ್ ಫಾರ್ಮಾಸ್ಯೂಟಿಕಲ್ಸ್ ಪ್ರೈ. ಲಿಮಿಟೆಡ್.
- ಪೋಮೋಲ್-650 (ಪ್ಯಾರಾಸಿಟಮೋಲ್ ಟ್ಯಾಬ್ಲೆಟಸ್ ಐ.ಪಿ 650 ಎಂಜಿ)- ಮೇ. ಅಬಾನ್ ಫಾರ್ಮಾಸ್ಯೂಟಿಕಲ್ಸ್ ಪ್ರೈ. ಲಿಮಿಟೆಡ್.
- ಮಿಟು ಕ್ಯೂ7 ಸಿರಪ್ – ಮೆ. ಬಯೋನ್ ಥೆರಾಪ್ಯಾಟಿಕ್ಸ್ ಇಂಡಿಯಾ ಪ್ರೈ. ಲಿಮಿಟೆಡ್
- ಸ್ಟೈರಲ್ ಡಿಲ್ಯೈಯಂಟ್ ಪಾರ್ ರೆಕಾನೋಸ್ಟಿಟಿಶ್ಯೂನ್ ಆಪ್ ಎನ್ಡಿ, ಐಬಿ, ಐಬಿಡಿ ಆ್ಯಂಡ್ ಕಾಂಬಿನೇಷನ್ ವ್ಯಾಕ್ಸಿನ್ಸ್ ಫಾರ್ ಪೌಲ್ಟ್ರೀ (ವೆಟರ್ನರಿ) ಮಲ್ಟಿ ಡೋಸ್ ವಿಲಾ 200 ಎಂಲ್ – ಮೇ. ಸೇಫ್ ಪೇರೆಂಟರಲ್ಸ್ ಪ್ರೈ. ಲಿಮಿಟೆಡ್.
- ಸ್ಪಾನ್ಪ್ಲಾಕ್ಸ್-ಓಡ್ ಟ್ಯಾಬ್ಲೆಟ್ಸ್ (ಓಪ್ಲಾಕ್ಸಸಿನ್ & ಓರ್ನಿಡಜೋಲ್ ಟ್ಯಾಬ್ಲೆಟ್ಸ್ ಐಪಿ) – ಮೆ. ಇಂಡೋರಾಮ ಹೇಲ್ತ್ ಕೇಸ್ ಪ್ರೈ ಲಿಮಿಟಿಡ್.
- ಪ್ಯಾಂಟೋಕೋಟ್-ಡಿಎಸ್ಆರ್ (ಪ್ಯಾಂಟೋಫ್ರಜೋಲ್ ಗ್ಯಾಸ್ಟ್ರೋ-ರಿಜಿಸ್ಟೆಂಟ್ & ಡೋಮ್ಫೆರಿಡನ್ ಪ್ರೋಕಾಂಗಡ್ ರಿಲಿಸ್ ಕ್ಯಾಪ್ಸೂಲ್ಸ್ ಐಪಿ – ಮೇ. ಸ್ವೆಫ್ನೆ ಫಾರ್ಮಾಸ್ಯೂಟಿಕಲ್ಸ್ ಪ್ರೈ. ಲಿಮಿಟೆಡ್.
- ಸೋಡಿಯಂ ಕ್ಲೋರೈಡ್ ಇನ್ಜೆಕ್ಷನ್ ಐಪಿ 0.9% ಡಬ್ಲ್ಯೂ/ವಿ (ಎನ್ಎಸ್) – ಮೆ. ಪುನಿಷ್ಕ ಇನ್ಜೆಕ್ಟಬಲ್ ಪ್ರೈ. ಲಿಮಿಟೆಡ್
- ಸೋಡಿಯಂ ಕ್ಲೋರೈಡ್ ಇನ್ಜೆಕ್ಷನ್ ಐಪಿ 0.9% ಡಬ್ಲ್ಯೂ/ವಿ (ಎನ್ಎಸ್) – ಮೆ. ಪುನಿಷ್ಕ ಇನ್ಜೆಕ್ಟಬಲ್ ಪ್ರೈ. ಲಿಮಿಟೆಡ್.
- ಅಲ್ಪಾ ಲಿಪೋಯಿಕ್ ಆಸಿಡ್, ಪೋಲಿಕ್ ಆಸಿಡ್, ಮಿಥೈಲ್ ಕೋಬಾಲಮಿನ್, ವಿಟಮಿನ್ ಬಿ6 & ವಿಟಮಿನ್ ಡಿ3ಟ್ಯಾಬ್ಲೆಟ್ಸ್ – ಮೇ. ಇಸ್ಟ್ ಆಪ್ರಿಕನ್ (ಇಂಡಿಯಾ) ಓವರ್ಸಿಸ್.
- ಓ ಶಾಂತಿ ಗೋಲ್ಡ್ ಕ್ಲಾಸ್ ಕುಂಕುಮ್ – ಮೇ. ಎನ್. ರಂಗರಾವ್ & ಸನ್ಸ್ ಪ್ರೈ ಲಿಮಿಟೆಡ್.
- ಪಿರಾಸಿಡ್-ಓ ಸಸ್ಪೆನ್ಶನ್ (ಸಲ್ಕ್ರಾಲ್ಫೇಟ್ & ಆಕ್ಸೆಟಾಕೈನ್ ಸಸ್ಪೆನ್ಶನ್) – ಮೆ. ರೆಡ್ನಕ್ಸ್ ಫಾರ್ಮಾಸ್ಯೂಟಿಕಲ್ಸ್ ಪ್ರೈ ಲಿಮಿಟೆಡ್.
- ಗ್ಲಿಮಿಜ್-2 (ಗ್ಲಿಮಿಫೆರೈಡ್ ಟ್ಯಾಬ್ಲೆಟ್ಸ್ ಐಪಿ 2ಎಂಜಿ) – ಮೆ. ಕೆಎನ್ಎಂ ಫಾರ್ಮಾ ಪ್ರೈ. ಲಿಮಿಟೆಡ್.
- ಐರನ್ ಸುಕ್ರೋಸ್ ಇನ್ಜೆಕ್ಷನ್ ಯುಎಸ್ಪಿ 100ಎಂಜಿ (ಐರೋಗೈನ್) – ಮೆ. ರೀಗೈನ್ ಲ್ಯಾಬೋರೇಟರಿಸ್
- ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್ಜೆಕ್ಷನ್ ಐಪಿ (ರಿಂರ್ಗ ಲ್ಯಾಕ್ಟೆಟ್ ಸಲೂಷನ್ ಪಾರ್ ಇನ್ಜೆಕ್ಷನ್ ಆರ್ಎಲ್ – ಮೇ. ಒಟ್ಸುಕಾ ಫಾರ್ಮಾಸ್ಯೂಟಿಕಲ್ಸ್ ಇಂಡಿಯಾ
ಕರ್ನಾಟಕದ ಔಷಧ ಪರೀಕ್ಷಾ ಪ್ರಯೋಗಾಲಯವು ಈ ಕೆಳಗಿನ ಔಷಧಗಳು/ಸೌಂದರ್ಯವರ್ಧಕಗಳನ್ನು 'ಪ್ರಮಾಣೀಕೃತ ಗುಣಮಟ್ಟದಲ್ಲಿಲ್ಲ' ಎಂದು ಅಭಿಪ್ರಾಯಪಟ್ಟಿದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 25, 2025
ಎಲ್ಲಾ ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ಈ ಉತ್ಪನ್ನಗಳನ್ನು ಸಂಗ್ರಹಿಸುವುದು/ಮಾರಾಟ ಮಾಡುವುದು/ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ನಾನು ಮನವಿ… pic.twitter.com/qbbu00r0pp
ಈ ಸುದ್ದಿಯನ್ನೂ ಓದಿ | Building Plan: ಇನ್ನುಮುಂದೆ ಕಟ್ಟಡ ನಕ್ಷೆ ಅನುಮತಿ ಇಲ್ಲದೆ ಯಾರೂ ಮನೆ ಕಟ್ಟುವಂತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ: ಆರೋಗ್ಯ ಸಚಿವ
ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯಿಸಿ, ಕರ್ನಾಟಕದ ಔಷಧ ಪರೀಕ್ಷಾ ಪ್ರಯೋಗಾಲಯವು 15 ಔಷಧಗಳು/ಸೌಂದರ್ಯವರ್ಧಕಗಳನ್ನು 'ಪ್ರಮಾಣೀಕೃತ ಗುಣಮಟ್ಟದಲ್ಲಿಲ್ಲ' ಎಂದು ಅಭಿಪ್ರಾಯಪಟ್ಟಿದೆ. ಎಲ್ಲಾ ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ಈ ಉತ್ಪನ್ನಗಳನ್ನು ಸಂಗ್ರಹಿಸುವುದು/ಮಾರಾಟ ಮಾಡುವುದು/ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಆಸ್ಪತ್ರೆ, ಔಷಧ ಮಳಿಗೆಗಳಲ್ಲಿ ಯಾವುದೇ ಸಂಗ್ರಹ ಇದ್ದರೆ, ನಿಮ್ಮ ಸ್ಥಳೀಯ ಔಷಧ ನಿರೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರಿಗೆ ತಕ್ಷಣವೇ ತಿಳಿಸಬೇಕು.
ನಿಮ್ಮ ಸುರಕ್ಷತೆ ನಮ್ಮ ಆದ್ಯತೆ. ದಯವಿಟ್ಟು ಪಟ್ಟಿಯಲ್ಲಿರುವ ಬ್ಯಾಚ್‌ನ ಔಷಧಗಳು/ಸೌಂದರ್ಯವರ್ಧಕಗಳನ್ನು ಬಳಸಬೇಡಿ. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.