ನೀರಜ್ ಚೋಪ್ರಾ ಕ್ಲಾಸಿಕ್ 2025 ರ ಅಧಿಕೃತ ಆತಿಥ್ಯ ಪಾಲುದಾರರಾಗಿ ಜೆಎಸ್ಡಬ್ಲ್ಯೂ ಸ್ಪೋರ್ಟ್ಸ್ ನೊಂದಿಗೆ ರಾಡಿಸನ್ ಹೋಟೆಲ್ ಗ್ರೂಪ್ ಸಹಯೋಗ ಘೋಷಣೆ
ರಾಡಿಸನ್ ಹೋಟೆಲ್, ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ವಿಶೇಷ ವಸತಿ ಹಾಗೂ ಆತಿಥ್ಯ ಒದಗಿಸಲಿದೆ. ಕ್ರೀಡಾಕೂಟಕ್ಕೆ ಮುಂಚಿತವಾಗಿ ವಿಶ್ರಾಂತಿ, ಚೇತರಿಕೆ ಮತ್ತು ಸಿದ್ಧತೆಗೆ ಅಗತ್ಯ ವ್ಯವಸ್ಥೆ ಮಾಡಿಕೊಡಲಿದೆ. ಕ್ರೀಡಾ ಆತಿಥ್ಯ ಮತ್ತು ಕ್ರೀಡಾಪಟು-ಕೇಂದ್ರಿತ ಮೂಲಸೌಕರ್ಯದಲ್ಲಿ ತನ್ನ ಪರಿಣತಿಯನ್ನು ಬಳಸಿಕೊಂಡು ಎಲ್ಲಾ ಸವಲತ್ತುಗಳನ್ನು ಆಟಗಾರರಿಗೆ ನೀಡಲಿದೆ


ಬೆಂಗಳೂರು: ಬೆಂಗಳೂರಿನಲ್ಲಿ ಇದೇ ಜುಲೈ 5ರಂದು ನಡೆಯಲಿರುವ "ನೀರಜ್ ಚೋಪ್ರಾ ಕ್ಲಾಸಿಕ್" ಜಾವೆಲಿನ್ ಥ್ರೋ ನ ಆತಿಥ್ಯ ಪಾಲುದಾರರಾಗಿ ಜೆಎಸ್ಡಬ್ಲ್ಯೂ ಸ್ಪೋಟ್ಸ್ನೊಂದಿಗೆ ರಾಡಿಸನ್ ಹೋಟೆಲ್ ತನ್ನ ಸಹಯೋಗ ಘೊಷಿಸಿದೆ.
ಈ ಕುರಿತು ಮಾತನಾಡಿದ ಜೆಎಸ್ಡಬ್ಲ್ಯೂ ಸ್ಪೋರ್ಟ್ಸ್ನ ಮುಖ್ಯ ವಾಣಿಜ್ಯ ಅಧಿಕಾರಿ ಕರಣ್ ಯಾದವ್, ಬೆಂಗಳೂರು ಮೂಲಕ ರಾಡಿಸನ್ನೊಂದಿಗೆ ಸಹಯೋಗ ಹೊಂದುತ್ತಿರುವುದು ಸ್ವಾಗತಾರ್ಹ. ವಸತಿ ಸೌಕರ್ಯವಷ್ಟೇ ಅಲ್ಲದೆ, ಕ್ರೀಡಾ ಕ್ಷೇತ್ರದಲ್ಲೂ ತಮ್ಮ ಆಸಕ್ತಿ ಇರುವುದನ್ನು ಈ ಮೂಲಕ ಪ್ರದರ್ಶಿಸುತ್ತಿದ್ದಾರೆ. ಈ ಸಹಯೋಗದ ಮೂಲಕ ಕ್ರೀಡಾಪಟುಗಳಿಗೆ ಆದ್ಯತೆ, ಸಾಂಸ್ಕೃತಿಕ ಮತ್ತು ಉನ್ನತ-ಕಾರ್ಯಕ್ಷಮತೆಯ ಅನುಭವಗಳನ್ನು ಒದಗಿಸುತ್ತಿದೆ ಎಂದರು.
ಇದನ್ನೂ ಓದಿ: M J Akbar Column: ಯುದ್ಧ ಯಾವಾಗ ಮುಗಿಯುತ್ತದೆ ಎಂಬುದು ದೇವರಿಗೇ ಗೊತ್ತು !
ರಾಡಿಸನ್ ಹೋಟೆಲ್, ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ವಿಶೇಷ ವಸತಿ ಹಾಗೂ ಆತಿಥ್ಯ ಒದಗಿಸಲಿದೆ. ಕ್ರೀಡಾಕೂಟಕ್ಕೆ ಮುಂಚಿತವಾಗಿ ವಿಶ್ರಾಂತಿ, ಚೇತರಿಕೆ ಮತ್ತು ಸಿದ್ಧತೆಗೆ ಅಗತ್ಯ ವ್ಯವಸ್ಥೆ ಮಾಡಿಕೊಡಲಿದೆ. ಕ್ರೀಡಾ ಆತಿಥ್ಯ ಮತ್ತು ಕ್ರೀಡಾಪಟು-ಕೇಂದ್ರಿತ ಮೂಲಸೌಕರ್ಯದಲ್ಲಿ ತನ್ನ ಪರಿಣತಿಯನ್ನು ಬಳಸಿಕೊಂಡು ಎಲ್ಲಾ ಸವಲತ್ತುಗಳನ್ನು ಆಟಗಾರರಿಗೆ ನೀಡಲಿದೆ ಎಂದು ರಾಡಿಸನ್ ಹೋಟೆಲ್ ಗ್ರೂಪ್ನ ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಒಒ ನಿಖಿಲ್ ಶರ್ಮಾ ಹೇಳಿದರು.
ಜುಲೈ 5, 2025 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನೀರಜ್ ಚೋಪ್ರಾ ಕ್ಲಾಸಿಕ್ 2025 ಭಾರತದ ಮೊದಲ ಅಂತಾರಾಷ್ಟ್ರೀಯ ಜಾವೆಲಿನ್ ಸ್ಪರ್ಧೆ ಏರ್ಪಡಿಸಲಾಗಿದ್ದು, ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಅವರು ಜೆಎಸ್ಡಬ್ಲ್ಯೂ ಸ್ಪೋರ್ಟ್ಸ್ ಸಹಯೋಗ ದೊಂದಿಗೆ ಮುನ್ನಡೆಸಲಿದ್ದಾರೆ.
ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್ಐ) ಇದನ್ನು ಅನುಮೋದಿಸಿದೆ. ವಿಶ್ವ ಅಥ್ಲೆಟಿಕ್ಸ್ 'ಗೋಲ್ಡ್' ಮಟ್ಟದ ಕಾರ್ಯಕ್ರಮವೆಂದು ಗುರುತಿಸಲ್ಪಟ್ಟ ಈ ಕೂಟವು, ಒಲಿಂಪಿಕ್ ಪದಕ ವಿಜೇತ ರಾದ ಥಾಮಸ್ ರೋಹ್ಲರ್ ಮತ್ತು ಆಂಡರ್ಸನ್ ಪೀಟರ್ಸ್ ಸೇರಿದಂತೆ ವಿಶ್ವದ ಅಗ್ರ ಜಾವೆಲಿನ್ ಕ್ರೀಡಾಪಟುಗಳನ್ನು ಒಟ್ಟುಗೂಡಿಸಲಿದೆ.