ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Dr. Rajkumar: ಕೆಟ್ಟ ಮೇಲೆ ಬುದ್ಧಿ ಬಂತು; ಡಾ. ರಾಜ್‌ ಕುಮಾರ್‌ ಧ್ವನಿಗೆ ವ್ಯಂಗ್ಯವಾಡಿ ಕೊನೆಗೆ ಕ್ಷಮೆ ಕೋರಿದ ಗಾಯಕ

ಡಾ.ರಾಜ್‌ಕುಮಾರ್‌ ಅತ್ಯುತ್ತಮ ನಟ ಮಾತ್ರವಲ್ಲ ಶ್ರೇಷ್ಠ ಗಾಯಕರೂ ಹೌದು. ಜನ ಸಾಮಾನ್ಯರು ಮಾತ್ರವಲ್ಲದೆ ಪರಭಾಷಿಕರು, ಮೇರು ಗಾಯಕರು ಅವರು ಧ್ವನಿಗೆ ಮನ ಸೋತಿದ್ದಾರೆ. ಅಲ್ಲದೆ ಅವರು 1992ರಲ್ಲಿ ತೆರೆಕಂಡ ʼಜೀವನ ಚೈತ್ರʼ ಚಿತ್ರದ ʼನಾದಮಯ ಈ ಲೋಕವೆಲ್ಲʼ ಹಾಡಿಗೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇಂತಿಪ್ಪ ಶ್ರೇಷ್ಠ ಗಾಯಕರನ್ನು ಕೆಣಕಲು ಹೋಗಿ ಇಲ್ಲೊಬ್ಬ ಸರಿಯಾದ ಪಾಠ ಕಲಿತಿದ್ದಾರೆ. ಆ ಕುರಿತಾದ ವಿವರ ಇಲ್ಲಿದೆ.

ಡಾ. ರಾಜ್‌ ಕುಮಾರ್‌ ಧ್ವನಿಗೆ ವ್ಯಂಗ್ಯವಾಡಿ ಕೊನೆಗೆ ಕ್ಷಮೆ ಕೋರಿದ ಗಾಯಕ

ಡಾ.ರಾಜ್‌ಕುಮಾರ್‌ ಮತ್ತು ಸಂಜಯ್‌ ನಾಗ್‌.

Profile Ramesh B Feb 28, 2025 7:45 PM

ಬೆಂಗಳೂರು: ನಟ ಸಾರ್ವಭೌಮ, ಗಾನ ಗಂಧರ್ವ ಡಾ. ರಾಜ್‌ಕುಮಾರ್‌ (Dr. Rajkumar) ಹೆಸರು ಕೇಳಿದರೆ ಸಾಕು ಇಂದಿಗೂ ಅವರ ಅಭಿನಯ, ಹಾಡು ಮನಸ್ಸಿನಲ್ಲಿ ಸುಳಿದು ಬಿಡುತ್ತದೆ. ದಶಕಗಳ ಕಾಲ ಸ್ಯಾಂಡಲ್‌ವುಡ್‌ ಆಳಿದ್ದ, ಗಾಯನದ ಮೂಲಕವೇ ಜನಮಾನಸದಲ್ಲಿ ಇಂದಿಗೂ ಅಮರರಾಗಿರುವ ಡಾ.ರಾಜ್‌ಕುಮಾರ್‌ಎಂದರೆ ಕನ್ನಡಿಗರಿಗೆ ಅಪಾರ ಗೌರವ. ಇಂದಿಗೂ ಅವರ ಅನೇಕ ಹಾಡುಗಳು ಬಹುತೇಕರ ಫೆವರೇಟ್‌ ಲಿಸ್ಟ್‌ನಲ್ಲಿದೆ. ಅಲ್ಲದೆ ಅವರು ಹಾಡಿಗಾಗಿ ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಇಂತಹ ಅಪರೂಪದ ಕಲಾವಿದರ ಬಗ್ಗೆ ಆಡಬಾರದ ಮಾತುಗಳನ್ನು ಆಡಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಯುವ ಗಾಯಕನೊಬ್ಬ ಇದೀಗ ಮಾಡಿದ ತಪ್ಪಿಗೆ ಕ್ಷಮೆ ಕೋರಿದ್ದಾನೆ.

ರಾಜ್‌ಕುಮಾರ್‌ ಕೇವಲ ನಟ ಮಾತ್ರವಲ್ಲ ಗಾಯಕರೂ ಹೌದು. ತಾವು ನಟಿಸಿದ ಚಿತ್ರಗಳಿಗೆ ತಾವೇ ಧ್ವನಿ ನೀಡುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ಅಪರೂಪದ ಸಾಧನೆ ಮಾಡಿದ್ದಾರೆ. ಭಾವಪೂರ್ಣವಾಗಿ, ಸ್ವರಶುದ್ಧಿಯೊಂದಿಗೆ, ಸ್ಪಷ್ಟವಾಗಿ ಹಾಡುವುದು ಅವರ ವಿಶೇಷತೆ. ಇದೇ ಕಾರಣಕ್ಕೆ ಅವರು 1992ರಲ್ಲಿ ತೆರೆಕಂಡ ʼಜೀವನ ಚೈತ್ರʼ ಚಿತ್ರದ ʼನಾದಮಯ ಈ ಲೋಕವೆಲ್ಲʼ ಹಾಡಿಗೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ ಪದ್ಮ ಭೂಷಣ ಮತ್ತು ದಾದಾಸಾಹೇಬ್‌ ಫಾಲ್ಕೆ ಪ್ರಸಸ್ತಿಯನ್ನೂ ಪಡೆದುಕೊಂಡಿದ್ದಾರೆ. ಇಂತಹ ಅಪರೂಪದ, ಮೇರು ಪ್ರತಿಭೆಯನ್ನು ಕೆಣಕಲು ಹೋಗಿ ಯುವ ಗಾಯಕ ಸಂಜಯ್‌ ನಾಗ್‌ ಸರಿಯಾದ ಪಾಠ ಕಲಿತಿದ್ದಾನೆ.



ಏನಿದು ಘಟನೆ?

ಕೆಲವು ದಿನಗಳ ಹಿಂದೆ ಸಂಜಯ್‌ ನಾಗ್‌ ತನ್ನ ಸೋಶಿಯಲ್‌ ಮೀಡಿಯಾದ ಎಕ್ಸ್‌ ಖಾತೆಯಲ್ಲಿ, ʼ'ಡಾ. ರಾಜ್‌ಕುಮಾರ್‌ ಅವರು ಅತ್ಯುತ್ತಮ ನಟ. ಆದರೆ ಭಯಾನಕ ಗಾಯಕʼʼ ಎಂದು ಬರೆದಿದ್ದ. ಇದು ಕ್ಷಣ ಮಾತ್ರದಲ್ಲಿ ವೈರಲ್‌ ಆಗಿ ಕನ್ನಡಿಗರು ಕೆರಳಿ ಕೆಂಡವಾಗಿದ್ದರು. ಅತ್ಯುತ್ತಮ ಕಲಾವಿದ, ಶ್ರೇಷ್ಠ ಗಾಯಕನನ್ನು ಅವಮಾನಿಸಿದ್ದನ್ನು ಖಂಡಿಸಿದ್ದರು. ಅದಾದ ಬಳಿಕ ಸಂಜಯ್‌ ನಾಗ್‌ ವಿರುದ್ಧ ಅನೇಕರು ಆನ್‌ಲೈನ್‌ ಮೂಲಕ ಸಮರವನ್ನೇ ಸಾರಿದ್ದರು. ಈ ಹೇಳಿಕೆಗೆ ಬೇಷರತ್‌ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದರು.



ಅಲ್ಲದೆ ಆತನ ಟೈಮ್‌ಲೈನ್‌ನಲ್ಲಿ ಸಾಲು ಸಾಲು ರಾಜ್‌ಕುಮಾರ್‌ ಹಾಡುಗಳ ಸುರಿಮಳೆಯಾಗಿತ್ತು. ಆ ಮೂಲಕ ರಾಜ್‌ಕುಮಾರ್‌ ಅವರು ಶ್ರೇಷ್ಠ ಗಾಯಕ ಎನ್ನುವುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಿದ್ದರು. ಇದರಿಂದ ಆತ ತನ್ನ ಅಕೌಂಟ್‌ ಅನ್ನೇ ಡಿಲೀಟ್‌ ಮಾಡಿದ್ದ. ʼʼಕತ್ತೆಗೇನು ಗೊತ್ತು ಕಸ್ತೂರಿ ಸುವಾಸನೆ?ʼʼ, ʼʼರಾಜ್‌ಕುಮಾರ್‌ ಅವರ ಬಗ್ಗೆ ಮಾತನಾಡುವ ಯೋಗ್ಯತೆಯೂ ಇಲ್ಲʼʼ ಮುಂತಾಗಿ ಆತನನ್ನು ಹಿಗ್ಗಾಮುಗ್ಗಾ ಬೈದಿದ್ದರು.

ಈ ಸುದ್ದಿಯನ್ನೂ ಓದಿ: Mithya Movie: ರಕ್ಷಿತ್ ಶೆಟ್ಟಿ ನಿರ್ಮಾಣದ ʼಮಿಥ್ಯʼ ಚಿತ್ರದ ಟ್ರೈಲರ್‌ ಔಟ್‌

sanjay

ಕೊನೆಗೂ ಕ್ಷಮೆ ಕೋರಿದ ಸಂಜಯ್‌ ನಾಗ್‌

ಕೊನೆಗೂ ಇದೀಗ ಸಂಜಯ್‌ ನಾಗ್‌ ಕ್ಷಮೆ ಕೋರಿದ್ದಾನೆ. ʼʼಡಾ.ರಾಜ್‌ಕುಮಾರ್‌ ಅವರ ಕುರಿತು ನಾನು ಬರೆದ ಮಾತುಗಳಿಗೆ ಮನಃಪೂರ್ವಕ ಕ್ಷಮೆಯಾಚಿಸುತ್ತೇನೆ. ನಾನು ಚಿಕ್ಕಂದಿನಿಂದ ಅಣ್ಣಾವ್ರ ಅಭಿಮಾನಿ ಹಾಗೂ ಅಣ್ಣಾವ್ರ ಬಗ್ಗೆ ಅಪಾರ ಗೌರರವಿದೆ. ನನ್ನ ಉದ್ದೇಶ ಯಾರಿಗೂ ನೋವುಂಟು ಮಾಡುವುದಲ್ಲ. ಅಚಾತುರ್ಯವಾಗಿ ಹೇಳಿದ ಮಾತಿಗೆ ಅಣ್ಣಾವ್ರ ಪ್ರತಿಯೊಬ್ಬ ಅಭಿಮಾನಿ ದೇವ್ರಿಗೂ ಮತ್ತು ದೊಡ್ಮನೆಯವ್ರಿಗೂ ವೈಯಕ್ತಿಕ ಕ್ಷಮೆಯಾಚಿಸುತ್ತೇನೆʼʼ ಎಂದು ಹೇಳಿದ್ದಾನೆ. ಸದ್ಯ ಈ ಪೋಸ್ಟ್‌ ಅನ್ನು ಡಿಲೀಟ್‌ ಮಾಡಿದ್ದಾನೆ.