ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mithya Movie: ರಕ್ಷಿತ್ ಶೆಟ್ಟಿ ನಿರ್ಮಾಣದ ʼಮಿಥ್ಯʼ ಚಿತ್ರದ ಟ್ರೈಲರ್‌ ಔಟ್‌

ರಕ್ಷಿತ್ ಶೆಟ್ಟಿ ನಿರ್ಮಾಣದ, ಸುಮಂತ್ ಭಟ್ ನಿರ್ದೇಶನದ ಹೊಂದಿರುವ ʼಮಿಥ್ಯʼ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ʼಮಿಥ್ಯʼ ಸಿನಿಮಾ ಮಾ. 7ರಂದು ಬಿಡುಗಡೆಯಾಗುತ್ತಿದೆ. ಮಾಸ್ಟರ್ ಅತೀಶ್ ಎಸ್. ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ರೂಪ ವರ್ಕಾಡ್ ಸಹ ಮುಖ್ಯ ಭೂಮಿಕೆಯಲ್ಲಿದ್ದಾರೆ.

ರಕ್ಷಿತ್ ಶೆಟ್ಟಿ ನಿರ್ಮಾಣದ ʼಮಿಥ್ಯʼ ಚಿತ್ರದ ಟ್ರೈಲರ್‌ ರಿಲೀಸ್‌

ʼಮಿಥ್ಯʼ ಚಿತ್ರದ ದೃಶ್ಯ.

Profile Siddalinga Swamy Feb 28, 2025 3:02 PM

ಬೆಂಗಳೂರು: ತಮ್ಮ ಅಭಿನಯದ ಮೂಲಕ‌‌ ಅಭಿಮಾನಿಗಳ ಮನ ಗೆದ್ದಿರುವ ರಕ್ಷಿತ್ ಶೆಟ್ಟಿ (Rakshit Shetty) ಪರಂವಃ ಸ್ಟುಡಿಯೋಸ್ ಮೂಲಕ ಅನೇಕ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿದ್ದಾರೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ʼಮಿಥ್ಯʼ (Mithya Movie). ವಿಭಿನ್ನ ಕಥಾಹಂದರ ಹೊಂದಿರುವ ʼಮಿಥ್ಯʼ ಚಿತ್ರದ ಟ್ರೈಲರ್‌ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರ ಮಾ. 7ರಂದು ಬಿಡುಗಡೆಯಾಗುತ್ತಿದೆ. ʼಏಕಂʼ ವೆಬ್ ಸಿರೀಸ್ ಸೇರಿದಂತೆ ಅನೇಕ ಕಿರುಚಿತ್ರಗಳನ್ನು ನಿರ್ದೇಶಿಸಿರುವ ಸುಮಂತ್ ಭಟ್ ಅವರಿಗೆ ʼಮಿಥ್ಯʼ ಬೆಳ್ಳಿತೆರೆಯಲ್ಲಿ ಮೊದಲ ನಿರ್ದೇಶನದ ಚಿತ್ರ.



11ನೇ ವಯಸ್ಸಿಗೆ ತಂದೆ ತಾಯಿಯನ್ನು ಕಳೆದುಕೊಂಡ ಹುಡುಗ ಮಿಥುನ್ ಮುಂಬೈಯಿಂದ ಉಡುಪಿಗೆ ಬಂದು ತನ್ನ ಚಿಕ್ಕಪ್ಪ, ಚಿಕ್ಕಮ್ಮನ ಆಶ್ರಯ ಪಡೆಯುತ್ತಾನೆ. ಆನಂತರ ಹೊಸ ಪ್ರಪಂಚದ ಹುಡುಕಾಟ, ಹಳೆಯ ಸಂಬಂಧಗಳಲ್ಲಿ ಹೊಸತನವನ್ನು ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಗೆಳೆತನ‌ ಹುಡುಕುವ ಪಯಣಕ್ಕೆ ಮುಂದಾಗುತ್ತಾನೆ. ಇದೇ ಚಿತ್ರದ ಪ್ರಮುಖ ಕಥಾ ಹಂದರವಾಗಿದ್ದರೂ ಇದು ಮಕ್ಕಳ ಚಿತ್ರವಲ್ಲ. ಮಕ್ಕಳು,‌ ದೊಡ್ಡವರು‌ ಎಲ್ಲರೂ ನೋಡುವಂತಹ ಚಿತ್ರ ಎಂದು ತಿಳಿಸಿದ ನಿರ್ದೇಶಕ ಸುಮಂತ್ ಭಟ್, ನಮ್ಮ ಚಿತ್ರ ಈಗಾಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿ ಜನರ ಮನ ಗೆದ್ದಿದೆ. ಚಿತ್ರ ಮಾ. 7ರಂದು ತೆರೆಗೆ ಬರಲಿದೆ ಎಂದು ವಿವರಿಸಿದ್ದಾರೆ.

ಕನ್ನಡದಲ್ಲಿ ಹೊಸ ರೀತಿಯ ಕಥೆಗಳು ಬರುತ್ತಿರಬೇಕು. ಹೊಸ ಪ್ರಯೋಗಗಳು ಆಗುತ್ತಿರಬೇಕು. ಅಂತಹ ಹೊಸಕಥೆಯೊಂದಿಗೆ ತೆರೆಗೆ ಬರುತ್ತಿರುವ ನಮ್ಮ ʼಮಿಥ್ಯʼ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ‌ ರಕ್ಷಿತ್ ಶೆಟ್ಟಿ ಮನವಿ ಮಾಡಿದ್ದಾರೆ.

ಚಿತ್ರದಲ್ಲಿ ಮೂರು ಮುಖ್ಯ ಪಾತ್ರಗಳಿದೆ. ಮಾಸ್ಟರ್ ಅತೀಶ್ ಎಸ್. ಶೆಟ್ಟಿ ಮಿಥುನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಕಾಶ್ ತುಮ್ಮಿನಾಡು, ರೂಪ ವರ್ಕಾಡ್ ಸಹ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಈ ಸುದ್ದಿಯನ್ನೂ ಓದಿ | BESCOM: ಬೆಸ್ಕಾಂನಿಂದ ಕಡಿಮೆ ವಿದ್ಯುತ್ ಬಳಸುವ ಬಿ.ಎಲ್.ಡಿ.ಸಿ. ಫ್ಯಾನ್‌ ಲೋಕಾರ್ಪಣೆ

ಉದಿತ್ ಕುರಾನ ಛಾಯಾಗ್ರಹಣ, ಭುವನೇಶ್ ಮಣಿವಣನ್ ಸಂಕಲನ ಹಾಗೂ ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ ʼಮಿಥ್ಯʼ ಚಿತ್ರಕ್ಕಿದೆ.