ತಜ್ಞ ಮಧುಕೇಶ್ವರ ಹೆಗಡೆ ಕಲ್ಲಳ್ಳಿಮನೆ ಅವರಿಗೆ ಸನ್ಮಾನ
ಕರ್ನಾಟಕ ಕೃಷಿ ತಂತ್ರಜ್ಞರ ಸಂಸ್ಥೆಯು ಜಾಗತಿಕ ಆಹಾರ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಂಡ ರಾಷ್ಟ್ರಮಟ್ಟದ ಜೇನು ಕೃಷಿ ಕುರಿತ ವಿಚಾರ ಸಂಕಿರಣದಲ್ಲಿ ಜೇನು ಕೃಷಿಯಲ್ಲಿ ಅಪರಿ ಮಿತ ಸಾಧನೆ ಮಾಡಿ ಅನೇಕ ಉಪ ಉತ್ಪನ್ನಗಳನ್ನೂ ಪರಿಚಯಿಸಿದ ತಜ್ಞ ಮಧುಕೇಶ್ವರ ಹೆಗಡೆ ಕಲ್ಲಳ್ಳಿ ಮನೆ ಅವರನ್ನು ಗೌರವಿಸಲಾಯಿತು.