ʼಪಾಕ್ನಲ್ಲಿ ನಮ್ಮ ಧುರಂಧರರುʼ ಪುಸ್ತಕ ಬಿಡುಗಡೆ
ಮೈಸೂರು ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸಪ್ನ ಪುಸ್ತಕ ಮಳಿಗೆಯಲ್ಲಿ ನಿವೃತ್ತ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ್ ಅವರ ‘ಪಾಕ್ನಲ್ಲಿ ನಮ್ಮ ಧುರಂಧರರು’ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. ನಿಜ ಜೀವನದಲ್ಲಿ ಗೂಢಚಾರರಾಗಿ ಕೆಲಸ ಮಾಡುವವರ ನೈಜ ಜೀವನದ ಬಗ್ಗೆ ಈ ಪುಸ್ತಕದಲ್ಲಿ ಬರೆದಿದ್ದೇನೆ ಎಂದು ಡಾ.ಡಿ.ವಿ.ಗುರುಪ್ರಸಾದ್ ತಿಳಿಸಿದ್ದಾರೆ.