ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ಬೆಂಗಳೂರಿನ ಮೆಜೆಸ್ಟಿಕ್‌-ಏರ್‌ಪೋರ್ಟ್‌ ಸಬ್‌ ಅರ್ಬನ್‌ ರೈಲು ಯೋಜನೆಗೆ ಕೇಂದ್ರದಿಂದ ಗ್ರೀನ್‌ ಸಿಗ್ನಲ್‌

ಮೆಜೆಸ್ಟಿಕ್‌-ಏರ್‌ಪೋರ್ಟ್‌ ಉಪನಗರ ರೈಲು ಯೋಜನೆಗೆ ಗ್ರೀನ್‌ ಸಿಗ್ನಲ್‌

Bengaluru Suburban Rail Project: ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣ ಸಂಪರ್ಕಿಸುವ ಉಪನಗರ ರೈಲು ಯೋಜನೆಯನ್ನು 4,100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಕೇಂದ್ರ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಒಟ್ಟು 8.5 ಕಿ.ಮೀ ರೈಲು ಮಾರ್ಗ 2030ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಕಡಬದಲ್ಲಿ ಶಾಕಿಂಗ್‌ ಘಟನೆ; ತಂದೆಗೆ ಚಾಕು ಇರಿದ ಬಳಿಕ ಕೋವಿಯಿಂದ ಗುಂಡು ಹಾರಿಸಿಕೊಂಡು ಬಾಲಕ ಆತ್ಮಹತ್ಯೆ!

ತಂದೆಗೆ ಚಾಕುವಿನಿಂದ ಇರಿದ ಬಳಿಕ ಗುಂಡು ಹಾರಿಸಿಕೊಂಡು ಬಾಲಕ ಆತ್ಮಹತ್ಯೆ!

Kadaba News: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಪಾದೆಯಲ್ಲಿ ಘಟನೆ ನಡೆದಿದೆ. ಗಲಾಟೆ ವೇಳೆ ಕೋಪದಿಂದ ತಂದೆಗೆ ಚಾಕುವಿನಿಂದ ಇರಿದಿದ್ದ ಬಾಲಕ, ಬಳಿಕ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಜ್ಯದ ಜೈಲುಗಳಲ್ಲಿ ಹೊಸ ರೂಲ್ಸ್‌; ದರ್ಶನ್ ಸೇರಿ ಇತರ ಕೈದಿಗಳಿಗೆ ವಿಶೇಷ ಸೌಲಭ್ಯಕ್ಕೆ ಕುತ್ತು

ಜೈಲಿನಲ್ಲಿ ದರ್ಶನ್ ಸೇರಿ ಇತರ ಕೈದಿಗಳಿಗೆ ವಿಶೇಷ ಸೌಲಭ್ಯಕ್ಕೆ ಕುತ್ತು

ವಿಚಾರಣಾಧೀನ ಆರೋಪಿಗಳಿಗೆ ಒದಗಿಸುವ ಹೊರಗಿನ ಸೌಕರ್ಯದ ಬಗ್ಗೆ ಹೊಸ ಸುತ್ತೋಲೆ ಹೊರಡಿಸಲಾಗಿದೆ. ಹೊರಗಿನಿಂದ ನೀಡುವ ಆಹಾರ, ಬಟ್ಟೆ, ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಸಂಬಂಧಿಸಿ ಕೆಲ ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ಬಗ್ಗೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್‌ ಕುಮಾರ್‌ ಸುತ್ತೋಲೆ ಹೊರಡಿಸಿದ್ದಾರೆ.

Koratagere News: ಕೊರಟಗೆರೆಯಲ್ಲಿ ಸರ್ಕಾರಿ ಯೋಜನೆಗಳ ಮಾಹಿತಿ ಮಳಿಗೆ ಉದ್ಘಾಟಿಸಿದ ಡಿಸಿ ಶುಭಕಲ್ಯಾಣ್

ಕೊರಟಗೆರೆಯಲ್ಲಿ ಸರ್ಕಾರಿ ಯೋಜನೆಗಳ ಮಾಹಿತಿ ಮಳಿಗೆ ಉದ್ಘಾಟಿಸಿದ ಡಿಸಿ

ಕೊರಟಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಸುವ ಮಾಹಿತಿ ಮಳಿಗೆ ಸ್ಥಾಪಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್‌ ಮಾತನಾಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸರ್ಕಾರದ ಯೋಜನೆಗಳ ಮಾಹಿತಿ ಮಳಿಗೆ ಸ್ಥಾಪಿಸಿ, ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟಾಟಾ ಏಸ್-ಸ್ಕೂಟರ್‌ ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ಸ್ಥಳದಲ್ಲೇ ಸಾವು

ಬೆಂಗಳೂರಿನಲ್ಲಿ ಟಾಟಾ ಏಸ್-ಸ್ಕೂಟರ್‌ ಡಿಕ್ಕಿಯಾಗಿ ತಾಯಿ-ಮಗ ಸಾವು

ಡಿ ಮಾರ್ಟ್‌ನಿಂದ ದಿನಸಿ ಸಾಮಗ್ರಿ ಖರೀದಿಸಿ ತಾಯಿ-ಮಗ ಡಿಯೋ ಸ್ಕೂಟರ್‌ನಲ್ಲಿ ಮನೆಯತ್ತ ಸಾಗುತ್ತಿದ್ದಾಗ ಎದುರಿಗೆ ಬಂದ ಟಾಟಾ ಏಸ್‌ ಡಿಕ್ಕಿಯಾಗಿದೆ. ಇದರಿಂದ ಸ್ಥಳದಲ್ಲೇ ತಾಯಿ-ಮಗ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಕಟೌಟ್ ಬಿದ್ದು ಗಾಯಗೊಂಡವರ ಆರೋಗ್ಯ ವಿಚಾರಿಸಿದ ಸಿಎಂ

ಹುಬ್ಬಳ್ಳಿಯಲ್ಲಿ ಕಟೌಟ್ ಬಿದ್ದು ಗಾಯಗೊಂಡವರ ಆರೋಗ್ಯ ವಿಚಾರಿಸಿದ ಸಿಎಂ

cutout collapse in Hubli: ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ಮನೆ ಹಂಚಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಳವಡಿಸಿದ್ದ ಬೃಹತ್ ಕಟೌಟ್‌ಗಳು ಶನಿವಾರ ಮುರಿದುಬಿದ್ದು ನಾಲ್ವರು ಗಾಯಗೊಂಡಿದ್ದರು. ಗಾಯಾಳುಗಳನ್ನು ಸಿಎಂ ಸಿದ್ದರಾಮಯ್ಯ ಅವರು ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ಕೊಳೆಗೇರಿ ಜನರನ್ನು ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆಗಳ ವಿತರಣೆ: ಸಿಎಂ

ಕೊಳೆಗೇರಿ ಜನರಿಗೆ ಬೃಹತ್ ಪ್ರಮಾಣದಲ್ಲಿ ಮನೆಗಳ ವಿತರಣೆ: ಸಿಎಂ

ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಕಾಂಗ್ರೆಸ್ ಸರ್ಕಾರ 14,58,000 ಮನೆಗಳನ್ನು ಕಟ್ಟಿ ಇತಿಹಾಸ ನಿರ್ಮಿಸಿ ವಸತಿ ಕ್ರಾಂತಿ ಮಾಡಿದ್ದೆವು. ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ 2024ರಲ್ಲಿ 36,789 ಮನೆಗಳನ್ನು ಮೊದಲನೇ ಹಂತದಲ್ಲಿ ವಿತರಿಸಿದ್ದ ನಮ್ಮ ಸರ್ಕಾರ ಎರಡನೇ ಹಂತದಲ್ಲಿ 45 ಸಾವಿರ ಮನೆಗಳನ್ನು ಹಂಚುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕಾರು ಚಲಾಯಿಸುತ್ತ ಮಹಿಳೆಯನ್ನು ಹಿಂಬಾಲಿಸಿದ ಬೆತ್ತಲೆ ವ್ಯಕ್ತಿ: ಬೆಂಗಳೂರಿನಲ್ಲಾದ ಕರಾಳ ಅನುಭವ ಬಿಚ್ಚಿಟ್ಟ ಸಂತ್ರಸ್ತೆ

ಕಾರು ಚಲಾಯಿಸುತ್ತ ಮಹಿಳೆಯನ್ನು ಹಿಂಬಾಲಿಸಿದ ಬೆತ್ತಲೆ ವ್ಯಕ್ತಿ

ಬೆಂಗಳೂರಿನ ಸಾರ್ವಜನಿಕ ರಸ್ತೆಯಲ್ಲಿ ಕಾರು ಚಲಾಯಿಸುತ್ತ ಬೆತ್ತಲೆ ವ್ಯಕ್ತಿಯೊಬ್ಬ ಹಿಂಬಾಲಿಸಿದ್ದಾನೆ ಎಂದು ಮಹಿಳೆಯೊಬ್ಬರು ಸೋಶಿಯಲ್‌ ಮೀಡಿಯಾದಲ್ಲಿ ಆರೋಪಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅವರು ಹಂಚಿಕೊಂಡಿರುವ ಮಾಹಿತಿ ವೈರಲ್ ಆಗಿದ್ದು, ಮಹಿಳೆಯರ ಸುರಕ್ಷತೆ ಕುರಿತಾಗಿ ಮತ್ತೆ ಗಂಭೀರ ಚರ್ಚೆ ಹುಟ್ಟು ಹಾಕಿದೆ.

45 ದಿನದಿಂದ ಏಕಾಏಕಿ ಇ-ಖಾತಾ ಸ್ಥಗಿತ: ಲ್ಯಾಂಡ್‌ ಡೆವಲಪರ್ಸ್‌ ಅಸೋಸಿಯೇಷನ್‌ ಆಕ್ರೋಶ

45 ದಿನದಿಂದ ಇ-ಖಾತಾ ಸ್ಥಗಿತ: ಲ್ಯಾಂಡ್‌ ಡೆವಲಪರ್ಸ್ ಆಕ್ರೋಶ

Tumkur News: ಇ-ಖಾತಾ ಸ್ಥಗಿತದಿಂದ ಬ್ಯಾಂಕ್‌ನಿಂದ ಸಾಲ ಸೌಲಭ್ಯ ದೊರೆಯದೆ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಸಿಸಿ ಹಾಗೂ ಒಸಿ ಪಡೆಯುವ ಪ್ರಕ್ರಿಯೆ ಸುಮಾರು 2 ವರ್ಷಗಳಿಂದ ವಿಳಂಬವಾಗುತ್ತಿದೆ ಎಂದು ಲ್ಯಾಂಡ್‌ ಡೆವಲಪರ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷ ಸ್ಪೂರ್ತಿ ಚಿದಾನಂದ್ ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ 88,345 ಮನೆಗಳ ವಿತರಣೆಗೆ ಸಿಎಂ ಚಾಲನೆ; ಬಡವರು, ನಿರಾಶ್ರಿತರ ಮುಖದಲ್ಲಿ ಮಂದಹಾಸ

ಹುಬ್ಬಳ್ಳಿಯಲ್ಲಿ 88,345 ಸಾವಿರ ಮನೆಗಳ ವಿತರಣೆಗೆ ಸಿಎಂ ಚಾಲನೆ

ದುಬಾರಿ ಕಾಲದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಎಂಬುದು ಗಗನಕುಸುಮವಾಗಿತ್ತು. ಆದರೆ ಸರ್ಕಾರದ ಈ ಯೋಜನೆಯು ಹಲವು ನಿರಾಶ್ರಿತ ಕುಟುಂಬಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಸ್ವಂತ ಮನೆಯ ಕನಸು ನನಸಾದ ಹಿನ್ನೆಲೆಯಲ್ಲಿ ಫಲಾನುಭವಿಗಳು ಸಂತಸ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

SSLC Preparatory Exam 2: ಜ.27ರಿಂದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ-2; ವೇಳಾಪಟ್ಟಿ ಪ್ರಕಟ

ಜ.27ರಿಂದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ-2; ವೇಳಾಪಟ್ಟಿ ಪ್ರಕಟ

ರಾಜ್ಯದಲ್ಲಿ ಜನವರಿ 27ರಿಂದ ಫೆಬ್ರವರಿ2ರವರೆಗೆ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ-2 ನಡೆಯಲಿದೆ. ಇದಕ್ಕೆ ಸಂಬಂಧಿಸಿ ಶಾಲಾ ಶಿಕ್ಷಣ ಇಲಾಖೆಯಿಂದ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ 3 ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪೂರ್ವ ಸಿದ್ಧತಾ ಪರೀಕ್ಷೆ-1 ಜನವರಿ 5ರಿಂದ 10ರವರೆಗೆ ನಡೆದಿತ್ತು.

National Girl Child Day: ಹೆಣ್ಣು ಮಗು, ನಾಳೆಯ ಭರವಸೆಯ ಬೆಳಗು

ಹೆಣ್ಣು ಮಗು, ನಾಳೆಯ ಭರವಸೆಯ ಬೆಳಗು

‘ಒಂದು ಗಂಡು ಮಗುವಿಗೆ ಶಿಕ್ಷಣ ನೀಡಿದರೆ ಒಬ್ಬ ವ್ಯಕ್ತಿಗೆ ಶಿಕ್ಷಣ ನೀಡಿದಂತೆ, ಆದರೆ ಒಂದು ಹೆಣ್ಣು ಮಗುವಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬಕ್ಕೇ ಶಿಕ್ಷಣ ನೀಡಿದಂತೆ.‘ ಈ ಮಾತು ಹೆಣ್ಣು ಮಗುವಿನ ಮಹತ್ವವನ್ನು ಸಾರುತ್ತದೆ. ಪ್ರತಿ ವರ್ಷ ಜ.24ರಂದು ಭಾರತದಾದ್ಯಂತ "ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ" ವನ್ನು ಆಚರಿಸಲಾಗುತ್ತದೆ.

ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿದ್ದಕ್ಕೆ ಪೊಲೀಸರಿಂದ ಕಿರುಕುಳ ಆರೋಪ; ವಿಧಾನಸೌಧದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ವಿಧಾನಸೌಧದ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಬೆಂಗಳೂರು ಹೊರವಲಯದ ಸೋಲದೇವನಹಳ್ಳಿಯಲ್ಲಿ ಅಕ್ರಮ ಬಾಂಗ್ಲಾದೇಶ ವಲಸಿಗರನ್ನು ಬಯಲಿಗೆಳೆದಿದ್ದಕ್ಕೆ ಪೊಲೀಸರಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ವಿಧಾನಸೌಧದ ಮುಂದೆ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಸೇವಿಸುವುದನ್ನು ಗಮನಿಸಿದ ವಿಧಾನಸೌಧ ಪೊಲೀಸರು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಲ್ ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಮಾನ್ಯತೆ ರದ್ಧತಿ ಆದೇಶ ಎತ್ತಿ ಹಿಡಿದ ಶಾಲಾ ಶಿಕ್ಷಣ ಇಲಾಖೆಯ ಮೇಲ್ಮನವಿ ಪ್ರಾಧಿಕಾರ

ಸುದೀರ್ಘ 36 ಪುಟಗಳ ಆದೇಶ ಜಾರಿಗೊಳಿಸಿದ ಶಿಕ್ಷಣ ಇಲಾಖೆ ಆಯುಕ್ತರು

ಶಾಲಾ ಮಾನ್ಯತೆ ರದ್ದುಪಡಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ಹಿಂದಿನ ಆದೇಶ ಪ್ರಶ್ನಿಸಿ ಅಲ್ ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಸಲ್ಲಿಸಿದ್ದ ಮೇಲ್ಮನವಿ ಬಗ್ಗೆ ಸುದೀರ್ಘ ವಾದ ವಾದ ಪ್ರತಿವಾದ ಆಲಿಸಿದ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು 36 ಪುಟಗಳ ಸಮಗ್ರ ಹಾಗೂ ವಿಶೇಷವಾದ ಆದೇಶ ಹೊರಡಿಸಿದ್ದಾರೆ.

ಐಸಿಎಸ್ಐ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಎಸ್.ಪವನ್ ಜಿ. ಚಂದಕ್, ಉಪಾಧ್ಯಕ್ಷರಾಗಿ ಸಿ.ಎಸ್. ದ್ವಾರಕಾನಾಥ್ ಚೆನ್ನೂರ್

ಐಸಿಎಸ್ಐ ರಾಷ್ಟ್ರೀಯ ಅಧ್ಯಕ್ಷರಾಗಿ ಸಿಎಸ್. ಪವನ್ ಜಿ. ಚಂದಕ್ ಆಯ್ಕೆ

ಕೇಂದ್ರ ಸರ್ಕಾರದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದಡಿ ಬರುವ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರಟರೀಸ್ ಆಫ್ ಇಂಡಿಯಾ (ಐಸಿಎಸ್ಐ) ಸಂಸ್ಥೆ ಯ 2026ನೇ ಸಾಲಿನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿಎಸ್. ಪವನ್ ಜಿ. ಚಂದಕ್, ಉಪಾಧ್ಯಕ್ಷರಾಗಿ ಸಿಎಸ್. ದ್ವಾರಕಾ ನಾಥ್ ಚೆನ್ನೂರ್ ಆಯ್ಕೆಯಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ಮನೆ ಹಂಚಿಕೆ ಕಾರ್ಯಕ್ರಮ: ಸಿಎಂ, ಡಿಸಿಎಂ ಆಗಮನಕ್ಕೂ ಮುನ್ನವೇ  ಕುಸಿದುಬಿತ್ತು ಕಟೌಟ್‌ಗಳು

ಮನೆ ಹಂಚಿಕೆ ಕಾರ್ಯಕ್ರಮಕ್ಕೂ ಮುನ್ನವೇ ಕುಸಿದುಬಿತ್ತು ಕಟೌಟ್‌ಗಳು

ಮಂಟೂರ ರಸ್ತೆಯಲ್ಲಿ ಶನಿವಾರ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಮ್ಮಿಕೊಂಡಿರುವ ಮನೆ ಹಂಚಿಕೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಳವಡಿಸಿದ್ದ ಬೃಹತ್ ಕಟೌಟ್‌ಗಳು ಮುರಿಬಿದ್ದಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ವೇದಿಕೆಯ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರ ಬೃಹತ್ ಕಟೌಟ್‌ಗಳನ್ನು ಅಳವಡಿಸಲಾಗಿತ್ತು.

ಈ ಲಾಂಗ್‌ ವೀಕೆಂಡ್‌ನಲ್ಲಿ ಹೆಚ್ಗಿ ಬುಕ್ಕಿಂಗ್‌ ಆಗಿರುವ ಸ್ಥಳ ಯಾವುದು ಗೊತ್ತೇ? ಮೇಕ್‌ ಮೈ ಟ್ರೀಪ್‌ ನೀಡಿರುವ ವರದಿಯಲ್ಲಿ ಆಸಕ್ತಿದಾಯಕ ಮಾಹಿತಿ ಬಹಿರಂಗ

ಲಾಂಗ್‌ ವೀಕೆಂಡ್‌ನಲ್ಲಿ ಹೆಚ್ಗಿ ಬುಕ್ಕಿಂಗ್‌ ಆಗಿರುವ ಸ್ಥಳ ಯಾವುದು ಗೊತ್ತೇ?

ಸಾಮಾನ್ಯವಾಗಿ ಲಾಂಗ್‌ ವೀಕೆಂಡ್‌ ದೊರೆತರೆ ವಿಶ್ರಾಂತಿಗಾಗಿ ಜನ ಪ್ರಯಾಣ ಬೆಳೆಸುವುದು ಸಾಮಾನ್ಯ. ಆದರೆ, ಎಲ್ಲಿ ತೆರಳಬೇಕು? ಯಾವ ಪ್ರದೇಶ ಉತ್ತಮ ಎಂದು ಹುಡುಕುವುದೇ ಕಷ್ಟ. ಜನರ ಎಲ್ಲಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ ಎಂಬುದನ್ನು ಸಹ ಇತರರು ಆಸಕ್ತಿ ವಹಿಸುತ್ತಾರೆ.

ಬಳ್ಳಾರಿ ಮಾಡೆಲ್ ಹೌಸ್‌ಗೆ ಬೆಂಕಿ ಪ್ರಕರಣ; ಬಾಲಾರೋಪಿಗಳು ಸೇರಿ 8 ಮಂದಿ ವಶಕ್ಕೆ

ಬಳ್ಳಾರಿ ಮಾಡೆಲ್ ಹೌಸ್‌ಗೆ ಬೆಂಕಿ ಪ್ರಕರಣ; 8 ಮಂದಿ ವಶಕ್ಕೆ

ಶಾಸಕ ಜನಾರ್ದನ ರೆಡ್ಡಿ ಅವರಿಗೆ ಸೇರಿದ ಜಿ ಸ್ಕೈರ್ ಲೇಔಟ್​​ನಲ್ಲಿರುವ ಮಾಡೆಲ್ ಹೌಸ್​ನಲ್ಲಿ ಸಂಭವಿಸಿದ ಅಗ್ನಿ ಅವಘಡ ಸಂಬಂಧ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರೂ ಸೇರಿದಂತೆ ಒಟ್ಟು 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತನನ್ನು ಕೊಂದಿದ್ದ ಚಿರತೆ ಸೆರೆ

ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತನನ್ನು ಕೊಂದಿದ್ದ ಚಿರತೆ ಸೆರೆ

ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದ ಭಕ್ತನ ಬಲಿಪಡೆದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಕೊನೆಗೂ ಸೆರೆ ಹಿಡಿದಿದೆ. ಅರಣ್ಯ ಇಲಾಖೆಯ ನೇತೃತ್ವದಲ್ಲಿ ಡ್ರೋನ್ ಮೇಲ್ವಿಚಾರಣೆ ಹಾಗೂ ಸ್ಥಳೀಯ ಮಟ್ಟದಲ್ಲಿ ತೀವ್ರ ಕಣ್ಗಾವಲು ಮೂಲಕ ಚಿರತೆಯ ಚಲನವಲನವನ್ನು ಪತ್ತೆ ಹಚ್ಚಲಾಯಿತು

ಮಕ್ಕಳ ಕಾಳಜಿ ಕುರಿತು ಶಿಕ್ಷರಿಗೆ ಸೂಚನೆ ಹೊರಡಿಸಿದ ಶಿಕ್ಷಣ ಇಲಾಖೆ; ಆದೇಶದಲ್ಲೇನಿದೆ?

ಮಕ್ಕಳ ಕಾಳಜಿ ಕುರಿತು ಶಿಕ್ಷರಿಗೆ ಸೂಚನೆ ಹೊರಡಿಸಿದ ಶಿಕ್ಷಣ ಇಲಾಖೆ

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ ಹೊರಬಿದ್ದಿದೆ. ಸರ್ಕಾರಿ ಕಾರ್ಯಕ್ರಮಗಳು, ರಾಷ್ಟ್ರೀಯ ಹಬ್ಬಗಳ ಆಚರಣೆ ವೇಳೆ ಶಾಲಾ-ಕಾಲೇಜುಗಳ ಇತರೆ ಸಾಂಸ್ಕೃತಿಕ, ಆಡಳಿತಾತ್ಮಕ ಕಾರ್ಯಕ್ರಮ ಆಯೋಜನೆ ವೇಳೆ ವಿದ್ಯಾರ್ಥಿಗಳ ರಕ್ಷಣೆಗೆ ಕ್ರಮಕ್ಕೆ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.

Dr. Vijaya Sankeshwar: ನಾವು ಎಷ್ಟೇ ದೊಡ್ಡವರಾದರೂ ತಂದೆ ತಾಯಿ ಋಣ ತೀರಿಸಲು ಅಸಾಧ್ಯ: ಡಾ.ವಿಜಯ ಸಂಕೇಶ್ವರ

ಸನಾತನ ಧರ್ಮ ಉಳಿಯಬೇಕು

ಮನುಷ್ಯ ಪ್ರತಿಯೊಂದನ್ನೂ ಕಷ್ಟಪಟ್ಟು ಪಡೆದುಕೊಂಡಾಗ ಮಾತ್ರ ಅದರ ಬೆಲೆ ಅವನಿಗೆ ತಿಳಿಯುತ್ತದೆ. ಬಿಟ್ಟಿ ಅಥವಾ ಉಚಿತವಾಗಿ ಪಡೆದುಕೊಂಡರೆ ಅದರ ಮೌಲ್ಯ ಅವನಿಗೆ ಗೊತ್ತಾ ಗಲ್ಲ. ಉಚಿತವಾಗಿ ಸಿಗುವ ಎಲ್ಲದ್ದರಿಂದ ಮನುಷ್ಯ ಉದ್ಧಾರವಾಗಲ್ಲ ಬದಲಾಗಿ ದುಷ್ಠನಾಗು ತ್ತಾನೆ, ದೇಶದ್ರೋಹಿಯಾಗುತ್ತಾನೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಈ ಸುರಕ್ಷತಾ ಮಾನದಂಡ ಪಾಲಿಸಿದರೆ ಮಾತ್ರ ಖಾಸಗಿ ಬಸ್‌ಗಳಿಗೆ ಎಫ್‌ಸಿ; ಸರ್ಕಾರದಿಂದ ಕಠಿಣ ಮಾರ್ಗಸೂಚಿ

ಈ ಸುರಕ್ಷತಾ ಮಾನದಂಡ ಪಾಲಿಸಿದರೆ ಮಾತ್ರ ಖಾಸಗಿ ಬಸ್‌ಗಳಿಗೆ ಎಫ್‌ಸಿ

Fitness Certificate for Private buses: ಪ್ರಯಾಣಿಕರ ಸುರಕ್ಷತಾ ಮಾನದಂಡಗಳನ್ನು ಪಾಲಿಸಿದರೆ ಮಾತ್ರ ಖಾಸಗಿ ಹವಾನಿಯಂತ್ರಿತ ಸ್ಲೀಪರ್ ಕೋಚ್ ಹಾಗೂ ಪ್ರವಾಸಿ ಬಸ್‌ಗಳಿಗೆ ವಾಹನ ಸಾಮರ್ಥ್ಯ ಪ್ರಮಾಣ ಪತ್ರ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

Dr.M.C.Sudhakar: ಜ.26, 27 ದಿನಗಳ ಫಲಪುಷ್ಪ ಪ್ರದರ್ಶನ : ದೇಶಿ, ವಿದೇಶಿ ಹೂಹಣ್ಣು ತರಕಾರಿ ಪ್ರದರ್ಶನ

ಜ.26, 27 ದಿನಗಳ ಫಲಪುಷ್ಪ ಪ್ರದರ್ಶನ

ಪ್ರಮುಖ ಆಕರ್ಷಣೆಗಳಾಗಿ ಹೂವುಗಳಿಂದ ಅಲಂಕರಿಸಿದ ಐಸಿಸಿ ಮಹಿಳಾ ವಿಶ್ವ ಕಪ್ ಕಲಾಕೃತಿಯ ಚಿತ್ರ , ಕ್ರಿಕೆಟ್ ಬ್ಯಾಟ್ ಮತ್ತು ಬಾಲ್, ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರ ಪ್ರತಿಮೆ, ಡಾ ಎಂ.ಹೆಚ್.ಮರೀಗೌಡರ ಪ್ರತಿಮೆ, ಹಸು-ಕರು ಪ್ರತಿಮೆ, ಜಿಲ್ಲೆಯ ರೈತ ಮಹಿಳೆಯ ರಿಂದ ತಯಾರಿಸಲ್ಪಡುವ ಹೂವಿನ ಜೋಡಣೆ ಕಲಾಕೃತಿ, ಹೂವುಗಳಿಂದ ಅಲಂಕರಿಸಿದ ಆಧುನಿಕ ಮಹಿಳೆ ಕಲಾಕೃತಿ, ಮಾದರಿ ಕೈತೋಟ ಕಿಟೆನ್ ಗಾರ್ಡನ್ ಇರಲಿದೆ

Sandalwood actor Ganeshrao Kesarkar: ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಮೇಲೆ ಅನಗತ್ಯ ಒತ್ತಡ ಬೇಡ: ಸಿನಿಮಾ ನಟ ಗಣೇಶ್‌ರಾವ್ ಕೇಸರ್‌ಕರ್ ಅಭಿಮತ

ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಮೇಲೆ ಅನಗತ್ಯ ಒತ್ತಡ ಬೇಡ

ನಾನೂ ಕೂಡ ಶಾಲಾ ಹಂತದಲ್ಲಿ ದೊರೆತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನದ ವೇದಿಕೆಯಿಂದಲೇ ಇಂದು ಖ್ಯಾತ ನಟನಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಯರ‍್ಯಾರ ಹಣೆಯಲ್ಲಿ ಏನೇನು ಬರೆದಿದೆಯೋ ಅದೇ ಆಗಲಿದೆ. ಯಾವುದನ್ನೂ ನಾವು ಅಮುಖ್ಯ ಎಂದು ಭಾವಿಸಿ ಕಡೆಗಣಿಸಬಾರದು.

Loading...