ಹಣಕಾಸು ವರ್ಷ 2025–26ರಲ್ಲಿ KIA ಬೆಂಗಳೂರಿನ ದಾಖಲೆ ಬೆಳವಣಿಗೆ
ದೇಶೀಯ ವರ್ಗಾವಣೆ ಪ್ರಯಾಣಿಕರ ಸಂಖ್ಯೆ ಸುಮಾರು ಶೇ.3.2ರಷ್ಟು ಏರಿಕೆಯಾದರೆ, ಅಂತಾ ರಾಷ್ಟ್ರೀಯ ವರ್ಗಾವಣೆ ಪ್ರಯಾಣಿಕರ ಸಂಖ್ಯೆ ಶೇ.50ಕ್ಕಿಂತ ಹೆಚ್ಚು ವೇಗದಲ್ಲಿ ಬೆಳೆಯುತ್ತಿದೆ. ಇದು ಭವಿಷ್ಯದಲ್ಲಿ ಹೆಚ್ಚಿನ ಸಾಧ್ಯತೆಗಳನ್ನು ಸೂಚಿಸುತ್ತದೆ. ಪ್ರಸ್ತುತ, ‘ಕನೆಕ್ಷನ್ಸ್ ಬೈ ಬಿಎಲ್ ಆರ್’ ಸೇವೆಯ ಮೂಲಕ ವರ್ಗಾವಣೆ ಪ್ರಯಾಣಿಕರಿಗೆ ಇನ್ನಷ್ಟು ಸುಗಮ ಮತ್ತು ವಿಶ್ವಾಸಾರ್ಹ ಸಂಪರ್ಕ ಅನುಭವವನ್ನು ಒದಗಿಸಲಾಗುತ್ತಿದೆ.