ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಕಾವೇರಿ ವಿವಾದ; ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ

ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ಕಾವೇರಿ ನೀರು ವಿವಾದದಲ್ಲಿ ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದ್ದು, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ನಿತ್ಯ 9,000 ಕ್ಯುಸೆಕ್ ಕಾವೇರಿ ನದಿ ನೀರು ಹರಿಸುವಂತೆ 'ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಂಗಳವಾರ (ಆ.25ರಂದು) ಆದೇಶಿಸಿದೆ.

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ; ಎಲ್ಲಾ 329 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ CID ನೋಟೀಸ್‌!

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ; ಸಿಐಡಿಯಿಂದ ತನಿಖೆ ಚುರುಕು

KPSC Veterinary Officer recruitment scam: ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಪರಾಧ ತನಿಖಾ ಇಲಾಖೆ ಅಧಿಕಾರಿಗಳು ತನಿಖೆಯನ್ನು ಚುರುಕು ಮಾಡಿದ್ದಾರೆ. ಇದೀಗ ಎಲ್ಲಾ 329 ಅಭ್ಯರ್ಥಿಗಳಿಗೆ ಏಕಾಏಕಿ ನೋಟಿಸ್ ಜಾರಿ ಮಾಡಿ ಶಾಕ್‌ ನೀಡಿದ್ದಾರೆ.

SIR: ಎಸ್‌ಐಆರ್‌ ಕರಡು ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 9.44 ಲಕ್ಷ ಮತದಾರರು

ಎಸ್‌ಐಆರ್‌ ಕರಡು ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 9.44 ಲಕ್ಷ ಮತದಾರರು

ಜಿಲ್ಲೆಯ ಐದು ಕ್ಷೇತ್ರಗಳ ವ್ಯಾಪ್ತಿಯ 10,69,504 ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸ ಲಾಗಿತ್ತು. ಈ ಪೈಕಿ ಆಗಸ್ಟ್‌ 17ರವರೆಗೆ 9,44,623 ಮತದಾರರ ಮಾಹಿತಿಯನ್ನು ಸ್ವೀಕರಿಸಿ ಗಣಕೀಕರಣ ಮಾಡಲಾಗಿದೆ. ಗೌರಿಬಿದನೂರು ಕ್ಷೇತ್ರದಲ್ಲಿ 1,89,197, ಬಾಗೇಪಲ್ಲಿಯಲ್ಲಿ 1,83,728, ಚಿಕ್ಕಬಳ್ಳಾಪುರದಲ್ಲಿ 1,91,567, ಶಿಡ್ಲಘಟ್ಟದಲ್ಲಿ 1,84,975 ಹಾಗೂ ಚಿಂತಾಮಣಿಯಲ್ಲಿ 1,95,156 ಮತದಾರರ ಮಾಹಿತಿ ಪರಿಷ್ಕರಿಸಲಾಗಿದೆ

Chikkaballapur News: ಎಸ್‌ಐಆರ್‌ ಕಾರ್ಯ ಪಾರದರ್ಶಕವಾಗಿರಲಿ; ಅರ್ಹರ ಹೆಸರು ಸೇರ್ಪಡೆ, ಅನರ್ಹರ ಪರಿಶೀಲನೆಗೆ ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ ಜಿ.ಪ್ರಭು

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಲೋಪಕ್ಕೆ ಅವಕಾಶವಿಲ್ಲ

ಎಸ್‌ಐಆರ್‌-2026ರ ವೇಳಾಪಟ್ಟಿ ಹಾಗೂ ಪರಿಷ್ಕರಣೆ ಪ್ರಕ್ರಿಯೆಯ ವಿವಿಧ ಹಂತಗಳ ಕುರಿತು ಮಾಹಿತಿ ನೀಡಿದರು. ಸ್ವೀಕೃತ ಗಣತಿದಾರರ ನಮೂನೆಗಳ ಗಣಕೀಕರಣದ ಪ್ರಗತಿ ಪರಿಶೀಲಿಸುವ ಜತೆಗೆ ಗೈರು ಹಾಜರು, ಸ್ಥಳಾಂತರಗೊಂಡವರು, ಮೃತರು, ದ್ವಿಪ್ರತಿ ಸೇರಿದಂತೆ ವಿವಿಧ ಪ್ರಕರಣಗಳನ್ನು ನಿಯಮಾನುಸಾರ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು

ಹನೂರು ಎನ್‌ಕೌಂಟರ್‌ ಕೇಸ್‌; ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆ, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?

ಹನೂರು ಶೂಟ್‌ಔಟ್‌ ಕೇಸ್‌; ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆ

ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇದೀಗ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

IAS​ ಅಧಿಕಾರಿ ಫೌಜಿಯಾ ವಿರುದ್ಧ ಅವಹೇಳನ ಹೇಳಿಕೆ ಪ್ರಕರಣ: ಬಿಜೆಪಿ MLC ಎನ್. ರವಿಕುಮಾರ್‌ಗೆ  ಜಾಮೀನು ರಹಿತ ಬಂಧನ ವಾರಂಟ್

ಬಿಜೆಪಿ MLC ಎನ್. ರವಿಕುಮಾರ್‌ಗೆ ಜಾಮೀನು ರಹಿತ ಬಂಧನ ವಾರಂಟ್!

ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ನೀಡಿದ್ದ ಅವಹೇಳನಕಾರಿ ಹಾಗೂ ಕೋಮು ಪ್ರಚೋದಕ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಗೈರುಹಾಜರಾದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.

ವಿಷಕಾರಿ ದತ್ತೂರಿ ಹಣ್ಣು ಮಾರಾಟ; ಕರ್ನಾಟಕದಲ್ಲಿ ಅಮೆಜಾನ್, ಇನ್‌ಸ್ಟಾಮಾರ್ಟ್, ಬಿಗ್‌ಬಾಸ್ಕೆಟ್‌ನ ಪರವಾನಗಿ ರದ್ದು

ರಾಜ್ಯದಲ್ಲಿ ಅಮೆಜಾನ್,ಇನ್‌ಸ್ಟಾಮಾರ್ಟ್,ಬಿಗ್‌ಬಾಸ್ಕೆಟ್‌ನ ಪರವಾನಗಿ ರದ್ದು

Datura: ವಿಷಕಾರಿ ದತ್ತೂರಿ ಹಣ್ಣು ಮತ್ತು ಬೀಜಗಳನ್ನು ಮಾನವ ಬಳಕೆಗಾಗಿ ಖಾದ್ಯ ಉತ್ಪನ್ನಗಳಾಗಿ ಪಟ್ಟಿ ಮಾಡಿರುವುದು ಕಂಡುಬಂದ ನಂತರ ಕರ್ನಾಟಕದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಅಮೆಜಾನ್, ಇನ್‌ಸ್ಟಾಮಾರ್ಟ್ ಮತ್ತು ಬಿಗ್‌ಬಾಸ್ಕೆಟ್‌ನ ಆಹಾರ ಪರವಾನಗಿಗಳನ್ನು ಅಮಾನತುಗೊಳಿಸಿದೆ.

ಕರಾವಳಿ ಜಿಲ್ಲೆಗಳಲ್ಲಿ ಇಂದೇ ಈದ್ ಮಿಲಾದ್ ಸಾರ್ವತ್ರಿಕ ರಜೆ;  ಉಳಿದ ಕಡೆಗಳಲ್ಲಿ ಬುಧವಾರ

ಕರಾವಳಿ ಜಿಲ್ಲೆಗಳಲ್ಲಿ ಇಂದೇ ಈದ್ ಮಿಲಾದ್ ಸಾರ್ವತ್ರಿಕ ರಜೆ

ರಾಜ್ಯ ಸರ್ಕಾರವು ಈದ್‌ ಮಿಲಾದ್‌ ಸಾರ್ವತ್ರಿಕ ರಜೆ ದಿನಾಂಕದಲ್ಲಿ ಬದಲಾವಣೆ ಮಾಡಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಮಂಗಳವಾರ (ಆಗಸ್ಟ್‌ 25 ಕ್ಕೆ) ರಜೆ ಘೋಷಣೆ ಮಾಡಲಾಗಿದೆ. ಉಳಿದ ಕಡೆಗಳಲ್ಲಿ ಬುಧವಾರ ರಜೆ ಇರಲಿದೆ. ಈ ಮೊದಲು ಸರ್ಕಾರಿ ರಜೆಯು ಆಗಸ್ಟ್‌ 26ಕ್ಕೆ ನಿಗದಿಯಾಗಿತ್ತು.

ನೀರು ಬಿಡಿ: ಮತ್ತೊಮ್ಮೆ ಸಿಡಬ್ಲ್ಯೂಆರ್‌ಸಿ ಆರ್ಡರ್

ನೀರು ಬಿಡಿ: ಮತ್ತೊಮ್ಮೆ ಸಿಡಬ್ಲ್ಯೂಆರ್‌ಸಿ ಆರ್ಡರ್

ಆಗಸ್ಟ್ 25 ರ ಬೆಳಗ್ಗೆ 8 ಗಂಟೆಯಿಂದ ಮುಂದಿನ 15 ದಿನಗಳ ಅವಧಿಯಲ್ಲಿ ಬಿಳಿಗುಂಡ್ಲುವಿನಲ್ಲಿ ಒಟ್ಟು 11.66 ಟಿಎಂಸಿ ನೀರು ಹರಿಯುವಂತೆ ನೋಡಿಕೊಳ್ಳಬೇಕು ಎಂದು ಸಿಡಬ್ಲ್ಯೂಆರ್‌ಸಿ ಸೂಚಿಸಿದೆ. ಈಗಾಗಲೇ ಕೆಆರ್‌ಎಸ್, ಕಬಿನಿ ಸೇರಿದಂತೆ ರಾಜ್ಯದ ಹಲವು ಜಲಾಶಯಗಳಿಂದ 30 ಟಿಎಂಸಿಗೂ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ.

ಎಸ್‌ʼಐಆರ್‌: ಈಗ ನೋಟೀಸ್‌ ಸರದಿ

ಎಸ್‌ʼಐಆರ್‌: ಈಗ ನೋಟೀಸ್‌ ಸರದಿ

ಚುನಾವಣಾ ಆಯೋಗದ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 5.54 ಕೋಟಿ ಮತದಾರರಿಗೆ ಎನ್ಯುಮರೇಷನ್ ಫಾರ್ಮ್ ವಿತರಿಸಲಾಗಿತ್ತು. ಈ ಪೈಕಿ 4.46 ಕೋಟಿ ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಉಳಿದಂತೆ 43.81 ಲಕ್ಷ ಮತದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಆರಂಭವಾಗಲಿದೆ

ಪ್ರತಿಪಕ್ಷ ಅಹೋರಾತ್ರಿ ಧರಣಿ ಘೋಷಣೆ ಬೆನ್ನಲ್ಲೇ ಸದನ ಬರ್ಖಾಸ್ತು: 8 ದಿನಕ್ಕೆ ಅಧಿವೇಶನ ಅಂತ್ಯ

8 ದಿನಕ್ಕೆ ಅಧಿವೇಶನ ಅಂತ್ಯ

ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೋಮವಾರದಿಂದ ಅಹೋರಾತ್ರಿಯ ಎಚ್ಚರಿಕೆ ನೀಡಿದ್ದರಿಂದ, ಮುಜುಗರ ತಪ್ಪಿಸಿಕೊಳ್ಳಲು ಸದನವನ್ನು ಸೋಮವಾರವೇ ಬರ್ಖಾಸ್ತುಗೊಳಿಸುವ ತೀರ್ಮಾನವನ್ನು ಸರಕಾರ ಕೈಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಸದನ ಆರಂಭಕ್ಕೂ ಮೊದಲು ಬಿಜೆಪಿ ನಾಯಕರು ವಿಧಾನಸೌಧದ ನಾಲ್ಕು ಗೇಟ್‌ಗಳಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದರು

ಯೋಗ ಸೂಕ್ಷ್ಮ ಸಿದ್ಧಿಸಿಕೊಂಡವನಿಗೆ ಸರ್ಪದ ವಿಷವೂ ಏನೂ ಮಾಡದು: ರಾಘವೇಶ್ವರ ಭಾರತೀ ಶ್ರೀ

ಯೋಗ ಸೂಕ್ಷ್ಮ ಸಿದ್ಧಿಸಿಕೊಂಡವನಿಗೆ ಸರ್ಪದವಿಷವೂ ಏನೂ ಮಾಡದು

Sri Raghaveshwara Bharathi Swamiji: ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ರಾಘವೇಶ್ವರ ಶ್ರೀಗಳು ಪ್ರವಚನ ನೀಡಿದ್ದಾರೆ. ಯೋಗ ಸೂಕ್ಷ್ಮವಾದ ಅಮೃತಪಾನವನ್ನು ಸಿದ್ಧಿಸಿಕೊಂಡವನಿಗೆ ತಕ್ಷಕ ಸರ್ಪದ ಮಹಾವಿಷದಿಂದಲೂ ಕೂಡ ಏನೂ ಆಗದು. ಒಮ್ಮೆ ಈ ಅಮೃತವನ್ನು ಆಸ್ವಾದಿಸಲು ಕಲಿತ ಯೋಗಿಯು ಮತ್ತೆ ಮತ್ತೆ ಅದನ್ನು ಬಯಸುತ್ತಾನೆ ಎಂದು ತಿಳಿಸಿದ್ದಾರೆ.

Cauvery Theerthodbhava: ಕಾವೇರಿ ತೀರ್ಥೋದ್ಭವ ಆಚರಣೆಗೆ 2 ಕೋಟಿ ರೂ. ಅನುದಾನ ಘೋಷಿಸಿದ ಸಿಎಂ

ಕಾವೇರಿ ತೀರ್ಥೋದ್ಭವ ಆಚರಣೆಗೆ 2 ಕೋಟಿ ರೂ. ಅನುದಾನ ಘೋಷಿಸಿದ ಸಿಎಂ

ಕಾವೇರಿ ತೀರ್ಥೋದ್ಭವವು ಕೊಡಗಿನ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಲ್ಲಿ ಒಂದಾಗಿದ್ದು, ಪ್ರತಿ ವರ್ಷ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಮಾಡಿದ್ದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನುದಾನ ಬಿಡುಗಡೆಗೆ ಸೂಚನೆ ನೀಡಿದ್ದಾರೆ.

ಭ್ರಷ್ಟರನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ರಕ್ಷಿಸುತ್ತಿದೆ: ಬಿ.ವೈ. ವಿಜಯೇಂದ್ರ ಆರೋಪ

ಭ್ರಷ್ಟರನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ರಕ್ಷಿಸುತ್ತಿದೆ: ಬಿವೈವಿ

BY Vijayendra: ಭ್ರಷ್ಟಚಾರದ ಕರ್ಮಕಾಂಡ ಬೀದಿಗೆ ಬಂದು ಜನರಿಗೆ ಮುಖ ತೋರಿಸಲು ಸಾಧ್ಯವಾಗುವುದಿಲ್ಲ ಎಂದು ಅರಿತಿರುವ ಮುಖ್ಯಮಂತ್ರಿಗಳು ನಾಗೇಂದ್ರ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Dr K Sudhakar: ಮಹಿಳಾ ಕಾರ್ಯಕರ್ತೆಯರು, ತಾಯಂದಿರ ಸಕ್ರಿಯ ಪಾಲ್ಗೊಳ್ಳುವಿಕೆ ಪಕ್ಷದ ಶಕ್ತಿ ಹೆಚ್ಚಿಸಲಿದೆ: ಡಾ.ಕೆ.ಸುಧಾಕರ್

ಪಕ್ಷ ಸಂಘಟನೆಗೆ ಎಲ್ಲರೂ ಕೈಜೋಡಿಸಿ

ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ಸಂಘಟನೆ ಕೆಲವರ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ಕಾರ್ಯಕರ್ತರೂ ತಮ್ಮ ಜವಾಬ್ದಾರಿ ಅರಿತು ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು

Brahmavara Double murder: ಬ್ರಹ್ಮಾವರದಲ್ಲಿ ಭೀಕರ ಕೃತ್ಯ; ಹೆತ್ತ ತಂದೆ-ತಾಯಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದ ಮಗ!

ಬ್ರಹ್ಮಾವರದಲ್ಲಿ ತಂದೆ-ತಾಯಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದ ಮಗ!

ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ ಗಾಂಧಿನಗರದಲ್ಲಿ ತಂದೆ ತನಗೆ ಮಾನಸಿಕ ಹಾಗೂ ದೈಹಿಕವಾಗಿ ಟಾರ್ಚರ್‌ ನೀಡುತ್ತಿದ್ದರು. ಅವರಿಗೆ ತಾಯಿ ಬೆಂಬಲ ನೀಡುತ್ತಿದ್ದರು. ಹೀಗಾಗಿ ಅವರನ್ನು ಕೊಂದಿರುವುದಾಗಿ ಪುತ್ರ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

CHIMUL: ಹಾಲಿನ ಖರೀದಿ ದರ ಹೆಚ್ಚಳಕ್ಕೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಸಾವಿರಾರು ಹಾಲು ಉತ್ಪಾದಕರ ಪ್ರತಿಭಟನೆ

ಪ್ರತಿ ಲೀಟರ್‌ಗೆ 10 ರೂಪಾಯಿ ಹೆಚ್ಚಳಕ್ಕೆ ಒಕ್ಕೊರಲ ಆಗ್ರಹ

ಜಿಲ್ಲೆಯಲ್ಲಿ ಬಹುತೇಕ ಸಣ್ಣ ರೈತರಿದ್ದು, ಹೆಚ್ಚಿನವರು ನೀರಾವರಿ ಕೊರತೆಯಿಂದ ಹೈನುಗಾರಿಕೆಯನ್ನೇ ಪ್ರಮುಖ ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಸುಮಾರು 38 ಸಾವಿರ ಹಾಲು ಉತ್ಪಾದ ಕರು ಚಿಮುಲ್‌ಗೆ ಹಾಲು ಪೂರೈಸುತ್ತಿದ್ದು, ಪ್ರತಿದಿನ ಸುಮಾರು 5.47 ಲಕ್ಷ ಕೆ.ಜಿ. ಹಾಲು ಸಂಗ್ರಹವಾಗು ತ್ತಿದೆ

ಚಿಂತಾಮಣಿಯಲ್ಲಿ ಡಿಜೆ, ಪಟಾಕಿಗೆ ನಿರ್ಬಂಧ: ಶಾಂತಿಯುತ ಈದ್ ಮಿಲಾದ್‌ಗೆ ಪೊಲೀಸ್ ಬಿಗಿ ಬಂದೋಬಸ್ತ್

ಶಾಂತಿಯುತ ಈದ್ ಮಿಲಾದ್‌ಗೆ ಪೊಲೀಸ್ ಬಿಗಿ ಬಂದೋಬಸ್ತ್

ಜಾಮಿಯಾ ಮಸೀದಿಯಿಂದ ಆರಂಭ ವಾಗುವ ಮೆರವಣಿಗೆ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಈದ್ಗಾ ಮೈದಾನ ತಲುಪಲಿದೆ. ಅಲ್ಲಿ ಸಾಮೂಹಿಕ ನಮಾಜ್ ಸಲ್ಲಿಸಿದ ಬಳಿಕ ಸಂಜೆ 5 ಗಂಟೆಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಶಾಂತಿ ಕಾಪಾಡಲು ಸಂಘಟಕರು ಹಾಗೂ ಮಸೀದಿ ಮುಖಂಡರು ಸಂಪೂರ್ಣ ಸಹಕಾರ ನೀಡಲಿದ್ದಾರೆ

ಕರ್ನಾಟಕ ಧನ ವಿನಿಯೋಗ ವಿಧೇಯಕದಡಿ 7042.69 ಕೋಟಿ ರೂ. ಪೂರಕ ಅಂದಾಜು ಪ್ರಸ್ತಾವನೆಗೆ ಉಭಯ ಸದನಗಳಲ್ಲಿ ಅನುಮೋದನೆ

7042.69 ಕೋಟಿ ಪೂರಕ ಅಂದಾಜು ಪ್ರಸ್ತಾವನೆಗೆ ಉಭಯ ಸದನಗಳಲ್ಲಿ ಒಪ್ಪಿಗೆ

Karnataka Monsoon session: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನ ಮಂಡಲದ ಉಭಯ ಸದನಗಳಲ್ಲಿ ಧನ ವಿನಿಯೋಗ ವಿಧೇಯಕದ ಅಡಿ ಪೂರಕ ಅಂದಾಜುಗಳ ಮೊದಲನೆ ಕಂತಿನ ಪ್ರಸ್ತಾವನೆಯನ್ನು ಮಂಡಿಸಿ, ಅನುಮೋದನೆ ಪಡೆದಿದ್ದಾರೆ. 7,042.69 ಕೋಟಿ ರೂ.ಗಳಲ್ಲಿ 4,324.35 ಕೋಟಿ ರೂ. ರಾಜಸ್ವ ವೆಚ್ಚವಾಗಿದ್ದು, 2718.35 ಕೋಟಿ ರೂ. ಬಂಡವಾಳ ವೆಚ್ಚವಾಗಿದೆ.

SIR in Karnataka: ಎಸ್ಐ‌ಆರ್‌ ಮೊದಲ ಕರಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲವೆ? ಚಿಂತೆ ಬೇಡ ಹೆಸರು ಸೇರಿಸಲು ಇನ್ನೂ ಇದೆ ಅವಕಾಶ; ಅದು ಹೇಗೆ ಎನ್ನುವ ವಿವರ ಇಲ್ಲಿದೆ

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಇನ್ನೂ ಇದೆ ಅವಕಾಶ

Karnataka SIR: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಡಿ ಮೊದಲ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಬರೋಬ್ಬರಿ 1.07 ಕೋಟಿ ಮಂದಿಯ ಹೆಸರನ್ನು ಕೈಬಿಡಲಾಗಿದೆ. ಈ ಪೈಕಿ ನಿಮ್ಮ ಹೆಸರು ಡಿಲೀಟ್‌ ಆಗಿದ್ದರೆ ಚಿಂತೆ ಮಾಡಬೇಕಾಗಿಲ್ಲ. ಇನ್ನೂ ಹೆಸರು ಸೇರಿಸಲು ಅವಕಾಶವಿದ್ದು, ಅದು ಹೇಗೆ ಎನ್ನುವ ವಿವರ ಇಲ್ಲಿದೆ.

Cauvery Water Dispute: ಕರ್ನಾಟಕಕ್ಕೆ ಮತ್ತೆ ಹಿನ್ನಡೆ; ನಿತ್ಯ 9000 ಕ್ಯೂಸೆಕ್ ಕಾವೇರಿ ನೀರು ಹರಿಸಲು CWRC ಶಿಫಾರಸು

ಕರ್ನಾಟಕದಿಂದ 9000 ಕ್ಯೂಸೆಕ್ ಕಾವೇರಿ ನೀರು ಹರಿಸಲು CWRC ಶಿಫಾರಸು

ಸಿಡಬ್ಲ್ಯುಆರ್‌ಸಿ ನಿರ್ದೇಶನದ ಪ್ರಕಾರ, ಆಗಸ್ಟ್ 25ರ ಬೆಳಗ್ಗೆ 8 ಗಂಟೆಯಿಂದಲೇ ಈ ಆದೇಶ ಜಾರಿಗೆ ಬರಲಿದ್ದು, ಅಂತಾರಾಜ್ಯ ಗಡಿ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಪ್ರತಿದಿನ 9,000 ಕ್ಯೂಸೆಕ್ ನೀರಿನ ಹರಿವನ್ನು ಕಾಯ್ದುಕೊಳ್ಳಬೇಕಿದೆ. ಮುಂದಿನ 15 ದಿನಗಳ ಅವಧಿಯಲ್ಲಿ ಒಟ್ಟು 11.66 ಟಿಎಂಸಿ ನೀರು ಬಿಳಿಗುಂಡ್ಲುವಿಗೆ ಹರಿದುಬರುವಂತೆ ನೋಡಿಕೊಳ್ಳುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ.

ಸುಳ್ಳು ಆರೋಪದ ಕುರಿತು ಚರ್ಚೆಗೆ ಬರಲಿ; ಸಂಜಯ್ ಪಾಟೀಲ್‌ಗೆ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು

ಸುಳ್ಳು ಆರೋಪದ ಕುರಿತು ಚರ್ಚೆಗೆ ಬರಲಿ; ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು

Lakshmi Hebbalkar: ಮಾಜಿ ಶಾಸಕ ಸಂಜಯ್ ಪಾಟೀಲ್ ಹಾಗೂ ಬಿಜೆಪಿ ನಾಯಕರಿಗೆ ಕೇವಲ ಸುಳ್ಳು ಆರೋಪ ಮಾಡುವ ಕಲೆ ಮಾತ್ರ ಕರಗತವಾಗಿದೆ. ಧೈರ್ಯವಿದ್ದರೆ 5 ಸಾವಿರ ಕೋಟಿ ರೂಪಾಯಿ ವಿಷಯದ ಕುರಿತು ಮುಖಾಮುಖಿ ಚರ್ಚೆಗೆ ಮಳೆಕರ್ಣಿಗೆ ಬರಲಿ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನೇರ ಸವಾಲು ಹಾಕಿದ್ದಾರೆ.

Karnataka SIR: ಎಸ್ಐ‌ಆರ್‌ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ; ರಾಜ್ಯದಲ್ಲಿ 1.07 ಕೋಟಿ ಮತದಾರರ ಹೆಸರು ಡಿಲೀಟ್‌!

ಎಸ್ಐ‌ಆರ್‌ ಕರಡು ಮತದಾರರ ಪಟ್ಟಿ ಪ್ರಕಟ; 1.07 ಕೋಟಿ ಮಂದಿಯ ಹೆಸರು ಡಿಲೀಟ್‌!

ಎಸ್‌ಐಆರ್‌ ಭಾಗವಾಗಿ ಗೈರುಹಾಜರಿ, ಶಾಶ್ವತ ಸ್ಥಳಾಂತರ, ಮೃತರು ಹಾಗೂ ನಕಲಿ ಹೆಸರುಗಳು ಸೇರಿದಂತೆ ಒಟ್ಟು 1,07,96,399 ಮತದಾರರ ಹೆಸರುಗಳನ್ನು ಮೊದಲ ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ.

ಒಂಬತ್ತು ತಿಂಗಳಲ್ಲಿ ಲೋಕಾಯುಕ್ತ ಕಚೇರಿ ಕಟ್ಟಡ ನಿರ್ಮಾಣ: ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್

ಹಾವೇರಿಯಲ್ಲಿ ಲೋಕಾಯುಕ್ತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

Haveri News: ಹಾವೇರಿ ಶಹರದ ಬಸವೇಶ್ವರ ನಗರದಲ್ಲಿ ಲೋಕಾಯುಕ್ತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಭೂಮಿ ಪೂಜೆ ನೆರವೇರಿದರು. ಬಳಿಕ ಮಾತನಾಡಿದ ಅವರು, ಲೋಕಾಯುಕ್ತ ಕಚೇರಿಗಾಗಿ ಸರ್ಕಾರದಿಂದ ನಿವೇಶನ ಒದಗಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಆದೇಶ ಹಾಗೂ ಕಾರ್ಯಾದೇಶವೂ ಆಗಿದೆ. ಹೀಗಾಗಿ ಕಾಮಗಾರಿ ವಿಳಂಬವಾಗದಂತೆ ತಕ್ಷಣ ಆರಂಭಿಸುವ ಉದ್ದೇಶದಿಂದ ಅಡಿಗಲ್ಲು ಹಾಕಲಾಗಿದೆ ಎಂದು ಹೇಳಿದ್ದಾರೆ.

Loading...