ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

KDCC Bank Election: ಕೆ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆ: ನೂರಾರು ಸಂಖ್ಯೆಯ ಅಭಿಮಾನಿ ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಿದ ಸರಸ್ವತಿ ಎನ್. ರವಿ

ಕೆ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆ: ನಾಮಪತ್ರ ಸಲ್ಲಿಸಿದ ಸರಸ್ವತಿ ಎನ್. ರವಿ

ಬೆಳಿಗ್ಗೆ ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸಿ ತನ್ನ ನೂರಾರು ಸಂಖ್ಯೆಯ ಅಭಿಮಾನಿಗಳೊಂದಿಗೆ ಟಿ.ಆರ್.ಸಿ. ಬ್ಯಾಂಕ್ ಎದುರಿನಿಂದ ಮೆರವಣಿಗೆಯ ಮೂಲಕ ಕೆ.ಡಿ.ಸಿ.ಸಿ. ಬ್ಯಾಂಕ್ ಆವಾರಕ್ಕೆ ತೆರಳಿ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣೆಯಿಂದ ಹಿಂದೆ ಸರಿಯುತ್ತಾರೆ ಎಂದ ಊಹಾಪೋಹಗಳಿಗೆ ತೆರೆ ಎಳೆದರು.

Karnataka Weather: ರಾಜ್ಯದಲ್ಲಿ ಮುಂದಿನ 4 ದಿನ ಯೆಲ್ಲೋ ಅಲರ್ಟ್; ಗುಡುಗು ಸಹಿತ ಮಳೆ ನಿರೀಕ್ಷೆ

ರಾಜ್ಯದಲ್ಲಿ ಮುಂದಿನ 4 ದಿನ ಗುಡುಗು ಸಹಿತ ಮಳೆ ಮುನ್ಸೂಚನೆ

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ° C ಮತ್ತು 21 ° C ಆಗಿರಬಹುದು.

ಬ್ರಿಸ್ಟಲ್ ಮೈಯರ್ಸ್ ಸ್ಕ್ವಿಬ್ ನಿಂದ ಭಾರತದಲ್ಲಿ ಸಿಂಪ್ಟೊಮ್ಯಾಟಿಕ್ ಅಬ್ ಸ್ಟ್ರಕ್ಟಿವ್ ಹೈಪರ್ಟ್ರೊಫಿಕ್ ಕಾರ್ಡಿಯೊಮಯೋಪತಿಗೆ ಕೊಪೊಝೊ ಬಿಡುಗಡೆ

ಕೊಪೊಝೊ ಬಿಡುಗಡೆ: ಒ.ಎಚ್.ಸಿ.ಎಂ. ರೋಗಿಗಳಿಗೆ ಪ್ರಥಮ ಚಿಕಿತ್ಸೆಯ ಆಯ್ಕೆ

ಭಾರತದಲ್ಲಿರುವ ಪ್ರಸ್ತುತದ ವೈದ್ಯಕೀಯ ಚಿಕಿತ್ಸೆಗಳಾದ ಬೀಟಾ ಬ್ಲಾಕರ್ ಗಳು, ಕ್ಯಾಲ್ಷಿಯಂ ಚಾನೆಲ್ ಬ್ಲಾಕರ್ ಗಳು ಮತ್ತು ಡಿಸೊಪೈರಮೈಡ್ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತವೆ ಆದರೆ ಅದರ ಆಂತರ್ಯದಲ್ಲಿರುವ ಕಾರಣವನ್ನು ನಿವಾರಿಸುವುದಿಲ್ಲ. ಶಸ್ತ್ರಚಿಕಿತ್ಸೆಯ ಪ್ರಕ್ರಿಯೆ ಗಳಾದ ಸೆಪ್ಟಲ್ ರಿಡಕ್ಷನ್ ಥೆರಪಿ (ಆಲ್ಕೊಹಾಲ್ ಸೆಪ್ಟಲ್ ಅಬಲೇಷನ್ ಅಥವಾ ಮೈಯೆಕ್ಟಮಿ) ಆಯ್ಕೆಗಳೇ ಹೊರತು ಅವು ಸೂಕ್ತವಾಗಿಲ್ಲದಿರಬಹುದು ಅಥವಾ ಎಲ್ಲ ರೋಗಿಗಳಿಗೂ ಲಭ್ಯ ವಿಲ್ಲದೇ ಇರಬಹುದು.

Viral Video: ಮೆಟ್ರೋದೊಳಗೂ ಭಿಕ್ಷೆ ಬೇಡಿದ ಯುವಕ; ಇದು ನಡೆದಿರೋದು ಬೇರೆಲ್ಲೋ ಅಲ್ಲ... ಬೆಂಗಳೂರಿನಲ್ಲಿ!

ಟಿಕೆಟ್ ಖರೀದಿಸಿ ಮೆಟ್ರೋದಲ್ಲಿ ಭಿಕ್ಷೆ ಬೇಡಿದ ವ್ಯಕ್ತಿ

Man Begging in Bengaluru Metro: ಟ್ರಾಫಿಕ್ ಸಿಗ್ನಲ್‌ಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಭಿಕ್ಷೆ ಬೇಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಇದೀಗ ವ್ಯಕ್ತಿಯೊಬ್ಬ ಗ್ರೀನ್ ಲೈನ್ ಮೆಟ್ರೋ ರೈಲಿನೊಳಗೆ ಭಿಕ್ಷೆ ಬೇಡುತ್ತಿರುವ ದೃಶ್ಯ ಬೆಂಗಳೂರಿನ ಶ್ರೀರಾಂಪುರ ನಿಲ್ದಾಣದಲ್ಲಿ ಕಂಡುಬಂದಿದೆ.

A-Khata campaign:  ಬೆಂಗಳೂರಿನಲ್ಲಿ ಏಕರೂಪ ಖಾತಾ ವ್ಯವಸ್ಥೆ; ನ.1ರಿಂದ 100 ದಿನಗಳ ಕಾಲ ‘ಎ‌’ ಖಾತಾ ಅಭಿಯಾನ

ನ.1ರಿಂದ 100 ದಿನಗಳ ಕಾಲ ‘ಎ‌’ ಖಾತಾ ಅಭಿಯಾನ: ಡಿ.ಕೆ. ಶಿವಕುಮಾರ್

DK Shivakumar: ಜಿಬಿಎ ವ್ಯಾಪ್ತಿಯ ಬಿ-ಖಾತಾ ನಿವೇಶನ ಮಾಲೀಕರಿಗೆ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೂ ಎ-ಖಾತಾ ನೀಡಲು ಹೊಸದಾಗಿ ಜಾರಿಗೊಳಿಸಿರುವ ಆನ್‌ಲೈನ್ ವ್ಯವಸ್ಥೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ aವರು ವಿಧಾನಸೌಧದಲ್ಲಿ ಬುಧವಾರ ಚಾಲನೆ ನೀಡಿದರು.

SSLC, II PU Pass marks: ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಿಂಗ್‌ ಮಾರ್ಕ್ಸ್‌ ಕಡಿತ; ಇನ್ಮುಂದೆ ಇಷ್ಟು ಅಂಕ ಪಡೆದ್ರೆ ಸಾಕು!

ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಿಂಗ್‌ ಮಾರ್ಕ್ಸ್‌ ಕಡಿತ

Reduce SSLC, II PU pass marks: ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ 4ನೇ ವರದಿಯಲ್ಲಿಯೂ ಸಹ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಉತ್ತೀರ್ಣತಾ ಅಂಕಗಳನ್ನು ಕಡಿಮೆ ಮಾಡಲು ಶಿಫಾರಸು ಮಾಡಿತ್ತು. ಅದರಂತೆ ಪಾಸಿಂಗ್‌ ಮಾರ್ಕ್‌ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

Pathashala Movie: ನವೆಂಬರ್ 14ರಂದು ಮಕ್ಕಳ ದಿನಾಚರಣೆಯ ದಿನ ತೆರೆಗೆ ಬರಲಿದೆ ʼಪಾಠಶಾಲಾʼ

ಮಕ್ಕಳ ದಿನಾಚರಣೆಯಂದು ತೆರೆಗೆ ಬರಲಿದೆ ʼಪಾಠಶಾಲಾʼ ಚಿತ್ರ

Sandalwood News: ಹೆದ್ದೂರು ಮಂಜುನಾಥ ಶೆಟ್ಟಿ ನಿರ್ದೇಶನದ ʼಪಾಠಶಾಲಾʼ ಚಿತ್ರ ನವೆಂಬರ್ 14ರಂದು ತೆರೆಗೆ ಬರಲು ಸಜ್ಜಾಗಿದೆ. ಅರಣ್ಯ ನಾಶ, ಅದರ ಉಳಿವು ಮತ್ತು ಮಕ್ಕಳ‌ ಬಾಲ್ಯ ಸೇರಿದಂತೆ ಸೂಕ್ಷ್ಮ‌ ವಿಚಾರಗಳ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ ಇದಾಗಿದೆ.

DK Shivakumar: ಬೆಂಗಳೂರಿಗೆ ಸರಿಸಮನಾದ ಮತ್ತೊಂದು ನಗರ ದೇಶದಲ್ಲಿಲ್ಲ: ನಾರಾ ಲೋಕೇಶ್‌ಗೆ ಡಿ.ಕೆ. ಶಿವಕುಮಾರ್‌ ತಿರುಗೇಟು

ಬೆಂಗಳೂರಿಗೆ ಸರಿಸಮನಾದ ಮತ್ತೊಂದು ನಗರ ದೇಶದಲ್ಲಿಲ್ಲ: ಡಿಕೆಶಿ

DK Shivakumar Reaction: ಬೆಂಗಳೂರಿನ ವಿಚಾರವಾಗಿ ಆಂಧ್ರ ಪ್ರದೇಶ ಐಟಿ ಸಚಿವ ನಾರಾ ಲೋಕೇಶ್ ಅವರ ಹೇಳಿಕೆ ಬಗ್ಗೆ ಮಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ‘ನಾರಾ ಲೋಕೇಶ್ ಆಗಲಿ, ಬೇರೆಯವರಾಗಲಿ, ಯಾರ ಹೇಳಿಕೆಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರು, 2 ಲಕ್ಷ ವಿದೇಶಿಗರು ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರಗತಿಯಲ್ಲಿ ಬೆಂಗಳೂರಿನ ಕೊಡುಗೆ ಅಪಾರವಾಗಿದೆ. ಕೇಂದ್ರ ಸರ್ಕಾರಕ್ಕೆ ಸುಮಾರು 40% ತೆರಿಗೆ ಆದಾಯ ಇಲ್ಲಿಂದಲೇ ಹೋಗುತ್ತಿದೆ. ಅವರು ತಮ್ಮ ಬಗ್ಗೆ ಮಾರ್ಕೆಟಿಂಗ್ ಮಾಡಿಕೊಳ್ಳಲು ಮಾತನಾಡುತ್ತಾರೆ. ಅವರು ಏನಾದರೂ ಮಾಡಿಕೊಳ್ಳಲಿ. ಅವರಿಗೆ ಕೇಂದ್ರ ಸರ್ಕಾರವೂ ಸಹಾಯ ಮಾಡಲಿ. ಆದರೆ ಬೆಂಗಳೂರಿಗೆ ಸರಿಸಮನಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Nanna Magale Super Star Movie: ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದ ‘ನನ್ನ ಮಗಳೇ ಸೂಪರ್ ಸ್ಟಾರ್ʼ ಚಿತ್ರತಂಡ

‘ನನ್ನ ಮಗಳೇ ಸೂಪರ್ ಸ್ಟಾರ್ʼ ಚಿತ್ರದ ಚಿತ್ರೀಕರಣ ಪೂರ್ಣ

Sandalwood News: ಎನ್.ಎ. ಶಿವಕುಮಾರ್ (ಕುಮಾರ್ ನೊಣವಿನಕೆರೆ) ಹಾಗೂ ಸಹ ನಿರ್ಮಾಪಕ ಮಾಧವಾನಂದ ವೈ. ನಿರ್ಮಿಸುತ್ತಿರುವ ‘ನನ್ನ ಮಗಳೇ ಸೂಪರ್ ಸ್ಟಾರ್’ ಕನ್ನಡ ಚಲನಚಿತ್ರದ ಅಂತಿಮ ಹಂತದ ಚಿತ್ರೀಕರಣ ಮಂಗಳವಾರ (ಅ.14ರಂದು) ನಡೆಯಿತು. ಶೀಘ್ರದಲ್ಲಿಯೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.

Hasanamba Jathra 2025: ಹಾಸನಾಂಬ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಹಾಸನಾಂಬ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

CM Siddaramaiah: ಹಾಸನ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಶಿಷ್ಟಾಚಾರದ ವಾಹನದಲ್ಲಿ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸ್ವಾಗತಿಸಿದರು. ಸಿದ್ದರಾಮಯ್ಯ ಅವರ ಜತೆ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಆಗಮಿಸಿದ್ದರು.

Dharmasthala case: ತಿಮರೋಡಿ ಗಡೀಪಾರು ವಿಚಾರದಲ್ಲಿ ಸುಳ್ಳು ಪ್ರಸಾರ ಮಾಡಿದ ಜಯಂತ್‌ ಮೇಲೆ ಕೇಸು

ತಿಮರೋಡಿ ಗಡೀಪಾರು ವಿಚಾರದಲ್ಲಿ ಸುಳ್ಳು ಪ್ರಸಾರ ಮಾಡಿದ ಜಯಂತ್‌ ಮೇಲೆ ಕೇಸು

Mahesh Shetty Thimarodi: ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ವಿಚಾರಕ್ಕೆ ಸಂಬಂಧಪಟ್ಟಂತೆ, ಇದೊಂದು ಷಡ್ಯಂತ್ರ ಎಂದು ಟಿ.ಜಯಂತ ಒಂದು ಯುಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರ ಮಾಡಿದ್ದ. ಗಡಿಪಾರಿನ ಕುರಿತು ಜಿಲ್ಲಾಡಳಿತದ ಆದೇಶದ ಸತ್ಯತೆ ತಿಳಿದಿದ್ದರೂ ಕೂಡ ಜಯಂತ್ ಅಪೂರ್ಣವಾದ ಮಾಹಿತಿ ನೀಡಿದ್ದಾನೆ.

Priyank Kharge: ಸಚಿವ ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ ಕರೆ, ಆಡಿಯೋ ರೆಕಾರ್ಡ್‌ ರಿಲೀಸ್‌ ಮಾಡಿದ ಖರ್ಗೆ

ಸಚಿವ ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ ಕರೆ, ಆಡಿಯೋ ರೆಕಾರ್ಡ್‌ ರಿಲೀಸ್‌

Threat call: ಹಿಂದಿಯಲ್ಲಿ ಕರೆ ಮಾಡಿ ಅಶ್ಲೀಲವಾಗಿ ನಿಂದನೆ ಮಾಡಿದ ಆಡಿಯೋ ರೆಕಾರ್ಡ್‌ ಅನ್ನು ಸಚಿವರು ರಿಲೀಸ್‌ ಮಾಡಿದ್ದಾರೆ. ಆರ್‌ಎಸ್‌ಎಸ್ ಶಾಖೆಯಲ್ಲಿ ಇದನ್ನೇ ಕಲಿಸುತ್ತಾರಾ? ಮೋಹನ್ ಭಾಗವತ್ ನಿಮಗೆ ಇದನ್ನೇ ಕಲಿಸುತ್ತಾರಾ? ಎಂದು ಕರೆ ಮಾಡಿದ ವ್ಯಕ್ತಿಗೆ ಪ್ರಿಯಾಂಕ ಖರ್ಗೆ ಪ್ರಶ್ನೆ ಮಾಡಿದ್ದಾರೆ.

Stabbing: ಗೆಳತಿಗೆ ಮೆಸೇಜ್ ಮಾಡಿದ್ದನ್ನು ಆಕ್ಷೇಪಿಸಿದವನಿಗೆ ಚೂರಿಯಿಂದ ಇರಿದ ಪಾತಕಿ

ಗೆಳತಿಗೆ ಮೆಸೇಜ್ ಮಾಡಿದ್ದನ್ನು ಆಕ್ಷೇಪಿಸಿದವನಿಗೆ ಚೂರಿಯಿಂದ ಇರಿದ ಪಾತಕಿ

Assault case: ಯುವತಿಗೆ ಇನ್ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡಿದ್ದನ್ನು ಆಕೆಯ ಸ್ನೇಹಿತ ಪ್ರಶ್ನಿಸಿದ್ದು, ಇವರಿಬ್ಬರೂ ಒಂದೇ ಕ್ಲಾಸ್‌ನಲ್ಲಿ ಕಲಿಯುತ್ತಿದ್ದಾರೆ. ಇದೇ ಸಿಟ್ಟನ್ನು ಇಟ್ಟುಕೊಂಡ ಆರೋಪಿ ಪ್ರಭು ತನ್ನ ಗೆಳೆಯನ ಜೊತೆಗೆ ಬೈಕ್‌ನಲ್ಲಿ ಬಂದು ಚಾಕುವಿನಿಂದ ಇರಿದು ಪರಾರಿ ಆಗಿದ್ದಾನೆ.

Kalaburagi crime news: ತಿಪ್ಪೆಗುಂಡಿಯಲ್ಲಿ ಆಸ್ಫೋಟ, ಪಿಸ್ತೂಲ್‌, ಗುಂಡುಗಳು ಪತ್ತೆ

ತಿಪ್ಪೆಗುಂಡಿಯಲ್ಲಿ ಆಸ್ಫೋಟ, ಪಿಸ್ತೂಲ್‌, ಗುಂಡುಗಳು ಪತ್ತೆ

Crime news: ಮಾಳಪ್ಪ ಎಂಬ ವ್ಯಕ್ತಿ ತಮ್ಮ ಟೈಲರ್ ಅಂಗಡಿಯಲ್ಲಿದ್ದ ವೇಸ್ಟ್‌ ಬಟ್ಟೆಗಳನ್ನು ತಿಪ್ಪೆಗುಂಡಿಗೆ ಹಾಕಿದ್ದರು. ಬಟ್ಟೆಗೆ ಬೆಂಕಿ ಹಚ್ಚಿದ ಕೆಲ ಸಮಯದ ಬಳಿಕ ಭಾರಿ ಸ್ಫೋಟದ ಶಬ್ದ ಕೇಳಿಸಿದೆ. ನಂತರ ತಿಪ್ಪೆಗುಂಡಿ ಪರಿಶೀಲಿಸಿದಾಗ ಪಿಸ್ತೂಲು ಹಾಗೂ ಮೂರು ಗುಂಡು ಪತ್ತೆಯಾಗಿವೆ.

Drowned: ಮೀನು ಹಿಡಿಯಲು ಹೋಗಿದ್ದ ಮೂವರು ಮಕ್ಕಳು ಜಲಸಮಾಧಿ, ಒಬ್ಬ ಬಚಾವ್

ಮೀನು ಹಿಡಿಯಲು ಹೋಗಿದ್ದ ಮೂವರು ಮಕ್ಕಳು ಜಲಸಮಾಧಿ, ಒಬ್ಬ ಬಚಾವ್

Udupi news: ನಾಲ್ಕು ಮಂದಿ ಮಕ್ಕಳು ಸಂಜೆ ವಾಲಿಬಾಲ್ ಆಟವಾಡಿ, ನಂತರ ಗಾಳ ಹಾಕಲೆಂದು ಕಿರಿಮಂಜೇಶ್ವರ ಕಡಲ ತೀರಕ್ಕೆ ಹೋಗಿದ್ದರು. ನೀರಿನ ಬಗ್ಗೆ ಅಂದಾಜು ಸಿಗದೆ ಮುಂದೆ ಹೋದ ಕಾರಣ, ಮುಳುಗಡೆಯಾಗಿದ್ದಾರೆ. ಈ ಪೈಕಿ ಒಬ್ಬ ಬಾಲಕ ಈಜಿಕೊಂಡು ಬಚಾವಾಗಿ ಬಂದು ವಿಷಯ ತಿಳಿಸಿದ್ದಾನೆ.

Karnataka Weather: ಹವಾಮಾನ ವರದಿ; ಇಂದು ಕೊಡಗು, ಚಿಕ್ಕಮಗಳೂರು ಸೇರಿ ಈ ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ!

ಹವಾಮಾನ ವರದಿ; ಇಂದು ಕೊಡಗು ಸೇರಿ ಈ ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ!

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಭಾಗಶಃ ಮೋಡ ಕವಿದ ಆಕಾಶವು ಇರಲಿದ್ದು, ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ (Karnataka Weather) ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29° C ಮತ್ತು 21° C ಆಗಿರಬಹುದು.

Shakti scheme: ಕರ್ನಾಟಕದ ಶಕ್ತಿ ಯೋಜನೆಗೆ ಇನ್ನೊಂದು ಗರಿ, ಲಂಡನ್‌ ವಿಶ್ವದಾಖಲೆ ಬುಕ್‌ಗೆ ಸೇರ್ಪಡೆ

ಶಕ್ತಿ ಯೋಜನೆಗೆ ಇನ್ನೊಂದು ಗರಿ, ಲಂಡನ್‌ ವಿಶ್ವದಾಖಲೆ ಬುಕ್‌ಗೆ ಸೇರ್ಪಡೆ

Karnataka: ಇತ್ತೀಚೆಗಷ್ಟೇ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್‌ ಮತ್ತು ಅಂತಾರಾಷ್ಟ್ರೀಯ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದ್ದ ಶಕ್ತಿ ಯೋಜನೆ ಇದೀಗ ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ. ವಿಶ್ವದಲ್ಲಿಯೇ ಮಹಿಳೆಯರಿಗೆ ಅತಿ ಹೆಚ್ಚು ಉಚಿತ ಪ್ರಯಾಣ ಸೇವೆ ನೀಡಿದ ಕಾರಣಕ್ಕಾಗಿ ಲಂಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್‌ಗೆ ಸೇರ್ಪಡೆ ಮಾಡಲಾಗಿದೆ.

Elephant: ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಕರ್ನಾಟಕ ನಂಬರ್‌ ವನ್‌

ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಕರ್ನಾಟಕ ನಂಬರ್‌ ವನ್‌

2017ರಲ್ಲಿ ದೇಶದ ಕಾಡುಗಳಲ್ಲಿ 27,312 ಆನೆಗಳಿದ್ದವು. 2025ರಲ್ಲಿ ಈ ಸಂಖ್ಯೆ 22,446ಕ್ಕೆ ಇಳಿದಿದೆ. ಆನೆಗಳ (Elephant) ಸಂಖ್ಯೆಯಲ್ಲಿ ಶೇ.18ರಷ್ಟು ಅಂದರೆ 5000ದಷ್ಟು ಇಳಿಕೆಯಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. 6,013 ಆನೆಗಳನ್ನು ಹೊಂದುವ ಮೂಲಕ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಆನೆ ಹೊಂದಿದ ರಾಜ್ಯವೆಂಬ ಹೆಗ್ಗಳಿಕೆ ಪಡೆದಿದೆ.

Good news: ಸಿಸಿ, ಓಸಿ ಪಡೆಯದೇ ಮನೆ ಕಟ್ಟಿದವರಿಗೆ ರಾಜ್ಯ ಸರಕಾರ ವಿನಾಯಿತಿ

ಸಿಸಿ, ಓಸಿ ಪಡೆಯದೇ ಮನೆ ಕಟ್ಟಿದವರಿಗೆ ರಾಜ್ಯ ಸರಕಾರ ವಿನಾಯಿತಿ

Bengaluru: 30X40 ಸೈಟ್ ನಲ್ಲಿ ನೆಲ +2 ಅಂತಸ್ತಿನ ಕಟ್ಟಡಗಳಿಗೆ, ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಇದರಿಂದ ಬೆಂಗಳೂರಿನ ಲಕ್ಷಾಂತರ ಜನರು ನಿಟ್ಟುಸಿರುಬಿಟ್ಟಿದ್ದಾರೆ. ಹಿಂದೆ ಓಸಿ ಇಲ್ಲದ ಕಟ್ಟಡಗಳಿಗೆ ಜಲಮಂಡಳಿ, ಬೆಸ್ಕಾಂ ವಿದ್ಯುತ್ ಸಂಪರ್ಕ ನೀಡುತ್ತಿರಲಿಲ್ಲ.

Tobacco free 30 Villages: 30 ಗ್ರಾಮಗಳನ್ನು ತಂಬಾಕು ಮುಕ್ತ ಮಾಡಲು ಗುರಿ: ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ

30 ಗ್ರಾಮಗಳನ್ನು ತಂಬಾಕು ಮುಕ್ತ ಮಾಡಲು ಗುರಿ

ತಂಬಾಕಿನ ಸೇವನೆಯ ಹಾನಿಕಾರಕ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿಕೊಟ್ಟು ಜಾಗೃತಿ ಮೂಡಿಸಲು “ತಂಬಾಕು ಮುಕ್ತ ಯುವ ಅಭಿಯಾನ (3.0)” ವನ್ನು ಜಿಲ್ಲೆಯಲ್ಲಿ ಡಿಸೆಂಬರ್ 9 ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಡಿ ಹಲವು ಕಾರ್ಯಕ್ರಮಗಳನ್ನು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸುಮಾರು 400 ಶಾಲಾ ಕಾಲೇಜುಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳನ್ನಾಗಿಸಲು ಯೋಜಿಸಲಾಗಿದೆ.

Congress District President K.N. Keshava Reddy: ಮತಗಳ್ಳತನ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕ : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ

ಮತಗಳ್ಳತನ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕ

ಭಾರತ ವಿಶ್ವದಲ್ಲಿಯೇ ಅತ್ಯಂತ ಸಮರ್ಥ ಹಾಗೂ ಗಟ್ಟಿತಳಹದಿಯ ಮೇಲೆ ನಿಂತಿರುವ ಯಶಸ್ವೀ ಪ್ರಜಾ ಪ್ರಭುತ್ವ ರಾಷ್ಟ್ರವಾಗಿದೆ. ಇಲ್ಲಿನ ಜನಪ್ರತಿನಿಧಿಗಳು ಜನರ ಮತದಾನದ ಹಕ್ಕಿನಿಂದ ಆರಿಸಿ ಬರುತ್ತಾರೆ. ಈ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ನಡೆಸುತ್ತಾ ಬಂದಿದೆ. ಇದೊಂದು ಸ್ವತಂತ್ರ ಆಯೋಗ ವಾಗಿದ್ದರೂ ಕೇಂದ್ರಸರಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಮತಗಳ್ಳತನ ತಡೆಯುವಲ್ಲಿ ವಿಫಲ ವಾಗುತ್ತಿರುವುದು ಆತಂಕದ ಸಂಗತಿಯಾಗಿದೆ

ಅಂಬೇಡ್ಕರ್ ಹಿಂದೂ ಧರ್ಮ ತೊರೆದು ಮರಳಿ ಮನೆಗೆ ಬಂದ ದಿನವೇ ಧಮ್ಮ ದೀಕ್ಷಾ ದಿನವಾಗಿದೆ: ಕುಂದಾಣದ ಜ್ಞಾನಲೋಕಾ ಬಂತೇಜಿ

ಧರ್ಮ ತೊರೆದು ಮರಳಿ ಮನೆಗೆ ಬಂದ ದಿನವೇ ಧಮ್ಮ ದೀಕ್ಷಾ ದಿನವಾಗಿದೆ

ಸುಧಾರಣೆ ಮಾಡಲು ಶ್ರಮಿಸಿದ್ದರು.ಇದು ಅಸಾಧ್ಯ ಎಂದು ಕಂಡಾಗ ಹಿಂದುವಾಗಿ ಹುಟ್ಟಿದ್ದೇನೆ ಹಿಂದುವಾಗಿ ಸಾಯಲಾರೆ ಎನ್ನುವ ಹೇಳಿಕೆ ನೀಡಿ ನೈಜ ಮಾನವ ಧರ್ಮವಾದ ಬೌದ್ಧಧರ್ಮಕ್ಕೆ ಮರಳುತ್ತಾರೆ.ಬಾಬಾ ಸಾಹೇಬರ ಈ ನಡೆ ಶೋಷಿತ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿದ್ದ ಲ್ಲದೆ, ಬಿಡುಗಡೆಯ ಸಾಧನವಾಗಿ ಕಂಡಿದೆ.ಪರಿಣಾಮ ದೇಶದ ಉದ್ದಗಲಕ್ಕೂ ಇಂದು ಬೌದ್ಧ ವಿಹಾರಗಳು ತಲೆಯೆತ್ತಲು, ಉಪಾಸಕರಾಗಿ ಬುದ್ಧನ ಮಾರ್ಗವನ್ನು ಅನುಸರಿಸಲು ಕಾರಣವಾಗಿದೆ

Seakal Ramachandra Gowda: ಆತ್ಮನಿರ್ಭರ ಭಾರತ ಅಭಿಯಾನ ಜನಜಾಗೃತಿ ಮೂಡಿಸ ಬೇಕು : ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ

ಆತ್ಮನಿರ್ಭರ ಭಾರತ ಅಭಿಯಾನ ಜನಜಾಗೃತಿ ಮೂಡಿಸ ಬೇಕು

ಏಕ್ ಭಾರತ್ ಶ್ರೇಷ್ಠ ಭಾರತ್, ಆತ್ಮ ನಿರ್ಭರ ಭಾರತ್ ಹಾಗೂ ಮೇಕ್ ಇನ್ ಇಂಡಿಯಾ ಮೂಲಕ ಸ್ವಾಭಿಮಾನಿ, ಸ್ವಾವಲಂಬಿ ಭಾರತ ನಿರ್ಮಾಣದ ಕನಸನ್ನು ಪ್ರಧಾನಿ ನರೇಂದ್ರ ಮೋದಿಜಿ ಬಿತ್ತಿ ದರು. ದೇಶ ರಕ್ಷಣೆಯ ವ್ಯವಸ್ಥೆಯಲ್ಲಿ, ಸೇನೆ, ಶಸ್ತ್ರಗಳಲ್ಲಿ ಭಾರತ ಆತ್ಮ ನಿರ್ಭರವಾಗಿದೆ. ಯುವಕ ರಲ್ಲಿ, ಮಹಿಳೆಯರಲ್ಲಿ ಈ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕು

DK Shivakumar: ನಾನುಂಟು ತಾಯಿಯುಂಟು, ನಾನುಂಟು ಭಕ್ತಿಯುಂಟು: ಡಿ.ಕೆ. ಶಿವಕುಮಾರ್ ಹೀಗೆ ಹೇಳಿದ್ದೇಕೆ?

ನಾನುಂಟು ತಾಯಿಯುಂಟು, ನಾನುಂಟು ಭಕ್ತಿಯುಂಟು: ಡಿಕೆಶಿ

Hasanamba Temple: ಕುಟುಂಬ ಸಮೇತರಾಗಿ ಮಂಗಳವಾರ ಸಂಜೆ ಹಾಸನಾಂಬ ದೇವಿಯ ದರ್ಶನ ಪಡೆದ ಡಿ.ಕೆ. ಶಿವಕುಮಾರ್ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು. ಹೆಚ್ಚಿನ ಅಧಿಕಾರಕ್ಕೆ ಏನಾದರೂ ಪ್ರಾರ್ಥನೆ ಮಾಡಿದ್ದೀರಾ ಎಂದಾಗ, ನಾನುಂಟು ತಾಯಿಯುಂಟು. ನಾನುಂಟು ಭಕ್ತಿಯುಂಟು, ಭಕ್ತ ಹಾಗೂ ಭಗವಂತನಿಗೆ ವ್ಯವಹಾರ ನಡೆಯುವ ಸ್ಥಳ ದೇವಸ್ಥಾನ ಎಂದು ಅವರು ತಿಳಿಸಿದ್ದಾರೆ.

Loading...