ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

CM DK Shivakumar: ನೂತನ ಸಿಎಂ ಡಿ.ಕೆ.ಶಿವಕುಮಾರ್‌ಗೆ ಮಲೇಷ್ಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ ಶುಭಾಶಯ; ವಿಡಿಯೊ ಇಲ್ಲಿದೆ

ನೂತನ ಸಿಎಂ ಡಿ.ಕೆ.ಶಿವಕುಮಾರ್‌ಗೆ ಮಲೇಷ್ಯಾ ಪ್ರಧಾನಿ ಶುಭಾಶಯ

Malaysian PM Anwar Ibrahim: ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ವಿಡಿಯೊ ಕಾಲ್ ಮೂಲಕ ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಸಿಎಂ ಅವರು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

ಜೆಡಿಎಸ್ ಕಾರ್ಯಕರ್ತರಿಗೂ ನನ್ನ ಮನೆ ಬಾಗಿಲು ತೆರೆದಿದೆ: ಸಿಎಂ ಡಿ.ಕೆ. ಶಿವಕುಮಾರ್

ಜೆಡಿಎಸ್ ಕಾರ್ಯಕರ್ತರಿಗೂ ನನ್ನ ಮನೆ ಬಾಗಿಲು ತೆರೆದಿದೆ: ಸಿಎಂ ಡಿಕೆಶಿ

ಕನಕಪುರ ಕ್ಷೇತ್ರದಲ್ಲಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಲಾಗುವುದು. ಲೋಕಸಭೆ ಚುನಾವಣೆಯಲ್ಲಿ ನಮಗೆ ಬೆಂಬಲ ಕೊಡಲಿಲ್ಲ ಎಂದು ಯಾರನ್ನೂ ದೂಷಣೆ ಮಾಡುವುದಿಲ್ಲ. ಏನೋ ಒಮ್ಮೆ ಹೆಚ್ಚು ಕಮ್ಮಿ ಆಗಿ ತಪ್ಪಾಗಿದೆ. ನಮ್ಮ ಮುಖಂಡರು ಯಾರ ವಿರುದ್ಧವೂ ದ್ವೇಷ ಸಾಧಿಸಬಾರದು. ಅವರ ಮನಪರಿವರ್ತನೆ ಆಗಲಿ ಎಂದು ಪ್ರಾರ್ಥಿಸಿ ಎಂದು ಕಾರ್ಯಕರ್ತರಿಗೆ ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

World Environment Day 2026: ಪರಿಸರ ದಿನಾಚರಣೆ ಹಿನ್ನೆಲೆ ಕತಾರ್‌ನಲ್ಲಿ ಕರ್ನಾಟಕ ಸಂಘದಿಂದ ಗಿಡ ನೆಡುವ ಅಭಿಯಾನ

ಕತಾರ್‌ನಲ್ಲಿ ಕರ್ನಾಟಕ ಸಂಘದಿಂದ ಪರಿಸರ ದಿನಾಚರಣೆ

Karnataka Sangha Qatar: ಕತಾರ್ನ ಭಾರತೀ ರಾಯಭಾರಿ ವಿಪುಲ್ ಹಾಗೂ ಕತಾರ್ ಪುರಸಭೆ ಅಧಿಕಾರಿಗಳು ಕರ್ನಾಟಕ ಸಂಘದ ವ್ಯವಸ್ಥಾಪಕ ಸಮಿತಿಯೊಂದಿಗೆ ಗಿಡ ನೆಡುವ ಮೂಲಕ‌ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಇವರೊಂದಿಗೆ ವಿವಿಧ ಸಂಸ್ಥೆಗಳ ಸ್ವಯಂಸೇವಕರು ಹಾಗೂ ಸಮುದಾಯದ ಮುಖಂಡರು ಪಾರ್ಕ್‌ನಲ್ಲಿ ಗಿಡಗಳನ್ನು ನೆಟ್ಟು ಹಸಿರು ಸೊಬಗನ್ನು ಹೆಚ್ಚಿಸಿದರು.

Kalaburagi News: ಪೋಕ್ಸೊ ಕೇಸ್ ತನಿಖೆಗೆ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಕಾನ್ಸ್‌ಟೇಬಲ್, ಎಎಸ್‌ಐ ಎಸ್ಕೇಪ್!

ಲಂಚ ಸ್ವೀಕಾರದ ವೇಳೆ ಸಿಕ್ಕಿಬಿದ್ದ ಮಹಿಳಾ ಕಾನ್ಸ್‌ಟೇಬಲ್, ಎಎಸ್‌ಐ ಎಸ್ಕೇಪ್!

ಕಲಬುರಗಿಯಲ್ಲಿ ಚಿಂದಿ ಆಯುವ ಬಡ ಕುಟುಂಬದ ಬಾಲಕಿ ಮೇಲೆ ಇತ್ತೀಚೆಗೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದ ತನಿಖೆಗೆ ಲಂಚ ಸ್ವೀಕರಿಸುವ ವೇಳೆ ಮಹಿಳಾ ಪೊಲೀಸ್‌ ಪೇದೆ ಸಿಕ್ಕಿಬಿದ್ದಿದ್ದಾರೆ.

CM DK Shivakumar: ಜೀರೋ ಟ್ರಾಫಿಕ್‌ನಿಂದ ಜನರಿಗೆ ತೊಂದ್ರೆ ತಪ್ಪಿಸಲು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಸಿಎಂ ಡಿಕೆಶಿ

ಜೀರೋ ಟ್ರಾಫಿಕ್‌ ತಪ್ಪಿಸಲು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಸಿಎಂ

ಮೆಟ್ರೋ ರೈಲು ಪ್ರಯಾಣದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಸಿಎಂ ಡಿ.ಕೆ.ಶಿವಕುಮಾರ್‌ ಅವರು, ಇಂದು ನಮ್ಮ ಮೆಟ್ರೋದಲ್ಲಿ ಸಾರ್ವಜನಿಕರೊಂದಿಗೆ ಪ್ರಯಾಣಿಸುವ ಅವಕಾಶ ಸಿಕ್ಕಿತು. ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ಬೆಂಗಳೂರಿನ ನಾಗರಿಕರ ಮುಖದಲ್ಲಿನ ನೆಮ್ಮದಿಯನ್ನು ಕಂಡಾಗ, ಸುರಕ್ಷಿತ, ಜನಸ್ನೇಹಿ ಹಾಗೂ ಕೈಗೆಟುಕುವ ಸಾರ್ವಜನಿಕ ಸಾರಿಗೆ ನಮ್ಮ ಕರ್ನಾಟಕದ ಜನತೆಗೆ ಎಷ್ಟು ಮುಖ್ಯ ಎಂಬುದು ಮತ್ತೊಮ್ಮೆ ಮನವರಿಕೆಯಾಯಿತು ಎಂದು ಹೇಳಿದ್ದಾರೆ.

ಆನ್‌ಲೈನ್‌ ಗೇಮ್‌ ಆಡಬೇಡ ಎಂದಿದ್ದಕ್ಕೆ ಅಪ್ಪ, ಅಕ್ಕನನ್ನೇ ಕೊಂದ  ದ್ವಿತೀಯ ಪಿಯುಸಿ ವಿದ್ಯಾರ್ಥಿ

ಅಪ್ಪ, ಅಕ್ಕನನ್ನೇ ಕೊಂದ ದ್ವಿತೀಯ ಪಿಯುಸಿ ವಿದ್ಯಾರ್ಥಿ

ವಿದ್ಯಾರ್ಥಿಯೊಬ್ಬನಿಗೆ ಮೊಬೈಲ್ ನಲ್ಲಿ ಆನ್ ಲೈನ್ ಗೇಮ್ ಆಡದಂತೆ ಬುದ್ದಿವಾದ ಹೇಳಿದ್ದಕ್ಕೆ ತಂದೆ ಹಾಗೂ ಅಕ್ಕನನ್ನೇ ಕೊಲೆ ಮಾಡಿದ ಘಟನೆ ಅಯೋಧ್ಯೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಅಯೋಧ್ಯೆ ಗ್ರಾಮದ ಸರಕಾರಿ ಶಾಲೆಯ ಸಮೀಪದ ಮನೆಯೊಂದರಲ್ಲಿ ಘಟನೆ ಜರುಗಿದೆ.

ಲಕ್ಷ್ಮಣ- ಲಕ್ಷ್ಮೀ: ಇಬ್ಬರಲ್ಲಿ ಯಾರು ಲಕ್ಕಿ?

ಲಕ್ಷ್ಮಣ- ಲಕ್ಷ್ಮೀ: ಇಬ್ಬರಲ್ಲಿ ಯಾರು ಲಕ್ಕಿ?

ಲಕ್ಷ್ಮೀ ಹೆಬ್ಬಾಳಕರ ಹಾಗೂ ಲಕ್ಷ್ಮಣ ಸವದಿ ಹೊರತಾಗಿ ಈ ಬಾರಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳ ಪಟ್ಟಿಯಲ್ಲಿ ರಾಮದುರ್ಗ ಶಾಸಕ ಹಾಗೂ ಸಿದ್ದರಾಮಯ್ಯನವರ ಪರಮಾಪ್ತ ಅಶೋಕ್ ಪಟ್ಟಣ, ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ ಹಾಗೂ ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ ಇದ್ದಾರೆ. ತಮ್ಮ ಆಪ್ತ ನಾಯಕರ ಮೂಲಕ ಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸಿದ್ದು, ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಅವಕಾಶ ನೀಡುತ್ತದೆ ಎಂಬುದನ್ನು ಕಾದು ನೋಡಬೇಕು.

ಕಲಬುರಗಿಯಲ್ಲಿ ಭಾರಿ ಮಳೆಯ ಆರ್ಭಟ: ಸೇತುವೆ ಕುಸಿತ, ಮನೆಗಳಿಗೆ ನೀರು ನುಗ್ಗಿ ಜನರ ಪರದಾಟ

ಕುಸಿದ ಸೇತುವೆ; 20 ಕ್ಕೂ ಅಧಿಕ ಮನೆಗೆ ನುಗ್ಗಿದ ನೀರು

ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿಮ್ಮನಚೋಡ ಗ್ರಾಮದ ಸಮೀಪ ಇರುವ ಚಿಮ್ಮನಚೋಡ–ನರನಾಳ ಸಂಪರ್ಕ ಸೇತುವೆ ಮಳೆಯ ರಭಸಕ್ಕೆ ಕುಸಿದಿದೆ. ಇನ್ನೊಂದೆಡೆ, ಚಿಂಚೋಳಿ ತಾಲ್ಲೂಕಿನ ಬೆಡಕಪಳ್ಳಿ ಗ್ರಾಮದಲ್ಲಿ ಮಳೆ ನೀರು ನುಗ್ಗಿ 20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ; ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 29 ರೂ. ಹೆಚ್ಚಳ

ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 29 ರೂ. ಹೆಚ್ಚಳ

Domestic LPG Cylinder Price Hike: ವಾಣಿಜ್ಯ ಸಿಲಿಂಡರ್‌, ಪೆಟ್ರೋಲ್‌, ಡೀಸೇಲ್‌, ಬೆಲೆ ಏರಿಕೆಯಿಂದ ಹೈರಾಣಿಗಿದ್ದ ಜನರಿಗೆ ಇದೀಗ ಮತ್ತೆ ಶಾಕ್‌ ಎದುರಾಗಿದೆ. ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ಪ್ರತಿ ಸಿಲಿಂಡರ್‌ಗೆ 29 ರೂ. ಹೆಚ್ಚಳ ಮಾಡಲಾಗಿದೆ. ಕಳೆದ ಮೂರು ತಿಂಗಳಲ್ಲಿ ನಡೆದಿರುವ ಎರಡನೇ ದರ ಏರಿಕೆ ಇದಾಗಿದೆ.

Karnataka Weather: ಆರೆಂಜ್‌ ಅಲರ್ಟ್;‌ ಇಂದು ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ, ಮೀನುಗಾರರಿಗೆ ಎಚ್ಚರಿಕೆ!

ಆರೆಂಜ್‌ ಅಲರ್ಟ್;‌ ಇಂದು ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

Weather Report: ಮುಂದಿನ 4 ದಿನಗಳವರೆಗೆ ರಾಜ್ಯದಾದ್ಯಂತ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಗಳಿಲ್ಲ. ಇನ್ನು ಜೂನ್‌ 9ವರೆಗೆ ಕರಾವಳಿಯಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರ ಪ್ರದೇಶಗಳಿಗೆ ಹೋಗದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

MLA S.N. Subbareddy: ಸರ್ಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಿ : ರೈತರಿಗೆ ಶಾಸಕ ಸುಬ್ಬಾರೆಡ್ಡಿ ಕರೆ

ಸರ್ಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಿ

ರೈತರನ್ನು ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ರೈತರು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ರಿಯಾಯತಿ ದರದಲ್ಲಿ ಕೃಷಿ ಹಾಗೂ ಕೃಷಿ ಸಂಬAಧಿತ ಇಲಾಖೆಗಳ ಮೂಲಕ ಕೃಷಿ ಯಾಂತ್ರೀಕರಣ, ಹನಿ ನೀರಾವರಿ, ತುಂತುರು ನೀರಾವರಿ, ರಿಯಾಯತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಹೀಗೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ.

Gudibande News: ಆಧುನಿಕತೆ, ನಗರೀಕರಣ ಹೆಸರಿನಲ್ಲಿ ಪರಿಸರ ನಾಶ ಸರಿಯಲ್ಲ: ನ್ಯಾ.ಪ್ರೇಮ್ ಕುಮಾರ್

ಆಧುನಿಕತೆ, ನಗರೀಕರಣ ಹೆಸರಿನಲ್ಲಿ ಪರಿಸರ ನಾಶ ಸರಿಯಲ್ಲ

ಪ್ರಪಂಚ ದಿನೇ ದಿನೇ ವೇಗವಾಗಿ ಬೆಳೆಯುತ್ತಿದೆ. ಈ ಹಿಂದೆ ಸಾಕಷ್ಟು ಅರಣ್ಯ ಪ್ರದೇಶವನ್ನು ನಾವು ಕಾಣುತ್ತಿದ್ದೆವು. ಇದೀಗ ಎಲ್ಲಿ ನೋಡಿದರೂ ಕಟ್ಟಡಗಳು ಕಾಣಿಸುತ್ತವೆ. ಪರಿಸರ ನಾಶದಿಂದ ಈಗಾಗಲೇ ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಈಗಲಾದರೂ ನಾವು ಎಚ್ಚೆತ್ತುಕೊಂಡು ಪರಿಸರ ಕಾಪಾಡುವ ಕಾರ್ಯಕ್ಕೆ ಮುಂದಾಗಬೇಕು.

World Environment Day: ಕಾಂಗ್ರೆಸ್ ಸರ್ಕಾರದ ವಿರುದ್ಧ ಸೀಕಲ್ ರಾಮಚಂದ್ರಗೌಡ ವಾಗ್ದಾಳಿ; ಜಂಗಮಕೋಟೆ ರೈತರ ಹೋರಾಟಕ್ಕೆ ಬಿಜೆಪಿ ಬೆಂಬಲ

ಕಾಂಗ್ರೆಸ್ ಸರ್ಕಾರದ ವಿರುದ್ಧ ಸೀಕಲ್ ರಾಮಚಂದ್ರಗೌಡ ವಾಗ್ದಾಳಿ

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಪ್ರತಿಯೊಂದು ಮನೆಯಲ್ಲೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಉಳಿವಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷರ ತಾಯಂದಿರ ಹೆಸರಿನಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.

MLA KH Puttaswamy Gowda: ರೈತನಿಗೆ ಆಸರೆಯಾಗಿ ನಿಲ್ಲಬೇಕು ಎಂಬ ಉದ್ದೇಶದಿಂದ ಇಂದು ಫಲಾನುಭವಿಗಳ ಬೃಹತ್ ಸಮಾವೇಶ : ಶಾಸಕ ಪುಟ್ಟಸ್ವಾಮಿಗೌಡ

ರೈತನಿಗೆ ಆಸರೆಯಾಗಿ ನಿಲ್ಲಬೇಕು ಎಂಬ ಉದ್ದೇಶದಿಂದ ಇಂದು ಸಮಾವೇಶ

ಕೃಷಿ ಚಟುವಟಿಕೆಗಳಿಗೆ ನೆರವಾಗಲು ಸರ್ಕಾರದ ಸಹಾಯಧನದಲ್ಲಿ ಕೃಷಿ ಇಲಾಖಾ ವತಿಯಿಂದ ಟ್ರ‍್ಯಾಕ್ಟರ್, ಉಳಿಮೆ ಯಂತ್ರ,ಕಳೆ ನಾಶಕ ಯಂತ್ರ,ರೈತರ ಬೆಳೆಗಳಿಗೆ ನೆರವಾಗಲು ಹನಿ ನೀರಾವರಿ ಉಪಕರಣಗಳು, ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಬಾವಿಗಳಿಂದ ನೀರೆತ್ತಲು ಪಂಪು ಮೋಟಾರು, ಕೇಬಲ್, ಪೈಪು ,ವಿದ್ಯುತ್ ಉಪಕರಣಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಸಹಾಯಧನ ನೀಡಲಾಗುತ್ತಿದೆ

ರಾಜ್ಯಸಭೆ ಚುನಾವಣೆ; ಕಾಂಗ್ರೆಸ್‌ನ ಪವನ್ ಖೇರಾ, ಮನ್ಸೂರ್ ಅಲಿಖಾನ್ ನಾಮಪತ್ರ ಸಲ್ಲಿಕೆ

ರಾಜ್ಯಸಭೆ ಚುನಾವಣೆ; ಪವನ್ ಖೇರಾ, ಮನ್ಸೂರ್ ಅಲಿಖಾನ್ ನಾಮಪತ್ರ ಸಲ್ಲಿಕೆ

ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸುವವರು ನಾಮಪತ್ರ ಸಲ್ಲಿಸಲು ಜೂನ್ 8 ಕೊನೆಯ ದಿನವಾಗಿದೆ. ಜೂ.18ರಂದು ಚುನಾವಣೆ ನಡೆಯಲಿದ್ದು, ಅಂದೇ ಮತದಾನವಾಗಿ ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಪಿಎಚ್‌ಡಿ ಆಮಿಷ ತೋರಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಧಾರವಾಡ ವಿವಿ ಪ್ರೊಫೆಸರ್‌ ವಿರುದ್ಧ ಗಂಭೀರ ಆರೋಪ

ವಿದ್ಯಾರ್ಥಿನಿ ಮೇಲೆ ಧಾರವಾಡ ವಿವಿ ಪ್ರೊಫೆಸರ್‌ ಲೈಂಗಿಕ ದೌರ್ಜನ್ಯ

Dharwad university professor Case: ಧಾರವಾಡ ವಿವಿ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ದೇವರಾಜ ತಂಗುದೊರೈ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಪಿಎಚ್‌ಡಿ ಕೊಡಿಸುವ ಆಮಿಷ ತೋರಿ ವಿದ್ಯಾರ್ಥಿನಿ ಮೇಲೆ ಪ್ರೊಫೆಸರ್‌ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದು, ಇತರ ವಿದ್ಯಾರ್ಥಿಗಳಿಗೂ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Krishna Byre Gowda: ಕಂದಾಯ ಖಾತೆಯಲ್ಲೇ ಕೃಷ್ಣಬೈರೇಗೌಡರನ್ನು ಮುಂದುವರೆಸಲು ಕೃಷಿಕ ಸಮಾಜ ಒತ್ತಾಯ

ಕಂದಾಯ ಖಾತೆಯಲ್ಲೇ ಕೃಷ್ಣಬೈರೇಗೌಡರನ್ನು ಮುಂದುವರೆಸಲು ಒತ್ತಾಯ

ಬಹಳ ವರ್ಷಗಳಿಂದ ಕುಂಠಿತಗೊಂಡಿದ್ದ, ಫೌತಿ ಖಾತೆ, ಪಿ.ನಂಬರ್ ದುರಸ್ತಿ, ಕಂದಾಯ ಗ್ರಾಮ, ಗ್ರಾಮ ಠಾಣೆಗಳ ರಚನೆ, ಬಹಳ ಮುಖ್ಯವಾಗಿ,ರೈತರ ದಾಖಲೆಗಳ ಡಿಜಿಟಲೀಕರಣ ಮುಂತಾದ ಕಾರ್ಯಗಳನ್ನು ಬಹಳ ವ್ಯವಸ್ಥಿತವಾಗಿ ಮಾಡಿರುವುದರಿಂದ ರೈತ ಸಮುದಾಯಕ್ಕೆ ಅನುಕೂಲ ವಾಗಿತ್ತು. ತಮ್ಮ ದಾಖಲೆ ಗಳಿಗಾಗಿ ರೈತರು ಕಚೇರಿಗೆ ಅಲೆಯುವುದನ್ನು ತಪ್ಪಿಸಿ ಬೆರಳ ತುದಿಯಲ್ಲೇ ಎಲ್ಲಾ ದಾಖೆಗಳು ಸಿಗುವಂತೆ ಮಾಡುವಲ್ಲಿ ಕೃಷ್ಣ ಬೈರೇಗೌಡರು ಪ್ರಗತಿ ಸಾಧಿಸಿದ್ದರು.

Gauribidanur News: ತೀರ್ಥಶಾಲೆಯಲ್ಲಿ ಡಾ.ಮಾಸ್ತಿ ಮತ್ತು ಡಾ.ಎಚ್.ನರಸಿಂಹಯ್ಯ ಜಯಂತಿ

ತೀರ್ಥಶಾಲೆಯಲ್ಲಿ ಡಾ.ಮಾಸ್ತಿ ಮತ್ತು ಡಾ.ಎಚ್.ನರಸಿಂಹಯ್ಯ ಜಯಂತಿ

ಡಾ.ಹೆಚ್.ನರಸಿಂಹಯ್ಯನವರ ಸರಳ ಮತ್ತು ಆದರ್ಶ ಜೀವನದ ಮೌಲ್ಯಗಳನ್ನು ನಾವು ಅಳವಡಿಸಿ ಕೊಳ್ಳಬೇಕು. ಸಾಹಿತ್ಯ ವಿಜ್ಞಾನ, ಶಿಕ್ಷಣ ಮತ್ತು ಲಲಿತ ಕಲೆಗಳಿಗೆ ಇವರು ನೀಡಿರುವ ಕೊಡುಗೆ ಅನನ್ಯವಾಗಿದೆ. ಪ್ರತಿಯೊಂದು ಶಾಲಾ ಕಾಲೇಜು, ಸರ್ಕಾರಿ ಕಚೇರಿ ಮತ್ತುಸಂಘ ಸಂಸ್ಥೆಗಳಲ್ಲಿ ಇವರ ಹುಟ್ಟುಹಬ್ಬವನ್ನು ರಾಜ್ಯಮಟ್ಟದಲ್ಲಿ ಆಚರಿಸಬೇಕೆಂದು ಸರ್ಕಾರಕ್ಕೆ ವಿನಂತಿಸಿದರು.

Chikkaballapur News: ಶಿಸ್ತು, ಸಂಯಮಗಳೇ ವಿದ್ಯಾರ್ಥಿ ಜೀವನದ ಯಶಸ್ಸಿಗೆ ಭದ್ರ ಬುನಾದಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ವಿ.ವೆಂಕಟೇಶ್ ಅಭಿಮತ

ಶಿಸ್ತು, ಸಂಯಮಗಳೇ ವಿದ್ಯಾರ್ಥಿ ಜೀವನದ ಯಶಸ್ಸಿಗೆ ಭದ್ರ ಬುನಾದಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸು ವುದರ ಜೊತೆಗೆ ಪರ್ಯಾಯ ಅವಕಾಶಗಳನ್ನೂ ಸದುಪಯೋಗಪಡಿಸಿಕೊಳ್ಳಬೇಕು. ಕೇವಲ ಪದವಿ ಪಡೆದರೆ ಸಾಕಾಗುವುದಿಲ್ಲ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು. ಸಾಧನೆ ಮಾಡುವ ಮೂಲಕ ಕಾಲೇಜು ಹಾಗೂ ಜಿಲ್ಲೆಯ ಹೆಸರನ್ನು ಉಜ್ವಲ ಗೊಳಿಸಬೇಕು

Haveri Rains: ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ; ಹಲವಡೆ ಸಂಚಾರಕ್ಕೆ ಅಡ್ಡಿ, ಮನೆಗಳಿಗೆ ನೀರು ನುಗ್ಗಿ ಹಾನಿ

ಹಾವೇರಿಯಲ್ಲಿ ಮುಂಗಾರು ಮಳೆ ಅಬ್ಬರ; ಹಲವಡೆ ಸಂಚಾರಕ್ಕೆ ಅಡ್ಡಿ

Haveri News: ಹಾವೇರಿ ಜಿಲ್ಲೆಯ ಹಲವೆಡೆ ಶನಿವಾರ ಭಾರಿ ಮಳೆಯಾಗಿದೆ. ಅಗಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಅಡ್ಡಲಾಗಿ ಹರಿಯುವ ಹಳ್ಳವು ಭಾರೀ ಮಳೆಗೆ ತುಂಬಿ ಹರಿದ ಹಿನ್ನೆಲೆ ವಾಹನ ಸಂಚಾರಕ್ಕೆ ಸ್ಥಗಿತಗೊಂಡಿತ್ತು. ಇನ್ನು ಗ್ರಾಮದಲ್ಲಿ ಮನೆಗಳಿಗೆ‌ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸಿದೆ.

MLA B.Z.Zameer Ahmed Khan: ಜಮೀರ್ ಅಹ್ಮದ್ ಖಾನ್ ಅವರಿಗೆ ಡಿಸಿಎಂ ಹುದ್ದೆ ಸೇರಿ: ಐವರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಜಮೀರ್ ಅವರಿಗೆ ಡಿಸಿಎಂ ಹುದ್ದೆ ಸೇರಿ: ಐವರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ನಗರದ ಜಾಮಿಯಾ ಮಸೀದಿ ಎದುರು ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಬಾಂಧವರು, ನೂತನ ಸಚಿವ ಸಂಪುಟದ ಮೊದಲ ಪಟ್ಟಿಯಲ್ಲಿ ಕೇವಲ ಒಬ್ಬ ಮುಸ್ಲಿಂ ಶಾಸಕರಿಗೆ ಮಾತ್ರ ಸ್ಥಾನ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಜಮೀರ್ ಅಹ್ಮದ್ ಖಾನ್, ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಸೇರಿದಂತೆ ಒಟ್ಟು ಐದು ಮುಸ್ಲಿಂ ಪ್ರತಿನಿಧಿಗಳಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

Calling off the Hunger Strike: ನಿರಾಹಾರ ಉಪವಾಸ ಸತ್ಯಾಗ್ರಹ ನಿರತ ರೈತರ ಮನವೊಲಿಕೆ ಮಾಡಿದ ಜಿಲ್ಲಾಧಿಕಾರಿ

ಹಾಲು ಕುಡಿಸುವ ಮೂಲಕ ಉಪವಾಸ ಸತ್ಯಾಗ್ರಹ ವಾಪಸ್ಸು ಮಾಡುವಲ್ಲಿ ಸಫಲ

ಜಿಲ್ಲಾಡಳಿತ ಭವನದ ಎದುರು ಕೆಐಎಡಿಬಿಗೆ ಭೂಮಿ ಕೊಡಲು ಸಿದ್ಧವಿರುವ 13 ಹಳ್ಳಿಗಳ ರೈತರು ಕಳೆದ 77 ದಿನಗಳಿಂದ ಪ್ರತಿಭಟನೆ ನಡೆಸುತ್ತಾ ಸರಕಾರದ ನಡೆ ಕಾಯುತ್ತಾ ಕೂತಿದ್ದರು. ಜಿಲ್ಲಾಡಳಿತವು ನಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿಲ್ಲ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಬೇಸರಿಸಿ ಶುಕ್ರವಾರದಿಂದ ನಿರಾಹಾರ ಉಪವಾಸ ಕೈಗೊಂಡಿದ್ದರು.

ಬಕ್ರೀದ್‌ ಹಬ್ಬದ ವೇಳೆ ಗಲಾಟೆ ಪ್ರಕರಣ; ಬಿಜೆಪಿ ಶಾಸಕ ಶರಣು ಸಲಗರ್‌ಗೆ ಜಾಮೀನು ರಹಿತ ವಾರಂಟ್

ಬಿಜೆಪಿ ಶಾಸಕ ಶರಣು ಸಲಗರ್‌ಗೆ ಜಾಮೀನು ರಹಿತ ವಾರಂಟ್

MLA Sharanu Salagar: ಗೋಹತ್ಯೆ ವಿಚಾರ ನಡೆದ ಗಲಾಟೆ ಪ್ರಕರಣವನ್ನು ತನಿಖೆ ನಡೆಸಿರುವ ಪೊಲೀಸರು ಈಗಾಗಲೇ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ವಿಚಾರಣೆಗೆ ಶಾಸಕ ಸಲಗರ್ ಗೈರಾಗಿದ್ದ ಹಿನ್ನೆಲೆ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್‌ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಕಾಪು ಮಾರಿ ಗುಡಿ: ಬ್ರಹ್ಮ ಕಲಶೋತ್ಸವದ ಹಿಂದಿನ ಶಕ್ತಿ ಡಾ. ಪ್ರಕಾಶ್‌ ಶೆಟ್ಟಿ

ಕಾಪು ಮಾರಿ ಗುಡಿ: ಬ್ರಹ್ಮ ಕಲಶೋತ್ಸವದ ಹಿಂದಿನ ಶಕ್ತಿ ಡಾ. ಪ್ರಕಾಶ್‌ ಶೆಟ್ಟಿ

ಕಾಪು ಹೊಸ ಮಾರಿಗುಡಿಯ ಬೇರುಗಳು 17ನೆಯ ಶತಮಾನಕ್ಕೆ ಕರೆದೊಯ್ಯುತ್ತವೆ. ವಿಜಯನಗರ ಸಾಮ್ರಾಜ್ಯದ ಅಂಗವಾಗಿದ್ದ ಕೇಳಾಡಿ ನಾಯಕ ಮನೆತನದ ಅರಸ ಬಸಪ್ಪ ನಾಯಕ ಕ್ರಿ.ಶ. 1743ರಲ್ಲಿ ಕಾಪು ಸಮುದ್ರ ತೀರದಲ್ಲಿ ಮನೋಹರಗಢ ಎಂಬ ಕೋಟೆ ಮತ್ತು ಮಳ್ಳೂರಿನಲ್ಲಿ ಸೇನಾ ಕೋಟೆ ನಿರ್ಮಿಸಿದ. ಈ ಸೇನೆಯ ಜತೆ ಮಾರಿ ದೇವಿ ಕಾಪುವಿಗೆ ಬಂದಳೆಂಬ ನಂಬಿಕೆ ಇರುವುದರಿಂದ ಆಕೆ ದಂಡಿನ ಮಾರಿ ಎಂದೇ ಪ್ರಸಿದ್ಧಿ.

Loading...