ಕಾರಂಜಿಕೆರೆಗೆ ಪ್ರವಾಸೋದ್ಯಮದ ಹೊಸ ಸ್ಪರ್ಶ
ಮೈಸೂರು ಮೃಗಾಲಯದ ವ್ಯಾಪ್ತಿಗೆ ಒಳಪಡುವ ಕಾರಂಜಿಕೆರೆಯಲ್ಲಿ ಇಕೋ ಟವರ್, ಗಾಜಿನ ಸೇತುವೆಯ ಮಾದರಿಯ ಕೆನೋಪಿ ವಾಕ್, ಲೇಕ್ ವಾಕ್, ಜಿಪ್ಲೈನ್, ರೋಪ್ ಬ್ರಿಡ್ಜ್ ಸೇರಿದಂತೆ ಹಲವು ಪ್ರವಾಸಿ ಆಕರ್ಷಣೆಗಳು ತಲೆ ಎತ್ತಲಿವೆ. ಈಗಾಗಲೇ ಕೆಲವು ಕಾಮಗಾರಿಗಳು ವೇಗ ಪಡೆದು ಕೊಂಡಿದ್ದು, ಮುಂದಿನ ದಸರಾ ಮಹೋತ್ಸವದ ವೇಳೆಗೆ ಯೋಜನೆಯನ್ನು ಪೂರ್ಣ ಗೊಳಿಸಿ ಪ್ರವಾಸಿಗರಿಗೆ ಸಮರ್ಪಿಸುವ ಗುರಿ ಹೊಂದಲಾಗಿದೆ.