ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

ನಿಟ್ಟೆ ಶಿಕ್ಷಣ ಸಂಸ್ಥೆಗಳ ಸಮೂಹ ಅಧ್ಯಕ್ಷ ವಿನಯ ಹೆಗ್ಡೆ ನಿಧನಕ್ಕೆ ಡಾ. ವೀರೇಂದ್ರ ಹೆಗ್ಗಡೆ ಸಂತಾಪ

ವಿನಯ ಹೆಗ್ಡೆ ನಿಧನಕ್ಕೆ ಡಾ. ವೀರೇಂದ್ರ ಹೆಗ್ಗಡೆ ಸಂತಾಪ

ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಹಾಗೂ ರಾಜ್ಯದ ಪ್ರಮುಖ ಶಿಕ್ಷಣ ತಜ್ಞರು, ಉದ್ಯಮಿ ಮತ್ತು ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಡಾ. ಎನ್. ವಿನಯ ಹೆಗ್ಡೆ ಅವರ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ.

Gauribidanur News: 6.5 ಕೋಟಿ ರೂ. ವಿಶೇಷ ಅನುದಾನದಲ್ಲಿ ನಿರ್ಮಾಣ: ನಿಷ್ಕ್ರಿಯವಾಗಿರುವ ಸುಸಜ್ಜಿತ ನೂತನ ಕಟ್ಟಡ

ಉದ್ಘಾಟನೆಯಾದರೂ ಬಳಕೆಯಾಗದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯ

ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಶಿಥಿಲಗೊಂಡಿದ್ದ ಹಳೆ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ತೆರವುಗೊಳಿಸಿದ್ದರು. ನಂತರ ರಾಜ್ಯ ಸರ್ಕಾರವು ಸುಮಾರು 6.5 ಕೋಟಿ ರೂಗಳ ವಿಶೇಷ ಅನುದಾನದಲ್ಲಿ ಮೂರು ಅಂತಸ್ತಿನ ಸುವ್ಯವಸ್ಥಿತ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿತ್ತು

Chikkaballapur News: ದೇವರಾಜ್ ಅರಸು ಮೆಡಿಕಲ್ ಕಾಲೇಜು ಅಧ್ಯಕ್ಷ ಜಿ.ಹೆಚ್.ನಾಗರಾಜ್ ಜನ್ಮದಿನ ಆಚರಣೆ

ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಸೇರಿದಂತೆ ನೂರಾರು ಮುಖಂಡರಿಂದ ಶುಭಾಶಯ

ಜಿಲ್ಲೆಯಲ್ಲಿ ಅಷ್ಟೇ ಅಲ್ಲದೆ ರಾಜ್ಯದಲ್ಲಿ ಕೂಡ ಜಿ.ಹೆಚ್.ನಾಗರಾಜ್ ಅವರಿಗೆ ಮತ್ತು ಅವರ ಕುಟುಂಬಕ್ಕೆ ಅಪಾರ ಬಂಧು ಬಳಗದ ನಂಟಿದೆ. ಕೊಡುಗೈ ದಾನಿಗಳಾಗಿ, ಸಮಾಜ ಸೇವಕರಾಗಿ, ರಾಜಕೀಯ ಧುರೀಣ ರಾಗಿ ಅಪಾರವಾದ ಜನಪ್ರೀತಿಯನ್ನು ಗಳಿಸಿದ್ದಾರೆ. ಇಂತಹ ಜನಪರ ನಾಯಕರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಹರಿಪ್ರಸಾದ್ ಆಗಮಿಸಿದ್ದು ವಿಶೇಷವಾಗಿದೆ ಎಂಬುದು ಅವರ ಯುವ ಮುಖಂಡ ವಿನಯ್‌ಶ್ಯಾಮ್ ಅವರ ಮಾತಾಗಿದೆ

ಬ್ಯಾನರ್‌ ಅಳವಡಿಕೆ ವಿಚಾರದಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆ ಗಲಾಟೆ; ಓರ್ವ ಸಾವು

ಬ್ಯಾನರ್‌ ಅಳವಡಿಕೆ ವಿಚಾರದಲ್ಲಿ ಗಲಾಟೆ; ಓರ್ವ ಸಾವು

Janardhana Reddy: ಬಳ್ಳಾರಿಯ ಹವಂಬಾವಿ ಏರಿಯಾದಲ್ಲಿರುವ ಬಿಜೆಪಿ ನಾಯಕ ಜನಾರ್ದನ ರೆಡ್ಡಿ ಮನೆ ಮುಂದೆ ವಾಲ್ಮೀಕಿ ಬ್ಯಾನರ್ ಅಳವಡಿಕೆ ವಿಚಾರದಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಓರ್ವ ಮೃತಪಟ್ಟಿದ್ದಾನೆ ಎಂದು ವರದಿಯೊಂದು ತಿಳಿಸಿದೆ. ಜತೆಗೆ ಸ್ಥಳದಲ್ಲಿ ಉದ್ವಿಗ್ನ ಸನ್ನಿವೇಶ ನಿರ್ಮಾಣವಾಗಿದೆ.

Bagepally News: ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಸುಪ್ರೀತ್

ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಸುಪ್ರೀತ್

ಸಂಘದ ಕಚೇರಿಯಲ್ಲಿ ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಎಸ್.ಸುಪ್ರೀತ್, ಉಪಾಧ್ಯಕ್ಷ ಸ್ಥಾನಕ್ಕೆ ಮರಿಯಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದು, ಎರಡನೇ ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಎಸ್.ಸುಪ್ರೀತ್, ಉಪಾಧ್ಯಕ್ಷ ಸ್ಥಾನಕ್ಕೆ ಮರಿಯಪ್ಪ ಅವಿರೋಧ ಅಯ್ಕೆಗೊಂಡಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡು ಕಾಂಗ್ರೆಸ್ ಬೆಂಬಲಿತರ ಪಾಲಾಗಿದ್ದು, ಎನ್‌ಡಿಎ, ಪಿಐಎಂ) ಬೆಂಬಲಿತ ನಿರ್ದೇಶಕರಿಗೆ ನಿರಾಶೆ ಎದುರಾಗಿದೆ

Chikkaballapur News: ಭೀಮಕೋರೆಗಾಂವ್ ಓದೋಣ, ಐತಿಹಾಸಿಕ ಅನ್ಯಾಯವನ್ನು ಅರಿಯೋಣ : ಚಂದ್ರಶೇಖರ್

ಭೀಮಕೋರೆಗಾಂವ್ ಓದೋಣ, ಐತಿಹಾಸಿಕ ಅನ್ಯಾಯವನ್ನು ಅರಿಯೋಣ

ಪೇಶ್ವೆ ಆಡಳಿತದಲ್ಲಿ ಮಹಾರ್ ಸಮುದಾಯಕ್ಕೆ ಸಾಮಾಜಿಕ, ಅನ್ಯಾಯ ಮತ್ತು ಅವಮಾನಗಳಿದ್ದ ಕಾರಣ ಈ ಯುದ್ಧವನ್ನು ಅನ್ಯಾಯದ ಪ್ರತಿರೋಧದ ಸಂಕೇತವಾಗಿ ನೋಡಲಾಗುತ್ತದೆ. ಈ ಯುದ್ಧ ದಲ್ಲಿ ಮೃತಪಟ್ಟ ಬ್ರಿಟೀಷ್ ರೆಜಿಮೆಂಟ್‌ನ ಭಾಗವಾಗಿದ್ದ ಮಹಾರ್ ಸೈನಿಕರ ಸ್ಮರಣಾರ್ಥ ವಾಗಿ ವಿಜಯಸ್ತಂಭ ನಿರ್ಮಿಸಲಾಗಿದೆ.

Gubbi News: ವೈಕುಂಠ ಏಕಾದಶಿ ಹಿನ್ನೆಲೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ವೈಕುಂಠ ಏಕಾದಶಿ ಹಿನ್ನೆಲೆ ಉಚಿತ ಆರೋಗ್ಯ ತಪಾಸಣಾ ಶಿಬಿರ

7 ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಎತ್ತಿನಹೊಳೆ ನೀರಾವರಿ ಯೋಜನೆಯು ಶೇಕಡ 90ರಷ್ಟು ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಆದ್ದರಿಂದ ಕೇಂದ್ರ ಸರ್ಕಾರ ಯಾವುದೇ ಸಂಕಷ್ಟವನ್ನು ತರಬೇಡಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ(KPCC Vice President Muralidhar Halappa) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು

ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ಡಿ.ಕೆ. ಶಿವಕುಮಾರ್

ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ಡಿಕೆಶಿ

DK Shivakumar: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬೆಂಗಳೂರಿನ ಉತ್ತರ ಭಾಗದ ಜನರ ಸುಗಮ ವಾಹನ ಸಂಚಾರಕ್ಕಾಗಿ ಹೆಬ್ಬಾಳ ಮೇಲ್ಸೇತುವೆಯ ಎರಡನೇ ಲೂಪ್ ಅನ್ನು ಉದ್ಘಾಟಿಸಲಾಗಿದೆ. ಈ ಭಾಗದ ಜನರು ಹೆಬ್ಬಾಳ ಮೇಲ್ಸೇತುವೆ ಬಳಿ ಸಂಚಾರ ದಟ್ಟಣೆ ಇರುವ ಬಗ್ಗೆ ದೂರು ಹೇಳುತ್ತಿದರು. ಹೀಗಾಗಿ ನಾವು ತ್ವರಿತ ಗತಿಯಲ್ಲಿ ಪರಿಹಾರ ಕಂಡು ಹಿಡಿದಿದ್ದೇವೆ. ಆ ಮೂಲಕ ಸಂಚಾರ ದಟ್ಟಣೆ ನಿವಾರಿಸಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Sirsi News: ಧಮ್ಕಿ ಆರೋಪಕ್ಕೆ ಅನಂತಮೂರ್ತಿ, ಉಪೇಂದ್ರ ಪೈ ಸ್ಪಷ್ಟನೆ ನೀಡಲಿ: ಪ್ರದೀಪ್ ಶೆಟ್ಟಿ ಆಗ್ರಹ

ಧಮ್ಕಿ ಆರೋಪಕ್ಕೆ ಅನಂತಮೂರ್ತಿ, ಉಪೇಂದ್ರ ಪೈ ಸ್ಪಷ್ಟನೆ ನೀಡಲಿ

ಅನಂತಮೂರ್ತಿ ಅವರು ಐದು ದೇಶ ಸುತ್ತಿದ ಇಂಟರ್ ನ್ಯಾಷನಲ್ ವ್ಯಕ್ತಿಯಾಗಿರಬಹುದು. ಆದರೆ ನಾನು ಇಲ್ಲಿಯೇ ಹುಟ್ಟಿ ಬೆಳೆದ ಪಕ್ಕಾ ಲೋಕಲ್. ಶಿರಸಿಯ ಜನತೆ ಇಷ್ಟು ವರ್ಷ ನಮ್ಮನ್ನು ನೋಡಿ ದ್ದಾರೆ. ನಗರಸಭೆ ಅಧ್ಯಕ್ಷನಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದೇನೆ. ನಮ್ಮಲ್ಲಿ ಗೂಂಡಾಗಿರಿ ಸಂಸ್ಕೃತಿ ಇಲ್ಲ," ಎಂದು ಹೆಗಡೆ ಅವರಿಗೆ ತಿರುಗೇಟು ನೀಡಿದರು.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಜ.3ರಿಂದ 19ರವರೆಗೆ ಮಧ್ಯಂತರ ವಿದ್ಯುತ್‌ ವ್ಯತ್ಯಯ

ಬೆಂಗಳೂರಿನ ಈ ಪ್ರದೇಶಗಳಲ್ಲಿ ಜ.3ರಿಂದ 19ರವರೆಗೆ ಕರೆಂಟ್‌ ಇರಲ್ಲ

BESCOM News: 220/66/11ಕೆ.ವಿ ಇ.ಪಿ.ಐ.ಪಿ. ಸ್ಟೇಷನ್‌ನಲ್ಲಿ 31.5 ಎಂ.ವಿ.ಎ. ಶಕ್ತಿ ಪರಿವರ್ತಕ -3ರ ರಿಟ್ರೋಫಿಲ್ಲಿಂಗ್ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜನವರಿ 3ರಿಂದ 19ರವರೆಗೆ ಬೆಳಗ್ಗೆ 10ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಧ್ಯಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

60 ದಿನಗಳ ಎಕ್ಮೋ ಬಳಿಕ ಹೊಸ ಉಸಿರಾಟ: ಗ್ಲೀನೀಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ ಯಶಸ್ವಿ ಡ್ಯುಯಲ್ ಲಂಗ್ ಟ್ರಾನ್ಸ್‌ಪ್ಲಾಂಟ್

ಬಿಜಿಎಸ್ ಆಸ್ಪತ್ರೆಯಲ್ಲಿ ಯಶಸ್ವಿ ಡ್ಯುಯಲ್ ಲಂಗ್ ಟ್ರಾನ್ಸ್‌ಪ್ಲಾಂಟ್

ಗ್ಲೀನೀಗಲ್ಸ್ ಬಿಜಿಎಸ್ ಆಸ್ಪತ್ರೆ, 60 ದಿನಗಳಿಗಿಂತ ಹೆಚ್ಚು ಕಾಲ ಇಸಿಎಂಒ (ECMO) ಸಹಾಯದಲ್ಲಿ ಬದುಕಿದ್ದ ಗಂಭೀರ ಸ್ಥಿತಿಯ ರೋಗಿಗೆ ಅತ್ಯಂತ ಸಂಕೀರ್ಣವಾದ ಡ್ಯುಯಲ್ ಲಂಗ್ ಟ್ರಾನ್ಸ್‌ಪ್ಲಾಂಟ್ ಅನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಮಹತ್ವದ ಸಾಧನೆಯನ್ನು ಮಾಡಿದೆ.

ನಿಟ್ಟೆ ವಿವಿ ಸಂಸ್ಥಾಪಕ ವಿನಯ್ ಹೆಗ್ಡೆ ನಿಧನಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪ

ನಿಟ್ಟೆ ವಿವಿ ಸಂಸ್ಥಾಪಕ ವಿನಯ್ ಹೆಗ್ಡೆ ನಿಧನ; ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪ

ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಸಂಸ್ಥಾಪಕ ಹಾಗೂ ಕುಲಾಧಿಪತಿ ವಿನಯ್ ಹೆಗ್ಡೆ ಅವರ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪ ಸೂಚಿಸಿದ್ದಾರೆ. ‌

Raichur News: ಕಾಲುವೆಯಲ್ಲಿ ಮುಳುಗಿ ಇಬ್ಬರು ರೈತ ಮಹಿಳೆಯರು ಸಾವು

ಕಾಲುವೆಯಲ್ಲಿ ಮುಳುಗಿ ಇಬ್ಬರು ರೈತ ಮಹಿಳೆಯರು ಸಾವು

ಗದ್ದೆಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುವಾಗ ದುರ್ಘಟನೆ ಸಂಭವಿಸಿದೆ. ಕೂಲಿ ಕೆಲಸ ಮುಗಿಸಿ ಕೈಕಾಲು ತೊಳೆದುಕೊಂಡು ಮನೆಗೆ ಹೋಗಲು ಕಾಲುವೆ ಬಳಿ ಬಂದಿದ್ದರು. ಲಿಂಗಸುಗೂರು ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿ ಮಹಿಳೆಯರ ಶವ ಹೊರತೆಗೆದಿದ್ದಾರೆ. ಸದ್ಯ ಇಬ್ಬರು ಮಹಿಳೆಯರ ಮೃತದೇಹವನ್ನು ಲಿಂಗಸುಗೂರು ತಾಲೂಕಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.

Vaikunta Ekadasi : ವೈಕುಂಠ ಏಕಾದಶಿಗೆ ಮನೆಯಲ್ಲೇ ಬಾಲಾಜಿಯ ದರ್ಶನ, ಯುವ ಉದ್ಯಮಿಯ ವಿಶಿಷ್ಟ ಸೇವೆ!

ವೈಕುಂಠ ಏಕಾದಶಿಗೆ ಮನೆಯಲ್ಲೇ ಬಾಲಾಜಿಯ ದರ್ಶನ, ಯುವ ಉದ್ಯಮಿಯ ವಿಶಿಷ್ಟ ಸೇವೆ!

ಬೆಂಗಳೂರಿನ ಯುವ ಉದ್ಯಮಿ ದೀಪಕ್‌ ಅವರು ತಿರುಪತಿಯ ವೆಂಕಟೇಶ್ವರ ಸ್ವಾಮಿಯ ಭಕ್ತರು. ಕಳೆದ 9 ವರ್ಷಗಳಿಂದ ಪ್ರತಿ ತಿಂಗಳೂ ತಿರುಮಲ ಬೆಟ್ಟವನ್ನು ಹತ್ತಿ ಬಾಲಾಜಿಯ ದರ್ಶನ ಪಡೆಯುತ್ತಾರೆ. ಬೆಂಗಳೂರಿನ ಜಯನಗರದಲ್ಲಿರುವ ಫ್ಲ್ಯಾಟ್‌ನಲ್ಲಿ ವೆಂಕಟೇಶ್ವರ ಸ್ವಾಮಿಯ ಪ್ರತಿಕೃತಿಯ ವಿಶೇಷ ಅಲಂಕಾರವನ್ನು ಮಾಡಿ, ಮಕ್ಕಳಿಗೆ , ಭಕ್ತರಿಗೆ ಆಧ್ಯಾತ್ಮಿಕ, ಸಂಸ್ಕೃತಿಯನ್ನು ಪರಿಚಯಿಸುತ್ತಾರೆ.

Murder Case: ಇನ್‌ಸ್ಟಗ್ರಾಮ್‌ನಲ್ಲಿ ಯುವತಿಗೆ ಮೆಸೇಜ್‌ ಮಾಡಿ ಕಿರುಕುಳ, ಯುವಕನ ಹತ್ಯೆ

ಇನ್‌ಸ್ಟಗ್ರಾಮ್‌ನಲ್ಲಿ ಯುವತಿಗೆ ಮೆಸೇಜ್‌ ಮಾಡಿ ಕಿರುಕುಳ, ಯುವಕನ ಹತ್ಯೆ

ಪರಿಚಯವಿದ್ದ ಯುವತಿಗೆ ಮಂಜುನಾಥ್ ಪದೇಪದೆ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಯುವತಿಗೆ ಈಗಾಗಲೇ ವೇಣು ಎಂಬ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥವಾಗಿದ್ದು, ‘ಎಂಗೇಜ್ಮೆಂಟ್ ಆಗಿದೆ, ಮೆಸೇಜ್ ಮಾಡಬೇಡ’ ಎಂದು ಯುವತಿ ಮಂಜುನಾಥ್‌ಗೆ ತಿಳಿಸಿದ್ದಳು. ಆದರೂ ಮಂಜುನಾಥ್ ಮೆಸೇಜ್ ಮಾಡುತ್ತಲೇ ಇದ್ದ.

ಮೈಸೂರಿಗೆ ವರ್ಷವಿಡೀ ಕಾಡಿದ ವನ್ಯಜೀವಿ ಉಪದ್ರವ!

ಮೈಸೂರಿಗೆ ವರ್ಷವಿಡೀ ಕಾಡಿದ ವನ್ಯಜೀವಿ ಉಪದ್ರವ!

ನಿರೀಕ್ಷೆ ಮೀರಿ ಹೆಚ್ಚಿದ ಆನೆ, ಹುಲಿ ಹಾಗೂ ಚಿರತೆಗಳ ಸಂತತಿ ಯಿಂದ ಕಾಡಂಚಿನ ಗ್ರಾಮಗಳಲ್ಲಿ ನೆಮ್ಮದಿ ದೂರಾಗಿದೆ. ಆಳುವ ಮಂದಿಗೆ ಗ್ರಾಮದ ಜನರ ಗೋಳು ನರಿ ಕೂಗು ಗಿರಿ ಮುಟ್ಟಿತೇ ಎಂಬಂತಾ ಗಿದೆ. ಆದರೂ, ಸ್ವಾಭಿಮಾನಕ್ಕೆ ಕಟ್ಟುಬಿದ್ದು ಇದ್ದಲ್ಲಿಯೇ ಬದುಕು ಕಟ್ಟಿಕೊಳ್ಳುವ ಗ್ರಾಮೀಣ ಜನರ ಬದುಕಿನ ಮೇಲೆ ಕಾಡುಪ್ರಾಣಿಗಳ ಸವಾರಿ ನಡೆದೇ ಇದೆ.

New Year 2026: ಹೊಸ ವರ್ಷದ ಹಿಂದಿನ ದಿನ ನಮ್ಮ ಮೆಟ್ರೋದಲ್ಲಿ 8.93 ಲಕ್ಷ ಪ್ರಯಾಣಿಕರ ಸಂಚಾರ, ₹3.08 ಕೋಟಿ ಆದಾಯ

ಒಂದೇ ದಿನ ನಮ್ಮ ಮೆಟ್ರೋದಲ್ಲಿ 8.93 ಲಕ್ಷ ಜನ ಸಂಚಾರ, ₹3.08 ಕೋಟಿ ಆದಾಯ

2025ರ ಡಿ.31ರಂದು ಬೆಳಿಗ್ಗೆ 5 ಗಂಟೆಯಿಂದ ಮಧ್ಯರಾತ್ರಿ 3:10ರವರೆಗೆ ಮೆಟ್ರೋ ರೈಲುಗಳು (Namma Metro) ಸಂಚರಿಸಿದ್ದು, ಈ ಅವಧಿಯಲ್ಲಿ ಬರೋಬ್ಬರಿ 8,93,903 ಜನರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಒಂದೇ ದಿನದಲ್ಲಿ ನೇರಳೆ, ಹಸಿರು ಹಾಗೂ ಹಳದಿ ಮೂರು ಮಾರ್ಗ ಒಟ್ಟಾಗಿ ಬರೋಬ್ಬರಿ 3,08 ಕೋಟಿ ರೂ. ಆದಾಯ ಬಿಎಂಆರ್‌ಸಿಎಲ್‌ಗೆ ಹರಿದುಬಂದಿದೆ.

ಹೊನ್ನೇಸರದ ಪಿಎಂಶ್ರೀ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 22 ಜನ ಶಿಕ್ಷಕರು !

ಹೊನ್ನೇಸರದ ಪಿಎಂಶ್ರೀ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 22 ಜನ ಶಿಕ್ಷಕರು !

ಹಳ್ಳಿಯ ಈ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬರೋಬ್ಬರಿ 22 ಶಿಕ್ಷಕರು ಕರ್ತವ್ಯ ಮಾಡುತ್ತಿದ್ದಾರೆ. ಆ 22 ಶಿಕ್ಷಕರ ಪೈಕಿ 19 ಜನರು ಮಹಿಳಾ ಶಿಕ್ಷಕರು ಎನ್ನುವುದು ಮತ್ತೊಂದು ವಿಶೇಷ. ಹೀಗೆ 19 ಶಿಕ್ಷಕಿಯರನ್ನು ಮೂರು ಪುರುಷ ಶಿಕ್ಷಕರನ್ನು ಹೊಂದಿರುವ ಅಪರೂಪದ ಶಾಲೆಯೇ ಹೆಗ್ಗೋಡಿನ ಹೊನ್ನೇಸರ ಪಿಎಂಶ್ರೀ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಪಾಠಶಾಲೆ.

ಗ್ರಾಮೀಣ ನಾಟಕಗಳ ಪ್ರಚಾರಕ್ಕೂ ಎಐ ಬಳಕೆ

ಗ್ರಾಮೀಣ ನಾಟಕಗಳ ಪ್ರಚಾರಕ್ಕೂ ಎಐ ಬಳಕೆ

ಬಾದಾಮಿಯ ಬನಶಂಕರಿ ಜಾತ್ರೆಯಲ್ಲಿ ಪ್ರದರ್ಶನ ಕಾಣುತ್ತಿರುವ ಗುಳೇದಗುಡ್ಡದ ಸಂಗಮೇಶ್ವರ ನಾಟ್ಯ ಸಂಘದಿಂದ ಪಕ್ಕದ ಮನಿ ಚಂದ್ರಿ, ನೋಡಾಕ ನೀ ಸುಂದ್ರಿ ನಾಟಕ ಹಾಗೂ ಕೆಬಿಆರ್‌ ಡ್ರಾಮಾ ಕಂಪನಿ ಯ ಗಿಚ್ಚ ಗಿಲಿಗಲಿ ನಾಯಕಿ ಸೇರಿದಂತೆ ವಿವಿಧ ಅನೇಕ ಕಂಪನಿಗಳು ಎಐ ತಂತ್ರಜ್ಞಾನಗಳನ್ನು ಬಳಸಿ ಪ್ರಚಾರ ಕೈಗೊಂಡಿದ್ದು, ಇದಕ್ಕೆ ಲಕ್ಷಗಟ್ಟಲೇ ಜನರು ವೀಕ್ಷಣೆ ಮಾಡಿದ್ದಾರೆ. ಎಐ ಪ್ರಚಾರದ ವಿಡಿಯೊ ವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ದಿನದಿಂದ ಇಲ್ಲಿಯವರೆಗೆ 24 ಲಕ್ಷಕ್ಕಿಂತ ಹೆಚ್ಚಿನ ಜನರು ವಿಡಿಯೊ ವೀಕ್ಷಿಸಿದ್ದಾರೆ.

IPS Transfer: ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್​ ಸರ್ಜರಿ: 68 ಐಪಿಎಸ್‌ ಅಧಿಕಾರಿಗಳಿಗೆ ವರ್ಗ, ಬಡ್ತಿ

ಪೊಲೀಸ್ ಇಲಾಖೆಗೆ ಮೇಜರ್​ ಸರ್ಜರಿ: 68 ಐಪಿಎಸ್‌ ಅಧಿಕಾರಿಗಳಿಗೆ ವರ್ಗ, ಬಡ್ತಿ

ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಾಟೇರಿಯಾ, ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ದೀಪಕ್ ಜೈನ್, ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ. ಏಕ್‍ರೂಪ್ ಕೌರ್, ಬಿಎಂಆರ್‍ಸಿಎಲ್‍ನ ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್ ಜೆ. ಸೇರಿದಂತೆ 68 ಮಂದಿ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ.

Assault Case: ಕುಡಿದ ಮತ್ತಿನಲ್ಲಿ ಗಲಾಟೆ, ನಗರದಲ್ಲಿ ಕ್ಯಾಬ್‌ ಚಾಲಕನ ಮೇಲೆ ಅಮಾನುಷ ಹಲ್ಲೆ

ಕುಡಿದ ಮತ್ತಿನಲ್ಲಿ ಗಲಾಟೆ, ನಗರದಲ್ಲಿ ಕ್ಯಾಬ್‌ ಚಾಲಕನ ಮೇಲೆ ಅಮಾನುಷ ಹಲ್ಲೆ

ಹೊಸ ವರ್ಷ ಆಚರಣೆ ವೇಳೆ ಕುಡಿದ ಮತ್ತಿನಲ್ಲಿ ಓಡಾಡುತ್ತಿದ್ದ ಯುವಕರ ಗುಂಪೊಂದು, ಕಾರ್ಪೋರೇಷನ್ ಸರ್ಕಲ್ ಬಳಿ ನಿಂತಿದ್ದ ಕಾರಿಗೆ ಹಿಂದಿನಿಂದ ಬಂದು ಟಚ್ ಮಾಡಿದೆ. ಈ ವೇಳೆ ಕಾರಿನ ಚಾಲಕ ಕೆಳಗೆ ಇಳಿದು, ಏಕೆ ಕಾರಿಗೆ ಡಿಕ್ಕಿ ಹೊಡೆದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಪ್ರಶ್ನೆಗೆ ಉತ್ತರ ನೀಡುವ ಬದಲು ಯುವಕರ ಗುಂಪು ಚಾಲಕನ ಮೇಲೆ ಹಿಂದಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿ ಹಲ್ಲೆ ನಡೆಸಿದೆ.

Nitte Vinaya Hegde: ನಿಟ್ಟೆ ಶಿಕ್ಷಣ ಸಂಸ್ಥೆಗಳ ಸ್ಥಾಪಕ, ನ್ಯಾ. ಸಂತೋಷ್ ಹೆಗ್ಡೆ ಸೋದರ ವಿನಯ್ ಹೆಗ್ಡೆ ನಿಧನ

ನಿಟ್ಟೆ ಶಿಕ್ಷಣ ಸಂಸ್ಥೆ ಸ್ಥಾಪಕ, ಸಂತೋಷ್ ಹೆಗ್ಡೆ ಸೋದರ ವಿನಯ್ ಹೆಗ್ಡೆ ನಿಧನ

ಇಂದು ಮುಂಜಾನೆ ನಿಧನರಾದ ನಿಟ್ಟೆ ವಿನಯ ಹೆಗ್ಡೆ ಅವರು ಕರಾವಳಿ ಕರ್ನಾಟಕದ ಶೈಕ್ಷಣಿಕ ಮತ್ತು ಕೈಗಾರಿಕಾ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದೂರದೃಷ್ಟಿಯ ನಾಯಕರಾಗಿದ್ದರು. ರಾಜ್ಯದ ಹಲವು ಸಮಿತಿಗಳಲ್ಲಿ ಮತ್ತು ಕೈಗಾರಿಕಾ ಒಕ್ಕೂಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಲವು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.

ಭತ್ತದ ನಾಡು ಗಂಗಾವತಿ ಜೋಡು ರಥೋತ್ಸವಕ್ಕೆ ಚಾಲನೆ

ಭತ್ತದ ನಾಡು ಗಂಗಾವತಿ ಜೋಡು ರಥೋತ್ಸವಕ್ಕೆ ಚಾಲನೆ

ಶ್ರೀ ಚನ್ನಬಸವ ಶಿವಯೋಗಿಗಳ 80ನೇ ಮಹಾ ರಥೋತ್ಸವಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಬರುವ ಭಕ್ತರಿಗೆ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆ ಶ್ರೀಮಠದ ಪಕ್ಕದಲ್ಲಿನ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ದಾಸೋಹ ಮಂಟಪ ಸಿದ್ಧಗೊಂಡಿದೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ.

LPG price hike: ಹೊಸ ವರ್ಷದ ಮೊದಲ ದಿನವೇ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆ!

ಹೊಸ ವರ್ಷದ ಮೊದಲ ದಿನವೇ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ!

ಜನವರಿ 2025 ರಿಂದ ಡಿಸೆಂಬರ್ 2025 ರವರೆಗೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಗಮನಾರ್ಹ ಬದಲಾವಣೆಗಳು ಆಗಿದ್ದವು. ಬೆಂಗಳೂರು, ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಂತಹ ಮಹಾನಗರಗಳಲ್ಲಿ ಪ್ರತಿ ಸಿಲಿಂಡರ್‌ಗೆ ಸರಾಸರಿ ₹238 ರಷ್ಟು ಬೆಲೆಗಳು ಕುಸಿದಿದ್ದವು. ಇದೀಗ ಮತ್ತೆ ಏರಿಕೆ ಮಾಡಲಾಗಿದೆ.

Loading...