ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

ಹಂಪಿಯಲ್ಲಿ ಗುಡ್ಡ ಹತ್ತಲು ಹೋಗಿ ಬಿದ್ದ ಫ್ರಾನ್ಸ್‌ ಪ್ರವಾಸಿಗ; 2 ದಿನಗಳ ಬಳಿಕ ರಕ್ಷಣೆ

ಹಂಪಿಯಲ್ಲಿ ಗುಡ್ಡ ಹತ್ತಲು ಹೋಗಿ ಬಿದ್ದಿದ್ದ ಫ್ರಾನ್ಸ್‌ ಪ್ರವಾಸಿಗನ ರಕ್ಷಣೆ

French tourist rescued in Hampi: ಹಂಪಿಯಲ್ಲಿ ಪ್ರವಾಸಿಗ ಬಿದ್ದ ಸ್ಥಳ ನಿರ್ಜನ ಪ್ರದೇಶವಾಗಿತ್ತು. ಹೀಗಾಗಿ ಅವರು ಎರಡು ದಿನ ಅಲ್ಲೇ ಇದ್ದರು. ಬಳಿಕ ಹೇಗೋ ತೆವಳಿಕೊಂಡು ಸಮೀಪದ ಬಾಳೆ ತೋಟಕ್ಕೆ ಬಂದಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ಪಡೆದು, ರಕ್ಷಣೆ ಮಾಡಿದ್ದಾರೆ.

ಮಾನ್ಯತಾ ಬಿಸಿನೆಸ್ ಪಾರ್ಕ್‌ನಲ್ಲಿ INR 530 ಕೋಟಿಗೆ 376,000 ಚದರ ಅಡಿಗಳ ಸ್ವಾಧೀನ

INR 530 ಕೋಟಿಗೆ 376,000 ಚದರ ಅಡಿಗಳ ಸ್ವಾಧೀನ

ಭಾರತದ ಪ್ರಮುಖ ಪರ್ಯಾಯ ಆಸ್ತಿ ನಿರ್ವಹಣಾ ಸಂಸ್ಥೆಗಳಲ್ಲೊಂದಾದ EAAA Alternatives, ತನ್ನ ವಾಣಿಜ್ಯ ರಿಯಲ್ ಎಸ್ಟೇಟ್ ನಿಧಿ ರೆಂಟಲ್ ಯೀಲ್ಡ್ ಪ್ಲಸ್ (RYP) ಮೂಲಕ ಬೆಂಗಳೂರಿನ ಎಂಬಸಿ ಮಣ್ಯತಾ ಬಿಸಿನೆಸ್ ಪಾರ್ಕ್ನ ಭಾಗವಾಗಿರುವ ಗ್ರೀನ್‌ ಹಾರ್ಟ್ ಟೆಕ್ ಪಾರ್ಕ್ನಲ್ಲಿ ಸುಮಾರು 3.76 ಲಕ್ಷ ಚದರ ಅಡಿ ವಿಸ್ತೀರ್ಣದ ಆಸ್ತಿಯನ್ನು ₹530 ಕೋಟಿ ಮೊತ್ತಕ್ಕೆ ಖರೀದಿಸಿದೆ

Karnataka Politics: ನಾನು ಕಾಂಗ್ರೆಸ್‌ನ ಕಾರ್ಯಕರ್ತ, ಅದೇ ನನಗೆ ಶಾಶ್ವತ: ಡಿಕೆ ಶಿವಕುಮಾರ್‌ ಹೇಳಿಕೆಯ ಹಿಂದೇನಿದೆ?

ನಾನು ಕಾಂಗ್ರೆಸ್‌ ಕಾರ್ಯಕರ್ತ, ಅದೇ ಶಾಶ್ವತ: ಡಿಕೆಶಿ ಹೇಳಿಕೆ ಹಿಂದೇನಿದೆ?

ಸುಮಾರು 45 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ, ಪೋಸ್ಟರ್ ಕೂಡಾ ಅಂಟಿಸಿದ್ದೇನೆ, ಕಚೇರಿಯಲ್ಲಿ ಕಸವನ್ನೂ ಗುಡಿಸಿದ್ದೇನೆ. ನಾನು ಇಂದು ಕೆಪಿಸಿಸಿ ಅಧ್ಯಕ್ಷನಾಗುತ್ತೇನೆ ಎಂದರೆ, ಪಕ್ಷಕ್ಕಾಗಿ ಪಟ್ಟ ಪರಿಶ್ರಮ. ಅಧಿಕಾರ, ಹುದ್ದೆಗಿಂತ ಪಕ್ಷದ ಕಾರ್ಯಕರ್ತನಾಗಿರಲು ನಾನು ಬಯಸುತ್ತೇನೆ, ನನಗೆ ಅದೇ ಶಾಶ್ವತ. ನನ್ನ ಹಾಗೇ, ಪ್ರತೀ ಕಾರ್ಯಕರ್ತರು ಪಕ್ಷಕ್ಕಾಗಿ ಬೆವರು ಸುರಿಸುತ್ತಿದ್ದಾರೆ ಎಂದಿದ್ದಾರೆ ಡಿಕೆ ಶಿವಕುಮಾರ್.‌

Savadatti News: ಪಟ್ಟಣದ ಸ್ವಚ್ಛತೆಗೆ, ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

123 ಕೋಟಿಯ ಯೋಜನೆಯಲ್ಲಿ ಮೊದಲ ಹಂತವಾಗಿ 41 ಕೋಟಿ ಮಂಜೂರಾಗಿದೆ. ಇದರಲ್ಲಿ ಮಳೆ ನೀರು ಪ್ರತ್ಯೇಕವಾಗಿ ಸಾರಾಗವಾಗಿ ಸಾಗಲು ಕ್ರಮವಿರಿಸಲಾಗಿದೆ. 5 ಕೋಟಿ ವೆಚ್ಚದ ಲಂಡೇನ ಹಳ್ಳ ಹೂಳೆತ್ತುವ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಕೂಡ ಸೇರಿದೆ. ಈ ಬೃಹತ್ ಕಾಮಗಾರಿಯು ಐದು ವರ್ಷಗಳ ಕಾಲ ಗುತ್ತಿಗೆದಾರರ ನಿರ್ವಹಣೆಯಲ್ಲಿರಲಿದೆ.

ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಬುಲೆಟ್ ಸವಾರನಿಗೆ ಡಿಕ್ಕಿ ಹೊಡೆದು ಬೈಕ್‌ ಎಳೆದೊಯ್ದ ಚಾಲಕ

ಕುಡಿದ ಮತ್ತಿನಲ್ಲಿದ್ದ ಕಾರು ಚಾಲಕನಿಂದ ಬುಲೆಟ್ ಸವಾರನಿಗೆ ಡಿಕ್ಕಿ

Viral Video: ಬೆಂಗಳೂರಿನ ಸುಮ್ಮನಹಳ್ಳಿ ಫ್ಲೈಓವರ್ ಮೇಲೆ ಕುಡಿತದ ಅಮಲಿನಲ್ಲಿದ್ದ ಎಸ್‌ಯುವಿ ಚಾಲಕನೊಬ್ಬ ಬುಲೆಟ್ ಬೈಕ್‌ಗೆ ಡಿಕ್ಕಿ ಹೊಡೆದು ಬೈಕನ್ನು ಸುಮಾರು ದೂರದ ವರೆಗೆ ಎಳೆದೊಯ್ದ ಭೀಕರ ಘಟನೆಯೊಂದು ನಡೆದಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

Bengaluru Power Cut: ಡಿಸೆಂಬರ್‌ 27, 28 ಮತ್ತು 29ರಂದು ಬೆಂಗಳೂರಿನ ಹಲವಡೆ ವಿದ್ಯುತ್‌ ವ್ಯತ್ಯಯ

ಡಿ.27, 28 ಮತ್ತು 29ರಂದು ಬೆಂಗಳೂರಿನ ಹಲವಡೆ ವಿದ್ಯುತ್‌ ವ್ಯತ್ಯಯ

BESCOM News: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 220/66/11 ಕೆ.ವಿ ಹೆಬ್ಬಾಳ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಡಿ.27ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

Raju Adakalli's Book Release: ಡಿ.27ರಂದು ರಾಜು ಅಡಕಳ್ಳಿ ಅವರ 'ಹಾಸ್ಯ ವಿಲಾಸ' ಕೃತಿ ಲೋಕಾರ್ಪಣೆ

ರಾಜು ಅಡಕಳ್ಳಿ ಅವರ 'ಹಾಸ್ಯ ವಿಲಾಸ' ಕೃತಿ ಲೋಕಾರ್ಪಣೆ ನಾಳೆ

ಲೇಖಕ ರಾಜು ಅಡಕಳ್ಳಿ ಅವರ ನೂತನ ಕೃತಿ ʼಹಾಸ್ಯ ವಿಲಾಸʼ ಡಿ.27ರಂದು ಶನಿವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ರಾಜು ಅಡಕಳ್ಳಿ ಅವರ 11ನೇ ಕೃತಿಯಾದ ಈ ʼಹಾಸ್ಯ ವಿಲಾಸʼ ದಲ್ಲಿ, ಮನಸ್ಸಿಗೆ ಮುದ ನೀಡುವ, ನವಿರಾದ ಹಾಸ್ಯ ಭರಿತ ಲೇಖನಗಳ ಸಂಗ್ರಹವಿದೆ.

Mantralaya Kannada Row: ಮಂತ್ರಾಲಯದಲ್ಲಿ ಕನ್ನಡ ಭಾಷೆಯ ಬರಹಕ್ಕೆ ತೆಲುಗರ ವಿರೋಧ

ಮಂತ್ರಾಲಯದಲ್ಲಿ ಕನ್ನಡ ಭಾಷೆಯ ಬರಹಕ್ಕೆ ತೆಲುಗರ ವಿರೋಧ

ಮಠದ ಮುಂಭಾಗದಲ್ಲಿ ''ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ' ಎಂಬ ರಾಯರ ಸ್ತೋತ್ರದ ಶ್ಲೋಕವನ್ನು ಕನ್ನಡದಲ್ಲಿ ಬರೆಯಲಾಗಿದೆ. ಈ ಕನ್ನಡ ಭಾಷೆಯ ಈ ಬರಹ ಇದೀಗ ಭಾಷಾ ಸಂಘರ್ಷಕ್ಕೆ ಕಾರಣವಾಗಿದೆ. ಮಠದಲ್ಲಿ ಕನ್ನಡ ಭಾಷೆ ಹಾಸುಹೊಕ್ಕಾಗಿರುವುದಕ್ಕೆ, ಮಂತ್ರಾಲಯದಲ್ಲಿ ಕನ್ನಡ ಬಳಕೆ ವಿರೋಧಿಸಿ ಕೆಲ ತೆಲುಗು ಭಾಷಿಗರು ಅಸಮಾಧಾನ ಹೊರಹಾಕಿದ್ದಾರೆ.

ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ ಪ್ರಕರಣದ ಸಾವಿನ ಸಂಖ್ಯೆ 2ಕ್ಕೇರಿಕೆ; ಗಾಯಾಳು ಮಂಜುಳಾ ಸಾವು

ಮೈಸೂರು ಹೀಲಿಯಂ ಸ್ಫೋಟ ಪ್ರಕರಣ; ಗಾಯಾಳು ಮಂಜುಳಾ ಸಾವು

ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್​​ ಸಿಲಿಂಡರ್​ ಸ್ಫೋಟವಾಗಿ ಬಲೂನ್‌ ಮಾರುತ್ತಿದ್ದ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ವ್ಯಾಪಾರಿ ಸಲೀಂ ಖಮರುದ್ದೀನ್ (40) ಎಂಬಾತ ಮೃತಪಟ್ಟಿದ್ದ. ಇದೀಗ ಗಾಯಾಳು ಮಂಜುಳಾ ಎಂಬುವವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಸೂರಜ್‌ ನಪುಂಸಕ, ಸಂಸಾರದ ಬಗ್ಗೆ ಆತನಿಗೆ ಆಸಕ್ತಿಯೇ ಇರಲಿಲ್ಲ: ಗಾನವಿ ಕುಟುಂಬಸ್ಥರ ಆರೋಪ

ಸೂರಜ್‌ ನಪುಂಸಕ, ಗಂಡಸೇ ಅಲ್ಲ: ಗಾನವಿ ಕುಟುಂಬಸ್ಥರ ಆರೋಪ

Ganavi Suicide Case: ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ 26 ವರ್ಷದ ನವವಿವಾಹಿತೆ ಗಾನವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಕ್ಟೋಬರ್ 29ರಂದು ಸೂರಜ್‌ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Street Dogs: ಬೀದಿ ನಾಯಿ ದತ್ತು ತಗೊಳ್ತೀರಾ? ಬೆಂಗಳೂರಿನಲ್ಲಿದೆ ಅವಕಾಶ!

ಬೀದಿ ನಾಯಿ ದತ್ತು ತಗೊಳ್ತೀರಾ? ಬೆಂಗಳೂರಿನಲ್ಲಿದೆ ಅವಕಾಶ!

ಬೀದಿ ನಾಯಿಗಳ ದತ್ತಕವು ಪ್ರಾಣಿಕಲ್ಯಾಣವನ್ನು ಉತ್ತೇಜಿಸುವುದರ ಜೊತೆಗೆ ನಗರದಲ್ಲಿ ಸಹಬಾಳ್ವೆ ಮತ್ತು ಸಾರ್ವಜನಿಕ ಆರೋಗ್ಯದ ರಕ್ಷಣೆಗೆ ಸಹಕಾರಿಯಾಗುತ್ತದೆ. ಆಸಕ್ತ ವ್ಯಕ್ತಿಗಳು ಮತ್ತು ಸಂಸ್ಥೆಗಳು ಹೆಚ್ಚಿನ ಮಾಹಿತಿಗಾಗಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ, ಬೆಂಗಳೂರು ಕೇಂದ್ರ ನಗರ ನಿಗಮವನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

New Year celebrations: ಡಿ.31ರಂದು ಬೆಂಗಳೂರಿನ ಉದ್ಯಾನ, ಕೆರೆಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌; ಪ್ರವೇಶಕ್ಕೆ ಜಿಬಿಎ ನಿರ್ಬಂಧ

ಡಿ.31ರಂದು ಬೆಂಗಳೂರಿನ ಉದ್ಯಾನ, ಕೆರೆಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

Bengaluru New Year 2026 rules: ಡಿ.31ರಂದು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಹತ್ವದ ನಿರ್ಧಾರ ಕೈಗೊಂಡಿದ್ದು, ಉದ್ಯಾನವನಗಳು ಮತ್ತು ಕೆರೆಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲು ತೀರ್ಮಾನಿಸಿದೆ.

Belagavi News: ಕಾಲುವೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ನೀರುಪಾಲು

ಕಾಲುವೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ನೀರುಪಾಲು

children Drowns in canal: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರು ಬಳಿ ಘಟನೆ ನಡೆದಿದೆ. ಸದ್ಯ ಇಬ್ಬರು ಬಾಲಕರ ಶವಗಳನ್ನು ಸ್ಥಳೀಯರು ಹಾಗೂ ಪೊಲೀಸರು ಹೊರಗಡೆ ತೆಗೆದಿದ್ದು, ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Murder Case: ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ಪ್ರಿಯಕರನಿಂದ ಸ್ಟಾಫ್‌ ನರ್ಸ್‌ ಕೊಲೆ

ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ಪ್ರಿಯಕರನಿಂದ ಸ್ಟಾಫ್‌ ನರ್ಸ್‌ ಕೊಲೆ

ಸುಧಾಕರ್‌ಗೆ ಇತ್ತೀಚೆಗೆ ಕುಟುಂಬಸ್ಥರು ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಸಿದ್ದರು. ಈ ವಿಷಯ ತಿಳಿದ ಮಮತಾ, ಕೋಪಗೊಂಡು ತನ್ನನ್ನೇ ಮದುವೆಯಾಗಬೇಕು ಎಂದು ಒತ್ತಾಯಿಸಿದ್ದರು. ಅಷ್ಟೇ ಅಲ್ಲದೇ ತನ್ನನ್ನು ಬಿಟ್ಟು ಬೇರೆ ಮದುವೆಯಾದರೆ ತಾನು ಆತ್ಮಹತ್ಯೆ ಮಾಡಿಕೊಂಡು ಸುಧಾಕರ್ ಹಾಗೂ ಅವರ ಕುಟುಂಬವನ್ನು ಸಂಕಷ್ಟಕ್ಕೆ ಒಳಪಡಿಸುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

Road Accident: ಲಾರಿ ಡಿಕ್ಕಿಯಾಗಿ ನಾಲ್ವರು ಯುವಕರ ಸಾವು, ಸಿಎಂರಿಂದ 5 ಲಕ್ಷ ರೂ. ಪರಿಹಾರ ಘೋಷಣೆ

ಲಾರಿ ಡಿಕ್ಕಿಯಾಗಿ ನಾಲ್ವರು ಯುವಕರ ಸಾವು; ಸಿಎಂ 5 ಲಕ್ಷ ರೂ. ಪರಿಹಾರ ಘೋಷಣೆ

ಅಪಘಾತದಲ್ಲಿ ಅಜ್ಜವಾರ ಗ್ರಾಮದ ಅಣ್ಣ ತಮ್ಮಂದಿರಾದ ನರಸಿಂಹಮೂರ್ತಿ, ನಂದೀಶ್, ಅರುಣ್, ಮನೋಜ್ ಎಂಬವರು ಮೃತಪಟ್ಟಿದ್ದಾರೆ. ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಈ ನಾಲ್ವರು ಚಿಕ್ಕಬಳ್ಳಾಪುರ ನಗರದ ಚರ್ಚ್‌ಗಳಿಗೆ ಭೇಟಿ ನೀಡಿ ಮರಳಿ ಸ್ವಗ್ರಾಮದತ್ತ ಬರುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಘಟನೆ ಬಳಿಕ ಟಿಪ್ಪರ್ ಚಾಲಕ ಪರಾರಿಯಾಗಿದ್ದು, ಸದ್ಯ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಟಿಪ್ಪರ್ ವಶಕ್ಕೆ ಪಡೆದು, ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Mysuru Blast Case: ಮೈಸೂರು ಅರಮನೆ ಬಳಿ ಸ್ಫೋಟ ಪ್ರಕರಣಕ್ಕೆ ಎನ್​ಐಎ ಎಂಟ್ರಿ, ಅನುಮಾನ ಹೆಚ್ಚಳ

ಮೈಸೂರು ಅರಮನೆ ಬಳಿ ಸ್ಫೋಟ ಪ್ರಕರಣಕ್ಕೆ ಎನ್​ಐಎ ಎಂಟ್ರಿ, ಅನುಮಾನ ಹೆಚ್ಚಳ

ಮೈಸೂರು ಅರಮನೆ ಹೀಲಿಯಂ ಬ್ಲಾಸ್ಟ್ (Mysuru Blast Case) ಪ್ರಕರಣವನ್ನ ಎನ್​​ಐಎಗೆ ವಹಿಸಲು ಚಿಂತನೆ ನಡೆಸಲಾಗಿದೆ. ಘಟನೆಯಲ್ಲಿ ಬಲೂನ್ ವ್ಯಾಪಾರಿ ಸಲೀಂ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ವಿಶ್ವವಿಖ್ಯಾತ ಅರಮನೆ ಎದುರೇ ಸಿಲಿಂಡರ್​ ಬ್ಲಾಸ್ಟ್ ಆಗಲು ಕಾರಣ ಏನು ಎಂಬುದರ ಬಗ್ಗೆ ತನಿಖೆ ಕೇಂದ್ರೀಕರಿಸಿದೆ. ಹೊಸ ವರ್ಷಾಚರಣೆ ಸಮೀಪವಿರುವಾಗ ಸ್ಪೋಟ ಸಂಭವಿಸಿದ್ದು ಆತಂಕಕ್ಕೆ ಕಾರಣವಾಗಿದೆ.

Road Accident: ಬೆಂಗಳೂರಿನಲ್ಲಿ ಭೀಕರ ಅಪಘಾತ, ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು

ಬೆಂಗಳೂರಿನಲ್ಲಿ ಭೀಕರ ಅಪಘಾತ, ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು

ದಾಸರಹಳ್ಳಿಯಲ್ಲಿ ಗೌರಿಬಿದನೂರು ಮೂಲದ ಕುಟುಂಬ ವಾಸವಿತ್ತು. ಮೃತ ಹರೀಶ್ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಜಮೀನು ನೋಡಿಕೊಂಡು ವಾಪಸ್ ಆಗುವಾಗ ಈ ಒಂದು ಅಪಘಾತ ಸಂಭವಿಸಿದೆ. ಕಾರಿನಲ್ಲಿ ಇದ್ದ ಗೌರಮ್ಮ, ಮೈತ್ರಿ, ಸಿರಿ ಹಾಗೂ ವಂದನಾಗೆ ಗಂಭೀರವಾದ ಗಾಯಗಳಾಗಿದ್ದು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಚಿತ್ರದುರ್ಗ ದುರಂತ ; ಗಂಭೀರವಾಗಿ ಗಾಯಗೊಂಡಿದ್ದ ಬಸ್‌ ಚಾಲಕ ರಫೀಕ್‌ ಸಾವು

ಗಂಭೀರವಾಗಿ ಗಾಯಗೊಂಡಿದ್ದ ಬಸ್‌ ಚಾಲಕ ರಫೀಕ್‌ ಸಾವು

Chitradurga Bus Accident: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಲಾರಿ ಡಿಕ್ಕಿಯಾಗಿ ಹೊತ್ತಿ ಉರಿದ ಸೀ ಬರ್ಡ್‌ ಬಸ್‌ ಹೊತ್ತಿ ಉರಿದ ಘಟನೆಯಲ್ಲಿ ಖಾಸಗಿ ಬಸ್ ಚಾಲಕ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾರೆ. ಈ ಮೂಲಕ ಮೃತಪಟ್ಟವರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ.

ಲಂಡನ್-ಬೆಂಗಳೂರನ್ನು ಸಂಪರ್ಕಿಸುವ ಹೈಬ್ರಿಡ್ ಆವೃತ್ತಿಯೊಂದಿಗೆ ಮರಳಿದ ಲಂಡನ್ ಅಂತರರಾಷ್ಟ್ರೀಯ ಕಲಾ ಉತ್ಸವ 2025

ಹೈಬ್ರಿಡ್ ಆವೃತ್ತಿಯೊಂದಿಗೆ ಮರಳಿದ ಲಂಡನ್ ಅಂತರರಾಷ್ಟ್ರೀಯ ಕಲಾ ಉತ್ಸವ 2025

ಲಂಡನ್‌ನಾದ್ಯಂತ 11 ಲೈವ್ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಲಂಡನ್ ಇಂಟರ್ನ್ಯಾ ಷನಲ್ ಆರ್ಟ್ಸ್ ಫೆಸ್ಟಿವಲ್ (LIAF) ನ 14 ನೇ ಆವೃತ್ತಿಯು 2025ರಲ್ಲಿ ಹೈಬ್ರಿಡ್ ಉತ್ಸವವಾಗಿ ಮರಳುತ್ತದೆ ಮತ್ತು ಭಾರತದ ಬೆಂಗಳೂರಿನಿಂದ UK ಯ ಪ್ರೇಕ್ಷಕರಿಗೆ ನಾಲ್ಕು ವಿಶೇಷ ಸಂಗೀತ ಕಚೇರಿಗಳನ್ನು ಸ್ಟ್ರೀಮ್ ಮಾಡುತ್ತದೆ.

ಹೊಸ ವರ್ಷಕ್ಕೆ ನಂದಿ ಬೆಟ್ಟಕ್ಕೆ ಹೋಗೋ ಪ್ಲಾನ್‌ ಇದೆಯಾ? ಈ ಸುದ್ದಿಯನ್ನೊಮ್ಮೆ ಓದಿ

ಹೊಸ ವರ್ಷಕ್ಕೆ ನಂದಿ ಬೆಟ್ಟ ಪ್ರವೇಶ ನಿಷೇಧ

Nandi Hills: ಹೊಸ ವರ್ಷದ ಸಂಭ್ರಮದಿಂದ ಅನಾಹುತ ಆಗುವ ಸಾಧ್ಯತೆ ಹಿನ್ನೆಲೆ ಹೊಸ ವರ್ಷಕ್ಕೆ ನಂದಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಈ ಬಗ್ಗೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಈ ಕುರಿತು ಮಾತನಾಡಿದ್ದು, ಡಿಸೆಂಬರ್ 31-12-25 ಮಧ್ಯಾಹ್ನದಿಂದ 01- 01- 26 ಮಧ್ಯಾಹ್ನದವರೆಗೂ ನಂದಿ ಬೆಟ್ಟಕ್ಕೆ ಪ್ರವೇಶ ನಿಷೇಧೀಸಲಾಗಿದೆ.

ಶಾಸಕ ಸುಬ್ಬಾರೆಡ್ಡಿ ನೂರಾರು ಎಕರೆಯ ಭೂ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡಿ ಬೀದಿಗಿಳಿದು ಹೋರಾಟ: ಸಿ.ಮುನಿರಾಜು

ಬಾಗೇಪಲ್ಲಿಯಲ್ಲಿ ಬಿಜೆಪಿ ಬೃಹತ್ ಹೋರಾಟ ನಡೆಸಲಿದೆ

ರಾಜ್ಯ ಕಾಂಗ್ರೆಸ್ ಸರ್ಕಾರದ ಮಂತ್ರಿಗಳ ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ದಾಖಲೆ ಬಿಡುಗಡೆ ಮಾಡಿ ಕಾಂಗ್ರೆಸ್ಸಿಗರ ಭ್ರಷ್ಟಾಚಾರದ ವಿರುದ್ದ ಬಿಜೆಪಿ ಹೋರಾಟ ನಡೆಸಿದೆ, ಇದೀಗ ಕಂದಾಯ ಸಚಿವರು ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ತೋಟ ಮಾಡಿ ಕೊಂಡಿರುವ ಬಗ್ಗೆ ದಾಖಲೆ ಬಿಡುಗಡೆಗೊಳಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗಿದೆ.

ರಕ್ತ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದ ಕೀನ್ಯಾದ ಗರ್ಭಿಣಿಯ ಜೀವ ಉಳಿಸಿ ಮಹತ್ವದ ಸಾಧನೆ

ರಕ್ತ ಕ್ಯಾನ್ಸರ್‌ನೊಂದಿಗೆ ಹೋರಾಟ: ಗರ್ಭಿಣಿಯ ಜೀವ ಉಳಿಸಿ ಮಹತ್ವದ ಸಾಧನೆ

ಅಪರೂಪದ ಮತ್ತು ಆಕ್ರಮಣಕಾರಿ ರಕ್ತ ಕ್ಯಾನ್ಸರ್ ಆಗಿರುವ ಅಕ್ಯೂಟ್ ಪ್ರೊಮೈಲೋಸೈಟಿಕ್ ಲ್ಯೂಕೇಮಿಯಾ (ಎಪಿಎಲ್) ಸಮಸ್ಯೆ ಬಾಧಿಸುತ್ತಿತ್ತು. ಇದು ಎಷ್ಟು ಅಪಾಯಕಾರಿ ಎಂದರೆ ಅಕ್ಯೂಟ್ ಮೈಲಾಯ್ಡ್ ಲ್ಯೂಕೇಮಿಯಾ ಪ್ರಕರಣಗಳಲ್ಲಿ ಹತ್ತರಲ್ಲಿ ಒಂದು ಭಾಗದಷ್ಟು ಮಾತ್ರ ಈ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ.

Gauribidanur News: ಬಡಾವಣೆಗೆ ಅಟಲ್ ಜೀ ಹೆಸರು ನಾಮಕರಣ

ಬಡಾವಣೆಗೆ ಅಟಲ್ ಜೀ ಹೆಸರು ನಾಮಕರಣ

ಸುಮಾರು ಆರು ದಶಕಗಳ ಕಾಲ ಸುಧೀರ್ಘವಾದ ರಾಜಕಾರಣ ನಡೆಸಿದ ಅವರು ತಮ್ಮ ಸಾರ್ವ ಜನಿಕ ಜೀವನದಲ್ಲಿ ಎಂದೂ ಕಪ್ಪುಚುಕ್ಕೆ ಬರದಂತೆ ಬದುಕಿದವರು, ಎಂತಹ ಕಠಿಣ ಪರಿಸ್ಥಿತಿಯಲ್ಲೂ ತಾವು ನಂಬಿದ ತತ್ವ ಸಿದ್ದಾಂತಗಳಿಗೆ ರಾಜೀಯಾಗದೆ ಎಲ್ಲವನ್ನೂ ಮೆಟ್ಟಿ ನಿಂತು ಕೊನೆಗೆ ಈ ದೇಶದ ಪ್ರಧಾನಿಯಾಗಿ ನಮ್ಮೆಲ್ಲರಿಗೂ ಆದರ್ಶ ಪ್ರಾಯರಾದವರು.

Chikkaballapur News: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶ್ರೀ ಶಶಿಧರ್ ಕೋಸಂಬೆ ಅವರಿಂದ ಸ್ಕ್ಯಾನಿಂಗ್ ಸೆಂಟರ್‌ಗಳ ಪರಿಶೀಲನೆ

ಶ್ರೀ. ಶಶಿಧರ್ ಕೋಸಂಬೆ ಅವರಿಂದ ಸ್ಕ್ಯಾನಿಂಗ್ ಸೆಂಟರ್‌ಗಳ ಪರಿಶೀಲನೆ

ಚಿಕ್ಕಬಳ್ಳಾಪುರ ತಾಲ್ಲೂಕಿನ ಗಿಡ್ನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಮಧ್ಯಾ ಹ್ನದ ಬಿಸಿ ಊಟ ತಯಾರಿಸಲು ಬಳಸುವಂತಹ ಆಹಾರ ಸಾಮಗ್ರಿಗಳನ್ನು ಪರಿಶೀಲಿಸಿ, ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟವನ್ನು ನಿಯಮಿತವಾಗಿ ಸರ್ಕಾರದ ಮಾರ್ಗಸೂಚಿ ಅನ್ವಯ ಸುಚಿ ಮತ್ತು ರುಚಿಯಾಗಿ ನೀಡಲು ಮತ್ತು ಸುಚಿತ್ವಕ್ಕೆ ಹೆಚ್ಚಿನ ಆಧ್ಯತೆ ನೀಡಲು ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚಿಸಿದರು

Loading...