ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Bengaluru Central Jail: ಬೆಂಗಳೂರು ಸೆಂಟ್ರಲ್‌ ಜೈಲಿನಿಂದ ಪತ್ನಿಗೆ ವಿಡಿಯೊ ಕಾಲ್‌ ಮಾಡಿದ ಕೈದಿ!; Video ವೈರಲ್‌

ಬೆಂಗಳೂರು ಸೆಂಟ್ರಲ್‌ ಜೈಲಿನಿಂದ ಪತ್ನಿಗೆ ವಿಡಿಯೊ ಕಾಲ್‌ ಮಾಡಿದ ಕೈದಿ!

ವಿಚಾರಣಾಧೀನ ಕೈದಿಯಾಗಿದ್ದ ಅಕ್ಬರ್ ಎಂಬಾತ ಬೆಂಗಳೂರಿನ ಸೆಂಟ್ರಲ್‌ ಜೈಲಿನಲ್ಲೇ ಕುಳಿತುಕೊಂಡೇ ಪತ್ನಿಗೆ ವಿಡಿಯೊ ಕಾಲ್ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿ ಸದ್ಯ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಆದರೆ ಈಗ ಈತನ ವಿಡಿಯೊ ವೈರಲ್ ಆಗುತ್ತಿದೆ. ಹೀಗಾಗಿ ಜೈಲಿನ ಭದ್ರತಾ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗಿವೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಕೆಎಸ್​​ಆರ್​​ಟಿಸಿ ಬಸ್ ಪಲ್ಟಿ; 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಮಲೆ ಮಹದೇಶ್ವರ ಬೆಟ್ಟದಲ್ಲಿ ಬಸ್ ಪಲ್ಟಿ; 30 ಪ್ರಯಾಣಿಕರಿಗೆ ಗಾಯ

Male mahadeshwara Hill Bus accident: ಮಲೆ ಮಹದೇಶ್ವರ ಬೆಟ್ಟದಿಂದ ಸಾರಿಗೆ ಬಸ್ ಕೊಳ್ಳೇಗಾಲಕ್ಕೆ ಬರುತ್ತಿತ್ತು. ತಾಳಬೆಟ್ಟದ ಪೊನ್ನಾಚಿ ತಿರುವಿನ ಬಳಿ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಈ ವೇಳೆ 30ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Gold Price Today On 1st May 2026: ಮಾಸಾರಂಭದಲ್ಲೇ ಗ್ರಾಹಕರಿಗೆ ಸಿಕ್ತು ಗುಡ್‌ನ್ಯೂಸ್‌; ಚಿನ್ನದ ದರದಲ್ಲಿ ಭಾರಿ ಇಳಿಕೆ

ಚಿನ್ನದ ದರದಲ್ಲಿ ಭಾರಿ ಇಳಿಕೆ

Gold Silver Rate Today: ಗುರುವಾರ ಏರಿಕೆಯಾಗಿದ್ದ ಚಿನ್ನದ ದರ ಇಂದು (ಮೇ 1) ಇಳಿಕೆಯಾಗಿದೆ. ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 35 ರುಪಾಯಿ ಕಡಿಮೆಯಾಗಿದ್ದು,ಆ ಮೂಲಕ 13,965 ರುಪಾಯಿಗೆ ಇಳಿದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 38 ರುಪಾಯಿ ಅಗ್ಗವಾಗಿದ್ದು, 15,235 ರುಪಾಯಿಗೆ ಬಂದು ತಲುಪಿದೆ. ಇನ್ನು ಬೆಳ್ಳಿ ಗ್ರಾಂಗೆ 5 ರುಪಾಯಿ ಏರಿಕೆಯಾಗಿದೆ.

ಲೈಂಗಿಕ ದೌರ್ಜನ್ಯ, ಬ್ಲ್ಯಾಕ್‌ಮೇಲ್‌; 20ಕ್ಕೂ ಹೆಚ್ಚು ಮಹಿಳೆಯರ ಖಾಸಗಿ ಫೋಟೊ, ವಿಡಿಯೊ ಇಟ್ಟುಕೊಂಡಿದ್ದ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಅರೆಸ್ಟ್‌!

ಲೈಂಗಿಕ ದೌರ್ಜನ್ಯ; ರಾಮನಗರ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಅರೆಸ್ಟ್‌

Physical Abuse Case: ತಾನು ಪೊಲೀಸ್ ಅಧಿಕಾರಿ, ವಕೀಲ, ಮಾಧ್ಯಮ ಪ್ರತಿನಿಧಿ ಎಂದು ಹೇಳಿಕೊಂಡು, ನಕಲಿ ಐಡಿ ಕಾರ್ಡ್‌ ಬಳಸಿಕೊಂಡು ಆರೋಪಿಯು, ಹಲವರಿಗೆ ಬೆದರಿಕೆ ಹಾಕುತ್ತಿದ್ದ. ಇನ್ನು ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬ್ಲ್ಯಾಕ್‌ ಮಾಡುತಿದ್ದ ಆರೋಪ ಕೇಳಿಬಂದಿದ್ದರಿಂದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

Dhurandhar 2 script row: ಧುರಂಧರ್ ಚಿತ್ರತಂಡಕ್ಕೆ ಬಿಗ್‌ ರಿಲೀಫ್‌; ಸೆನ್ಸಾರ್ ಪ್ರಮಾಣಪತ್ರ ರದ್ದು ಕೋರಿದ್ದ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್

ಕತೆ ಕದ್ದ ಆರೋಪ; ಧುರಂಧರ್ ಚಿತ್ರತಂಡಕ್ಕೆ ಹೈಕೋರ್ಟ್ ಬಿಗ್‌ ರಿಲೀಫ್‌

ನಿರ್ದೇಶಕ ಆದಿತ್ಯ ಧರ್ ಅವರು ತಮ್ಮ 'ಡಿ-ಸಾಹೇಬ್' ಚಿತ್ರಕಥೆಯ ಕಥಾವಸ್ತುವನ್ನು ಕದ್ದಿದ್ದಾರೆ ಎಂದು ಆರೋಪಿಸಿ ನಿರ್ಮಾಪಕ ಸಂತೋಷ್ ಕುಮಾರ್ ಅವರು ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ, ಕರ್ನಾಟಕ ಏಕಸದಸ್ಯ ಪೀಠವು ಈ ದೂರಿನಲ್ಲಿ ಯಾವುದೇ ಸಾರಾಂಶವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ.

Auto LPG price Hike: ವಾಣಿಜ್ಯ ಸಿಲಿಂಡರ್‌ ಬೆನ್ನಲ್ಲೇ ಆಟೋ ಎಲ್‌ಪಿಜಿ ದರ ಭಾರಿ ಹೆಚ್ಚಳ; ವಿದ್ಯುತ್‌ ಗ್ರಾಹಕರಿಗೂ ತಟ್ಟಿದ ಬೆಲೆ ಏರಿಕೆ ಬಿಸಿ!

ಆಟೋ ಎಲ್‌ಪಿಜಿ ದರ 5.73 ರೂ. ಹೆಚ್ಚಳ; ವಿದ್ಯುತ್‌ ದರವೂ ಏರಿಕೆ!

ಇಂದಿನಿಂದ ಜಾರಿಗೆ ಬರುವಂತೆ ಆಟೋ ಗ್ಯಾಸ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 5.73 ರೂಪಾಯಿ ಹೆಚ್ಚಳವಾಗಿದೆ. ಈ ಹಿಂದೆ ಪ್ರತಿ ಲೀಟರ್‌ಗೆ 89 ರೂ. ಇದ್ದ ದರವು, ಈ ಏರಿಕೆಯ ನಂತರ 95.08 ರೂಪಾಯಿಗೆ ತಲುಪಿದೆ. ಗ್ಯಾಸ್ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಆಟೋ ಪ್ರಯಾಣ ದರವನ್ನು ಹೆಚ್ಚಿಸುವಂತೆ ಸರ್ಕಾರಕ್ಕ ಚಾಲಕರು ಆಗ್ರಹಿಸಿದ್ದಾರೆ.

Bengaluru Jewellery shop robbery: ಬೆಂಗಳೂರಿನ ಜ್ಯುವೆಲ್ಲರಿ ಶಾಪ್‌ ಗೋಡೆ ಕೊರೆದು 1.20 ಕೋಟಿ ಮೌಲ್ಯದ ಬೆಳ್ಳಿ ದೋಚಿದ ಕಳ್ಳರು!

ಬೆಂಗಳೂರಿನ ಜ್ಯುವೆಲ್ಲರಿ ಶಾಪ್‌ನಲ್ಲಿ 1.20 ಕೋಟಿ ಮೌಲ್ಯದ ಬೆಳ್ಳಿ ಕಳ್ಳತನ

Bengaluru News: ಚಿನ್ನ ಮತ್ತು ಬೆಳ್ಳಿ ದರ ಏರಿಕೆಯಾಗುತ್ತಿದ್ದಂತೆ ಜುವೆಲ್ಲರಿ ಶಾಪ್‌ಗಳಲ್ಲಿ ದರೋಡೆ ಪ್ರಕರಣಗಳು ಕಳ್ಳರು ಮತ್ತೆ ತಮ್ಮ ಕೈಚಳಕ ತೋರಿಸಲು ಶುರುಮಾಡಿದ್ದಾರೆ. ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.

Vastu Tips: ವಾಸ್ತು ಪ್ರಕಾರ ಮನೆಗೆ ಯಾವ ಬಣ್ಣ ಸೂಕ್ತ? ಜೀವನದಲ್ಲಿ ಬದಲಾವಣೆ ತರುವ ಬಣ್ಣಗಳು ಇವು!

ಮನೆಗೆ ಸರಿಯಾದ ಬಣ್ಣ ಯಾವುದು?; ಇಲ್ಲಿದೆ ಮಾಹಿತಿ

ವಾಸ್ತು ಪ್ರಕಾರ ಮನೆಯಲ್ಲಿನ ಬಣ್ಣಗಳ ಆಯ್ಕೆ ಜೀವನದಲ್ಲಿ ಧನಾತ್ಮಕ ಶಕ್ತಿ, ಸಂತೋಷ ಮತ್ತು ಸಮೃದ್ಧಿಯನ್ನು ತರಲು ಮಹತ್ವವಾದ ಪಾತ್ರ ವಹಿಸುತ್ತದೆ. ಸರಿಯಾದ ಬಣ್ಣಗಳು ಮನಸ್ಸಿಗೆ ಶಾಂತಿ ನೀಡುವುದಷ್ಟೇ ಅಲ್ಲ, ಮನೆಯ ವಾತಾವರಣವನ್ನು ಹಿತಕರವಾಗಿಸಿ ಕುಟುಂಬದ ಸದಸ್ಯರ ನಡುವೆ ಒಗ್ಗಟ್ಟು ಮತ್ತು ಉತ್ಸಾಹವನ್ನು ಹೆಚ್ಚಿಸುತ್ತವೆ. ಪ್ರತಿಯೊಂದು ಕೋಣೆಗೆ ಹೊಂದುವ ಬಣ್ಣಗಳನ್ನು ಆಯ್ಕೆ ಮಾಡುವುದು ಆರೋಗ್ಯ, ಆರ್ಥಿಕ ಸ್ಥಿರತೆ ಮತ್ತು ಮಾನಸಿಕ ಸಮತೋಲನಕ್ಕೂ ಸಹಾಯಕವಾಗುತ್ತದೆ ಎಂದು ವಾಸ್ತು ಶಾಸ್ತ್ರವು ಸೂಚಿಸುತ್ತದೆ.

'e-cigarette' Mafia: ಕಲಬುರಗಿಯಲ್ಲಿ ʼಇ-ಸಿಗರೇಟ್‌ʼ ಮಾಫಿಯಾ ?

'e-cigarette' Mafia: ಕಲಬುರಗಿಯಲ್ಲಿ ʼಇ-ಸಿಗರೇಟ್‌ʼ ಮಾಫಿಯಾ ?

ನಗರದ ಶಿಕ್ಷಣ ಸಂಸ್ಥೆಗಳ ಆಸುಪಾಸು ಮತ್ತು ದರ್ಗಾ ಆವರಣದ ಸಣ್ಣಪುಟ್ಟ ಅಂಗಡಿಗಳ ಮರೆಯಲ್ಲಿ ಈ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದೊಂದು ಇ-ಸಿಗರೇಟ್ ಸಾಧನಕ್ಕೆ ಸರಿಸುಮಾರು 3000 ದಿಂದ 3500 ರುಪಾಯಿ ವರೆಗೆ ಬೆಲೆ ನಿಗದಿ ಪಡಿಸ ಲಾಗುತ್ತಿದ್ದು, ಯುವಕರು ಹಾಗೂ ವಿದ್ಯಾರ್ಥಿಗಳೇ ಈ ಜಾಲದ ಪ್ರಮುಖ ಗುರಿಯಾಗಿದ್ದಾರೆ.

Inner Reservation: ಸಿದ್ದು ಬಿಟ್ಟರೆ ಅನ್ಯರಿಂದ ʼಒಳಮೀಸಲಿಗೆ ಪರಿಹಾರʼ ಸಾಧ್ಯವಿರಲಿಲ್ಲ

ಸಿದ್ದು ಬಿಟ್ಟರೆ ಅನ್ಯರಿಂದ ʼಒಳಮೀಸಲಿಗೆ ಪರಿಹಾರʼ ಸಾಧ್ಯವಿರಲಿಲ್ಲ

ನಾನು ಗಮನಿಸಿದಂತೆ ಸಿದ್ದರಾಮಯ್ಯಅವರು, ಒಳಮೀಸಲಾತಿ ವಿವಾದವನ್ನು ಸರಕಾರದ ಯಾವುದೇ ಒಂದು ಸಾಮಾನ್ಯ ಸಮಸ್ಯೆಯಂತಾಗಲಿ, ಕಾರ್ಯಕ್ರಮದಂತಾಗಲಿ ನೋಡಲಿಲ್ಲ. ಬದಲಾಗಿ ತಮ್ಮ ಆಡಳಿತ ಅವಧಿಯಲ್ಲಿ ಸಾಮಾಜಿಕ ಬದ್ಧತೆ ಪ್ರದರ್ಶಿಸಲು ಹಾಗೂ ಸಾಮಾಜಿಕ ನ್ಯಾಯದ ಅನುಷ್ಠಾನಕ್ಕೆ ಸಿಕ್ಕಬಹುದಾದ ದೊಡ್ಡ ಅವಕಾಶ ಎನ್ನುವಂತೆ ಸ್ವೀಕರಿಸಿದ್ದರು.

Gudibande News: ಚುನಾವಣಾ ಸಮಯದಲ್ಲಿ ಟೂರ್‌ʼಗೆ ಬಂದವರಿಗೆ ಶಾಸಕರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ : ಲಕ್ಷ್ಮೀನಾರಾಯಣ

ನಿಮ್ಮ ಜೊತೆಗೆ ಚರ್ಚೆ ಮಾಡಲು ನಾವು ಸಾಕು, ಶಾಸಕರ ಅಗತ್ಯತೆ ಇಲ್ಲ

ಕಳೆದೆರಡು ದಿನಗಳ ಹಿಂದೆ ಮುಖಂಡ ಡಿ.ಜೆ.ನಾಗರಾಜರೆಡ್ಡಿ ಶಾಸಕ ಸುಬ್ಬಾರೆಡ್ಡಿಯವರ ವಿರುದ್ದ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಅದರ ಹೇಳಿಕೆಗಳ ಕುರಿತು ಪಟ್ಟಣದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಡಿಬಂಡೆ ತಾಲೂಕಿನವರೇ ಆದ ಡಿ.ಜೆ.ನಾಗರಾಜರೆಡ್ಡಿಯವರು ರಾಜಕೀಯ ಮಾಡಲಿ ನಾವು ಅದಕ್ಕೆ ವಿರೋಧವಿಲ್ಲ, ತಕರಾರಿಲ್ಲ

Shidlaghatta News: ತಾಲೂಕು ದಂಡಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ: ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ

ಡಿಸಿ ಕಚೇರಿ ಘಟನೆ ಖಂಡನೆ: ಶಿಡ್ಲಘಟ್ಟದಲ್ಲಿ ರೈತ ಸಂಘದ ಪ್ರತಿಭಟನೆ

ಕೆಐಡಿಬಿ ಸಂಬಂಧಿತ ವಿಷಯದಲ್ಲಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಅನ್ಯಾಯ ವಾಗಿ ಬಲಪ್ರಯೋಗ ಮಾಡಲಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ತಾಲೂಕು ದಂಡಾಧಿಕಾರಿಗಳ ಮೂಲಕ ಗೃಹ ಸಚಿವರು ಹಾಗೂ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

Chikkaballapur News: ಸಮಾಧಾನ ರಾಜೀ ಮೂಲಕ ನ್ಯಾಯದಾನ ಸಕಾಲದಲ್ಲಿ ಕಾನೂನಿನ ಉಚಿತ ನೆರವು: ನ್ಯಾ. ಶಿಲ್ಪ.ಬಿ.

ಇಂದಿನಿಂದ ಚೊಚ್ಚಲ ವಿಶೇಷ ಲೋಕ ಅದಾಲತ್ ಆರಂಭ

ವಿಶೇಷ ಲೋಕ್ ಅದಾಲತ್ ಕಾರ್ಯಕ್ರಮವು ನ್ಯಾಯಾಲಯಗಳಲ್ಲಿ ವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಬಗೆಹರಿಸುವ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ಲೀಗಲ್ ಸರ್ವೀಸ್ ಅಥಾರಿಟೀಸ್ ಂಛಿಣ 1987 ಅಡಿಯಲ್ಲಿ ಕಾರ್ಯ ನಿರ್ವಹಿಸುವ ಲೋಕ ಅದಾಲತ್ ವ್ಯವಸ್ಥೆ ಪರ್ಯಾಯ ವಿವಾದ ಪರಿಹಾರ ಎಡಿಆರ್ ವಿಧಾನವಾಗಿದ್ದು, ಇಲ್ಲಿ ಪ್ರಕರಣಗಳನ್ನು ಪರಸ್ಪರ ಸಮಾಧಾನದಿಂದ ಇತ್ಯರ್ಥಗೊಳಿಸ ಲಾಗುತ್ತದೆ.

ಚಿಕ್ಕನಾಯನಕಹಳ್ಳಿಯಲ್ಲಿ ಅಬ್ಬರಿಸಿದ ವರುಣ: ನೆಲಕ್ಕುರುಳಿದ 100ಕ್ಕೂ ಹೆಚ್ಚು ವಿದ್ಯುತ್ ಕಂಬಗಳು

ಚಿಕ್ಕನಾಯನಕಹಳ್ಳಿಯಲ್ಲಿ ನೆಲಕ್ಕುರುಳಿದ 100ಕ್ಕೂ ಹೆಚ್ಚು ವಿದ್ಯುತ್ ಕಂಬಗಳು

Chikkanayakanahalli News: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಏಪ್ರಿಲ್‌ 28ರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಬೆಸ್ಕಾಂ ಇಲಾಖೆಗೆ ಭಾರಿ ನಷ್ಟ ಉಂಟಾಗಿದ್ದು, ತಾಲೂಕಿನಾದ್ಯಂತ ಸುಮಾರು 100ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರೇ ಗಮನಿಸಿ; ಮಳೆ ಸಂಬಂಧಿತ ಸಮಸ್ಯೆ ನಿವಾರಣೆಗೆ ಸಹಾಯವಾಣಿ ಆರಂಭಿಸಿದ ಬೆಸ್ಕಾಂ

ಗಾಳಿ-ಮಳೆಯಿಂದ ಬೆಸ್ಕಾಂಗೆ ಲಕ್ಷಾಂತರ ರೂಪಾಯಿ ನಷ್ಟ

BESCOM: ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಏಪ್ರಿಲ್‌ 29ರ ಸಂಜೆ ಸುರಿದ ಭಾರಿ ಗಾಳಿ-ಮಳೆಗೆ 461 ವಿದ್ಯುತ್‌ ಕಂಬಗಳು, 77 ಟ್ರಾನ್ಸ್‌ ಫಾರ್ಮರ್‌ಗಳು, ಸುಮಾರು 1.8 ಕಿ.ಮೀ. ಉದ್ದದ ವಿದ್ಯುತ್‌ ತಂತಿಗಳು ಹಾನಿಗೊಳಗಾಗಿದ್ದು, ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು ಹಾನಿ 87.32 ಲಕ್ಷ ರೂ. ಎಂದು ಅಂದಾಜಿಲಾಗಿದೆ.

ನಾಯಕತ್ವ ಬದಲಾವಣೆ ವಿಚಾರ; ಖರ್ಗೆ ಸಾಹೇಬರನ್ನೇ ಕೇಳಿ ಎಂದ ಡಿ.ಕೆ. ಶಿವಕುಮಾರ್‌

ನಾಯಕತ್ವ ಬದಲಾವಣೆ ವಿಚಾರ; ಖರ್ಗೆ ಸಾಹೇಬರನ್ನು ಕೇಳಿ ಎಂದ ಡಿಕೆಶಿ

DK Shivakumar: ಆದಷ್ಟು ಬೇಗ ಅಧಿಕಾರ ಹಂಚಿಕೆ ಗೊಂದಲ ಬಗೆಹರಿಸುವಿರಾ, ಮಲ್ಲಿಕಾರ್ಜುನ ಖರ್ಗೆ ಬದಲಾವಣೆ ಇಲ್ಲ ಎಂದಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಗೊಂದಲವೇ ಇಲ್ಲ. ನೀವುಗಳು ಏನಿದ್ದರೂ ಮಲ್ಲಿಕಾರ್ಜುನ ಖರ್ಗೆ ಸಾಹೇಬರನ್ನು ಕೇಳಿ. ನಾಯಕತ್ವ ಬದಲಾವಣೆ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದು ಪಕ್ಷ ಹೈಕಮಾಂಡ್‌ಗೆ ಬಿಟ್ಟ ವಿಚಾರ, ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ವಾರದೊಳಗೆ ಎತ್ತಿನಹೊಳೆ ಬಾಕಿ ಕಾಮಗಾರಿ ಪ್ರಾರಂಭ: ಡಿ.ಕೆ. ಶಿವಕುಮಾರ್

ವಾರದೊಳಗೆ ಎತ್ತಿನಹೊಳೆ ಬಾಕಿ ಕಾಮಗಾರಿ ಪ್ರಾರಂಭ: ಡಿಕೆಶಿ

DK Shivakumar: ಕೇಂದ್ರ ಪರಿಸರ ಇಲಾಖೆಯವರು ದಂಡ ಹಾಗೂ ಮಿಟಿಗೇಷನ್ ಪ್ಲಾನ್ ಸೇರಿ 257 ಕೋಟಿ ರುಪಾಯಿ ಹಣ ಸಂದಾಯ ಮಾಡಬೇಕು ಎಂದು ಸೂಚಿಸಿದ್ದಾರೆ. ಇಂದೇ ಈ ಹಣ ಪಾವತಿ ಮಾಡಿ ಎಂದು ಮಾರ್ಗದರ್ಶನ ನೀಡಿದ್ದೇನೆ. ಕಟ್ಟಿದ ಕೂಡಲೇ ಈ ವಾರದೊಳಗೆ ಎತ್ತಿನಹೊಳೆ ಕೆಲಸ ಪ್ರಾರಂಭ ಮಾಡಿ ಎಂದು ಗುತ್ತಿಗೆದಾರರಿಗೆ ಸೂಚಿಸಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

7 ವರ್ಷಗಳಿಂದ ಸ್ವಾತಂತ್ರ್ಯ ಹೋರಾಟಗಾರನ ಪತ್ನಿಗೆ ಪಿಂಚಣಿ ಸ್ಥಗಿತ: ಕೇಂದ್ರ- ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೊಟೀಸ್‌

ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯ ಪಿಂಚಣಿ ಸ್ಥಗಿತ: ಹೈಕೋರ್ಟ್ ಆದೇಶವೇನು?

Karnataka High Court: ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯೊಬ್ಬರ ಪಿಂಚಣಿ ತಡೆಹಿಡಿದಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್ ಇದೀಗ ನೋಟಿಸ್ ನೀಡಿದೆ. ಮೃತ ಸ್ವಾತಂತ್ರ್ಯ ಹೋರಾಟಗಾರನ 92 ವರ್ಷದ ಪತ್ನಿ ಸಲ್ಲಿಸಿರುವ ಅರ್ಜಿಯ ಮೇರೆಗೆ ಇದೀಗ ಹೈಕೋರ್ಟ್‌ ಸರ್ಕಾರಕ್ಕೆ ತುರ್ತು ನೊಟೀಸ್‌ ಜಾರಿ ಮಾಡಿದೆ.

ತಮನ್ನಾ ಭಾಟಿಯಾ ಆಯ್ಕೆ ವಿವಾದದ ನಡುವೆಯೂ 2,016 ಕೋಟಿ ರುಪಾಯಿ ವಹಿವಾಟು ನಡೆಸಿದ ಮೈಸೂರು ಸ್ಯಾಂಡಲ್ ಸೋಪ್; ಹೊರ ರಾಜ್ಯಗಳಲ್ಲಿ ದಾಖಲೆ ಮಾರಾಟ

2,016 ಕೋಟಿ ರುಪಾಯಿ ವಹಿವಾಟು ನಡೆಸಿದ ಮೈಸೂರು ಸ್ಯಾಂಡಲ್ ಸೋಪ್

Mysore Sandal Soap: ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) 2025–26ರಲ್ಲಿ 2,016 ಕೋಟಿ ರುಪಾಯಿ ವಹಿವಾಟು ಮಾಡಿದೆ. ಇದರೊಂದಿಗೆ ನಿವ್ವಳ ಲಾಭ 507 ಕೋಟಿ ರುಪಾಯಿಗೆ ತಲುಪಿದೆ. ಭಾರಿ ವಿವಾದದ ನಡುವೆಯೂ ಇತಿಹಾಸದಲ್ಲೇ ಅತ್ಯಧಿಕ ಹಣಕಾಸು ದಾಖಲೆ ಸಾಧಿಸಿದೆ. ಈ ವರ್ಷ ಸಂಸ್ಥೆಯು ರಾಜ್ಯ ಖಜಾನೆಗೆ 150 ಕೋಟಿ ರುಪಾಯಿ ಲಾಭಾಂಶವನ್ನು ನೀಡಿದ್ದು, 21ನೇ ಸ್ಥಾನದಿಂದ 1ನೇ ಸ್ಥಾನಕ್ಕೆ ಜಿಗಿದಿದೆ.

Sustainable Data Park: ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಸುಸ್ಥಿರ ಡೇಟಾ ಪಾರ್ಕ್ ಸ್ಥಾಪನೆ

ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಸುಸ್ಥಿರ ಡೇಟಾ ಪಾರ್ಕ್ ಸ್ಥಾಪನೆ

Sustainable Data Park: ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಸುಸ್ಥಿರ ಡೇಟಾ ಕೇಂದ್ರಗಳು (ಸಸ್ಟೇನಬಲ್ ಡೇಟಾ ಸೆಂಟರ್ಸ್) ಅಗತ್ಯವಿದ್ದು ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಡೇಟಾ ಪಾರ್ಕ್ ಸ್ಥಾಪಿಸಲು ಗುರುವಾರ ನಡೆದ ಸಂಬಂಧಿತ ಸಚಿವರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಅವಘಡ: ಅಧಿಕಾರಿಯ ತಲೆದಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್‌ ಆದೇಶ

ಬೌರಿಂಗ್ ಆಸ್ಪತ್ರೆ ದುರಂತ: ಅಧಿಕಾರಗಳ ತಲೆದಂಡಕ್ಕೆ ಸೂಚನೆ

CM Siddaramaiah: ಭಾರಿ ಮಳೆಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದು ಏಳು ಜನರ ಸಾವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಯ ತಲೆದಂಡವಾಗಿದೆ. ಸಂಬಂಧಪಟ್ಟ ಕಾರ್ಯಪಾಲಕ ಎಂಜಿನಿಯರ್ ಅಮಾನತುಗೊಳಿಸಿ ನೊಟೀಸ್‌ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಬೆಂಗಳೂರಿನ ಪ್ರಸಿದ್ಧ ಪುಸ್ತಕ ಮಳಿಗೆ ದಿ ಬುಕ್‌ವರ್ಮ್‌ಗೆ ನುಗ್ಗಿದ ಮಳೆ ನೀರು: 5,000ಕ್ಕೂ ಹೆಚ್ಚು ಪುಸ್ತಕ ನಾಶ

ಬೆಂಗಳೂರಿನಲ್ಲಿ 5,000ಕ್ಕೂ ಹೆಚ್ಚು ಪುಸ್ತಕ ನಾಶ

Books Destroyed: ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯು ನಗರದ ಪ್ರತಿಷ್ಠಿತ ಪುಸ್ತಕ ಮಳಿಗೆಗಳಲ್ಲಿ ಒಂದನ್ನು ಸಂಪೂರ್ಣವಾಗಿ ನಾಶ ಮಾಡಿದೆ. ಚರ್ಚ್ ಸ್ಟ್ರೀಟ್‌ನಲ್ಲಿರುವ 'ದಿ ಬುಕ್‌ವರ್ಮ್' ಪತ್ರಿಕೆಯು ನೀರಿನಲ್ಲಿ ತೇಲುತ್ತಿರುವ ಪುಸ್ತಕಗಳೊಂದಿಗೆ ಪ್ರವಾಹಕ್ಕೆ ಸಿಲುಕಿದ ಅಂಗಡಿಯ ಸರಣಿ ಚಿತ್ರಗಳನ್ನು ಹಂಚಿಕೊಂಡಿದೆ.

Koppal News: ಗಂಗಾವತಿ ಬಿಜೆಪಿ ಮುಖಂಡ  ವೆಂಕಟೇಶ ಹತ್ಯೆ ಪ್ರಕರಣ; 6 ಹಂತಕರಿಗೆ ಗಲ್ಲು ಶಿಕ್ಷೆ

ಬಿಜೆಪಿ ಮುಖಂಡ ವೆಂಕಟೇಶ ಹತ್ಯೆ ಪ್ರಕರಣ; ಹಂತಕರಿಗೆ ಗಲ್ಲು ಶಿಕ್ಷೆ

ಬಿಜೆಪಿ ಯುವ ಮೋರ್ಚಾದ ಗಂಗಾವತಿ ನಗರ ಘಟಕ ಅಧ್ಯಕ್ಷ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್‌ಎನ್ ವೆಂಕಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ 6 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಗಂಗಾವತಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ರವಿ, ಮೈಲಾರಿ, ಧನರಾಜ್, ಭೀಮಾ, ಸಲೀಂ ಮಹಮ್ಮದ್ ರಫೀಕ್ ಮತ್ತು ಗಂಗಾಧರ ಗೌಳಿ ಶಿಕ್ಷೆಗೊಳಗಾದ ಅಪರಾಧಿಗಳು.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಕೊಟ್ರು ಸಖತ್‌ ಟ್ವಿಸ್ಟ್‌; ಎಐಸಿಸಿ ಅಧ್ಯಕ್ಷ ಹೇಳಿದ್ದೇನು?

ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ: ಖರ್ಗೆ

Mallikarjun Kharge: ನಾಯಕತ್ವದ ಬದಲಾವಣೆಯ ಬಗ್ಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಸಿಎಂ ಬದಲಾವಣೆಯ ಸಮಯ ಬಂದಾಗ ನಾವೆಲ್ಲರೂ ಕುಳಿತು ಚರ್ಚಿಸುತ್ತೇವೆ. ಅಲ್ಲಿಯವರೆಗೆ ಇಂತಹ ಚರ್ಚೆಗಳಿಗೆ ಆಸ್ಪದವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

Loading...