ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಇನ್ನಷ್ಟು ರೈಲು, ಬಿಇಎಂಎಲ್ ಜೊತೆ ಒಪ್ಪಂದ
ಹಳದಿ ಮಾರ್ಗದಲ್ಲಿ(ಆರ್.ವಿ.ರಸ್ತೆ- ಬೊಮ್ಮಸಂದ್ರ) ಹೆಚ್ಚಿನ ಪ್ರಯಾಣಿಕರ ಸಂಖ್ಯೆ ಪರಿಗಣಿಸಿ, ಬಿಎಂಆರ್‌ಸಿಎಲ್ ಹೆಚ್ಚುವರಿ ಆರು ರೈಲುಗಳಿಗಾಗಿ ಬಿಇಎಂಎಲ್ ಜತೆ 414 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದೆ. ಬಿಇಎಂಎಲ್ 2027ರ ವೇಳೆಗೆ ಹೆಚ್ಚುವರಿ ಆರು ರೈಲು (36 ಬೋಗಿ) ಪೂರೈಸುವ ಸಾಧ್ಯತೆ ಇದೆ. ಹಳದಿ ಮಾರ್ಗವನ್ನು (Namma Metro Yello Line) ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ವಿಸ್ತರಿಸಿದ ನಂತರ ಹೆಚ್ಚುವರಿಯಾಗಿ 10-12 ರೈಲುಗಳು ಬೇಕಾಗುತ್ತವೆ.