ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಬಿಜೆಪಿ-ಜೆಡಿಎಸ್ ಸರಕಾರ ಬಂದಾಗ ನಾನ್ಯಾರೆಂದು ತೋರಿಸುತ್ತೇನೆ: ಎಚ್‌ಡಿಕೆ

2028ಕ್ಕೆ ನನ್ನ ಬೇರೆ ಮುಖ ಕಾಣುತ್ತೆ

ಕುಮಾರಸ್ವಾಮಿ ಸ್ಟಿಂಗ್ ಬಗ್ಗೆ ದಾಖಲೆ ಕೊಡಲಿ, ಬಲಿತ ದಲಿತರ ಬಗ್ಗೆ ಇವರಿಗೇಕೆ ಕಣ್ಣುರಿ ಎಂದು ಪ್ರಶ್ನಿಸಿದ್ದಾರೆ. ಇತ್ತೀಚೆಗಷ್ಟೇ ಪ್ರಿಯಾಂಕ್‌ರನ್ನು ಬಲಿತ ದಲಿತ ಎಂದು ಎಚ್‌ಡಿಕೆ ಕರೆದಿದ್ದಕ್ಕೆ ಪ್ರತಿಯಾಗಿ ಅವರು ಹೀಗೆಂದು ಹೇಳಿದ್ದಾರೆ. ಹಾಸನದಲ್ಲಿ ಶಾಸಕ ಸ್ವರೂಪ ಪ್ರಕಾಶ್ ಅವರ ನಿವಾಸದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇ ಶಿಸಿ ಮಾತನಾಡಿದ ಕುಮಾರಸ್ವಾಮಿ, ನನ್ನನ್ನು ಆ ಪ್ರಿಯಾಂಕ್ ಖರ್ಗೆ ಉತ್ತರ ಕುಮಾರ, ನಿರುದ್ಯೋಗಿ ಎಂದು ಕರೆದಿದ್ದಾರೆ. ಆತನನ್ನು ಗೃಹಸಚಿವ ಎಂದು ಕರೆಯಲು ಆಗುತ್ತದೆಯೇ? ಎಂದು ಹರಿಹಾಯ್ದಿದ್ದಾರೆ.

ಅ.22ಕ್ಕೆ ರೈತರ ಬೃಹತ್ ಹೋರಾಟ ಬೇಡಿಕೆ ಈಡೇರದಿದ್ದರೆ ಧಾರವಾಡದಲ್ಲಿ ಹೋರಾಟ: ರೈತ ಸಂಘ

ಅ.22ಕ್ಕೆ ರೈತರ ಬೃಹತ್ ಹೋರಾಟ ಬೇಡಿಕೆ ಈಡೇರದಿದ್ದರೆ ಧಾರವಾಡದಲ್ಲಿ ಹೋರಾಟ

ರೈತರ ಬೇಡಿಕೆ ಈಡೇರಿಕೆಗೆ ಸಂಬಂಧಿಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳ ದಿದ್ದರೆ, ಅ.22ರಂದು ಯರಿ ಕೊಪ್ಪ ಕ್ರಾಸ್ ಬಳಿ ದೊಡ್ಡಮಟ್ಟದ ಹೋರಾಟ ನಡೆಸ ಲಾಗುವುದು ಎಂದು ಚೂನಪ್ಪ ಪೂಜಾರಿ ಎಚ್ಚರಿಸಿದ್ದಾರೆ. ಅಲ್ಲದೇ ಕೇಂದ್ರ ಸಚಿವ ಜೋಶಿ ತೇಗೂರಿಗೆ ಆಗಮಿಸಿ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

No support price for flowers: ದಸರಾ ಹಬ್ಬದಲ್ಲೂ ಹೂವಿಗೆ ಬೆಂಬಲ ಬೆಲೆಯಿಲ್ಲ: ಕಂಗಾಲಾದ ರೈತರು

ದಸರಾ ಹಬ್ಬದಲ್ಲೂ ಹೂವಿಗೆ ಬೆಂಬಲ ಬೆಲೆಯಿಲ್ಲ: ಕಂಗಾಲಾದ ರೈತರು

ದಸರಾ(Dasara) ಹಬ್ಬವೆಂದರೆ ಹೂವಿನ ಬೆಳೆಗಾರರಿಗೆ ಉತ್ತಮ ಆದಾಯದ ನಿರೀಕ್ಷೆ ಮೂಡುವ ಸಮಯ. ಹಬ್ಬ ಹರಿದಿನಗಳಲ್ಲಿ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎಂಬ ನಂಬಿಕೆ ಯಿಂದ ರೈತರು ಅಲ್ಪಸ್ವಲ್ಪ ಜಮೀನಿನಲ್ಲಿ ಹೂವಿನ ಬೆಳೆ ಬೆಳೆದು ಆದಾಯದ ನಿರೀಕ್ಷೆಯಲ್ಲಿರು ತ್ತಾರೆ. ಆದರೆ ಈ ಬಾರಿ ದಸರಾ ಹಬ್ಬ ರೈತರ ಪಾಲಿಗೆ ನಿರಾಸೆ ತಂದಿದ್ದು, ಹೂವಿನ ದರದಲ್ಲಿ ಕುಂಠಿತ ಕಂಡುಬಂದಿರುವು ದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Kalaburagi Breaking: ಶಂಕಿತ ಉಗ್ರನ ಸಂಪರ್ಕ ಜಾಲದ ತನಿಖೆ: ಶಂಕಿತ ಉಗ್ರನ ವಿರುದ್ಧ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲು

ಶಂಕಿತ ಉಗ್ರನ ವಿರುದ್ಧ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲು

ಸರಾಫ್‌ ಬಜಾರ್‌ನ ಪಡಶೆಟ್ಟಿ ಕಾಂಪ್ಲೆಕ್ಸ್‌ನಲ್ಲಿರುವ ಬಂಗಾರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಮತಾಜಲ್‌ನ ಚಟುವಟಿಕೆಗಳ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದರು. ಅ.17ರಂದು ನೋಟಿಸ್‌ ನೀಡಲಾಗಿದ್ದು, ಮರುದಿನ ಮಮತಾಜಲ್ ಹಾಗೂ ಆತನೊಂದಿಗೆ ಕೆಲಸ ಮಾಡುತ್ತಿದ್ದ ಮೆಹ್ರಾಜಿ ಮಲ್ಲಿಕ್ ಠಾಣೆಗೆ ಹಾಜರಾಗಿದ್ದರು.

Kartavya App: ಅಧಿಕಾರಿಗಳಿಗೆ ರಾತ್ರಿ ಹಾಜರಿ ಕಡ್ಡಾಯ

Kartavya App: ಅಧಿಕಾರಿಗಳಿಗೆ ರಾತ್ರಿ ಹಾಜರಿ ಕಡ್ಡಾಯ

ಸರಕಾರಿ ಅಭಿವೃದ್ಧಿ ಕೆಲಸಗಳು ಹಾಗೂ ಸಾರ್ವಜನಿಕ ಸೇವೆಗಳು ಜನ ಸಾಮಾನ್ಯರಿಗೆ ತಲುಪಬೇಕಾದರೆ ಅಧಿಕಾರಿಗಳು ಮತ್ತು ನೌಕರರು ತಮ್ಮ ಕಾರ್ಯಕ್ಷೇತ್ರ (ಕೇಂದ್ರಸ್ಥಾನ)ದಲ್ಲಿಯೇ ನೆಲೆಸಿರಬೇಕು. ಈ ನಿಟ್ಟಿನಲ್ಲಿ ಸರಕಾರಿ ನೌಕರರು ಕಡ್ಡಾಯವಾಗಿ ನಿಯೋಜಿತ ಕೇಂದ್ರಸ್ಥಾನದ ವಾಸವಿರುವುದನ್ನು ಖಾತ್ರಿಪಡಿಸಿಕೊಳ್ಳಲು, ರಾಜ್ಯ ಸರಕಾರ ಜಿಯೋ-ಫೆನ್ಸಿಂಗ್ ತಂತ್ರಜ್ಞಾನ ಆಧಾರಿತ ‘ಕರ್ತವ್ಯ’ App ಮೂಲಕ ರಾತ್ರಿ ವೇಳೆ ಹಾಜರಾತಿ ದಾಖಲಿಸುವುದನ್ನು ಕಡ್ಡಾಯ ಗೊಳಿಸಿದೆ.

Gruha Jyothi: ಅ.31ರವರೆಗೆ ಗೃಹಜ್ಯೋತಿ ಮರು ಸಮೀಕ್ಷೆ

Gruha Jyothi: ಅ.31ರವರೆಗೆ ಗೃಹಜ್ಯೋತಿ ಮರು ಸಮೀಕ್ಷೆ

ಸಮೀಕ್ಷೆಯ ಸಂದರ್ಭದಲ್ಲಿ ಒಟ್ಟು 2,362 ಮನೆಗಳು ಖಾಲಿ ಇರುವ ಅಥವಾ ಬೀಗ ಹಾಕಿರುವುದು ಕಂಡುಬಂದಿದೆ. ಇಂತಹ ಗ್ರಾಹಕರು ಹಾಗೂ ಈವರೆಗೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯ ವಾಗದವರು ನಿಗದಿತ ಅವಧಿಯೊಳಗೆ ಸಂಬಂಧಪಟ್ಟ ಬೆಸ್ಕಾಂ ಉಪವಿಭಾಗ ಕಚೇರಿಗೆ ತೆರಳಿ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

Sadguru Shri Madhusudhan Sai: ರಾಮನಾಮ ಸ್ಮರಣೆಯಿಂದ ದುರ್ಗುಣಗಳ ನಿವಾರಣೆ: ಸದ್ಗುರು ಶ್ರೀ ಮಧುಸೂದನ ಸಾಯಿ

ಸತ್ಯ ಸಾಯಿ ಗ್ರಾಮದಲ್ಲಿ ಮಹಾರುದ್ರ ಯಾಗ ಆರಂಭ

ಶ್ರೀರಾಮನಿಗೆ ಎದುರಾದ ಸಮಸ್ಯೆಗಳನ್ನು ಹನುಮಂತ ನಿವಾರಿಸಿದನು. ಸಾಧ್ಯವಿರುವ ಎಲ್ಲ ರೀತಿ ಯಲ್ಲೂ ಶ್ರೀರಾಮನ ಸೇವೆ ಮಾಡಿದನು. ಹನುಮಂತನ ನಿಸ್ವಾರ್ಥ ಸೇವೆಯು ಸನಾತನ ಧರ್ಮದ ಸಮಾನತೆಯ ತತ್ವವನ್ನು ಸಾರುತ್ತದೆ. ಸನಾತನ ಧರ್ಮದಲ್ಲಿ ಯಾರೂ ಕೀಳಲ್ಲ, ಎಲ್ಲರೂ ಸಮಾನರು. ಏಕೆಂದರೆ, ಸರ್ವವೂ ಬ್ರಹ್ಮಸ್ವರೂಪವೇ ಆಗಿದೆ

Mysore Dasara: ಮೈಸೂರು ದಸರಾ ಜಂಬೂಸವಾರಿಯಲ್ಲಿ ಗೌರಿಬಿದನೂರು ಕಲಾವಿದರ ಅರೆವಾದ್ಯ ಪ್ರದರ್ಶನ

40 ಜನರ ಜನಪದ ಕಲಾತಂಡಕ್ಕೆ ಹಸಿರು ನಿಶಾನೆ

ರಾಜ್ಯದ ಪ್ರತಿ ಜಿಲ್ಲೆಯಿಂದ ವಿವಿಧ ಕಲಾಪ್ರಕಾರಗಳ ಕಲಾವಿದರನ್ನು ಆಯ್ಕೆ ಮಾಡಲಾಗುತ್ತಿದೆ. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಗೌರಿಬಿದನೂರು ತಾಲೂಕಿನ ಚರ್ಮವಾದ್ಯ–ಅರೆವಾದ್ಯ ಕಲಾತಂಡಕ್ಕೆ ಅವಕಾಶ ಲಭಿಸಿದೆ. ಕಲಾವಿದರು ಮೈಸೂರಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತರಲಿ ಎಂದು ಆಶಿಸಿದರು.

ಪಕ್ಷದ್ರೋಹ ಮಾಡದೆ, ನಿಷ್ಠಾವಂತ ಕಾರ್ಯಕರ್ತ ಶಶಿ ಹುಲಿಕುಂಟೆಮಠ ಗೆಲುವಿಗೆ ಶ್ರಮಿಸೋಣ

ಪ್ರತಿ ಪಂಚಾಯಿತಿಗೆ ಹತ್ತು ಮಂದಿಯ ತಂಡ ರಚಿಸಿ: ರಾಜೀವ್ ಗೌಡ

ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುವ ಕಾರ್ಯಕರ್ತರನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬ ನಾಯಕರ ಜವಾಬ್ದಾರಿ. ಪಕ್ಷದ ಗೌರವ ಹಾಗೂ ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಪಕ್ಷದ್ರೋಹದ ಚಟುವಟಿಕೆಗಳಿಗೆ ಅವಕಾಶ ನೀಡದೆ, ಸಂಘಟನೆಯ ಹಿತದೃಷ್ಟಿ ಯಿಂದ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.

K M Suresh: ಬಿಜೆಪಿ–ಜೆಡಿಎಸ್ ಮುಖಂಡರ ಸಭೆ; ಪದವೀಧರ ಮತದಾರರನ್ನು ಸಂಪರ್ಕಿಸಿ ಬೆಂಬಲ ಕ್ರೋಡೀಕರಿಸಲು ಕರೆ

ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಗೆಲುವಿಗೆ ಶ್ರಮಿಸೋಣ: ಮುಕ್ತ ಮುನಿಯಪ್ಪ

ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಕೆ.ಎಂ. ಸುರೇಶ್ ಅವರ ಗೆಲುವು ಸಾಧಿಸಲು ಎರಡೂ ಪಕ್ಷಗಳ ಮುಖಂಡರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಪದವೀಧರ ಮತದಾರರನ್ನು ನೇರವಾಗಿ ಸಂಪರ್ಕಿಸಿ, ಅಭ್ಯರ್ಥಿಯ ಪರವಾಗಿ ಮತ ಯಾಚಿಸುವ ಮೂಲಕ ಮೈತ್ರಿಕೂಟದ ಬಲವನ್ನು ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.

ಬಾಗಲಕೋಟೆಯಲ್ಲಿ ದಾಂಡಿಯಾ ಸಂಭ್ರಮದ ವೇಳೆ ಗಲಾಟೆ; ಚಾಕುವಿನಿಂದ ಇರಿದು ಯುವಕನ ಕೊಲೆ

ದಾಂಡಿಯಾ ಸಂಭ್ರಮದ ವೇಳೆ ಗಲಾಟೆ; ಯುವಕನ ಬರ್ಬರ ಕೊಲೆ

ಯುವಕನೊಬ್ಬ ದಾಂಡಿಯಾ ನೃತ್ಯ ಮಾಡುತ್ತಿದ್ದ ಯುವತಿಯರನ್ನು ಚುಡಾಯಿಸಿ, ಪೂಜೆ ಮಾಡುತ್ತಿದ್ದ ಯುವಕರೊಂದಿಗೂ ಕಿರಿಕ್​ ಮಾಡಿದ್ದಾನೆ. ಆತನಿಗೆ ಅಲ್ಲಿದ್ದ ಯುವಕ ಬುದ್ಧಿವಾದ ಹೇಳಿದ್ದಕ್ಕೆ ತನ್ನ ಗ್ಯಾಂಗ್‌ನೊಂದಿಗೆ ಬಂದು ಜಗಳ ತೆಗೆದಿದ್ದಾನೆ. ಈ ವೇಳೆ ಜಗಳ ತಾರಕ್ಕಕ್ಕೇರಿ ಯುವಕನನ್ನು ಚಾಕುವಿನಿಂದ ಇರಿದು ಕೊಲ್ಲಲಾಗಿದೆ.

Tumkur Dasara: ತುಮಕೂರು ದಸರಾ ಕುಸ್ತಿ ಪಂದ್ಯಾವಳಿ: ಪ್ರಥಮ ಸ್ಥಾನ ಪಡೆದ ದೇಶದ ಗರಡಿಮನೆಯ ಕುಸ್ತಿಪಟು ಸಂತೋಷ್

ತುಮಕೂರು ದಸರಾ ಕುಸ್ತಿ ಪಂದ್ಯಾವಳಿ: ಕುಸ್ತಿಪಟು ಸಂತೋಷ್'ಗೆ ಪ್ರಥಮ ಸ್ಥಾನ

​ಕಠಿಣ ಪರಿಶ್ರಮ, ಶಿಸ್ತು ಮತ್ತು ನಿರಂತರ ಅಭ್ಯಾಸದ ಮೂಲಕ ಕಣಕ್ಕಿಳಿದ ಸಂತೋಷ್ ಯು, ಪಂದ್ಯ ದುದ್ದಕ್ಕೂ ಗಮನಾರ್ಹ ತಾಂತ್ರಿಕ ಕೌಶಲ ಮೆರೆದು ಎದುರಾಳಿಗಳನ್ನು ಮಣಿಸಿ ವಿಜಯ ಶಾಲಿಯಾದರು. ಇವರ ಈ ಸಾಧನೆಯು ತುಮಕೂರು ನಗರದ ಕ್ರೀಡಾ ಲೋಕಕ್ಕೆ, ಅದರಲ್ಲೂ ವಿಶೇಷವಾಗಿ ಸಾಂಪ್ರದಾ ಯಿಕ ಕುಸ್ತಿಪಟುಗಳಿಗೆ ಹೆಮ್ಮೆಯ ಕ್ಷಣವಾಗಿದೆ.

Chikkaballapur News: ನೂರಾರು ಸುಮಂಗಲಿಯರಿಂದ ಲಲಿತಾ ಸಹಸ್ರನಾಮ ಪಠಣ; ನಾಡಿನ ಒಳಿತಿಗಾಗಿ ಪ್ರಾರ್ಥನೆ

ಭಕ್ತಿ, ಶ್ರದ್ಧೆಯಿಂದ ಮಹಾ ಚಂಡಿಕಾಹೋಮ: ಕೆ.ವಿ. ನವೀನ್‌ಕಿರಣ್

ಪಂಚಗಿರಿ ಮತ್ತು ಕೆ.ವಿ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ. ನವೀನ್‌ಕಿರಣ್ ಅವರ ನೇತೃತ್ವದಲ್ಲಿ ಹಲವು ವರ್ಷಗಳಿಂದ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಭಾನುವಾರ ನಡೆದ ಹೋಮದ ಅಂಗವಾಗಿ ಬೆಳಗ್ಗೆಯಿಂದಲೇ ವರಸಿದ್ಧಿ ವಿನಾಯಕ ಸ್ವಾಮಿಗೆ ಅಭಿಷೇಕ, ನೈವೇದ್ಯ, ಪುಷ್ಪಾಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.

J K Krishna Reddy: ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಪರ ಜೆ.ಕೆ. ಕೃಷ್ಣಾರೆಡ್ಡಿ ಪ್ರಚಾರ

ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಪರ ಜೆ.ಕೆ. ಕೃಷ್ಣಾರೆಡ್ಡಿ ಪ್ರಚಾರ

ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್(K M Suresh) ಪರ ಮಾಜಿ ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ರಾಜ್ಯಾಧ್ಯಕ್ಷ ಜೆ.ಕೆ. ಕೃಷ್ಣಾರೆಡ್ಡಿ(J K Krishna Reddy) ಅವರು ಚಿಂತಾಮಣಿ ನ್ಯಾಯಾಲಯದಲ್ಲಿ ವಕೀಲರನ್ನು ಭೇಟಿ ಮಾಡಿ ಬೆಂಬಲ ಕೋರಿದರು.

ಮಲಬಾರ್ ಪಿಟ್ ವೈಪರ್ ಕಚ್ಚಿದ್ದು, 24 ಗಂಟೆ ನಿಗಾದಲ್ಲಿ ಚಿಕಿತ್ಸೆ; ಚಾರಣಿಗರು ಎಚ್ಚರಿಕೆ ವಹಿಸಲು ಅರಣ್ಯ ಇಲಾಖೆ ಸೂಚನೆ

ಸ್ಕಂದಗಿರಿಯಲ್ಲಿ ಚಾರಣಿಗನಿಗೆ ಹಾವು ಕಡಿತ: ಪ್ರಾಣಾಪಾಯದಿಂದ ಪಾರು

ಆನ್‌ಲೈನ್‌ನಲ್ಲಿ ಮುಂಗಡ ನೋಂದಣಿ ಮಾಡಿಕೊಂಡು ಅಧಿಕೃತವಾಗಿ ಚಾರಣಕ್ಕೆ ಬಂದಿದ್ದ ದೇವೇಂದ್ರ ಅವರು ಬೆಟ್ಟದಲ್ಲಿ ಗಿಡಗಳ ಬಳಿ ತೆರಳಿದ್ದಾಗ ಭುಜಕ್ಕೆ ಹಾವು ಕಚ್ಚಿದೆ. ಹಸಿರು ಬಣ್ಣದ ಮಲಬಾರ್ ಪಿಟ್ ವೈಪರ್ ಗಿಡಗಳ ಮೇಲೆ ಇರುವುದರಿಂದ ಸುಲಭವಾಗಿ ಕಣ್ಣಿಗೆ ಬೀಳುವುದಿಲ್ಲ. ಹಾವು ಕಚ್ಚಿದ ತಕ್ಷಣ ಚಾರಣಿಗರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಅವರನ್ನು ಬೆಟ್ಟದಿಂದ ಕೆಳಕ್ಕೆ ಕರೆ ತಂದರು.

ಶಿವ-ವಿಷ್ಣುವಿನ ಹೆಸರಿನಲ್ಲಿ ಜಗಳ ಸಲ್ಲ, ತಲೆ ಪ್ರತಿಷ್ಠೆ ಮಾಡಿದರೆ ಪತನ ಖಂಡಿತ: ರಾಘವೇಶ್ವರ ಶ್ರೀ

ಶಿವ-ವಿಷ್ಣುವಿನ ಹೆಸರಿನಲ್ಲಿ ಜಗಳ ಸಲ್ಲ: ರಾಘವೇಶ್ವರ ಶ್ರೀ

ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ 'ನವರಾತ್ರ ನಮಸ್ಯಾ' ಕಾರ್ಯಕ್ರಮದಲ್ಲಿ ರಾಘವೇಶ್ವರ ಶ್ರೀಗಳು ಮಾತನಾಡಿದ್ದಾರೆ. ಸಮುದ್ರ ಮಥನವಾಗಿ ಅಮೃತ ಬರುವ ಮೊದಲು ವಿಷವೂ ಬರಬಹುದು. ಅದನ್ನು ಸ್ವೀಕರಿಸಲು ನಂಜುಂಡನಾದ ಶಿವ ಬೇಕು. ಅಮೃತ ಬಂದಾಗ ಅದು ಅಸುರರಿಗೆ ಸಿಗದಿರಲು‌ ಮಹಾವಿಷ್ಣುವೂ ಬೇಕು ಎಂದು ಅವರು ತಿಳಿಸಿದ್ದಾರೆ.

Dr K Sudhakar: ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡುವ ಪಕ್ಷ ಬಿಜೆಪಿ: ಡಾ.ಕೆ.ಸುಧಾಕರ್

ವಕೀಲರ ಶ್ರೇಯೋಭಿವೃದ್ಧಿಗೆ ಬದ್ಧ; ಕೆ.ಎಂ.ಸುರೇಶ್‌ಗೆ ಆದ್ಯತೆಯ ಮತ ನೀಡಿ

ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ  ಕೆ.ಎಂ.ಸುರೇಶ್ ಅವರನ್ನು  ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಉದ್ಯಮಿ ಶಿಕ್ಷಣ ತಜ್ಞ ಆಗಿರುವ ಇವರು ಪಕ್ಷಕ್ಕಾಗಿ ಸುದೀರ್ಘ ಕಾಲ ಶಿಸ್ತಿನಿಂದ ದುಡಿದಿರುವುದು ಅವರ ವಿಶೇಷತೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.

ಕಣ್ಣ ಮುಂದೆಯೇ ಚಿಲ್ಲರೆ ಇದ್ರೂ ಕ್ಯಾಶ್ ಪಡೆಯಲು ನಿರಾಕರಿಸಿದ ಬೆಂಗಳೂರಿನ ಹೊಟೇಲ್‌ ಸಿಬ್ಬಂದಿ

ಬೆಂಗಳೂರಿನ ಹೊಟೇಲ್‌ನಲ್ಲಿ ಕ್ಯಾಶ್ ಕೊಡಲು ಹೋದ ಮಹಿಳೆಗೆ ಆಘಾತ

Viral News: ಬೆಂಗಳೂರಿನ ಹೊಟೇಲ್‌ ಒಂದರಲ್ಲಿ ಎದುರಾದ ಕಹಿ ಅನುಭವವನ್ನುಬ್ಬರು ಹಂಚಿಕೊಂಡಿದ್ದಾರೆ. ದೋಸೆ ಮತ್ತು ಕಾಫಿ ಸವಿದು ಬಿಲ್ ಪಾವತಿ ಮಾಡಲು ಹೋದ ಮಹಿಳೆ ನಗದು ನೀಡಲು ಮುಂದಾದಾಗ ದರ್ಶಿನಿಯ ಸಿಬ್ಬಂದಿ ಪಡೆಯಲು ನಿರಾಕರಿಸಿದ್ದಾನೆ. ಚಿಲ್ಲರೆ ಹಣವಿದ್ದರೂ "ಚಿಲ್ಲರೆ ಇಲ್ಲ" ಎಂದು ಹೇಳಿದ್ದಾನೆ. ತಾವು ದಕ್ಷಿಣ ಭಾರತೀಯರಂತೆ ಕಾಣದ ಕಾರಣ ಅಥವಾ ಸಂಭಾಷಣೆಯ ಸಮಯದಲ್ಲಿ ಕನ್ನಡ ಮಾತನಾಡದ ಕಾರಣ ತಮ್ಮೊಂದಿಗೆ ಭಿನ್ನವಾಗಿ ವರ್ತಿಸಲಾಯಿತೇ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.

ಮೈಸೂರು ದಸರಾ ಎಷ್ಟೊಂದು ಸುಂದರ: ಅರಮನೆಯ ಬೆಳಕಿನಲ್ಲಿ ಅರಳುವ ಕರ್ನಾಟಕದ ಹೆಮ್ಮೆ

ಮೈಸೂರು ದಸರಾ: ಅರಮನೆಯ ಬೆಳಕಿನಲ್ಲಿ ಅರಳುವ ಕರ್ನಾಟಕದ ಹೆಮ್ಮೆ

Mysore Dasara 2026: ಮೈಸೂರು ದಸರಾ ಕೇವಲ ಹಬ್ಬವಲ್ಲ, ಅದು ಕರ್ನಾಟಕದ ಐತಿಹಾಸಿಕ ಸಂಸ್ಕೃತಿಯ ಪ್ರತಿಬಿಂಬ. 400 ವರ್ಷಗಳ ಹಿಂದೆ ವಿಜಯನಗರದ ಅರಸರಿಂದ ಆರಂಭಗೊಂಡು, ಒಡೆಯರ ಕಾಲದಲ್ಲಿ ವೈಭವದ ಶಿಖರ ಮುಟ್ಟಿದ ಈ ನಾಡಹಬ್ಬ ಇಂದು ವಿಶ್ವವಿಖ್ಯಾತವಾಗಿದೆ.

Arkeshwara Temple: ಕೆ.ಆರ್.ನಗರದ ಪುರಾತನ ಹಿಂದೂ ದೇಗುಲದ ಮೇಲೆ ಶಿಲುಬೆ, ಮಸೀದಿ ಚಿತ್ರ; ಇಬ್ಬರ ವಿರುದ್ಧ ಎಫ್‌ಐಆರ್‌

ಕೆ.ಆರ್.ನಗರದ ಪುರಾತನ ಹಿಂದೂ ದೇಗುಲದ ಮೇಲೆ ಶಿಲುಬೆ, ಮಸೀದಿ ಚಿತ್ರ!

K R Nagar News: ಕೆ.ಆರ್.ನಗರ ತಾಲೂಕಿನ ಎಡತೊರೆ ಗ್ರಾಮದಲ್ಲಿರುವ ಐತಿಹಾಸಿಕ ಅರ್ಕೇಶ್ವರ ಸ್ವಾಮಿ ದೇವಾಲಯದ ಆವರಣದ ಗೋಡೆಗಳ ಮೇಲೆ ಕೆಂಪು ಬಣ್ಣದಲ್ಲಿ ಶಿಲುಬೆ ಹಾಗೂ ಹಸಿರು ಬಣ್ಣದಲ್ಲಿ ಮಸೀದಿಯ ಚಿತ್ರಗಳನ್ನು ಬಿಡಿಸಲಾಗಿತ್ತು. ಸನಾತನ ಧರ್ಮದ ಶ್ರದ್ಧಾಕೇಂದ್ರದ ಪಾವಿತ್ರ್ಯತೆಗೆ ಧಕ್ಕೆ ತಂದಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಭಕ್ತರು ಆಗ್ರಹಿಸಿದ್ದಾರೆ.

ಲವರ್‌ಗೆ ಕಳುಹಿಸಿದ್ದ ಖಾಸಗಿ ಫೋಟೊಗಳು ಅಶ್ಲೀಲ ತಾಣದಲ್ಲಿ ಸೋರಿಕೆ; ಬೆಚ್ಚಿಬಿದ್ದ ಬೆಂಗಳೂರಿನ ಯುವತಿ!

ಯುವತಿಯು ಲವರ್‌ಗೆ ಕಳುಹಿಸಿದ್ದ ಖಾಸಗಿ ಫೋಟೊ ಅಶ್ಲೀಲ ತಾಣದಲ್ಲಿ!

ಬೆಂಗಳೂರಿನ ಇಂದಿರಾನಗರ ನಿವಾಸಿಯಾದ 28 ವರ್ಷದ ಟೆಕ್ಕಿ ಯುವತಿಯು ತನ್ನ ಪ್ರಿಯಕರನ ಕೋರಿಕೆಯಂತೆ ಕೆಲವೊಂದು ಖಾಸಗಿ ಫೋಟೊಗಳನ್ನು ಕಳುಹಿಸಿದ್ದಳು.ಆದರೆ ತನ್ನ ಖಾಸಗಿ ನಗ್ನ ಫೋಟೊ ಮತ್ತು ವಿಡಿಯೊಗಳು ಅಶ್ಲೀಲ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗಿರುವ ವಿಷಯ ತಿಳಿದು ಆಕೆ ಶಾಕ್ ಆಗಿದ್ದಾಳೆ.

Ration Card e-KYC: ಪಡಿತರ ಚೀಟಿದಾರರಿಗೆ ಗುಡ್‌ ನ್ಯೂಸ್‌; ರೇಷನ್‌ ಕಾರ್ಡ್‌ ಇ-ಕೆವೈಸಿ ಗಡುವು ನ.10ರವರೆಗೆ ವಿಸ್ತರಣೆ

ರೇಷನ್‌ ಕಾರ್ಡ್‌ ಇ-ಕೆವೈಸಿ ಗಡುವು ನ.10ರವರೆಗೆ ವಿಸ್ತರಣೆ

ರಾಜ್ಯದ ಪಡಿತರ ಚೀಟಿದಾರಿಗೆ ಅನುಕೂಲ ಕಲ್ಪಿಸಲು ‘ಅನ್ನ ಸೇವೆ’ ಆ್ಯಪ್‌ ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇದರಿಂದ ಮನೆಯಿಂದಲೇ ಇ-ಕೆವೈಸಿ ಮಾಡಬಹುದು. ಇನ್ನು ಈ ತಂತ್ರಾಂಶವನ್ನು ಇಂದಿನಿಂದ ದೇಶಾದ್ಯಂತ ವಿಸ್ತರಿಸಲಾಗಿದೆ. ಅಲ್ಲದೆ ಇ-ಕೆವೈಸಿ ದೃಢೀಕರಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ.

ಬೆಂಗಳೂರು ಸಿಲಿಂಡರ್ ಸ್ಫೋಟ ಪ್ರಕರಣ: ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಂದು ಮಗು ಸಾವು; ಮೃತರ ಸಂಖ್ಯೆ 3ಕ್ಕೆ ಏರಿಕೆ

ಬೆಂಗಳೂರು ಸಿಲಿಂಡರ್ ಸ್ಫೋಟ ಪ್ರಕರಣ: ಮತ್ತೊಂದು ಮಗು ಸಾವು

Bangalore cylinder blast case: ಬೆಂಗಳೂರಿನ ನಾಯಂಡಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ನಡೆದಿದ್ದ ಸಿಲಿಂಡರ್‌ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಂದು ಮಗು ಮೃತಪಟ್ಟಿದೆ. ಘಟನೆಯಲ್ಲಿ ಈವರೆಗೆ ತಾಯಿ ಹಾಗೂ ಇಬ್ಬರು ಅವಳಿ ಮಕ್ಳಳು ಸಾವನ್ನಪ್ಪಿದ್ದಾರೆ.

K.B. Jayanna: ತುಮಕೂರು ವಿದ್ಯಾವಾಹಿನಿ ಸಂಸ್ಥೆ ಸಂಸ್ಥಾಪಕ ಕೆ.ಬಿ. ಜಯಣ್ಣ ನಿಧನ

ತುಮಕೂರು ವಿದ್ಯಾವಾಹಿನಿ ಸಂಸ್ಥೆ ಸಂಸ್ಥಾಪಕ ಕೆ.ಬಿ. ಜಯಣ್ಣ ನಿಧನ

ತುಮಕೂರಿನ ಕ್ಯಾತ್ಸಂದ್ರದ ಪಟೇಲ್ ಕುಟುಂಬದವರಾದ ಕೆ.ಬಿ. ಜಯಣ್ಣನವರು 46 ವರ್ಷಗಳ ಹಿಂದೆ ನಗರದಲ್ಲಿ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿದ್ದರು. ವಿವಿಧ ಸಮಾಜಸೇವಾ ಸಂಸ್ಥೆಗಳಲ್ಲಿ ಸಕ್ರಿಯ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು. ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸೇರಿ ಗಣ್ಯರು ಅಂತಿಮ ದರ್ಶನ ಪಡೆದು, ಸಂತಾಪ ಸೂಚಿಸಿದ್ದಾರೆ.

Loading...