ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

PDO suspend: ನಿರ್ಲಕ್ಷ್ಯಕ್ಕೆ ಕಡಿವಾಣ: ಹೊಸಪೇಟೆ ಪಿಡಿಓ ಅಮಾನತು

ನಿರ್ಲಕ್ಷ್ಯಕ್ಕೆ ಕಡಿವಾಣ: ಹೊಸಪೇಟೆ ಪಿಡಿಓ ಅಮಾನತು

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ಅವರು ಹೊರಡಿಸಿದ ಆದೇಶದಲ್ಲಿ, ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯತೆ, ಉದಾಸೀನತೆ ಹಾಗೂ ಬೇಜವಾಬ್ದಾರಿತನ ತೋರಿದ ಆರೋಪಗಳು ಯಮುನಾರಾಣಿ ವಿರುದ್ಧ ಕೇಳಿ ಬಂದಿರುವುದಾಗಿ ಉಲ್ಲೇಖಿಸಲಾಗಿದೆ. ಇದೇ ವೇಳೆ, ಸರ್ಕಾರಿ ನೌಕರರೊಂದಿಗೆ ಅಸಮರ್ಪಕವಾಗಿ ವರ್ತಿಸಿರುವುದಾಗಿ ಕೂಡ ದೂರಿನಲ್ಲಿ ತಿಳಿಸಲಾಗಿದೆ.

Bagepally News: ಅಡಿಗೆ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ವತಿಯಿಂದ 200 ಕಾರ್ಡ್ ವಿತರಣೆ

ಅಡಿಗೆ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ವತಿಯಿಂದ 200 ಕಾರ್ಡ್ ವಿತರಣೆ

ದೇಶದಲ್ಲಿ ಹಸಿವು ನೀಗಿಸುವುದೇ ದೊಡ್ಡ ಕೆಲಸ. ತಾಯಿ ಅನ್ನ ಪೂರ್ಣೇಶ್ವರಿ ಕೃಪೆಯಿಂದ ಅಂತಹ ಹಸಿವು ನೀಗಿಸುವ ಕೆಲಸದಲ್ಲಿ ಅಡುಗೆ ಕಾರ್ಮಿಕರು ಪ್ರಮುಖ ಪಾತ್ರ ವಹಿಸುತ್ತಿದ್ದು, ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿರುವ ಅಡುಗೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ಅಗತ್ಯವಿದೆ ಹಾಗಾಗಿ ದೇಶದಲ್ಲೇ ಮೊದಲ ಬಾರಿ ಅಡುಗೆ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ವಿತರಿಸಲಾಗುತ್ತಿದೆ

Bengaluru Kidnap Case: ಸಾಲ ವಸೂಲಿಗಾಗಿ ತಂಗಿ-ಮೈದುನನನ್ನೇ ಕಿಡ್ನ್ಯಾಪ್ ಮಾಡಿದ ಅಕ್ಕ-ಭಾವ!

ಸಾಲ ವಸೂಲಿಗಾಗಿ ತಂಗಿ-ಮೈದುನನನ್ನೇ ಕಿಡ್ನ್ಯಾಪ್ ಮಾಡಿದ ಅಕ್ಕ-ಭಾವ!

ದೂರುದಾರ ಮಹಿಳೆಯು ತನ್ನ ಅಕ್ಕನ ಬಳಿ 9.50 ಲಕ್ಷ ಸಾಲ ಪಡೆದುಕೊಂಡಿದ್ದು, 5 ಲಕ್ಷ ಸಾಲ ಹಿಂತಿರುಗಿಸಿದ್ದರು. ಬಾಕಿ ಹಣವನ್ನು ಪಡೆಯಲು ಕಾಲಾವಕಾಶ ಪಡೆದುಕೊಂಡಿದ್ದರು. ಆದರೆ ಈ ನಡುವೆ ತಂಗಿ ಮತ್ತು ಆಕೆಯ ಗಂಡನನ್ನು ಅಕ್ಕ ಮತ್ತು ಬಾವ ಕಿಡ್ನ್ಯಾಪ್‌ ಮಾಡಿ, ಹಲ್ಲೆ ನಡೆಸಿದ್ದಾರೆ.

ಚೇಳೂರಿನಲ್ಲಿ ಜಿವಿಎಸ್‌ಗೆ 4ನೇ ವರ್ಷದ ಸ್ಮರಣೆ

ಚೇಳೂರಿನಲ್ಲಿ ಜಿವಿಎಸ್‌ಗೆ 4ನೇ ವರ್ಷದ ಸ್ಮರಣೆ

ಚೇಳೂರು ತಾಲ್ಲೂಕಾಗಿ ಘೋಷಣೆಯಾಗಿ ವರ್ಷಗಳು ಕಳೆದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಪದವಿ ಕಾಲೇಜು ಇಲ್ಲದೆ ಬಡ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಶ್ರೀರಾಮ ರೆಡ್ಡಿ ಅವರ ಕನಸಿನಂತೆ ಈ ಸಮಸ್ಯೆಗಳ ವಿರುದ್ಧ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು

Bagepally News: ಸಿಪಿಎಂ ನಾಯಕ ದಿ. ಜಿ.ವಿ.ಶ್ರೀರಾಮರೆಡ್ಡಿ 4ನೇ ವರ್ಷದ ಸಂಸ್ಮರಣೆ

ಸಿಪಿಎಂ ನಾಯಕ ದಿ. ಜಿ.ವಿ.ಶ್ರೀರಾಮರೆಡ್ಡಿ 4ನೇ ವರ್ಷದ ಸಂಸ್ಮರಣೆ

'ಕರಾವಳಿ ಪ್ರದೇಶಗಳಲ್ಲಿ ನಡೆಯುತ್ತಿದ್ದ ಕೋಮು ಸಂಘರ್ಷಕ್ಕೆ ಬಲಿಯಾದವರ ಪರ, ಕೋಮು ಸಂಘಟನೆಗಳ ವಿರುದ್ಧ, ಮಂಗಳೂರಿನಲ್ಲಿ ಸೌಹಾರ್ದತೆ ರ‍್ಯಾಲಿ, ರಾಜ್ಯದ ಕೃಷಿ ಕೂಲಿ ಕಾರ್ಮಿಕರ, ದಲಿತರ, ಅಲ್ಪಸಂಖ್ಯಾತರ, ಹಿಂದುಳಿದವರ ಪರ ಹೋರಾಟ ಮಾಡಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತವಾದ ನೀರು ಕಲ್ಪಿಸಲು ಡಾ.ಪರಮಶಿವಯ್ಯ ವರದಿ ಜಾರಿ ಮಾಡಲು ಪಾದಯಾತ್ರೆ ಮಾಡಿದ್ದಾರೆ.

ಅಂಬೇಡ್ಕರ್‌ ಪ್ರತಿಮೆ ಜೊತೆಗೆ ಬುದ್ದನ ವಿಗ್ರಹ ಅಳವಡಿಸಲಾಗುವುದು: ಸಚಿವ ಎಂ ಸಿ ಸುಧಾಕರ್

ಅಂಬೇಡ್ಕರ್‌ ಪ್ರತಿಮೆ ಜೊತೆಗೆ ಬುದ್ದನ ವಿಗ್ರಹ ಅಳವಡಿಸಲಾಗುವುದು

ತಾನು ಅನುಭವಿಸಿದ ಯಾತನೆಯನ್ನು ಮುಂದೆ ಯಾರು ಅನುಭವಿಸಬಾರದು ಎನ್ನುವ ಹಿನ್ನಲೆ ಯಲ್ಲಿ ಸಂವಿಧಾನವನ್ನು ರೂಪಿಸಿದ್ದಾರೆ.ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ವಾದ ಹಕ್ಕು, ಕರ್ತವ್ಯ, ಸ್ಥಾನಮಾನಗಳು ದೊರೆಯಬೇಕು, ಸಮ ಸಮಾಜ ನಿರ್ಮಾಣ ಆಗಬೇಕು ಎಂಬುದು ಅವರ ಗುರಿಯಾಗಿತ್ತು

ನಗರಗಳ ನೀರಿನ ಸ್ಥಿತಿ ಸ್ಥಾಪಕತ್ವ ಮತ್ತು ಬಳಕೆ ಕುರಿತ ತರಬೇತಿಗೆ ಜಿಲ್ಲಾಧಿಕಾರಿ ಜಿ.ಪ್ರಭು ಚಾಲನೆ

ನಗರಗಳ ನೀರಿನ ಬಳಕೆ ಕುರಿತ ತರಬೇತಿಗೆ ಜಿಲ್ಲಾಧಿಕಾರಿ ಜಿ.ಪ್ರಭು ಚಾಲನೆ

ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಲಭ್ಯವಿರುವ ಜಲಮೂಲಗಳ ನೀರಿನ ಸಮರ್ಪಕ ಬಳಕೆ ಮತ್ತು ಬಳಸಿದ ನೀರಿನ ನಿರ್ವಹಣಾ ವ್ಯವಸ್ಥೆಗಳ ಸಮಗ್ರ ಮೌಲ್ಯಮಾಪನ ನಡೆಸಿ ಸುಸ್ಥಿರ ನಿರ್ವಹಣಾ ಕ್ರಮ ಗಳನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ “ಜಿಲ್ಲೆಯ ನಗರಗಳ ನೀರಿನ ಸ್ಥಿತಿ ಸ್ಥಾಪಕತ್ವ ನಿರ್ಮಾಣ ಸಹಕಾರ” ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ

ಪ್ರಾಣಿಪಕ್ಷಿ ಇತ್ಯಾದಿ ಮೂಕ ಜೀವಿಗಳಿಗೆ ನೀರುಣಿಸುವ ಕೆಲಸ ಮಾಡೋಣ: ನ್ಯಾ.ಟಿ.ಪಿ.ರಾಮಲಿಂಗೇಗೌಡ ಕರೆ

ಪ್ರಾಣಿಪಕ್ಷಿ ಇತ್ಯಾದಿ ಮೂಕ ಜೀವಿಗಳಿಗೆ ನೀರುಣಿಸುವ ಕೆಲಸ ಮಾಡೋಣ

ನೀರು ಜೀವ ಸಂಕುಲಕೆ ಅತ್ಯವಶ್ಯಕ ಅದೇ ರೀತಿ ಮೂಕ ಪ್ರಾಣಿಗಳಿಗೂ ನೀರು ಅತ್ಯವಶ್ಯಕ.ಎಲ್ಲರೂ ತಮ್ಮಗೆ ಅನುಕೂಲ ಇರುವ ಕಡೆ ಪ್ರಾಣಿ ಪಕ್ಷಿಗಳಿಗೆ ನೀರು ಇಟ್ಟು ನೀರುಣಿಸುವ ಕಾರ್ಯ ಮಾಡೋಣ ಎಂದರು. ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ 5 ಲಕ್ಷ ಗಿಡಗಳನ್ನು ನೆಡಲು ನಿರ್ಧರಿಸಿದ್ದು, ಈಗಾಗಲೇ ಚಾಲನೆ ನೀಡಲಾಗಿದೆ. ಎಲ್ಲರೂ ಈ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ತಿಳಿಸಿದರು.

Bear Attack: ಕೊರಟಗೆರೆಯಲ್ಲಿ ಹುಚ್ಚು ಕರಡಿ ಆರ್ಭಟ; ಅರಣ್ಯ ಇಲಾಖೆ ವಾಹನದ ಟೈರ್ ಕಿತ್ತೆಸೆದು ದಾಳಿ

ಹುಚ್ಚು ಕರಡಿ ಆರ್ಭಟ: ಅರಣ್ಯ ಇಲಾಖೆ ವಾಹನದ ಟೈರ್ ಕಿತ್ತೆಸೆದು ದಾಳಿ

Koratagere News: ಕೊರಟಗೆರೆ ಪಟ್ಟಣದ ಸಮೀಪದ ಗೌಡನಕೆರೆ ಪಕ್ಕದ ರೈತರ ಜಮೀನುಗಳಲ್ಲಿ ಗುರುವಾರ ಬೆಳಗ್ಗೆ ಹುಚ್ಚು ಕರಡಿಯೊಂದು ಆರ್ಭಟ ನಡೆಸಿ ಭೀತಿ ಮೂಡಿಸಿದ ಘಟನೆ ನಡೆದಿದೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಕರಡಿ ಏಕಾಏಕಿ ದಾಳಿ ನಡೆಸಿದೆ.

Lokayukta Raid: ಗೊಲ್ಲಹಳ್ಳಿ ಗ್ರಾಪಂ ಕರ ವಸೂಲಿಗಾರ, ಜಲಗಾರ ಇಬ್ಬರು ಲೋಕಾ ಬಲೆಗೆ

ಗೊಲ್ಲಹಳ್ಳಿ ಗ್ರಾಪಂ ಕರ ವಸೂಲಿಗಾರ, ಜಲಗಾರ ಇಬ್ಬರು ಲೋಕಾ ಬಲೆಗೆ

ಚಿಕ್ಕಬಳ್ಳಾಪುರ ತಾಲೂಕು  ಗೊಲ್ಲಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಕರವಸೂಲಿಗಾರನಾಗಿ ಕೆಲಸ ಮಾಡುತ್ತಿದ್ದ ದ್ಯಾವಪ್ಪ ಬಿನ್ ಚಿಕ್ಕಮುನಿಯಪ್ಪ ಎಂಬುವರು ಕಟಾರಿ ಕದಿರೇನಹಳ್ಳಿ ಗ್ರಾಮದ ಅಶ್ವತ್ಥ ಬಿನ್ ನಾರಾಯಣಪ್ಪ ಎಂಬುವರಿಂದ ಹೆಸರು ತಿದ್ದುಪಡಿ ಮಾಡಲು 10 ಸಾವಿರ ರೂಪಾಯಿಗೆ ಬೇಡಿಕೆ ಯಿಟ್ಟಿದ್ದರು ಎನ್ನಲಾಗಿದೆ

ಮಹಿಳಾ ಮೀಸಲು ಮಸೂದೆ; ಭಾರತದ ಪ್ರಜಾಪ್ರಭುತ್ವದ ಪಯಣದಲ್ಲಿ ಕ್ರಾಂತಿಕಾರಕ ಹೆಜ್ಜೆ ಎಂದ ಎಚ್.ಡಿ. ಕುಮಾರಸ್ವಾಮಿ

ಮಹಿಳಾ ಮೀಸಲು ಮಸೂದೆ ಕ್ರಾಂತಿಕಾರಕ ಹೆಜ್ಜೆ: ಎಚ್‌.ಡಿ.ಕುಮಾರಸ್ವಾಮಿ

HD Kumaraswamy: ರಾಷ್ಟ್ರದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಇರುವ ಮಹಿಳೆಯರಿಗೆ ಈ ಮೀಸಲಾತಿ ಬಹುದೊಡ್ಡ ಶಕ್ತಿಯನ್ನು ತುಂಬುತ್ತದೆ. ಆತ್ಮನಿರ್ಭರ ಭಾರತದ ಮೂಲಕ ವಿಕಸಿತ ಭಾರತ ಸಾಕಾರಕ್ಕೆ ಪ್ರಧಾನಿಗಳು ಹೇಗೆ ಶ್ರಮಿಸುತ್ತಿದ್ದಾರೆಯೋ ಹಾಗೆಯೇ ಮಹಿಳೆಯರಿಗೆ ಮೀಸಲು ನೀಡಿ ರಾಜಕೀಯವಾಗಿ ಶಕ್ತಿ ನೀಡುವ ಮೂಲಕ ನಾರೀಭಾರತ ಸಾಕಾರಕ್ಕೆ ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.

Chikkaballapur News: ಏ.23ರಿಂದ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ: ಜಿಲ್ಲಾಧಿಕಾರಿ ಜಿ.ಪ್ರಭು

ಏ.23ರಿಂದ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ: ಜಿಲ್ಲಾಧಿಕಾರಿ ಜಿ.ಪ್ರಭು

ಜಾನುವಾರುಗಳ ಹೆರಿಗೆ ಸಮಸ್ಯೆ, ಹೊಟ್ಟೆ ಉಬ್ಬರ, ಕಾಲುಮುರಿತ, ವಿಷ ಪ್ರಾಶನ, ಮೈ ಹೊರ ಬೀಳು ವುದು ಸೇರಿದಂತೆ ಇನ್ನಿತರ ಸ್ವರೂಪದ ಆರೋಗ್ಯ ಸಮಸ್ಯೆಗಳಿಗೆ ಜಿಲ್ಲೆಯ ರೈತರು ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತುರ್ತು ಚಿಕಿತ್ಸೆ ಪಡೆಯಬಹುದು. ತಜ್ಞ ವೈದ್ಯರು ತಮ್ಮ ಮನೆ ಬಾಗಿಲಿಗೆ ಸಂಚಾರಿ ವಾಹನದಲ್ಲಿ ಆಗಮಿಸಿ ಶೀಘ್ರ ಚಿಕಿತ್ಸೆ ನೀಡಲಿದ್ದಾರೆ. ಈ ಕಾರ್ಯಕ್ಕಾಗಿ 8 ತಾಲ್ಲೂಕುಗಳಲ್ಲಿ 8 ಸಂಚಾರಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ.

Shidlaghatta News: ಜನಪದ ಪರಂಪರೆಗೆ ಜೀವ ತುಂಬಿದ ಕೋಲಾಟ ಪ್ರದರ್ಶನ

ಜನಪದ ಪರಂಪರೆಗೆ ಜೀವ ತುಂಬಿದ ಕೋಲಾಟ ಪ್ರದರ್ಶನ

ವರದನಾಯಕನಹಳ್ಳಿ, ಹನುಮಂತಪುರ, ಶಿಡ್ಲಘಟ್ಟ ಹಾಗೂ ಚೀಮನಹಳ್ಳಿ ಗ್ರಾಮಗಳ ಸುಮಾರು ಇಪ್ಪತ್ತು ಮಂದಿ ಕಲಾವಿದರು ಭಾಗವಹಿಸಿದರು. ಹಾರಹೊಳ್ಳಿಯ ಗುರುಗಳಾದ ಇ. ಮುನಿಶಾಮಪ್ಪ ಮತ್ತು ಹೆಚ್.ಎನ್. ಸುಬ್ಬರಾಯಪ್ಪ ಅವರಿಂದ ತರಬೇತಿ ಪಡೆದು, ಹನುಮಂತಪುರದ ಶ್ರೀಕೃಷ್ಣ ಸ್ವಾಮಿ ದೇವಾಲಯದ ಬಳಿ ಅಭ್ಯಾಸ ಮಾಡಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರದರ್ಶನ ನೀಡಿದರು.

Electricity Price Hike: ರಾಜ್ಯದ ಜನರಿಗೆ ವಿದ್ಯುತ್‌ ದರ ಏರಿಕೆ ಶಾಕ್‌ ನೀಡಿದ ಸರ್ಕಾರ; ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚಳ!

ಜನರಿಗೆ ವಿದ್ಯುತ್‌ ದರ ಏರಿಕೆ ಶಾಕ್‌; ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚಳ!

ಎರಡು ಸಾವಿರ ಕೋಟಿಗೂ ಅಧಿಕ ಮೊತ್ತದ ಕೊರತೆಯನ್ನು ತುಂಬಿಕೊಳ್ಳಲು ಎಸ್ಕಾಂಗಳು ದರ ಏರಿಕೆಯ ಪ್ರಸ್ತಾವನೆಯನ್ನು ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ವಿದ್ಯುತ್ ದರ ಏರಿಕೆ ಮಾಡಿ ಕೆಇಆರ್‌ಸಿ ಆದೇಶ ಹೊರಡಿಸಿದೆ. ಈ ದರ ಏರಿಕೆಯು 2024-25ರ ಆರ್ಥಿಕ ವರ್ಷದ ಆದಾಯದ ಕೊರತೆಯನ್ನು ಸರಿದೂಗಿಸಲು ಮಾಡಲಾದ 'ಟ್ರೂ ಅಪ್' ಪ್ರಕ್ರಿಯೆಯಾಗಿದೆ.

MLA Vinay Kulkarni: ಬಿಜೆಪಿಯರ ಒಳಸಂಚಿನಿಂದ ವಿನಯ್‌ ಕುಲಕರ್ಣಿಗೆ ಸಂಕಷ್ಟ: ಡಿಸಿಎಂ ಡಿ.ಕೆ.ಶಿವಕುಮಾರ್‌ ಆರೋಪ

ಬಿಜೆಪಿಯವರ ಒಳಸಂಚಿನಿಂದ ವಿನಯ್‌ ಕುಲಕರ್ಣಿಗೆ ತೊಂದರೆ: ಡಿಕೆಶಿ

ಯೋಗೇಶ್‌ ಗೌಡ ಕೊಲೆ ಕೇಸ್‌ನಲ್ಲಿ ಒಳಸಂಚು ಮಾಡಿ ಶಾಸಕ ವಿನಯ್‌ ಕುಲಕರ್ಣಿಯನ್ನು ಸಿಲುಕಿಸಿದ್ದಾರೆ. ಅವರ ಕುಟುಂಬಸ್ಥರ ಜತೆ ಮಾತುಕತೆ ನಡೆಸಿದ್ದೇನೆ. ಮೇಲ್ಮನವಿಗೆ ಅವಕಾಶ ಇದೆ, ಆದ್ದರಿಂದ ಕಾರ್ಯಕರ್ತರು ಧೈರ್ಯ ಕಳೆದುಕೊಳ್ಳುವುದು ಬೇಡ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Yogesh gowda Murder Case: ಯೋಗೇಶ್‌ ಗೌಡ ಮಕ್ಕಳಿಗೆ 16 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್‌ ಆದೇಶ

ಯೋಗೇಶ್‌ ಗೌಡ ಮಕ್ಕಳಿಗೆ 16 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್‌ ಆದೇಶ

ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪೊಲೀಸ್‌ ಇನ್ಸ್‌ಪೆಕ್ಟರ್ ಚೆನ್ನಕೇಶವ ಟಿಂಗರಿಕರ್‌ ಕೊಲೆ ಪ್ರಕರಣದಲ್ಲಿ ಭಾಗಿಯಾಗದೇ ಇದ್ದರೂ, ಸಾಕ್ಷ್ಯ ನಾಶಕ್ಕೆ ಯತ್ನ ಹಾಗೂ ಭ್ರಷ್ಟಾಚಾರ ಆರೋಪ ಸಾಬೀತಾದ ಹಿನ್ನೆಲೆ ಕೋರ್ಟ್‌ 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಇನ್ನುಳಿದಂತೆ ಬಸವರಾಜ್‌ ಮುತ್ತಗಿಗೆ ಮಾಫಿ ಸಾಕ್ಷಿ ಸ್ಥಾನ ಖಚಿತಪಡಿಸಿದೆ.

Yogesh Gowda murder case: ಯೋಗೇಶ್‌ ಗೌಡ ನೆನೆದು ಅಕ್ಕ ಕಣ್ಣೀರು; ಕೋರ್ಟ್‌ ತೀರ್ಪಿನ ಬಗ್ಗೆ ಹೇಳಿದ್ದೇನು?

ಕೋರ್ಟ್‌ ತೀರ್ಪಿನ ಬಳಿಕ ಯೋಗೇಶ್‌ ಗೌಡ ನೆನೆದು ಅಕ್ಕ ಕಣ್ಣೀರು

ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಯೋಗೇಶ್‌ ಗೌಡ ಸಹೋದರಿ ಅಕ್ಕಮಹಾದೇವಿ ಅವರು, ನಮಗೆ ಕಾನೂನಿನ ಮೇಲೆ ಭರವಸೆ ಇತ್ತು. ಕೋರ್ಟ್‌ ತೀರ್ಪಿನಿಂದ ನಮಗೆ ಖುಷಿಯಾಗಿದೆ, ಪ್ರಕರಣದಲ್ಲಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಪೊಲೀಸ್‌ ಅಧಿಕಾರಿ ಚನ್ನಕೇಶವ ಟಿಂಕರಿಕರ್‌ಗೂ ಜೀವಾವಧಿ ಶಿಕ್ಷೆಯಾಗಬೇಕಿತ್ತು ಎಂದು ಹೇಳಿದ್ದಾರೆ.

MLA Vinay Kulkarni: ಜೈಲುಪಾಲಾದ ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು; ಮುಂದಿರುವ ಆಯ್ಕೆಗಳೇನು?

ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು; ಮುಂದಿರುವ ಆಯ್ಕೆಗಳೇನು?

Yogesh Gowda murder case: ಕೊಲೆ, ಹಾಗೂ ಒಳಸಂಚು ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಜೀವಾವಧಿ ಜೈಲು ಶಿಕ್ಷೆ ನೀಡಲಾಗಿದ್ದು, ಇದೀಗ ವಿನಯ್ ಕುಲಕರ್ಣಿ ಶಾಸಕ ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಶಾಸಕನ ಮುಂದಿರುವ ಆಯ್ಕೆಗಳೇನು ಎಂಬ ಮಾಹಿತಿ ಇಲ್ಲಿದೆ.

ನನ್ನ ಮತ್ತು ಸಿದ್ದರಾಮಯ್ಯ ಗುಂಪು ಅಂಥ ಎಲ್ಲಿದೆ? ಎಲ್ಲರೂ ನಮ್ಮ ಶಾಸಕರೇ ಎಂದ ಡಿ.ಕೆ. ಶಿವಕುಮಾರ್

ನನ್ನ ಮತ್ತು ಸಿದ್ದರಾಮಯ್ಯ ಗುಂಪು ಅಂಥ ಎಲ್ಲಿದೆ?: ಡಿ.ಕೆ. ಶಿವಕುಮಾರ್

DK Shivakumar: ನಿಮ್ಮ ಪಕ್ಷದಲ್ಲಿ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಾ ಇದ್ದಾರಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ʼಯಾವ ಹೇಳಿಕೆಯೂ ಇಲ್ಲ. ಯಾವ ಗುಂಪೂ ಇಲ್ಲ. 139 ಶಾಸಕರು ನನ್ನದೇ ಗುಂಪು. ಕಾಂಗ್ರೆಸ್ ಗುಂಪು. ನಮಗೆ ಪಕ್ಷ ಹಾಗೂ ಪಕ್ಷದ ಹಿತ ಮುಖ್ಯ. ಪಕ್ಷದ ಅಭಿವೃದ್ಧಿಗೆ ಹಾಗೂ ಅದರ ಒಳಿತಿಗೆ ಏನು ಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದೇವೆ. ನಾವೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡುತ್ತಿದ್ದೇವೆ, ಮಾಡುತ್ತೇವೆʼ ಎಂದು ಹೇಳಿದ್ದಾರೆ.

ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ

ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ

ಕಳೆದ 10 ವರ್ಷಗಳಿಂದ ಪ್ರಕರಣದ ತನಿಖೆ ನಡೆಯುತ್ತಿದೆ. ವಿನಯ್ ಕುಲಕರ್ಣಿ ಸೇರಿ 17 ಮಂದಿ ಅಪರಾಧಿಗಳು ಎಂದು ಜನಪ್ರತಿನಿಧಿ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್‌ ಗಜಾನನ್‌ ಭಟ್‌ ಅವರು ಬುಧವಾರ ತೀರ್ಪು ಪ್ರಕಟಿಸಿದ್ದರು. ಸದ್ಯ ವಿನಯ್‌ ಕುಲಕರ್ಣಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ.

Ranya Rao case: ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ನಟಿ ರನ್ಯಾ ರಾವ್‌ಗೆ ಹಿನ್ನಡೆ; ಬಂಧನ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

ನಟಿ ರನ್ಯಾ ರಾವ್‌ಗೆ ಹಿನ್ನಡೆ; ಬಂಧನ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

gold smuggling case: ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ನಟಿ ರನ್ಯಾ ರಾವ್‌ ಬಂಧನ ಆದೇಶವನ್ನು 2025ರ ಡಿ.19ರಂದು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿತ್ತು. ಈ ಆದೇಶ ಪ್ರಶ್ನಿಸಿ ಆರೋಪಿಗಳ ಪರ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಇದರಿಂದ ನಟಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

ಹೊಸ ವಿನ್ಯಾಸದ ನವೀಕರಣದೊಂದಿಗೆ ಯಮಹಾ ಫ್ಯಾಸಿನೊ

ಹೊಸ ವಿನ್ಯಾಸದ ನವೀಕರಣದೊಂದಿಗೆ ಯಮಹಾ ಫ್ಯಾಸಿನೊ

ಕಾರ್ಯಕ್ಷಮತೆ ಮತ್ತು ದಕ್ಷತೆಯ ವಿಷಯದಲ್ಲಿ ಫ್ಯಾಸಿನೊದ ಡಿಎನ್‌ಎಯನ್ನು ಉಳಿಸಿಕೊಂಡಾಗ, ಹೆಚ್ಚು ಸಂಸ್ಕರಿಸಿದ ಮತ್ತು ಸಮಕಾಲೀನ ಶೈಲಿಯನ್ನು ವ್ಯಕ್ತಪಡಿಸಲು ವಿನ್ಯಾಸವನ್ನು ಮತ್ತಷ್ಟು ವರ್ಧಿಸಲಾಗಿದೆ, ಇದು ಚಲನೆಯಲ್ಲಿ ಮತ್ತು ವಿಶ್ರಾಂತಿಯಲ್ಲಿ ಎದ್ದು ಕಾಣುತ್ತದೆ ಎಂದು ಖಚಿತ ಪಡಿಸುತ್ತದೆ. ಹೊಸ ಡೆಕಲ್‌ಗಳನ್ನು ಒಳಗೊಂಡಂತೆ ಈ ವರ್ಧನೆಗಳನ್ನು ಭಾರತದಲ್ಲಿ ಯಮಹಾದ ಆರ್ & ಡಿ ತಂಡವು ಪರಿಕಲ್ಪನೆ ಮಾಡಿ ವಿನ್ಯಾಸಗೊಳಿಸಿದೆ.

Voice Clinic: ನುಂಗುವಿಕೆ, ಉಸಿರಾಟ(ಶ್ವಾಸ) ಮಾರ್ಗ ಮತ್ತು ಧ್ವನಿ ಪೆಟ್ಟಿಗೆ ಅಸ್ವಸ್ಥತೆಗಳಿಗೆ ಸಮಗ್ರ ಆರೈಕೆ: ವಿಶ್ವ ಧ್ವನಿ ದಿನದಂದು 'ಸ್ವರ ಕ್ಲಿನಿಕ್'  ಆರಂಭ

ವಿಶ್ವ ಧ್ವನಿ ದಿನದಂದು 'ಸ್ವರ ಕ್ಲಿನಿಕ್' ಆರಂಭ

ನ್ಯಾರೋ ಬ್ಯಾಂಡ್ ಇಮೇಜಿಂಗ್(ಎನ್‌ಬಿಐ)ನೊಂದಿಗೆ ಲಾರಿಂಗೋಸ್ಕೋಪಿ, ಸ್ಟ್ರೋಬೋಸ್ಕೋಪಿ, ಬ್ರಾಂಕೋಸ್ಕೋಪಿ ಮತ್ತು ನುಂಗುವಿಕೆಯ ಸಮಸ್ಯೆಗಳಿಗೆ ಕ್ರಿಯಾತ್ಮಕ ಎಂಡೋಸ್ಕೋಪಿಕ್ ಮೌಲ್ಯ ಮಾಪನ ಸೇರಿದಂತೆ ಸುಧಾರಿತ ಒಪಿಡಿ-ಆಧಾರಿತ ರೋಗ ಪತ್ತೆ ಮೂಲಕ ಎಲ್ಲಾ ವಯಸ್ಸಿನ ರೋಗಿ ಗಳಿಗೆ ಚಿಕಿತ್ಸೆ ನೀಡಲು ಈ ಕ್ಲಿನಿಕ್ ಅನ್ನು ವಿನ್ಯಾಸಗೊಳಿಸಲಾಗಿದೆ.

ವಿದ್ಯುತ್ ಮಾರ್ಗಗಳಾಚೆಗೆ: ನವೀಕರಿಸಬಹುದಾದ ಇಂಧನ ಯೋಜನೆಗಳಿಂದ ಗ್ರಾಮೀಣ ಆರ್ಥಿಕತೆಗೆ ಹೇಗೆ ಬಲ ಸಿಗುತ್ತಿದೆ?

ನವೀಕರಿಸಬಹುದಾದ ಇಂಧನ ಯೋಜನೆ: ಗ್ರಾಮೀಣ ಆರ್ಥಿಕತೆಗೆ ಹೇಗೆ ಬಲ ಸಿಗುತ್ತಿದೆ?

ಭಾರತದಲ್ಲಿ ನವೀಕರಿಸಬಹುದಾದ ಇಂಧನ ವಲಯದ ತ್ವರಿತ ವಿಸ್ತರಣೆಯಿಂದಾಗಿ, ಸೌರ ಮತ್ತು ಪವನ ವಿದ್ಯುತ್ ಉತ್ಪಾದನಾ ಘಟಕಗಳನ್ನು ರಾಷ್ಟ್ರೀಯ ಗ್ರಿಡ್ಗೆ ಜೋಡಿಸುವ ಬೃಹತ್ ಪ್ರಸರಣಾ ಜಾಲಗಳ ಅಗತ್ಯ ಸೃಷ್ಟಿಯಾಗಿದೆ. ‘ರೆಸೋನಿಯಾ’ (Resonia) ದಂತಹ ಕಂಪನಿಗಳು, ಹೆಚ್ಚಾಗಿ ಕೃಷಿ ಭೂಮಿಯನ್ನೇ ಹೊಂದಿರುವ ಹಲವು ಪ್ರದೇಶಗಳಲ್ಲಿ ಇಂತಹ ಜಾಲಗಳನ್ನು ಅಭಿವೃದ್ಧಿ ಪಡಿಸುತ್ತಿವೆ.

Loading...